ಯೋಜನಾ ಧನಸಹಾಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯೋಜನಾ ಧನಸಹಾಯ ಎಂಬುದು ಮೂಲಭೂತ ಸೌಕರ್ಯ ಮತ್ತು ಕೈಗಾರಿಕಾ ಯೋಜನೆಗಳಿಗೆ ಮಾಡಲಾಗುವ ದೀರ್ಘಾವಧಿ ಧನಸಹಾಯ ಮಾಡುವಿಕೆಯಾಗಿದೆ; ಸದರಿ ಧನಸಹಾಯದ ಸಂದರ್ಭದಲ್ಲಿ ಯೋಜನೆಯ ಪ್ರಾಯೋಜಕರ ಆಯವ್ಯಯ ಪಟ್ಟಿಗಳಿಗಿಂತ ಮಿಗಿಲಾಗಿ ಮುನ್ನಂದಾಜು ಮಾಡಲ್ಪಟ್ಟ ಯೋಜನೆಯ ನಗದು ಹರಿವುಗಳನ್ನು ಆಧಾರವಾಗಿ ಪರಿಗಣಿಸಲಾಗುತ್ತದೆ. ಪ್ರಾಯೋಜಕರು ಎಂದು ಕರೆಯಲ್ಪಡುವ ಅನೇಕ ಇಕ್ವಿಟಿ ಹೂಡಿಕೆದಾರರನ್ನು ಮಾತ್ರವೇ ಅಲ್ಲದೇ, ಸದರಿ ಕಾರ್ಯಾಚರಣೆಗೆ ಸಾಲಗಳನ್ನು ಒದಗಿಸುಸುವ ಬ್ಯಾಂಕುಗಳ ಒಂದು ಒಕ್ಕೂಟ ವನ್ನು ಧನಸಹಾಯ ಮಾಡುವಿಕೆಯ ಒಂದು ಯೋಜನೆಯ ರಚನಾ ಸ್ವರೂಪವು ಸಾಮಾನ್ಯವಾಗಿ ಒಳಗೊಳ್ಳುತ್ತದೆ. ಈ ಸಾಲಗಳು ಅತಿ ಸಾಮಾನ್ಯವಾಗಿ ಅವಲಂಬಿಸದ ಸಾಲಗಳಾಗಿದ್ದು , ಇವು ಯೋಜನೆಯ ಪ್ರಾಯೋಜಕರ ಸಾಮಾನ್ಯ ಸ್ವತ್ತುಗಳು ಅಥವಾ ಸಾಲಯೋಗ್ಯತೆಯಿಂದ ಆಗುವುದಕ್ಕೆ ಬದಲಾಗಿ, ಯೋಜನೆಯ ಸ್ವತ್ತುಗಳಿಂದ ಖಾತರಿಗೊಳಿಸಿಕೊಂಡ ಹಾಗೂ ಯೋಜನೆಯ ನಗದು ಹರಿವಿನಿಂದ ಸಂಪೂರ್ಣವಾಗಿ ಪಾವತಿಸಲ್ಪಟ್ಟ ಸಾಲಗಳಾಗಿರುತ್ತವೆ; ಹಣಕಾಸಿನ ಮಾದರಿ ರೂಪಿಸುವಿಕೆಯು ಈ ತೀರ್ಮಾನಕ್ಕೆ ಭಾಗಶಃ ಬೆಂಬಲವನ್ನು ನೀಡುತ್ತದೆ.[೧] ಆದಾಯ-ಉತ್ಪಾದಿಸುವ ಒಪ್ಪಂದಗಳನ್ನು ಒಳಗೊಂಡಂತೆ, ಧನಸಹಾಯ ಮಾಡುವಿಕೆಗೆ ವಿಶಿಷ್ಟವೆಂಬಂತೆ ಯೋಜನೆಯ ಎಲ್ಲಾ ಸ್ವತ್ತುಗಳಿಂದ ಖಾತರಿಯು ಸಿಕ್ಕಿರುತ್ತದೆ. ಯೋಜನೆಗೆ ಸಾಲ ನೀಡುವವರಿಗೆ ಈ ಎಲ್ಲಾ ಸ್ವತ್ತುಗಳ ಮೇಲೆ ಒಂದು ಭೋಗ್ಯದ ಹಕ್ಕನ್ನು ನೀಡಲಾಗುತ್ತದೆ, ಮತ್ತು ಒಂದು ವೇಳೆ ಸಾಲದ ಷರತ್ತುಗಳನ್ನು ಅನುಸರಿಸುವಲ್ಲಿ ಅಥವಾ ಅದನ್ನು ಅನುವರ್ತಿಸಿ ಸಾಗುವಲ್ಲಿ, ಯೋಜನೆಗೆ ಸಂಬಂಧಿಸಿದ ಕಂಪನಿಯು ತೊಡಕುಗಳನ್ನೇನಾದರೂ ಹೊಂದಿದಲ್ಲಿ ಅಥವಾ ಎದುರಿಸಿದಲ್ಲಿ, ಯೋಜನೆಯೊಂದರ ನಿಯಂತ್ರಣವನ್ನು ವಹಿಸಿಕೊಳ್ಳುವಲ್ಲಿ ಯೋಜನೆಗೆ ಸಾಲ ನೀಡುವವರು ಸಮರ್ಥರಾಗಿರುತ್ತಾರೆ.

ಸಾಮಾನ್ಯವಾಗಿ, ಪ್ರತಿ ಯೋಜನೆಗೂ ಒಂದು ವಿಶೇಷ ಉದ್ದೇಶದ ಅಧಿಕಾರದ ಅಸ್ತಿತ್ವವನ್ನು ಸೃಷ್ಟಿಸಲಾಗುತ್ತದೆ; ಹೀಗೆ ಮಾಡುವುದರಿಂದ, ಓರ್ವ ಯೋಜನಾ ಪ್ರಾಯೋಜಕ ಸಂಸ್ಥೆಯು ಹೊಂದಿರುವ ಇತರ ಸ್ವತ್ತುಗಳನ್ನು ಯೋಜನಾ ವೈಫಲ್ಯವೊಂದರಿಂದಾಗಿ ಸಂಭವಿಸಬಹುದಾದ ಅಪಾಯಕರ ಪರಿಣಾಮಗಳಿಂದ ರಕ್ಷಿಸಲು ಸಾಧ್ಯವಾಗುತ್ತದೆ. ಒಂದು ವಿಶೇಷ ಉದ್ದೇಶದ ಅಧಿಕಾರದ ಅಸ್ತಿತ್ವವಾಗಿ ಯೋಜನಾ ಕಂಪನಿಯು, ಯೋಜನೆಯನ್ನು ಹೊರತುಪಡಿಸಿದ ಬೇರಾವುದೇ ಸ್ವತ್ತುಗಳನ್ನು ಹೊಂದಿರುವುದಿಲ್ಲ. ಯೋಜನೆಯು ಹಣಕಾಸಿನ ವಿಚಾರದಲ್ಲಿ ಸದೃಢವಾಗಿದೆ ಎಂಬುದನ್ನು ಖಾತ್ರಿಪಡಿಸಲು, ಯೋಜನಾ ಕಂಪನಿಯ ಮಾಲೀಕರಿಂದ ಅಭಿವ್ಯಕ್ತಿಸಲ್ಪಡುವ ಬಂಡವಾಳದ ಕೊಡುಗೆಯ ಬದ್ಧತೆಗಳು ಕೆಲವೊಮ್ಮೆ ಅವಶ್ಯಕವಾಗಿರುತ್ತವೆ. ಧನಸಹಾಯ ಮಾಡುವಿಕೆಯ ಪರ್ಯಾಯ ವಿಧಾನಗಳಿಗಿಂತ, ಯೋಜನಾ ಧನಸಹಾಯವು ಅನೇಕ ವೇಳೆ ಹೆಚ್ಚು ಸಂಕೀರ್ಣಗೊಳಿಸಲ್ಪಟ್ಟಿರುತ್ತದೆ. ಸಾಂಪ್ರದಾಯಿಕವಾಗಿ ಹೇಳುವುದಾದರೆ, ಯೋಜನಾ ಧನಸಹಾಯ ಮಾಡುವಿಕೆಯನ್ನು ಗಣಿಗಾರಿಕೆ, ಸಾರಿಗೆ, ದೂರಸಂಪರ್ಕ ಮತ್ತು ಸಾರ್ವಜನಿಕ ಉಪಯೋಗದ ಉದ್ಯಮಗಳಲ್ಲಿ ಅತ್ಯಂತ ಸಾಮಾನ್ಯವಾಗಿ ಮಾಡಿಕೊಂಡು ಬರಲಾಗಿದೆ. ತೀರಾ ಇತ್ತೀಚೆಗೆ, ಅದರಲ್ಲೂ ನಿರ್ದಿಷ್ಟವಾಗಿ ಯುರೋಪ್‌ನಲ್ಲಿ‌, ಯೋಜನೆಯ ಧನಸಹಾಯ ಮಾಡುವಿಕೆಯ ತತ್ತ್ವಗಳನ್ನು ಸಾರ್ವಜನಿಕ–ಖಾಸಗಿ ಪಾಲುದಾರಿಕೆಗಳ (ಪಬ್ಲಿಕ್‌-ಪ್ರೈವೇಟ್‌ ಪಾರ್ಟ್‌ನರ್‌ಷಿಪ್‌-PPP) ಅಡಿಯಲ್ಲಿನ ಸಾರ್ವಜನಿಕ ಮೂಲಭೂತ ಸೌಕರ್ಯಕ್ಕೆ ಅನ್ವಯಿಸಲಾಗಿದೆ ಅಥವಾ UKಯಲ್ಲಿ, ಖಾಸಗಿ ಧನಸಹಾಯದ ಉಪಕ್ರಮದ (ಪ್ರೈವೇಟ್‌ ಫೈನಾನ್ಸ್‌ ಇನಿಷಿಯೆಟಿವ್‌-PFI) ವ್ಯವಹಾರ ನಿರ್ವಹಣೆಗಳಿಗೆ ಅನ್ವಯಿಸಲಾಗಿದೆ.

ಅಪಾಯದ ಗುರುತಿಸುವಿಕೆ ಮತ್ತು ಹಂಚಿಕೆ ಎಂಬುದು ಯೋಜನಾ ಧನಸಹಾಯದ ಪ್ರಮುಖ ಅಂಗಭಾಗವಾಗಿದೆ. ಹಲವಾರು ತಾಂತ್ರಿಕ, ಪರಿಸರೀಯ, ಆರ್ಥಿಕ ಮತ್ತು ರಾಜಕೀಯ ಅಪಾಯಗಳಿಗೆ ಯೋಜನೆಯೊಂದು ಈಡಾಗಬಹುದು; ನಿರ್ದಿಷ್ಟವಾಗಿ ಹೇಳುವುದಾದರೆ, ಅಭಿವೃದ್ಧಿಶೀಲ ದೇಶಗಳು ಮತ್ತು ಅವಿರ್ಭವಿಸುತ್ತಿರುವ ಮಾರುಕಟ್ಟೆಗಳಲ್ಲಿ ಇದು ಗಮನಾರ್ಹವಾಗಿ ಕಂಡುಬರುತ್ತದೆ. ಯೋಜನೆಯ ಅಭಿವೃದ್ಧಿ ಮತ್ತು ಕಾರ್ಯಾಚರಣೆಯಲ್ಲಿ ಅಂತರ್ಗತವಾಗಿರುವ ಅಪಾಯಗಳು ಒಪ್ಪಲಾಗದ (ಧನಸಹಾಯ ಮಾಡಲಾಗದ) ಸ್ಥಿತಿಯಲ್ಲಿವೆ ಎಂಬುದಾಗಿ ಹಣಕಾಸಿನ ಸಂಸ್ಥೆಗಳು ಮತ್ತು ಯೋಜನಾ ಪ್ರಾಯೋಜಕರು ತೀರ್ಮಾನಿಸಬಹುದಾಗಿದೆ. ಈ ಅಪಾಯಗಳನ್ನು ನಿಭಾಯಿಸುವ ಸಲುವಾಗಿ, ಈ ಉದ್ಯಮಗಳಲ್ಲಿನ (ವಿದ್ಯುತ್‌ ಸ್ಥಾವರಗಳು ಅಥವಾ ರೈಲುಮಾರ್ಗಗಳಂಥವು) ಯೋಜನಾ ನಿರ್ವಹಣೆಯ ಹೊಣೆಗಾರಿಕೆಗಳನ್ನು ಹಲವಾರು ವಿಶೇಷಜ್ಞ ಕಂಪನಿಗಳ ನೆರವಿನಿಂದ ಸಾಮಾನ್ಯವಾಗಿ ಸಂಪೂರ್ಣಗೊಳಿಸಲಾಗುತ್ತದೆ; ಯೋಜನೆಗೆ ಧನಸಹಾಯವು ಒದಗಿಬರುವುದಕ್ಕೆ ಅನುವುಮಾಡಿಕೊಡುವಂತೆ, ಅಪಾಯವನ್ನು ಹಂಚಿಕೊಳ್ಳುವ ರೀತಿಯಲ್ಲಿ ಪರಸ್ಪರ ಒಂದು ಒಪ್ಪಂದದ ಜಾಲದಲ್ಲಿ ಈ ವಿಶೇಷಜ್ಞ ಕಂಪನಿಗಳು ಕಾರ್ಯನಿರ್ವಹಿಸುತ್ತಿರುತ್ತವೆ.[೨] ಕಾರ್ಯಗತಗೊಳಿಸುವಿಕೆಯ ವಿಭಿನ್ನ ಮಾದರಿಗಳನ್ನು ಕೆಲವೊಮ್ಮೆ "ಯೋಜನೆಯ ವಿತರಣಾ ವಿಧಾನಗಳು" ಎಂದು ಉಲ್ಲೇಖಿಸಲಾಗುತ್ತದೆ. ಈ ಯೋಜನೆಗಳಿಗಾಗಿ ಮಾಡಲಾಗುವ ಧನಸಹಾಯವನ್ನು ಅನೇಕ ಸಹಭಾಗಿಗಳ ನಡುವೆಯೂ ವಿತರಿಸಬೇಕಾಗುತ್ತದೆ; ಹೀಗೆ ಮಾಡುವುದರಿಂದ ಸದರಿ ಯೋಜನೆಯಲ್ಲಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬ ಸಹಭಾಗಿಗೂ ಯೋಜನೆಯೊಂದಿಗೆ ಸಂಬಂಧಿಸಿದ ಅಪಾಯವನ್ನು ವಿತರಿಸುವುದರ ಜೊತೆಗೆ, ಏಕಕಾಲಿಕವಾಗಿ ಲಾಭಗಳನ್ನೂ ಖಾತ್ರಿಪಡಿಸಿದಂತಾಗುತ್ತದೆ.

ಒಂದು ಅಪಾಯಕರವಾದ ಅಥವಾ ಹೆಚ್ಚು ವೆಚ್ಚದಾಯಕವಾದ ಯೋಜನೆಗೆ, ಪ್ರಾಯೋಜಕರಿಂದ ನೀಡಲ್ಪಟ್ಟ ಒಂದು ಜಾಮೀನಿನಿಂದ ಖಾತರಿಗೊಳಿಸಿಕೊಂಡ ಅವಲಂಬಿತ ಸೀಮಿತ ಧನಸಹಾಯ ಮಾಡುವಿಕೆ ಯ ಅಗತ್ಯವು ಕಂಡುಬರಬಹುದು. ಹಂಚಿಕೆಯಾಗದ ಅಪಾಯವನ್ನು ತಗ್ಗಿಸುವ ಸಲುವಾಗಿ, ಯೋಜನಾ ಧನಸಹಾಯದ ಒಂದು ಸಂಕೀರ್ಣ ರಚನಾ ಸ್ವರೂಪವು ಸಾಂಸ್ಥಿಕ ಧನಸಹಾಯ, ವ್ಯವಸ್ಥಿತ ರಚನೆಯ ಧನಸಹಾಯ, ಹಣಕೊಟ್ಟು ಪಡೆದ ಹಕ್ಕುಗಳು, ವಿಮೆಯ ಮುನ್ನೇರ್ಪಾಡುಗಳು ಮತ್ತು ಮೇಲಾಧಾರ ವರ್ಧನೆಯ ಇತರ ಬಗೆಗಳನ್ನು ಸಂಯೋಜಿಸಬಹುದು.[೨]

ಕಡಲಿಗೆ ಸಂಬಂಧಿಸಿದ ಧನಸಹಾಯ ಮತ್ತು ವಿಮಾನ ಸಂಬಂಧಿ ಧನಸಹಾಯಕ್ಕೆ ಸಂಬಂಧಿಸಿದಂತೆ ಯೋಜನಾ ಧನಸಹಾಯವು ಅನೇಕ ವಿಶಿಷ್ಟ ಲಕ್ಷಣಗಳನ್ನು ಹಂಚುತ್ತದೆ; ಆದಾಗ್ಯೂ, ಕೊನೆಯ ಎರಡು ಕ್ಷೇತ್ರಗಳು ವಿಶಿಷ್ಟವಾಗಿಸಲ್ಪಟ್ಟ ಕ್ಷೇತ್ರಗಳಾಗಿವೆ.

ಮೂಲಭೂತ ರೂಪರೇಖೆ[ಬದಲಾಯಿಸಿ]

ಚಿತ್ರ:Project finance.png
ಕಾಲ್ಪನಿಕ ಯೋಜನಾ ಧನಸಹಾಯದ ರೂಪರೇಖೆ

ಆಕ್ಮೆ ಕೋಲ್‌ ಕಂಪನಿಯು ಕಲ್ಲಿದ್ದಲನ್ನು ಆಮದುಮಾಡಿಕೊಳ್ಳುತ್ತದೆ. ಎನರ್ಜೆನ್‌ ಇಂಕ್‌ ಕಂಪನಿಯು ಬಳಕೆದಾರರಿಗೆ ವಿದ್ಯುತ್‌‌ ಪೂರೈಕೆ ಮಾಡುತ್ತದೆ. ತಂತಮ್ಮ ಗುರಿಗಳನ್ನು ನೆರವೇರಿಸಿಕೊಳ್ಳುವ ದೃಷ್ಟಿಯಿಂದ ಈ ಎರಡು ಕಂಪನಿಗಳು ಒಂದು ವಿದ್ಯುತ್‌ ಸ್ಥಾವರವನ್ನು ನಿರ್ಮಿಸಲು ಒಪ್ಪುತ್ತವೆ. ವಿಶಿಷ್ಟವೆಂಬಂತೆ, ಎರಡೂ ಸಹಭಾಗಿಗಳ ಆಶಯಗಳ ರೂಪರೇಖೆಗಳನ್ನು ನಿರ್ದೇಶಿಸಲು, ಒಡಂಬಡಿಕೆಯ ಷರತ್ತುಪತ್ರವೊಂದಕ್ಕೆ ಸಹಿಹಾಕುವುದು ಮೊದಲ ಹಂತವಾಗಿರುತ್ತದೆ. ಇದನ್ನು ಅನುಸರಿಸಿಕೊಂಡು, ಒಂದು ಜಂಟಿ ಉದ್ಯಮವನ್ನು ರೂಪಿಸುವುದಕ್ಕೆ ಸಂಬಂಧಿಸಿದ ಒಂದು ಒಪ್ಪಂದವು ರೂಪುಗೊಳ್ಳುತ್ತದೆ.

ಪವರ್‌ ಹೋಲ್ಡಿಂಗ್ಸ್‌ ಇಂಕ್‌ ಎಂಬ ಹೆಸರಿನ ಒಂದು ವಿಶೇಷ ಉದ್ದೇಶದ ಸಂಸ್ಥೆಯನ್ನು (ಸ್ಪೆಷಲ್‌ ಪರ್ಪಸ್‌ ಕಾರ್ಪೊರೇಷನ್‌-SPC) ಆಕ್ಮೆ ಕೋಲ್‌‌ ಮತ್ತು ಎನರ್ಜೆನ್‌ ಕಂಪನಿಗಳು ರೂಪಿಸುತ್ತವೆ ಮತ್ತು ಈ ಸಂಸ್ಥೆಯಲ್ಲಿನ ತಂತಮ್ಮ ಕೊಡುಗೆಗಳಿಗೆ ಅನುಸಾರವಾಗಿ ತಮ್ಮ ನಡುವೆ ಷೇರುಗಳನ್ನು ವಿಭಜಿಸಿಕೊಳ್ಳುತ್ತವೆ. ಹೆಚ್ಚಿನ ರೀತಿಯಲ್ಲಿ ಸುಸ್ಥಾಪಿತ ಕಂಪನಿಯಾಗಿರುವ ಆಕ್ಮೆ ಕೋಲ್‌‌, ಹೆಚ್ಚು ಬಂಡವಾಳದ ಕೊಡುಗೆ ನೀಡುತ್ತದೆ ಮತ್ತು 70%ನಷ್ಟು ಷೇರುಗಳನ್ನು ತೆಗೆದುಕೊಳ್ಳುತ್ತದೆ. ಎನರ್ಜೆನ್‌ ಒಂದು ಚಿಕ್ಕದಾದ ಕಂಪನಿಯಾಗಿರುವುದರಿಂದ, ಉಳಿದಿರುವ 30%ನಷ್ಟು ಪಾಲನ್ನು ತನ್ನದಾಗಿಸಿಕೊಳ್ಳುತ್ತದೆ. ಈ ಹೊಸ ಕಂಪನಿಯು ಯಾವುದೇ ಸ್ವತ್ತುಗಳನ್ನು ಹೊಂದಿರುವುದಿಲ್ಲ.

ನಂತರದಲ್ಲಿ, ಒಂದು ವಿದ್ಯುತ್‌ ಸ್ಥಾವರವನ್ನು ನಿರ್ಮಿಸುವ ಸಲುವಾಗಿ, ಆಕ್ಮೆ ಕನ್ಸ್‌ಟ್ರಕ್ಷನ್‌ ಕಂಪನಿಯೊಂದಿಗೆ ಪವರ್‌ ಹೋಲ್ಡಿಂಗ್ಸ್‌ ಕಂಪನಿಯು ಒಂದು ನಿರ್ಮಾಣ ಒಪ್ಪಂದಕ್ಕೆ ಸಹಿಹಾಕುತ್ತದೆ. ಆಕ್ಮೆ ಕನ್ಸ್‌ಟ್ರಕ್ಷನ್‌ ಕಂಪನಿಯು ಆಕ್ಮೆ ಕೋಲ್‌ನ ಒಂದು ಅಂಗಸಂಸ್ಥೆಯಾಗಿದೆ, ಮತ್ತು ಆಕ್ಮೆಯ ವಿತರಣಾ ತಪಸೀಲು ಪಟ್ಟಿಯ ಅನುಸಾರವಾಗಿ ಒಂದು ವಿದ್ಯುತ್‌ ಸ್ಥಾವರವನ್ನು ನಿರ್ಮಿಸಲು ಅಗತ್ಯವಾಗಿರುವ ಪ್ರಾಯೋಗಿಕ ಜ್ಞಾನ ಅಥವಾ ತಾಂತ್ರಿಕ-ಪರಿಣತಿಯನ್ನು ಹೊಂದಿರುವ ಏಕೈಕ ಕಂಪನಿಯಾಗಿದೆ.

ವಿದ್ಯುತ್‌ ಸ್ಥಾವರವೊಂದರ ನಿರ್ಮಾಣಕ್ಕೆ ನೂರಾರು ದಶಲಕ್ಷ ಡಾಲರುಗಳಷ್ಟು ಹಣವು ವೆಚ್ಚವಾಗಲು ಸಾಧ್ಯವಿರುತ್ತದೆ. ಆಕ್ಮೆ ಕನ್ಸ್‌ಟ್ರಕ್ಷನ್‌ಗೆ ಪಾವತಿಸುವ ಸಲುವಾಗಿ, ಒಂದು ಅಭಿವೃದ್ಧಿ ಬ್ಯಾಂಕು ಮತ್ತು ಒಂದು ವಾಣಿಜ್ಯ ಬ್ಯಾಂಕಿನಿಂದ ಪವರ್‌ ಹೋಲ್ಡಿಂಗ್ಸ್‌‌ ಧನಸಹಾಯವನ್ನು ಸ್ವೀಕರಿಸುತ್ತದೆ. ನಿರ್ಮಾಣದ ಸಂಪೂರ್ಣಗೊಳ್ಳುವಿಕೆಗೆ ಸಂಬಂಧಿಸಿದಂತೆ ಆಕ್ಮೆ ಕನ್ಸ್‌ಟ್ರಕ್ಷನ್‌‌ ಕಂಪನಿಯು ಪಾವತಿಸಬಲ್ಲದು ಎಂಬುದಾಗಿ ಈ ಬ್ಯಾಂಕುಗಳು ಆಕ್ಮೆ ಕನ್ಸ್‌ಟ್ರಕ್ಷನ್‌ನ ಬಂಡವಾಳಗಾರ ಸಂಸ್ಥೆಗೆ ಒಂದು ಖಾತರಿಯನ್ನು ಒದಗಿಸುತ್ತವೆ. ನಿರ್ಮಾಣಕ್ಕೆ ಸಂಬಂಧಿಸಿದ ಪಾವತಿಯನ್ನು ಸಾಮಾನ್ಯವಾಗಿ ಈ ರೀತಿ ಮಾಡಲಾಗುತ್ತದೆ: 10% ಮುಂಪಾವತಿ, ನಿರ್ಮಾಣ ಸಾಗುತ್ತಿರುವಾಗ ಮಧ್ಯಮಾರ್ಗದಲ್ಲಿ 10%ನಷ್ಟು ಪಾವತಿ, ಸಂಪೂರ್ಣಗೊಳ್ಳುವಿಕೆಗೆ ಸ್ವಲ್ಪವೇ ಮುಂಚಿತವಾಗಿ 10%ನಷ್ಟು ಪಾವತಿ, ಮತ್ತು ವಿದ್ಯುತ್‌ ಸ್ಥಾವರದ ಮಾಲೀಕನಾಗಿ ಹೊರಹೊಮ್ಮುವ ಪವರ್‌ ಹೋಲ್ಡಿಂಗ್ಸ್‌‌ ಕಂಪನಿಗೆ ಹಕ್ಕುಪತ್ರದ ವರ್ಗಾವಣೆಯಾದ ನಂತರ 70%ನಷ್ಟು ಪಾವತಿ.

ಸೌಕರ್ಯವನ್ನು ನಿರ್ವಹಿಸುವ ಸಲುವಾಗಿ, ಪವರ್‌‌ ಮ್ಯಾನೇಜ್‌ ಇಂಕ್‌‌ ಎಂಬ ಹೆಸರಿನ ಮತ್ತೊಂದು ವಿಶೇಷ ಉದ್ದೇಶದ ಸಂಸ್ಥೆಯನ್ನು (SPC) ಆಕ್ಮೆ ಕೋಲ್‌‌ ಮತ್ತು ಎನರ್ಜೆನ್‌ ಹುಟ್ಟುಹಾಕುತ್ತವೆ. ಪ್ರಧಾನವಾಗಿ ಆಕ್ಮೆ ಕೋಲ್‌‌ ಮತ್ತು ಎನರ್ಜೆನ್ ಕಂಪನಿಗಳನ್ನು ಸಂರಕ್ಷಿಸುವುದು, ವಿಶೇಷ ಉದ್ದೇಶದ ಈ ಎರಡೂ ಸಂಸ್ಥೆಗಳ (ಪವರ್‌ ಹೋಲ್ಡಿಂಗ್‌‌ ಮತ್ತು ಪವರ್‌ ಮ್ಯಾನೇಜ್‌) ಅಂತಿಮ ಉದ್ದೇಶವಾಗಿರುತ್ತದೆ. ಒಂದು ವೇಳೆ ಸ್ಥಾವರದಲ್ಲಿ ದುರ್ಘಟನೆಯೊಂದು ಸಂಭವಿಸಿದರೆ, ಭವಿಷ್ಯದ ಫಿರ್ಯಾದಿಗಳು ಆಕ್ಮೆ ಕೋಲ್‌‌ ಅಥವಾ ಎನರ್ಜೆನ್‌ ಕಂಪನಿಗಳ ಮೇಲೆ ದಾವೆ ಹೂಡುವಂತಿರುವುದಿಲ್ಲ; ಈ ಎರಡರ ಪೈಕಿ ಯಾವ ಕಂಪನಿಯೂ ಸ್ಥಾವರದ ಮಾಲೀಕತ್ವವನ್ನು ಹೊಂದಿರುವುದಿಲ್ಲವಾದ್ದರಿಂದ ಅಥವಾ ಅದನ್ನು ನಿರ್ವಹಿಸುವುದಿಲ್ಲವಾದ್ದರಿಂದ, ಅವುಗಳ ಸ್ವತ್ತುಗಳ ಮೇಲೆ ಫಿರ್ಯಾದಿಗಳು ಗುರಿಯಿರಿಸಿಕೊಳ್ಳುವಂತಿರುವುದಿಲ್ಲ.

ಪವರ್‌ ಮ್ಯಾನೇಜ್‌ ಮತ್ತು ಆಕ್ಮೆ ಕೋಲ್‌ ಕಂಪನಿಗಳ ನಡುವಿನ ಒಂದು ಮಾರಾಟ ಮತ್ತು ಖರೀದಿ ಒಪ್ಪಂದದ (ಸೇಲ್‌ ಅಂಡ್‌ ಪರ್ಚೇಸ್ ಅಗ್ರಿಮೆಂಟ್‌-‌SPA) ಅನುಸಾರ, ವಿದ್ಯುತ್‌ ಸ್ಥಾವರಕ್ಕೆ ಕಚ್ಚಾ ಸಾಮಗ್ರಿಗಳು ಪೂರೈಕೆಯಾಗುತ್ತವೆ. ಒಂದು ಸಗಟು-ಮಾರಾಟದ ವಿತರಣಾ ಒಪ್ಪಂದವನ್ನು ಬಳಸಿಕೊಳ್ಳುವ ಮೂಲಕ ಎನರ್ಜೆನ್‌ ಕಂಪನಿಗೆ ವಿದ್ಯುಚ್ಚಕ್ತಿಯನ್ನು ಆಗ ವಿತರಿಸಲಾಗುತ್ತದೆ. ಈ ವ್ಯವಹಾರ ನಿರ್ವಹಣೆಯಿಂದ ಕೈಗೂಡುವ ಆಕ್ಮೆ ಕೋಲ್‌‌ ಮತ್ತು ಎನರ್ಜೆನ್‌ ಈ ಎರಡೂ ಕಂಪನಿಗಳ ನಗದು-ಹರಿವನ್ನು, ಬಂಡವಾಳಗಾರರಿಗೆ ಮರುಪಾವತಿಸಲು ಬಳಸಿಕೊಳ್ಳಲಾಗುತ್ತದೆ.

ಸಂಕೀರ್ಣಗೊಳಿಸುವ ಅಂಶಗಳು[ಬದಲಾಯಿಸಿ]

ಮೇಲೆ ನೀಡಲಾಗಿರುವುದು ಒಂದು ಸರಳ ವಿವರಣೆಯಾಗಿದ್ದು, ಕಲ್ಲಿದ್ದಲಿನ ಆಮದುಕಾರ್ಯವು ಒಳಗೊಂಡಿರುವ ಗಣಿಗಾರಿಕೆ, ಹಡಗು ರವಾನೆ, ಮತ್ತು ವಿತರಣಾ ಒಪ್ಪಂದಗಳು (ಇವು ಧನಸಹಾಯ ಮಾಡುವಿಕೆ ರೂಪರೇಖೆಗಿಂತ ಸ್ವತಃ ಹೆಚ್ಚು ಸಂಕೀರ್ಣವಾಗಿರಲು ಸಾಧ್ಯವಿದೆ) ಇದರ ವ್ಯಾಪ್ತಿ ಅಥವಾ ತೆಕ್ಕೆಯಲ್ಲಿಲ್ಲ; ಅಷ್ಟೇ ಅಲ್ಲ, ಬಳಕೆದಾರರಿಗೆ ವಿದ್ಯುತ್‌‌ನ್ನು ವಿತರಿಸುವುದಕ್ಕೆ ಸಂಬಂಧಿಸಿದ ಒಪ್ಪಂದಗಳೂ ಸಹ ಈ ಸರಳ ವಿವರಣೆಯ ವ್ಯಾಪ್ತಿಯಲ್ಲಿ ಬರುವುದಿಲ್ಲ. ಅಭಿವೃದ್ಧಿಶೀಲ ದೇಶಗಳಲ್ಲಿ, ವಿದ್ಯುತ್‌‌ ಬಳಸುವ ಜನ ಸಮುದಾಯಕ್ಕೆ "ಕೊನೆಯ ಹಂತದವರೆಗಿನ ವಿತರಣೆ"ಯನ್ನು ಕೈಗೆತ್ತಿಕೊಳ್ಳುವ, ಯೋಜನೆಯ ಪ್ರಾಥಮಿಕ ಬಳಕೆದಾರರಾಗಿರುವ ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಸರ್ಕಾರ ಅಸ್ತಿತ್ವಗಳಿಗೆ ಸಂಬಂಧಿಸಿದಂತೆ ಇದು ಅಸಾಮಾನ್ಯವಾಗಿಲ್ಲ. ಸರ್ಕಾರ ಸಂಸ್ಥೆಗಳು ಮತ್ತು ಯೋಜನೆಯ ನಡುವಿನ ಸಮಂಜಸವಾದ ಖರೀದಿ ಒಪ್ಪಂದಗಳಲ್ಲಿ, ಒಂದು ಕನಿಷ್ಟ ಖರೀದಿಯ ಕುರಿತಾಗಿ ಖಾತರಿ ನೀಡುವ ಷರತ್ತುಗಳು ಸೇರಿಕೊಂಡಿರಬಹುದು ಮತ್ತು ತನ್ಮೂಲಕ ಒಂದು ನಿರ್ದಿಷ್ಟ ಮಟ್ಟದಲ್ಲಿರುವ ಆದಾಯಗಳೂ ಇದರಲ್ಲಿ ಸೇರಿಕೊಂಡಿರಬಹುದು. ರಸ್ತೆ ಸಾರಿಗೆಯನ್ನು ಒಳಗೊಂಡಂತೆ ಇತರ ವಲಯಗಳಲ್ಲಿ, ಸರ್ಕಾರವು ರಸ್ತೆಗಳನ್ನು ಸುಂಕ ಸಂಗ್ರಹಣೆಗೆ ಈಡುಮಾಡಬಹುದು ಮತ್ತು ಆದಾಯಗಳನ್ನು ಸಂಗ್ರಹಿಸಬಹುದು; ಅದೇ ವೇಳೆಗೆ ಯೋಜನೆಗೆ ಒಂದು ಖಾತರಿಪಡಿಸಲ್ಪಟ್ಟ ವಾರ್ಷಿಕ ಮೊತ್ತವನ್ನು (ಸ್ಪಷ್ಟವಾಗಿ ನಿರ್ದಿಷ್ಟಪಡಿಸಲಾದ ಮೇಲ್ಭಾಗ ಮತ್ತು ಕೆಳಭಾಗದ ಷರತ್ತುಗಳೊಂದಿಗೆ) ಒದಗಿಸಬಹುದು. ಇದರಿಂದಾಗಿ, ಯೋಜನೆಯ ಹೂಡಿಕೆದಾರರು ಮತ್ತು ಸಾಲ ನೀಡುವವರಿಗೆ ಸಂಬಂಧಿಸಿದಂತಿರುವ, ವ್ಯಾಪಾರ ಬೇಡಿಕೆಯೊಂದಿಗೆ ಸಂಬಂಧಿಸಿದ ಅಪಾಯಗಳನ್ನು ತಗ್ಗಿಸಿದಂತೆ ಅಥವಾ ತೆಗೆದುಹಾಕಿದಂತೆ ಆಗುತ್ತದೆ.

ಯೋಜನೆಯೊಂದರ ಅಲ್ಪಸಂಖ್ಯಾತ ಮಾಲೀಕರು "ಆಯವ್ಯಯ ಪಟ್ಟಿಯ-ಆಚೆಗಿನ" ಧನಸಹಾಯ ಮಾಡುವಿಕೆಯನ್ನು ಬಳಸಿಕೊಳ್ಳಲು ಬಯಸಬಹುದು; ಈ ವಿಧಾನದಲ್ಲಿ, ಯೋಜನೆಯಲ್ಲಿನ ತಮ್ಮ ಭಾಗೀದಾರಿಕೆಯನ್ನು ಒಂದು ಹೂಡಿಕೆಯಾಗಿ ಅವರು ಹೊರಗೆಡಹುತ್ತಾರೆ, ಮತ್ತು ಹೂಡಿಕೆಗೆ ಸಂಬಂಧಿಸಿದ ಒಂದು ಅಡಿಟಿಪ್ಪಣಿಯಾಗಿ ಋಣಭಾರವನ್ನು ಹೊರಗೆಡಹುವ ಮೂಲಕ, ಋಣಭಾರವನ್ನು ಹಣಕಾಸಿನ ಲೆಕ್ಕಪಟ್ಟಿಗಳಿಂದ ಅವರು ಹೊರಗಿಡುತ್ತಾರೆ. ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಈ ಅರ್ಹತೆಯು ಫೈನಾನ್ಷಿಯಲ್‌ ಅಕೌಂಟಿಂಗ್‌ ಸ್ಟಾಂಡರ್ಡ್ಸ್‌ ಬೋರ್ಡ್‌‌‌ನಿಂದ ನಿರ್ಣಯಿಸಲ್ಪಡುತ್ತದೆ. ಅಭಿವೃದ್ಧಿಶೀಲ ದೇಶಗಳಲ್ಲಿನ ಅನೇಕ ಯೋಜನೆಗಳೂ ಸಹ ಯುದ್ಧ ಅಪಾಯದ ವಿಮೆಯಿಂದ ರಕ್ಷಿಸಲ್ಪಡಬೇಕು; ಹಗೆತನದ ದಾಳಿ, ವಾರಸುದಾರರಿಲ್ಲದ ಸ್ಫೋಟಕಗಳು ಮತ್ತು ನೌಕಾಸ್ಫೋಟಕಗಳ ಕ್ರಮಗಳು, ಮತ್ತು "ಶಿಷ್ಟ" ವಿಮಾ ಕಾರ್ಯನೀತಿಗಳಲ್ಲಿ ಸಾಮಾನ್ಯವಾಗಿ ಸೇರಿಸಲ್ಪಡದ ನಾಗರಿಕ ತಳಮಳ ಇವೆಲ್ಲವನ್ನೂ ಸಹ ಯುದ್ಧ ಅಪಾಯದ ವಿಮೆಯು ಒಳಗೊಳ್ಳುತ್ತದೆ. ಭಯೋತ್ಪಾದಕತೆಯನ್ನು ಒಳಗೊಂಡಿರುವ ಕೆಲವೊಂದು ಮಾರ್ಪಡಿಸಿದ ಕಾರ್ಯನೀತಿಗಳನ್ನು ಇಂದು ಭಯೋತ್ಪಾದಕತೆಯ ವಿಮೆ ಅಥವಾ ರಾಜಕೀಯ ಅಪಾಯದ ವಿಮೆ ಎಂದು ಕರೆಯಲಾಗುತ್ತದೆ. ಅನೇಕ ನಿದರ್ಶನಗಳಲ್ಲಿ, ಗುತ್ತಿಗೆದಾರನಿಂದ ಯೋಜನೆಯು ಸಕಾಲದಲ್ಲಿ ಸಂಪೂರ್ಣಗೊಳ್ಳುವುದಕ್ಕೆ ಖಾತರಿ ನೀಡಲು, ಓರ್ವ ಬಾಹ್ಯ ವಿಮಾಗಾರನು ಒಂದು ನಿರ್ವಹಣಾ ಬಾಂಡ್‌‌‌ನ್ನು ನೀಡುತ್ತಾನೆ.

ತೆರಿಗೆ ಬಡತಿಯ ಧನಸಹಾಯ ಮಾಡುವಿಕೆ ಅಥವಾ ಖಾಸಗಿ ಧನಸಹಾಯದ ಉಪಕ್ರಮದಂಥ (ಪ್ರೈವೇಟ್‌ ಫೈನಾನ್ಸ್‌ ಇನಿಷಿಯೆಟಿವ್‌-PFI) ಧನಸಹಾಯ ಮಾಡುವಿಕೆಯ ಹೆಚ್ಚುವರಿ ವಿಧಾನಗಳನ್ನೂ ಸಹ ಸಾರ್ವಜನಿಕವಾಗಿ-ಧನಸಹಾಯ ಮಾಡಲ್ಪಟ್ಟ ಯೋಜನೆಗಳು ಬಳಸಿಕೊಳ್ಳಬಹುದು. ಇಂಥ ಯೋಜನೆಗಳು ಅನೇಕ ವೇಳೆ ಒಂದು ಬಂಡವಾಳ ಸುಧಾರಣಾ ಯೋಜನೆಯಿಂದ ನಿರ್ವಹಿಸಲ್ಪಡುತ್ತವೆ; ಸದರಿ ಪ್ರಕ್ರಿಯೆಗೆ, ಲೆಕ್ಕಪರಿಶೋಧಿಸುವಿಕೆಯ ನಿರ್ದಿಷ್ಟ ಸಾಮರ್ಥ್ಯಗಳು ಮತ್ತು ಕಟ್ಟುಪಾಡುಗಳನ್ನು ಬಂಡವಾಳ ಸುಧಾರಣಾ ಯೋಜನೆಯು ಸೇರ್ಪಡೆ ಮಾಡುತ್ತದೆ.

ಇತಿಹಾಸ[ಬದಲಾಯಿಸಿ]

ಅವಲಂಬಿತವಾದ ಸೀಮಿತ ಸಾಲ ನೀಡುವಿಕೆಯನ್ನು ಪ್ರಾಚೀನ ಗ್ರೀಸ್‌‌ ಮತ್ತು ರೋಮ್‌‌‌‌‌ನಲ್ಲಿ ಕಡಲಿಗೆ ಸಂಬಂಧಿಸಿದ ಯಾತ್ರೆಗಳ ಧನಸಹಾಯಕ್ಕಾಗಿ ಬಳಸಿಕೊಳ್ಳಲಾಗಿತ್ತು. ಮೂಲಭೂತ ಸೌಕರ್ಯ ಯೋಜನೆಗಳಲ್ಲಿನ ಇದರ ಬಳಕೆಯು ಪನಾಮಾ ಕಾಲುವೆಯ ಅಭಿವೃದ್ದಿ ನಡೆದ ಆ ಕಾಲದಷ್ಟು ಹಿಂದಿನಿಂದಲೇ ಆಗುತ್ತಾ ಬಂದಿದೆ, ಮತ್ತು 20ನೇ ಶತಮಾನದ ಆರಂಭದಲ್ಲಿ ಕಂಡುಬಂದ US ತೈಲ ಮತ್ತು ಅನಿಲ ಉದ್ಯಮದಲ್ಲಿ ಇದು ವ್ಯಾಪಕವಾಗಿ ಹರಡಿತ್ತು. ಆದಾಗ್ಯೂ, 1970ರ ದಶಕ ಮತ್ತು 1980ರ ದಶಕದಲ್ಲಿ ಕಂಡುಬಂದ ಉತ್ತರ ಸಮುದ್ರದ ತೈಲ ಕ್ಷೇತ್ರಗಳ ಅಭಿವೃದ್ಧಿಯೊಂದಿಗೆ, ಹೆಚ್ಚಿನ-ಅಪಾಯದ ಮೂಲಭೂತ ಸೌಕರ್ಯ ರೂಪರೇಖೆಗಳಿಗೆ ಸಂಬಂಧಿಸಿದ ಯೋಜನಾ ಧನಸಹಾಯವು ಹುಟ್ಟಿಕೊಂಡಿತು. ಇಂಥ ಹೂಡಿಕೆಗಳಿಗೆ ಸಂಬಂಧಿಸಿದಂತೆ, ಪ್ರತಿ ಯೋಜನೆಗಾಗಿ ವಿಶೇಷ ಉದ್ದೇಶದ ಸಂಸ್ಥೆಗಳು (SPCಗಳು) ಹೊಸದಾಗಿ ಸೃಷ್ಟಿಸಲ್ಪಟ್ಟವು, ಮತ್ತು ಅನೇಕ ಮಾಲೀಕರು ಮತ್ತು ಸಂಕೀರ್ಣ ರೂಪರೇಖೆಗಳಿಂದ ವಿಮಾಸೌಕರ್ಯ, ಸಾಲಗಳು, ವ್ಯವಸ್ಥಾಪನೆ, ಮತ್ತು ಯೋಜನೆ ಕಾರ್ಯಾಚರಣೆ ಇವೇ ಮೊದಲಾದವುಗಳು ವಿತರಿಸಲ್ಪಟ್ಟವು. ಪ್ರಯೋಜಕತೆ ಅಥವಾ ಸರ್ಕಾರದ ಬಾಂಡ್‌‌ ನೀಡಿಕೆಯ ಮೂಲಕ, ಅಥವಾ ಇತರ ಸಾಂಪ್ರದಾಯಿಕ ಸಾಂಸ್ಥಿಕ ಧನಸಹಾಯದ ರಚನಾ ಸ್ವರೂಪಗಳ ಮೂಲಕ ಇಂಥ ಯೋಜನೆಗಳು ಹಿಂದೆಲ್ಲಾ ನೆರವೇರಿಸಲ್ಪಟ್ಟವು.

