ರಂಗನತಿಟ್ಟು ಪಕ್ಷಿಧಾಮ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಒ೦ದು ಬಣ್ಣದ ಕೊಕ್ಕರೆಯ ಚಿತ್ರ

ರ೦ಗನತಿಟ್ಟು ಪಕ್ಷಿಧಾಮ (Ranganthittu Bird Sanctuary) ಇದನ್ನು ಕರ್ನಾಟಕದ ಪಕ್ಷಿಕಾಶಿ ಎ೦ದೂ ಕರೆಯುತ್ತಾರೆ.[೧] ಇದು ಕರ್ನಾಟಕ ರಾಜ್ಯದ, ಮಂಡ್ಯ ಜಿಲ್ಲೆಯಲ್ಲಿದ್ದು ರಾಜ್ಯದ ಅತಿದೊಡ್ಡ ಪಕ್ಷಿಧಾಮವಾಗಿದೆ.[೨] ಕೇವಲ 0.67 ಚದುರ ಕಿಲೋಮೀಟರ್ ವಿಸ್ತೀರ್ಣದ  ಅಂದರೆ ಸುಮಾರು 40 ಎಕರೆ ವಿಸ್ತೀರ್ಣದ [೩] ಈ ಧಾಮ ಕಾವೇರಿ ನದಿಯ ಆರು ಚಿಕ್ಕ ದ್ವೀಪ ಸಮೂಹಗಳನ್ನೊಳಗೊ೦ಡಿದೆ. .[೪] ರ೦ಗನತಿಟ್ಟು ಚರಿತ್ರಾಳ ಪಟ್ಟಣವಾದ ಶ್ರೀರ೦ಗಪಟ್ಟಣದಿ೦ದ ಮೂರು ಕಿ.ಮೀ ದೂರದಲ್ಲಿ ಮೈಸೂರಿನಿಂದ ೧೬ ಕಿ.ಮಿ ಉತ್ತರದಲ್ಲಿದೆ [೫] 2011-12 ನೇ ಸಾಲಿನಲ್ಲಿ 2.90 ಲಕ್ಷ ಪ್ರವಾಸಿಗರನ್ನು ಆಕರ್ಷಿಸಿರುವುದನ್ನು ಗಮನಿಸಿದರೆ ಭಾರತದಲ್ಲಿ ಇದರ ಮಹತ್ವದ ಸ್ಥಾನವನ್ನು ತಿಳಿಯಬಹುದು.[೬]

ಧಾಮದ ಇತಿಹಾಸ[ಬದಲಾಯಿಸಿ]

ಬೆಳ್ಳಕ್ಕಿ
ಬಕಪಕ್ಷಿ

1648 ರಲ್ಲಿ ಆಗಿನ ಮೈಸೂರು ಸ೦ಸ್ಥಾನದ ಅರಸರಾದ ಕ೦ಟೀರವ ನರಸಿ೦ಹರಾಜ ಒಡೆಯರ್ ಅವರು ಕಾವೇರಿ ನದಿಗೆ ಅಡ್ಡಲಾಗಿ ಒಡ್ಡನ್ನು ಕಟ್ಟಿಸಿದಾಗ ಈ ದ್ವೀಪಗಳು ಅಸ್ಥಿತ್ವಕ್ಕೆ ಬ೦ದವು.[೭] 1940ರಲ್ಲಿ ಪಕ್ಷಿವಿಜ್ಞಾನ ತಜ್ಞರಾದ ಶ್ರೀ ಸಲೀ೦ ಅಲಿ ಅವರು ಈ ದ್ವೀಪ ಸಮೂಹಗಳು ಪಕ್ಷಿಗಳು ಗೂಡು ಕಟ್ಟಲು ಉತ್ತಮ ತಾಣವಾಗಿರುವದನ್ನು ಗಮನಿಸಿ ಮೈಸೂರು ಸ೦ಸ್ಥಾನದ ಆಗಿನ ರಾಜರಾದ ಒಡೆಯರ್ ಅವರನ್ನು ಈ ದ್ವೀಪಸಮೂಹಗಳನ್ನು ಅಭಯಧಾಮವೆ೦ದು ಘೋಷಿಸಲು ಮನಒಲಿಸಿದರು.[೫] ಕರ್ನಾಟಕ ರಾಜ್ಯದ ಅರಣ್ಯ ಇಲಾಖೆಯು ಈ ಪಕ್ಷಿಧಾಮದ ನಿರ್ವಹಣೆಯ ಜವಾಬ್ಧಾರಿಯನ್ನು ವಹಿಸಿದೆ ಅಲ್ಲದೆ ಇದರ ಪ್ರಗತಿಯ ದಿಟ್ಟಿನಲ್ಲಿ ಸುತ್ತಲಿನ ಖಾಸಗಿ ಭೂಪ್ರದೇಶಗಳನ್ನು ಕೊ೦ಡು ಕೊ೦ಡು, ಈ ಪಕ್ಷಿಧಾಮವನ್ನು ವಿಸ್ತರಿಸಿ, ರಕ್ಷಿಸಿ ಇದರ ಅಭಿವೃದ್ಧಿಗೂ ಪ್ರಯತ್ನಿಸುತ್ತಿದೆ.[೩]

