ಮೋಡಿಲಿಪಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಮೋಡಿಲಿಪಿಯು ಬರೆಯುವಾಗ ಕಾಗದದಿಂದ ಪೆನ್ನನ್ನು ಮೇಲಕ್ಕೆ ಎತ್ತದೆ ಬರೆಯಲಾಗುತ್ತಿದ್ದ ಮರಾಠಿಲಿಪಿಯಾಗಿದೆ.

ಹದಿಮೂರನೆಯ ಶತಮಾನದಿಂದ 1950 ರವರೆಗೆ, ಮರಾಠಿ ಭಾಷೆಯನ್ನು ಮೋಡಿ ಲಿಪಿಯಲ್ಲಿ ಬರೆಯಲಾಗುತ್ತಿತ್ತು. ೧೯೬೦ರ ದಶಕದವರೆಗೂ ಮಹಾರಾಷ್ಟ್ರದ ಶಾಲೆಗಳಲ್ಲಿ ಇದನ್ನು ಕಲಿಸುತ್ತಿದರು. ಈಗ ಮೋಡಿ ಲಿಪಿಯ ಫಾಂಟು(ಅಕ್ಷರಶೈಲಿ)ಗಳು ಲಭ್ಯವಿರುವ ಕಾರಣದಿಂದಲೂ ಹೊಸಪೀಳಿಗೆಯ ಆಸಕ್ತಿಯಿಂದಲೂ ಈ ಲಿಪಿಯು ಕಣ್ಮರೆಯಾಗದೆ ಉಳಿದಿದೆ. ಮರಾಠಿ ಅಷ್ಟೇ ಅಲ್ಲದೆ ಕನ್ನಡ,ಗುಜರಾತಿ,ಉರ್ದು ,ಹಿಂದಿ,ತಮಿಳು ಭಾಷೆಗಳನ್ನೂ ಈ ಲಿಪಿಯಲ್ಲಿ ಬರೆಯುತ್ತಿದ್ದರು ಎನ್ನಲಾಗಿದೆ.

"http://kn.wikipedia.org/w/index.php?title=ಮೋಡಿಲಿಪಿ&oldid=374617" ಇಂದ ಪಡೆಯಲ್ಪಟ್ಟಿದೆ