ರೆಕ್ಕೆದಿರಿಸು ಹಾರಾಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಾರಾಟದಲ್ಲಿ ತೊಡಗಿರುವ ರೆಕ್ಕೆದಿರಿಸುಗಳು

ರೆಕ್ಕೆದಿರಿಸು ಹಾರಾಟ ಎಂಬುದು ರೆಕ್ಕೆದಿರಿಸು ಎಂದು ಕರೆಯಲ್ಪಡುವ ಒಂದು ವಿಶೇಷವಾದ ಜಿಗಿತದ ದಿರಿಸನ್ನು ಬಳಸಿಕೊಂಡು ಗಾಳಿಯ ಮೂಲಕ ಮಾನವ ಶರೀರವನ್ನು ಹಾರಿಸುವ ಕ್ರೀಡೆಯಾಗಿದೆ. ಈ ಹಾರಾಟದಲ್ಲಿ ಮೇಲ್ಮುಖ ಒತ್ತಡದಲ್ಲಿನ ಒಂದು ಗಮನಾರ್ಹ ಹೆಚ್ಚಳಕ್ಕೆ ಅನುವು ಮಾಡಿಕೊಡಲು ಸದರಿ ರೆಕ್ಕೆದಿರಿಸು ಮಾನವ ಶರೀರದ ಮೇಲ್ಮೈ ವಿಸ್ತೀರ್ಣವನ್ನು ಹೆಚ್ಚಿಸುತ್ತದೆ. ಹಾರಾಟದಲ್ಲಿ ತೊಡಗುವವರ ಕಾಲುಗಳ ನಡುವೆ ಹಾಗೂ ತೋಳುಗಳ ಅಡಿಯಲ್ಲಿ ನೆಯ್ದ ಬಟ್ಟೆಯನ್ನು ಬಳಸಿಕೊಂಡು ಆಧುನಿಕ ರೆಕ್ಕೆದಿರಿಸಿನ ವಿನ್ಯಾಸಗಳು ಮೇಲ್ಮೈ ವಿಸ್ತೀರ್ಣವನ್ನು ಸೃಷ್ಟಿಸುತ್ತವೆ. ಒಂದು ರೆಕ್ಕೆದಿರಿಸಿಗೆ ಒಂದು ಹಕ್ಕಿಗ ದಿರಿಸು (ಬರ್ಡ್‌ಮನ್‌ ಸೂಟ್‌) ಅಥವಾ ಅಳಿಲು ದಿರಿಸು (ಸ್ಕ್ವಿರಿಲ್‌ ಸೂಟ್‌) ಎಂದು ಉಲ್ಲೇಖಿಸಬಹುದಾಗಿದೆ.

ಒಂದು ಧುಮುಕುಕೊಡೆಯು (ಪ್ಯಾರಾಶೂಟ್‌) ತೆರೆದುಕೊಳ್ಳುವುದರೊಂದಿಗೆ ರೆಕ್ಕೆದಿರಿಸಿನ ಹಾರಾಟವೊಂದು ಕೊನೆಗೊಳ್ಳುತ್ತದೆ. ಆದ್ದರಿಂದ, ಗಾಳಿಯ ಮೂಲಕ ಜಾರಿಕೊಂಡು ಹೋಗುವುದಕ್ಕೆ ಸಾಕಷ್ಟಿರುವ ಉನ್ನತಿಯನ್ನು ಒದಗಿಸುವಂಥ, ಹಾಗೂ ಸಜ್ಜುಗೊಳ್ಳುವುದಕ್ಕೆ ಒಂದು ಧುಮುಕುಕೊಡೆಗೆ ಅವಕಾಶ ನೀಡುವಂಥ ಯಾವುದೇ ತಾಣದಿಂದ ಒಂದು ರೆಕ್ಕೆದಿರಿಸು ಹಾರಾಟವನ್ನು ನಡೆಸಬಹುದು; ಆಕಾಶ ನೆಗೆತದ ಆಕಾಶಬುಟ್ಟಿ ಅಥವಾ BASE ಜಿಗಿತದ ನಿರ್ಗಮನ ತಾಣಗಳಂಥವು ಸದರಿ ತಾಣಗಳಲ್ಲಿ ಸೇರಿವೆ.

ಆಕಾಶ ನೆಗೆತ ಅಥವಾ BASE ಜಿಗಿತಕ್ಕಾಗಿ ವಿನ್ಯಾಸಗೊಳಿಸಲಾದ ಧುಮುಕುಕೊಡೆ ಸಾಧನವನ್ನು ರೆಕ್ಕೆದಿರಿಸು ಹಾರಾಟಗಾರನು ಧರಿಸುತ್ತಾನೆ ಹಾರಾಟಗಾರನು ಒಂದು ಯೋಜಿತ ಉನ್ನತಿಯಲ್ಲಿ ಧುಮುಕುಕೊಡೆಯನ್ನು ಸಜ್ಜುಗೊಳಿಸುತ್ತಾನೆ ಮತ್ತು ಒಂದು ವೇಳೆ ಅವಶ್ಯಕವೆನಿಸಿದರೆ, ತೋಳಿನ ರೆಕ್ಕೆಗಳನ್ನು ಬಿಚ್ಚುತ್ತಾನೆ; ಇದರಿಂದಾಗಿ ನಿಯಂತ್ರಣದ ಅಡ್ಡಕಡ್ಡಿಗಳವರೆಗೆ ಅವರು ತಲುಪುವುದು ಮತ್ತು ಒಂದು ಸಾಮಾನ್ಯವಾದ ಧುಮುಕುಕೊಡೆಯ ಇಳಿಯುವಿಕೆಯ ಮಟ್ಟಕ್ಕೆ ಹಾರುವುದು ಸಾಧ್ಯವಾಗುತ್ತದೆ.

ಇತಿಹಾಸ[ಬದಲಾಯಿಸಿ]

ಸಮತಲವಾಗಿರುವ ಚಲನೆಯನ್ನು ಹೆಚ್ಚಿಸುವುದರ ಒಂದು ಪ್ರಯತ್ನವಾಗಿ ೧೯೩೦ರ ದಶಕದಲ್ಲಿ ರೆಕ್ಕೆಗಳು ಮೊದಲು ಬಳಸಲ್ಪಟ್ಟವು. ಕ್ಯಾನ್ವಾಸ್‌, ಮರ, ರೇಷ್ಮೆ, ಉಕ್ಕು, ಮತ್ತು ಅಷ್ಟೇ ಏಕೆ ತಿಮಿಂಗಿಲ ಮೂಳೆಯಂಥ ಸಾಮಗ್ರಿಗಳಿಂದ ಈ ಆರಂಭಿಕ ರೆಕ್ಕೆದಿರಿಸುಗಳು ಮಾಡಲ್ಪಟ್ಟಿದ್ದವು. ಅವು ಅತ್ಯಂತ ವಿಶ್ವಾಸಾರ್ಹವಾಗಿರಲಿಲ್ಲ. ಕೆಲವೊಬ್ಬ "ಹಾರಾಟಗಾರರು", ಅದರಲ್ಲೂ ಗಮನಾರ್ಹವಾಗಿ ಕ್ಲೆಮ್‌ ಸೊಹ್ನ್‌ ಮತ್ತು ಲಿಯೋ ವ್ಯಾಲೆಂಟಿನ್‌‌‌‌ರಂಥವರು ಮೈಲಿಗಟ್ಟಲೆ ದೂರದವರೆಗೆ ಈ ಶೈಲಿಯಲ್ಲಿ ಜಾರಿಕೊಂಡು ಹೋಗಿದ್ದರ ಕುರಿತಾದ ಸಮರ್ಥನೆಗಳನ್ನು ಕಾಣಬಹುದು. ಬರ್ಟ್‌ ಲ್ಯಾಂಕಾಸ್ಟರ್‌‌ ಮತ್ತು ಜೀನ್‌ ಹಾಕ್‌‌ಮನ್‌ ತಾರಾಗಣದಲ್ಲಿರುವ ದಿ ಜಿಪ್ಸಿ ಮಾತ್ಸ್‌ ಎಂಬ ೧೯೬೯ರ ಚಲನಚಿತ್ರದಲ್ಲಿ ರೆಕ್ಕೆದಿರಿಸು ಪ್ರದರ್ಶಿಸಲ್ಪಟ್ಟಿತು.

೧೯೯೭ರ ಅಕ್ಟೋಬರ್‌‌ ೩೧ರಂದು, ಪ್ಯಾಟ್ರಿಕ್‌ ಡೆ ಗಯಾರ್ಡನ್‌ ಎಂಬ ಓರ್ವ ಫ್ರೆಂಚ್‌ ಆಕಾಶ-ನೆಗೆತಗಾರನು, ಸರಿಸಾಟಿಯಿಲ್ಲದ ಸುರಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ಹೊಂದಿದ್ದ ಒಂದು ರೆಕ್ಕೆದಿರಿಸನ್ನು ವರದಿಗಾರರಿಗೆ ತೋರಿಸಿದ.[೧][೨] ೧೯೯೮ರ ಏಪ್ರಿಲ್‌ ೧೩ರಂದು, ಹವಾಯಿಯಲ್ಲಿ ತನ್ನ ಧುಮುಕುಕೊಡೆಯ ಧಾರಕಕ್ಕೆ ಮಾಡಲಾದ ಒಂದು ಹೊಸ ಮಾರ್ಪಾಡನ್ನು ಪರೀಕ್ಷಿಸುವಾಗ ಡೆ ಗಯಾರ್ಡನ್‌ ಮರಣಿಸಿದ; ಹೊಸ ಮಾರ್ಪಾಡಿನ ಒಂದು ಭಾಗವಾಗಿದ್ದ ಸಜ್ಜಿಕೆಯಲ್ಲಿನ ಒಂದು ನ್ಯೂನತೆಯು ಅವನ ಮರಣಕ್ಕೆ ಕಾರಣವಾಗಿತ್ತೇ ಹೊರತು, ದಿರಿಸಿನ ವಿನ್ಯಾಸದಲ್ಲಿನ ಒಂದು ದೋಷ ಇದಕ್ಕೆ ಕಾರಣವಾಗಿರಲಿಲ್ಲ ಎಂದು ತಿಳಿದುಬಂತು.

೧೯೯೮ರ ಆರಂಭದಲ್ಲಿ, ಆಸ್ಟ್ರೇಲಿಯಾಕ್ಕೆ ಸೇರಿದ ಓರ್ವ BASE ಜಿಗಿತಗಾರನಾಗಿದ್ದ ಟಾಮ್‌ ಬೆಗಿಕ್‌ ಎಂಬಾತ, ಪ್ಯಾಟ್ರಿಕ್‌ ಡೆ ಗಯಾರ್ಡನ್‌ನ ಒಂದು ಛಾಯಾಚಿತ್ರ ಮತ್ತು ತನ್ನ ಪರಿಕಲ್ಪನೆಗಳನ್ನು ಆಧರಿಸಿ ತನ್ನದೇ ಆದ ಒಂದು ರೆಕ್ಕೆದಿರಿಸನ್ನು ನಿರ್ಮಿಸಿದ ಮತ್ತು ಅದನ್ನು ಬಳಸಿಕೊಂಡು ಹಾರಾಟ ನಡೆಸಿದ. BASE ಜಿಗಿತಗಾರರು ಯುರೋಪ್‌ನ ಎತ್ತರದ ಬಂಡೆಗಳಿಂದ ಜಿಗಿಯುವಾಗ ಅವರ ಸ್ವತಂತ್ರ ಪತನದ ತುಣುಕನ್ನು ಚಿತ್ರೀಕರಿಸುವಲ್ಲಿ ಬೆಗಿಕ್‌ಗೆ ನೆರವಾಗುವಂತೆ ಈ ದಿರಿಸು ಅಭಿವೃದ್ಧಿಪಡಿಸಲ್ಪಟ್ಟಿತು. ೧೯೯೯ರ ಆರಂಭದಲ್ಲಿ, ತನ್ನ ದಿರಿಸಿನ ಅಭಿವೃದ್ಧಿಯನ್ನು ಬೆಗಿಕ್‌ ನಿಲ್ಲಿಸಿದ; ಇದು ಆತ ರಾಬರ್ಟ್‌ ಪೆಕ್ನಿಕ್‌ನನ್ನು ಭೇಟಿಮಾಡಿ, ಒಂದು ರೆಕ್ಕೆದಿರಿಸು ತಯಾರಿಕಾ ಕಂಪನಿಯನ್ನು ಸೃಷ್ಟಿಸುವುದಕ್ಕೆ ಸಂಬಂಧಿಸಿದ ಯೋಜನೆಗಳನ್ನು ಅರಿತ ನಂತರದ ಕ್ರಮವಾಗಿತ್ತು. ೨೦೦೦ದ ದಶಕದ ಮಧ್ಯಭಾಗದಲ್ಲಿ ಫೀನಿಕ್ಸ್‌ ಫ್ಲೈ ಆರಂಭವಾಯಿತು.

ವಾಣಿಜ್ಯ ಪ್ರದೇಶ[ಬದಲಾಯಿಸಿ]

೧೯೯೯ರಲ್ಲಿ, ಫಿನ್ಲೆಂಡ್‌ನ ಜರಿ ಕುವೊಸ್ಮ ಹಾಗೂ ಕ್ರೊವೇಷಿಯಾದ ರಾಬರ್ಟ್‌ ಪೆಕ್ನಿಕ್‌ ಎಂಬಿಬ್ಬರು ಒಟ್ಟುಗೂಡಿ, ಎಲ್ಲಾ ಆಕಾಶ-ನೆಗೆತಗಾರರಿಗೆ ಕ್ಷೇಮಕರವಾಗಿರುವ ಮತ್ತು ಸುಲಭಲಭ್ಯವಾಗಿರುವ ಒಂದು ರೆಕ್ಕೆದಿರಿಸನ್ನು ಸೃಷ್ಟಿಸಿದರು. ಅದೇ ವರ್ಷದಲ್ಲಿ ಬರ್ಡ್‌-ಮನ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ ಎಂಬ ಸಂಸ್ಥೆಯನ್ನು ಕುವೊಸ್ಮ ಸ್ಥಾಪಿಸಿದ. ಪೆಕ್ನಿಕ್‌ನಿಂದ ವಿನ್ಯಾಸಗೊಳಿಸಲ್ಪಟ್ಟ ಬರ್ಡ್‌ಮನ್‌'ಸ್‌ ಕ್ಲಾಸಿಕ್‌ ಎಂಬ ದಿರಿಸು, ಜನಸಾಮಾನ್ಯರಿಗೆ ನೀಡಲಾದ ಮೊದಲ ರೆಕ್ಕೆದಿರಿಸಾಗಿತ್ತು. ಬರ್ಡ್‌ಮನ್‌ ಸಂಸ್ಥೆಯು ಒಂದು ಬೋಧಕ ಕಾರ್ಯಸೂಚಿಯನ್ನು ಸಿದ್ಧಪಡಿಸುವ ಮೂಲಕ ರೆಕ್ಕೆದಿರಿಸುಗಳ ಕ್ಷೇಮಕರ ಬಳಕೆಯನ್ನು ಸಮರ್ಥಿಸಿದ ಮೊದಲ ತಯಾರಕ ಎನಿಸಿಕೊಂಡಿತು. ಕುವೊಸ್ಮನಿಂದ ಸೃಷ್ಟಿಸಲ್ಪಟ್ಟ ಈ ಬೋಧಕ ಕಾರ್ಯಸೂಚಿಯು, ರೆಕ್ಕೆದಿರಿಸುಗಳು ಅಪಾಯಕಾರಿಯಾದಂಥವು ಎಂಬ ಅಪವಾದವನ್ನು ತೊಡೆದುಹಾಕುವ ಗುರಿಯನ್ನು ಹೊಂದಿತ್ತು. ಅಷ್ಟೇ ಅಲ್ಲ, ಆಕಾಶ-ನೆಗೆತದ ಪ್ರಪಂಚದಲ್ಲಿನ ಅತ್ಯಂತ ಅಪಾಯಕಾರಿ ಸಾಹಸಕಾರ್ಯ ಎಂಬುದಾಗಿ ಹಿಂದೊಮ್ಮೆ ಪರಿಗಣಿಸಲ್ಪಟ್ಟಿದ್ದ ಸಾಹಸವನ್ನು ಸುರಕ್ಷಿತವಾಗಿ ಅನುಭವಿಸುವ ಒಂದು ಮಾರ್ಗವನ್ನು ರೆಕ್ಕೆದಿರಿಸು ಆರಂಭಿಕರಿಗೆ (ಸಾಮಾನ್ಯವಾಗಿ, ಕನಿಷ್ಟಪಕ್ಷ ೨೦೦ರಷ್ಟು ಜಿಗಿತಗಳನ್ನು ಕೈಗೊಂಡಿರುವ ಆಕಾಶ-ನೆಗೆತಗಾರರಿಗೆ) ಒದಗಿಸುವ ಗುರಿಯನ್ನೂ ಇದು ಹೊಂದಿತ್ತು. ಬರ್ಡ್‌ಮನ್‌ ಸಂಸ್ಥೆಯ ಬೋಧಕರಾದ ಸ್ಕಾಟ್‌ ಕ್ಯಾಂಪೋಸ್‌, ಚಕ್‌ ಬ್ಲೂ ಮತ್ತು ಕಿಮ್‌ ಗ್ರಿಫಿನ್‌ರವರ ನೆರವಿನೊಂದಿಗೆ, ಬೋಧನೆಯ ಒಂದು ಪ್ರಮಾಣಕವಾಗಿಸಲ್ಪಟ್ಟ ಕಾರ್ಯಸೂಚಿಯು ಅಭಿವೃದ್ಧಿಪಡಿಸಲ್ಪಟ್ಟಿತು ಮತ್ತು ಅದು ಬೋಧಕರನ್ನು ಸಜ್ಜುಗೊಳಿಸಿತು.[೩] ಫೀನಿಕ್ಸ್‌-ಫ್ಲೈ, ಫ್ಲೈ ಯುವರ್‌ ಬಾಡಿ, ಮತ್ತು ನೈಟ್ರೋ ರಿಗ್ಗಿಂಗ್‌ ಮೊದಲಾದವೂ ಸಹ ಬೋಧಕ ತರಬೇತಿ ಕಾರ್ಯಸೂಚಿಯೊಂದನ್ನು ಸ್ಥಾಪಿಸಿವೆ.

ತಾಂತ್ರಿಕವಲ್ಲದ ರಚನಾ ವಿಧಾನ[ಬದಲಾಯಿಸಿ]

ಒಂದು ರೆಕ್ಕೆದಿರಿಸು ಮತ್ತು ಧುಮುಕುಕೊಡೆ ಸಾಧನ ಈ ಎರಡನ್ನೂ ಧರಿಸಿಕೊಂಡು ರೆಕ್ಕೆದಿರಿಸು ಹಾರಾಟಗಾರನು ಸ್ವತಂತ್ರ ಪತನದ ಸಾಹಸಕ್ಕೆ ಅಡಿಯಿಡುತ್ತಾನೆ. ಒಂದು ರೆಕ್ಕೆದಿರಿಸನ್ನು ಧರಿಸಿಕೊಂಡ ವಿಮಾನವೊಂದರಿಂದ ಆಚೆಗೆ ನಿರ್ಗಮಿಸಬೇಕೆಂದರೆ ಅದಕ್ಕೆ ಪರಿಣತಿ ಪಡೆದ ಕೌಶಲಗಳು ಬೇಕಾಗುತ್ತವೆ ಮತ್ತು ಈ ಕೌಶಲಗಳು ಹಾರಾಟದ ತಾಣ ಮತ್ತು ವಿಮಾನದ ಬಾಗಿಲಿನ ಗಾತ್ರವನ್ನು ಅವಲಂಬಿಸಿ ಭಿನ್ನವಾಗಿರುತ್ತವೆ. ವಿಮಾನಕ್ಕೆ ಸಂಬಂಧಿಸಿದಂತಿರುವ ನೆಲೆ-ನಿರ್ಣಯ ಅಥವಾ ಅಭಿಮುಖವಾಗಿಸುವಿಕೆ, ನಿರ್ಗಮಿಸುವ ಸಂದರ್ಭದಲ್ಲಿನ ಗಾಳಿಯ ಹರಿವು, ಮತ್ತು ಹಾರಾಟಗಾರನು ಸೂಕ್ತ ಸಮಯದಲ್ಲಿ ತನ್ನ ಕಾಲುಗಳು ಮತ್ತು ತೋಳುಗಳನ್ನು ಹರಡಿಕೊಳ್ಳುವ ವಿಧಾನ ಇವೆಲ್ಲವೂ ಸದರಿ ಕೌಶಲಗಳಲ್ಲಿ ಸೇರಿರುತ್ತವೆ; ಈ ಕೌಶಲಗಳನ್ನು ಸೂಕ್ತವಾಗಿ ಅನುಸರಿಸದಿದ್ದರೆ, ಹಾರಾಟಗಾರನು ವಿಮಾನಕ್ಕೆ ಬಡಿಯುವ ಅಥವಾ ಸಾಪೇಕ್ಷ ಬಿರುಗಾಳಿಯಲ್ಲಿ ಅಸ್ಥಿರನಾಗಿಹೋಗುವ ಸಾಧ್ಯತೆಗಳಿರುತ್ತವೆ. ವಿಮಾನದ ಮುಮ್ಮೊಗ ವೇಗದಿಂದ ಸೃಷ್ಟಿಸಲ್ಪಟ್ಟ ಸಾಪೇಕ್ಷ ಬಿರುಗಾಳಿಯಲ್ಲಿ ಹಾರಾಟಗಾರನು ವಿಮಾನದಿಂದ ನಿರ್ಗಮಿಸುತ್ತಿದ್ದಂತೆ ರೆಕ್ಕೆದಿರಿಸು ತತ್‌ಕ್ಷಣವೇ ಹಾರಲು ಪ್ರಾರಂಭಿಸುತ್ತದೆ. ಒಂದು ಬಂಡೆಯಂಥ BASE ಜಿಗಿತದ ತಾಣವೊಂದರಿಂದ ಕೈಗೊಳ್ಳುವ ನಿರ್ಗಮನವು, ಅಥವಾ ಒಂದು ಹೆಲಿಕಾಪ್ಟರ್‌, ಒಂದು ಪ್ಯಾರಾಗ್ಲೈಡ್‌ ಅಥವಾ ಒಂದು ಬಿಸಿ ಗಾಳಿಯ ಆಕಾಶಬುಟ್ಟಿಯಿಂದ ಕೈಗೊಳ್ಳುವ ನಿರ್ಗಮನವು ಒಂದು ಚಲಿಸುತ್ತಿರುವ ವಿಮಾನದಿಂದ ಕೈಗೊಳ್ಳುವ ನಿರ್ಗಮನಕ್ಕಿಂತ ಮೂಲಭೂತವಾಗಿ ವಿಭಿನ್ನವಾಗಿರುತ್ತದೆ; ಏಕೆಂದರೆ ಈ ನಿದರ್ಶನಗಳಲ್ಲಿ ನಿರ್ಗಮನದ ನಂತರದ ಆರಂಭಿಕ ಬಿರುಗಾಳಿಯ ವೇಗವು ಕಂಡುಬರುವುದಿಲ್ಲ. ಈ ಸನ್ನಿವೇಶಗಳಲ್ಲಿ, ವೇಗಹೆಚ್ಚಿಸುವುದಕ್ಕಾಗಿ ಗುರುತ್ವ ಬಲಗಳನ್ನು ಬಳಸಿಕೊಂಡು ಮಾಡಲಾಗುವ ಒಂದು ಲಂಬವಾಗಿರುವ ಇಳಿತವು ವಾಯುವೇಗವನ್ನು ಸೃಷ್ಟಿಸುವುದಕ್ಕೆ ಅಗತ್ಯವಾಗಿರುತ್ತದೆ ಮತ್ತು ಈ ವಾಯುವೇಗವನ್ನು ಮೇಲ್ಮುಖ ಒತ್ತಡವಾಗಿ ಸದರಿ ರೆಕ್ಕೆದಿರಿಸು ಆಗ ಪರಿವರ್ತಿಸಬಲ್ಲದಾಗಿರುತ್ತದೆ.

ಓರ್ವ ಆಕಾಶ-ನೆಗೆತಗಾರ ಅಥವಾ BASE ಜಿಗಿತಗಾರನು ತನ್ನ ಧುಮುಕುಕೊಡೆಯನ್ನು ವಿಶಿಷ್ಟವಾಗಿ ಸಜ್ಜುಗೊಳಿಸುವಂಥ ನೆಲಕ್ಕೆ ಮೇಲ್ಮಟ್ಟದಲ್ಲಿರುವ ಒಂದು ಯೋಜಿತ ಉನ್ನತಿಯಲ್ಲಿ, ಓರ್ವ ರೆಕ್ಕೆದಿರಿಸು ಹಾರಾಟಗಾರನು ತನ್ನ ಧುಮುಕುಕೊಡೆಯನ್ನು ಸಜ್ಜುಗೊಳಿಸುತ್ತಾನೆ. ವಿಶಿಷ್ಟವಾಗಿರುವ ಆಕಾಶ ನೆಗೆತದ ಅಥವಾ BASE ಜಿಗಿತದ ಕೌಶಲಗಳನ್ನು ಬಳಸಿಕೊಂಡು, ಬಯಸಿದ ಇಳಿಯುವಿಕೆಯ ತಾಣದಲ್ಲಿನ ಒಂದು ಬಯಸಿದ ಇಳಿದಾಣಕ್ಕೆ ಧುಮುಕುಕೊಡೆಯನ್ನು ಹಾರಿಸಲಾಗುತ್ತದೆ.

