ಲೂಯೀಜಿ ಅಲೆಮಾನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲೂಯೀಜಿ ಅಲೆಮಾನಿ

ಲೂಯೀಜಿ ಅಲೆಮಾನಿ (6 ಮಾರ್ಚ್ 1495 – 18 ಎಪ್ರಿಲ್ 1556) ಇಟಲಿಕವಿ. ಸುಸಂಸ್ಕೃತ ಪಂಡಿತ, ರಸಿಕ, ರಾಜನೀತಿಶಾಸ್ತ್ರಜ್ಞನಾದ ಮಾಕಿಯವೆಲಿಯ ಸ್ನೇಹಿತ. ಫ್ಲಾರೆನ್ಸ್ ಗಣರಾಜ್ಯ ಪತನವಾದ ಅನಂತರ ಫ್ರಾನ್ಸಿಗೆ ತೆರಳಿ ಮೊದಲನೆಯ ಫ್ರಾನ್ಸಿಸ್ ನ ಆಸ್ಥಾನದಲ್ಲಿ ಆಶ್ರಯಪಡೆದ. ತನ್ನ ತಾಯಿನಾಡಾದ ಫ್ಲಾರೆನ್ಸನ್ನು ಕುರಿತು ಹಲವಾರು ದೇಶಪ್ರೇಮಗೀತೆಗಳನ್ನು ಬರೆದ. ವಿವಿಧ ವಿಚಾರಗಳನ್ನು ಉಲ್ಲೇಖಿಸುವ ಭಾವಗೀತೆಗಳನ್ನೂ ರಚಿಸಿದ. ಗ್ರೀಕ್ ಪುರಾಣ ಕಥೆಗಳನ್ನೂ ಆರ್ಥರ್ ದೊರೆಯನ್ನು ಕುರಿತ ಅದ್ಭುತ ಕಥೆಗಳನ್ನೂ ಬೆರೆಸಿ ಕೆಲವು ಮಹಾಕಾವ್ಯಗಳನ್ನು ರಚಿಸಿದ. ಇವನ ಕೃತಿಗಳಲ್ಲೆಲ್ಲ ಉತ್ಕೃಷ್ಟವಾದುದು ಡೆಲ್ಲಾ ಕಾಲ್ಪಿವಜಿ಼ಯೋನ್ (1546) ಎಂಬ ನೀತಿಪ್ರಧಾನಕಾವ್ಯ.