ಮೌಲಾನ ಅಬುಲ್ ಕಲಮ್ ಆಜಾದ್
ವಿಕಿಪೀಡಿಯ ಇಂದ
(ಮೌಲಾನ ಅಬುಲ್ ಕಲಾಮ್ ಆಜಾದ್ ಇಂದ ಪುನರ್ನಿರ್ದೇಶಿತ)
ಅಬುಲ್ ಕಲಮ್ ಗುಲಾಮ್ ಮುಹಿಯುದ್ದೀನ್ (ನವೆಂಬರ್ ೧೧, ೧೮೮೮ - ಫೆಬ್ರುವರಿ ೨೨, ೧೯೫೮) ಭಾರತದ ಸ್ವಾತಂತ್ರ್ಯ ಹೋರಾಟದ ಪ್ರಮುಖ ಮುಂದಾಳುಗಳಲ್ಲಿ ಒಬ್ಬರು. ಯೌವನದಲ್ಲಿ ಕವಿ, ಲೇಖಕ, ಪತ್ರಕರ್ತರಾಗಿದ್ದ ಇವರು ಆಜಾದ್ (ಸ್ವತಂತ್ರ) ಎಂಬ ಕಾವ್ಯನಾಮವನ್ನು ಉಪಯೋಗಿಸುತ್ತಿದ್ದರು. ಇಸ್ಲಾಂ ಧರ್ಮದ ಆಳವಾದ ಜ್ಞಾನ ಹೊಂದಿದ್ದರಿಂದ ಮೌಲಾನ ಬಿರುದನ್ನು ಹೊಂದಿದ್ದರು. ಹೀಗಾಗಿ ಒಟ್ಟಾಗಿ ಜನಪ್ರಿಯವಾಗಿ ಮೌಲಾನ ಅಬುಲ್ ಕಲಮ್ ಆಜಾದ್ ಎಂದು ಕರೆಯಲ್ಪಟ್ಟರು.
ಆಜಾದ್‌ರವರು ಖಿಲಾಫತ್ ಚಳುವಳಿಯಲ್ಲಿ ಪಾಲ್ಗೊಂಡಿದ್ದರು ,ಈ ಸಮಯದಲ್ಲಿ ಇವರು ಗಾಂಧಿಜೀ ಜೊತೆ ತುಂಬ ಪರಿಚಿತರಾದರು.
ಇವರು ನೆಹರುವಿನ ಪ್ರಥಮ ಕ್ಯಾಬಿನೆಟ್‍ನಲ್ಲಿ ವಿದ್ಯಾ ಇಲಾಖೆ ಮಂತ್ರಿಯಾಗಿ ಕಾರ್ಯನಿರ್ವಹಿಸಿದರು.
ಇವರು ೧೯೪೦-೧೯೪೬ ಮಧ್ಯ ಕಾಂಗ್ರೆಸ್‍ನ ಅಧ್ಯಕ್ಷರಾಗಿದ್ದರು.