ಬಯಸಿದ ಪ್ರಮಾಣದಲ್ಲಿ ಮೇಲ್ಮುಖ ಒತ್ತಡ ಮತ್ತು ಎಳೆತವನ್ನು ಸೃಷ್ಟಿಸುವ ಸಲುವಾಗಿ ಓರ್ವ ರೆಕ್ಕೆದಿರಿಸು ಹಾರಾಟಗಾರನು ತನ್ನ ಶರೀರದ ಆಕಾರವನ್ನು ಕುಶಲತೆಯಿಂದ ನಿರ್ವಹಿಸುತ್ತಾನಾದರೂ, ಬಹುತೇಕ ರೆಕ್ಕೆದಿರಿಸುಗಳು ೨.೫ರಿಂದ ೧ರ ನಡುವಿನ ಒಂದು ಅನುಪಾತವನ್ನು ಹೊಂದಿರುತ್ತವೆ. ಅಂದರೆ, ಪ್ರತಿ ಅಡಿಯಷ್ಟು ಇಳಿತದ ವೇಗಕ್ಕೆ ಎರಡೂವರೆ ಅಡಿಯಷ್ಟು ಮುಮ್ಮೊಗವಾಗಿ ಚಲಿಸುತ್ತಿರುವ ವೇಗವನ್ನು ಗಳಿಸಿದಂತಾಗುತ್ತದೆ. ಶರೀರದ ಆಕಾರದ ಕುಶಲ-ನಿರ್ವಹಣೆಯ ನೆರವಿನಿಂದ ಮತ್ತು ರೆಕ್ಕೆದಿರಿಸಿನ ವಿನ್ಯಾಸ ಲಕ್ಷಣಗಳನ್ನು ಆರಿಸುವ ಮೂಲಕ, ಓರ್ವ ಹಾರಾಟಗಾರನು ತನ್ನ ಮುಮ್ಮೊಗ ವೇಗ ಮತ್ತು ಪತನ ವೇಗ ಈ ಎರಡನ್ನೂ ಮಾರ್ಪಡಿಸುವ ಸಾಮರ್ಥ್ಯವನ್ನು ಪಡೆಯುತ್ತಾನೆ. ಹಲವಾರು ಆಂಗಿಕ ಚಲನೆಗಳ ಮೂಲಕ ಚಾಲಕನು ಈ ಹಾರಾಟ ಲಕ್ಷಣಗಳನ್ನು ಕುಶಲತೆಯಿಂದ ನಿರ್ವಹಿಸುತ್ತಾನೆ. ಅಂದರೆ, ತನ್ನ ಮುಂಡದ ಆಕಾರವನ್ನು ಬದಲಾಯಿಸುವಿಕೆ, ಭುಜಗಳು, ಸೊಂಟದ ಭಾಗಗಳು, ಮತ್ತು ಮೊಣಕಾಲುಗಳ ಭಾಗಗಳಲ್ಲಿ ಕಮಾನಾಗಿಸುವಿಕೆ ಅಥವಾ ಬಗ್ಗಿಸುವಿಕೆಯನ್ನು ಆತ ಕೈಗೊಳ್ಳುವುದರಿಂದ ಇದು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ಸಾಪೇಕ್ಷ ಬಿರುಗಾಳಿಯಲ್ಲಿ ರೆಕ್ಕೆದಿರಿಸು ಹಾರುವುದಕ್ಕೆ ಕಾರಣವಾಗುವ ದಾಳಿಯ ಕೋನವನ್ನು ಬದಲಾಯಿಸುವ ಮೂಲಕ, ಮತ್ತು ದಿರಿಸಿನ ನೆಯ್ದ ಬಟ್ಟೆಯ ರೆಕ್ಕೆಗಳಿಗೆ ಪ್ರಯೋಗಿಸಲಾದ ಸೆಳೆತದ ಪ್ರಮಾಣದ ಮೂಲಕವೂ ಸಹ ಇದು ಕೈಗೂಡುತ್ತದೆ. ಒಂದು ಲಂಬವಾಗಿರುವ ಸ್ಥಿರಗೊಳಿಸುವ ಮೇಲ್ಮೈನ ಗೈರುಹಾಜರಿಯು ಅಡ್ಡಚಲನೆ ಅಕ್ಷದ ಸುತ್ತಲಿನ ಅಲ್ಪಮಟ್ಟದ ತೇವವಾಗುವಿಕೆಗೆ ಕಾರಣವಾಗುತ್ತದೆ; ಆದ್ದರಿಂದ ಕಳಪೆ ಹಾರಾಟ ಕೌಶಲವು ಒಂದು ಗಿರಕಿಗೆ ಕಾರಣವಾಗಬಹುದು ಮತ್ತು ಇದನ್ನು ನಿಲ್ಲಿಸುವುದಕ್ಕಾಗಿ ಆಕಾಶ-ನೆಗೆತಗಾರನು ಸಕ್ರಿಯ ಪ್ರಯತ್ನವನ್ನು ಮಾಡಬೇಕಾಗುತ್ತದೆ.

ಸ್ವತಂತ್ರ ಪತನಕ್ಕೆ ಸಂಬಂಧಿಸಿದ ಗಣಕಯಂತ್ರಗಳನ್ನು ಬಳಕೆ ಮಾಡುವುದರ ಮೂಲಕ ರೆಕ್ಕೆದಿರಿಸು ಹಾರಾಟಗಾರರು ತಮ್ಮ ಗುರಿಗಳಿಗೆ ಸಂಬಂಧಿಸಿದ ತಮ್ಮ ಕಾರ್ಯಸಾಧನೆಯನ್ನು ಮಾಪನಮಾಡಲು ಸಾಧ್ಯವಿದೆ; ಹಾರಾಟಗಾರರು ಹಾರಾಟದಲ್ಲಿದ್ದ ಸಮಯದ ಪ್ರಮಾಣ, ತಮ್ಮ ಧುಮುಕುಕೊಡೆಯನ್ನು ಅವರು ಸಜ್ಜುಗೊಳಿಸಿದಾಗಿದ್ದ ಉನ್ನತಿ, ಮತ್ತು ಸ್ವತಂತ್ರ ಪತನದ ಘಟ್ಟಕ್ಕೆ ಅವರು ಪ್ರವೇಶಿಸಿದ ಹಂತದಲ್ಲಿನ ಉನ್ನತಿ ಈ ಎಲ್ಲಾ ಅಂಶಗಳನ್ನೂ ಈ ಗಣಕಯಂತ್ರಗಳು ಸೂಚಿಸುತ್ತವೆ. ಈ ದತ್ತಮಾಹಿತಿಯನ್ನು ಬಳಸಿಕೊಂಡು ಹಾಗೂ ಹಿಂದಿನ ಹಾರಾಟಗಗಳಿಗೆ ಹೋಲಿಸುವ ಮೂಲಕ ಪತನದ ಗತಿಯ ವೇಗವನ್ನು ಲೆಕ್ಕಹಾಕಬಹುದು. ದಿರಿಸಿನ ಹಾರಾಟ ಪಥವನ್ನು ದಾಖಲಿಸಲು ಮತ್ತು ನಕ್ಷೆ ತಯಾರಿಸಲು GPS ಗ್ರಾಹಿಗಳನ್ನು ಕೂಡಾ ಬಳಸಬಹುದು. ಇದನ್ನು ವಿಶ್ಲೇಷಿಸಿದಾಗ, ಹಾರಾಟದ ಅವಧಿಯಲ್ಲಿ ಹಾರಿಸಲ್ಪಟ್ಟ ಅಂತರದ ಪ್ರಮಾಣವನ್ನು ಅದು ಸೂಚಿಸಬಲ್ಲದು. ಹಿಂದಿನ ಹಾರಾಟಗಳಿಗೆ ಸಂಬಂಧಿಸಿದ ತಮ್ಮ ಕಾರ್ಯಸಾಧನೆ ಹಾಗೂ ಅದೇ ತಾಣದಿಂದ ನಡೆದ ಇತರ BASE ಜಿಗಿತಗಾರರ ಹಾರಾಟಗಳನ್ನು ನಿರ್ಣಯಿಸುವ ಸಲುವಾಗಿ, BASE ಜಿಗಿತಗಾರರು ನಿರ್ಗಮನ ತಾಣಗಳಲ್ಲಿನ ಹೆಗ್ಗುರುತುಗಳನ್ನು ಬಳಸಿಕೊಳ್ಳಬಹುದು; ಇದರ ಜೊತೆಗೆ ಅವರ ಹಾರಾಟದ ವಿಡಿಯೋವನ್ನು ನೆಲದ ಮೇಲಿನ ಸಿಬ್ಬಂದಿಗಳು ದಾಖಲಿಸಿಕೊಂಡಿರುತ್ತಾರೆ ಎಂಬುದು ಗಮನಿಸಬೇಕಾದ ಸಂಗತಿ.