ಅಭಿವೃದ್ಧಿಶೀಲ ಪ್ರಪಂಚದಲ್ಲಿನ ಯೋಜನಾ ಧನಸಹಾಯ ಮಾಡುವಿಕೆಯು, ಏಷ್ಯಾದ ಹಣಕಾಸಿನ ಬಿಕ್ಕಟ್ಟಿನ ಸಂದರ್ಭದ ಆಸುಪಾಸಿನಲ್ಲಿ ಶಿಖರಕ್ಕೇರಿತು; ಆದರೆ ಕೈಗಾರಿಕೀಕರಣಗೊಳ್ಳುತ್ತಿರುವ ದೇಶಗಳಲ್ಲಿ ನಂತರ ಕಂಡುಬಂದ ಇಳಿಮುಖತೆಯನ್ನು OECD ದೇಶಗಳಲ್ಲಿನ ಬೆಳವಣಿಗೆಯಿಂದ ಸರಿದೂಗಿಸಲಾಯಿತು. ಇದು, 2000ನೇ ಇಸವಿಯ ಸುಮಾರಿಗೆ ವಿಶ್ವವ್ಯಾಪಿ ಯೋಜನಾ ಧನಸಹಾಯ ಮಾಡುವಿಕೆಯು ಶಿಖರಕ್ಕೇರಲು ಕಾರಣವಾಯಿತು. ಸಾರ್ವಜನಿಕ ಪ್ರಯೋಜಕತೆಗಳು ಮತ್ತು ಮೂಲಭೂತ ಸೌಕರ್ಯಗಳನ್ನು ಪೂರೈಕೆಮಾಡಲು ಅನೇಕ ದೇಶಗಳಿಗೆ ಹೆಚ್ಚಿನ ಧನಸಹಾಯದ ಅಗತ್ಯ ಕಂಡುಬರುತ್ತಿರುವುದರಿಂದ, ಪ್ರಪಂಚದ ಉದ್ದಗಲಕ್ಕೂ ಯೋಜನಾ ಧನಸಹಾಯ ಮಾಡುವಿಕೆಗೆ ಸಂಬಂಧಿಸಿದ ಅಗತ್ಯವು ಹೆಚ್ಚಿನ ರೀತಿಯಲ್ಲಿ ಉಳಿದುಕೊಂಡು ತನ್ನ ಅಸ್ತಿತ್ವವನ್ನು ಮುಂದುವರಿಸಿಕೊಂಡು ಬಂದಿದೆ. ಇತ್ತೀಚಿನ ವರ್ಷಗಳಲ್ಲಿ, ಯೋಜನಾ ಧನಸಹಾಯದ ರೂಪರೇಖೆಗಳು ಮಧ್ಯಪ್ರಾಚ್ಯದಲ್ಲಿ ಹೆಚ್ಚೆಚ್ಚು ಸಾಮಾನ್ಯವಾಗಿ ಹೊರಹೊಮ್ಮುತ್ತಿದ್ದು, ಅವುಗಳಲ್ಲಿ ಕೆಲವು ಇಸ್ಲಾಮಿನ ಧನಸಹಾಯವನ್ನು ಸಂಯೋಜಿಸುತ್ತಿವೆ.

ಪ್ರಯೋಜಕತೆಗಳು ಮತ್ತು ಸರ್ಕಾರ ಅಸ್ತಿತ್ವಗಳಿಂದ ಲಭ್ಯವಿರುವ ದೀರ್ಘಾವಧಿಯ ವಿದ್ಯುತ್‌‌ ಖರೀದಿಯ ಒಪ್ಪಂದಗಳಿಂದ ಸಾದರಪಡಿಸಲ್ಪಟ್ಟ ಅವಕಾಶಕ್ಕೆ ಪ್ರತಿಕ್ರಿಯೆಯಾಗಿ, ಯೋಜನಾ ಧನಸಹಾಯದ ಹೊಸ ರಚನಾ-ಸ್ವರೂಪಗಳು ಪ್ರಧಾನವಾಗಿ ಹೊರಹೊಮ್ಮಿವೆ. PURPA ಎಂಬ, 1978ರ ಸಾರ್ವಜನಿಕ ಪ್ರಯೋಜಕತೆಯ ನಿಯಂತ್ರಣದ ಕಾರ್ಯನೀತಿಗಳ ಕಾಯಿದೆ ಯನ್ನು ಕಾರ್ಯರೂಪಕ್ಕೆ ತರುವ ನಿಯಮಗಳಿಗೆ ಈ ದೀರ್ಘಾವಧಿ ಆದಾಯ ಹರಿವುಗಳು ಅಗತ್ಯವಾಗಿದ್ದವು. ನವೀಕರಿಸಬಹುದಾದ ಸ್ವದೇಶಿ ಸಂಪನ್ಮೂಲಗಳು ಮತ್ತು ಸಂರಕ್ಷಣೆಯನ್ನು ಉತ್ತೇಜಿಸುವ ಉದ್ದೇಶದಿಂದ ವಿನ್ಯಾಸಗೊಳಿಸಲಾದ, ಒಂದು ವಿದ್ಯುತ್‌‌ ಉಪಕ್ರಮವಾಗಿ ಮೂಲತಃ ಯೋಜಿಸಲಾದ ಈ ಕಾಯಿದೆ ಮತ್ತು ಅದು ಸೃಷ್ಟಿಸಿದ ಉದ್ಯಮವು, ವಿದ್ಯುತ್‌‌‌ ಉತ್ಪಾದನೆಯ ನಿಯಂತ್ರಣವು ಮತ್ತಷ್ಟು ಸಡಿಲಗೊಳ್ಳಲು ಕಾರಣವಾಯಿತು; ಅಷ್ಟೇ ಅಲ್ಲ, 1994ರಲ್ಲಿ ಬಂದ ಸಾರ್ವಜನಿಕ ಪ್ರಯೋಜಕತೆಗಳ ಹಿಡುವಳಿ ಕಂಪನಿ ಕಾಯಿದೆ ಗೆ ಆದ ತಿದ್ದುಪಡಿಗಳನ್ನು ಅನುಸರಿಸಿಕೊಂಡು ಬಂದ ಅಂತರರಾಷ್ಟ್ರೀಯ ಖಾಸಗೀಕರಣಕ್ಕೆ ಗಮನಾರ್ಹವಾದ ಕಾರಣವಾಗಿ ಪರಿಣಮಿಸಿತು. ರಚನಾ-ಸ್ವರೂಪ ವಿಕಸನಗೊಂಡಿದ್ದು, ಅದು ಪ್ರಪಂಚದಾದ್ಯಂತದ ವಿದ್ಯುತ್‌‌ ಮತ್ತು ಇತರ ಯೋಜನೆಗಳಿಗೆ ಸಂಬಂಧಿಸಿದ ಆದಾರವಾಗಿ ರೂಪುಗೊಂಡಿದೆ.

ಇವನ್ನೂ ಗಮನಿಸಿ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

  1. ಸಾಮಾನ್ಯವಾಗಿ ನೋಡಿ , ಸ್ಕಾಟ್‌ ಹಾಫ್‌ಮನ್‌‌, ದಿ ಲಾ & ಬಿಸಿನೆಸ್‌ ಆಫ್‌ ಇಂಟರ್‌ನ್ಯಾಷನಲ್‌ ಪ್ರಾಜೆಕ್ಟ್‌ ಫೈನಾನ್ಸ್‌‌ (3ನೇ ಆವೃತ್ತಿ. 2007, ಕೇಂಬ್ರಿಜ್‌ ಯೂನಿವರ್ಸಿಟಿ ಪ್ರೆಸ್‌‌).
  2. ೨.೦ ೨.೧ ‌ಮಾರ್ಕೊ ಸಾರ್ಜ್, ದಿ ನೇಚರ್‌ ಆಫ್‌ ಕ್ರೆಡಿಟ್‌ ರಿಸ್ಕ್‌ ಇನ್‌ ಪ್ರಾಜೆಕ್ಟ್‌‌ ಫೈನಾನ್ಸ್‌‌, BIS ಕ್ವಾರ್ಟರ್ಲಿ ರಿವ್ಯೂ , ಡಿಸೆಂಬರ್‌‌ 2004, ಪುಟ 91.

ಬಾಹ್ಯ ಕೊಂಡಿಗಳು[ಬದಲಾಯಿಸಿ]