ಮೈ ಸ್ಪಿನ್ ಲ್ಯಾಬ್'

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೈಸ್ಪಿನ್ ಲ್ಯಾಬ್ [೧] ಭಾರತದಲ್ಲಿ ಹತ್ತಿ ಸಂಶೋಧನೆಯ ಕಾರ್ಯದ ಹಲವು ಮುಖಗಳು,'-ಎಚ್.ಆರ್.ಎಲ್; ಪುಸ್ತಕವನ್ನು 'ಕೇಂದ್ರೀಯ ಹತ್ತಿ ಪ್ರೌದ್ಯೋಗಿಕಿ ಅನುಸಂಧಾನ ಸಂಸ್ಥೆ', ಮುಂಬಯಿ (CIRCOT),ಯಲ್ಲಿ ತಕನಿಕಿ ಅಧಿಕಾರಿ ಯಾಗಿ ೩೭ ವರ್ಷಕ್ಕೂ ಹೆಚ್ಚು ಸಮಯ ಕೆಲಸಮಾಡಿದ ವ್ಯಕ್ತಿಯೊಬ್ಬರು ಬರೆದಿದ್ದಾರೆ. ಇದು ಸನ್. ೧೯೨೪ ರಲ್ಲಿ ಬ್ರಿಟಿಷರಿಂದ ಸ್ಥಾಪಿಸಲ್ಪಟ್ಟ, ಆಗಿನ, ಟೆಕ್ನೊಲಾಜಿಕಲ್ ಲ್ಯಾಬೊರೇಟೊರಿಯ ಹತ್ತಿ ಪರೀಕ್ಷಣ ಕಾರ್ಯ-ವಿಧಿವಿಧಾನಗಳನ್ನು ತಿಳಿಸುವುದರ ಜೊತೆಗೆ, ಭಾರತದಲ್ಲಿ ಹತ್ತಿ ಗುಣವನ್ನು ಉತ್ತಮಪಡಿಸುವ ಕೆಲಸದ ಪ್ರಾರಂಭವಾದ ಬಗ್ಗೆ ಮಾಹಿತಿಗಳಿವೆ. ಹಾಗೆಯೇ ಹತ್ತಿ ಸಂಶೋಧನೆಯಲ್ಲಿ ಪ್ರಪ್ರಥಮವಾಗಿ ಯೋಗದಾನಮಾಡಿದ,

ಮುಂತಾದ ಹಲವಾರು ದೇಶ-ವಿದೇಶಗಳ ಸಂಶೋಧಕರ ವ್ಯಕ್ತಿಚಿತ್ರಗಳಿವೆ. ಇದಲ್ಲದೆ, 'ಟೆಕ್ನೊಲಾಜಿಕಲ್ ಲ್ಯಾಬೊರೇಟೊರಿ' (೧೯೨೪) ಶುರುವಾದಂದಿನಿಂದ, ೨೦೦೪ ರ ವರೆಗೆ ಸ್ಪಿನ್ನಿಂಗ್ ಪ್ರಭಾಗದಲ್ಲಿ ಕೆಲಸಮಾಡಿದ, ಇಲ್ಲವೇ ಸ್ಪಿನ್ನಿಂಗ್ ಖಾತೆಗೆ ಸಂಬಂಧಿಸಿದ ಎಲ್ಲ ನೌಕರರ, ಅಧಿಕಾರಿಗಳ, ವ್ಯಕ್ತಿಚಿತ್ರದ ತುಣುಕುಗಳಿವೆ. ಲ್ಯಾಬೊರೇಟೊರಿಯ ಎಲ್ಲಾ ನಿರ್ದೇಶಕರ, ಸ್ಪಿನ್ನಿಂಗ್ ಮಾಸ್ಟರ್ ಗಳ, ಇನ್ನಿತರ ಅಧಿಕಾರಿಗಳ ವ್ಯಕ್ತಿಚಿತ್ರಗಳಿವೆ.

ಹಲವಾರು ವಿಶೇಷ ಚಿತ್ರಗಳನ್ನು ಹೊಂದಿದ ಪುಸ್ತಕ[ಬದಲಾಯಿಸಿ]

ವಿಶ್ವದಲ್ಲಿ ಹತ್ತಿ ಸಂಶೋಧನೆಯ ಹೆಚ್ಚೆಯ ಗುರುತುಗಳನ್ನು ಮೂಡಿಸುವ ಪ್ರಯತ್ನನಡೆದಿದೆ. ಹತ್ತಿ ಸಂಶೋಧನ ಕ್ಷೇತ್ರದಲ್ಲಿ ಬಳಸಲಾಗುತ್ತಿರುವ ಕೆಲವು ಪದಗಳ ನುಡಿಗಟ್ಟುಗಳ ತುಣುಕುಗಳಿವೆ. ಸರ್.ಸಿ. ವಿ. ರಾಮನ್ ಟೆಕ್ನೊಲಾಜಿಕಲ್ ಲ್ಯಾಬೊರೇಟೊರಿಯನ್ನು ಸಂದರ್ಶಿಸಿದ ಸಮಯದ ಚಿತ್ರವಿದೆ. ಅವರನ್ನು ಆಹ್ವಾನಿಸಿ ಕರೆತಂದದ್ದು. ಅಂದಿನ, ಬಾಂಬೆ ಟೆಕ್ಸ್ ಟೈಲ್ ರಿಸರ್ಚ್ ಅಸೋಸಿಯೇಷನ್ ನ ಡೈರೆಕ್ಟರ್ ಆಗಿದ್ದ ಪ್ರತಿಭಾನ್ವಿತ, ಹಾಗೂ ಅತ್ಯಂತ ಜನಪ್ರಿಯರಾಗಿದ್ದ, ಡಾ. ಸಿ. ನಂಜುಂಡಯ್ಯನವರು. ಸಿ.ಎನ್, ಎಂದೇ ಅಂದಿನ ಬೊಂಬಾಯಿನ ಟೆಕ್ಸ್ ಟೈಲ್ಸ್ ವಲಯದಲ್ಲಿ, ವಿಖ್ಯಾತರಾಗಿದ್ದರು. ಅವರು 'ಟೆಕ್ನೊಲಾಜಿಕಲ್ ಲ್ಯಾಬೊರೇಟೊರಿ'ಯಲ್ಲಿ ಸನ್. ೧೯೩೦ ರಲ್ಲೇ ರಿಸರ್ಚ್ ಅಸಿಸ್ಟೆಂಟ್ ಆಗಿ ಭರ್ತಿಯಾಗಿ, ಕಾಲಾನುಕ್ರಮದಲ್ಲಿ ಅದೇ ಸಂಸ್ಥೆಯಲ್ಲಿ ಡೈರೆಕ್ಟರ್ ಆದರು.'ಟೆಕ್ನೊಲಾಜಿಕಲ್ ಲ್ಯಾಬೊರೇಟೊರಿ' ಯಿಂದ ಅವರು ಬಾಂಬೆ ಟೆಕ್ಸ್ ಟೈಲ್ ರಿಸರ್ಚ್ ಅಸೋಸಿಯೇಷನ್ ನ, ಡೈರೆಕ್ಟರ್ ಆಗಿ ನಿಯುಕ್ತರಾದರು.

ಸಿ.ಎನ್, ಕಲ್ಕತ್ತಾದಲ್ಲಿ ಪ್ರೊ.ಸಿ.ವಿ.ರಾಮನ್ ರ ಶಿಷ್ಯರಾಗಿದ್ದವರು[ಬದಲಾಯಿಸಿ]

ಸಿ.ಎನ್, ಕಲ್ಕತ್ತಾ ನಗರದಲ್ಲಿ ಪ್ರೊ.ರಾಮನ್ ರವರ ಮೆಚ್ಚಿನ ವಿದ್ಯಾರ್ಥಿಯಾಗಿದ್ದರು. ಮೈ ಸ್ಪಿನ್ ಲ್ಯಾಬ್ ಪುಸ್ತಕ ಕೇವಲ ಕೇಂದ್ರೀಯ ಹತ್ತಿ ಪ್ರೌದ್ಯೋಗಿಕಿ ಅನುಸಂಧಾನ ಸಂಸ್ಥೆ ಗೋಸ್ಕರವೇ ಬರೆದದ್ದು. ಆದ್ದರಿಂದ ಅದರ ಪ್ರತಿಗಳನ್ನು ಅಲ್ಲಿನ ಕೇಂದ್ರೀಯ ಹತ್ತಿ ಪ್ರೌದ್ಯೋಗಿಕಿ ಅನುಸಂಧಾನ ಸಂಸ್ಥೆಯ ಲೈಬ್ರೆರಿಯಲ್ಲಿ ಮಾತ್ರ ನೋಡಬಹುದು. ಭಾರತದಲ್ಲಿ ಹತ್ತಿ ಸಂಶೋಧನೆಯ ಇತಿಹಾಸವನ್ನು ಸಂಕ್ಷೇಪವಾಗಿ ತಿಳಿಯಲಿಚ್ಛಿಸುವವರು, ಲೈಬ್ರೆರಿಗೆ ಧಾವಿಸಿ ಅಲ್ಲಿ ಈ 'ಪುಸ್ತಕ'ವನ್ನು ಓದಬಹುದು. ಅಲ್ಲಿ ದೊರೆಯುವ ಅತ್ಯಂತ ಮೌಲ್ಯಯುತವಾದ ಸಾವಿರಾರು ಪುಸ್ತಕಗಳನ್ನು ಓದಿ, ಮಾಹಿತಿಗಳನ್ನು ಸಂಗ್ರಹಿಸುವುದು, ಹಾಗೂ ಹತ್ತಿ ಸಂಶೋಧನೆಯ ಹಲವಾರು ಮಜಲುಗಳನ್ನು ಅರಿಯುವದು ಅತಿ ಸಂತಸದ ಸಂಗತಿ. ಆದರೆ ಸಂಕ್ಷೇಪವಾಗಿ ಕೈಪಿಡಿಯೆಂದು ಕರೆಯಬಹುದಾದ ಈ ಪುಸ್ತಕ, ಎಲ್ಲರ ಗಮನವನ್ನು ಸೆಳೆದಿದೆ.

ಉಲ್ಲೇಖಗಳು[ಬದಲಾಯಿಸಿ]

  1. 'My Spin Lab',