ಲೂಸಿಯ (ಚಲನಚಿತ್ರ)

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಲೂಸಿಯಾ
LuciaKannada.jpg
ಬಿಡುಗಡೆ ವರ್ಷ ೨೦೧೩
ಚಿತ್ರ ನಿರ್ಮಾಣ ಸಂಸ್ಥೆ ಆಡಿಯೆನ್ಸೆ ಫಿಲಮ್ಸ್ & ಹೋಂ ಟಾಕಿಸ್

̪

ಮುಖ್ಯಪಾತ್ರ(ಗಳು)(ಗಂಡು) ಸತೀಶ್ ನೀನಾಸಂ
ಮುಖ್ಯಪಾತ್ರ(ಗಳು)(ಹೆಣ್ಣು) ಶ್ರುತಿ ಹರಿಹರನ್
ಪೋಷಕ ಪಾತ್ರವರ್ಗ ಅಚ್ಯುತ್
ನಿರ್ದೇಶನ ಪವನ್ ಕುಮಾರ್
ಸಂಗೀತ ನಿರ್ದೇಶನ ಪೂರ್ಣ ಚಂದ್ರ ತೇಜಸ್ವಿ ಎಸ್ ವಿ
ಚಿತ್ರಕಥೆ ಪವನ್ ಕುಮಾರ್
ಸಂಭಾಷಣೆ ಪವನ್ ಕುಮಾರ್
ಕಥೆ ಪವನ್ ಕುಮಾರ್
ಕಥೆ ಆಧಾರ ಪವನ್ ಕುಮಾರ್
ಸಾಹಿತ್ಯ ಯೋಗರಾಜ್ ಭಟ್, ಪೂರ್ಣ ಚಂದ್ರ ತೇಜಸ್ವಿ ಎಸ್ ವಿ
ಹಿನ್ನೆಲೆ ಗಾಯನ ನವೀನ ಸಜ್ಜು ,ಪೂರ್ಣ ಚಂದ್ರ ತೇಜಸ್ವಿ ಎಸ್ ವಿ, ಬಪ್ಪಿ ಬ್ಲಾಸಂ, ರಕ್ಷಿತ್ ನಾಗರ್ಲೆ, ಅರುಣ್ ಎಂ ಸಿ, ಅನನ್ಯ ಭಟ್, ಉದಿತ್ ಹರಿತಾಸ್
ಛಾಯಾಗ್ರಹಣ ಸಿದ್ಧಾರ್ಥ ನೂನಿ
ನೃತ್ಯ
ಸಾಹಸ
ಸಂಕಲನ
ನಿರ್ಮಾಪಕರು ಪ್ರೇಕ್ಷಕರು
ದೇಶ
ಭಾಷೆ
ಅವಧಿ
ವಿತರಕರು
ಸ್ಟುಡಿಯೋ
ಪ್ರಶಸ್ತಿಗಳು ಲಂಡನ್ ನಲ್ಲಿ ನಡೆದ ೨೦೧೩ ರ ಭಾರತೀಯ ಚಲನ ಚಿತ್ರ ಉತ್ಸವದಲ್ಲಿ ಪ್ರೇಕ್ಷಕರ ಮನ್ನಣೆಗೆ ಒಳಪಡಿಸಿದ ಚಿತ್ರ.
ಇತರೆ ಮಾಹಿತಿ http://www.hometalkies.com/lucia/

ಭಾರತೀಯ ಚಿತ್ರೋದ್ಯಮದಲ್ಲಿಯೇ ಮೊದಲಬಾರಿಗೆ ಕನ್ನಡದಲ್ಲಿ ಪ್ರೇಕ್ಷಕರೇ ನಿರ್ಮಿಸಿದ ಚಲನಚಿತ್ರ. ಚಿತ್ರ ಬಿಡುಗಡೆಗೂ ಮುನ್ನ ಲಂಡನ್ ನಲ್ಲಿ ನಡೆದ ೨೦೧೩ ರ ಭಾರತೀಯ ಚಲನ ಚಿತ್ರ ಉತ್ಸವದಲ್ಲಿ ಪ್ರೇಕ್ಷಕರ ಮನ್ನಣೆಗೆ ಒಳಪಡಿಸಿದ ಚಿತ್ರ. ಲೂಸಿಯಾ ಚಲನಚಿತ್ರದ ಕತೆ ಬರೆದು ನಿರ್ದೇಶಿಸಿದವರು ನಿರ್ದೇಶಕ ಪವನ್ ಕುಮಾರ್. ನಿರ್ದೇಶಕ ಯೋಗರಾಜ್ ಭಟ್ರವರ ಗರಡಿಯಲ್ಲಿ ಪಳಗಿದವರಲ್ಲಿ ಪವನ್ ಕುಮಾರ್ ಕೂಡ ಒಬ್ಬರು. ಈ ಹಿಂದೆ ಯೋಗರಾಜ್ ಭಟ್ಟರ ಮನಸಾರೆ, ಪಂಚರಂಗಿ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಹಾಗು ನಟರಾಗಿ ಕೆಲಸ ಮಾಡಿದ್ದರು. ನಂತರ ಕನ್ನಡ ಚಲನ ಚಿತ್ರ ಲೈಫು ಇಷ್ಟೇನೆ ಮೂಲಕ ಸ್ವತಂತ್ರ ನಿರ್ದೇಶನಕ್ಕೆ ಹೆಜ್ಜೆ ಹಿಟ್ಟರು. ಲೂಸಿಯಾ ಪ್ರೇಕ್ಷಕರೇ ನಿರ್ಮಾಣ ಮಾಡಿದ ಕನ್ನಡದ ಮೊದಲ ಚಲನಚಿತ್ರ.

ನಿರ್ಮಾಣ ಹಿನ್ನೆಲೆ ಮತ್ತು ಬೆಳವಣಿಗೆಗಳು[ಬದಲಾಯಿಸಿ]

ನಿರ್ದೇಶಕ ಪವನ್ ಕುಮಾರ್ರವರು ೨೦೧೨ ರ ಫೆಬ್ರವರಿ ೨೪ರಂದು ಸಾಮಾಜಿಕ ತಾಣಗಳ ಮೂಲಕ ಲೂಸಿಯಾ ಚಿತ್ರದ ನಿರ್ಮಾಣಕ್ಕೆ ಪ್ರೇಕ್ಷಕರಿಗೆ ಓಗೊಡುತ್ತಾರೆ. ಕೇವಲ ೨೭ ದಿನಗಳಲ್ಲಿ ನಿರ್ಮಾಣಕ್ಕೆ ಬೇಕಿದ್ದ ೫೦ ಲಕ್ಷಗಳನ್ನು ಪ್ರೇಕ್ಷಕರ ಮೂಲಕವೇ ಹೊಂದಿಸುತ್ತಾರೆ. ನಂತರ ಚಲನಚಿತ್ರದ ಎಲ್ಲಾ ಬಗೆಯ ಕೆಲಸಗಳಿಗೆ ಹೊಸ ಪ್ರತಿಭೆಗಳ ಹುಡುಕಾಟ. ಚಲನಚಿತ್ರದ ನಾಯಕ, ನಾಯಕಿ, ಸಂಗೀತ ನಿರ್ದೇಶಕ, ಹಾಡುಗಾರರು, ಸಹಾಯಕ ನಿರ್ದೇಶನ, ಕಲಾ ನಿರ್ದೇಶನ ಎಲ್ಲ ಬಗೆಯ ಕೆಲಸಗಳಿಗೂ ಹೊಸ ಪ್ರತಿಭೆಗಳಿಂದ ಹೊಸತನಕ್ಕೆ ನಾಂದಿ ಹಾಡುತ್ತಾರೆ. ಈ ಮೂಲಕ ಕನ್ನಡ ಚಲಚಿತ್ರರಂಗಕ್ಕೆ ಹೊಸ ಪ್ರತಿಭೆಗಳ ಪರಿಚಯ ಮಾಡಿರುತ್ತಾರೆ. ಈ ರೀತಿ ಚಲನಚಿತ್ರ ನಿರ್ಮಾಣಕ್ಕೆ ಪ್ರೇಕ್ಷಕರನ್ನೇ ನೇರವಾಗಿ ಬಂಡವಾಳಗರರನ್ನಾಗಿ ಮಾಡಿ ಹೊಸತನವನ್ನು ಪ್ರದರ್ಶಿಸಿದ್ದಕ್ಕೆ ಲಂಡನ್ನಿನ ಬ್ರಿಟಿಷ್ ಕೌನ್ಸಿಲ್ ರವರು ಲೂಸಿಯಾಗೆ ಅಂತರಾಷ್ಟ್ರೀಯ ಮನ್ನಣೆಯನ್ನು ಕೊಟ್ಟಿದ್ದಾರೆ.

ತಾರಾಗಣ[ಬದಲಾಯಿಸಿ]

  • ನಿಕ್ಕಿ ಪಾತ್ರದಲ್ಲಿ ಸತೀಶ್ ನೀನಾಸಂ
  • ಶ್ವೇತಾ ಪಾತ್ರದಲ್ಲಿ ಶ್ರುತಿ ಹರಿಹರನ್
  • ಸಂಜಯ್ ಪಾತ್ರದಲ್ಲಿ ಸಂಜಯ್
  • ಶಂಕ್ರಣ್ಣ ಪಾತ್ರದಲ್ಲಿ ಅಚ್ಯುತ್ ಕುಮಾರ್
  • ಕೃಷ್ಣ (ಪೋಲಿಸ್ ಪಾತ್ರದಲ್ಲಿ)

ಹಾಡುಗಳು[ಬದಲಾಯಿಸಿ]

ಕ್ರಮ ಸಂಖ್ಯೆ ಹಾಡು ಗಾಯಕರು ಸಾಹಿತ್ಯ
1 "ಹೇಳು ಶಿವ" ನವೀನ ಸಜ್ಜು, ರಕ್ಷಿತ್ ನಾಗರ್ಲೆ, ಯೋಗರಾಜ್ ಭಟ್ ಯೋಗರಾಜ್ ಭಟ್
2 ಜಮ್ಮ ಜಮ್ಮ ನವೀನ ಸಜ್ಜು ಪೂರ್ಣ ಚಂದ್ರ ತೇಜಸ್ವಿ ಎಸ್ ವಿ
3 ಯಾಕೋ ಬರಲಿಲ್ಲ ನವೀನ ಸಜ್ಜು ಪೂರ್ಣ ಚಂದ್ರ ತೇಜಸ್ವಿ ಎಸ್ ವಿ
4 ತಿನ್ಬೆಡಾಕಮ್ಮಿ ಬಪ್ಪಿ ಬ್ಲಾಸಂ, ಪೂರ್ಣ ಚಂದ್ರ ತೇಜಸ್ವಿ ಎಸ್ ವಿ, ಅರುಣ್ ಎಂ ಸಿ ಪೂರ್ಣ ಚಂದ್ರ ತೇಜಸ್ವಿ ಎಸ್ ವಿ
5 ನೀ ತೊರೆದ ಘಳಿಗೆಯಲಿ ಅನನ್ಯ ಭಟ್, ಉದಿತ್ ಹರಿತಾಸ್ ರಘು ಶಾಸ್ತ್ರಿ ವಿ