ರಾಹುಲ್ ದ್ರಾವಿಡ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ರಾಹುಲ್ ದ್ರಾವಿಡ್
RahulDravid.jpg
Flag of India.svg ಭಾರತ
ವೈಯುಕ್ತಿಕ ಮಾಹಿತಿ
ಪೂರ್ಣ ಹೆಸರು ರಾಹುಲ್ ಶರದ್ ದ್ರಾವಿಡ್
ಅಡ್ಡಹೆಸರು ದಿ ವಾಲ್, ಜ್ಯಾಮಿ
ಹುಟ್ಟು ಜನವರಿ ೧೧ ೧೯೭೩
ಇಂದೋರ್, ಮಧ್ಯ ಪ್ರದೇಶ, ಭಾರತ
ಪಾತ್ರ ಬಾಟ್ಸ್ಮನ್, ಓಮ್ಮೊಮ್ಮೆ ವಿಕೆಟ್ ಕೀಪರ್
ಬ್ಯಾಟಿಂಗ್ ಶೈಲಿ ಬಲಗೈ
ಬೌಲಿಂಗ್ ಶೈಲಿ ಬಲಗೈ ಆಫ್ ಸ್ಪಿನ್
ಅಂತರರಾಷ್ಟ್ರೀಯ ಮಾಹಿತಿ
ಟೆಸ್ಟ್ ಪಾದಾರ್ಪಣೆ (cap ೧೫೮) ಜೂನ್ ೨೦ ೧೯೯೬: v ಇಂಗ್ಲೆಂಡ್
ಕೊನೆಯ ಟೆಸ್ಟ್ ಪಂದ್ಯ ನವೆಂಬರ್ ೦೬ ೨೦೧೧: v ವೆಸ್ಟ್ ಇಂಡೀಸ್
ODI ಪಾದಾರ್ಪಣೆ (cap ೩೪೪) ಏಪ್ರಿಲ್ ೩ ೧೯೯೬: v ಶ್ರೀಲಂಕಾ
ಕೊನೆಯ ODI ಪಂದ್ಯ ಸೆಪ್ಟೆಂಬರ್ ೧೬ ೨೦೧೧: v ಇಂಗ್ಲೆಂಡ್
ODI ಅಂಗಿಯ ಸಂಖ್ಯೆ ೧೯
ಪ್ರಾದೇಶಿಕ ತಂಡದ ಮಾಹಿತಿ
ವರ್ಷಗಳು ತಂಡ
೧೯೯೦ – ಪ್ರಸ್ತುತ ಕರ್ನಾಟಕ
೨೦೦೩ ಸ್ಕಾಟ್ಲೆಂಡ್
೨೦೦೦ ಕೆಂಟ್
೨೦೦೮ – ೨೦೧೦ ರಾಯಲ್ ಚಾಲೆಂಜರ್ಸ್ ಬೆಂಗಳೂರು
೨೦೧೧ – ಪ್ರಸ್ತುತ ರಾಜಸ್ಥಾನ್ ರಾಯಲ್ಸ್
ವೃತ್ತಿಜೀವನದ ಅಂಕಿಅಂಶಗಳು
ಟೆಸ್ಟ್ ODIಗಳು FC LA
ಪಂದ್ಯಗಳು ೧೨೯ ೩೩೩ ೨೫೧ ೪೩೬
ಒಟ್ಟು ರನ್ನುಗಳು ೧೦,೩೬೬ ೧೦,೫೮೫ ೧೯೮೧೪ ೧೪,೮೬೧
ಬ್ಯಾಟಿಂಗ್ ಸರಾಸರಿ ೫೨.೬೧ ೩೯.೪೯ ೫೫.೫೦ ೪೨.೫೮
೧೦೦/೫೦ ೨೫/೫೩ ೧೨/೮೧ ೫೨/೧೦೩ ೨೧/೧೦೯
ಅತೀ ಹೆಚ್ಚು ರನ್ನುಗಳು ೨೭೦ ೧೫೩ ೨೭೦ ೧೫೩
ಬೌಲ್ ಮಾಡಿದ ಚೆಂಡುಗಳು ೧೨೦ ೧೮೬ ೬೧೭ ೪೭೭
ವಿಕೆಟ್ಗಳು
ಬೌಲಿಂಗ್ ಸರಾಸರಿ 39.00 ೪೨.೫೦ ೫೪.೬೦ ೧೦೫.೨೫
೫ ವಿಕೆಟುಗಳು ಇನ್ನಿಂಗ್ಸ್ನಲ್ಲಿ
೧೦ ವಿಕೆಟುಗಳು ಪಂದ್ಯದಲ್ಲಿ
ಶ್ರೇಷ್ಠ ಬೌಲಿಂಗ್ ೧/೧೮ ೨/೪೩ ೨/೧೬ ೨/೪೩
ಕ್ಯಾಚುಗಳು /ಸ್ಟಂಪಿಂಗ್‍ಗಳು ೧೭೯/0 ೧೯೩/೧೪ ೨೮೧/೧ ೨೨೭/೧೭

ದಿನಾಂಕ ನವೆಂಬರ್ ೨೯, ೨೦೦೮ ವರೆಗೆ.
ಮೂಲ: ಕ್ರಿಕ್ಇನ್ಫೊ


ರಾಹುಲ್ ಶರದ್ ದ್ರಾವಿಡ್ (ಜನನ: ಜನವರಿ ೧೧, ೧೯೭೩) - ಭಾರತ ಕ್ರಿಕೆಟ್ ತಂಡದ ಆಟಗಾರರೊಲ್ಲಬ್ಬರು ಮತ್ತು ತಂಡದ ಮಾಜಿ ನಾಯಕ.ಟೆಸ್ಟ್ ಪಂದ್ಯಗಳಲ್ಲಿ ೧೦,೦೦೦ಕ್ಕೂ ಅಧಿಕ ರನ್ನುಗಳನ್ನು ಗಳಿಸುವುದರಲ್ಲಿ, ಸಚಿನ್ ತೆಂಡೂಲ್ಕರ್ ಮತ್ತು ಸುನಿಲ್ ಗವಾಸ್ಕರ್ ನಂತರ ಮೂರನೇಯ ಭಾರತೀಯ. ಫೆಬ್ರುವರಿ ೧೪, ೨೦೦೭ ರಂದು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ೧೦,೦೦೦ಕ್ಕೂ ಅಧಿಕ ರನ್ನುಗಳನ್ನು ಗಳಿಸಿದ ವಿಶ್ವದಲ್ಲಿ ೬ನೇ ಆಟಗಾರ,[೧] ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ನಂತರ ಮೂರನೇ ಭಾರತೀಯ. ಇವರು ಅಕ್ಟೋಬರ್ ೨೦೦೫ರಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕನಾಗಿ, ಸೆಪ್ಟೆಂಬರ್ ೨೦೦೭ ರಲ್ಲಿ ತಂಡದ ನಾಯಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.[೨]ರಾಹುಲ್ ಡ್ರಾವಿಡ್ ಭಾರತೀಯ ಪ್ರಿಮಿಯರ್ ಲೀಗ್ ನ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ೨ ವರ್ಷ್ 'ಐಕಾನ್ ಆಟಗಾರ'ನಾಗಿ ಆಡಿ, ಈಗ ಜೈಪೂರದ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ರಾಹುಲ್ ದ್ರಾವಿಡ್‌ಗೆ, ೨೦೦೦ರಲ್ಲಿ, "ವಿಜಡನ್ ಕ್ರಿಕೆಟರ್"ಅಂತ ಗೌರವಿಸಲಾಗಿದೆ. [೩] . ದ್ರಾವಿಡ್‌ಗೆ, ೨೦೦೪ರಲ್ಲಿ, ವರ್ಷದ ಐಸಿಸಿ ಪ್ಲೆಯರ್ ಹಾಗೂ ವರ್ಷದ ಟೆಸ್ಟ್ ಆಟಗಾರನೆಂದೂ ಸನ್ಮಾನಿಸಲಾಗಿದೆ.[೪] . ರಾಹುಲ್ ದ್ರಾವಿಡ್, ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಕ್ಯಾಚ್ ಹಿಡಿದ ಆಟಗಾರರಾಗಿರುತ್ತಾರೆ.

೭ ಅಗಸ್ಟ್ ೨೦೧೧ ರಂದು, ಒಂದು ದಿನದ ಹಾಗೂ ಟಿ೨೦ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು.[೫]

ಪರಿವಿಡಿ

[ಬದಲಾಯಿಸಿ] ಬಾಲ್ಯ ಮತ್ತು ಕ್ರಿಕೆಟ್ ಜೀವನದ ಮೊದಲ ಘಟ್ಟಗಳು

ದ್ರಾವಿಡ್ರವರು ತಮ್ಮ ೧೨ನೇ ವಯಸ್ಸಿನಲ್ಲೇ ಕ್ರಿಕೆಟ್ ಆಡಲು ಪ್ರಾರಂಭಿಸಿದರು ಮತ್ತು ಕರ್ಣಾಟಕ ರಾಜ್ಯದ ಪರವಾಗಿ ಅಂಡರ್-೧೫, ಅಂಡರ್-೧೭, ಅಂಡರ್-೧೯ ಮಟ್ಟದ ತಂಡಗಳಲ್ಲಿ ಆಡಿದ್ದರು. ಇವರ ಪ್ರತಿಭೆಯನ್ನು ಮೊದಲು ಗುರುತಿಸಿದ್ದು ಮಾಜಿ ಕ್ರಿಕೆಟ್ ಆಟಗಾರರಾದ ಕೆಕಿ ತಾರಾಪೊರ್‌ರವರು.ತಮ್ಮ ಶಾಲೆಗೆ ಆಡಿದ ಮೊದಲನೆಯ ಪಂದ್ಯದಲ್ಲೇ ಶತಕ ಬಾರಿಸಿದ ದ್ರಾವಿಡ್, ಬ್ಯಾಟ್ಟಿಂಗ್ ಜೊತೆಗೆ ವಿಕೆಟ್ ಕೀಪಿಂಗ್ ಕೂಡ ಮಾಡುತ್ತಿದ್ದರು. ಆದರೆ ಇವರು ಮಾಜಿ ಟೆಸ್ಟ್ ಆಟಗಾರರಾದ ಗುಂಡಪ್ಪ ವಿಶ್ವನಾಥ್, ರೋಜರ್ ಬಿನ್ನಿ, ಬ್ರಿಜೇಶ್ ಪಟೇಲ್ ಮತ್ತು ತಾರಾಪೊರ್ ರವರ ಸಲಹೆಯಂತೆ ವಿಕೆಟ್ ಕೀಪಿಂಗ್ ಮಾಡುವುದನ್ನು ನಿಲ್ಲಿಸಿದರು.

[ಬದಲಾಯಿಸಿ] ಕ್ರಿಕೆಟ್

೧೯೯೬ರಿಂದ ಭಾರತ ಕ್ರಿಕೆಟ್ ತಂಡದ ಸದಸ್ಯರಾಗಿರುವ ರಾಹುಲ್ ದ್ರಾವಿಡ್ ಬಲಗೈ ಬ್ಯಾಟ್ಸ್‌ಮನ್. ಕೆಕಿ ತಾರಾಪೊರ್‌ರವರ ಬಳಿ ಅಭ್ಯಾಸ ಮಾಡಿದ ಇವರು ಬ್ಯಾಟಿಂಗ್‌ನ ಅತ್ಯುತ್ತಮ ತಾಂತ್ರಿಕತೆಗೆ ಹೆಸರುವಾಸಿ. ಔಟಾಗದೆಯೇ ತೀಕ್ಷ್ಣವಾಗಿ ಬ್ಯಾಟಿಂಗ್ ಮಾಡುವ ಇವರಿಗೆ ಸುದ್ದಿ ಮಾಧ್ಯಮದವರಿಂದ "ದ ವಾಲ್" (ಗೋಡೆ) ಎಂದೂ ಬಣ್ಣಿಸಲಾಗುತ್ತದೆ. ಇವರ ಖಾತೆಯಲ್ಲಿ ಈಗಾಗಲೆ ಟೆಸ್ಟ್ ಕ್ರಿಕೆಟ್‌ನ ೩೬ ಶತಕಗಳು (ಸರಾಸರಿ ೫೪ರಲ್ಲಿ) ಇವೆ. ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಇವರ ಸರಾಸರಿ ೩೯ (ಸ್ಟ್ರೈಕ್ ರೇಟ್ - ೬೯). ಇವರು ಆಗಿಂದಾಗ್ಗೆ ತಂಡಕ್ಕೆ ವಿಕೆಟ್ ಕೀಪಿಂಗ್ ಕೂಡ ಮಾಡುತ್ತಿದ್ದರು.

ಭಾರತ ಹಾಗೂ ಕರ್ನಾಟಕಕ್ಕೆ ಆಡುವುದಲ್ಲದೆ ದ್ರಾವಿಡ್ ಕೆಂಟ್ ಹಾಗೂ ಸ್ಕಾಟ್ಲ್ಯಾಂಡ್‌ಗೆ ಕೂಡ ಆಡಿದ್ದಾರೆ. ಇವರ ಚೊಚ್ಚಲ ಟೆಸ್ಟ್ ಇಂಗ್ಲೆಂಡ್‌ನ ಲಾರ್ಡ್ಸ್ ಮೈದಾನದಲ್ಲಿ ನಡೆದ ಭಾರತದ ೧೯೯೬ರ ಇಂಗ್ಲೆಂಡ್‌ ಪ್ರವಾಸದ ಎರಡನೆಯ ಟೆಸ್ಟ್ ಪಂದ್ಯ. ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಅದೇ ವರ್ಷ ಸಿಂಗಪೂರಿನಲ್ಲಿ ನಡೆದ ಸಿಂಗರ್ ಕಪ್‌ನ ಶ್ರೀಲಂಕಾ ವಿರುದ್ಧದ ಪಂದ್ಯದಿಂದ ಪಾದಾರ್ಪಣೆ ಮಾಡಿದರು. ವಿಸ್ಡನ್ ಸಂಸ್ಥೆಯು ಇವರನ್ನು ೨೦೦೦ನೆ ವರ್ಷದಲ್ಲಿ, ವರ್ಷದ ಕ್ರಿಕೆಟಿಗನೆಂದು ಪುರಸ್ಕರಿಸಿತು.

೨೦೦೪ ರಲ್ಲಿ ಇವರಿಗೆ ಭಾರತ ಸರಕಾರವು ಪದ್ಮಶ್ರೀ ಪ್ರಶಸ್ತಿ ಕೊಟ್ಟು ಗೌರವಿಸಿತು. ೨೦೦೪, ಸೆಪ್ಟೆಂಬರ್ ೭ರಂದು ಇವರಿಗೆ ಐಸಿಸಿಯು ವರ್ಷದ ಆಟಗಾರನೆಂದೂ, ವರ್ಷದ ಅತ್ಯುತ್ತಮ ಟೆಸ್ಟ್ ಆಟಗಾರನೆಂದೂ ಗೌರವಿಸಿತು. ೨೦೦೪ರಲ್ಲಿ ಇವರು ಭಾರತ ತಂಡದ ಉಪನಾಯಕರಾಗಿದ್ದರು. ಕೆಲವೊಮ್ಮೆ ಸೌರವ್ ಗಂಗೂಲಿ ಇಲ್ಲದಿರುವಾಗ ಭಾರತ ತಂಡದ ನಾಯಕತ್ವ ವಹಿಸಿದ್ದರು.

೨೦೦೫ರಲ್ಲಿ ಭಾರತದ ನಾಯಕತ್ವವಹಿಸಿಕೊಂಡ ಇವರು, ಶ್ರೀಲಂಕಾ ವಿರುದ್ಧ ಸರಣಿ ಜಯ ಪಡೆದು, ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಭಾರತದಲ್ಲಿ ನಡೆದ ಸರಣಿಯನ್ನು ೨-೨ರಿಂದ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು.

[ಬದಲಾಯಿಸಿ] ಪ್ರತಿನಿಧಿಸಿದ ತಂಡಗಳು

Dravid in action during a Test match

[ಬದಲಾಯಿಸಿ] ಅಂತರ್ರಾಷ್ಟ್ರೀಯ

  • ಭಾರತ
  • ಏಸಿಸಿ ಏಸಿಯಾ ‍೧೧
  • ಐಸಿಸಿ ವರ್ಡ್ಲ ೧೧
  • ಎಮ್‌ಸಿಸಿ

[ಬದಲಾಯಿಸಿ] ದೇಶಿಯ

  • ಕರ್ಣಾಟಕ
  • ಸೌಥ್ ಝೋನ್

[ಬದಲಾಯಿಸಿ] ಇಂಡಿಯನ್ ಫ್ರಿಮಿಯರ್ ಲೀಗ್

[ಬದಲಾಯಿಸಿ] ಇಂಗ್ಲೀಷ್ ಕೌಂಟಿ

  • ಕೆಂಟ್ ಕೌಂಟಿ ಕ್ರಿಕೆಟ್ ಕ್ಲಬ್
  • ಸ್ಕೌಟಿಶ್ ಕ್ರಿಕೆಟ್ ಟೀಮ್



[ಬದಲಾಯಿಸಿ] ಪ್ರಶಸ್ತಿಗಳು / ಗೌರವಗಳು

  • ೧೯೯೯: ಸಿಯೆಟ್ ಕ್ರಿಕೆಟರ್ ಆಫ್ ೧೯೯೯ ವರ್ಲ್ಡ್ ಕಪ್.
  • ೨೦೦೦: 'ವಿಸ್ಡನ್ ವರ್ಷದ ಕ್ರಿಕೆಟಿಗ' ಪ್ರಶಸ್ತಿ.
  • ೨೦೦೪: 'ಸರ್ ಗಾರ್ಫೀಲ್ಡ್ ಸೋಬರ್ಸ್' ಪ್ರಶಸ್ತಿ.( ವರ್ಷದ ಐಸಿಸಿ ಕ್ರಿಕೆಟಿಗನಿಗೆ ಕೊಡಲಾಗುತ್ತದೆ)
  • ೨೦೦೪: ಭಾರತ ಸರ್ಕಾರದ ಪದ್ಮಶ್ರಿ ಪ್ರಶಸ್ತಿ.
  • ೨೦೦೪; ವರ್ಷದ ಐಸಿಸಿ ಟೆಸ್ತ್ ಆಟಗಾರ.
  • ೨೦೦೬: ಐಸಿಸಿ ಟೆಸ್ಟ್ ತಂಡದ ನಾಯಕ.

[ಬದಲಾಯಿಸಿ] ಟೆಸ್ಟ್ ಕ್ರಿಕೆಟ್ ಪ್ರಶಸ್ತಿಗಳು

|- bgcolor="#87cefa" |}

[ಬದಲಾಯಿಸಿ] ಹೊರಗಿನ ಸಂಪರ್ಕಗಳು

[ಬದಲಾಯಿಸಿ] ಉಲ್ಲೇಖಗಳು

  1. Cricinfo - Records - India - Test matches - Most runs. ಮರುಕಳಿಸಿದ ದಿನಾಂಕ 2007-05-06.
  2. Resignation from India Cricket Captiancy. Content-usa.cricinfo.com. ಮರುಕಳಿಸಿದ ದಿನಾಂಕ 20 December 2010.
  3. Cricketer of the Year, 2000 – Rahul Dravid. Content.cricinfo.com. ಮರುಕಳಿಸಿದ ದಿನಾಂಕ 20 December 2010.
  4. ICC Awards: Look no further Dravid. Espnstar.com (5 September 2008). ಮರುಕಳಿಸಿದ ದಿನಾಂಕ 20 December 2010.
  5. Template error: argument title is required. [ಜಡ ಸಂಪರ್ಕ]


ವೈಯಕ್ತಿಕ ಉಪಕರಣಗಳು
ನಾಮವರ್ಗಗಳು
ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು