ರೊಮ್ಯಾಂಟಿಸಿಸಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರೊಮ್ಯಾಂಟಿಸಿಸಮ್[ರೊಮ್ಯಾಂಟಿಕ್ ಯುಗ ಅಥವಾ ರೊಮ್ಯಾಂಟಿಕ್ ಕಾಲ]೧೮ನೇ ಶತಮಾನದ ಕೊನೆಯಲ್ಲಿ ಯುರೋಪಿನಲ್ಲಿ ಉಂಟಾದ ಸಾಹಿತ್ಯಿಕ, ಕಲಾತ್ಮಕ, ಮತ್ತು ಬೌದ್ಧಿಕ ಚಳುವಳಿ. ಇದು ಸರಿಸುಮಾರು ೧೮೦೦ ರಿಂದ ೧೮೫೦ ರವರೆಗೆ ಎಲ್ಲಾ ರಂಗಗಳಲ್ಲಿ ವ್ಯಾಪಿಸುವುದರ ಮೂಲಕ ಹೆಚ್ಚು ಪ್ರಖರತೆಯನ್ನು ಪಡೆಯಿತು. ಈ ಚಳುವಳಿಯು ಕೈಗಾರಿಕಾ ಕ್ರಾಂತಿಗೆ ಪ್ರತಿಯುತ್ತರವೆಂಬಂತೆ ಹಾಗೂ ಕುಲೀನ ಪ್ರಭುತ್ವ [Aristocratic]ದ ಸಾಮಾಜಿಕ ಮತ್ತು ಜ್ಞಾನೋದಯ ಯುಗದ ರಾಜಕೀಯ ಕಟ್ಟಳೆಗಳಿಗೆ ವಿರುದ್ಧವಾದ ದಂಗೆ ಮತ್ತು ವೈಜ್ಞಾನಿಕ ತಾರ್ಕಿಕತೆಗೆ ವಿರುದ್ಧವಾದ ಪ್ರತಿಕ್ರಿಯೆಯೂ ಹೌದು.ಇದು ದೃಶ್ಯಕಲೆ, ಸಂಗೀತ ಮತ್ತು ಸಾಹಿತ್ಯ]ದೊಂದಿಗೆ ಬೆರೆತುಹೋಗಿದೆ, ಆದರೆ ಚರಿತ್ರೆ, ಶಿಕ್ಷಣ ಮತ್ತು ಸ್ವಾಭಾವಿಕ ವಿಜ್ಞಾನಗಳ ಮೇಲೆ ಗಾಢವಾದ ಫ್ರಭಾವ ಬೀರಿತು.ಈ ಚಳುವಳಿಯು ಉದಾರೀಕರಣ ಮತ್ತು ಮೂಲಭೂತ ಪರಿವರ್ತನಾವಾದದೊಂದಿಗೆ ಸೇರಿಕೊಳ್ಳುವುದರ ಮೂಲಕ ರಾಜಕೀಯದ ಮೇಲೆ ಪ್ರಭಾವ ಭೀರಿತು. ರಾಶ್ಟ್ರೀಯತೆಯ ಬೆಳವಣಿಗೆಯ ಮೇಲಿನ ಇದರ ಪರಿಣಾಮ ಗಣನೀಯವಾದದ್ದು.ಈ ಚಳುವಳಿಯು ಭಾವನೆಗಳು ಸೌಂದರ್ಯಾನುಭವದ ಸರಿಯಾದ ಮೂಲವೆಂದು ತಿಳಿಯಿತು ಮತ್ತು ಭಯ-ಭೀತಿ ಇತ್ಯಾದಿ ಭಾವನೆಗಳಿಗೆ ಅದರಲ್ಲೂ ಮುಖ್ಯವಾಗಿ ಸೌಂದರ್ಯದ ಎರಡು ಹೊಸ ಆಯಾಮಗಳಾದ ಪ್ರಕೃತಿಯ ಭವ್ಯತೆಯ ಅನುಭವ ಮತ್ತು ಅದರ ಆಕರ್ಷಕ ಗುಣಗಳಿಂದ ಉಂಟಾದ ಭಾವನೆಗಳಿಗೆ ಪ್ರಾಮುಖ್ಯತೆ ನೀಡಿತು. ಇದು ಜನಪದ ಕಲೆ ಹಾಗೂ ಪ್ರಾಚೀನ ಸಂಪ್ರದಾಯವನ್ನು ಉತ್ತಮ ಹಂತಕ್ಕೆ ತಲುಪಿಸಿತು ಮತ್ತು ನಿರರ್ಗಳತೆಯನ್ನು(ಸಂಗೀತದ ಅಭಿವ್ಯಕ್ತಿಯಲ್ಲಿ) ವಿಶಿಷ್ಟವಾದ ಗುಣವಾಗಿಸಿಕೊಂಡಿತು.ಮಾನವನ ಚಟುವಟಿಕೆಗಳ ಸ್ವಾಭಾವಿಕ ಜ್ಞಾನ ಸಿದ್ಧಾಂತ[natural epistemology]ವೂ ಪ್ರಾಕೃತಿಕ ಭಾಷೆಯ ಸಹಜವಾದ ಬಳಕೆಯಿಂದ ನಿರ್ಧರಿಸಲ್ಪಡುತ್ತದೆ ಎಂದು ವಾದಿಸಿತು.ರೊಮ್ಯಾಂಟಿಸಿಸಮ್ ವಿಮರ್ಶೆಗೊಳಪಟ್ಟ ಮೆಡಿವಲಿಸಮ್ ನ್ನು ಮೇಲೆತ್ತುವ ನಿಟ್ಟಿನಲ್ಲಿ ತಾರ್ಕಿಕ ಮತ್ತು ಕ್ಲಾಸಿಕಲ್ ಮಾದರಿಗಳನ್ನು ಮೀರಿ ಬೆಳೆಯಿತು. ಮೆಡಿವಲ್ ಕಲೆ ಮತ್ತು ನಿರೂಪಣಾ ಶೈಲಿಯನ್ನು ಒಪ್ಪಿಕೊಳ್ಳುವುದರ ಮೂಲಕ ಪ್ರತಿಬಂಧಕಗಳಾದ ಜನಸಂಖ್ಯಾ ಬೆಳವಣಿಗೆ, ಕೈಗಾರಿಕೀಕರಣ, ಮತ್ತು ನಗರದ ಅವ್ಯವಸ್ಥೆ ಗಳಿಂದ ಹೊರ ಬರಲು ಪ್ರಯತ್ನಿಸಿತು. ಇದರ ಜೊತೆಗೆ Rococo Chinoiserie ಗಿಂತ ಹೆಚ್ಚು ನಿಖರವಾದ ಪರಕೀಯ ಮತ್ತು ಬಹುದೂರದ ವಿಧಾನಗಳನ್ನು ಒಪ್ಪಿಕೊಳ್ಳಲು ಮತ್ತು ಕಲ್ಪನಾಶಕ್ತಿಯಿಂದ ಭವಿಷ್ಯವನ್ನು ಕಾಣಲು ಪ್ರಯತ್ನಿಸಿತು.ಈ ಚಳುವಳಿಯ ಮೂಲ ನೆಲೆ ಜರ್ಮನಿಯ Sturm und Drang ಚಳುವಳಿಯಾಗಿದೆ. ಜರ್ಮನಿಯಲ್ಲುಂಟಾದ ಈ ಚಳುವಳಿಯು ಸಹಜತೆಯನ್ನು ಮತ್ತು ಜ್ಞಾನೋದಯ ಯುಗದ ತಾರ್ಕಿಕತೆ ಮತ್ತು ಆದರ್ಶಗಳನ್ನು ಪ್ರೊತ್ಸಾಹಿಸುತು ಮತ್ತು ಫ್ರಾನ್ಸಕ್ರಾಂತಿಯ ಘಟನೆಗಳ ಪ್ರೇರಣೆಯಿಂದ ರೊಮ್ಯಾಂಟಿಸಿಸಮ್ ಮತ್ತು ಜ್ಞಾನೋದಯ ಯುಗದ ಉಗಮಕ್ಕೆ ಕಾರಣವಾಯಿತು.

೧೯ನೆ ಶತಮಾನದ ಮಧ್ಯಭಾಗಕ್ಕೆ ವಾಸ್ತವಿಕ ವಾದವೂ ರೊಮ್ಯಾಂಟಿಕ್ ವಾದಕ್ಕೆ ವಿರುದ್ಧವಾಗಿ ಅಸ್ಥಿತ್ವಕ್ಕೆ ಬಂದಿತು. ಜೊತೆಗೆ ಕೈಗಾರಿಕ ಕ್ರಾಂತಿಯ ಪ್ರಭಾವವೂ ಸಹ ಉಂಟಾಯಿತು.ಈ ಚಳುವಳಿಯು ವ್ಯಕ್ತಿಗಳ ಮತ್ತು ಕಲೆಗಾರರ ಸಾಹಸ ಸಾಧನೆಗಳನ್ನು ಪ್ರಖ್ಯಾತಿಗೊಳಿಸಿತು. ಏಕೆಂದರೇ ಮುಂಚೂಣಿಯಲ್ಲಿರುವ ವ್ಯಕ್ತಿಗಳ ಮತ್ತು ಕಲೆಗಾರರ ಉದಾಹರಣೆಗಳಿಂದ ಸಮಾಜ ಉಚ್ಪ್ರಾಯ ಸ್ಥಿತಿ ತಲುಪುತ್ತದೆ ಎಂಬ ಉದ್ದೇಶದಿಂದ.ಇದರ ಜೊತೆಗೆ ವೈಯುಕ್ತಿಕ ಕಲ್ಪನೆಯನ್ನು ವಿಮರ್ಶಾಧಿಕಾರವನ್ನಾಗಿ ಕ್ರಮಬದ್ದಗೊಳಿಸಿತು,ಎಕೆಂದರೇ ವಿಮರ್ಶಾಧಿಕಾರದಿಂದ ಕಲೆಯ ಸಾಂಪ್ರದಾಯಿಕ ಕಲ್ಪನೆಗೆ ಸ್ವಾತಂತ್ರ್ಯ ದೊರಕಿತ್ತು. ಇಲ್ಲಿ zeitgeist ಆಲೋಚನೆಗಳ ಪ್ರತಿನಿಧಿಸುವಿಕೆಯಲ್ಲಿ ಇತಿಹಾಸ ಮತ್ತು ಪ್ರಾಕೃತಿಕ ಶರಣಾಗತಿಯ ಅನಿವಾರ್ಯತೆಯನ್ನು ಕಾಣಬಹುದು.

ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

೧.http://www.online-literature.com/periods/romanticism.php ೨.https://www.mtholyoke.edu/courses/rschwart/hist255/jkr/romanticism.html ೩.http://www.infoplease.com/encyclopedia/entertainment/english-literature-the-romantic-period.html