ರಾಬಿನ್ ಸಿಂಗ್
ವಿಕಿಪೀಡಿಯ ಇಂದ
| ರಾಬಿನ್ ಸಿಂಗ್ | ||||
| ವೈಯುಕ್ತಿಕ ಮಾಹಿತಿ | ||||
|---|---|---|---|---|
| ಬ್ಯಾಟಿಂಗ್ ಶೈಲಿ | Left-hand bat | |||
| ಬೌಲಿಂಗ್ ಶೈಲಿ | Right-arm medium-fast | |||
| ವೃತ್ತಿಜೀವನದ ಅಂಕಿಅಂಶಗಳು | ||||
| ಟೆಸ್ಟುಗಳು | ಏಕ ದಿನ ಅಂತರರಾಷ್ಟ್ರೀಯಗಳು | |||
| ಪಂದ್ಯಗಳು | 1 | 136 | ||
| ಒಟ್ಟು ರನ್ನುಗಳು | 27 | 2336 | ||
| ಬ್ಯಾಟಿಂಗ್ ಸರಾಸರಿ | 13.50 | 25.95 | ||
| ೧೦೦/೫೦ | -/- | 1/9 | ||
| ಅತೀ ಹೆಚ್ಚು ರನ್ನುಗಳು | 15 | 100 | ||
| ಬೌಲ್ ಮಾಡಿದ ಚೆಂಡುಗಳು | 60 | 3734 | ||
| ವಿಕೆಟ್ಗಳು | - | 69 | ||
| ಬೌಲಿಂಗ್ ಸರಾಸರಿ | - | 43.26 | ||
| ೫ ವಿಕೆಟುಗಳು ಇನ್ನಿಂಗ್ಸ್ನಲ್ಲಿ | - | 2 | ||
| ೧೦ ವಿಕೆಟುಗಳು ಪಂದ್ಯದಲ್ಲಿ | - | n/a | ||
| ಶ್ರೇಷ್ಠ ಬೌಲಿಂಗ್ | - | 5/22 | ||
| ಕ್ಯಾಚುಗಳು /ಸ್ಟಂಪಿಂಗ್‍ಗಳು | 5/- | 33/- | ||
|
ದಿನಾಂಕ ಫೆಬ್ರುವರಿ ೬, ೨೦೦೬ ವರೆಗೆ. |
||||
(ಜನನ: ಸೆಪ್ಟೆಂಬರ್ ೧೪ ೧೯೬೩) ಭಾರತದ ಮಾಜಿ ಕ್ರಿಕೆಟ್ ಆಟಗಾರ. ಭಾರತದ ಕ್ರಿಕೆಟ್ ತಂಡದ ಮಾಜಿ ಸದಸ್ಯ ರಾಬಿನ್ ಸಿಂಗ್ ರವರ ತೊಟ್ಟಿಲ ಹೆಸರು, ರಬೀಂದ್ರ ರಾಮನಾರಾಯಣ ಸಿಂಗ್ ಎಂದು. ಅವರು ಚಿಕ್ಕವಯಸ್ಸಿನಲ್ಲೇ ಭಾರತಕ್ಕೆ ಬಂದು ೧೯೮೧-೮೨ ರಸಾಲಿನಲ್ಲಿ ತಮಿಳುನಾಡಿನ ಪರವಾಗಿ ಆಟವಾಡಿದ್ದರು. ೧೩೬ ಒಂದು ದಿನದ ಆಟದಲ್ಲಿ ಪಾಲ್ಗೊಂಡ ರಾಬಿನ್ ಸಿಂಗ್, ಒಬ್ಬ 'ಅತ್ಯುತ್ತಮ ಫೀಲ್ಡರ್' ಎಂದು ಹೆಸರುಮಾಡಿದ್ದಾರೆ.
ಜನನ [ಬದಲಾಯಿಸಿ]
ಭಾರತೀಯ ಮೂಲದ ಕೆರೆಬಿಯನ್ ದ್ವೀಪದ ಟ್ರೆನಿಡಾಡ್ ಮತ್ತು ಟೊಬೇಗೋ ದೇಶದಲ್ಲಿ ಜನಿಸಿದರು. ೧೯೮೯ ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಡುವ ಮೂಲಕ 'ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ'ಕ್ಕೆ ಪಾದಾರ್ಪಣೆಮಾಡಿದ ಅವರು ಕೆಲವು ಸಮಯ ವೈಯಕ್ತಿಕ ಕಾರಣಗಳಿಂದಾಗಿ ಆಟದಿಂದ ಹೊರಗಿದ್ದರು.
ನಿವೃತ್ತಿ [ಬದಲಾಯಿಸಿ]
ಸನ್, ೨೦೦೪ ರಲ್ಲಿ ಕ್ರಿಕೆಟ್ ಆಟದಿಂದ ನಿವೃತ್ತಿ ಪಡೆದಿದ್ದಾರೆ.