ಲಂಡನ್‌ನಲ್ಲಿ ಪ್ರವಾಸೋದ್ಯಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:LondonThames.jpg
ಸೂರ್ಯೋದಯಕ್ಕೆ ಮೊದಲು ಥೇಮ್ಸ್ ನದಿ

ಲಂಡನ್ ಪ್ರಪಂಚದಲ್ಲೇ ಮುಂಚೂಣಿಯಲ್ಲಿರುವ ಪ್ರವಾಸೀ ತಾಣವಾಗಿದೆ ಮತ್ತು ಈ ನಗರವು ಪ್ರಖ್ಯಾತ ಆಕರ್ಷಣೀಯ ಪ್ರವಾಸೀ ಸ್ಥಳಗಳ ಗುಂಪಿಗೆ ತಾಯ್ನಾಡಾಗಿದೆ. ವರ್ಷಕ್ಕೆ ಸುಮಾರು ೧೫ ಮಿಲಿಯನ್ ಅಂತರ್ರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸುವ ಮೂಲಕ ಲಂಡನ್ ಅಂತರ್ರಾಷ್ಟ್ರೀಯ ವೀಕ್ಷಣೆಯಡಿ ವಿಶ್ವದಲ್ಲೇ ಹೆಚ್ಚಿನ ಜನರು ಬೇಟಿನೀಡುವಂತಹ ಪ್ರವಾಸೀ ಸ್ಥಳವಾಗಿದೆ. ಲಂಡನ್‌ನ ಪ್ರವಾಸೋಧ್ಯಮ ಮಂಡಳಿಯನ್ನು ಲಂಡನ್ ದರ್ಶನ ಎಂದು ಕರೆಯಲಾಗುತ್ತದೆ. ಬ್ರಿಟನ್ ಮತ್ತು ಲಂಡನ್ ದರ್ಶಕರ ಕೇಂದ್ರವು ಪಿಕ್ಕಾಡಿಲ್ಲಿ ಸರ್ಕಸ್ ಬಳಿಯಿರುವ ಕೆಳಗಿನ ರೆಜೆಂಟ್ ಸ್ಟ್ರೀಟ್‌ನಲ್ಲಿದೆ.

ಲಂಡನ್ ಪ್ರವಾಸೋದ್ಯಮದ ಆರ್ಥಿಕತೆ[ಬದಲಾಯಿಸಿ]

ಪ್ರವಾಸಿಗಳಿಗಾಗಿರುವ ವ್ಯಾಪಾರಿ ಮಳಿಗೆಯಲ್ಲಿ ಲಂಡನ್ ಮತ್ತು ಯುನೈಟೆಡ್ ಕಿಂಗ್‌ಡಮ್‌ಗೆ ಸಂಬಂಧಿಸಿದಂತಹ ನೆನಪಿನ ಕಾಣಿಕೆಗಳನ್ನು ಟ್ರಫಲ್ಗಾರ್ ಸ್ಕ್ವೇರ್‌ನ ಸ್ಟ್ರಾಂಡ್‌ನಲ್ಲಿ ಮಾರುತ್ತಿರುವುದು.

ಲಂಡನ್ ರಾಜ್ಯಗಳ ಸರಕಾರಿ ಪ್ರವಾಸೀ ವರಮಾನ ಕಚೇರಿಯು ಗಳಿಸುವ ಪ್ರವಾಸೀ ವರಮಾನವು ಲಂಡನ್‌ನ ಒಟ್ಟು ಕಂದಾಯ ಮೌಲ್ಯದ ಶೇಕಡಾ೧೦ರಷ್ಟು ಆಗಿದ್ದು ಈ ಕ್ಷೇತ್ರವು ಲಂಡನ್‌ನ ಒಟ್ಟು ಸಿಬ್ಬಂದಿ ಸಂಖ್ಯೆಯ ಶೇಕಡಾ ೧೩ರಷ್ಟನ್ನು ನೌಕರರ ಸಂಖ್ಯೆಯನ್ನು ಒಳಗೊಂಡಿದೆ. ಲಂಡನ್ ಅಭಿವೃದ್ಧಿ ಇಲಾಖೆಯ ಪ್ರಕಾರ, ಲಂಡನ್‌ಗೆ ಬೇಟಿನೀಡುವ ಪ್ರವಾಸಿಗರು ಪ್ರತೀ ವರ್ಷಕ್ಕೆ ಸುಮಾರು ೧೫ ಪೌಂಡಿನಷ್ಟು ಖರ್ಚು ಮಾಡುತ್ತಾರೆ.[೧] [೨]

ಹವಾಮಾನ[ಬದಲಾಯಿಸಿ]