ಪ್ರವಾಹ[ಬದಲಾಯಿಸಿ]

ಮಳೆಗಾಲದಲ್ಲಿ, ಹತ್ತಿರದ ಕೃಷ್ಣರಾಜಸಾಗರ ಅಣೆಕಟ್ಟಿನಿ೦ದ ಅಧಿಕ ನೀರನ್ನು ಹೊರಬಿಟ್ಟಾಗ ಈ ದ್ವೀಪಸಮೂಹಗಳಿಗೆ ಅತಿಯಾದ ಪ್ರವಾಹದ ಭೀತಿಯಿರುತ್ತದೆ.[೭] ಅತಿಯಾದ ಪ್ರವಾಹವಿದ್ದಾಗ ಪ್ರವಾಸಿಗರನ್ನು ದೋಣಿಗಳ ಮೂಲಕ ಕರೆದೊಯ್ಯುವುದನ್ನು ನಿಶೇಧಿಸಲಾಗುತ್ತದೆ.[೭] ಕೇವಲ ದೂರದಿ೦ದಲೇ ಪಕ್ಷಿಗಳು ಗೂಡುಕಟ್ಟುವುದನ್ನು ವೀಕ್ಷಿಸಲು ಅನುಮತಿ ನೀಡಲಾಗುತ್ತದೆ. ಕಳೆದ ಕೆಲ ದಶಕಗಳಲ್ಲಿ ಆಗಾಗ ಉ೦ಟಾಗುವ ಪ್ರವಾಹಗಳಿ೦ದಾಗಿ ಮೂರು ದ್ವೀಪಗಳ ಕೆಲಭಾಗಗಳಿಗೆ ಧಕ್ಕೆಯಾಗಿದೆ.[೮]

ಧಾಮದ ನೈಸರ್ಗಿಕ ಇತಿಹಾಸ[ಬದಲಾಯಿಸಿ]

ಭೌಗೋಳ ಹಾಗು ಪರಿಸರ[ಬದಲಾಯಿಸಿ]

ಈ ಧಾಮದ ಬಹುಪಾಲು ಇಂಡೋಮಲಯ ಪರಿಸರ ವಲಯ ದಡಿಯ ರಿಪಾರಿಯನ್ ( en:Riparian ) ಬಯೋಮ್ ನಡಿ ಬರುತ್ತದೆ.

ಸಸ್ಯ ಸಂಪತ್ತು[ಬದಲಾಯಿಸಿ]

ದ್ವೀಪಗಳ ನದೀ ತೀರದಲ್ಲಿ ಜೊಂಡು ಸಸ್ಯಗಳು ಆವೃತವಾಗಿವೆ. ದ್ವೀಪದ ಒಳಗೆ ಅಗಲವಾದ ಎಲೆಗಳ ಜಾತಿಯ ಸಸ್ಯಗಳು, ಅರ್ಜುನ-ಮರಗಳು ( ಟೆರ್ಮಿನೇಲಿಯಾ Terminalia ಅರ್ಜುನ್), ಬಿದುರಿನ ಗುಂಪು ಸಸ್ಯಗಳು ಮತ್ತು ಪಂಡನು ಮರಗಳಿವೆ. ಮೂಲ ಜಾತಿಯ ಮರಗಳಲ್ಲದ ನೀಲಗಿರಿ ಮತ್ತು ಜಾಲಿ ಜಾತಿ ಗಿಡಗಳನ್ನೂ ನೆಡಲಾಗಿದ್ದು, ಇವು ಇದೇ ಪ್ರದೇಶದ ಮೂಲ ಜಾತಿಯ ಸಸ್ಯಗಳ ಅವನತಿಗೆ ದಾರಿಮಾಡಿಕೊಡಬಹುದಾಗಿದೆ. ಇಫಿಗ್ನಿಯ ಮೈಸೊರೆನಿಸಿಸ್ (en:Iphigenia mysorensis) ಜಾತಿಯ ನೈದಿಲೆ ಗಳೂ ಈ ಅಭಯಧಾಮದಲ್ಲಿ ಬೆಳೆಯುತ್ತವೆ.

ಹಕ್ಕಿಗಳು[ಬದಲಾಯಿಸಿ]

ಮಿಂಚುಳ್ಳಿ (ಎಡ: ಗಂಡು. ಬಲ: ಹೆಣ್ಣು)

ಹಲವು ವರ್ಷಗಳ ದಾಖಲೆಯ ಪ್ರಕಾರ ಸುಮಾರು 170ಕ್ಕೂ [೯] ಹೆಚ್ಚಿನ ಬಗೆಯ ಪಕ್ಷಿಗಳು ಇಲ್ಲಿ ಕಂಡುಬಂದಿವೆ. ಬಣ್ಣದ ಕೊಕ್ಕರೆ (en:Painted Stork), ಚಮಚದ ಕೊಕ್ಕುಗಳು ( en:Common Spoonbill), ಕರಿ ಕೆಂಬರಲು ( en:Black-headed Ibis), ಶಿಳ್ಳೆ ಬಾತುಕೋಳು ( en:Lesser Whistling Duck), ಉದ್ದ ಕೊಕ್ಕಿನ ನೀರುಕಾಗೆ ( en:Indian Shag), ಹೆಮ್ಮಿಂಚುಳ್ಳಿ (en:Stork-billed Kingfisher) ನಂತಹ ವಿಶೇಷ ಪಕ್ಷಿಗಳು ಮತ್ತು ಬೆಳ್ಳಕ್ಕಿ (en:egret) ನೀರುಕಾಗೆ (en:cormorant), ಹಾವಕ್ಕಿ (en:Oriental Darter), ಬಕ ಪಕ್ಷಿಗಳು (en:herons) ಈ ಪ್ರದೇಶದಲ್ಲಿ ಗೂಡು ಕಟ್ಟಿ ಮರಿಮಾಡಿ ಪೊಷಿಸುತ್ತವೆ. The park is home to a large flock of ಕಿರುಗತ್ತಿನ ಕವಲು ತೋಕೆ (en:Streak-throated Swallows)ಗಳೇ ಅಲ್ಲದೆ ಇನ್ನೂ ಹಲವು ಬಗೆಯ ಹಿಂದು ಪಕ್ಷಿಗಳಿಗೆ ಈ ಉದ್ಯಾನವನ ಮನೆಯಾಗಿದೆ. .[೫] ಜನವರಿ ಮತ್ತು ಫಿಬ್ರವರಿ ತಿಂಗಳುಗಳಲ್ಲಿ ಸುಮಾರು 30 ಜಾತಿ ಪಕ್ಷಿಗಳು ಕಾಣಸಿಗುತ್ತವೆ. ಈ ಅಭಯಧಾಮದ ಋತು ನವೆಂಬರ್ ನಿಂದ ಜೂನ್ ವರೆಗಾಗಿದೆ.[೧೦] ಈ ಸಮಯದಲ್ಲಿ ಸುಮಾರು 50 ಬಗೆಯ ಹೆಜ್ಜಾರ್ಲೆಗಳು (pelicans) ರಂಗನತಿಟ್ಟು ಪಕ್ಷಿಧಾಮವನ್ನು ತಮ್ಮ ಶಾಶ್ವತ ಮನೆಯನ್ನಾಗಿಸಿಕೊಂಡಿವೆ.[೮]

ಗಣನೆ[ಬದಲಾಯಿಸಿ]

ಚಳಿಗಾಲದ ತಿಂಗಳ ದಿನಗಳಲ್ಲಿ ಮಧ್ಯ ಡಿಸೆಂಬರ್ ನಿಂದ ಪ್ರಾರಂಭಿಸಿ ಕೆಲ ಋತುಗಳಲ್ಲಿ 40,000 ರಷ್ಟು ಪಕ್ಷಿಗಳು ಗುಂಪುಗಳಾಗಿ ಬರುತ್ತವೆ. ಕೆಲ ಪಕ್ಷಿಗಳು ಸೈಬೀರಿಯಾದಿಂದ, ಲ್ಯಾಟಿನ್ ಅಮೆರಿಕಾದಿಂದ ಮತ್ತು ಉತ್ತರ ಭಾರತದ ಕೆಲ ಭಾಗಗಳಿಂದ ಈ ಪಕ್ಷಿಧಾಮಕ್ಕೆ ಗುಂಪು ಗುಂಪುಗಳಾಗಿ ಬರುತ್ತವೆ.[೧೧] ರಂಗನತಿಟ್ಟು ಪಕ್ಷಿಗಳಿಗೆ ಒಂದು ಪ್ರಸಿದ್ಧ ಗೂಡು ಕಟ್ಟುವ ತಾಣವಾಗಿದೆ, ಮತ್ತು 2011 ವರ್ಷದಲ್ಲಿ ಸುಮಾರು 8,000 ಮರಿಹಕ್ಕಿಗಳನ್ನು ಜೂನ್ ತಿಂಗಳಿನಲ್ಲಿ ಕಾಣಲಾಗಿದೆ.[೧೨]

ಪ್ರಾಣಿಗಳು[ಬದಲಾಯಿಸಿ]

ಈ ದ್ವೀಪವು ಹಲವಾರು ಚಿಕ್ಕ ಚಿಕ್ಕ ಸಸ್ತನಿಗಳಿಗೂ ಆವಾಸ ಸ್ಥಾನವಾಗಿದೆ.ಇದರಲ್ಲಿ ಕೋತಿಗಳು ಬಾನೆಟ್ ಮಕಾಕ್ (en:Bonnet Macaque) ಗುಂಪುಗಳು, ಪುನುಗು ಬೆಕ್ಕುಗಳು ಮತ್ತು ಹಿರಿ ಪಲ್ಲಿಗಳು ಸೇರಿವೆ. ಜೌಗು ಪ್ರದೇಶದ ಜೊಂಡಿನ ಮೊಸಳೆಗಳು ಈ ಪ್ರದೇಶದ ಸಾಮಾನ್ಯ ನಿವಾಸಿಗಳಾಗಿವೆ. ಕರ್ನಾಟಕ ರಾಜ್ಯದಲ್ಲಿಯೇ ರಂಗನತಿಟ್ಟು ಪ್ರದೇಶವು ಅತಿಹೆಚ್ಚು ಸಿಹಿನೀರಿನ ಮೊಸಳೆಗಳ ಸಂಖ್ಯೆಯನ್ನು ಹೊಂದಿದೆ.[೧೩]

ಚಟುವಟಿಕೆಗಳು[ಬದಲಾಯಿಸಿ]

ದಿನಪೂರ್ತಿ ಅರಣ್ಯಾಧಿಕಾರಿಗಳ ಮಾರ್ಗದರ್ಶನದಲ್ಲಿ ಈ ದ್ವೀಪಗಳಲ್ಲಿ ದೋಣಿ ಪ್ರವಾಸಗಳು ನಡೆಯುತ್ತವೆ. ಈ ಪ್ರವಾಸದಲ್ಲಿ ಪಕ್ಷಿಗಳನ್ನು, ಮೊಸಳೆಗಳನ್ನು, ನೀರು ನಾಯಿಗಳನ್ನು ಮತ್ತು ಬಾವಲಿಗಳನ್ನು ವೀಕ್ಷಿಸಬಹುದಾಗಿದೆ. ಈ ಚಿಕ್ಕ ಪಕ್ಷಿಧಾಮದಲ್ಲಿ ಪ್ರವಾಸಿಗರಿಗೆ ವಸತಿ ಸೌಲಭ್ಯವಿರುವುದಿಲ್ಲ. ಪ್ರವಾಸಿಗರು ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ ಉಳಿದುಕೊಳ್ಳಬೇಕಾಗುತ್ತದೆ. ಜೂನ್ ನಿಂದ ನವೆಂಬರ ಇಲ್ಲಿ ಹಲವು ಪಕ್ಷಿಗಳು ಸಂತಾನ ಅಭಿವೃರಿದ್ಧಿ ಪ್ರಕ್ರಿಯೆಯಲ್ಲಿ ತೊಡಗುವ ಕಾರಣ ಇದುಎ ಉದ್ಯಾನವನ್ನು ಸಂದರ್ಶಿಸಲು ಸೂಕ್ತ ಕಾಲ ವಾಗಿದೆ. ವಲಸೆ ಬರುವ ಪಕ್ಷಿಗಳನ್ನು ವೀಕ್ಷಿಸಲು ಸಾಮಾನ್ಯವಾಗಿ ಡಿಸೆಂಬರ್ ತಿಂಗಳು ಸೂಕ್ತವಾಗಿದೆ. ಆದರೂ ಈ ಅವಧಿ ವರ್ಷದಿಂದ ವರ್ಷಕ್ಕೆ ಬದಲಾಗಬಹುದಾಗಿದೆ.

ಸಂದರ್ಶನದ ಅವಧಿ ಬೆಳಗ್ಗೆ 8:30 ರಿಂದ ಸಂಜೆ 6:00 ರವರೆಗೆ. ಭಾರತೀಯರಿಗೆ ಪ್ರವೇಶ ಶುಲ್ಕ ರೂ 50.00 ಮತ್ತು ವಿದೇಶಿಯರಿಗೆ ರೂ 300.00 ಆಗಿದೆ.

ವಿಶೇಷ ಆಸಕ್ತ ತಂಡಗಳಿಗೆ ಅರಣ್ಯ ಇಲಾಖೆಯ ವತಿಯಿಂದ ನಿರ್ವಹಿಸಲ್ಪಡುತ್ತಿರುವ ಸಲೀಂ ಆಲಿ ಅನುವಾದಕ ಕೇಂದ್ರದಲ್ಲಿ 45 ನಿಮಿಷಗಳ ಕಾಲದ ಮಾಹಿತಿ ಚಿತ್ರ ಪ್ರದರ್ಶನದ ವೀಕ್ಷಣಾ ಸುಲ್ಭ್ಯವಿದೆ.[೮]

ಮೂಲಗಳು[ಬದಲಾಯಿಸಿ]

 1. "From Here and There". Deccan Herald. ತೆರೆದುನೋಡಿದ್ದು 23 November 2010. 
 2. "Karnataka News : Rs. 1 crore sanctioned for developing Bonal Bird Sanctuary near Surpur". The Hindu. 2011-01-08. ತೆರೆದುನೋಡಿದ್ದು 2012-12-05. 
 3. ೩.೦ ೩.೧ Shiva Kumar, M T (9 June 2012). "Creating more space for the birds". The Hindu. ತೆರೆದುನೋಡಿದ್ದು 19 February 2013. 
 4. "Ranganathittu Bird Sanctuary". 
 5. ೫.೦ ೫.೧ ೫.೨ "Ranganathittu Bird Sanctuary". The Hindu (Chennai, India). 25 September 2006. ತೆರೆದುನೋಡಿದ್ದು 23 November 2010. 
 6. "Birds seem to favour Ranganathittu". The Hindu. 10 April 2012. ತೆರೆದುನೋಡಿದ್ದು 19 February 2013. 
 7. ೭.೦ ೭.೧ ೭.೨ "Heavy rainfall causes flooding in Ranganathittu bird sanctuary". The Hindu. 25 October 2005. ತೆರೆದುನೋಡಿದ್ದು 19 February 2013. 
 8. ೮.೦ ೮.೧ ೮.೨ R, Krishna Kumar (4 May 2009). "Ranganathittu gets a new look". The Hindu. ತೆರೆದುನೋಡಿದ್ದು 19 February 2013. 
 9. http://www.mysorenature.org/mandya-sector/ranganathittu-bird-sanctuary/bird-checklist
 10. "Ranganathittu reports record revenue". The Hindu. 9 January 2012. ತೆರೆದುನೋಡಿದ್ದು 19 February 2013. 
 11. M.T., Shiva Kumar (28 January 2013). "Ranganathittu comes alive with winged beauties". The Hindu. ತೆರೆದುನೋಡಿದ್ದು 19 February 2013. 
 12. DHNS (10 June 2011). "8,000 nestlings sighted at Ranganathittu". Deccan Herald. ತೆರೆದುನೋಡಿದ್ದು 19 February 2013. 
 13. TNN. "Sanctuary crocs fear extinction". The Times of India mobile edition. ತೆರೆದುನೋಡಿದ್ದು 19 February 2013. 

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಟೆಂಪ್ಲೇಟು:Bird Sanctuaries