ಹೊಟ್ಟೆಯಿಂದ ಭೂಮಿಗೆ ಅಭಿಮುಖವಾಗಿರುವ ಸ್ಥಿತಿಯಲ್ಲಿನ ಓರ್ವ ವಿಶಿಷ್ಟ ಆಕಾಶ-ನೆಗೆತಗಾರನ ಅಂತಿಮ ವೇಗದ ವ್ಯಾಪ್ತಿಯು ಗಂಟೆಗೆ ೧೧೦ರಿಂದ ೧೪೦ ಮೈಲಿಗಳವರೆಗೆ (ಗಂಟೆಗೆ ೧೮೦–೨೨೫ ಕಿ.ಮೀ.) ಇರುತ್ತದೆ. ಒಂದು ರೆಕ್ಕೆದಿರಿಸು ಈ ವೇಗಗಳನ್ನು ನಾಟಕೀಯವಾಗಿ ತಗ್ಗಿಸಬಲ್ಲದಾಗಿರುತ್ತದೆ. ಗಂಟೆಗೆ -೨೫ ಮೈಲಿಗಳಷ್ಟಿರುವ (ಗಂಟೆಗೆ -೪೦ ಕಿ.ಮೀ.) ಒಂದು ತತ್‌ಕ್ಷಣದ ವೇಗವು ದಾಖಲಿಸಲ್ಪಟ್ಟಿದೆ.[೪]

ಮೂರು-ರೆಕ್ಕೆಯ ರೆಕ್ಕೆದಿರಿಸು ಮೂರು ಪ್ರತ್ಯೇಕ ರ್ಯಾಮ್‌-ಗಾಳಿಯ ರೆಕ್ಕೆಗಳನ್ನು ಹೊಂದಿರುತ್ತದೆ ಮತ್ತು ಇವನ್ನು ತೋಳುಗಳ ಅಡಿಯಲ್ಲಿ ಹಾಗೂ ಕಾಲುಗಳ ನಡುವೆ ಲಗತ್ತಿಸಲಾಗಿರುತ್ತದೆ. ಏಕ-ರೆಕ್ಕೆಯ ರೆಕ್ಕೆದಿರಿಸಿನ ವಿನ್ಯಾಸದಲ್ಲಿ ಸಮಗ್ರ ದಿರಿಸನ್ನು ಒಂದು ದೊಡ್ಡ ರೆಕ್ಕೆಯೊಳಗೆ ಸಂಯೋಜಿಸಲಾಗಿರುತ್ತದೆ.

ಮುಂದಿನ ಬೆಳವಣಿಗೆಗಳು[ಬದಲಾಯಿಸಿ]

ರೆಕ್ಕೆಹೊರೆ[ಬದಲಾಯಿಸಿ]

ಒಂದು ಜೆಟ್‌-ಚಾಲಿತ ರೆಕ್ಕೆಹೊರೆ

ರೆಕ್ಕೆಹೊರೆ ಎಂಬ ಮತ್ತೊಂದು ಬದಲಾವಣೆ ಅಥವಾ ವೈವಿಧ್ಯತೆಯ ಕುರಿತಾಗಿ ಅಧ್ಯಯನಗಳು ಗಮನಹರಿಸುತ್ತಿದ್ದು, ಇಂಗಾಲ ನೂಲಿನಲ್ಲಿ ಬಿಗಿದು-ಕಟ್ಟುವ ಒಂದು ಬಾಗದ ರೆಕ್ಕೆಯನ್ನು ಇದು ಒಳಗೊಂಡಿರುತ್ತದೆ.[೫] ಇದು ಒಂದು ಹ್ಯಾಂಗ್‌-ಗ್ಲೈಡರ್‌ ಮತ್ತು ಒಂದು ರೆಕ್ಕೆದಿರಿಸಿನ ನಡುವಿನ ಒಂದು ಮಿಶ್ರಣವಾಗಿದೆ. ರೆಕ್ಕೆಹೊರೆಯು ೬ರಷ್ಟಿರುವ ಒಂದು ಜಾರಿಕೆಯ ಅನುಪಾತವನ್ನು ತಲುಪಬಲ್ಲದು ಮತ್ತು ಇದು ಆಮ್ಲಜನಕ ಬಾಟಲಿಗಳು ಹಾಗೂ ಇತರ ಸಾಮಗ್ರಿಗಳ ಸಾಗಣೆಗೆ ಅನುಮತಿಸುತ್ತದೆ.[೬]

೨೦೦೩ರ ಜುಲೈ ೩೧ರಂದು, ಫೆಲಿಕ್ಸ್‌ ಬೌಮ್‌ಗಾರ್ಟ್‌ನರ್‌ ಎಂಬ ಓರ್ವ ಆಸ್ಟ್ರಿಯಾದವ ೨೯,೩೬೦ ಅಡಿ (೯ ಕಿ.ಮೀ.) ಎತ್ತರದಿಂದ ಜಿಗಿದು, ೧೪ ನಿಮಿಷಗಳಲ್ಲಿ ಇಂಗ್ಲಿಷ್‌ ಕಾಲುವೆಯನ್ನು ಯಶಸ್ವಿಯಾಗಿ ದಾಟಿದ ಮತ್ತು ಈ ನಿಟ್ಟಿನಲ್ಲಿ ಆತ ೩೫ ಕಿ.ಮೀ.ಗೂ ಹೆಚ್ಚಿನ (೨೧.೮ ಮೈಲಿ) ಅಂತರವನ್ನು ಕ್ರಮಿಸಿದ್ದ.[೭]

೨೦೦೬ರಲ್ಲಿ, ESG ಎಂಬ ಜರ್ಮನ್‌ ಉದ್ಯಮವು ಗ್ರೈಫಾನ್‌ ಎಂಬ ರೆಕ್ಕೆಹೊರೆಯನ್ನು ಪರಿಚಯಿಸಿತು. ಇದು ವಿಶೇಷ ಪಡೆಗಳ ರಹಸ್ಯ ಹಠಾತ್‌ ದಾಳಿಗಳಿಗಾಗಿ ನಿಷ್ಕೃಷ್ಟವಾಗಿ ಉದ್ದೇಶಿಸಿ ತೆಗೆದಿಡಲಾಗಿದ್ದ ಒಂದು ರೆಕ್ಕೆಹೊರೆಯಾಗಿತ್ತು.[೮]

WISBASE[ಬದಲಾಯಿಸಿ]

೨೦೦೩ರಿಂದೀಚೆಗೆ[೯] ಅನೇಕ BASE ಜಿಗಿತಗಾರರು ರೆಕ್ಕೆದಿರಿಸುಗಳ ಬಳಕೆಯನ್ನು ಶುರುಮಾಡಿದ್ದು, ಇದು WiSBASE ನ ಜನ್ಮಕ್ಕೆ ಕಾರಣವಾಗಿದೆ; ಕೆಲವೊಬ್ಬರು ಇದನ್ನು BASEನ ಭವಿಷ್ಯ ಎಂಬುದಾಗಿ ಮತ್ತು ರೆಕ್ಕೆದಿರಿಸು ಹಾರಾಟದ ಅಭಿವೃದ್ಧಿಯ ಅತ್ಯುತ್ತಮ ಕ್ರಮ ಎಂಬುದಾಗಿ ಪರಿಗಣಿಸಿದ್ದಾರೆ.

ಸಾಮೀಪ್ಯ ಹಾರಾಟ (ಪ್ರಾಕ್ಸಿಮಿಟಿ ಫ್ಲೈಯಿಂಗ್) ಎಂಬುದು ಅಪಾಯಕರವಾದ ಮತ್ತು ನಯನ ಮನೋಹರವಾದ ಒಂದು ಕೌಶಲವಾಗಿದ್ದು, ಇದು ಪರ್ವತಗಳ ಮುಖಗಳು ಮತ್ತು ಅಂಚುಗಳಿಗೆ ಅತ್ಯಂತ ನಿಕಟವಾಗಿ ಮಾಡುವ ಹಾರಾಟವಾಗಿದೆ.

ಯುರೋಪ್‌ನಲ್ಲಿ WiSBASE ಅಭ್ಯಾಸವು ವರದಿಯಾಗಿರುವ ಮುಖ್ಯ ಸ್ಥಳಗಳಲ್ಲಿ ಇವು ಸೇರಿವೆ: ನಾರ್ವೆಯಲ್ಲಿನ ಜೆರಾಗ್‌ ಮತ್ತು ಟ್ರಾಲ್‌ಸ್ಟಿಗೆನ್‌, ಸ್ವಿಜರ್ಲೆಂಡ್‌‌‌ನಲ್ಲಿನ ಲೌಟರ್‌ಬ್ರೂನೆನ್‌, ಮತ್ತು ಡ್ರೋ ಸಮೀಪದಲ್ಲಿ ಇಳಿದಾಣದ ಮೈದಾನವನ್ನು ಹೊಂದಿರುವ ಇಟಲಿಯಲ್ಲಿನ ಮಾಂಟೆ ಬ್ರೆಂಟೊ.

ಡೀನ್‌ ಪಾಟರ್‌[೧೦] ಎಂಬಾತ ೨೦೦೯ರ ಆಗಸ್ಟ್‌‌ನಲ್ಲಿ ಕೈಗೊಂಡ ೫.೮ ಕಿ.ಮೀ. (೩.೬ ಮೈಲಿ) ಜಿಗಿತವು ಅತಿ ಉದ್ದದ ಪ್ರಮಾಣೀಕೃತ WiSBASE ಜಿಗಿತವೆನಿಸಿಕೊಂಡಿದೆ. ಐಗರ್‌‌‌ನಿಂದ ಜಿಗಿದ ಪಾಟರ್‌, ಹಾರಾಟದಲ್ಲಿಯೇ ೨ ನಿಮಿಷಗಳು ಮತ್ತು ೫೦ ಸೆಕೆಂಡುಗಳನ್ನು ಕಳೆದಿದ್ದ ಮತ್ತು ಈ ನಿಟ್ಟಿನಲ್ಲಿ ಅವನು ೭,೯೦೦ ಅಡಿಯಷ್ಟು (೨.೪ ಕಿ.ಮೀ.) ಉನ್ನತಿಯನ್ನು ಕ್ರಮಿಸಿದ್ದ.

ಜೆಟ್‌-ಚಾಲಿತ ರೆಕ್ಕೆದಿರಿಸುಗಳು[ಬದಲಾಯಿಸಿ]

ಅತ್ಯಂತ ಪ್ರಾಯೋಗಿಕ ಹಂತದಲ್ಲಿಯೇ ಇರುವ ಶಕ್ತಿ ಒದಗಿಸಲ್ಪಟ್ಟ ರೆಕ್ಕೆದಿರಿಸುಗಳು, ಪಾದಗಳಿಗೆ[೧೧] ಅಥವಾ ಒಂದು ರೆಕ್ಕೆಹೊರೆ ಸಜ್ಜಿಕೆಗೆ ಬಿಗಿಯಲಾದ ಸಣ್ಣ ಜೆಟ್ ಎಂಜಿನ್‌ಗಳನ್ನು ಅನೇಕವೇಳೆ ಬಳಸಿಕೊಳ್ಳುತ್ತವೆ, ಮತ್ತು ಇನ್ನೂ ಮಹತ್ತರವಾದ ಸಮತಲವಾದ ಪರ್ಯಟನೆ ಮತ್ತು ಏರುವಿಕೆಗೆ ಅವಕಾಶ ನೀಡುತ್ತವೆ.

೨೦೦೫ರ ಅಕ್ಟೋಬರ್‌ ೨೫ರಂದು, ವೀಸಾ ಪರ್ವಿಯಾನೆನ್‌ ಎಂಬಾತ ಫಿನ್ಲೆಂಡ್‌‌‌ನಲ್ಲಿನ ಲಾಹ್ಟಿ ಎಂಬಲ್ಲಿ, ಒಂದು ರೆಕ್ಕೆದಿರಿಸನ್ನು ಧರಿಸಿಕೊಂಡು ಬಿಸಿ ಗಾಳಿಯ ಆಕಾಶಬುಟ್ಟಿಯೊಂದರಿಂದ ಜಿಗಿದ. ಈ ಸಂದರ್ಭದಲ್ಲಿ ಅವನ ಪಾದಗಳಿಗೆ ಎರಡು ಸಣ್ಣ ಟರ್ಬೋಜೆಟ್ ಜೆಟ್ ಎಂಜಿನ್‌ಗಳನ್ನು ಜೋಡಿಸಲಾಗಿತ್ತು. ಸದರಿ ಟರ್ಬೋಜೆಟ್‌ಗಳು ಸರಿಸುಮಾರಾಗಿ ತಲಾ ೧೬ kgfನಷ್ಟು (೧೬೦ N, ೩೫ lbf) ದೂಡಿಕೆಯನ್ನು ಒದಗಿಸಿದವು ಮತ್ತು ಸೀಮೆಎಣ್ಣೆ (ಜೆಟ್ A-೧) ಇಂಧನದಿಂದ ಚಾಲನೆಗೊಳಗಾದವು. ಉನ್ನತಿಯ ಯಾವುದೇ ಗಮನಾರ್ಹವಾದ ನಷ್ಟವಿಲ್ಲದೆಯೇ ಸರಿಸುಮಾರಾಗಿ ೩೦ ಸೆಕೆಂಡುಗಳಷ್ಟು ಅವಧಿಯ ಸಮತಲವಾದ ಹಾರಾಟವನ್ನು ಪರ್ವಿಯಾನೆನ್‌ ಸ್ಪಷ್ಟವಾಗಿ ಸಾಧಿಸಿದ.[೧೧]

ಜರ್ಮನಿಗೆ ಸೇರಿದ ಕ್ರಿಶ್ಚಿಯನ್‌‌ ಸ್ಟಾಡ್ಲರ್‌‌ (ಬರ್ಡ್‌ಮನ್‌ ಚೀಫ್‌ ಇನ್ಸ್‌ಟ್ರಕ್ಟರ್‌‌ ) ಎಂಬಾತ ಸ್ಕೈಜೆಸ್ಟರ್‌‌'ಸ್‌ ವಿಂಗ್ಸ್‌ ಓವರ್‌ ಮಾರ್ಲ್‌ ಎಂದು ಕರೆಯಲ್ಪಟ್ಟ, ಬಹುಮಾನ ಹಣದೊಂದಿಗಿನ ಮೊದಲ ಅಂತರರಾಷ್ಟ್ರೀಯ ರೆಕ್ಕೆದಿರಿಸು ಸ್ಪರ್ಧೆಯನ್ನು ೨೦೦೫ರಲ್ಲಿ ಸಂಘಟಿಸಿದ. ವೇಗಾV೩ ವಿಂಗ್‌ಸೂಟ್‌ ಸಿಸ್ಟಮ್‌ ಎಂಬ ಅವನ ಮೊದಲ ವಿಶ್ವವ್ಯಾಪಿ ಸಾಧನೆಯು ವಿದ್ಯುನ್ಮಾನಕ್ಕೆ ಹೊಂದಿಸಬಹುದಾದ ಒಂದು ಜಲಜನಕ ಪರಾಕ್ಸೈಡ್‌ ಕ್ಷಿಪಣಿಯನ್ನು[೧೨] ಬಳಸಿತು. ಈ ಕ್ಷಿಪಣಿಯು ೧೦೦ kgfನಷ್ಟು ದೂಡಿಕೆಯನ್ನು ಒದಗಿಸಿತು ಮತ್ತು ಇದು ಜ್ವಾಲೆಗಳನ್ನಾಗಲೀ ಅಥವಾ ವಿಷಕಾರಿ ಹೊಗೆಗಳನ್ನಾಗಲೀ ಉತ್ಪಾದಿಸುವುದಿಲ್ಲ. ಶಕ್ತಿ ಒದಗಿಸಲ್ಪಟ್ಟ ರೆಕ್ಕೆದಿರಿಸನ್ನು ಬಳಸಿಕೊಂಡು ಅವನು ಕೈಗೊಂಡ ಮೊದಲ ಯಶಸ್ವಿ ಜಿಗಿತವು ೨೦೦೭ರಲ್ಲಿ ಸಂಭವಿಸಿತು ಮತ್ತು ಗಂಟೆಗೆ ೧೬೦ ಮೈಲಿಗೂ ಹೆಚ್ಚಿನ ಸಮತಲ ವೇಗವನ್ನು ಇದು ಒಳಗೊಂಡಿತ್ತು.[೧೩]

ಶಕ್ತಿ ಒದಗಿಸಲ್ಪಟ್ಟ ರೆಕ್ಕೆಹೊರೆಯೊಂದನ್ನು ಬಳಸಿಕೊಂಡು, ಸಂಪೂರ್ಣವಾಗಿ ಶರೀರ ಚಲನೆಯ ನೆರವಿನಿಂದ ಚಾಲನ ನಿರ್ದೇಶನ ಮಾಡುತ್ತಲೇ ವಿಮಾನವೊಂದರ ಕುಶಲ ಚಲನೆಯ ಸಾಮರ್ಥ್ಯವನ್ನು ಗಳಿಸುವಲ್ಲಿ ವೆಸ್‌ ರೋಸಿ ಎಂಬಾತ ಮೊದಲ ವ್ಯಕ್ತಿ ಎನಿಸಿಕೊಂಡ; ಆದಾಗ್ಯೂ, ಅವನ ಪ್ರಾಯೋಗಿಕ ರೆಕ್ಕೆಹೊರೆಯು ವಾಣಿಜ್ಯ ಸ್ವರೂಪದಲ್ಲಿ ಕಾರ್ಯಸಾಧ್ಯವಾಗಿರಲಿಲ್ಲ. ಏಕೆಂದರೆ ರೆಕ್ಕೆಯು ಬಳಸುವ ಇಂಧನ ಮತ್ತು ನಿರ್ಮಾಣಕಾರ್ಯದಲ್ಲಿ ಅಗತ್ಯವಾಗಿರುವ ಸಾಮಗ್ರಿಗಳ ವೆಚ್ಚ ಇವುಗಳು ವಿಪರೀತ ದುಬಾರಿಯಾಗಿದ್ದವು. ಅದೇನೇ ಇದ್ದರೂ, ಸ್ವಿಸ್‌ ಆಲ್ಪ್ಸ್‌ ಶ್ರೇಣಿಯ ಮೇಲೆ ಅವನು ಮಾಡಿದ ಎಂಟು-ನಿಮಿಷಗಳಷ್ಟು ಅವಧಿಯ ಹಾರಾಟವು ವಿಶ್ವಾದ್ಯಂತ ಪ್ರಮುಖ ಸುದ್ದಿಯನ್ನು ಮಾಡಿತು, ಮತ್ತು ಇಲ್ಲಿಯ ತನಕವೂ ಅವನ "ಜೆಟ್-ರೆಕ್ಕೆಹೊರೆ"ಯು ಅವಿಶ್ರಾಂತವಾದ ಹಾರಾಟವನ್ನು ನಡೆಸಬಲ್ಲ ಏಕೈಕ ಆಯ್ಕೆಯಾಗಿ ಉಳಿದುಕೊಂಡಿದೆ.

ತರಬೇತಿ[ಬದಲಾಯಿಸಿ]

ಒಂದು ರೆಕ್ಕೆದಿರಿಸನ್ನು ಬಳಸಿಕೊಂಡು ಹಾರಾಟ ನಡೆಸುವಿಕೆಯು ಒಂದು ಆಕಾಶ ಜಿಗಿತಕ್ಕೆ ಪರಿಗಣನೀಯ ಸಂಕೀರ್ಣತೆಯನ್ನು ಸೇರ್ಪಡೆ ಮಾಡುತ್ತದೆ ಎನ್ನಬಹುದು. ಯುನೈಟೆಡ್‌ ಸ್ಟೇಟ್ಸ್‌ ಪ್ಯಾರಾಶೂಟ್‌ ಅಸೋಸಿಯೇಷನ್‌ (USPA) ಎಂಬ ಸಂಘಟನೆಯು ತಾನು ಹೊರತಂದಿರುವ ಆಕಾಶ-ನೆಗೆತಗಾರರ ಮಾಹಿತಿ ಕೈಪಿಡಿಯಲ್ಲಿ ಉಲ್ಲೇಖಿಸಿರುವ ಪ್ರಕಾರ, ಮೊಟ್ಟಮೊದಲ ಬಾರಿಗೆ ಒಂದು ರೆಕ್ಕೆದಿರಿಸನ್ನು ಬಳಸಿಕೊಂಡು ಹಾರಾಟ ನಡೆಸುವ ಯಾವುದೇ ಜಿಗಿತಗಾರನು ಕನಿಷ್ಟಪಕ್ಷ ೨೦೦ ಸಂಖ್ಯೆಯ ಸ್ವತಂತ್ರ ಪತನದ ಆಕಾಶ ಜಿಗಿತಗಳನ್ನು ಮಾಡಿರಬೇಕು ಮತ್ತು ಅವು ಕಳೆದ ೧೮ ತಿಂಗಳುಗಳ ಒಳಗಾಗಿ ಮಾಡಿದಂಥವುಗಳಾಗಿರಬೇಕು, ಮತ್ತು ಓರ್ವ ಅನುಭವಸ್ಥ ರೆಕ್ಕೆ ದಿರಿಸು ಜಿಗಿತಗಾರನಿಂದ ಮುಖಾಮುಖಿಯಾದ ಬೋಧನೆಯನ್ನು ಅವನು ಸ್ವೀಕರಿಸಿರಬೇಕು, ಅಥವಾ ಓರ್ವ ಬೋಧಕನ ನೆರವಿಲ್ಲದೆಯೇ ೫೦೦ ಜಿಗಿತಗಳ ಅನುಭವವನ್ನು ಹೊಂದಿರಬೇಕು.[೧೪] ಇತರ ರಾಷ್ಟ್ರಗಳಲ್ಲಿ ಕಂಡುಬರುವ ಅವಶ್ಯಕತೆಗಳು ಇದೇ ರೀತಿಯಲ್ಲಿವೆ. ರೆಕ್ಕೆದಿರಿಸು ತಯಾರಕರು ವ್ಯಾಸಂಗಕ್ರಮಗಳಲ್ಲಿ ತರಬೇತಿಯನ್ನು ಮತ್ತು ಬೋಧಕರಿಗೆ ಪ್ರಮಾಣೀಕರಣವನ್ನು ನೀಡುತ್ತಾರೆ.

ದಾಖಲೆಗಳು[ಬದಲಾಯಿಸಿ]

೨೦೧೦ರ ಸೆಪ್ಟೆಂಬರ್‌ ೨೪ರಂದು, ಷಿನ್‌ ಇಟೊ ಎಂಬ ಜಪಾನೀ ರೆಕ್ಕೆದಿರಿಸು ಚಾಲಕನು (ಬರ್ಡ್‌ಮನ್‌ ಇಂಕ್‌ "ಟಾಪ್‌ ಗನ್‌" ಟೀಮ್‌ ), ಕ್ಯಾಲಿಫೋರ್ನಿಯಾದ ಡೇವಿಸ್‌‌‌ನ ಉಪನಗರಗಳ ಮೇಲೆ ಹಾರಾಟ ನಡೆಸಿ ಗಿನ್ನೆಸ್‌ ವಿಶ್ವ ದಾಖಲೆಗಳನ್ನು ಸ್ಥಾಪಿಸಿದ. PAC೭೫೦XLನಿಂದ ದಾಖಲಿಸಲ್ಪಟ್ಟಂತೆ, ಭೂಮಟ್ಟದಿಂದ ಮೇಲಕ್ಕೆ ೩೪,೬೨೦ ಅಡಿಯಷ್ಟು (೧೦,೫೫೦ ಮೀ) ಉನ್ನತಿ, ೩೩,೪೩೦ ಅಡಿಯಷ್ಟು (೧೦.೧೮೦ ಮೀ) MSLನ್ನು ದಾಖಲಿಸಿದ ಅವನು, ೧೦.೧೯ ಮೈಲಿಗಳಷ್ಟು (೧೬.೪ ಕಿ.ಮೀ.) ಸಮತಲ ಅಂತರದ ಹಾರಾಟ ನಡೆಸಿದ. ನಿರ್ಗಮನ ಬಿಂದುವಿನಿಂದ ಇಳಿದಾಣದ ಬಿಂದುವಿನವರೆಗೆ ಅವನು ದಾಖಲಿಸಿದ ಒಟ್ಟು ಹಾರಾಟ ಅಂತರವು ೧೧.೬೮ ಮೈಲಿಗಳಷ್ಟು (೧೮.೮ ಕಿ.ಮೀ.) ಹಾಗೂ ನೇರ ರೇಖೆಯ ಅಂತರವು ೧೦.೮೭ ಮೈಲಿಗಳಷ್ಟು (೧೭.೫ ಕಿ.ಮೀ.) ಇತ್ತು. ಸ್ವತಂತ್ರ ಪತನದ ಸಮಯವು ೪ ನಿಮಿಷಗಳು ಮತ್ತು ೫೭ ಸೆಕೆಂಡುಗಳಷ್ಟಿತ್ತು. ಗರಿಷ್ಟ ಸಮತಲ ವೇಗವು ಗಂಟೆಗೆ ೧೭೭.೭ ಮೈಲಿಗಳಷ್ಟು (ಗಂಟೆಗೆ ೨೮೬ ಕಿ.ಮೀ.) ಇತ್ತು.

ಒಂದು ರೆಕ್ಕೆದಿರಿಸನ್ನು ಬಳಸಿಕೊಂಡು ಮಾಡಲಾದ ಹಾರಾಟದಲ್ಲಿನ ಮಹತ್ತರವಾದ ಅನಧಿಕೃತ ದಾಖಲೆಯ ಸಮತಲ ಅಂತರವು ೨೦.೪೫ ಕಿ.ಮೀ.ಗಳಷ್ಟಿದ್ದು (೧೨.೭ ಮೈಲಿ), ಇದನ್ನು ಅಲ್ವಾರೊ ಬುಲ್ಟೊ, ಸ್ಯಾಂಟಿ ಕೊರೆಲ್ಲಾ ಮತ್ತು ಟೋನಿ ಲೊಪೆಜ್ ದಾಖಲಿಸಿದ್ದಾರೆ‌.[೧೫] ಸ್ಪೇನ್‌ ದೇಶದ ಈ ಮೂವರು ನಿವಾಸಿಗಳು ೨೦೦೫ರ ಜೂನ್‌‌ ೨೩ರಂದು ೩೫,೦೦೦ ಅಡಿಗಳಷ್ಟು (೧೦.೬೭ ಕಿ.ಮೀ.) ಉನ್ನತಿಯಲ್ಲಿದ್ದ ವಿಮಾನವೊಂದರಿಂದ ಜಿಗಿತವನ್ನು ಮಾಡಿದ ನಂತರ, ಗಿಬ್ರಾಲ್ಟರ್‌ ಜಲಸಂಧಿಯನ್ನು ದಾಟಿದರು.

೨೦೦೮ರ ಜುಲೈ ೨೪ರಂದು, ಹೀಥರ್‌ ಸ್ವಾನ್‌ ಮತ್ತು ಗ್ಲೆನ್‌‌ ಸಿಂಗಲ್‌ಮನ್‌‌ ಎಂಬ ಆಸ್ಟ್ರೇಲಿಯಾದ ಜೋಡಿಯು ೩೭,೦೦೦ ಅಡಿಗಳಷ್ಟು (೧೧.೨೭ ಕಿ.ಮೀ.) ಎತ್ತರದಿಂದ ಮಧ್ಯದ ಆಸ್ಟ್ರೇಲಿಯಾದ ಮೇಲೆ ಜಿಗಿಯುವ ಮೂಲಕ, ರೆಕ್ಕೆದಿರಿಸನ್ನು ಬಳಸಿಕೊಂಡು ಮಾಡಿದ ಅತಿ ಎತ್ತರದ ಜಿಗಿತಕ್ಕೆ ಸಂಬಂಧಿಸಿದ ಒಂದು ವಿಶ್ವದಾಖಲೆಯನ್ನು ಸ್ಥಾಪಿಸಿತು.[೧೬][೧೭]

ರೆಕ್ಕೆದಿರಿಸಿನ ರಚನೆಗಳನ್ನು ಬಳಸಿಕೊಂಡು ಮಾಡಲಾಗುವ ಅಧಿಕೃತ ವಿಶ್ವದಾಖಲೆಗೆ ಸಂಬಂಧಿಸಿದ ನಿರ್ಣಾಯಕ ಮಾನದಂಡಗಳನ್ನು ಫೆಡರೇಷನ್‌ ಏರೋನಾಟಿಕ್‌ ಇಂಟರ್‌ನ್ಯಾಷನೇಲ್‌ ಸಂಘಟನೆಯು ಸ್ಥಾಪಿಸಿಲ್ಲ ಅಥವಾ ಪ್ರಮಾಣೀಕರಿಸಿಲ್ಲ. ಆದಾಗ್ಯೂ, ಹಲವಾರು ರಾಷ್ಟ್ರೀಯ ಸಂಘಟನೆಗಳು ದಾಖಲೆಯ ವರ್ಗಗಳನ್ನು ನೆಲೆಗೊಳಿಸಿವೆ ಮತ್ತು ಒಂದು ರೆಕ್ಕೆದಿರಿಸು ರಚನೆಯು ಪರಿಪೂರ್ಣವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತೀರ್ಮಾನಿಸುವುದಕ್ಕಾಗಿ ಮಾನದಂಡಗಳನ್ನು ಸ್ಥಾಪಿಸಿವೆ ಅಥವಾ ಪ್ರಮಾಣೀಕರಿಸಿವೆ.

ಒಂದು ರಾಷ್ಟ್ರೀಯ ದಾಖಲೆಗೆ ಸಂಬಂಧಿಸಿದ ಮಾನದಂಡಗಳನ್ನು ಈಡೇರಿಸುವ ರೀತಿಯಲ್ಲಿ ಅಧಿಕೃತವಾಗಿ ಮಾನ್ಯತೆ ಪಡೆದ ಅತಿದೊಡ್ಡ ರೆಕ್ಕೆದಿರಿಸು ರಚನೆಯು ಒಂದು ಬಾಣಮುಖಿ ರಚನೆಯಲ್ಲಿನ ೬೮ ಜಿಗಿತಗಾರರನ್ನು ಒಳಗೊಂಡಿತ್ತು ಮತ್ತು ಇದು ೨೦೦೯ರ ನವೆಂಬರ್‌ ೧೨ರಂದು ಕ್ಯಾಲಿಫೋರ್ನಿಯಾದ ಲೇಕ್‌ ಎಲ್ಸಿನೋರ್‌ ಎಂಬಲ್ಲಿ ಒಂದು US ರಾಷ್ಟ್ರೀಯ ದಾಖಲೆಯನ್ನು ಸ್ಥಾಪಿಸಿತು.[೧೮]

ಒಂದು B-೨ ರಚನೆಯು ಅತಿದೊಡ್ಡ ಅನಧಿಕೃತ ದಾಖಲೆ ಎನಿಸಿಕೊಂಡಿದ್ದು, ಇದು ೨೦೦೮ರ ನವೆಂಬರ್‌ನಲ್ಲಿ ಕ್ಯಾಲಿಫೋರ್ನಿಯಾದ ಲೇಕ್‌ ಎಲ್ಸಿನೋರ್‌ನಲ್ಲಿ ನಡೆದ ಜಿಗಿತದಲ್ಲಿನ ೭೧ ಜಿಗಿತಗಾರರನ್ನು ಒಳಗೊಂಡಿತ್ತು.[೧೯]

ಇವನ್ನೂ ಗಮನಿಸಿ‌[ಬದಲಾಯಿಸಿ]

  • BASE ಜಿಗಿತ
  • ಧುಮುಕುಕೊಡೆಯ ಜಿಗಿತ
  • ಗಾಳಿಪಟದ ಅನ್ವಯಿಕೆಗಳು
  • ದಿ ಜಿಪ್ಸಿ ಮಾತ್ಸ್‌
  • ಹೆಜಾರ್ಫೆನ್‌ ಅಹಮದ್‌ ಸೆಲೆಬಿ

ಟಿಪ್ಪಣಿಗಳು[ಬದಲಾಯಿಸಿ]

  1. "L'uomo volante ce l'ha fatta" (in Italian). Corriere della Sera. 1997-11-01. Retrieved 2011-05-18.{{cite web}}: CS1 maint: unrecognized language (link)
  2. "Patrick, l'uomo shuttle" (in Italian). La Gazzetta dello Sport. 1997-11-01. Retrieved 2011-05-18.{{cite web}}: CS1 maint: unrecognized language (link)
  3. "Bird-Man Worldwide Instructors list". Archived from the original on 2007-12-18. Retrieved 2008-01-28.
  4. "Wingsuit Flying and Basic Aerodynamics 1" (PDF). phoenix-fly.com. Archived from the original (PDF) on 2011-09-17. Retrieved 2011-05-18.
  5. "A Modern-day Lilienthal: Alban Geissler constructs wings for people without nerves". SPELCO GbR. Retrieved 2011-05-19.
  6. "Daily Mail". London: Daily Mail. 2006-06-07. Retrieved 2010-05-18.
  7. "Birdman Flies Atair Parachutes Across English Channel". Atairaerospace.com. 2003-11-21. Archived from the original on 2011-07-07. Retrieved 2010-05-18.
  8. "Press release: ESG gives you wings – the parachute system for special operations". ESG. May 15, 2006. Archived from the original on April 27, 2010. Retrieved June 8, 2011.
  9. ಮ್ಯಾಟ್‌ ಗೆರ್ಡೆಸ್‌, ದಿ ಗ್ರೇಟ್‌ ಬುಕ್‌ ಆಫ್‌ BASE , ಬರ್ಡ್‌ಬ್ರೇನ್‌ ಪಬ್ಲಿಷಿಂಗ್‌, ೨೦೧೦, ಪುಟ ೨೧೬
  10. ಡೀನ್‌ ಪಾಟರ್ಸ್‌ ರೆಕಾರ್ಡ್‌ ಬ್ರೇಕಿಂಗ್‌ ಫ್ಲೈಟ್‌ ಫ್ರಂ ದಿ ಐಗರ್‌‌,
  11. ೧೧.೦ ೧೧.೧ "First jet powered Birdman flight". Dropzone.com. Archived from the original on 2010-08-13. Retrieved 2010-05-18.
  12. "First living rocket airplane in the world! :: News by". Peroxide Propulsion. 2008-01-03. Archived from the original on 2009-03-08. Retrieved 2010-05-18.
  13. "First living rocket plane in the world". YouTube. 2008-09-29. Retrieved 2010-05-18.
  14. "U.S. Parachute Association > SIM > Read > Section 6". Uspa.org. Archived from the original on 2015-09-06. Retrieved 2010-05-18.
  15. E-Citron SA, www.e-citron.ch. "Wingsuit distance record". Proyecto Alas. Archived from the original on 2009-09-09. Retrieved 2010-05-18.
  16. "Central Australia Jump, Sixty Minutes". Video.msn.com. Retrieved 2010-05-18.[ಶಾಶ್ವತವಾಗಿ ಮಡಿದ ಕೊಂಡಿ]
  17. "Furthest Flight Website". Furthestflight.com. Archived from the original on 2011-02-05. Retrieved 2010-05-18.
  18. "USPA Records: largest wingsuit formation jump". Uspa.org. 2006-05-01. Archived from the original on 2010-04-18. Retrieved 2010-05-18.
  19. "B-2 formation with 71 jumpers". teamillvision.blogspot.com. November 2008. Retrieved 2009-01-15.

ಉಲ್ಲೇಖಗಳು‌‌[ಬದಲಾಯಿಸಿ]

  • Michael Abrams (2006). Birdmen, Batmen, and Skyflyers: Wingsuits and the Pioneers Who Flew in Them, Fell in Them, and Perfected Them. ISBN 1-4000-5491-5.
  • Matt Gerdes (2010). The Great Book of BASE, BirdBrain Publishing. ISBN 978-1400054916.
  • Scott Campos (2005). Skyflying Wingsuits in Motion.

ಬಾಹ್ಯ ಕೊಂಡಿಗಳು‌‌[ಬದಲಾಯಿಸಿ]

  1. REDIRECT Template:Extreme sports