ಹಲವಾರು ಒಳಾಂಗಣ ಆಕರ್ಷಣೆಗಳನ್ನು ಹೊಂದಿರುವ ಲಂಡನ್ ಒಂದು ಸುಂದರವಾದ ನಗರವಾಗಿದ್ದರೂ, ಶರತ್ಕಾಲ ಮತ್ತು ಚಳಿಗಾಲದ ತಿಂಗಳುಗಳಲ್ಲಿ (ಅಕ್ಟೋಬರ್‌ನಿಂದ ಎಪ್ರಿಲ್‌ವರೆಗೆ) ಇಲ್ಲಿನ ಹವಾಮಾನವು ಕೆಲವೊಮ್ಮೆ ಮಳೆಯಿಂದ ಅಥವಾ ಚಳಿಯಿಂದ ಕೂಡಿರುತ್ತದೆ. ಬೇಸಿಗೆಯಲ್ಲಿನ ಸರಾಸರಿ ಅಧಿಕ ತಾಪಮಾನವು ಸುಮಾರು ೨೩ಡಿಗ್ರಿ ಸೆಲ್ಷಿಯಸ್ (೭೩ಡಿಗ್ರಿ ಫ್ಯಾರನ್‌ಹೀಟ್) ಗಳಷ್ಟಾಗಿರುತ್ತದೆ. ಚಳಿಗಾಲದ ತಿಂಗಳುಗಳು ಶೀತಲವಾಗಿದ್ದು ಹೆಚ್ಚೆಂದರೆ ಸುಮಾರು ೭ಡಿಗ್ರಿ ಸೆಲ್ಷಿಯಸ್ (೪೫ಡಿಗ್ರಿ ಫ್ಯಾರನ್‌ಹೀಟ್) ತಾಪಮಾನ ಹೊಂದಿರುತ್ತದೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಹವಾಮಾನವು ವಿಶೇಷವಾಗಿ ಆರ್ದ್ರತೆಯಿಂದ ಕೂಡಿದ್ದು ಮಳೆಬೀಳುವ ವಾತಾವರಣವಿರುತ್ತದೆ.[೩]

ತಂಗುವ ಸ್ಥಳಗಳು[ಬದಲಾಯಿಸಿ]

ಲಂಡನ್ ಬೃಹತ್ ನಗರವಾದುದರಿಂದ ಮತ್ತು ಪ್ರವಾಸೀ ಕೇಂದ್ರವಾದುದರಿಂದ ಪ್ರಯಾಣದ ಸಮಯದಲ್ಲಿ ಜನರಿಗೆ ತಂಗಲು ಹಲವಾರು ಸ್ಥಳಗಳಿವೆ. ಹಲವಾರು ಹೊಟೇಲುಗಳು (ದುಬಾರಿ ಬೆಲೆಯ ಮತ್ತು ಪ್ರವಾಸೀ), ವಸತಿ ಮತ್ತು ಉಪಾಹಾರಗೃಹಗಳು, ಮಹಡಿಗಳು (ಫ್ಲ್ಯಾಟ್‌ಗಳು, ಹೊಟೇಲಿನ ಅಪಾರ್ಟ್‌ಮೆಂಟುಗಳು) ಇವೆ. ಈ ವಸತಿ ಸೌಲಭ್ಯಗಳಲ್ಲಿ ಹೆಚ್ಚಿನವುಗಳು ಪ್ರವಾಸೀ ಆಕರ್ಷಣೀಯ ಸ್ಥಳಗಳ ನಡುವೆ ಕೇವಲ ಕಾಲ್ನಡಿಗೆಯ ಅಂತರದಲ್ಲಿವೆ. ಇದರ ಬೆಲೆಯು ನಾವು ಆರಿಸುವ ಹೊಟೇಲಿನ ಮಾದರಿಯನ್ನು ಅವಲಂಭಿಸಿರುತ್ತವೆ. ಮೇಲ್ದರ್ಜೆಯ (ಲಕ್ಸುರಿ) ಮತ್ತು ಪ್ರವಾಸೀ ಹೊಟೇಲುಗಳು ದುಬಾರಿ ಬೆಲೆಯುಳ್ಳದ್ದಾಗಿ ಮುಂದುವರಿಯುತ್ತಿದೆ. ವಸತಿ ಮತ್ತು ಬೆಳಗಿನ ತಿಂಡಿ ದೊರೆಯುವಂತಹ ಮನೆಗಳು ಸಾಮಾನ್ಯವಾಗಿ ಕೈಗೆಟುಕುವ ದರದಲ್ಲಿದ್ದು ಬೆಳಗಿನ ಉಪಾಹಾರವನ್ನೊಳಗೊಂಡಿರುತ್ತದೆ. ಫ್ಲಾಟ್‌ಗಳು ಪ್ರವಾಸಿಗರಿಗೆ ಬಾಡಿಗೆಗೆ ನೀಡುವ ಮಹಡಿ ಮೇಲಿನ ವಸತಿಗೃಹಗಳು. ಇವುಗಳು ಒಂದು ವಾರದಷ್ಟು ದೀರ್ಘ ಸಮಯದವರೆಗೆ ತಂಗಲು ಬೇಕಾಗಬಹುದಾದ ಪೂರ್ಣ ಪ್ರಮಾಣದ ಅನುಕೂಲತೆಗಳನ್ನು ಹೊಂದಿದೆ.[೪]

ನಗರದ ಸುತ್ತಮುತ್ತ[ಬದಲಾಯಿಸಿ]

ಸೇಂಟ್‌ ಪೌಲ್ ಕ್ಯಾಥಡ್ರೆಲ್ ಸಮೀಪ ಮ್ಯಾಪ್ ಅನ್ನು ನೋಡುತ್ತಿರುವುದು.ಈ ಮ್ಯಾಪ್‌ಗಳನ್ನು ಲಂಡನ್‌ ನಗರದ ಅನೇಕ ಕಡೆಗಳಲ್ಲಿ ಸ್ಥಾಪಿಸಲಾಗಿದೆ. ಮಾರ್ಗವನ್ನು ಸರಿಯಾಗಿ ಸೂಚಿಸಲು ಮತ್ತು ರಸ್ತೆ, ಲೇನ್ ಮತ್ತು ಗಲ್ಲಿಗಳು ಹೆಚ್ಚಾಗಿ ಗೊಂದಲಗೊಳಿಸುವಂತಿದ್ದು ಅವುಗಳ ಕುರಿತಾದ ಸ್ಪಷ್ಟ ಮಾಹಿತಿ ನೀಡಲು ಇವುಗಳನ್ನು ಪ್ರದರ್ಶಿಸಲಾಗಿದೆ.

ಲಂಡನ್ ನಗರದ ಸುತ್ತಲೂ ಸಂಚರಿಸಲು ಕಾಲ್ನಡಿಗೆಯ, ಸುರಂಗಮಾರ್ಗಗಳ ಮೂಲಕ ಅಥವಾ ಬಸ್ಸಿನ ಮೂಲಕ ಸಂಚರಿಸಬಹುದಾದ ಹಲವಾರು ದಾರಿಗಳಿವೆ. ಲಂಡನ್ ನಗರಿಯ ಆಕರ್ಷಣೆಗಳಲ್ಲಿ ಹಲವಾರು ಸ್ಥಳಗಳು ಪರಸ್ಪರ ಕಾಲ್ನಡಿಗೆಯ ದೂರದಲ್ಲೇ ಇವೆ. ಕಾಲ್ನಡಿಗೆಯಲ್ಲೇ ಹೋಗಬಹುದಾದ ಸ್ಥಳಗಳನ್ನು ತಿಳಿದುಕೊಳ್ಳಲು ಉತ್ತಮ ಪ್ರವಾಸೀ ನಕ್ಷೆಯನ್ನು ಅಥವಾ ಮಾರ್ಗದರ್ಶಿ ಪುಸ್ತಕಗಳನ್ನು ಪಡೆದುಕೊಳ್ಳಬಹುದು. ಇವು ಭೂಗತ ಮಾರ್ಗಗಳ ವಿವರವನ್ನು ಕೂಡಾ ಹೊಂದಿವೆ.

ಭೂಗತ ಪ್ರಯಾಣ[ಬದಲಾಯಿಸಿ]

ಲಂಡನ್ ಭೂಗತ ಮಾರ್ಗವು ಲಂಡನ್‌ನುದ್ದಕ್ಕೂ ಸಂಚರಿಸಬಹುದಾದ ಜನಪ್ರಿಯ ಮಾರ್ಗವಾಗಿದೆ. ಇದು ನಗರದ ಸುತ್ತಲೂ ಸಂಚರಿಸಲು ಅತ್ಯಂತ ಸುಲಭವಾದ ಮತ್ತು ಶೀಘ್ರವಾಗಿ ತಲುಪಬಲ್ಲ ದಾರಿಯೆಂದು ಪರಿಗಣಿಸಲ್ಪಟ್ಟಿದೆ. ಭೂಗತ ಮಾರ್ಗವು ೧೨ ದಾರಿಗಳನ್ನು ಒಳಗೊಂಡಿದ್ದು ಸೋಮವಾರದಿಂದ ಶನಿವಾರದವರೆಗೆ ಮುಂಜಾನೆ ೫ ಗಂಟೆಯಿಂದ ಮಧ್ಯರಾತ್ರಿಯವರೆಗೆ ಚಾಲನೆಯಲ್ಲಿರುತ್ತದೆ. ಭಾನುವಾರವೂ ಕೂಡಾ ಇದು ಚಾಲನೆಯಲ್ಲಿದ್ದರೂ, ಕಾರ್ಯನಿರ್ವಹಿಸುವ ಸಮಯವನ್ನು ಕಡಿತಗೊಳಿಸಲಾಗಿದೆ.

ಬಸ್‌[ಬದಲಾಯಿಸಿ]

ನಗರವನ್ನು ಸುತ್ತುವ ಇನ್ನೊಂದು ಜನಪ್ರಿಯ ಮಾರ್ಗವು ಬಸ್ಸಿನ ಮೂಲಕ ಸಂಚರಿಸುವುದು. ಈ ಮಾದರಿಯ ಸಾರಿಗೆ ವ್ಯವಸ್ಥೆಯು ಎಲ್ಲಾ ವಾರಗಳಲ್ಲಿಯೂ ೨೪ ಗಂಟೆಗಳ ಸೇವೆಯನ್ನು ಒದಗಿಸುತ್ತದೆ. ಕೆಲವು ಬಸ್ಸುಗಳು ಐತಿಹಾಸಿಕ ಕ್ಷೇತ್ರಗಳಿಗೆ ಹಾಗೂ ಪ್ರವಾಸೀ ಆಕರ್ಷಣೀಯ ಸ್ಥಳಗಳಿಗಾಗಿ ಪ್ರವಾಸ ಸೌಲಭ್ಯಗಳನ್ನು ಕಲ್ಪಿಸುವ ಅವಕಾಶವನ್ನು ಕೂಡಾ ಒದಗಿಸುತ್ತವೆ. ಬಸ್ಸನ್ನು ಆಯ್ದುಕೊಳ್ಳುವ ಸಲುವಾಗಿ ಟಿಕೆಟನ್ನು ಮೊದಲೇ ಪಡೆದಿರಬೇಕಾಗುತ್ತದೆ. ಪ್ರಧಾನ ತಂಗುದಾಣಗಳಲ್ಲಿ ಇರುವ ಯಾವುದೇ ಟಿಕೆಟ್ ಯಂತ್ರಗಳಿಂದ ಇವನ್ನು ಪಡೆಯುವುದು ಸುಲಭಸಾಧ್ಯವಾಗಿದೆ. ಬಸ್ ಪಾಸಿನ ದರವು ಪ್ರಯಾಣದ ಒಟ್ಟು ದಿನಗಳನ್ನು ಅವಲಂಭಿಸಿರುತ್ತದೆ, ಜೊತೆಗೆ, ಒಂದುದಿನಕ್ಕೆ ೩.೮೦ ಪೌಂಡ್ ಹಾಗೂ, ವಾರದ ಪಾಸಿಗೆ ೧೩.೮೦ ಪೌಂಡ್ ತಗಲುತ್ತದೆ.

