ರೂಪಕುಂಡ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ರೂಪಕುಂಡ
India-locator-map-blank.svg
Red pog.svg
ರೂಪಕುಂಡ
ರಾಜ್ಯ
 - ಜಿಲ್ಲೆ
ಉತ್ತರಾಖಂಡ
 - ಚಮೋಲಿ
ನಿರ್ದೇಶಾಂಕಗಳು 30.262° N 79.732° E
ವಿಸ್ತಾರ
 - ಎತ್ತರ
 km²
 - 5029 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ
 - ಸಾಂದ್ರತೆ
ಜನವಸತಿ ಇಲ್ಲ
 - /ಚದರ ಕಿ.ಮಿ.

ರೂಪಕುಂಡ ಭಾರತಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿ ಹಿಮಾಲಯದ ಉನ್ನತ ಪ್ರಾಂತ್ಯದಲ್ಲಿರುವ ಒಂದು ಸರೋವರ ಪ್ರದೇಶ. ರೂಪಕುಂಡ ಸರೋವರದ ಸುತ್ತ ಸುಮಾರು ೩೦೦ ದಿಂದ ೬೦೦ ಮಾನವ ಅಸ್ಥಿಪಂಜರಗಳು ಪತ್ತೆಯಾಗಿವೆ. ಈ ಪ್ರದೇಶದಲ್ಲಿ ಯಾವುದೇ ಜನವಸತಿ ಇಲ್ಲ. ಸಮುದ್ರಮಟ್ಟದಿಂದ ೫,೦೨೯ ಮೀಟರ್ ಎತ್ತರದಲ್ಲಿರುವ ರೂಪಕುಂಡ ಸದಾಕಾಲ ಹಿಮಾವೃತವಾಗಿರುತ್ತದೆ. ರೂಪಕುಂಡ ಸರೋವರದ ಬಳಿ ಪತ್ತೆಯಾಗಿರುವ ನೂರಾರು ಅಸ್ಥಿಪಂಜರಗಳ ಬಗ್ಗೆ ಹಲವಾರು ಊಹಾಪೋಹಗಳಿವೆ. ೧೯೪೨ರಲ್ಲಿ ಓರ್ವ ಅರಣ್ಯರಕ್ಷಕನಿಂದ ಪತ್ತೆಯಾದ ಇವು ಯಾವುದೋ ಪ್ರಾಚೀನ ಕಾಲದ ಅರಸನೊಬ್ಬನ ಸೈನಿಕರದಿರಬಹುದೆಂದು ಒಂದು ಊಹೆ. ಅಲ್ಲದೆ ಇವರ ಹಠಾತ್ ಸಾವಿನ ಬಗ್ಗೆ ಸಹ ಬಹಳಷ್ಟು ಚರ್ಚೆ ನಡೆದಿದೆ. ಬಹುಶ ಇವರು ಸಾಂಕ್ರಾಮಿಕ ರೋಗ ಅಥವಾ ಭೂಕುಸಿತ ಇಲ್ಲವೇ ಹಿಮಗಾಳಿಯ ಹೊಡೆತಕ್ಕೆ ಸಿಕ್ಕಿ ಮರಣಿಸಿರಬೇಕೆಂದು ಮೊದಲಿಗೆ ನಂಬಲಾಗಿತ್ತು. ೨೦೦೪ರಲ್ಲಿ ಭಾರತ ಮತ್ತು ಯುರೋಪ್‌ನ ಸಂಶೋಧಕರ ಜಂಟಿ ತಂಡವು ರೂಪಕುಂಡಕ್ಕೆ ಭೇಟಿ ನೀಡಿ ಇನ್ನಷ್ಟು ಪುರಾವೆಗಳನ್ನು ಸಂಗ್ರಹಿಸಿತು. ನಂತರ ಈ ಅಸ್ಥಿಪಂಜರಗಳು ೯ನೆಯ ಶತಮಾನದ ಕಾಲದವೆಂದು ಸಿದ್ಧಪಡಿಸಲಾಯಿತು. ತಲೆಬುರುಡೆಗಳನ್ನು ಹೈದರಾಬಾದ್‍‍ ಮತ್ತು ಲಂಡನ್‌ಗಳಲ್ಲಿ ಪರೀಕ್ಷೆಗೊಳಪಡಿಸಿದಾಗ ಈ ಜನರು ಬೃಹತ್ ಆಲಿಕಲ್ಲುಗಳ ಹೊಡೆತಕ್ಕೆ ಸಿಕ್ಕಿ ಸಾವನ್ನಪ್ಪಿದರೆಂದು ಅಭಿಪ್ರಾಯ ಹೊರಬಿದ್ದಿತು. ಹಿಮಾಲಯದ ಬಯಲುಪ್ರದೇಶದಲ್ಲಿ ಇವರಿಗೆ ಆಲಿಕಲ್ಲುಗಳಿಂದ ಮರೆಸಿಕೊಳ್ಳಲು ಯಾವುದೇ ಜಾಗೆ ಸಿಗದೆ ಎಲ್ಲರೂ ಮರಣಿಸಿದರೆಂದು ತೀರ್ಮಾನಿಸಲಾಗಿದೆ. ಈ ಪ್ರದೇಶದ ಅತಿ ಶೀತಲ ವಾತಾವರಣ ಮತ್ತು ಗಾಳಿಯ ಅತಿ ಕೊರತೆಯಿಂದಾಗಿ ಹಲವು ದೇಹಗಳು ಕೆಡದೆ ಉಳಿದಿವೆ. ಆಗಾಗ ಸಂಭವಿಸುತ್ತಲೇ ಇರುವ ಭೂಕುಸಿತದಿಂದಾಗಿ ಅನೇಕ ದೇಹಗಳು ಸರೋವರದೊಳಗೆ ಸೇರಿಹೋಗಿರಬೇಕೆಂದು ಸಹ ಒಂದು ಅಭಿಪ್ರಾಯವಿದೆ. ಆದರೆ ಈ ಜನ ಯಾರು ಹಾಗೂ ಎಲ್ಲಿಗೆ ಹೊರಟಿದ್ದರು ಎಂಬುದರ ಬಗ್ಗೆ ಇತಿಹಾಸದಲ್ಲಿ ಯಾವುದೇ ದಾಖಲೆಗಳಿಲ್ಲ. ಈ ಸ್ಥಳವು ಯಾವುದೇ ವಾಣಿಜ್ಯಮಾರ್ಗದಲ್ಲಿಲ್ಲ ಮತ್ತು ಆಸುಪಾಸಿನಲ್ಲಿ ಯಾವುದೇ ತೀರ್ಥಕ್ಷೇತ್ರಗಳಿಲ್ಲವಾದ್ದರಿಂದ ಇವರ ಬಗೆಗಿನ ವಿಚಾರ ಇನ್ನಷ್ಟು ರಹಸ್ಯವಾಗಿದೆ.

ಚಾರಣ[ಬದಲಾಯಿಸಿ]

ರೂಪಕುಂಡ ಹಿಮಾಲಯದ ಅತಿ ಸುಂದರ ಮತ್ತು ನಯನ ಮನೋಹರ ತಾಣಗಳಲ್ಲಿ ಒಂದಾಗಿದ್ದು ಸದಾ ಚಾರಣಿಗರನ್ನು ತನ್ನತ್ತ ಸೆಳೆಯುತ್ತಿದೆ. ೭೧೨೦ ಮೀ. ಎತ್ತರದ ತ್ರಿಶೂಲ ಪರ್ವತ ಮತ್ತು ೬೩೧೦ ಮೀ. ಎತ್ತರದ ನಂದಘುಂಗ್ಟಿ ಶಿಖರಗಳ ಪಾದದ ಬಳಿ ಇರುವ ರೂಪಕುಂಡದವರೆಗೆ ರಸ್ತೆ ಮಾರ್ಗವಿಲ್ಲ. ಗ್ವಾಲ್‌ದಮ್ ಪಟ್ಟಣದಿಂದ ಸುಮಾರು ೪ ದಿನಗಳ ಕಾಲ ಕಾಲ್ನಡಿಗೆಯಲ್ಲಿ ದಾರಿ ಸವೆಸಿ ರೂಪಕುಂಡವನ್ನು ತಲುಪಬೇಕಾಗುತ್ತದೆ. ಆದರೆ ಹಿಮಾವೃತ ಉನ್ನತ ಶಿಖರಸಾಲುಗಳ ನಡುವಿನ ಚಾರಣ ಚೇತೋಹಾರಿ. ದಾರಿಯಲ್ಲಿ ಸಿಗುವ ಬೇದಿನಿ ಬುಗ್ಯಾಲ್ ಅತಿ ಸುಂದರ ಹುಲ್ಲುಗಾವಲು ಮತ್ತು ನೈಸರ್ಗಿಕ ಹೂತೋಟ. ಜನವಸತಿ ಇಲ್ಲದ ಪ್ರದೇಶವಾದ್ದರಿಂದ ಪ್ರವಾಸಿಗರಿಗೆ ಯಾವುದೇ ಸೌಲಭ್ಯಗಳು ರೂಪಕುಂಡದಲ್ಲಿ ಇಲ್ಲ.

ಬಾಹ್ಯ ಸಂಪರ್ಕಕೊಂಡಿಗಳು[ಬದಲಾಯಿಸಿ]

"http://kn.wikipedia.org/w/index.php?title=ರೂಪಕುಂಡ&oldid=318983" ಇಂದ ಪಡೆಯಲ್ಪಟ್ಟಿದೆ