ರಾಮಕೃಷ್ಣ ಮಿಷನ್
ಶ್ರೀ ರಾಮಕೃಷ್ಣ ಮಠ ಮತ್ತು ಮಿಶನ್ ರಾಮಕೃಷ್ಣ ಪರಮಹಂಸರ ಶಿಷ್ಯ ಮತ್ತು ಧಾರ್ಮಿಕ ಗುರು ಸ್ವಾಮಿ ವಿವೇಕಾನಂದರು ಮೇ ೧, ೧೮೯೭ರಲ್ಲಿ 'ರಾಮಕೃಷ್ಣ ಮಿಶನ್ ಅಸೋಷಿಯೇಶನ್' ಎಂಬ ಹೆಸರಿನಲ್ಲಿ ಸ್ಥಾಪಿಸಿದ ಹಿಂದೂ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆ. 'ಆತ್ಮನೋ ಮೋಕ್ಷಾರ್ಥಮ್ ಜಗದ್ ಹಿತಾಯ ಚ' ಎಂಬ ಧ್ಯೇಯವಾಕ್ಯವನ್ನು ಹೊಂದಿರುವ ಈ ಸಂಸ್ಥೆಯು ಶ್ರೀರಾಮಕೃಷ್ಣ ಪರಮಹಂಸರು ತಮ್ಮ ಆಧ್ಯಾತ್ಮಿಕ ಅನುಭವಗಳಿಂದ ಬೋಧಿಸಿದ ವೇದಾಂತದ ತಳಹದಿಯ ಮೇಲೆ ಸ್ಥಾಪಿತವಾಯಿತು. ರಾಮಕೃಷ್ಣ ಮಠ (ಬಂಗಾಳಿ: রামকৃষ্ণ মঠ) ಮತ್ತು ರಾಮಕೃಷ್ಣ ಮಿಷನ್ (ಬಂಗಾಳಿ: রামকৃষ্ণ মিশন) ಅವಳಿ ಸಂಘಟನೆಗಳು ವಿಶ್ವದಾದ್ಯಂತ ಆಧ್ಯಾತ್ಮಿಕ ನಡೆಯುತ್ತಿರುವ ರಾಮಕೃಷ್ಣ ಚಳವಳಿ ಅಥವಾ ವೇದಾಂತ ಚಳವಳಿಯ ತಿರುಳುಭಾಗವಾಗಿ ದೆ.
ರಾಮಕೃಷ್ಣ ಮಿಷನ್ ಮೇ 1, 1897 ರಂದು ಶ್ರೀ ರಾಮಕೃಷ್ಣರ ಮುಖ್ಯ ಅನುಯಾಯಿ ಸ್ವಾಮಿ ವಿವೇಕಾನಂದರು ಸ್ಥಾಪಿಸಿದ ಲೋಕೋಪಯೋಗಿ, ಸ್ವಯಂಸೇವಕ ಸಂಸ್ಥೆ.
ಬರ ಪರಿಹಾರ, ನೆರೆಸಂತ್ರಸ್ತರ ಸಹಾಯ, ಗ್ರಾಮೀಣ ಜನರಿಗೆ ಶಿಕ್ಷಣ, ಆರೋಗ್ಯ ಸೇವೆಯೆ, ಗ್ರಾಮೀಣ ನಿರ್ವಹಣೆ, ಬುಡಕಟ್ಟು ಕಲ್ಯಾಣ, ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮೊದಲಾದ ಜನಸೇವಾ ಕಾರ್ಯಕ್ರಮಗಳನ್ನು ಈ ಸಂಸ್ಥೆಯ ವಿವಿಧ ಶಾಖೆಗಳು ನಿರ್ವಹಿಸುತ್ತವೆ. ಧಾರ್ಮಿಕ ಸಾಹಿತ್ಯ ಪ್ರಕಟಣೆ, ಶೀಲ ಸಂವರ್ಧನ ಶಿಬಿರಗಳು, ಪ್ರವಚನ ಮುಂತಾದವುಗಳ ಮೂಲಕ ಜನರ ಆಧ್ಯಾತ್ಮಿಕ ಅವಶ್ಯಕತೆಗಳನ್ನು ಇದು ಪೂರೈಸುತ್ತಿದೆ. ಇದರ ಪ್ರಧಾನ ಕಛೇರಿಯ ಅಸ್ತಿತ್ವ ಹೌರಾ ದ ಬೇಲೂರು ಮಠ, ಕೋಲ್ಕತಾ, ಭಾರತದಲ್ಲಿದೆ. ಭಾರತದ ಸನಾತನ ಹಿಂದೂ ಧರ್ಮ ಮತ್ತು ವೇದಾಂತ ಆಧಾರ ಸ್ತಂಭಗಳು.
ಮುನ್ನುಡಿ [ಬದಲಾಯಿಸಿ]
ರಾಮಕೃಷ್ಣ ಮಹಾಸಂಘದ ಕಾರ್ಯಕ್ರಮಗಳನ್ನು ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ತನ್ನ ಕಾರ್ಯಭಾರದಲ್ಲಿ ನಿರ್ವಹಿಸುತ್ತದೆ, 19 ನೇ ಶತಮಾನದ ಸಂತರಾದ ಶ್ರೀರಾಮಕೃಷ್ಣ ಪರಮಹಂಸ ರ ಪ್ರಭಾವ ಮತ್ತು ಅವರ ಮುಖ್ಯ ಅನುಯಾಯಿ ಸ್ವಾಮಿ ವಿವೇಕಾನಂದರು ರೂಪಿಸಿದ ಒಂದು ಸಾಮಾಜಿಕ -ಧಾರ್ಮಿಕ ಕ್ಷೇತ್ರದ ಎರಡು ಪ್ರಮುಖ ಸಂಸ್ಥೆಗಳು. [3]
ಕರ್ನಾಟಕದಲ್ಲಿ ರಾಮಕೃಷ್ಣ ಮಠ [ಬದಲಾಯಿಸಿ]
ಕರ್ನಾಟಕದಲ್ಲಿ ರಾಮಕೃಷ್ಣ ಮಠದ ಶಾಖೆಗಳು ಕೆಳಕಂಡಲ್ಲಿವೆ:
ಆಶ್ರಮವು ಮುಖ್ಯವಾಗಿ ಪುಸ್ತಕ ಪ್ರಕಟಣೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಸುಮಾರು ೭೫ ವರ್ಷಗಳಿಗೂ ದೀರ್ಘವಾದ ಇತಿಹಾಸವಿರುವ ಈ ಸಂಸ್ಥೆಯು ಕನ್ನಡ ಆಧ್ಯಾತ್ಮಿಕ ಸಾಹಿತ್ಯಕ್ಕೆ ಸಲ್ಲಿಸಿರುವ ಸೇವೆ ಅಪಾರ. ಮಠವು ಬಾಲಕರಿಗಾಗಿ 'ಶ್ರೀರಾಮಕೃಷ್ಣ ವಿದ್ಯಾಶಾಲೆ' ಎಂಬ ಆವಾಸಿಕ ಪದವೀಪೂರ್ವ ಮಧ್ಯಮಿಕ ಶಾಲೆಯನ್ನು ನಡೆಸುತ್ತಿದೆ. 'ವೇದಾಂತ ಕಾಲೇಜು' ಎಂಬ ಪುರುಷರ ಬಿ.ಎಡ್. ಕಾಲೇಜನ್ನೂ ಇದು ನಡೆಸುತ್ತದೆ. ಸುತ್ತಮುತ್ತಲ ಹಳ್ಳಿಗಳಲ್ಲಿ, ಮುಖ್ಯವಾಗಿ ಬಿಳಿಗಿರಿರಂಗನ ಬೆಟ್ಟ, ಹೆಗ್ಗಡದೇವನ ಕೋಟೆ ಮೊದಲಾದ ಸ್ಥಳಗಳಲ್ಲಿ ಗಿರಿಜನ ಕಲ್ಯಾಣಕೇಂದ್ರಗಳನ್ನು ನಡೆಸುತ್ತಿದೆ. 'ವಿವೇಕ ಪ್ರಭ' ಆಶ್ರಮದಿಂದ ಪ್ರಕಟಗೊಳ್ಳುವ ಸಾಂಸ್ಕೃತಿಕ ಮಾಸಪತ್ರಿಕೆ. ಸ್ವಾಮಿ ನಿತ್ಯಸ್ಥಾನಂದರು ಆಶ್ರಮದ ಈಗಿನ ಅಧ್ಯಕ್ಷರು.
ಶತಮಾನ ಕಂಡ ಬೆಂಗಳೂರು ಆಶ್ರಮ ಬಸವನಗುಡಿಯಲ್ಲಿದೆ. ಕನ್ನಡ ಮತ್ತು ಇಂಗ್ಲೀಶ್ ಭಾಷೆಗಳೆರಡರಲ್ಲೂ ಪುಸ್ತಕ ಪ್ರಕಟಿಸುವ ಈ ಸಂಸ್ಥೆ ಪ್ರಸಿದ್ಧವಾಗಿದೆ.ಬಾಲಕರಿಗಾಗಿ 'ವಿದ್ಯಾರ್ಥಿ ಮಂದಿರ' ಎಂಬ ಹಾಸ್ಟೆಲ್ ನ್ನು ಇದು ನಡೆಸುತ್ತಿದೆ. ಬೆಂಗಳೂರಿನ ಹತ್ತಿರವಿರುವ ಶಿವನಹಳ್ಳಿ ಮೊದಲಾದ ಹಳ್ಳಿಗಳಲ್ಲಿ ಹಲವಾರು ಸಮಾಜಕಲ್ಯಾಣ ಕಾರ್ಯಗಳನ್ನು ಕೈಗೊಂಡಿದೆ. ಸಂಸ್ಕೃತದಲ್ಲಿ ಪಾಂಡಿತ್ಯವನ್ನು ಹೊಂದಿರುವ, ಸ್ವಾಮಿ ಹರ್ಷಾನಂದರು ಆಶ್ರಮದ ಈಗಿನ ಅಧ್ಯಕ್ಷರು. ಕನ್ನಡ ಮತ್ತು ಇಂಗ್ಲೀಷಿನಲ್ಲಿ ಹಲವಾರು ಪುಸ್ತಕಗಳನ್ನು ಇವರು ಬರೆದಿದ್ದಾರೆ.
- ಬೆಂಗಳೂರು (ಹಲಸೂರು)
ಇದು ಬೆಂಗಳೂರಿನಲ್ಲಿರುವ ಇನ್ನೊಂದು ಆಶ್ರಮ. ಹಲವಾರು ಕಾರ್ಯಾಗಾರಗಳನ್ನು, ಶೀಲಸಂವರ್ಧನಾ ಶಿಬಿರಗಳನ್ನು ಇದು ನಡೆಸುತ್ತಿದೆ. ಬಡಜನರಿಗಾಗಿ ಸಂಚಾರಿ ಅಸ್ಪತ್ರೆಯ ಮೂಲಕ ಆರೋಗ್ಯ ಸೇವೆಯನ್ನು ಒದಗಿಸುತ್ತಿದೆ. ಸ್ವಾಮಿ ವೀತಭಯಾನಂದರು ಆಶ್ರಮದ ಈಗಿನ ಅಧ್ಯಕ್ಷರು.
- ಪೊನ್ನಂಪೇಟೆ
ಕೊಡಗಿನ ಪ್ರಶಾಂತ ವಾತಾವರಣದಲ್ಲಿರುವ ಈ ಸುಂದರವಾದ ಆಶ್ರಮ, 'ರಾಮಕೃಷ್ಣ ಸೇವಾಶ್ರಮ' ಎಂಬ ಸುಸಜ್ಜಿತ ಆಧುನಿಕ ಆಸ್ಪತ್ರೆಯ ಮೂಲಕ ಆರೋಗ್ಯಸೇವೆಯನ್ನು ಒದಗಿಸುತ್ತಿದೆ. 'ಬದುಕಲು ಕಲೆಯಿರಿ' ಖ್ಯಾತಿಯ ಸ್ವಾಮಿ ಜಗದಾತ್ಮಾನಂದರು ಆಶ್ರಮದ ಅಧ್ಯಕ್ಷರು.
ಅನಾಥಾಶ್ರಮ ಮತ್ತು ಬಡ ವಿದ್ಯಾರ್ಥಿಗಳಿಗೆ ತನ್ನ ಹಾಸ್ಟೆಲ್ ಮೂಲಕ ಸೇವೆಯನ್ನು ಒದಗಿಸುತ್ತಿದೆ. ಸ್ವಾಮಿ ಪೂರ್ಣಕಾಮಾನಂದರು ಆಶ್ರಮದ ಈಗಿನ ಅಧ್ಯಕ್ಷರು.
ಇತ್ತೀಚಿಗೆ ಆರಂಭಗೊಂಡ ಈ ಆಶ್ರಮವು ಉತ್ತರ ಕರ್ನಾಟಕದ ಬಹುದಿನಗಳ ಬೇಡಿಕೆಯನ್ನು ಪೂರ್ಣಗೊಳಿಸಿದೆ. ಹಲವಾರು ಯೋಜನೆಗಳನ್ನು ಶೀಘ್ರದಲ್ಲೆ ಜಾರಿಗೊಳಿಸಲು ನಿರ್ಧರಿಸಿರುವ ಈ ಅಶ್ರಮವು, ಈಗ ಪುಸ್ತಕ ಪ್ರಕಟಣೆ, ಪ್ರವಚನ, ಶಿಬಿರಗಳ ಮುಖಾಂತರ ಜನರ ಸೇವೆಯನ್ನು ಮಾಡುತ್ತಿದೆ. ಸ್ವಾಮಿ ರಾಘವೆಶಾನಂದರು ಆಶ್ರಮದ ಮುಖ್ಯಸ್ಥರು.