ತೆರೆದ ಮುಚ್ಚಿಗೆಯಿರುವ ಪ್ರವಾಸೀ ಬಸ್ಸುಗಳೂ ಸಹ ಇದ್ದು ಇದರಲ್ಲಿ ಎಲ್ಲಾ ದಿನಗಳ ಟಿಕೆಟ್ ಪಡೆದುಕೊಂಡು ನಮ್ಮ ಆಯ್ಕೆಯ ಹಲವಾರು ಪ್ರವಾಸೀ ಸ್ಥಳಗಳಲ್ಲಿ ಹತ್ತಿ-ಇಳಿಯಬಹುದಾಗಿದೆ. ಅಲ್ಲದೆ ಇದರ ಬದಲಿಗೆ, ಬಸ್ಸಿನಲ್ಲಿಯೇ ಕುಳಿತು ಮಾರ್ಗದರ್ಶಿ ಪ್ರವಾಸವನ್ನೂ ಕೂಡಾ ಆನಂದಿಸಬಹುದಾಗಿದೆ. ಈ ಬಸ್ಸುಗಳು ಟವಿಸ್ಟಾಕ್ ಚೌಕ, ಬ್ರಿಟಿಷ್ ವಸ್ತು ಸಂಗ್ರಹಾಲಯ ಮತ್ತು ಬ್ರಿಟಿಷ್ ಗ್ರಂಥಾಲಯಗಳ ಮಧ್ಯ ದಾರಿಯಲ್ಲಿ ಕಂಡುಬರುತ್ತವೆ.

ಟಿಕೆಟ್‌ಗಳು[ಬದಲಾಯಿಸಿ]

ಎರಡು ಬಗೆಯ ಮುಂಗಡ-ಪಾವತಿ ಮಾದಿ ಪಡೆಯಬಹುದಾದ ಟಿಕೆಟ್‌ಗಳು ಲಭ್ಯವಿದ್ದು ಇವು ಬೇರೆ ಬೇರೆ ವಿಧಾನದ ಸಾರಿಗೆ ವ್ಯವಸ್ಥೆಯಲ್ಲಿ ನಗರದುದ್ದಕ್ಕೂ ಪ್ರಯಾಣಿಸಲು ಬಳಸಲ್ಪಡುತ್ತದೆ. ಮೊದಲ ವಿಧವೆಂದರೆ, ಸಂಪರ್ಕರಹಿತ ಸ್ಮಾರ್ಟ್‌ಕಾರ್ಡ್-ಒಯಿಸ್ಟರ್ ಕಾರ್ಡ್. ಗ್ರಾಹಕನು ತನ್ನ ಕಾರ್ಡನ್ನು ಭರ್ತಿಮಾಡಿಕೊಂಡು ನಂತರದಲ್ಲಿ ಅದನ್ನು ಭೂಮಿಯಡಿಯ ಸಾರಿಗೆ ವ್ಯವಸ್ಥೆಯಲ್ಲಿ, ಬಸ್, ಟ್ರ್ಯಾಂ ಕಂಬಿಗಳಲ್ಲಿ ಮತ್ತು ಅತ್ಯಂತ ರಾಷ್ಟ್ರೀಯ ರೈಲ್ವೇ ಸೇವಾ ಮಾರ್ಗಗಳಲ್ಲಿ ಸಂಚರಿಸಲು ಬಳಸಬಹುದು. ಈ ಟಿಕೆಟ್‌ಗಳನ್ನು ಯಾವುದೇ ಸಂದರ್ಭದಲ್ಲಿ ಬಳಸಬಹುದಾಗಿದೆ ಆದರೆ, ಇದಕ್ಕೆ ತಗುಲುವ ವೆಚ್ಚ ಮಾತ್ರ ಗರಿಷ್ಟ ಜನದಟ್ಟಣಿಯಿರುವ ಮತ್ತು ಜನಸಂಖ್ಯೆ ಕಡಿಮೆಯಿರುವ ಸಮಯಗಳನ್ನು ಆಧರಿಸಿ ಬದಲಾಗುತ್ತದೆ. ಹಗಲಿನ ಕಡಿಮೆ ಜನದಟ್ಟಣಿಯಿರುವ ಮತ್ತು ಇಳಿಕೆ ಮಾಡಿದ ದರವುಳ್ಳ ಸುರಂಗ ಮಾರ್ಗವು ಪೂರ್ವಾಹ್ನ ೯.೩೦ರಿಂದ ಅಪರಾಹ್ನ ೪.೦೦ರವರೆಗೆ ಮತ್ತು ರಾತ್ರಿ ೭.೦೦ಗಂಟೆಯಿಂದ ನಂತರದಲ್ಲಿ ಪ್ರತೀ ಸೋಮವಾರದಿಂದ ಶುಕ್ರವಾರದವರೆಗೆ ಚಾಲನೆಯಲ್ಲಿರುತ್ತದೆ.

