ಯಣ್ ಸಂಧಿ
ವಿಕಿಪೀಡಿಯ ಇಂದ
ಸಂಧಿ ರಚನೆಯಲ್ಲಿ 'ಯ' 'ರ' 'ಲ' 'ವ' ಈ ನಾಲ್ಕು ಅಕ್ಷರಗಳು ಆದೇಶವಾಗಿ ಬಂದರೆ ಯಣ್ ಸಂಧಿ ಎನ್ನುತ್ತೇವೆ. ಮತ್ತು ಇ,ಈ,ಉ,ಊ,ಋ ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ ಇ ಈ ಕಾರಗಳಿಗೆ 'ಯ್'ಕಾರವೂ, ಉ ಊಕಾರಗಳಿಗೆ 'ವ್'ಕಾರವೂ, ಋಕಾರಕ್ಕೆ 'ರ್'(ರೇಫ)ವೂ ಆದೇಶವಾಗಿ ಬರುತ್ತದೆ. ಇದಕ್ಕೆ 'ಯಣ್ ಸಂಧಿ'ಯೆನ್ನುತ್ತೇವೆ
ಉದಾಹರಣೆ:
ಅತಿ + ಅಂತ = ಅತ್ಯಂತ
ಮನು + ಅಂತರ = ಮನ್ವಂತರ
ಪಿತೃ + ಆರ್ಜಿತ = ಪಿತ್ರಾರ್ಜಿತ
ಅತಿ + ಅವಸರ = ಅತ್ಯವಸರ
ಜಾತಿ + ಅತೀತ = ಜಾತ್ಯತೀತ
ಕೋಟಿ+ ಅಧೀಶ = ಕೋಟ್ಯಧೀಶ