ವಾದಿರಾಜರು
ವಾದಿರಾಜರು (೧೪೮೦ - ೧೬೦೦) ಹರಿದಾಸ ಪಂಥದ ಪ್ರಮುಖರಲ್ಲೊಬ್ಬರು.
ಪರಿವಿಡಿ |
[ಬದಲಾಯಿಸಿ] ಜೀವನ
ಹದಿನೈದನೆಯ ಶತಮಾನದ ಅಂತ್ಯದಲ್ಲಿ ಉಡುಪಿ ಜಿಲ್ಲೆಯಲ್ಲಿರುವ ಹೂವಿನಕೆರೆ ಎಂಬ ಗ್ರಾಮದಲ್ಲಿ ಜನನ. ತಂದೆ ರಾಮಾಚಾರ್ಯ ಮತ್ತು ತಾಯಿ ಸರಸ್ವತಿದೇವಿ. ಪೂರ್ವಾಶ್ರಮದ ಹೆಸರು ಭೂವರಾಹ.
ವಾದಿರಾಜರು ನೂರಾ ಇಪ್ಪತ್ತು ವರ್ಷಗಳವರೆಗೆ ಕಣ್ಣಿಗೆ ಗೋಚರರಾಗಿದ್ದಂತಹವರುಹಯವದನ ವಾದಿರಾಜರ ಆರಾದ್ಯ ದೈವ. ತಮ್ಮ ಎಂಟನೆಯ ವಯಸ್ಸಿನಲ್ಲಿ ಸನ್ಯಾಸಾಶ್ರಮವನ್ನು ಸ್ವೀಕರಿಸಿದ ವಾದಿರಾಜರ ಸನ್ಯಾಸ ಜೀವನದ ಅವಧಿ ೧೧೨ ವರ್ಷಗಳು. ಶಿರಸಿ ತಾಲೂಕಿನ ಸೋಂದಾ ಕ್ಷೇತ್ರದಲ್ಲಿ ಇವರ ಬೃಂದಾವನವಿದೆ.
ಕನ್ನಡ ಮತ್ತು ಸಂಸ್ಕೃತ ಎರಡೂ ಭಾಷೆಗಳಲ್ಲಿ ವಾದಿರಾಜರು ಕೃತಿಗಳನ್ನು ರಚಿಸಿದ್ದಾರೆ. ಹಯವದನ ಎಂಬ ಅಂಕಿತದಲ್ಲಿ ಅನೇಕ ದೇವರನಾಮಗಳನ್ನು ರಚಿಸಿದ್ದಾರೆ. ಈವರೆಗೆ ವಾದಿರಾಜರು ರಚಿಸಿರುವ ೩೪೩ ಕೀರ್ತನೆಗಳು ಲಭ್ಯವಾಗಿದ್ದು, ಅದರಲ್ಲಿ ೯ ದೀರ್ಘ ಕೃತಿಗಳು. ವಾದಿರಾಜರು ರಚಿಸಿರುವ ಲಕ್ಷೀಶೋಭಾನ ಪದವನ್ನು ಮದುವೆ ಮನೆಯಲ್ಲಿ ಹಾಡಿದರೆ ಮದುಮಕ್ಕಳಿಗೆ ಶುಭವಾಗುತ್ತದೆಂಬ ನಂಬಿಕೆ ಇದೆ. ಲಕ್ಷೀಶೋಭಾನದಲ್ಲಿ ಬರುವ ಈ ಚರಣ ಆದಕ್ಕೆಕಾರಣವಾಗಿರಬಹುದು -
"ಮದುವೆಯ ಮನೆಯಲ್ಲಿ ಈ ಪದವ ಪಾಡಿದರೆ ಮದುಮಕ್ಕಳಿಗೆ ಮುದವಹುದು
ವಧುಗಳಿಗೆ ಓಲೆ ಭಾಗ್ಯ ದಿನದಿನಕೆ ಹೆಚ್ಚುವುದು ಮದನನಯ್ಯನ ಕೃಪೆಯಿಂದ"
[ಬದಲಾಯಿಸಿ] ಇತರ ವಿವರಗಳು
ವಾದಿರಾಜರು ಬ್ರಾಹ್ಮಣ ಮನೆತನಕ್ಕೆ ಸೇರಿದವರು. ತಮ್ಮ ಪಾಂಡಿತ್ಯದಿಂದಾಗಿ ವಿಜಯನಗರ ಅರಸರಿಂದ ಸನ್ಮಾನಿಸಲ್ಪಟ್ಟಿದ್ದರು. "ಕುಡುಮ" ಎಂದು ಕರೆಯಲಾಗುತ್ತಿದ್ದ ಕ್ಷೇತ್ರವನ್ನು ಧರ್ಮಸ್ಥಳವೆಂದು ಹೆಸರಿಸಿದವರು ವಾದಿರಾಜರು.
[ಬದಲಾಯಿಸಿ] ವಾದಿರಾಜರ ಕೆಲವು ದೇವರ ನಾಮಗಳು
- ಆವ ಕಡೆಯಿಂದ ಬಂದೆ ವಾಜಿವದನನೇ
- ಆವರೀತಿಯಿಂದ ನೀಯೆನ್ನ ಪಾಲಿಪೆ
- ಕುದುರೆ ಬಂದೆದೆ,ಚೆಲುವ ಕುದುರೆ ಬಂದಿದೆ
- ತಾಳುವಿಕೆಗಿಂತನ್ಯ ತಪವು ಇಲ್ಲ
- ದವಳಗಂಗೆಯ ಗಂಗಾಧರ ಮಹಾಲಿಂಗ
- ದುಮ್ಮಿ ಸಾಲೆನ್ನಿ
- ನೀರೆ ತೋರೆಲೆ ನೀರೆ ತೋರೆಲೆ ನೀಲವರ್ಣದ ದೇವನ
- ರಾಜಬೀದಿಯೊಳಗಿಂದ ಕಸ್ತೂರಿ ರಂಗ
- ಲೋಕಭರಿತನೋ ರಂಗ
- ವೇಣುನಾದಪ್ರಿಯ
[ಬದಲಾಯಿಸಿ] ವಾದಿರಾಜರ ಮೇಲಿನ ಹಾಡು
- ರಾಜರ ಭಾಗ್ಯವಿದು
- ಕನ್ದಿ ಕನ್ದಿ ರಾಜರ ಕನ್ದಿ
- ವಾದಿರಾಜರ ಗುರುಗಲಾದ ಮುಖ್ಯಪ್ರಾನ
[ಬದಲಾಯಿಸಿ] ಮೇರು ಕೃತಿ
ಮಹಾಭಾರತ ಲಕ್ಷಾಲಂಕಾರ - ಈ ಕೃತಿಯ ಇತ್ತೀಚಿನ ಮುದ್ರಣವನ್ನು ೨೦೦೫ರಲ್ಲಿ ಬೆಂಗಳೂರಲ್ಲಿ ನಡೆದ ಮಹಾಭಾರತ ಉತ್ಸವದಲ್ಲಿ ರಾಷ್ತ್ರಪತಿ ಅಬ್ದುಲ್ ಕಲಾಮ್ ಬಿಡುಗಡೆ ಮಾಡಿದರು
[ಬದಲಾಯಿಸಿ] ದೀರ್ಘ ಗೀತೆ
ಶ್ರೀ ಲಕ್ಷ್ಮೀ ಶೋಭಾನೆ (ಸೋಬಾನೆ)
[ಬದಲಾಯಿಸಿ] ಇತರ ಕೃತಿಗಳು
- ಆಧಿಕರಣ - ನಾಮಾವಳಿ
- ಈಶಾವಸ್ಯೋಪನಿಷದ್ ಭಾಷ್ಯ ಟೀಕಾ ಪ್ರಕಾಶಿಕ
- ಉಪನ್ಯಾಸಸಾರರತ್ನಮಾಲಾ
- ಏಕಾದಶಿ ನಿರ್ಣಯ
- ಕೇನೋಪನಿಷದ್ ಟೀಕಾ
- ಗುಂಡ - ಕ್ರಿಯೆ
- ತೀರ್ಥಪ್ರಬಂಧ
- ತೈತ್ತೋರೀಯೋಪನಿಷದ್ ಟೀಕಾ
- ನ್ಯಾಯ ರತ್ನಾವಲಿ
- ಪಾಖಂಡ ಮತ ಖಂಡನಮ್
- ಭಾವ -ಪ್ರಕಾಶಿಕ
- ಭೂಗೋಳ ವರ್ಣನಮ್
- ಯುಕ್ತಿಮಲ್ಲಿಕಾ
- ರುಕ್ಮಿಣೀಶ ವಿಜಯ
- ಲಕ್ಷಾಭರಣ ಟೀಕಾ
- ವೈಕುಂಠ ವರ್ಣನೆ
- ಸರಸಭಾರತಿ ವಿಲಾಸ
[ಬದಲಾಯಿಸಿ] ಸ್ತೋತ್ರಗಳು
- ಹಯಗ್ರೀವ ಸ್ತುತಿ
- ಹಯಗ್ರೀವ ದಂಡಕಮ್
- ಚಕ್ರ ಸ್ತುತಿ
- ಪರಮ ಸ್ತುತಿ
- ದಶಾವತಾರ ಸ್ತೋತ್ರಮ್
- ವ್ಯಾಸ ಸ್ತುತಿ
- ಋಣಮೋಚನ ಸ್ತೋತ್ರಮ್