ಮಟ್ಟ ಹೆಚ್ಚಿನ ಬೆಲೆ ಕಡಿಮೆ ಬೆಲೆ
1-2 £2.50 £1.90
1-6 £4.50 £2.70

ಎರಡನೇ ವಿಧದ ಟಿಕೆಟ್ ಎಂದರೆ, ಅದು ಪ್ರಯಾಣ ಚೀಟಿ (ಟ್ರಾವೆಲ್ ಕಾರ್ಡ್). ಇದನ್ನು ಕೂಡಾ ಓಯಿಸ್ಟರ್ ಕಾರ್ಡ್ ಮಾದರಿಯ ಪ್ರಯಾಣ ಸೌಕರ್ಯಗಳಿಗೆ ಬಳಸಲಾಗುತ್ತಿದ್ದರೂ, ಇದು ಎಲ್ಲಾ ರಾಷ್ಟ್ರೀಯ ರೈಲ್ವೇ ಸೇವಾ ಮಾರ್ಗಗಳಿಗೂ ಸಹ ಅನ್ವಯಿಸುತ್ತದೆ. ಈ ಟಿಕೆಟ್‌ಗಳ ದರಗಳನ್ನು ಈ ಕೆಳಗೆ ನೀಡಲಾಗಿದೆ.[೫][೬]

ದಿನಗಳು ಮಟ್ಟ ದರ(ಬೆಲೆ)
1 1-6 £7.50
3 1-6 £22.50
7 1-6 £47.60

ಪ್ರೇಕ್ಷಣೀಯ ಸ್ಥಳಗಳು[ಬದಲಾಯಿಸಿ]

ಲಂಡನ್‌ನ ಕೇಂದ್ರಭಾಗ[ಬದಲಾಯಿಸಿ]

ಪ್ರಪಂಚದಾದ್ಯಂತ ಪ್ರಸಿದ್ಧವಾದ ಹಲವಾರು ಪ್ರವಾಸೀ ಆಕರ್ಷಣೀಯ ಸ್ಥಳಗಳಿಗೆ ಲಂಡನ್ ನಗರವು ತಾಯ್ನಾಡಾಗಿದೆ. ಅತ್ಯಂತ ಪ್ರಸಿದ್ಧವಾದುವುಗಳೆಂದರೆ, ನಗರದಲ್ಲಿ ಉಚಿತ ಪ್ರವೇಶವಿರುವ ಹಲವಾರು ವಸ್ತುಸಂಗ್ರಹಾಲಯಗಳು ಪ್ರಮುಖ ಆಕರ್ಷಣೀಯ ಸ್ಥಳಗಳು. ಬ್ರಿಟಿಷ್ ವಸ್ತುಸಂಗ್ರಹಾಲಯದಲ್ಲಿ ಸುಮಾರು ಏಳು ಮಿಲಿಯ ಸಂಗ್ರಹಗಳಿದ್ದು ಲಂಡನ್ ಮಾತ್ರವಲ್ಲದೇ, ಪುರಾತನ ಈಜಿಪ್ಟ್, ಗ್ರೀಸ್ ಮತ್ತು ರೋಮ್ ಇತ್ಯಾದಿ ನಗರಗಳಿಗೆ ಸಂಬಂಧಿಸಿದ ಸಂಗ್ರಹಗಳನ್ನೂ ಸಹ ಒಳಗೊಂಡಿದೆ. ಪ್ರಸಿದ್ಧ ಪ್ರದರ್ಶನಗಳಲ್ಲಿ ಎಲ್ಗಿನ್ ಮಾರ್ಬಲ್ಸ್, ರೊಸೆಟ್ಟ ಸ್ಟೋನ್, ಜಿಂಜರ್ - ಪ್ರಪಂಚದ ಅತ್ಯಂತ ಹಳೆಯ ರಕ್ಷಿತ ಶವ (ಮಮ್ಮಿ), ಲಿಂಡೋ ಮ್ಯಾನ್ ಇತ್ಯಾದಿಗಳು ಮುಖ್ಯವದುವು. ಬ್ರಿಟಿಷ್ ವಸ್ತುಸಂಗ್ರಹಾಲಯವು ವಾರದ ಏಳು ದಿನಗಳಲ್ಲೂ ಸಹ ತೆರೆದಿದ್ದು ವೀಕ್ಷಣೆಯು ಉಚಿತವಾಗಿರುತ್ತದೆ.

ಬ್ರಿಟಿಷ್ ಗ್ರಂಥಾಲಯವು ಹಲವಾರು ಸಾಹಿತ್ಯ ಸಂಗ್ರಹಗಳನ್ನು ಹೊಂದಿದ್ದು ಶಾಸ್ತ್ರಗ್ರಂಥಗಳಾದ ಆಲಿಸ್ ಇನ್ ವಂಡರ್ಲ್ಯಾಂಡ್ , ದ ನೋಟ್ ಬುಕ್ ಆಫ್ ಜೇನ್ ಆಸ್ಟಿನ್, ಚಾರ್ಲೊಟ್ಟೆ ಬ್ರೋಂಟೆಸ್ ಮಾನ್ಯುಸ್ಕ್ರಿಪ್ಟ್ ಆಫ್ ಜೇನ್ ಐರ್ , ಆಸ್ಕರ್ ವೈಲ್ಡ್ಸ್ ದ ಬ್ಯಾಲಡ್‌ ಆಫ್ ರೀಡಿಂಗ್ ಗೋಲ್ , ಮ್ಯಾಗ್ನಾ ಕಾರ್ಟಾ, ಎ ಗ್ಯುಟನ್‌ಬರ್ಗ್ ಬೈಬಲ್, ಕೊಡೆಕ್ಸ್ ಸಿನೈಟಿಕಸ್, ದ ಅಟೋಗ್ರಾಫ್ ಆಫ್ ವಿಲ್ಲಿಯಂ ಶೇಕ್ಸ್‌ಪಿಯರ್, ಒರಿಜಿನಲ್ ಮ್ಯೂಸಿಕ್ ಸ್ಕೋರ್ಸ್ ಬೈ ಅರ್ಥರ್ ಸಲ್ಲಿವಾನ್, ಹ್ಯಾಂಡೆಲ್ ಮತ್ತು ಬೆಥೋವೆನ್‌ ಇತ್ಯಾದಿಗಳಂತಹ ಸುಮಾರು ೨೦೦ಕ್ಕೂ ಹೆಚ್ಚು ಶಾಶ್ವತ ಪ್ರದರ್ಶನಗಳು ಸರ್ ಜಾನ್ ರಿಟ್‌ಬ್ಲಾಟ್ ಗ್ಯಾಲರಿಯಲ್ಲಿ ಕಂಡುಬರುತ್ತವೆ ಈ ಪುಸ್ತಕ ಪ್ರದರ್ಶನ ಮಂದಿರಗಳು ಸಾರ್ವಜನಿಕರಿಗೆ ವಾರದ ಏಳೂ ದಿನಗಳು ತೆರೆದಿದ್ದು ವೀಕ್ಷಣೆಯು ಉಚಿತವಾಗಿರುತ್ತದೆ.[೭]

ಕೆನ್ಸಿಂಗ್ಟನ್‌ನಲ್ಲಿರುವ ವಿಕ್ಟೋರಿಯ ಮತ್ತು ಆಲ್ಬರ್ಟ್ ವಸ್ತು ಸಂಗ್ರಹಾಲಯಗಳು ಪ್ರಪಂಚದ ಅತೀ ದೊಡ್ಡ ಅಲಂಕಾರಿಕ ಕಲೆಗಳ ಮತ್ತು ವಿನ್ಯಾಸಗಳ ವಸ್ತುಸಂಗ್ರಹಾಲಯಗಳಾಗಿದ್ದು ಸುಮಾರು ೪.೫ಮಿಲಿಯನ್ ವಸ್ತುಗಳ ಶಾಶ್ವತ ಸಂಗ್ರಹವು ಇಲ್ಲಿ ಕಾಣುತ್ತದೆ. ರಾಜಕುಮಾರ ಆಲ್ಪರ್ಟ್ ಮತ್ತು ರಾಣಿ ವಿಕ್ಟೋರಿಯಾರ ನಂತರ ೧೮೫೨ರಲ್ಲಿ ಈ ವಸ್ತು ಸಂಗ್ರಹಾಲಯವು ಸ್ಥಾಪನೆ ಹೊಂದಿತು ಮತ್ತು ಅಲ್ಲಿಂದ ಬೆಳೆದುಬಂದ ಇದು ಇತ್ತೀಚೆಗೆ ಸುಮಾರು ೧೨.೫ ಎಕರೆ(೦.೦೫km) ಭೂಭಾಗವನ್ನು ಆಕ್ರಮಿಸಿದ್ದು ೧೪೫ ಸಂಗ್ರಹ ಮಂದಿರಗಳನ್ನು ಹೊಂದಿದೆ. ಇವುಗಳ ಸಂಗ್ರಹದ ಅವಧಿಯು ಸುಮಾರು ೫೦೦೦ವರ್ಷಗಳಷ್ಟು ಹಳೆಯ ಕಲೆಗಳಾಗಿದ್ದು ಪ್ರಾಚೀನ\ಪುರಾತನ ಕಾಲದಿಂದ ಇಂದಿನ ದಿನದವರೆಗೆ ವಾಸ್ತವವಾಗಿ ಯುರೋಪಿನ ಸಂಸ್ಕೃತಿಯಿಂದ ಹಿಡಿದು ಉತ್ತರ ಅಮೇರಿಕ, ಏಷ್ಯಾ ಮತ್ತು ಉತ್ತರ ಆಫ್ರಿಕಾಗಳನ್ನೊಳಗೊಂಡ ಪ್ರತೀ ಮಾಧ್ಯಮದಲ್ಲೂ ಬಳಸಲಾಗಿದೆ. ಪ್ರವೇಶವೂ ಸಹ ಉಚಿತವಾಗಿದೆ.

ಇಲ್ಲಿ ಐತಿಹಾಸಿಕ ಅಥವಾ ಸಾಂಸ್ಕೃತಿಕ ಆಕರ್ಷಣೆಗಳು ಕೂಡಾ ಇವೆ. ಸುಪ್ರಸಿದ್ಧವಾದುವುಗಳಲ್ಲಿ ಬಕಿಂಗ್‌ಹ್ಯಾಮ್ ಪ್ಯಾಲೇಸ್ ಕೂಡಾ ಸೇರಿದೆ. ಈ ವೈಭವದ ಅರಮನೆ ಇಂದಿಗೂ ಕೂಡಾ ಬಳಸಲ್ಪಡುತ್ತಿದೆ. ರಾಜಮನೆತನದ ಯಾವುದೇ ಸದಸ್ಯರು ಈ ಅರಮನೆಯಲ್ಲಿ ವಾಸವಾಗಿರುವಾಗ ನಡೆಯುವ "ಮೇಲ್ವಿಚಾರಕರ ಬದಲಾವಣೆ"ಗೆ ಇಲ್ಲಿನ ವೀಕ್ಷಕರು (ಪ್ರತೀ ವರ್ಷಕ್ಕೆ ಅಂದಾಜು ಸುಮಾರು ೧೫ ಮಿಲಿಯ ಪ್ರವಾಸಾರ್ಥಿಗಳು) ಸಾಕ್ಷಿಯಾಗಿದ್ದಾರೆ. ಬೇಸಿಗೆಯ ಸಮಯದಲ್ಲಿ ಕೆಲವು ಸ್ಥಳಗಳು ಸಾರ್ವಜನಿಕರಿಗೆ ಪ್ರವಾಸಕ್ಕಾಗಿ ತೆರೆದಿರುತ್ತವೆ. ಇತರ ಪ್ರೇಕ್ಷಣೀಯ ಸ್ಥಳಗಳೆಂದರೆ, ಇಂಗ್ಲೆಂಡ್‌ನ ಅನರ್ಘ್ಯ ರತ್ನಖಚಿತ ಮುಕುಟವನ್ನು ಹೊತ್ತ, ವೈಭವದ ಐತಿಹಾಸಿಕ ರಕ್ಷಾವರಣವಾದ ಲಂಡನ್ ಗೋಪುರ. ಇದರ ಸಮೀಪದಲ್ಲೇ ಯಾವತ್ತೂ ಪ್ರವಾಸಿಗಳಿಂದ ತಪ್ಪಾಗಿ ಲಂಡನ್ ಬ್ರಿಡ್ಜ್ ಎಂದು ಗುರುತಿಸಲ್ಪಡುತ್ತಿರುವ ಪ್ರಖ್ಯಾತ ಟವರ್ ಬ್ರಿಡ್ಜ್ ಕೂಡಾ ಇದೆ.[೮]

ಇತರ ಆಕರ್ಷಣೀಯ ಸ್ಥಳಗಳೆಂದರೆ, ಟ್ರಫಾಲ್ಗರ್ ಚೌಕ, ಕಾನ್ವೆಂಟ್ ಗಾರ್ಡನ್, ಲಂಡನ್ ಐ, ಲಂಡನ್ ಝೂ, ನ್ಯಾಚುರಲ್ ಹಿಸ್ಟರಿ ಮೂಸಿಯಂ, ದ ಗ್ಲೋಬ್ ಥಿಯೇಟರ್, ದ ಚಾರ್ಲ್ಸ್ ಡಿಕ್ಕನ್ಸ್ ಮ್ಯೂಸಿಯಂ ಮತ್ತು ಮ್ಯಾಡಮ್ ಟ್ಯುಸ್ಸಾಡ್ಸ್. ಇನ್ನೂ ಹಲವು ಪ್ರೇಕ್ಷಣೀಯ ಸ್ಥಳಗಳು ನಗರದ ಒಳಭಾಗದಲ್ಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಇದೆ. ಲಂಡನ್‌ಗೆ ಬೇಟಿನೀಡುವ ಪ್ರವಾಸಿಗಳು ಮೊತ್ತಮೊದಲು ಉತ್ತಮವಾದ ಮಾರ್ಗದರ್ಶಿ ಪುಸ್ತಕವನ್ನು ಪಡೆದುಕೊಂಡು ಲಂಡನ್‌ನಲ್ಲಿ ಅವನು ಅಥವಾ ಅವಳು ಏನನ್ನು ನೋಡಬೇಕು ಎಂಬುದನ್ನು ಪೂರ್ವಭಾವಿಯಾಗಿ ನಿರ್ಧರಿಸಿರಬೇಕು ಎಂದು ಸೂಚಿಸಲಾಗಿದೆ. ಬ್ರಿಟಿಷ್ ವಸ್ತುಸಂಗ್ರಹಾಲಯಗಳು ಮತ್ತು ವಿಕ್ಟೋರಿಯಾ ಮತ್ತು ಆಲ್ಬರ್ಟ್ ವಸ್ತುಸಂಗ್ರಹಾಲಯಗಳಂತಹ ಬೃಹತ್ ವಸ್ತುಸಂಗ್ರಹಾಲಯಗಳನ್ನು ಸಂದರ್ಶಿಸಲು, ವೀಕ್ಷಿಸಲು ಹಲವಾರು ದಿನಗಳನ್ನೇ ತೆಗೆದುಕೊಳ್ಳುತ್ತದೆ. ತಾವು ವೀಕ್ಷಿಸಲಿಚ್ಚಿಸುವ ಕೆಲವು ವಸ್ತುಗಳನ್ನು ಆರಿಸಿ ಅವುಗಳ ಮೇಲೆ ಕೇಂದ್ರೀಕರಿಸುವುದು ಒಳ್ಳೆಯದು.[೯]

ಲಂಡನ್‌ನ ಪಶ್ಚಿಮ ಕೊನೆಯು ನಗರದ ರಂಗಮಂದಿರವುಳ್ಳ ರಾಜ್ಯವಾಗಿದೆ. ಇಲ್ಲಿ ಅತ್ಯಾಧುನಿಕ ರಂಗಪ್ರದರ್ಶನಗಳು, ಸಂಗೀತಗೋಷ್ಟಿಗಳು ನಡೆಯುತ್ತಿರುತ್ತವೆ. ಆದಾಗ್ಯೂ, ಈ ಪ್ರದರ್ಶನಗಳು ಅತ್ಯಂತ ಪ್ರಸಿದ್ಧವಾಗಿದ್ದು ಇವುಗಳ ವೀಕ್ಷಣೆಗೆ ಅಗತ್ಯವಾದ ಟಿಕೆಟ್‌ಗಳನ್ನು ಸಾಧ್ಯವಾದಷ್ಟು ಮೊದಲೇ ಕಾದಿರಿಸುವಂತೆ ಸಲಹೆ ನೀಡಲಾಗಿದೆ. ಲಂಡನ್‌ನ ಎಲ್ಲಾ ರಂಗಮಂದಿರಗಳು ಟಿಕೆಟ್ ಕಾಯ್ದಿರಿಸಿಕೊಳ್ಳುವುದಕ್ಕಾಗಿ ತಮ್ಮದೇ ಆದ ವೆಬ್‌ಪುಟಗಳನ್ನು ಹೊಂದಿವೆ. ಇವುಗಳನ್ನು ಬಾಕ್ಸ್ ಆಫೀಸ್‌ನಲ್ಲಿ ಅದೇ ದಿನ ಪಡೆದುಕೊಳ್ಳಬಹುದು ಅಥವಾ ಅಂಚೆಯ ಮೂಲಕವೂ ಕಳುಹಿಸಬಹುದು.

View across Trafalgar Square

ಲಂಡನ್‌ನ ಹೊರವಲಯ[ಬದಲಾಯಿಸಿ]

ಲಂಡನ್‌ನ ಹೊರಭಾಗವು ನಗರದ ಕೇಂದ್ರ ಭಾಗದಿಂದ ಲಂಡನ್ ಭೂಗತ ಮಾರ್ಗಗಳ ಮೂಲಕ, ಲಂಡನ್ ಬಸ್‌ಗಳ ಮೂಲಕ ಅಥವಾ ಲಂಡನ್ ಟ್ಯಾಕ್ಸಿಗಳ ಮೂಲಕ ಸುಲಭವಾಗಿ ತಲುಪಬಹುದು. ಚೆಸ್ಸಿಂಗ್ಟನ್ ವರ್ಲ್ಡ್ ಆಫ್ ಅಡ್ವೆಂಚರ್ ಬೃಹತ್ ಲಂಡನ್ ಗಡಿಯೊಳಗಿರುವ ಥೀಮ್ ಪಾರ್ಕ್ ಆಗಿದೆ.

ಲಂಡನ್ ಹೊರಭಾಗವು ಪಶುಪಾಲನಾ ಕೇಂದ್ರಗಳು, ಗಾಲ್ಫ್ ತರಬೇತಿ ತರಗತಿಗಳು, ಕುದುರೆ ಸವಾರಿ, ಹ್ಯಾಂಪ್ಟನ್ ಕೋರ್ಟ್ ಪ್ಯಾಲೇಸ್‌ನಂತಹ ಆಕರ್ಷಣೀಯ ಸ್ಥಳಗಳನ್ನು ಹೊಂದಿದ್ದು ಜೊತೆಗೆ, ಕೇಂದ್ರ ಲಂಡನ್‌ನಲ್ಲಿರುವ ಆಕರ್ಷಣೀಯ ಸ್ಥಳಗಳಿಗೆ ಸಮಾನವಾದ ವಸ್ತುಸಂಗ್ರಹಾಲಯಗಳು ಮತ್ತು ಉದ್ಯಾನವನಗಳನ್ನು ಹೊಂದಿವೆ. ಆದರೆ, ಇದು ಅಷ್ಟೇನೂ ಜನದಟ್ಟಣಿಯಿಂದ ಕೂಡಿರುವುದಿಲ್ಲ.[original research?]

ಇವನ್ನೂ ಗಮನಿಸಿ‌[ಬದಲಾಯಿಸಿ]

ಉಲ್ಲೇಖಗಳು‌[ಬದಲಾಯಿಸಿ]

  1. "Marketing & Promoting London". London Development Agency.
  2. "Tourism in London". Government Office for London. Archived from the original on 2010-06-28. Retrieved 2011-04-22.
  3. http://www.weather.com ದ ವೆದರ್ ಚಾನೆಲ್
  4. ಲೇನ್, ಲ್ಯಾರಿ ಮತ್ತು ಮೈಕೆಲ್. (೨೦೦೪) ಲಂಡನ್‌ ಫಾರ್ ಫ್ಯಾಮಿಲೀಸ್. ಇಂಟರ್‌ಲಿಂಕ್ ಬುಕ್ಸ್‌ ISBN ೦೬೮೮೧೬೮೯೪೯
  5. "Tickets | Transport for London". Tfl.gov.uk. 2010-09-01. Archived from the original on 2007-06-17. Retrieved 2010-09-21.
  6. "Official City Guide & London Hotels". Visit London. Retrieved 2010-09-21.
  7. [೧] Archived 2011-04-08 ವೇಬ್ಯಾಕ್ ಮೆಷಿನ್ ನಲ್ಲಿ. ದ ಸರ್ ಜಾನ್ ರಿಟ್‌ಬ್ಲಾಟ್ ಗ್ಯಾಲರಿ ಇನ್ ದ ಬ್ರಿಟೀಷ್ ಲೈಬ್ರರಿ
  8. [68] ^ ಲಂಡನ್‌ ISBN ೦೬೮೮೧೬೮೯೪೯
  9. ರೀವ್, ಜಾನ್ ದ ಬ್ರಿಟೀಷ್ ಮ್ಯೂಸಿಯಮ್ ವಿಸಿಟರ್ಸ್ ಗೈಡ್ ಪ್ರಕಟಣೆ-ದ ಬ್ರಿಟೀಷ್ ಮ್ಯೂಸಿಯಮ್, ISBN ೯೭೮೦೭೧೪೧೨೭೮೦೪

ಬಾಹ್ಯ ಕೊಂಡಿಗಳು‌[ಬದಲಾಯಿಸಿ]