ಯುವರಾಜ್ ಸಿಂಗ್
ವಿಕಿಪೀಡಿಯ ಇಂದ
ಭಾರತದ ಪ್ರಸಿದ್ಧ ಕ್ರಿಕೆಟ್ ಆಟಗಾರರಲ್ಲಿ ಒಬ್ಬರು. ಭಾರತದ ಚಂಡೀಗರ್‍ನಲ್ಲಿ ೧೨.ಡಿಸೆಂಬರ್.೧೯೮೧ ರಂದು ಜನಿಸಿದರು. ಭಾರತದ ಪುರಾತನ ವೇಗದ ಬೌಲರ್ ಮತ್ತು ಪಂಜಾಬಿ ಚಿತ್ರರಂಗದ ನಾಯಕ ನಟರಾದ ಯೋಗರಾಜ್ ಸಿಂಗ್ ರವರ ಪುತ್ರ. ೨೦೦೦ ಇಸವಿಯಿಂದ ಭಾರತದ ಕ್ರಿಕೆಟ್ ತಂಡದಲ್ಲಿ ಮತ್ತು ೨೦೦೩ನೇ ಇಸವಿಯಿಂದ ಭಾರತದ ಟೆಸ್ಟ್ ತಂಡದಲ್ಲಿ ಸೇರ್ಪಡೆಯಾಗಿದ್ದಾರೆ.
ಯುವರಾಜರ ಆಟದ ಠೀವಿ [ಬದಲಾಯಿಸಿ]
ಯುವರಾಜ್ ಮೂಲತಃ ಎಡಗೈ ಬ್ಯಾಟ್ಸ್-ಮನ್. ಆಗಾಗ ಅಲ್ಪ ಸ್ವಲ್ಪ ಬೌಲಿಂಗ್ ಕೂಡ ಮಾಡುತ್ತಾರೆ. ಇವರು ಸ್ಪಿನ್ ಬೌಲಿಂಗ್ ಗಿಂತ ವೇಗದ ಬೌಲಿಂಗ್-ಗೆ, ಚೆನ್ನಾಗಿ ಆಟವಾಡುತ್ತಾರೆ ಎಂಬ ಭಾವನೆ ಇದೆ. ಇವರು ಭಾರತ ತಂಡದ ಅತ್ಯುತ್ತಮ ಕ್ಷೇತ್ರರಕ್ಷಕರುಗಳಲ್ಲಿ ಒಬ್ಬರು. ಯುವರಾಜ್ ಅವರು ಒನ್ದೇ ಒವರಲ್ಲಿ ೬ ಸಿಕ್ಸ್ರ್ ಬಾರಿಸಿದ್ದರೆ
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |