ರೋಸ್‌ಮರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Rosemary
Rosemary in flower
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
R. officinalis
Binomial name
Rosmarinus officinalis
ಲ್ಯಾಟಿನ್: ರೋಸ್ಮರಿನಸ್ ಅಫಿಷಿನಾಲಿಸ್
Rosmarinus officinalis

ರೋಸ್‌ಮರಿ (Rosmarinus officinalis ) ಒಂದು ಕಾಂಡದಿಂದ ಕೂಡಿದ, ಬಹುವಾರ್ಷಿಕ ಸಸ್ಯವಾಗಿದೆ. ಇದು ಸುವಾಸನೆಯುಳ್ಳ ನಿತ್ಯಹಸುರಿನ ಸೂಜಿಯ ಮಾದರಿ ಎಲೆಗಳನ್ನು ಹೊಂದಿದೆ. ಇದು ಮೆಡಿಟರೇನಿಯನ್ ಪ್ರದೇಶಕ್ಕೆ ಸ್ಥಳೀಯ ಸಸ್ಯವಾಗಿದೆ. ಇದು ಪುದೀನ ಸಸ್ಯ ಜಾತಿಯ ಲಾಮಿಯಾಸಿಯೆ ವರ್ಗಕ್ಕೆ ಸೇರಿದ ಒಂದು ಸಸ್ಯ, ಇದು ಇತರ ಹಲವು ಸಸ್ಯಗಳನ್ನೂ ಸಹ ಒಳಗೊಂಡಿದೆ.

ರೋಸ್‌ಮರಿ ಎಂಬ ಪದವು ಲ್ಯಾಟಿನ್ ನಿಂದ ವ್ಯುತ್ಪತ್ತಿಯನ್ನು ಹೊಂದಿದೆ, ಇದು "ಡ್ಯೂ"(ರೋಸ್ ) ಹಾಗು "ಸೀ" (ಮರಿನಸ್ ) ಪದಗಳಿಂದ, ಅಥವಾ "ಸಮುದ್ರದ ಇಬ್ಬನಿ" ಎಂಬ ಸ್ಪಷ್ಟ ಅರ್ಥವನ್ನು ನೀಡುತ್ತದೆ - ಏಕೆಂದರೆ ಇದು ಸಮುದ್ರದ ತೀರದಲ್ಲಿ ಬೆಳೆದಿರುವುದು ಸತತವಾಗಿ ಕಾಣುತ್ತವೆ.[೨]


ಜೀವಿವರ್ಗೀಕರಣಶಾಸ್ತ್ರ[ಬದಲಾಯಿಸಿ]

ವಿವರಣೆ[ಬದಲಾಯಿಸಿ]

ಸಸ್ಯ ಜಾತಿಯು ಲಂಬದಿಂದ ಹಿಡಿದು ಹಿಂಜೋಲುವ ವರ್ಗಗಳನ್ನು ಒಳಗೊಂಡಿದೆ; ಲಂಬವಾಗಿರುವ ಸಸ್ಯ ಜಾತಿಯು 1.5 m (5 ft)ರಷ್ಟು ಎತ್ತರ, ಅಪರೂಪವಾಗಿ 2 m (6 ft 7 in)ರಷ್ಟು ಬೆಳೆಯುತ್ತದೆ.

ಎಲೆಗಳು ನಿತ್ಯಹಸುರಿನಿಂದ ಕೂಡಿರುತ್ತವೆ, 2–4 cm (0.8–1.6 in)ರಷ್ಟು ಉದ್ದ ಹಾಗು ೨–೫ mm ಅಗಲವಾಗಿರುತ್ತದೆ, ಸಣ್ಣದಾಗಿ ದಟ್ಟ ಉಣ್ಣೆಯಂತಹ ಅಂಗಾಂಶದ ಜೊತೆಗೆ ಮೇಲ್ಭಾಗ ಹಸಿರು ಬಣ್ಣವನ್ನು ಹಾಗು ಕೆಳಭಾಗ ಬಿಳಿ ಬಣ್ಣವನ್ನು ಹೊಂದಿರುತ್ತದೆ.

ಒಂದು ಪರಿಪೂರ್ಣ ಹಾಗು ಆರೋಗ್ಯಕರ ಮಾದರಿಯಲ್ಲಿ ಬಹಳ ಸಾಮಾನ್ಯವಾಗಿ ಹೂ ಅರಳುತ್ತದೆ, ಇದು ಬೇಸಿಗೆಕಾಲದಲ್ಲಿ ಉತ್ತರ ಭಾಗದಲ್ಲಿ ಅರಳುತ್ತದೆ; ಆದರೆ ಇದು ಬೆಚ್ಚನೆ-ಚಳಿಗಾಲದ ವಾತಾವರಣದಲ್ಲಿ ಇದು ನಿತ್ಯ ಅರಳಿದಂತೆ ಕಂಡುಬರುತ್ತದೆ ಜೊತೆಗೆ ಬಿಳಿ, ಗುಲಾಬಿ, ನೇರಳೆ, ಅಥವಾ ನೀಲಿ ಬಣ್ಣದಂತಹ ಹಲವು ಬಣ್ಣಗಳನ್ನು ಹೊಂದಿರುತ್ತವೆ [೧].

ಪುರಾಣದಲ್ಲಿ[ಬದಲಾಯಿಸಿ]

ಗ್ರೀಕ್ ಪದ ರೋಸ್ ಮಾರಿನಸ್ ನಿಂದ ವ್ಯುತ್ಪತ್ತಿಯನ್ನು ಹೊಂದಿರುವ ರೋಸ್‌ಮರಿ ಪದವನ್ನು ಸಮುದ್ರದ ಮಂಜು ಎಂದು ಭಾಷಾಂತರಿಸಬಹುದು. ಆಫ್ರೋಡೈಟ್ ದೇವತೆಯು ಸಮುದ್ರದಿಂದ ಹುಟ್ಟಿಬಂದಾಗ ಇದು ಅವಳ ಸುತ್ತಲೂ ತೂಗಾಡುತ್ತಿತ್ತೆಂದು ಹೇಳಲಾಗುತ್ತದೆ ಜೊತೆಗೆ ಇದು ಔರನೋಸ್ ನ ರೇತಸ್ಸಿನಿಂದ ಮೂಲದಲ್ಲಿ ಹುಟ್ಟಿಕೊಂಡಿತೆಂದೂ ಸಹ ಪ್ರತೀತಿಯಿದೆ. ಆಫ್ರೋಡೈಟ್ ದೇವತೆಯು ರೋಸ್‌ಮರಿ ಸಸ್ಯದ ಜೊತೆಗೆ ನಿಕಟವಾಗಿ ಸಂಪರ್ಕವನ್ನು ಹೊಂದಿರುವ ಕಾರಣದಿಂದಾಗಿ ಇದರ ಜೊತೆ ಅವಳ ಒಡನಾಟವನ್ನು ಕಲ್ಪಿಸಬಹುದು.

ಸಾಗುವಳಿ[ಬದಲಾಯಿಸಿ]

ಇದು ಆಕರ್ಷಕವಾಗಿದೆ ಸ್ವಲ್ಪ ಮಟ್ಟದ ಶುಷ್ಕತೆಗೆ ಸಹಿಷ್ಣುವಾಗಿರುವ ಕಾರಣದಿಂದಾಗಿ, ಇದನ್ನು ಭೂದೃಶ್ಯಗಳಿಗಾಗಿ, ವಿಶೇಷವಾಗಿ ಮೆಡಿಟರೇನಿಯನ್ ಹವಾಮಾನವನ್ನು ಹೊಂದಿರುವ ಪ್ರದೇಶಗಳಲ್ಲಿ ಬಳಸಲಾಗುತ್ತದೆ. ತೋಟಗಾರಿಕೆಯನ್ನು ಮೊದಲ ಬಾರಿಗೆ ಮಾಡುವವರಿಗೆ ಇದೊಂದು ಸುಲಭವಾಗಿ ಬೆಳೆಯಬಹುದಾದ ಸಸ್ಯವೆಂದು ಹೇಳಲಾಗುತ್ತದೆ, ಜೊತೆಗೆ ಇದು ಕೀಟ-ನಿರೋಧಕವಾಗಿದೆ.

ಸೂರ್ಯ ಬೆಳಕು ಅಧಿಕವಾಗಿ ಬೀಳುವ ಸ್ಥಳದಲ್ಲಿ ಉತ್ತಮ ಜಲನಿರ್ಗಮನದೊಂದಿಗೆ ರೋಸ್‌ಮರಿ ಚೂರ್ಣ್ಯ ಕಲಸುಮಣ್ಣಿನಲ್ಲಿ ಬೆಳೆಯುತ್ತದೆ, ಇದು ನೀರಿನ ಅಧಿಕತೆಯನ್ನು ತಡೆದುಕೊಳ್ಳುವುದಿಲ್ಲ ಜೊತೆಗೆ ಕೆಲವೊಂದು ಜಾತಿಗಳು ಹಿಮದ ಸ್ಥಿತಿಗೆ ಸುಲಭವಾಗಿ ಹೊಂದಿಕೊಳ್ಳುತ್ತವೆ. ಇದು ತಟಸ್ಥ - ಆಲ್ಕಲೈನ್ ಪರಿಸ್ಥಿತಿಗಳ pH (pH ೭-೭.೮) ನಲ್ಲಿ ಸಾಧಾರಣ ಫಲವತ್ತತೆಯನ್ನು ನೀಡುವ ಮಣ್ಣಿನಲ್ಲಿ ಉತ್ತಮವಾಗಿ ಬೆಳೆಯುತ್ತದೆ.[೩]

ರೋಸ್‌ಮರಿಯನ್ನು ಸುಲಭವಾಗಿ ಆಕಾರಗಳಿಗೆ ಓರಣಗೊಳಿಸಬಹುದು ಜೊತೆಗೆ ಇದನ್ನು ಸಸ್ಯಾಲಂಕರಣದಲ್ಲಿ ಬಳಸಲಾಗುತ್ತದೆ. ಕುಂಡಗಳಲ್ಲಿ ಬೆಳೆಸುವಾಗ, ಇದು ಅಸ್ತವ್ಯಸ್ತವಾಗುವುದನ್ನು ಹಾಗು ವಿಕಾರವಾಗಿ ಕಾಣುವುದನ್ನು ತಡೆಗಟ್ಟಲು ಕತ್ತರಿಸಿ ಓರಣಮಾಡಬಹುದು, ಆದಾಗ್ಯೂ ಉದ್ಯಾನದಲ್ಲಿ ಬೆಳೆದ ರೋಸ್‌ಮರಿ ಸಾಕಷ್ಟು ದೊಡ್ಡದಾಗಿರುವುದರ ಜೊತೆಗೆ ಮತ್ತಷ್ಟು ಆಕರ್ಷಕವಾಗಿರುತ್ತದೆ. ಇದನ್ನು ಒಂದು ಅಸ್ತಿತ್ವದಲ್ಲಿರುವ ಸಸ್ಯದ ಒಂದು ಚಿಗುರನ್ನು 10–15 cm (4–6 in)ರಷ್ಟು ಉದ್ದ ಕತ್ತರಿಸಿ ತೆಗೆದು, ಬುಡದಿಂದ ಕೆಲವು ಎಲೆಗಳನ್ನು ಕತ್ತರಿಸಿ, ಜೊತೆಗೆ ಮಣ್ಣಿನಲ್ಲಿ ನೇರವಾಗಿ ನೆಡುವುದರಿಂದ ಹೊಸ ಸಸಿಯನ್ನು ಹುಟ್ಟಿಸಬಹುದಾಗಿದೆ.

ಹಲವಾರು ಕೃಷಿ-ತಳಿಗಳನ್ನು ತೋಟಗಾರಿಕೆಯ ಬಳಕೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕೆಳಕಂಡ ಸಸ್ಯದ ಜಾತಿಗಳು ಸಾಮಾನ್ಯವಾಗಿ ಮಾರಾಟವಾಗುತ್ತವೆ:

  • ಆಲ್ಬಸ್ — ಬಿಳಿ ಹೂವುಗಳು
  • ಆರ್ಪ್ — ತೆಳು ಹಸಿರು ಬಣ್ಣದ ಎಲೆಗಳ ಜೊತೆಗೆ, ನಿಂಬೆಯ-ಪರಿಮಳವನ್ನು ಹೊಂದಿರುತ್ತವೆ
  • ಔರೆಯುಸ್ — ಎಲೆಗಳ ಮೇಲೆ ಹಳದಿ ಬಣ್ಣದ ಪಟ್ಟೆಯಿರುತ್ತದೆ
  • ಬೆನೆನ್ಡೆನ್ ಬ್ಲೂ — ಎಲೆಗಳು ಸಂಕುಚಿತವಾಗಿದ್ದು, ಕಡು ಹಸಿರು ಬಣ್ಣವನ್ನು ಹೊಂದಿರುತ್ತವೆ
  • ಬ್ಲೂ ಬಾಯ್ — ಕುರುಚಲಾಗಿದ್ದು, ಸಣ್ಣ ಎಲೆಗಳನ್ನು ಹೊಂದಿರುತ್ತವೆ
  • ಗೋಲ್ಡನ್ ರೈನ್ — ಹಳದಿ ಗೆರೆಗಳನ್ನು ಹೊಂದಿರುವ ಎಲೆಗಳು ಹಸಿರು ಬಣ್ಣದಿಂದ ಕೂಡಿರುತ್ತವೆ
  • ಗೋಲ್ಡ್ ಡಸ್ಟ್ - ಬಂಗಾರದ ಬಣ್ಣದ ಗೆರೆಗಳನ್ನು ಹೊಂದಿರುವ ಎಲೆಗಳು ಕಡು ಹಸಿರು ಬಣ್ಣವನ್ನು ಹೊಂದಿರುತ್ತವೆ ಆದರೆ ಇದು ಗೋಲ್ಡನ್ ರೈನ್ ಗಿಂತ ಗಾಢವಾಗಿರುತ್ತದೆ


  • ಐರಿನ್ — ಜಾಳುಜಾಳಾಗಿರುವುದರ ಜೊತೆಗೆ ಹಿಂಜೋಲುತ್ತವೆ
  • ಲಾಕ್ವುಡ್ ಡಿ ಫಾರೆಸ್ಟ್ಟಸ್ಕನ್ ಬ್ಲೂ ನ ನೆಲಕ್ಕಂಟಿಕೊಂಡೇ ಹಬ್ಬುವ ಮಾದರಿ
  • ಕೆನ್ ಟೈಲರ್ — ಪೊದೆಯಂತಿರುತ್ತದೆ
  • ಮಜೋರಿಕಾ ಪಿಂಕ್ — ಗುಲಾಬಿ ಬಣ್ಣದ ಹೂಗಳು
  • ಮಿಸ್ ಜೆಸ್ಸೋಪ್'ಸ್ ಅಪ್ರೈಟ್ — ಎತ್ತರವಾಗಿ ಲಂಬವಾಗಿರುತ್ತದೆ
  • ಪಿಂಕಿಎ — ಗುಲಾಬಿ ಬಣ್ಣದ ಹೂಗಳು
  • ಪ್ರೊಸ್ಟ್ರೆಟರ್ಸ್
  • ಪಿರಾಮಿಡಾಲಿಸ್ (ಅಥವಾ ಎರೆಕ್ಟಸ್ ) — ಮಸುಕಾದ ನೀಲಿ ಬಣ್ಣದ ಹೂಗಳು
  • ರೋಸಯುಸ್ — ಗುಲಾಬಿ ಬಣ್ಣದ ಹೂಗಳು
  • ಸಲೇಂ — ಮಸುಕಾದ ನೀಲಿ ಬಣ್ಣದ ಹೂಗಳ ಜೊತೆಗೆ ಶೈತ್ಯವಾಗಿ ವರ್ಷದುದ್ದಕ್ಕೂ ಆರ್ಪ್ ನ ಮಾದರಿ ಬೆಳೆಯುತ್ತದೆ
  • ಸೇವೆರ್ನ್ ಸೀ — ಹಬ್ಬುವ, ಕಡಿಮೆ ಪ್ರಮಾಣದಲ್ಲಿ ಬೆಳೆಯಲಾಗುವ ಈ ಜಾತಿಯು, ಕಮಾನು ಮಾದರಿಯ ಕೊಂಬೆಗಳನ್ನು ಹೊಂದಿರುತ್ತವೆ; ಇದರ ಹೂಗಳು ಗಾಢ ನೇರಳೆ ಬಣ್ಣದಿಂದ ಕೂಡಿರುತ್ತವೆ
  • ಟಸ್ಕನ್ ಬ್ಲೂ — ಲಂಬವಾಗಿ ಬೆಳೆಯುತ್ತವೆ

ಬಳಕೆ[ಬದಲಾಯಿಸಿ]

ಅಡುಗೆಯಲ್ಲಿ ಬಳಕೆ[ಬದಲಾಯಿಸಿ]

ತಾಜಾ ಹಾಗು ಒಣಗಿದ ಎಲೆಗಳನ್ನು ಸಾಂಪ್ರದಾಯಿಕ ಮೆಡಿಟರೇನಿಯನ್ ಅಡುಗೆಗಳಲ್ಲಿ ಸಾಧಾರಣವಾಗಿ ಬಳಸಲಾಗುತ್ತದೆ; ಇವಗಳು ಕಹಿಯಾಗಿ, ಒಗಚಾದ ಸ್ವಾದವನ್ನು ಹೊಂದಿರುವುದರ ಜೊತೆಗೆ ಬಹಳ ಸುಗಂಧದಿಂದ ಕೂಡಿರುತ್ತವೆ, ಇದು ಒಂದು ವ್ಯಾಪಕ ವಿವಿಧ ತಿನಿಸುಗಳಿಗೆ ಪೂರಕವಾಗಿದೆ. ಇವುಗಳಿಂದ ಕಷಾಯವನ್ನು ಸಹ ತಯಾರಿಸಬಹುದು. ಇವುಗಳನ್ನು ಸುಟ್ಟು ಹಾಕಿದಾಗ ವಿಶಿಷ್ಟವಾದ ಒಂದು ಸಾಸಿವೆ ಪರಿಮಳವನ್ನು ಹೊರಸೂಸುತ್ತವೆ, ಜೊತೆಗೆ ಆಹಾರವನ್ನು ಹುರಿಯುವಾಗ ಬಳಸುವ ಸುವಾಸನೆ ಭರಿತ ಪದಾರ್ಥಗಳ ಪರಿಮಳದಂತೆ ಇರುತ್ತದೆ.

ಇದನ್ನು ಪ್ರಯತ್ನಿಸಲು ಈ ಕೆಳಕಂಡಂತೆ ಒಂದು ಸಾಮಾನ್ಯವಾದ ಪಾಕವಿವರಣೆಯನ್ನು ನೀಡಲಾಗಿದೆ: ೪ ಕೋಳಿಯ-ತೊಡೆಮಾಂಸ, ೪ ಕೆಂಪು ಆಲೂಗೆಡ್ಡೆಗಳು ತುಂಡರಿಸಿದ್ದು, ೧/೪ ಬಟ್ಟಲು ಎಕ್ಸಟ್ರಾ ವರ್ಜಿನ್ ಆಲಿವ್ ಎಣ್ಣೆ ಕತ್ತರಿಸಲಾದ ತಾಜಾ ರೋಸ್‌ಮರಿಗಳ ಎರಡು ಚಿಗುರುಗಳು. ಸಮವಾಗಿ ಲೇಪಿಸಿ. ಫಾಯಿಲ್(ತೆಳು ತಗಡು ಹೊದಿಕೆ)ನಲ್ಲಿ ಒಂದು ಸರಳುಕಾವಲಿಯ ಮೇಲೆ ಬೇಯಿಸಿ ಅಥವಾ ಒಂದು ಕುಕ್ಕಿ ಹಾಳೆಯ ಮೇಲೆ ೩೭೫(೧೯೦ C) ಒಲೆಯಲ್ಲಿ ೧ ಗಂಟೆಯ ಕಾಲ ಬೇಯಿಸಿ.

ರೋಸ್‌ಮರಿಯಲ್ಲಿ ಅಧಿಕ ಪ್ರಮಾಣದ ಕಬ್ಬಿಣಾಂಶ, ಕ್ಯಾಲ್ಷಿಯಂ, ಹಾಗು ವಿಟಮಿನ್ B6 ಅನ್ನು ಹೊಂದಿದೆ.[೪]

ಸಾಂಪ್ರದಾಯಿಕ ಬಳಕೆ[ಬದಲಾಯಿಸಿ]

ಒಂದು ಇಟಾಲಿಯನ್ ಮೂಲಿಕೆ, ca.ಯಿಂದ ರೋಸ್‌ಮರಿ ಬಗ್ಗೆ ವಿವರಣೆ1500

ಹಂಗೇರಿ ವಾಟರ್ ನ್ನು ಮೊದಲ ಬಾರಿಗೆ ಹಂಗೇರಿಯ ರಾಣಿಗೋಸ್ಕರ ಸಿದ್ದಪಡಿಸಲಾಯಿತು. ಇದನ್ನು "ಪಾರ್ಶ್ವವಾಯು ಹಿಡಿದ ಅಂಗದಲ್ಲಿ ಮತ್ತೆ ಚೈತನ್ಯವನ್ನು ತುಂಬಲು" ಹಾಗು ಸಂಧಿವಾತಕ್ಕೆ ಚಿಕಿತ್ಸೆ ನೀಡಲು ಬಳಸಲಾಯಿತು. ಇದನ್ನು ಬಾಹ್ಯವಾಗಿ ಬಳಕೆ ಮಾಡಲಾಯಿತು ಹಾಗು ಇದನ್ನು ತಾಜಾ ರೋಸ್‌ಮರಿ ಮೇಲ್ಭಾಗದ ಎಲೆಗಳನ್ನು ವೈನ್ ನ ಸಾರದಲ್ಲಿ ಮಿಶ್ರಣ ಮಾಡಿ ಸಿದ್ಧಪಡಿಸಲಾಯಿತು.[೫]

ಡಾನ್ ಕ್ವಿಕ್ಸಾಟ್ (ಅಧ್ಯಾಯ XVII, ಮೊದಲ ಸಂಪುಟ) ಇದನ್ನು ತನ್ನ ಫಿಯೇರಬ್ರಾಸ್ ನ ಪವಾಡಸದೃಶ ಮುಲಾಮನ್ನು ತಯಾರು ಮಾಡುವ ಪದಾರ್ಥದಲ್ಲಿ ಮಿಶ್ರಣ ಮಾಡಿ ಹೇವರಿಕೆಯ ಫಲಿತಾಂಶವನ್ನು ಗಳಿಸುತ್ತಾನೆ.


ರೋಸ್‌ಮರಿ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆಂದು ಬಹಳ ಹಿಂದಿನಿಂದಲೂ ಖ್ಯಾತಿಯನ್ನು ಪಡೆದಿದೆ, ಜೊತೆಗೆ ಇದನ್ನು ಜ್ಞಾಪಕಾರ್ಥ ಸಂಕೇತವಾಗಿ ಯುರೋಪ್ ಹಾಗು ಆಸ್ಟ್ರೇಲಿಯಾದಲ್ಲಿ ಬಳಸಲಾಗುತ್ತದೆ(ಮದುವೆ, ಯುದ್ಧ ಸ್ಮರಣೆಗಳು ಹಾಗು ಶವಸಂಸ್ಕಾರಗಳಲ್ಲಿ ಬಳಸಲಾಗುತ್ತದೆ).[ಸೂಕ್ತ ಉಲ್ಲೇಖನ ಬೇಕು] ದುಃಖತಪ್ತರು, ಸತ್ತವರ ಸ್ಮರಣೆಯ ಸಂಕೇತವಾಗಿ ಶವವನ್ನು ಹೋಲುವ ಗುಂಡಿಗಳಲ್ಲಿ ಎಸೆಯುತ್ತಿದ್ದರು. ಶೇಕ್ಸ್ ಪಿಯರ್ಹ್ಯಾಮ್ಲೆಟ್ ನಲ್ಲಿ, ಒಫೀಲಿಯ, "ಸ್ಮರಣೆಗಾಗಿ ಇಲ್ಲಿ ರೋಸ್‌ಮರಿ ಇದೆ" ಎಂದು ಹೇಳುತ್ತಾರೆ (ಹ್ಯಾಮ್ಲೆಟ್, iv. ೫.) ಒಂದು ನೂತನ ಅಧ್ಯಯನವು ಈ ಖ್ಯಾತಿಗೆ ಕೆಲವು ಭರವಸೆಗಳನ್ನು ಒದಗಿಸುತ್ತದೆ. ರೋಸ್‌ಮರಿಯನ್ನು ಜನರು ಕೆಲಸ ಮಾಡುವ ಕಿರುಕೋಣೆಯಲ್ಲಿ ಪಂಪ್ ಮಾಡಿದಾಗ, ಬಹಳ ನಿಧಾನವಾಗಿ ಜ್ಞಾಪಕಕ್ಕೆ ತಂದು ಕೊಂಡರೂ ಸಹ ಆ ಜನರ ಸ್ಮರಣೆಯಲ್ಲಿ ಚೇತರಿಕೆ ಕಂಡುಬಂದಿದ್ದು ಪ್ರದರ್ಶಿತವಾಯಿತು.[೬]

ಮಧ್ಯ ಯುಗದಲ್ಲಿ, ರೋಸ್‌ಮರಿಯನ್ನು ಮದುವೆ ಸಮಾರಂಭಗಳಲ್ಲಿ ಬಳಸಲಾಗುತ್ತಿತ್ತು - ಮದುಮಗಳು ರೋಸ್‌ಮರಿಯನ್ನು ತನ್ನ ಹೆಡ್‌ಪೀಸ್‌ನಲ್ಲಿ ಧರಿಸುತ್ತಿದ್ದಳು ಜೊತೆಗೆ ಮದುಮಗ ಹಾಗು ಮದುವೆಗೆ ಬಂದ ಅತಿಥಿಗಳು ಎಲ್ಲರೂ ರೋಸ್‌ಮರಿಯ ಚಿಗುರನ್ನು ಧರಿಸುತ್ತಿದ್ದರು, ಜೊತೆಗೆ ಮದುವೆಯೊಂದಿಗೆ ರೋಸ್‌ಮರಿಯ ಸಂಬಂಧವು ಒಂದು ಪ್ರೀತಿಯ ದ್ಯೋತಕವಾಗಿ ಹುಟ್ಟಿಕೊಂಡಿತು. ಹೊಸತಾಗಿ ಮದುವೆಯಾದ ದಂಪತಿಗಳು ರೋಸ್‌ಮರಿಯ ಒಂದು ರೆಂಬೆಯನ್ನು ತಮ್ಮ ಮದುವೆಯ ದಿನ ನೆಡುತ್ತಿದ್ದರು. ರೆಂಬೆಯು ಬೆಳವಣಿಗೆಯಾದರೆ ಅವರ ದಾಂಪತ್ಯ ಹಾಗು ಕುಟುಂಬಕ್ಕೆ ಒಂದು ಶುಭ ಶಕುನವೆಂದು ಪರಿಗಣಿಸಲಾಗುತ್ತಿತ್ತು. 'ಏ ಮಾರ್ಡ್ರನ್ ಹರ್ಬಲ್', ಶ್ರೀಮತಿ ಗ್ರೀವೆಸ್ "ಒಂದು ರೋಸ್‌ಮರಿ ಕೊಂಬೆಯು, ಸಮೃದ್ಧವಾಗಿ ಚಿನ್ನದ ಲೇಪದಿಂದ ಹಾಗು ಎಲ್ಲ ಬಣ್ಣಗಳ ರೇಷ್ಮೆ ಅಲಂಕಾರಿಕ ಪಟ್ಟಿಯಿಂದ ಸುತ್ತಲಾಗಿತ್ತು, ಇದನ್ನು ಸಹ ಮದುವೆಗೆ ಬಂದ ಅತಿಥಿಗಳಿಗೆ ಪ್ರೀತಿ ಹಾಗು ನಿಷ್ಠೆಯ ಸಂಕೇತವಾಗಿ ನೀಡಲಾಗುತ್ತಿತ್ತು" ಎಂದು ಹೇಳುತ್ತಾಳೆ. ಪ್ರೀತಿಯ ದ್ಯೋತಕವಾಗಿ ಬಳಕೆಯಾದ ಮತ್ತೊಂದು ಉದಾಹರಣೆಯಲ್ಲಿ ಒಬ್ಬ ಯುವಕ ಮತ್ತೊಬ್ಬ ಯುವತಿಗೆ ರೋಸ್‌ಮರಿ ಚಿಗುರಿನಿಂದ ಮೆಲ್ಲಗೆ ತಟ್ಟುತ್ತಾನೆ ಹಾಗು ಈ ಚಿಗುರು ಒಂದು ಅರಳಿದ ಹೂವನ್ನು ಒಳಗೊಂಡಿದ್ದರೆ, ಈ ಜೋಡಿಯು ಪ್ರೀತಿಯಲ್ಲಿ ಬೀಳಬಹುದೆಂದು ಹೇಳಲಾಗುತ್ತಿತ್ತು. ರೋಸ್‌ಮರಿಯನ್ನು ಭವಿಷ್ಯಜ್ಞಾನಕ್ಕೆ ಸಂಬಂಧಿಸಿದ ಮೂಲಿಕೆಯಾಗಿ ಬಳಸಲಾಗುತ್ತದೆ-ಹಲವಾರು ವಿಧದ ಮೂಲಿಕೆಗಳನ್ನು ಕುಂಡಗಳಲ್ಲಿ ಬೆಳೆಸುವುದರ ಜೊತೆಗೆ ಒಬ್ಬ ಸಂಭಾವ್ಯ ಪ್ರೇಮಿಯ ಹೆಸರನ್ನು ಇರಿಸಲಾಗುತ್ತಿತ್ತು. ನಂತರ ಅದನ್ನು ಬೆಳೆಯಲು ಬಿಡಲಾಗುತ್ತಿತ್ತು ಜೊತೆಗೆ ಬಲವಾಗಿ ಹಾಗು ಬಹಳ ಬೇಗನೆ ಬೆಳೆದ ಸಸ್ಯವು ಉತ್ತರವನ್ನು ನೀಡುತ್ತಿತ್ತು. ರೋಸ್‌ಮರಿಯನ್ನು ಒಬ್ಬ ಪ್ರೇಮಿಯನ್ನು ಆಕರ್ಷಿಸಲು ಪುಟ್ಟ ಗೊಂಬೆಗಳಲ್ಲಿ (ಬಟ್ಟೆಯ ಗೊಂಬೆಗಳು) ತುಂಬಲಾಗುತ್ತಿತ್ತು ಅಥವಾ ಅನಾರೋಗ್ಯವನ್ನು ಸರಿಪಡಿಸುವ ಕಂಪನಗಳನ್ನು ಆಕರ್ಷಿಸುವ ಸಲುವಾಗಿ ಬಳಸಲಾಗುತ್ತಿತ್ತು. ರೋಸ್‌ಮರಿಯ ಒಂದು ಚಿಗುರನ್ನು ಮಲಗುವ ಮುಂಚೆ ದಿಂಬಿನ ಕೆಳಗೆ ಇರಿಸಿಕೊಂಡರೆ ಅದು ದುಸ್ವಪ್ನಗಳನ್ನು ನಿರೋಧಿಸುತ್ತದೆಂದು ಭಾವಿಸಲಾಗಿತ್ತು, ಜೊತೆಗೆ ಇದನ್ನು ಮನೆಯ ಹೊರಗೆ ಇರಿಸಿದರೆ ಅದು ಮಾಟಗಾತಿಯರನ್ನು ನಿರೋಧಿಸುತ್ತದೆ ಎಂದು ನಂಬಲಾಗಿತ್ತು. ಹೇಗೆ ಆದರೂ, ತೋಟದಲ್ಲಿ ಮಾಟಗಾತಿಯರನ್ನು ನಿರೋಧಿಸುವ ಕಾರಣದಿಂದಾಗಿ ರೋಸ್‌ಮರಿಯ ಬಳಕೆಯು ಮಹತ್ವವನ್ನು ಪಡೆಯಿತು. ಇದರಂತೆ ಸಮೃದ್ಧವಾಗಿ ಮನೆಗಳಲ್ಲಿ ತೋಟಗಳಲ್ಲಿ ರೋಸ್‌ಮರಿ ಬೆಳೆಯುವ ಕಡೆಗಳಲ್ಲಿ ಮಹಿಳೆಯರು ಮನೆಗಳಲ್ಲಿ ಪ್ರಾಬಲ್ಯ ಮೆರೆದರು. ಸುಮಾರು ೧೬ನೇ ಶತಮಾನದ ಹೊತ್ತಿಗೆ, ಈ ರೂಢಿಯು ಚರ್ಚೆಗೆ ಆಸ್ಪದವನ್ನು ನೀಡಿತು; ಜೊತೆಗೆ ಪುರುಷರು ರೋಸ್‌ಮರಿ ಪೊದೆಗಳನ್ನು ಕತ್ತರಿಸಿಹಾಕಿದರು. ಏಕೆಂದರೆ ಅವರು ತಾವು ಪ್ರಬಲರಾಗಿದ್ದೇವೆ ತಮ್ಮ ಪತ್ನಿಯರಲ್ಲ ಎಂಬುದನ್ನು ತೋರಿಸಬೇಕಿತ್ತು.[೭]

ಸಂಭಾವ್ಯ ವೈದ್ಯಕೀಯ ಬಳಕೆ[ಬದಲಾಯಿಸಿ]

ಒಂದು ಅಧ್ಯಯನದ ಫಲಿತಾಂಶವು, ರೋಸ್‌ಮರಿಯಲ್ಲಿ ಪತ್ತೆಯಾದ ಕಾರ್ನೋಸಿಕ್ ಆಸಿಡ್, ಫ್ರೀ ರಾಡಿಕಲ್ಸ್ (ಮುಕ್ತ ರೋಗಮೂಲಾಹಾರಿ)ಯಿಂದ ಮಿದುಳನ್ನು ರಕ್ಷಿಸಬಹುದೆಂದು ಸೂಚಿಸುತ್ತದೆ, ಇದು ಪಾರ್ಶ್ವವಾಯು ಹಾಗು ನರಗಳನ್ನು ಕುಂದಿಸುವ ಕಾಯಿಲೆಗಳು, ಉದಾಹರಣೆಗೆ ಆಲ್ಜಿಮರ್ಸ್ ಹಾಗು ಲೌ ಗೆಹ್ರಿಗ್ ನಂತಹ ಅಪಾಯಗಳನ್ನು ಕಡಿಮೆಮಾಡುತ್ತದೆ.[೮]

ರೋಸ್‌ಮರಿ ಸಂಭಾವ್ಯ ಜೀವವಿಜ್ಞಾನಕ್ಕೆ ಸಂಬಂಧಿಸಿದ ಗತಿಶೀಲ ಸಂಯುಕ್ತಗಳ ಅಧಿಕ ಸಂಖ್ಯೆಯನ್ನು ಹೊಂದಿದೆ, ಇದರಲ್ಲಿ ಕಾರ್ನೋಸಿಕ್ ಆಸಿಡ್ ಹಾಗು ರೋಸ್ಮರಿನಿಕ್ ಆಸಿಡ್ ನಂತಹ ಆಂಟಿಆಕ್ಸಿಡನ್ಟ್ ಗಳನ್ನೂ ಒಳಗೊಂಡಿದೆ. ಇತರ ಬಿಯೋಆಕ್ಟಿವ್ ಸಂಯುಕ್ತಗಳಲ್ಲಿ ಕರ್ಪೂರ (ಒಣಗಿದ ರೋಸ್‌ಮರಿ ಎಲೆಗಳಲ್ಲಿ ೨೦%ನಷ್ಟಿರುತ್ತದೆ), ಕಾಫ್ಫೆಯಿಕ್ ಆಸಿಡ್, ಅರ್ಸೋಲಿಕ್ ಆಸಿಡ್, ಬೆಟುಲಿನಿಕ್ ಆಸಿಡ್, ರೋಸ್ಮರಿಡಿಫೆನೋಲ್, ಹಾಗು ರೋಸ್ಮನೋಲ್ ಗಳನ್ನು ಒಳಗೊಂಡಿದೆ.

ಸಂಭಾವ್ಯ ಅಡ್ಡಪರಿಣಾಮಗಳು


ರೋಸ್‌ಮರಿಯನ್ನು ಸರಿಯಾದ ರೀತಿಯಲ್ಲಿ ಸೂಚಿತ ಮಾರ್ಗದರ್ಶನದೊಂದಿಗೆ ಬೆಳೆದಾಗ, ಅಡ್ಡಪರಿಣಾಮಗಳು ಕಡಿಮೆ ಪ್ರಮಾಣದಲ್ಲಿರುತ್ತವೆ. ರೋಸ್‌ಮರಿಯನ್ನು ಬಳಸಿಕೊಂಡು ತಯಾರಿಸಲಾದ ಸ್ಥಳೀಕ ಔಷಧಗಳಲ್ಲಿ ಕೆಲವು ಚರ್ಮಕ್ಕೆ ಅಲರ್ಜಿಯನ್ನು ಉಂಟುಮಾಡುವ ಕೆಲವು ಉದಾಹರಣೆಗಳನ್ನು ವರದಿ ಮಾಡಲಾಗಿದೆ.

ಇತ್ತೀಚಿನ ಯುರೋಪಿಯನ್ ಸಂಶೋಧನೆಯು, ರೋಸ್‌ಮರಿ ಆಹಾರದಲ್ಲಿ ಕಬ್ಬಿಣಾಂಶದ ಹೀರಿಕೆಗೆ ಅಡ್ಡಿಪಡಿಸುತ್ತದೆಂದು ಹೇಳಲಾಗಿದೆ. ಇದು ಕಬ್ಬಿಣಾಂಶದ ಕೊರತೆಯಿಂದ ಉಂಟಾಗುವ ರಕ್ತಹೀನತೆ ಇರುವ ವ್ಯಕ್ತಿಗಳು ಸೇವಿಸಬಾರದೆಂದು ಸೂಚಿಸುತ್ತದೆ.[೯]

ಆರೋಗ್ಯ ದೃಷ್ಟಿಯಿಂದ ಮುನ್ನೆಚ್ಚರಿಕೆ ಹಾಗು ವಿಷಶಾಸ್ತ್ರ[ಬದಲಾಯಿಸಿ]

ರೋಸ್‌ಮರಿಯನ್ನು ಅಡುಗೆಯಲ್ಲಿ ಅಥವಾ ಚಿಕಿತ್ಸೆಯಲ್ಲಿ ಪ್ರಮಾಣಬದ್ಧವಾಗಿ ಬಳಕೆ ಮಾಡುವುದು ಸಾಧಾರಣವಾಗಿ ಸುರಕ್ಷಿತವಾಗಿರುತ್ತದೆ. ಸಸ್ಯದ ಬಗೆಗಿನ ಒಂದು ವಿಷಶಾಸ್ತ್ರ ಅಧ್ಯಯನವು ಇಲಿಗಳ ಮೇಲೆ ನಡೆಸಿದ ಒಂದು ಪ್ರಯೋಗವು ಯಕೃತ್ತಿಗೆ ರಕ್ಷಣೆಯನ್ನು ನೀಡುವುದರ ಜೊತೆಗೆ ವಿಕೃತಿಜನಕ ನಿರೋಧಿ ಚಟುವಟಿಕೆಗಳನ್ನು ತೋರಿಸಿದೆ.[೧೦] ಆದಾಗ್ಯೂ, ಅಲರ್ಜಿ ಉಂಟುಮಾಡುವ ಪ್ರತಿಕ್ರಿಯೆ ತೋರಿಸುವವರಿಗೆ ಅಥವಾ ಮೂರ್ಛೆರೋಗದ ಲಕ್ಷಣಗಳಿಗೆ ಒಳಪಡುವವರಿಗೆ ಮುನ್ನೆಚ್ಚರಿಕೆ ಅಗತ್ಯವಾಗಿದೆ. ರೋಸ್‌ಮರಿಯ ಸಾರತೈಲವು ಮೂರ್ಛೆರೋಗ ಉಂಟುಮಾಡಬಹುದಾದ ಲಕ್ಷಣಗಳನ್ನು ಹೊಂದಿರಬಹುದು, ಕಳೆದ ಶತಮಾನದಿಂದ ವರದಿಯಾದ ಹಲವಾರು ಪ್ರಕರಣಗಳ ವರದಿಗಳಿಂದ ಆರೋಗ್ಯಕರ ವಯಸ್ಕರು ಅಥವಾ ಮಕ್ಕಳಲ್ಲಿ ಉಂಟಾಗುವ ಮೂರ್ಛೆ ರೋಗದ ಲಕ್ಷಣಗಳಿಗೆ ಇದರ ಬಳಕೆಯು ತಳುಕು ಹಾಕಿಕೊಂಡಿವೆ.[೧೧] ರೋಸ್‌ಮರಿ ಸಾರತೈಲವನ್ನು ಸೇವಿಸಿದರೆ ಅದು ಸಂಭಾವ್ಯವಾಗಿ ವಿಷಕಾರಿಯಾಗಿ ಪರಿಣಮಿಸಬಹುದು. ದೊಡ್ಡ ಪ್ರಮಾಣದ ರೋಸ್‌ಮರಿ ಎಲೆಗಳು ವ್ಯತಿರಿಕ್ತವಾದ ಪರಿಣಾಮಗಳನ್ನು ಬೀರಬಹುದು, ಉದಾಹರಣೆಗೆ ಕೋಮಾ,ಸೆಳೆತ, ವಾಂತಿ, ಹಾಗು ಶ್ವಾಸಕೋಶದ ದ್ರವಶೋಥ (ಶ್ವಾಸಕೋಶದಲ್ಲಿ ತುಂಬಿಕೊಳ್ಳುವ ದ್ರವ), ಇವುಗಳು ಜೀವಕ್ಕೆ ಮಾರಕವಾಗಿ ಪರಿಣಮಿಸಬಹುದು. ಗರ್ಭಿಣಿಯರು ಅಥವಾ ಹಾಲುಣಿಸುವ ತಾಯಂದಿರು ದೊಡ್ಡ ಪ್ರಮಾಣದಲ್ಲಿ ರೋಸ್‌ಮರಿಯ ಸೇವನೆಯನ್ನು ಆದಷ್ಟು ತಡೆಗಟ್ಟಬೇಕು.[೧೨]

ಟಿಪ್ಪಣಿಗಳು ಹಾಗು ಉಲ್ಲೇಖಗಳು[ಬದಲಾಯಿಸಿ]

  1. "Rosmarinus officinalis information from NPGS/GRIN". www.ars-grin.gov. Retrieved 2008-03-03.
  2. Room, Adrian (1988). A Dictionary of True Etymologies. Taylor & Francis. p. 150. ISBN 9780415030601.
  3. ನ್ಯಾಷನಲ್ ನಾನ್-ಫುಡ್ ಕ್ರಾಪ್ಸ್ ಸೆಂಟರ್. "ರೋಸ್‌ಮರಿ" Archived 2009-11-16 ವೇಬ್ಯಾಕ್ ಮೆಷಿನ್ ನಲ್ಲಿ.. ೨೦೦೯-೦೪-೨೩ರಂದು ಮರುಸಂಪಾದಿಸಲಾಗಿದೆ
  4. "Nutrition Facts - Rosemary".
  5. "Rosemary at SuperbHerbs.net". Archived from the original on 2007-03-04. Retrieved 2010-08-02.
  6. Moss, M. (2003). "Aromas of rosemary and lavender essential oils differentially affect cognition and mood in healthy adults". International Journal of Neuroscience. 113 (1): 15–38. doi:10.1080/00207450390161903. PMID 12690999. {{cite journal}}: Unknown parameter |coauthors= ignored (|author= suggested) (help)
  7. "History, Myths and Legends of Aromatherapy - Rosemary".
  8. ಬರ್ನ್ಹಾಮ್ ಇನ್ಸ್ಟಿಟ್ಯೂಟ್ ಫಾರ್ ಮೆಡಿಕಲ್ ರಿಸರ್ಚ್(೨೦೦೭, ನವೆಂಬರ್ ೨). ರೋಸ್‌ಮರಿ ಚಿಕನ್ ಪ್ರೊಟೆಕ್ಟ್ಸ್ ಯುವರ್ ಬ್ರೈನ್ ಫ್ರಂ ಫ್ರೀ ರಾದಿಕಲ್ಸ್. ಸೈನ್ಸ್‌ಡೈಲಿ ನವೆಂಬರ್ ೨, ೨೦೦೭ರಲ್ಲಿ https://www.sciencedaily.com/releases/2007/10/071030102210.htm and http://www.medspice.com/content/view/119/69/ರಿಂದ Archived 2016-03-13 ವೇಬ್ಯಾಕ್ ಮೆಷಿನ್ ನಲ್ಲಿ. ಮರುಸಂಪಾದಿಸಲಾಗಿದೆ
  9. ಎನ್ಸೈಕ್ಲೋಪೀಡಿಯ ಆಫ್ ಮೆಂಟಲ್ ಡಿಸ್ಆರ್ಡರ್ಸ್. ರೋಸ್‌ಮರಿ, ಫ್ರಂ http://www.minddisorders.com/Py-Z/Rosemary.html
  10. Fahim, Fawzia A.; Esmat, AY; Fadel, HM; Hassan, KF; et al. (1999). "Allied studies on the effect of Rosmarinus officinalis L. on experimental hepatotoxicity and mutagenesis". International Journal of Food Sciences and Nutrition. 50 (6): 413–427. doi:10.1080/096374899100987. PMID 10719582. {{cite journal}}: |access-date= requires |url= (help); Cite has empty unknown parameter: |coauthors= (help); Explicit use of et al. in: |first= (help)
  11. Burkhard, P. R. (1999). "Plant-induced seizures: reappearance of an old problem". Journal of Neurology. 246 (8): 667–670. doi:10.1007/s004150050429. PMID 10460442. {{cite journal}}: Unknown parameter |coauthors= ignored (|author= suggested) (help)
  12. "Article at HealthComm". Archived from the original on 2021-01-25. Retrieved 2010-08-02.

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

  1. Calabrese, V. (2000). "Biochemical studies of a natural antioxidant isolated from rosemary and its application in cosmetic dermatology". International Journal of Tissue Reactions. 22 (1): 5–13. PMID 10937349. {{cite journal}}: Unknown parameter |coauthors= ignored (|author= suggested) (help)
  2. Huang, M. T. (1 February 1994). "Inhibition of skin tumorigenesis by rosemary and its constituents carnosol and ursolic acid". Cancer Research. 54 (3): 701–708. PMID 8306331. {{cite journal}}: Unknown parameter |coauthors= ignored (|author= suggested) (help)

ಇವನ್ನೂ ನೋಡಿ[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]

Media related to Rosmarinus officinalis at Wikimedia Commons

ಗ್ಯಾಲರಿ[ಬದಲಾಯಿಸಿ]