ರಾಮ ಮನೋಹರ ಲೋಹಿಯಾ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
'ರಾಮ ಮನೋಹರ ಲೋಹಿಯಾ'

ಪರಿವಿಡಿ

[ಬದಲಾಯಿಸಿ] ಜನನ ಹಾಗೂ ಬಾಲ್ಯ

ರಾಮ ಮನೋಹರ ಲೋಹಿಯಾ ಅವರು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಭಾರತೀಯ ಸಮಾಜವಾದದ ಪ್ರಮುಖ ಚಿಂತಕ. ರಾಜಕೀಯ ನಾಯಕ. ಇವರು ಮಾರ್ಚ್ ೨೩, ೧೯೧೦ ರಂದು ಉತ್ತರ ಪ್ರದೇಶ ರಾಜ್ಯದ ಫೈಜಾಬಾದ್ ಜಿಲ್ಲೆಯ 'ಅಕ್ಬರ್ ಪುರ' ಎಂಬ ಹಳ್ಳಿಯಲ್ಲಿ ಜನಿಸಿದರು.

[ಬದಲಾಯಿಸಿ] ಜೀವನ

ರಾಮ ಮನೋಹರ ಲೋಹಿಯಾ ಅವರ ತಂದೆ ಹೀರಾ ಲಾಲ್, ತಾಯಿ ಚಂದ್ರಿ. ಅವರು ವೃತ್ತಿ ಇಂದ ಶಿಕ್ಷಕರಾಗಿದ್ದರು ಮತ್ತು ರಾಷ್ಟ್ರೀಯತೆಯ ಕಿಚ್ಚನ್ನು ನಂಬಿದ್ದವರು. ರಾಮ ಚಿಕ್ಕ ವಯಸ್ಸಿನಲ್ಲಿ ಇದ್ದಾಗಲೇ ಅವರ ತಾಯಿ ಚಂದ್ರಿ ತೀರಿಕೊಂಡಿದ್ದರು. ಲೋಹಿಯಾ ಅವರನ್ನು ಅವರ ತಂದೆ ಚಿಕ್ಕ ವಯಸ್ಸಿನಲ್ಲೇ ತಾವು ತೆರಳುತ್ತಿದ್ದ ಸ್ವಾತಂತ್ರ್ಯ ಚಳುವಳಿಗಳಿಗೆ ಮತ್ತು ಸಮಾವೇಶಗಳಿಗೆ ಕರೆದುಕೊಂಡುಹೋಗುತ್ತಿದ್ದರು. ಲೋಕಮಾನ್ಯ ಬಾಲ ಗಂಗಾಧರ ತಿಲಕರು ತೀರಿಕೊಂಡಾಗ, ಲೋಹಿಯಾ ಅವರು ಒಂದು ಪುಟ್ಟ ಪ್ರತಿಭಟನೆಯನ್ನು ಮಾಡುವ ಮೂಲಕ ತಮ್ಮ ಮೊದಲ ಸ್ವಾತಂತ್ರ್ಯ ಹೋರಾಟವನ್ನು ಪ್ರಾರಂಭಿಸಿದರು.

[ಬದಲಾಯಿಸಿ] ರಾಷ್ಟ್ರಪ್ರೇಮ ಯುವವಯಸ್ಸಿನಲ್ಲಿ ಬೆಳೆಯಿತು

ತಂದೆ 'ಹೀರಾ ಲಾಲ್' ಅವರು ಮಹಾತ್ಮಾ ಗಾಂಧಿ ಅವರ ಅನುಯಾಯಿಯಾಗಿದ್ದರು. ಹೀಗಾಗಿ ಒಮ್ಮೆ ಲೋಹಿಯಾ ಅವರನ್ನು ತಮ್ಮೊಂದಿಗೆ ಗಾಂಧಿ ಅವರನ್ನು ಭೇಟಿ ಮಾಡಲು ಕರೆದುಕೊಂಡು ಹೋದರು. ಈ ಭೇಟಿಯೇ ಲೋಹಿಯಾ ಅವರಲ್ಲಿ ದೇಶಕ್ಕಾಗಿನ ಪ್ರೇಮ, ಬಲಿದಾನ ಮತ್ತು ಸ್ವರಾಜ್ ಚಿಂತನೆಯನ್ನು ಮೈಗೂಡಿಸಿಕೊಳ್ಳಲು ಸಹಾಯ ಮಾಡಿತು. ಲೋಹಿಯಾಅ ಅವರು ಗಾಧಿ ಇಂದ ಎಷ್ಟು ಪ್ರಭಾವಿತರಾದರೆಂದರೆ, ಮಹಾತ್ಮಾರ ತತ್ವಗಳನ್ನು ಪಾಲಿಸಲು ಪ್ರಾರಂಭಿಸಿದರು. ಲೋಹಿಯಾ ಅವರು ತಮ್ಮ ೧೦ನೇ ವಯಸ್ಸಿನಲ್ಲಿಯೇ ಸತ್ಯಾಗ್ರಹ ಚಳುವಳಿಗೆ ಸೇರ್ಪಡೆಯಾದರು.

[ಬದಲಾಯಿಸಿ] ರಾಜಕೀಯದಲ್ಲಿ ಪ್ರವೇಶ

ಲೋಹಿಯಾ ಅವರು ಜವಹರಲಾಲ್ ನೆಹರೂಅವರನ್ನು ೧೯೨೧ನೇ ಇಸವಿಯಲ್ಲಿ ಭೇಟಿಯಾದರು. ಕೆಲವೇ ವರ್ಷಗಳಲ್ಲಿ ಇಬ್ಬರೂ ಆಪ್ತ ಸ್ನೇಹಿತರಾದರು. ಇಷ್ಟು ಒಳ್ಳೆಯ ಸ್ನೇಹಿತರಾದರೂ ನೆಹರೂ ಅವರು ತೆಗೆದುಕೊಳ್ಳುತ್ತಿದ್ದ ಕೆಲವು ನಿರ್ಣಯಗಳು ಮತ್ತು ರಾಜಕೀಯ ನಂಬಿಕೆಗಳ ಕುರಿತು ತಮ್ಮ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದರು. ೧೯೨೮ರಲ್ಲಿ ಸಿಮನ್ ಕಮೀಷನ್ನಿನ ವಿರುದ್ಧ ವಿದ್ಯಾರಥಿ ಪ್ರತಿಭ್ಟನೆಯನ್ನು ಹಮ್ಮಿಕೊಂಡರು. ಸಿಮನ್ ಕಮೀಷನ್ನು ಭಾರತಕ್ಕೆ ಸ್ವಾಮಿತ್ವ (dominion status) ನೀಡುವ ಕುರಿತು ಭಾರತೀಯ ಜನರ ಅಭಿಲಷೆಗಳನ್ನು ಕೇಳದೆ ಮುಂದೆ ಹೊರಟಿತ್ತು.

[ಬದಲಾಯಿಸಿ] ವಿದ್ಯಾಭ್ಯಾಸ

ಲೋಹಿಯಾ ಅವರು ಮೆಟ್ರಿಕ್ ನಲ್ಲಿ ತಮ್ಮ ಶಾಲೆಗೇ ಮೊದಲ ಸ್ಥಾನದಲ್ಲಿ ವರ್ಗವಾಗಿ, ನಂತರ ಬನಾರಸ್ ಹಿಂದು ವಿಶ್ವವಿದ್ಯಾಲಯದಲ್ಲಿ ಇಂಟರ್ ಮೀಡಿಯೇಟ್ ಕೋರ್ಸಿಗೆ ಸೇರಿದರು. ೧೯೨೯ರಲ್ಲಿ ಬಿ.ಎ. ಪದವಿಯನ್ನು ಕೋಲ್ಕತ್ತ ವಿಶ್ವವಿದ್ಯಾಲಯದಲ್ಲಿ ಮುಗಿಸಿದರು. ಇವರು ಬ್ರಿಟೀಷ್ ತತ್ವ ಶಾಸ್ತ್ರವನ್ನು ನಂಬುತ್ತಿರಲಿಲ್ಲ. ಹೀಗಾಗಿ ತಮ್ಮ ಅಭಿಪ್ರಾಯಗಳನ್ನು ಸಮರ್ಪಕವಾಗಿ ಮುಂದಿಡಲು ಜರ್ಮನಿಯ ಬರ್ಲಿನ್ ವಿಶ್ವವಿದ್ಯಾಲಯಕ್ಕೆ ಸೇರಿಕೊಂಡರು. ಬಹು ಬೇಗನೆ ಜರ್ಮನ್ ಭಾಷೆಯನ್ನು ಕಲಿತು, ತಮ್ಮ ಅಪ್ರತಿಮ ಸಾಧನೆಗಾಗಿ ಹಣ ಸಹಾಯವನ್ನೂ ಪಡೆದರು. ಇಲ್ಲಿ ಉಪ್ಪಿನ ಸತ್ಯಾಗ್ರಹ ಕುರಿತು ಪ್ರೌಢ ಪ್ರಬಂಧ ಬರೆದು, ಅರ್ಥಶಾಸ್ತ್ರದಲ್ಲಿ ಪಿ.ಎಚ್.ಡಿ ಗಳಿಸಿದರು. ಜರ್ಮನ್ ಭಾಷೆಯಲ್ಲೇ ಮಾರ್ಕ್ಸ್ ಮತ್ತು ಹೆಗೆಲ್ ರಕೃತಿಗಳನ್ನು ಅಭ್ಯಸಿಸಿ ಅವರಿಗಿಂತ ಭಿನ್ನವಾಗಿ ಚರಿತ್ರೆಯನ್ನು ಅರಿಯುವ ಅಗತ್ಯವನ್ನು ಕುರಿತು ಚಿಂತಿಸಿದರು.

[ಬದಲಾಯಿಸಿ] ಸ್ವಾತಂತ್ರ್ಯ ಹೋರಾಟಗಾರರಾಗಿ

ಐರೋಪ್ಯ ರಾಷ್ಟ್ರದಲ್ಲಿದ್ದಾಗ, ಲೋಹಿಯಾ ಅವರು 'ಲೀಗ್ ಆಫ್ ನೇಷನ್ಸ್ ಅಸೆಂಬ್ಲಿ'ಯನ್ನು ಜಿನೀವಾದಲ್ಲಿ ಭಾಗವಹಿಸಿದ್ದರು. ೧೯೩೪ ರಲ್ಲಿ ಕಾಂಗ್ರೆಸ್ ಸಮಾಜವಾದಿ ಪಕ್ಷದ ಸ್ಥಾಪನೆಗಾಗಿ ದುಡಿದರು. ೧೯೩೬-೩೮ ರ ವರೆಗೆ ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ವಿದೇಶಾಂಗ ವ್ಯವಹಾರ ವಿಭಾಗದ ಕಾರ್ಯದರ್ಶಿಯಾಗಿದ್ದರು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಅನೇಕ ಬಾರಿ ಕಾರಾಗೃಹ ವಾಸವನ್ನು ಅನುಭವಿಸಿದರು. ೧೯೪೨ ರ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಆಂದೋಳನದಲ್ಲಿ ಭೂಗತ ಹೋರಾಟ ಮುಂದುವರೆಸಿದರು. ೧೯೪೬ ರ ಜೂನ್ ೬ ರಂದು ಗೋವಾ ಸ್ವಾತಂತ್ರ್ಯ ಹೋರಾಟದಲ್ಲಿ ಬಂಧನಕ್ಕೊಳಗಾಗಿದ್ದರು. ಗಾಂಧಿಯವರ ಆರಾಧಕರಂತೆ ಅವರ ಟೀಕೆಯನ್ನು ಮಾಡುತ್ತಿದ್ದರು. ಸ್ವಾತಂತ್ರ್ಯೋತ್ತರದ ಭಾರತದ ನೆಹರೂ ಯುಗದ ಕಟು ಟೀಕಾಕಾರರಾಗಿದ್ದರು. ಅಲ್ಲದೆ ಕಾಂಗ್ರೆಸ್ ವಿರೋಧಿವಾದದ ಪ್ರತಿಪಾದಕರಾಗಿದ್ದರು. ೧೯೫೨ ರಲ್ಲಿ ಪ್ರಜಾಸಮಾಜವಾದಿ ಪಕ್ಷದ ಸ್ಥಾಪಕರಾಗಿದ್ದ ಅವರು, ನೆಹರೂ ವಿರುದ್ಧ ಲೋಕಸಭೆಗೆ ಸ್ಪರ್ಧಿಸಿ ಸೋತರು. ೧೯೬೩ ರ ಚುನಾವಣೆಯಲ್ಲಿ ’ಫರೂಕಾಬಾದ್’ ಲೋಕಸಭಾಕ್ಷೇತ್ರದಿಂದ ಆಯ್ಕೆಯಾಗಿಬಂದರು. ೧೯೬೭ ರಲ್ಲಿ ’ಕನೌಜ್’ ಕ್ಷೇತ್ರದಿಂದ ಜಯಗಳಿಸಿದರು. ಒಳ್ಳೆಯ ಲೇಖಕರು.

[ಬದಲಾಯಿಸಿ] ಅನೇಕ ನಿಯತಕಾಲಿಕಗಳ ಸಂಪಾದಕರಾಗಿದ್ದರು

  • ಮ್ಯಾನ್ ಕೈಂಡ್ (ಇಂಗ್ಲೀಷ್)
  • ಚೌಕಂಭಾ (ಹಿಂದಿ)

[ಬದಲಾಯಿಸಿ] ಇಂಗ್ಲೀಷ್ ಕೃತಿಗಳು

  • The Cast system
  • Marks Gandhi and Socialism
  • Guilty men of India's partision
  • Interval during Palitics
  • Language
  • Rupees 25,000/-
  • A Day
  • Note and Comments

[ಬದಲಾಯಿಸಿ] ಹಿಂದಿಯಲ್ಲಿ ಬರೆದ ಮುಖ್ಯ-ಕೃತಿಗಳು

  • ಸಮಜವಾದಿ ಅಂದೊಳನ್ ಕ ಇತಿಹಾಸ್
  • ಹಿಂದು ಮುಸಲ್ಮಾನ್
  • ಅನ್ನ ಸಮಸ್ಯ
  • ಆಝಾದ್ ಹಿಂದೂಸ್ಥಾನ್ ಕ ನಯೀ ರುಜುಹಾನ್

[ಬದಲಾಯಿಸಿ] ನಿಧನ

ರಾಮ ಮನೋಹರ ಲೋಹಿಯಾರವರು, ಅವಿವಾಹಿತರಾಗಿದ್ದರು. ೧೯೬೭ ರ ಅಕ್ಟೋಬರ್, ೧೨ ರಂದು ಕಾಲವಶರಾದರು.

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು