ಮೈಸೂರ್ ಅಸೋಸಿಯೇಷನ್, ಮುಂಬೈ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
'ಮೈಸೂರ್ ಅಸೊಸಿಯೇಷನ್,ಮುಂಬೈ'-ಇಂದು
ಮೈಸೂರ್ ಅಸೋಸಿಯೇಷನ್ ಗಣಪತಿ
'ಮೈಸೂರ್ ಅಸೋಸಿಯೇಷನ್ ಗಳಿಸಿದ ಪ್ರಶಸ್ತಿ, ಪುರಸ್ಕಾರಗಳು'

ಮೈಸೂರ್ ಅಸೋಸಿಯೇಷನ್ ೩೯೩, ಭಾವುದಾಜಿ ರಸ್ತೆ, ಮಾಟುಂಗಾ, ಮುಂಬೈ, ೪೦೦ ೦೧೯. ೩೯೩, ಭಾವುದಾಜಿ ರಸ್ತೆ, ಮಾಟುಂಗ, ಒಂದು ಅನಿರ್ವಚನೀಯ ತಾಣ. ಬಿಡುವಿಲ್ಲದೆ ಚಿಡಿ-ಮಿಡಿಯುವ ಜೇನುನೊಣಗಳ ಸಂಭ್ರಮದ ಹಾಗೆ ಅಲ್ಲಿ ಯುವಕ-ಯುವತಿಯರು, ಮಕ್ಕಳು, ವೃದ್ಧರು ಲವಲವಿಕೆಯಿಂದ, ಹಸನ್ಮುಖದಿಂದ ಓಡಾಡುವ ಸ್ಥಳ. ಮುಂಬೈ ಕನ್ನಡಿಗರ ಪ್ರೀತಿಯ, ಭರವಸೆಯ, ಆಶ್ರಯ-ತಾಣ. ಬೊಂಬಾಯಿ ಕನ್ನಡಿಗರ, ಕಲೆ, ಸಂಸ್ಕೃತಿ, ಭಾಷೆ, ಸಂಗೀತಗಳನ್ನು ರಕ್ಷಿಸಿ , ಫೊಷಿಸುವ, ಹಾಗೂ ಎಲ್ಲ ಕನ್ನಡಿಗರ ಭಾವನಾತ್ಮಕ ಸ್ಥಾನ. ಕಾಂಪೌಡ್ ನೊಳಗೆ ಕಾಲಿಡುವುದೇ ತಡ, ಅಲ್ಲಿ ಹಲವಾರು, ಕಾರ್ಯಕ್ರಮಗಳ ವೈವಿಧ್ಯಪೂರ್ಣ ಪರಿಚಯದ ಭಿತ್ತಿ ಪತ್ರಗಳು, ಕಾಣಿಸುತ್ತವೆ. ಮೈಸೂರ್ ಅಸೋಸಿಯೇಷನ್ ನ ಸಭಾಂಗಣದಲ್ಲಿ, ಹಿಂದಿ, ಮರಾಠಿ, ತುಳು, ಬೆಂಗಾಲಿ, ಕನ್ನಡ, ಇತ್ಯಾದಿ, ಒಂದಲ್ಲ ಒಂದು ಭಾಷೆಯ ನಾಟಕಗಳು ದಿನ-ಪ್ರತಿ, ಪ್ರದರ್ಶನಗೊಳ್ಳುತ್ತಲೇಇರುತ್ತವೆ. ಜುಳು-ಜುಳು ನೀರಿನ-ಕಾರಂಜಿ,ಯ ನೀರು, ಬಣ್ಣಬಣ್ಣಗಳ ಲೈಟಿನಲ್ಲಿ ಮನರಂಜಿಸುತ್ತದೆ. ಯಾವ ಗದ್ದಲ, "ದೊಡ್ಡ ಕ್ಯೂ" ಇಲ್ಲದೆ ಇಷ್ಟು ಸುಲಭವಾಗಿ ದೊರೆಯುವ ಗಣಪತಿ ದರ್ಶನ ನಿಜಕ್ಕೂ ಅವರ್ಣನೀಯ.ಸದಸ್ಯರೆಲ್ಲರಿಗೂ, ಹಾಗೂ ಸದಸ್ಯರಲ್ಲದ ಭಕ್ತರಿಗೂ ಲಭ್ಯವಾಗುವ ಪುಣ್ಯವಿದು. ಸೆಕ್ಯೂರಿಟಿ ಗಾರ್ಡ್, ಗಳ ಸಹಾಯ ಎಲ್ಲರಿಗೂ ಸಿಗುತ್ತದೆ.

ಪರಿವಿಡಿ

ಗೆಳೆಯರ ಭೇಟಿ, ಹಾಗೂ ಮನೆಯತರಹದ ಊಟ[ಬದಲಾಯಿಸಿ]

ಮೈಸೂರಿನ, ಅಂದರೆ, ಊರಿನ ತರಹದ ಊಟ, ಆತ್ಮೀಯ ಗೆಳೆಯರ ಭೇಟಿ, ಮತ್ತು ವಸತಿಯ ಏರ್ಪಾಡುಗಳು ಆಗಿನ, ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದ್ದವು. ಮನೆಯ ತರಹವೇ ಅನುಭವ ನೀಡುತ್ತಿದ್ದ, ಊಟ, ಭಾನುವಾರದ ಬೆಳಗಿನ ತಿಂಡಿ ಏರ್ಪಾಡು, ಬಹಳದಿನಗಳವರೆಗೆ ಜ್ಞಾಪಕದಲ್ಲಿರುವಂತಹ ಸಂಗತಿಗಳು. ಆದಿನಗಳಲ್ಲಿ ಅಸೋಸಿಯೇಷನ್ ಮೆಸ್ ನಲ್ಲಿ ದುಡಿಯುತ್ತಿದ್ದ ಹಿರಿಯ ಆಡುಗೆ ಭಟ್ಟರ ಹೆಸರು 'ಅಡುಗೆ ರಾಮಣ್ಣ',(ಇವರು ಮೊಟ್ಟಮೊದಲು ಬಂದು ಸೇರಿದ ಅಡುಗೆ ಭಟ್ಟರು,ತಮ್ಮ ನಿವೃತ್ತಿಯವರೆವಿಗೂ ಅಸೋಸಿಯೇಷನ್ ನಲ್ಲೇ ಸೇವೆ ಸಲ್ಲಿಸಿದರು) ಮತ್ತು, ಅವರ ಡೆಪ್ಯುಟಿ, ಶ್ರೀ.ಪುಟ್ಟಣ್ಣ,ನವರ ನೇತೃತ್ವದಲ್ಲಿ, ಅವರ ಸಂಗಡಿಗರಾಗಿದ್ದ ಕುಟ್ಟಿ,ರಾಜು,ಪುಷ್ಪರಾಜ್,ಮಣಿಅಯ್ಯರ್,ಮೊದಲಾದವರು, ಒಳ್ಳೆಯ ಊಟೋಪಚಾರಗಳಿಂದ ಎಲ್ಲಾ ಸದಸ್ಯರಿಗೂ ಅಚ್ಚು-ಮೆಚ್ಚಾಗಿದ್ದರು. ಇದು ಕೆಲವು ಹಳೆಯ ಸದಸ್ಯರ ಅನುಭವ. ಇದಕ್ಕೂ ಹಿಂದೆ, ಅಂದರೆ ಸುಮಾರು, ೧೯೨೩-೨೪ ರ, ಸಮಯದಲ್ಲಿ ಹೇಗಿತ್ತು, ಎಂದು ತಿಳಿಯುವ ಆಸಕ್ತರು ಕೆಲವರು.

'ದ ಮೈಸೂರ್ ಅಸೋಸಿಯೇಷನ್',ನಡೆದು ಬಂದ ಬಗೆ[ಬದಲಾಯಿಸಿ]

'ಆಗಿನ ಕಾಲದಲ್ಲಿ ಮೈಸೂರ್ ಅಸೋಸಿಯೇಷನ್ ಬಂಗಲೆಯ ರೂಪದಲ್ಲಿತ್ತು

೧೯೨೩ ರ ಸಮಯದಲ್ಲಿ ಕೆಲವು ಮೈಸೂರಿನಿಂದ ನೌಕರಿಗಾಗಿ ಬಂದ ಕನ್ನಡ ನಾಡಿನ ಹುಡುಗರು, ಹಾಗೂ ಅದೇ ಮನೋಭಾವದ ಸಹೃದಯ ಕನ್ನಡಿಗರಲ್ಲೆನೇಕರು, ಮಾಟುಂಗ ಪ್ರದೇಶದ ನಪ್ಪೂ ಉದ್ಯಾನ ದ ಬಳಿಯ ವೇಲ್ಜಿಭಾಯಿ ಹಾಲ್, ನಲ್ಲಿ ಬಾಡಿಗೆಕೊಟ್ಟು ಒಂದು ಚಿಕ್ಕ ಕೊಠಡಿಯಲ್ಲಿ, ಒಟ್ಟುಗೂಡಿ, ಕನ್ನಡ ದೈನಂದಿಕಗಳನ್ನು ಓದುವುದು ಮತ್ತು ವಿಚಾರ-ವಿನಿ ಮಯ ಮಾಡಿಕೊಳ್ಳುತ್ತಿದ್ದರು. ಹಾಗೆಯೇ ಅದು ಬೆಳೆದು, ೨೬, ಫೆಬ್ರವರಿ, ೧೯೨೬, ರಲ್ಲಿ ಮೈಸೂರ್ ಅಸೋಸಿಯೇಷನ್, ವಿಧ್ಯುಕ್ತವಾಗಿ ಪ್ರಾರಂಭವಾಯಿತು. ಆ ಕನ್ನಡಿಗರ ಮುಖ್ಯಸ್ಥರು, ಶ್ರೀ.ದಿವಾನ್ ಬಹಾದ್ದುರ್ ರಾಮಸ್ವಾಮಿ ಗಳು. ಇವರು ಆಗಿನ ಬಾಂಬೆ ಪ್ರೆಸಿಡೆನ್ಸಿ ಯಲ್ಲಿ ಪ್ರತಿಷ್ಠಿತ ಹುದ್ದೆಯಲ್ಲಿದ್ದರು. ಇನ್ನೊಬ್ಬ ಲವಲವಿಕೆಯ ವ್ಯಕ್ತಿ-ಶ್ರೀ. ಚಂದ್ರಶೇಖರಶರ್ಮ. ಶರ್ಮರು ಒಳ್ಳೆಯ ಲೇಖಕರು. ಕನ್ನಡ ನವೋದಯ ಸಾಹಿತ್ಯದ ಆರಾಧಕರು. 'ಪ್ರಭೋಧನ', ಎಂಬ ಮಾಸಪತ್ರಿಕೆಯನ್ನು ಸುಮಾರು ೩ ವರ್ಷಗಳಕಾಲ ನಡೆಸಿಕೊಂಡು ಬಂದರು. ಇವರು ಮುತುವರ್ಜಿವಹಿಸಿ, ಆ ಚಿಕ್ಕ ಸಂಘದ ರೆಜಿಸ್ಟ್ರೇಷನ್,ಮಾಡಿಸಿದರು. ಹೀಗೆಯೇ ಮುಂದುವರೆದು ಆಸಕ್ತರ ಸಹಾಯದಿಂದ, ಬೊಂಬಾಯಿ ನಗರದ ಕನ್ನಡಿಗರ ಮಕ್ಕಳಿಗೆ, ಒಂದು ಶಾಲೆಯ ವ್ಯವಸ್ಥೆಯೂ ಆಯಿತು. ಮೊದಲು ಒಬ್ಬ ಶಿಕ್ಷಕಿ, ಹಾಗೂ ಜೊತೆಗೆ, ಒಬ್ಬ ಜವಾನನಿಂದ ಆರಂಭವಾದ ಈ ಶಾಲೆ, ಈಗ ಅನೇಕ ವೈವಿಧ್ಯಮಯ ಕಾರ್ಯಕ್ರಮಗಳ ಕೇಂದ್ರ ಬಿಂದುವಾಗಿದೆ. ೧೯೨೯ ರಲ್ಲಿ ಶ್ರೀ. ಬಸವಪ್ಪ ಶಾಸ್ತ್ರಿ, ಬರೆದುಕೊಟ್ಟ ನಾಟಕವನ್ನು ಕನ್ನಡಿಗರನ್ನೆಲ್ಲಾ ಕೂಡಿಕೊಂಡು " ನಪ್ಪೂ ಹಾಲ್ " ನಲ್ಲಿ ನಾಟಕವನ್ನು ಆಡಿದರು. ಶ್ರೀ.ಗಂಗಾಧರಯ್ಯನವರ ಮುಂದಾಳತ್ವದಲ್ಲಿ, ಆದ ಸಂಭ್ರಮದ ಕಾರ್ಯಕ್ರಮವಿದು. ಗಂಗಾಧರಯ್ಯನವರು ಅಸೋಸಿಯೇಷನ್ ನ ೨ ನೇ ಅಧ್ಯಕ್ಷರು, ಹಾಗೂ ವೃತ್ತಿಯಲ್ಲಿ ಅಂದಿನ ದಿನದಲ್ಲಿ ಸುಪ್ರಸಿದ್ಧ ಲಾಯರ್ ಆಗಿದ್ದರು. ಹೀಗೆಯೇ ಸದಸ್ಯರ ಸಂಖ್ಯೆ, ಕ್ರಮೇಣ ಬೆಳೆದು ೧೦೦ ರವರೆಗಾಯಿತು. ಬಾಂಬೆ ಮ್ಯುನಿಸಿಪಲ್ ಕಾರ್ಪೊರೇಷನ್, ದಾದರ್-ಮಾಟುಂಗಾ ವಲಯವನ್ನು ವಿಸ್ತರಿಸಿ, ಅಭಿವೃದ್ಧಿ ಪಡಿಸುವ ಯೋಜನೆ ಹಾಕಿಕೊಂಡಿತ್ತು. ಅವರು ಬೇಕಾದ ಜನರಿಗೆ, ಕಲೆ, ಕ್ರೀಡೆಗಳನ್ನು ಬೆಳಸಿ ಅಭಿವೃದ್ಧಿಪಡಿಸುವ ಸಂಘ-ಸಂಸ್ಥೆಗಳಿಗೆ ಸ್ವಲ್ಪ ಜಾಗವನ್ನು ಮೀಸಲಾಗಿಟ್ಟಿದೆಯೆಂದು ತಿಳಿಸಿ, ಮೊದಲ ಕಂತಿನ ಹಣ ೨,೦೦೦ ಕೊಟ್ಟು, ಪ್ರತಿವರ್ಷವೂ ಲೀಸ್ ಹಣ ರು. ೧/- ರಂತೆ, ೯೯ ವರ್ಷಗಳವರೆಗೂ ಕೊಡಲು ತಿಳಿಸಿತು. ಹಣದ ಮುಗ್ಗಟ್ಟಿನಿಂದ ಅಸೋಸಿಯೇಷನ್, ಒಂದು ಸಿಂಗಲ್ ಪ್ಲಾಟನ್ನು ಮಾತ್ರ ಖರೀದಿಸಿತು. ಹಾಗಾಗಿ ೩೯೩, ಭಾವುದಾಜಿ ರಸ್ತೆ, 'ಅಸೋಸಿಯೇಷನ್' ನ ಒಂದು ಚಿರ-ಆಸ್ತಿಯಾಗಿ ನಮ್ಮೆಲ್ಲರಿಗೆ ಮನರಂಜನೆ, ಹಾಗೂ ಬೇರೆ, ಬೇರೆ ಸೌಲಭ್ಯಗಳನ್ನು ಒದಗಿಸುತ್ತಾಬಂದಿದೆ. ಮಾನಸಿಕವಾಗಿ ಒಂದು ಸಂಘಟನೆ ನಮ್ಮೆಲ್ಲರ ಸಹಾಯಕ್ಕೆ ಯಾವಕಾಲಕ್ಕೂ ಸಿದ್ಧವಿದೆಯೆನ್ನು ಮಾನಸಿಕಸ್ಥಿತಿ, ನೆಮ್ಮದಿಯನ್ನು ಸ್ಥಾಪಿಸಿದೆ. ನಾಟಕದಿಂದ ಸ್ಪೂರ್ಥಿಗೊಂಡ ನಮ್ಮ ಕಲಾವಿದರು, ೧೯೯೨-೩೩ ರಲ್ಲಿ, ಒಂದು ಸ್ವಂತ-ಕಟ್ಟಡವನ್ನು ನಿರ್ಮಾಣಮಾಡುವ ಸಲುವಾಗಿ, ಹಣಸಂಗ್ರಹಿಸುವ ಬೃಹತ್ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಶ್ರೀ. ಆರ್.ನಾಗೇಂದ್ರರಾವ್, "ಶಕುಂತಲ, " ನಾಟಕದಲ್ಲಿ ಅಭಿನಯ ಮಾಡಿದ್ದನ್ನು ಇಲ್ಲಿ ದಾಖಲಿಸುವುದು ಸಮಂಜಸ. ಇವರು ಮುಂದೆ ನಾಟಕ ಕಂಪೆನಿಗಳಲ್ಲಿ ದುಡಿದು, ನಿಧಾನವಾಗಿ ಚಲನಚಿತ್ರದಲ್ಲೂ ಪಾದಾರ್ಪಣೆಮಾಡಿದರು. "ಬಾಂಬೆ ಸೆಂಟ್ರೆಲ್," ನಲ್ಲಿ ಪ್ರಾರಂಬಿಸಿದ್ದ, "ಯಮುನಾಬಾಯಿ ನಾಯರ್ ಆಸ್ಪತ್ರೆ ",ಗೂ ಹಣಸಹಾಯವಾಯಿತು.

ಉದ್ಯೋಗಪತಿ, ಶ್ರೀ.ಆರ್. ಡಿ. ಚಾರ್, ರ ಕೊಡುಗೆ[ಬದಲಾಯಿಸಿ]

'ಶ್ರೀ.ಆರ್.ಡಿ.ಚಾರ್,'

ಆಗಿನ ಕಾಲದಲ್ಲಿ, ಬೊಂಬಾಯಿಯಲ್ಲಿ ದೊಡ್ಡ ಉದ್ಯೋಗವನ್ನು ನಿರ್ವಹಿಸುತ್ತಿದ್ದ ಸಮರ್ಥ, ಉದ್ಯೋಗಪತಿ, ಕನ್ನಡಿಗ, ಶ್ರೀ.ಆರ್.ಡಿ.ಚಾರ್ ತಮ್ಮ ದೇಣಿಗೆ, ೫,೦೦೦ ರೂ.ಗಳನ್ನು ಕೊಟ್ಟು, ಮೈಸೂರ್ ಅಸೋಸಿಯೇಷನ್ ಕಟ್ಟಡದ ಕೆಲಸವನ್ನು ಸುಪ್ರಸಿದ್ಧ ಕಟ್ಟಡ ನಿರ್ಮಾಪಕ, ಶ್ರೀ..ಬಿ.ವಿ.ಎಸ್.ಐಯ್ಯಂಗಾರ್ ರವರಿಗೆ ವಹಿಸಿಕೊಟ್ಟರು. ಆಗಿನ ಬೊಂಬಾಯಿನ ಹಲವಾರು ಸುಪ್ರಸಿದ್ಧ ಕಟ್ಟಡಗಳನ್ನು ನಿರ್ಮಿಸಿ ಹೆಸರಾಗಿದ್ದ ಇಂಜಿನಿಯರ್,ಶ್ರೀ.ಬಿ.ವಿ.ಎಸ್.ಐಯ್ಯಂಗಾರರು, ಸನ್.೧೯೩೪ ರ ಹೊತ್ತಿಗೆ, ಹಳೆಯ ಭವನವನ್ನು ಕೆಡವಿ,ಮೊದಲಿನ ಸ್ಥಳದಲ್ಲಿ ಒಂದು ಭವ್ಯ ಮಹಡಿ ಕಟ್ಟಡವನ್ನು ನಿರ್ಮಿಸಿದರು. ೧,೨೦೦ ಸ್ಕೇ.ಫೀಟ್ ಅಳತೆಯ, ಒಂದು ಪೋರ್ಟಿಕೊ, ವನ್ನೊಳಗೊಂಡ ಕಟ್ಟಡದ ಮುಂದೆ, ಹುಲ್ಲುಬೆಳಸಲು ಅನುಕೂಲವಿತ್ತು. ಮೈಸೂರಿನ ರಾಜಮಾತೆಯವರ ಹೆಸರಿನಲ್ಲಿ,ಶ್ರೀ. ವಾಣಿವಿಲಾಸ್ ಮೆಮೋರಿಯಲ್ ಹಾಲ್," ಎಂಬ ಹೆಸರಿನೊಂದಿಗೆ ಪ್ರಾರಂಭವಾಯಿತು. ಎಮ್.ಎನ್. ಅಯ್ಯಂಗಾರರು ಪುಸ್ತಕಗಳನ್ನೂ, ಕಪಾಟುಗಳನ್ನೂ ಕೊಟ್ಟರು. ಶ್ರೀ ನಾನ್ ಜಿ, ದೇವ್ ಸಹಾಯ್, ಬಿಲಿಯರ್ಡ್ಸ್ ಟೇಬಲ್ಲನ್ನು ಕೊಟ್ಟರು. ಸನ್.೧೯೩೦ ರಲ್ಲಿ ಬೊಂಬಾಯಿಗೆ ನೌಕರಿಗೆಂದು ವಲಸೆ ಬಂದಿದ್ದ ಯುವಕರೆಲ್ಲಾ ಸೇರಿ, 'ಒಂದು ವಾಲಿಬಾಲ್ ಕೋರ್ಟ್' ಮಾಡಿಕೊಂಡರು. ರಾಮನವಮಿ,ವಿಜಯದಶಮಿ,ಗಣೇಶಚತುರ್ಥಿ,ಯುಗಾದಿ ಮೊದಲಾದ ಭಾರತೀಯ ಹಬ್ಬಗಳನ್ನೂ, ಗೀತಾಪ್ರವಚನಶಾಲೆಗಳನ್ನೂ,'ಶ್ರೀ.ವೇ.ಬ್ರ. ಗೋಪಾಲಾಚಾರ್' ಶುರುಮಾಡಿದರು. ಶಾಸ್ತ್ರೀಯ ಸಂಗೀತದ ಶಾಲೆಗಳು ತಲೆಯೆತ್ತಿಕೊಂಡವು.

ಕಟ್ಟಡ ಮೇಲೆಕ್ಕೆ ಬೆಳೆಯಿತು[ಬದಲಾಯಿಸಿ]

೧೯೩೬ ರಲ್ಲಿ,ಕಟ್ಟಡಕ್ಕೆ ಮತ್ತೊಂದು ಅಂತಸ್ತನ್ನು ಸೇರಿಸಲಾಯಿತು. ೧೯೩೬ ರಲ್ಲಿ, ಮೈಸೂರಿನ ಹೆಸರಾಂತ ದಿವಾನರುಗಳು, ಮೈಸೂರ್ ಅಸೋಸಿಯೇಷನ್ ಗೆ ಭೇಟಿಕೊಟ್ಟರು. ೧೯೩೭ ರಲ್ಲಿ ಮೈಸೂರಿನ ದೊರೆ, ಶ್ರೀ.ಜಯಚಾಮರಾಜೇಂದ್ರ ಒಡೆಯರ್ ರವರು, ತಮ್ಮ ಧರ್ಮಪತ್ನಿಯವರ ಜೊತೆ, ಬಂದು ಅಸೋಸಿಯೇಷನ್,ನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ೧೯೩೭ ರಲ್ಲಿ. ಸರ್ ಎಮ್.ವಿಶ್ವೇಶ್ವರಯ್ಯನವರು, ಬಿ.ಎಮ್.ಶ್ರೀಕಂಠಯ್ಯನವರು, ಮಾಸ್ತಿ ವೆಂಕಟೇಶ ಅಯ್ಯಂಗಾರ್ರವರು, ದ.ರಾ.ಬೇಂದ್ರೆಯವರು, ತೀ.ನಂ.ಶ್ರೀ, ಪು.ತಿ.ನ, ಟಿ.ಪಿ.ಕೈಲಾಸಂ, ೧೯೪೮ ರಲ್ಲಿ ಕೆಲವು ನಾಟಕಗಳನ್ನು ಬರೆದು ಅಸೋಸಿಯೇಷನ್ ಕಲಾವಿದರ ಕೈಲಿ ಆಡಿಸಿದರು. ಹೀಗೆ ಸ್ವಲ್ಪ ಸ್ವಲ್ಪವಾಗಿ ಬೆಳೆದ ಸಂಸ್ಥೆ, ತನ್ನ ಗರಿಕೆದರಿಕೊಂಡು, ೧೯೩೭ ರಲ್ಲಿ, ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಿಕೊಟ್ಟಿತು.

ಕನ್ನಡ ಶಾಲೆಯ ಸ್ಥಾಪನೆ[ಬದಲಾಯಿಸಿ]

೧೯೨೭ ರಲ್ಲಿ, ಶುರುವಾದ ಕನ್ನಡಶಾಲೆ, ೧೯೨೯ ರಲ್ಲಿ ಕೆಲವು ಕಾರಣಗಳಿಂದ, ಅಂದರೆ, ಹಣ ಹಾಗೂ ಜಾಗದ ಅಭಾವದಿಂದ ಸ್ಥಗಿತವಾಯಿತು. ೧೯೩೯ ರಲ್ಲಿ, ಅಸೋಸಿಯೇಷನ್ ಆಂಗಣದೊಳಗೆ, ಚಿಕ್ಕದಾಗಿ ಮತ್ತೆ ಶುರುಮಾಡಲಾಯಿತು. ೧೯೪೮ ರವರೆಗೆ ಇದು, ಇದೆರೀತಿ ನಡೆದುಕೊಂಡುಹೋಯಿತು. ಎರಡನೆಯ ವಿಶ್ವಯುದ್ಧದ ಸಮಯದಲ್ಲಿ ಸಯಾನ್ ನಲ್ಲಿ ಕಟ್ಟಿದ್ದ, "ಆರ್ಮಿ ಬ್ಯಾರಕ್," ಗಳನ್ನು ಸ್ಕೂಲ್ ನಡೆಸಲು ಬಾಡಿಗೆಯಮೇಲೆ ಕೊಡುತ್ತಿದ್ದರು. ಇದನ್ನು ಉಪಯೋಗಿಸಿಕೊಂಡು, ೧೯೫೮ ರಲ್ಲಿ, ಶ್ರೀ.ಬಿ.ನಾರಾಯಣಸ್ವಾಮಿ, ಶ್ರೀ.ಆರ್.ಡಿ.ಚಾರ್, ಹಾಗೂ ಶ್ರೀ.ವೆಂಕಟೇಶಮೂರ್ತಿ, ಶ್ರೀ ಗೋಪಾಲಾಚಾರ್, ೧೯೫೮ ರಲ್ಲಿ, ವಡಾಲ ಹೈಸ್ಕೂಲನ್ನು ಕಟ್ಟಿಸಿದರು. ಶ್ರೀ. ಬಿ. ವಿ. ಎಸ್. ಅಯ್ಯಂಗಾರ್ ನಿರ್ಮಿಸಿದ ಈ ಕಟ್ಟಡದಲ್ಲಿ, ಸುಮಾರು ೨,೫೦೦ ಜನ ಮಕ್ಕಳಿಗೆ, ಕನ್ನಡ ಹಾಗೂ ಇಂಗ್ಲೀಷ್ ಮಾಧ್ಯಮಗಳಲ್ಲಿ ಶಿಕ್ಷಣವನ್ನು ಕೊಡಲಾಗುತ್ತಿದೆ. ೧೯೪೫ ರ ನಂತರ, ಹೊಸದಾಗಿ ಮುಂಬೈಗೆ ಯುವಕರು ಬರಲಾರಂಭಿಸಿದರು. "ವಾಲಿಬಾಲ್ ಆಟ" ದ ಬದಲು, "ಬ್ಯಾಸ್ಕೆಟ್ ಬಾಲ್" ಆಟದ ಗ್ರೌಂಡ್ ಸಿದ್ಧವಾಯಿತು. ೧೯೪೯, ೧೯೫೦, ಮತ್ತು ೧೯೫೨ ರಲ್ಲಿ, ಛಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ ಮುಂದಾಳು ಅಟಗಾರರು, ಶ್ರೀ. ಎಸ್. ಕೆ. ಅಯ್ಯಂಗಾರ್, ಶ್ರೀ. ಗೋಪಿನಾಥ್, ಶ್ರೀ. ಎಸ್. ಕೆ. ಸೀತಾರಾಂ, ಶ್ರೀ. ಬಾಬು ರಾಮಸ್ವಾಮಿ. ಶ್ರೀಮತಿ. ವಿಜಯರಾಜಗೋಪಾಲ್. ೧೯೫೦ ರಲ್ಲಿ, 'ಟೇಬಲ್ ಟೆನ್ನಿಸ್ ಬೋರ್ಡ'ನ್ನು ಕೊಟ್ಟಮೇಲೆ, ೧೯೨೬ ರವರೆಗೆ, ಕೇರಂ, ಚೆಸ್ಆಟಗಳು ಪ್ರತಿ-ನಿತ್ಯದ ಕಾರ್ಯಕ್ರಮಗಳಾಗಿದ್ದವು.

ಶ್ರೀ.ವಿ.ಕೆ.ಮೂರ್ತಿಯವರ ಕೊಡುಗೆ[ಬದಲಾಯಿಸಿ]

೧೯೪೮ ರಲ್ಲಿ, ಕೆಲವು ಸಿನೆಮಾಟೋಗ್ರಾಫರ್ ಗಳು, ಶ್ರೀ. ಜಯಚಾಮರಾಜೇಂದ್ರಪಾಲಿಟೆಕ್ನಿಕ್, ಬೆಂಗಳೂರಿನಿಂದ ಬೊಂಬಾಯಿಗೆ ಬಂದರು. ಶ್ರೀಯುತ ಪುಟ್ಟಣ್ಣನವರು, ಒಳ್ಳೆಯ ನಾಟಕ ಕಲಾವಿದರು, ಹಾಗೂ ನಾಟಕಕಲೆಯ ಆಸಕ್ತರು. * ಶ್ರೀ.ವಿ.ಕೆ.ಮೂರ್ತಿ ಯವರು ಅವರಲ್ಲಿ ಪ್ರಮುಖರು. ಶ್ರೀ.ವಿ.ಕೆ.ಮೂರ್ತಿಯವರು(ಕುಟ್ಟಿ) ಕನ್ನಡ ನಾಟಕಗಳನ್ನಾಡಿಸಿ, ನಾಟಕ-ಕಲೆಯನ್ನು ಅತ್ಯಂತ ಜನಪ್ರಿಯಮಾಡಿದದರು. ಅವರು, ಅಸೋಸಿಯೆಷನ್ ನಲ್ಲಿ ನಾಟಕ ಕಲೆ ಯನ್ನು ಹುಟ್ಟುಹಾಕಿದರು. ಅಲ್ಲಿಯವರೆಗೆ ಹೆಣ್ಣುಪಾತ್ರಗಳನ್ನು ಗಂಡಸರೇ ಮಾಡುತ್ತಿದ್ದರು. ಆದರೆ, ಮೂರ್ತಿಯವರು ಅದನ್ನು ತಪ್ಪಿಸಿ, ಹೆಣ್ಣುಪಾತ್ರಗಳನ್ನು ಮಾಡಲು ಹೆಣ್ಣುಮಕ್ಕಳು ಮುಂದುಬರುವಂತೆ ಪ್ರೋತ್ಸಾಹಿಸಿದರು. ಹಾಗೆ ಬಂದ ಪ್ರತಿಭಾವಂತರಲ್ಲಿ, ಶ್ರೀಮತಿ. ಮಧುರಕೃಷ್ಣಸ್ವಾಮಿ, ಶ್ರೀಮತಿ. ಸುಶೀಲ ರಾವ್, ಶ್ರೀಮತಿ. ಶಾರದಮ್ಮ ನಾರಾಯಣಸ್ವಾಮಿ, ಶ್ರೀಮತಿ. ಕುಂತಿ ದುಗ್ಗಪ್ಪಯ್ಯ, ಶ್ರೀಮತಿ. ಗೀತವಿಶ್ವನಾಥ್, ಶ್ರೀಮತಿ. ಉಮಾಪ್ರಭಾಕರ್, ಶ್ರೀಮತಿ. ಉಷಾ ಜೈರಾಮ್, ಶ್ರೀಮತಿ. ರಮಾ ಹರಿಹರನ್, ಶ್ರೀಮತಿ. ರಮಾವೆಂಕಟೇಶ್, ಶ್ರೀಮತಿ. ಭಾರತಿಪ್ರಸಾದ್, ಶ್ರೀಮತಿ. ಲಲಿತಬಾಲು (ದಿ), ಶ್ರೀಮತಿ. ಉಶಾಶ್ರೀಕಾಂತ್, ಕುಮಾರಿ. ಸರಿತ ಜೈರಾಂ, ಕುಮಾರಿ. ಶಾರ್ವರಿ, ಕುಮಾರಿ. ಸೌಮ್ಯ, ಶ್ರೀಮತಿ. ರತ್ನಾರಾವ್, ಪ್ರಮುಖರು. ಅಂದಿನ ಪ್ರಮುಖ ನಾಟಕ ಕಾಲಾವಿದರಲ್ಲಿ, ಶ್ರೀ. ದುಗ್ಗಪ್ಪಯ್ಯನವರು, ರವೀಂದ್ರ, ಲಕ್ಷ್ಮಣ ಅಯ್ಯರ್, ಡಾ. ಶ್ರೀನಿವಾಸ್, ಚಿ. ಅರ್ಜುನ್ ಬಾಲು, ಕೄಷ್ಣ, ಲಕ್ಷ್ಮಣ್ ರಾವ್, ರಾಘವೇಂದ್ರ, ದೇಸಾಯಿ, ಮುಖ್ಯರು.

ಶ್ರೀ. ಜಯಚಾಮರಾಜೆಂದ್ರ ವೊಡಿಯರ್ ರವರಿಂದ ಉದ್ಘಾಟನೆ[ಬದಲಾಯಿಸಿ]

೧೯೫೧ ರಲ್ಲಿ, ಅಸೋಸಿಯೇಷನ್ ಬೆಳ್ಳಿಹಬ್ಬವನ್ನು ಆಚರಿಸಿತು. ಶ್ರೀ. ಜಯಚಾಮರಾಜೇಂದ್ರ ಒಡೆಯರ್ ರವರು ಅದನ್ನು ಉಧ್ಘಾಟಿಸಿ, ಒಂದು ಅಶೋಕ ಗಿಡವನ್ನು ನೆಟ್ಟರು. ೧೯೭೦ ರಲ್ಲಿ ಶ್ರೀ. ಪರ್ವತವಾಣಿ, ಶ್ರೀ. ಕೈಲಾಸಂ ಮತ್ತು ಶ್ರೀ. ಕ್ಷೀರಸಾಗರರು ಬರೆದು ನಿರ್ದೇಶಿಸಿದ, ನಾಟಕಗಳು ಹೊಸ ಅಲೆಯನ್ನು ಸೃಶ್ಟಿಸಿದವು. ಅಸೋಸಿಯೇಷನ್ ನ ಕಲಾವಿದರಾದ, ಶ್ರೀ. ಬಿ.ಎನ್.ದುಗ್ಗಪ್ಪಯ್ಯ, ಡಾ.ಬಿ.ಆರ್.ಮಂಜುನಾಥ್, ಶ್ರೀಮತಿ.ಗೀತಾವಿಶ್ವನಾಥ್, ತಾವೇ ಬರೆದು ನಿರ್ದೇಶಿಸಿ, ಅದರಲ್ಲಿ ಪಾತ್ರಗಳನ್ನೂ ಮಾಡಿದರು. ಅಂದಿನ ಆ ಜನಪ್ರಿಯ ನಾಟಕಗಳು , ಬೆಕ್ಕಿನ ಕಣ್ಣು, ಬೆಳ್ಳಿಬೈಲು, ಬಿತ್ತಿ ಬೆಳೆದವರು, ಕೂಪಮಂಡೂಕ, ರಂಗೋಲಿ ನ್ಯಾಯ, ಹೂಗಿಡದಲ್ಲಿ ಹೂ ಅರಳಿತು, ಪಪ್ನಾ, ದೇವ್ರನ್ನ ನೋಡ್ಬೈಕು.

ಶ್ರೀಮತಿ.ಗೀತಾವಿಶ್ವನಾಥ್ ರವರ ಕೊಡುಗೆ[ಬದಲಾಯಿಸಿ]

೧೯೬೦, ೭೦, ೮೦ ರಲ್ಲಿ, ಕೆಲವು ಕನ್ನಡದ ಬ್ಯಾಲೆ ಗಳನ್ನು, ತಂದು ಯಶಸ್ವಿಯಾಗಿ ರಂಗಮಂಚದಮೇಲೆ ಪ್ರದರ್ಶಿಸಿದವರಲ್ಲಿ ಶ್ರೀಮತಿ. ಗೀತಾವಿಶ್ವನಾಥ್,ರ ಕೊಡುಗೆ ಅನನ್ಯ. ಕೃಷ್ಣಾಯ ತುಭ್ಯಂ, ಅಂತಃಪುರಗೀತೆಗಳು, ಕೋಳೂರು ಕೊಡಗೂಸು, ಭಜಗೋವಿಂದಂ. ಅಸೋಸಿಯೇಷನ್ ನಲ್ಲಿ, ತಮ್ಮ ನೃತ್ಯವನ್ನು ಪ್ರದರ್ಶಿಸಿದ ಕೆಲವು ಪ್ರಖ್ಯಾತ ನರ್ತಕಿಯರಲ್ಲಿ ಪದ್ಮಿನಿ,ರಾಗಿಣಿ, ವೈಜಯಂತಿಮಾಲ, ಸುಧಾ ದೊರೈಸ್ವಾಮಿ, ವಿಜಿ ಜನ್ನ, ಶೆಟ್ಟಿಸಹೋದರಿಯರು, ಲಲಿತ ಶ್ರೀನಿವಾಸನ್, ವೆಂಕಟಲಕ್ಷಮ್ಮ, ಪದ್ಮಿನಿ ರವಿ, ನಂದಿನಿ ಅಳ್ವ ಸೇರಿದ್ದಾರೆ. ಶ್ರೀ. ರಾಜರಾಜೇಶ್ವರಿ ಭರತನಾಟ್ಯ ಮಂಡಳಿ ಯವರು ಗುರುಗಳಾದ ಗೋವಿಂದರಾಜ ಪಿಳ್ಳೆ, ಮಹಾಲಿಂಗಮ್ ಪಿಳ್ಳೆ, ಕಲ್ಯಾಣಸುಂದರಮ್ ಪಿಳ್ಳೆ, ಶೃಂಗಾರ ಮ್ಯೂಸಿಕ್, ವಿ. ಕೆ ಮೂರ್ತಿ ಯವರು ಮ್ಯುಸಿಕ್ ಆರ್ಕೆಸ್ಟ್ರ, ಶ್ರೀಮತಿ ಚೊಕ್ಕಮ್ಮ, ನೀಲಮ್ಮ ಕದಂಬ, ಗಂಗುಬಾಯಿ ಹಾನಗಲ್, ಸುಕನ್ಯ ಪ್ರಭಾಕರ್, ನಾಗಮಣಿ ಶ್ರೀನಾಥ್, ಟಿ.ಎಸ್. ಸತ್ಯವತಿ, ಕಿಶೋರಿ ಅಮೋನ್ ಕರ್, ವಿಜಯಲಕ್ಷ್ಮೀನಾಥನ್, ಪಂ. ಭೀಮ್‍ಸೇನ್ ಜೋಶಿ, ಮಲ್ಲಿಕಾರ್ಜುನ ಮನ್ಸೂರ್, ಬಸವರಾಜ್ ರಾಜ್‍ಗುರು, ಕುಮಾರ ಗಂಧರ್ವ, ಕಾರ್ತಿಕ ಕುಮಾರ್, ಆರ್. ಕೆ. ಶ್ರೀಕಂಠನ್, ಆರ್. ಕೆ. ಪದ್ಮನಾಭ, ಶಂಕರ್, ಅಸೋಸಿಯೇಷನ್ ನಲ್ಲಿ ಬಂದು, ಹಲವಾರು ಸಂದರ್ಭಗಳಲ್ಲಿ ಕಾರ್ಯಕ್ರಮವನ್ನು ಕೊಟ್ಟಿದ್ದಾರೆ. ಆಗ,ಮೈಸೂರ್ ಅಸೋಸಿಯೇಷನ್ ನ ಸ್ವಂತ ನಾಟ್ಯಮಂದಿರವಿರಲಿಲ್ಲ. ಬೊಂಬಾಯಿ ನಗರದ ಕೆಲವು ಪ್ರಮುಖ ರಂಗಮಂದಿರಗಳಲ್ಲಿ, ಇವರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

'ಬಂಗಾರದ ಹಬ್ಬದ ಆಚರಣೆ'[ಬದಲಾಯಿಸಿ]

೧೯೭೬ ರಲ್ಲಿ, ಮೈಸೂರ್ ಅಸೋಸಿಯೇಷನ್ ತನ್ನ 'ಗೋಲ್ದನ್ ಜ್ಯುಬಿಲಿ ಹಬ್ಬ'ವನ್ನು ನೆರವೇರಿಸಿಕೊಂಡಿತು. ಆಗ, ವರ್ಷಪೂರ್ತಿ ನಡೆಸಿದ ಸಮಾರಂಭದ ಕಾರ್ಯಕ್ರಮಗಳ ಸಮಾರಂಭದ ಉದ್ಘಾಟನೆಯನ್ನು ಶ್ರೀ ದೇವರಾಜ್ ಅರಸು ರವರು,ಮಾಡಿದ್ದರು. ೨೦ ವರ್ಷಗಳ ಎಂಡೋಮೆಂಟ್ ಲೆಕ್ಚರ್ ಸೀರೀಸ್ ನಲ್ಲಿ, ಪಾಲ್ಗೊಂಡ ಮಹನೀಯರು :

೧೯೮೬ ರಲ್ಲಿ ವಜ್ರಮಹೋತ್ಸಾವಾಚರಣೆ[ಬದಲಾಯಿಸಿ]

ಮಹಾರಾಷ್ಟ್ರದ ಗವರ್ನರ್, ಆಗಿದ್ದ, 'ಡಾ. ಶ್ರೀ.ಶಂಕರದಯಾಳ್ ಶರ್ಮ', ಸಮಾರಂಭದಲ್ಲಿ ಉಪಸ್ಥಿತರಿದ್ದರು. ಅನೇಕ ವರ್ಷಗಳಿಂದ ಅಸೋಸಿಯೇಷನ್ ಕನ್ನಡದ ಮತ್ತು ಕನ್ನಡೇತರ ಚಟುವಟಿಕೆಗಳಬಗ್ಗೆ ಸಾಕಷ್ಟು ಬೆಳಕು ಚೆಲ್ಲಿಯಾಗಿತ್ತು. ಈಗ, ಕನ್ನಡದ ಜೊತೆಗೆ, ಭಾರತೀಯ ಭಾಷೆಗಳ, ಸಂಸ್ಕೃತಿಗಳೆಲ್ಲದರ ಪರಿಚಯಮಾಡುವ ಉದ್ದೇಶ್ಯಕ್ಕೆ ಒತ್ತುಕೊಡಲಾಯಿತು. ೧೯೮೬ ರಲ್ಲಿ, ಕನ್ನಡ ಮರಾಠಿ ಜಾನಪದ ನೃತ್ಯಕಲಾಪ್ರಕಾರಗಳನ್ನು ಪ್ರಸ್ತುಪಡಿಸಲಾಯಿತು. ಕನ್ನಡ, ಹಿಂದಿ, ಮರಾಠಿ, ಇಂಗ್ಲಿಷ್ ನಾಟಕಗಳ, ಒಂದು ಉತ್ಸವವನ್ನು ಏರ್ಪಡಿಸಲಾಯಿತು. ಈಗ,ಇದನ್ನು ಪ್ರವರ್ಷವೂ ಆಚರಿಸಲಾಗುತ್ತಿದೆ. ಗಿರೀಶ್ ಕಾರ್ನಾಡ್, ವಿಜಯ್ ತೆಂದುಲ್ಕರ್, ಜಬ್ಬರ್ ಪಟೇಲ್, ಸತ್ಯದೇವ್ ದುಬೆ, ಎಮ್. ಎಸ್, ಸತ್ಯು, ನಾದಿರಾ ಬಬ್ಬರ್, ರಮೇಶ್ ತಲ್ವಾರ್, ರಾಮು ರಾಮಚಂದ್ರನ್, ಮತ್ತು ಇನ್ನೂ ಕೆಲವರು, ಬಂದು ಸಹಭಾಗಿಗಳಾಗಿ ಪಾಲುಗೊಂಡಿದ್ದಾರೆ. ಮೈಸೂರ್ ಅಸೋಸಿಯೇಷನ್ ಪ್ರಾಂಗಣದಲ್ಲಿ ಪ್ರತಿವರ್ಷದ ನವೆಂಬರ್ ತಿಂಗಳಲ್ಲಿ, ಹಿರಿಯ ಸಂಗೀತಕಾರರನ್ನು ಆಹ್ವಾನಿಸಿ, ಅವರಿಂದ ೧೫ ದಿನಗಳ ಸಂಗೀತ-ಕಮ್ಮಟಗಳನ್ನು ಏರ್ಪಡಿಸಲಾಗುವುದು. ಅದರಲ್ಲಿ, ಪ್ರಾದೇಶಿಕ ಸಂಗೀತಗಾರರನ್ನು ತರಪೇತುಮಾಡಿ ಯೋಗ್ಯ ಪ್ರಶಿಕ್ಷಣಕೊಡುವ, ಕೆಲಸ ಪ್ರಧಾನವಾದದ್ದು. ಅನಂತರದಲ್ಲಿ ಸಿಮಿನಾರ್ ಗಳನ್ನು ಮಾಡಿ, ಯುವಜನರಲ್ಲಿ ಶಾಸ್ತ್ರೀಯಸಂಗೀತದ ಅಭಿರುಚಿಯನ್ನು ಬಿತ್ತಿ, ಅವರುಗಳಿಂದಲೇ ತಮ್ಮ ಯೋಗದಾನಮಾಡುವ ಪ್ರಯೋಗ, ಯಶಸ್ವಿಯಾಗಿ ಕಾಣಿಸುತ್ತಿದೆ. ಈ ಅಭಿಯಾನದಲ್ಲಿ ತಮ್ಮ ಅಮೋಘಕೊಡುಗೆಯನ್ನು ಕೊಟ್ಟ, ವಿದ್ವಾನ್, ಆರ್. ಕೆ. ಶ್ರೀಕಂಠನ್, ಆರ್. ಕೆ. ಪದ್ಮನಾಭ, ಡಾ. ಸುಕನ್ಯಾ ಪ್ರಭಾಕರ್, ಡಾ. ಟಿ.ಎಸ್.ಸತ್ಯವತಿ, ಎಮ್.ಎಸ್.ಶೀಲ, ಶ್ಯಾಮಲಾ ಪ್ರಕಾಶ್, ಅಭಿನಂದನಾರ್ಹರು.

'ಅತ್ಯಾಧುನಿಕ ರಂಗಮಂಚದ ಉದ್ಘಾಟನೆ'[ಬದಲಾಯಿಸಿ]

'ಕರ್ನಾಟಕದ ಪರಂಪರೆಯ ಭಿತ್ತಿಚಿತ್ರ'

೧೯೯೯ ರಲ್ಲಿ, ೩೦೦ ಜನ, ಕುಳಿತುಕೊಳ್ಳುವ ವ್ಯವಸ್ಥೆಯ, ಅತ್ಯಾಧುನಿಕ ಹವಾನಿಯಂತ್ರಿತ, ಭವ್ಯ ರಂಗಮಂಚದ ಉದ್ಘಾಟನೆಯನ್ನು, ಮಹಾರಾಷ್ಟ್ರದ ಗವರ್ನರ್, 'ಡಾ. ಪಿ. ಸಿ. ಅಲೆಕ್ಸಾಂಡರ್' ರವರ ಹಸ್ತದಿಂದ ನೆರವೇರಿಸಲಾಯಿತು. ೨೦೦೦ ದಲ್ಲಿ ಇದೇ ತರಹದ, ಒಂದು ಮಿನಿ ಆಡಿಟೋರಿಯಮ್ ನ್ನು ಕಟ್ಟಲಾಯಿತು. ೨೦೦೦ ದಲ್ಲಿ ಕರ್ನಾಟಕ ಸರ್ಕಾರವು, ೭೫ ವರ್ಷಗಳ ಭವ್ಯ ಕಲೆ, ನೃತ್ಯ, ಸಂಗೀತಗಳನ್ನು ಹೊರನಾಡಿನಲ್ಲಿ ಪ್ರದರ್ಶಿಸುತ್ತಿರುವ ಒಂದು ಅತ್ಯಂತ ಚಟುವಟಿಕೆಯ ಪ್ರಭಾವಿ ಹಿರಿಯ ಸಂಸ್ಥೆಯೆಂದು, ಗುರುತಿಸಿ, " ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ," ಯನ್ನು ಪ್ರದಾನಮಾಡಲಾಯಿತು. ಹೊರನಾಡಿನ, ಕನ್ನಡಸಂಸ್ಥೆಗಳಿಗೆ ದೊರಕಿದ ಪ್ರಪ್ರಥಮ ಪ್ರಶಸ್ತಿಯೆಂಬ ಹೆಗ್ಗಳಿಕೆಗೆ, ಮೈಸೂರ್ ಅಸೋಸಿಯೇಷನ್ ಪಾತ್ರವಾಯಿತು.

'ಕೈಲಾಸಂ ರವರ, 'ನಾಟಕೋತ್ಸವ ಸಮಾರಂಭ'[ಬದಲಾಯಿಸಿ]

ಸೆಪ್ಟೆಂಬರ್, ೨೫, ೨೦೦೯ ರಂದು, ಟಿ.ಪಿ.ಕೈಲಾಸಂ ನಾಟಕೋತ್ಸವವನ್ನು ಮೈಸೂರ್ ಅಸೋಸಿಯೇಷನ್ ಹಮ್ಮಿಕೊಂಡಿತ್ತು. ಆ ದಿನ, ಖ್ಯಾತ ಸಾಹಿತಿ, ಶ್ರೀ. ವೈ. ವಿ. ಗುಂಡೂರಾವ್ ರವರಿಂದ 'ಸುತ್ತಮುತ್ತ' ನಾಟಕ ಪ್ರದರ್ಶಿಸಲ್ಪಟ್ಟಿತು. ೨೬ ರಂದು ಸಂಜೆ,'ಟಿ.ಪಿ.ಕೈಲಾಸಂ- ನಾಟಕಗಳ ಸರಮಾಲೆ', 'ಟಿ.ಪಿ.ಕೈಲಾಸಂ ಹಾಡುಗಳು', 'ಅಂತರಂಗ ನಾಟಕ ತಂಡ' ಬೆಂಗಳೂರಿನವರಿಂದ, ನಿರ್ದೇಶನ, ಶ್ರೀ.ಎಚ್.ವಿ.ನಟರಾಜ್ ರವರಿಂದ. ೨೭ ರಂದು, 'ವಿಚಾರ ಸಂಕಿರಣ-ಟಿ. ಪಿ. ಕೈಲಾಸಂರವರ ಬದುಕು, ಬರಹ, ಬವಣೆ'-ಖ್ಯಾತ ವಿಮರ್ಶಕ, ಶ್ರೀ. ಬಿ.ಎಸ್. ಕೇಶವರಾವ್ ರವರಿಂದ ನಡೆಯಿತು. ಡಾ. ಬಿ.ವಿ.ರಾಜರಾಂ ಅಧ್ಯಕ್ಷತೆಯಲ್ಲಿ, (ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು), ಡಾ.ಬಿ.ಆರ್.ಮಂಜುನಾಥ್, ಮುಂಬೈನ ಖ್ಯಾತನಾಟಕಕಾರರು,(ಡಾ.ಬಿ.ಆರ್.ಮಂಜುನಾಥ್ ರವರ ಅನುಪಸ್ತಿತಿಯಲ್ಲಿ), ಶ್ರೀ.ಮಂಜುನಾಥಯ್ಯನವರು ಭಾಷಣವನ್ನು ಮಂಡಿಸಿದರು. ಅದೇದಿನ, ರಾತ್ರಿ, ೭ ಗಂಟೆಗೆ,ಡಾ. ಬಿ.ವಿ.ರಾಜರಾಂ, ನಿರ್ದೇಶನದಲ್ಲಿ, 'ಹುತ್ತದಲ್ಲಿ ಹುತ್ತ', ನಾಟಕವಿತ್ತು. ಮುಂಬೈನಗರದ ನಾಟಕಾಸಕ್ತರು ಹೆಚ್ಚಿನಸಂಖ್ಯೆಯಲ್ಲಿ ಆಗಮಿಸಿ, ಟಿ.ಪಿ.ಕೈಲಾಸಂ ರವರ ನಾಟಕವನ್ನು ವೀಕ್ಷಿಸಿ ಆನಂದಿಸಿದರು.

'ಘಝಲ್ ಕಾರ್ಯಕ್ರಮ'[ಬದಲಾಯಿಸಿ]

'ಮೈಸೂರ್ ಅಸೋಸಿಯೇಷನ್' ನ ಹವಾನಿಯಂತ್ರಣದಿಂದ ಸುಸಜ್ಜಿತ ರಂಗಮಂಚ' ದ 'ಸತತ ಒಂದು ದಶಕದ ಸೇವೆ' ಯನ್ನು ನೆನೆಯಲು ೨೦೦೯ ನೇ, ಅಕ್ಟೋಬರ್, ೨೪ ರ ಸಂಜೆ, ಹಮ್ಮಿಕೊಂಡಿದ್ದ, ಕಾರ್ಯಕ್ರಮದಲ್ಲಿ, ತಮ್ಮ ಸುಂದರ 'ಘಝಲ್ ಸಂಗೀತ' ದಿಂದ ಎಲ್ಲರ ಮನತಣಿಸಿದ, 'ಶ್ರೀ. ಜಸ್ವಿಂದರ್ ಸಿಂಗ್' ವಂದನಾರ್ಹರು. 'ಇಪ್ಟಾ' ದ ಅಧ್ಯಕ್ಷ, 'ಶ್ರೀ. ಕುಲ್ದೀಪ್ ಸಿಂಗ್', ಕಾರ್ಯಕ್ರಮದಲ್ಲಿ ಹಾಜರಿದ್ದರು.

'ಲಯ ಲಹರಿ' ಕಾರ್ಯಕ್ರಮ[ಬದಲಾಯಿಸಿ]

೨೦೦೯ ರ ನವೆಂಬರ್, ೭ ನೇ ತಾರೀಖಿನ ಶನಿವಾರದಂದು, ಮೈಸೂರ್ ಆಸೋಸಿಯೇಷನ್ ನ ಭವ್ಯ ಸಭಾಂಗಣದಲ್ಲಿ, 'ಬೆಂಗಳೂರಿನ ಅಯ್ಯನಾರ್ ಕಾಲೇಜ್ ಆಫ್ ಮ್ಯೂಸಿಕ್', 'ಲಯಲಹರಿ',[A Concert of Percussion instruments] ಕಾರ್ಯಕ್ರಮವನ್ನು ಗಾನಕಲಾಶ್ರೀ, ವಿದ್ವಾನ್, ಶೀ.ಆನೂರು ಅನಂತಕ್ರಿಷ್ಣ ಶರ್ಮ, ಮತ್ತು ಅವರ ಸಂಗಡಿಗರು, ಚೆನ್ನಾಗಿ ನಡೆಸಿಕೊಟ್ಟರು. ಸಾಯಂಕಾಲ, ೭ ಗಂಟೆಗೆ ಆರಂಭವಾದ ಸಂಗೀತ ಕಾರ್ಯಕ್ರಮ, ಮುಗಿದದ್ದು, ೯-೪೦ ಕ್ಕೆ. ಅಲ್ಲಿ ನೆರೆದಿದ್ದ ಸಂಗೀತ ರಸಿಕರು ಸಂಗೀತಮಾಧುರ್ಯವನ್ನು ಸವಿದು, ಆನಂದಿಸಿದರು.

ಕನ್ನಡ ರಂಗಭೂಮಿಯ, ಸಂಶೋಧನಾ ಸೌಕರ್ಯಗಳು[ಬದಲಾಯಿಸಿ]

೨೦೦೧ ರಲ್ಲಿ, ಪ್ಲಾಟಿನಮ್ ಜ್ಯುಬಿಲಿ, ಮಾರ್ಚ್ ೨೦೦೭ ರಲ್ಲಿ, 'ಸಹಸ್ರ ಚಂದ್ರ ದರ್ಶನ," ವನ್ನೂ ಕಂಡಿತು. ೮೧ ವರ್ಷಗಳ ಸತತ ಸೇವೆಯ ಕಾಲದಲ್ಲಿ, ಮುಂದೆ ಒಂದು,"Advanced Centre for Research and Learning Performing Arts "ಎನ್ನುವ ಆಸೆಯಿದೆ. ಇಂತಹ ವಾತಾವರಣದಲ್ಲಿ ದೇಶದ ವಿವಿಧ ಮೂಲೆಗಳಿಂದ ಸಂಗೀತ ವಿದ್ವಾಂಸರು, ನೃತ್ಯಪಟುಗಳು, ಗುರುಗಳು, ರಂಗಭೂಮಿಯ ವಿಶೇಷಜ್ಞರು, ರಂಗ ನಾಟಕಲೇಖಕರು, ಒಂದುಗೂಡಲು ಸಹಾಯವಾಗುತ್ತದೆ. ಅಲ್ಲಿ ಪದವಿ, ಪದವಿಯೋತ್ತರ ಕೋರ್ಸ್ ಗಳಿಗೆ ವರ್ಷಪೂರ್ತಿ ನಡೆಸಲು ಸಹಾಯವಾಗುತ್ತದೆ. ಇದರಿಂದ ಮೈಸೂರು ಅಸೋಸಿಯೇಷನ್ ನ ಆಶೋತ್ತರಗಳು, ಪೂರ್ಣರೀತಿಯಲ್ಲಿ ಬಿಂಬಿತವಾಗಲು ಸಹಕಾರಿಯಾಗುತ್ತದೆ. ಮೇಲಿನ ಕಾರ್ಯಕ್ರಮಗಳನ್ನು ಸಾಕಾರಗೊಳಿಸಲು ಹಣದ ಪೂರೈಕೆಗಾಗಿ, ಪಂ.ಜಸ್ ರಾಜ್ , ರವರ ಸಂಗೀತ ಕಛೇರಿಯನ್ನು ೧೫, ಡಿಸೆಂಬರ್, ೨೦೦೬ ರಂದು ಮುಂಬೈ ನ ಪ್ರಖ್ಯಾತ ನೆಹ್ರೂ ಸೆಂಟರ್ ಸಭಾಂಗಣದಲ್ಲಿ ಏರ್ಪಡುಮಾಡಲಾಗಿತ್ತು.

ಬಲಮುರಿ ಗಣೇಶ[ಬದಲಾಯಿಸಿ]

ಅಸೋಸಿಯೇಷನ್, ನ ಪ್ರವೇಶದ್ವಾರದಲ್ಲೇ, ಸುಂದರ ಗಣಪತಿಯ ವಿಗ್ರಹ, ಎಲ್ಲರ ಕಣ್ಮನಗಳನ್ನುಸೆಳೆಯುತ್ತದೆ. ಬಲಮುರಿ ಈ ವಿಗ್ರಹದ ವಿಶೇಷತೆ. ಗುಡಿಕಾರರು, ೧೧ ವರ್ಷಗಳಹಿಂದೆ, ವಿನ್ಯಾಸಗೊಳಿಸಿ, ಪ್ರತಿಶ್ಠಾಪಿಸಿರುವ ಗಣೇಶಮೂರ್ತಿಯ ಆರಾಧನೆ, ಅಕ್ಷಯ ತೃತಿಯ ದಂದು ನಡೆಯುತ್ತದೆ. ಸದಸ್ಯರು ಒಂದು ಸಾವಿರ ರೂಪಾಯಿಗಳ ಠೇವಣಿ ಯನ್ನು ಇಟ್ಟು, ತಾವು ತಿಳಿಸಿದ ದಿನದಂದು ಗಣಪತಿಯ ಅರ್ಚನೆ ಮಾಡಿಸಬಹುದು. ಹಾಗಾಗಿ, ವರ್ಷದ ಎಲ್ಲಾದಿನಗಳಲ್ಲೂ ತಪ್ಪದೆ ಗಣೇಶನ ಪೂಜೆ, ನಡೆಯುತ್ತದೆ.

ಕರ್ನಾಟಕ ಸರ್ಕಾರದ ಪುಸ್ತಕ-ಪ್ರಾಧಿಕಾರದ ಮಳಿಗೆ[ಬದಲಾಯಿಸಿ]

'ಮೈಸೂರ್ ಅಸೋಸಿಯೇಷನ್ ನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದವರ ಮಳಿಗೆ'

ಮೈಸೂರ್ ಅಸೋಸಿಯೇಷನ್ ಪುಸ್ತಕ ಭಂಡಾರದಲ್ಲಿ, ಸುಮಾರು ಪುಸ್ತಕಗಳಿವೆ. ಕಾದಂಬರಿಗಳು, ವಿಶ್ವಕೋಶಗಳು, ಕಲಾಚಿತ್ರಗಳು, ಕವಿತೆ, ಕವನ, ಇತಿಹಾಸ, ನೃತ್ಯಕಲೆ, ಶಿಕ್ಷಣ,ನಾಟಕಗಳು, ಸಂಪಾದಿಸಿ ಪ್ರಕಟಿಸಿದ ಪುಸ್ತಕಗಳು, ಹಾಗೂ ಮುಂಬೈನ ಲೇಖಕರು ಪ್ರಕಟಿಸುವ/ಪ್ರಕಟಿಸಿರುವ, ಪುಸ್ತಕಗಳೂ ಇಲ್ಲಿ ದೊರೆಯುತ್ತವೆ. ಶ್ರೀಮತಿ. ಸುಮನ್ ಸುಬ್ಬಣ್ಣನವರ್, ಡಾ. ತಾಳ್ತಜೆ ವಸಂತಕುಮಾರ್ , ಡಾ.ಜಿ.ಎನ್.ಉಪಾಧ್ಯಾಯ, ಮತ್ತಿತರು ಪುಸ್ತಕಗಳನ್ನು ಉದಾರವಾಗಿ ದಾನಮಾಡಿದ್ದಾರೆ.

ಪ್ರತಿದಿನವೂ ಏನಾದರೊಂದು ಕಾರ್ಯಕ್ರಮ[ಬದಲಾಯಿಸಿ]

ಪ್ರತಿದಿನವೂ, ಭಾರತೀಯಭಾಷೆಗಳಾದ ಹಿಂದಿ, ಮರಾಠಿ, ಗುಜರಾತಿ, ಕೊಂಕಣಿ, ಇಲ್ಲವೇ ತುಳು ನಾಟಕಗಳ, ಪ್ರದರ್ಶನವಿರುತ್ತದೆ. ಪೂರ್ವ ಘೋಷಿತ, ನಿರ್ಧಾರಿತ ಕನ್ನಡ ಭಾಷೆಯ ನಾಟಕಗಳು, ಭರತನಾಟ್ಯ, ಶಾಸ್ತ್ರಿಯ ಸಂಗೀತ, ಆಹ್ವಾನಿತ ಪ್ರೇಕ್ಷಕವೃಂದದ ಮುಂದೆ, ತೆರೆಕಾಣುತ್ತವೆ. ಅಸೋಸಿಯೇಷನ್ ದ್ವಾರದ ಬಳಿಯೇ ಕಾರ್ಯಕ್ರಮಗಳ ವಿವರಗಳ-ಪಟ್ಟಿ ನಮ್ಮನ್ನು ಆಕರ್ಶಿಸುತ್ತದೆ.

"ನೇಸರು-ತಿಂಗಳೋಲೆ"[ಬದಲಾಯಿಸಿ]

ಸುಮಾರು ೨೫ ವರ್ಷಗಳ ಹಿಂದೆಯೇ, ನೇಸರು, ಅಸೋಸಿಯೇಷನ್ ನ ಮಾಸಿಕ ಮುಖ-ಪತ್ರಿಕೆಯಾಗಿ ಪಾದಾರ್ಪಣೆಮಾಡಿತ್ತು. ಡಿಸೆಂಬರ್ ತಿಂಗಳು, ೨೦೦೭ ರಲ್ಲಿ, ಒಂದು ವಿಶೇಷ ಸಂಚಿಕೆ ಯನ್ನು ಹೊರತಂದಿದೆ.

'ಅಸೋಸಿಯೇಷನ್ ಮಜಲುಗಳಲ್ಲಿ ಏನೇನಿವೆ'[ಬದಲಾಯಿಸಿ]

  • ಗ್ರೌಂಡ್ ವಿಭಾಗದಲ್ಲಿ
'ಒಳಭಾಗದ ಪ್ರಮುಖ ಹಾಲ್'

ಶ್ರೀ ಗಣಪತಿ ವಿಗ್ರಹ.ಪಕ್ಕದಲ್ಲೇ, ಕರ್ನಾಟಕಸರ್ಕಾರದ ಕನ್ನಡ ಪ್ರಾಧಿಕಾರದ ಮಳಿಗೆ, ಆಫೀಸ್ ರೂಂ, ಬಿಲಿಯರ್ಡ್ಸ್ ಆಟದ ವಿಭಾಗ, ಟೀ. ವಿ ಜೊತೆಗೆ, ದೈನಿಂದಿಕಗಳನ್ನು ಓದಲು ಇಟ್ಟಿರುವ ಟೇಬಲ್-ಕುರ್ಚಿಗಳು. ಮುಂದೆ, ಸುಸಜ್ಜಿತ ಲೈಬ್ರರಿ. ಆಡುಗೆಯವರ ಕೊಠಡಿ. ಸುತ್ತುವರೆದುಬಂದರೆ, ಗಂಡಸರು ಮತ್ತು ಹೆಂಗಸರಿಗೆ,ಪ್ರತ್ಯೇಕ ಶೌಚಾಲಯಗಳು.

ಮಿನಿಥಿಯೇಟರ್,ನಲ್ಲಿ, ಸುಮಾರು, ೧೫೦ ಜನ ಕುಳಿತುಕೊಳ್ಳಬಹುದು. ಚಿಕ್ಕ -ಪುಟ್ಟ ಕಾರ್ಯಕ್ರಮಗಳು, ಸೆಮಿನಾರ್ ಗಳು, ಪಾರ್ಟಿಗಳು ಇಲ್ಲಿ ನಡೆಯುತ್ತವೆ. ಆಡಿಯೋ -ವೀಡಿಯೋ ಸೌಕರ್ಯವಿದೆ. ಪುಟ್ಟ ಕ್ಯಾಂಟೀನ್ ಇದ್ದು ಚಹ-ವ್ಯವಸ್ಥೆ ಮಾಡಲು ಅನುಕೂಲವಿದೆ.

  • ೨ ಹಾಗೂ ೩ ನೆಯ, ಅಂತಸ್ತಿನಲ್ಲಿ :

೩೦೦ ಜನ ಕುಳಿತು ವೀಕ್ಷಿಸಬಹುದಾದ ಅತ್ಯಾಧುನಿಕ, ಸುಸಜ್ಜಿತ ರಂಗಮಂಟಪವಿದೆ. ಅದರ ಮೇಲಿನ ಅಂತಸ್ತಿನಲ್ಲಿ, ಟೆರೇಸ್ ಉದ್ಯಾನವಿದೆ. ಇಲ್ಲಿ, ವಿಶೇಷ ಕೂಟ-ಸಮಾರಂಭಗಳನ್ನು, ಆಯೋಜಿಸಲಾಗುತ್ತಿದೆ. ಇದರ ಮೇಲಿನ ೨ ಅಂತಸ್ತುಗಳಲ್ಲಿ ಸಂಶೋಧನೆ, ಲೈಬ್ರೆರಿ ಸೌಕರ್ಯ, ಹಾಗೂ ತಾಂತ್ರಿಕ ಸೌಕರ್ಯ ಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತಿವೆ.

ಮೈಸೂರು ಅಸೋಸಿಯೇಷನ್ ಸದಸ್ಯರು[ಬದಲಾಯಿಸಿ]

ವರ್ಷ ೨೦೧೨ ರಲ್ಲಿ ನಡೆದ ೮೫ ನೇ, ವಾರ್ಷಿಕ ಸಮಿತಿ ವರದಿಯಪ್ರಕಾರ, ಒಟ್ಟು ಸದಸ್ಯರ ಸಂಖ್ಯೆ : ೬೪೪. ಅಸೋಸಿಯೇಷನ್ ನ ಈಗಿನ ಸ್ಥಿತಿಯನ್ನು ತಲುಪಲು ಹಲವಾರು ಸದಸ್ಯರು ತನುಮನ ಧನಗಳನ್ನು ಸಮರ್ಪಿಸಿ ದುಡಿದಿದ್ದಾರೆ. ಸದಸ್ಯರಲ್ಲದ ಕನ್ನಡಿಗರನೇಕರು, ಸಹಕಾರ ನೀಡಿದ್ದಾರೆ. ಕಳೆದ ಸುಮಾರು ೨೫ ವರ್ಷಗಳು ಅಸೋಸಿಯೇಷ್ ನ ಕಾರ್ಯವಿಧಿಗಳ ದಿಕ್ಕನ್ನು ಬದಲಾಯಿಸಿ, ಸ್ವಯಂ ಸಿದ್ಧತೆಯನ್ನು ಕಾಣುವಲ್ಲಿ ಸಹಾಯಕವಾಗಿವೆ. ವಿಜ್ಞಾನದ ಕಮ್ಮಟಗಳು, ಕನ್ನಡಚಲನಚಿತ್ರ ಪ್ರದರ್ಶನಳು, ಜಾನಪದನೃತ್ಯ, ಭರತನಾಟ್ಯ, ಸಂಗೀತ, ನಾಟಕ, ಭಾಷಣ, ಹರಿಕಥಾಕಾಲಕ್ಷೇಪ, ಮುಂತಾದ ಮನರಂಜನೆಯ, ಹಾಗೂ ಜ್ಞಾನವರ್ಧಕಕಾರ್ಯಕ್ರಮಗಳನ್ನು ನಡೆಸಲು ತನ್ನದೇ ಆದ ಒಂದು ಸಭಾಂಗಣವಿಲ್ಲದ, ಒಂದು ಅಸಹಾಯಕ ಪರಿಸ್ಥಿತಿಯಲ್ಲಿತ್ತು. ಅದನ್ನು ನೀಗಿ, ಆರ್ಥಿಕವಾಗಿ ತನ್ನಕಾಲಮೇಲೆ ನಿಲ್ಲುವಂತಹ ಒಂದು ದಿಟ್ಟ-ಪರಿಕ್ರಮ ನಡೆದದ್ದು, ೮೦-೯೦ ರ ದಶಕಗಳ ಅವಧಿಯಲ್ಲಿ. ಸಕ್ರಿಯವಾಗಿ ದುಡಿದು ಕನಸನ್ನು ನನಸನ್ನಾಗಿ ಮಾಡಿದ ಡಾ.ಬಿ.ಆರ್.ಮಂಜುನಾಥ್, ಶ್ರೀ.ದೊರೈಸ್ವಾಮಿ, ಶ್ರೀ.ಕೆ.ಮಂಜುನಾಥಯ್ಯ, ಹಾಗೂ 'ಶ್ರೀ. ಎಮ್. ಎ. ಎನ್. ಪ್ರಸಾದ್', ಹಾಗೂ ಅವರ ಅಪಾರ ಮಿತ್ರವೃಂದ ಶ್ಲಾಘನೆಗೆ ಪಾತ್ರರು. ದಿವಂಗತ, ಶ್ರೀಮತಿಸೀತಮ್ಮರಾವ್, ಹಾಗೂ ಅವರ ಸಂಗಡಿಗರು ಒಟ್ಟಾಗಿ ಹಾಡಿರುವ, ಸಂಪ್ರದಾಯದ ಹಾಡುಗಳ ದ್ವನಿಮುದ್ರಿತ, ಕ್ಯಾಸೆಟ್ ಗಳು ದೊರೆಯುತ್ತವೆ.

ಅಸೋಸಿಯೇಷನ್ ನ ಸಧೃಡ ಸಿಬ್ಬಂದಿವರ್ಗ[ಬದಲಾಯಿಸಿ]

ಅಸೋಸಿಯೇಷನ್ ನ ಕಾರ್ಯಕ್ರಮಗಳ ವಹಿವಾಟುಗಳನ್ನೆಲ್ಲಾ, ನೋಡಿಕೊಳ್ಳುತ್ತಿರುವ ಸದೄಢ ಸಿಬ್ಬಂದಿವರ್ಗದಲ್ಲಿ ಹೆಸರಾಂತಿಸಬಹುದಾದ, 'ಶ್ರೀ. ಮಧುಸೂದನ್', 'ಶ್ರೀ. ಉದಯ', 'ಶ್ರೀ. ಶಾಂತೇಶ್,' 'ಶ್ರೀ. ಶ್ರೀಧರ್', 'ಶ್ರೀ. ಸುಧಾಕರ್', 'ಶ್ರೀ. ಮಂಜು', 'ಶ್ರೀ. ರಾಘವೇಂದ್ರ', ಮುಂತಾದವರುಗಳಿದ್ದಾರೆ. ಆಫೀಸಿನಲ್ಲಿ ಸಹಾಯಕರಾಗಿ ದುಡಿಯುತ್ತಿರುವ,' ಶ್ರೀಮತಿ, ಶೀಲಾ ಎಸ್. ಕುಂದರ್', 'ಶ್ರೀಮತಿ. ವಿನೋದಾ ಶಾಂತೇಶ್,'ಕು. ಜ್ಯೋತಿದೇವಾಡಿಗ', ಉಮೇಶ್ ದೇವಾಡಿಗ, 'ಮೊದಲಾದವರುಗಳು, ಅಸೋಸಿಯೆಷನ್ ನ ಸಮಾರಂಭಗಳು, ಪೂಜಾವಿಧಿಗಳು, ಮುಂತಾದ ಕಾರ್ಯಕ್ರಮಗಳ ಸಮಯಗಳಲ್ಲೂ ತಮ್ಮ ನೆರವು-ಸಹಕಾರಗಳನ್ನು ತಪ್ಪದೆ ನೀಡುತ್ತಿದ್ದಾರೆ.

ಸನ್, ೨೦೧೨ ರ, ಮಹತ್ವದ ಅಕ್ಷಯ ತೃತಿಯ ಹಬ್ಬದಾಚರಣೆ[ಬದಲಾಯಿಸಿ]

'ಶ್ರೀ.ಜಾಗೀರ್ದಾರ್ ವಿಧ್ಯುಕ್ತವಾಗಿ ಉದ್ಘಾಟಿಸಿದರು'
'ಅಸೋಸಿಯೇಷನ್ ಸದಸ್ಯರು ಆಸಕ್ತಿಯಿಂದ ಭಾಗವಹಿಸಿದ್ದರು'

ಪ್ರತಿ ವರ್ಷದಂತೆ ಸನ್,೨೦೧೨ ರ, ಏಪ್ರಿಲ್, ೨೪ ರಂದು, ಅಕ್ಷಯ ತೃತಿಯ ಗಣಪತಿ ಪೂಜೆ ಅತ್ಯಂತ ಶ್ರದ್ಧಾಭಕ್ತಿಗಳಿಂದ, ಅಸೋಸಿಯೇಷನ್ ಸದಸ್ಯರು ನಡೆಸಿದರು. ಅಸೋಸಿಯೇಷನ್ ನ ಅಧ್ಯಕ್ಷ ಶ್ರೀ. ವಿ. ರಾಮಭದ್ರರು ಸಮಾರಂಭಕ್ಕೆ ಬರಲಾಗಲಿಲ್ಲ. ಕಾರ್ಯದರ್ಶಿ, ಶ್ರೀ.ವೈ.ಡಿ.ವೆಂಕಟೇಶ್, ಡಾ.ಬಿ.ಆರ್.ಮಂಜುನಾಥ್, ಶ್ರೀ.ಕೆ.ಮಂಜುನಾಥಯ್ಯ, ಶ್ರೀ.ನಾರಾಯಣ ನವಿಲೇಕರ್, ಮೊದಲಾದ ಸಮಿತಿಯ ಸದಸ್ಯರು ಹಾಜರಿದ್ದರು. ಮಹತ್ವದ ಸಂಗತಿಯೆಂದರೆ, ಈ ಶುಭದಿನದಂದು, ಬಹುದಿನಗಳಿಂದ ಕಾಯುತ್ತಿದ್ದ ಮುಂಬೈಕನ್ನಡಿಗರ ಬಹುಪ್ರೀತಿಯ 'ಅಸೋಸಿಯೇಷನ್ ನ ವೆಬ್ ಸೈಟ್' (ಅಂತರ್ಜಾಲ ತಾಣ) ದ, [[೧]] ಬಿಡುಗಡೆ ಸಮಾರಂಭವನ್ನು 'ಅಸೋಸಿಯೇಷನ್ ನ ಉಪಾಧ್ಯಕ್ಷ', 'ಶ್ರೀ. ನಾರಾಯಣ ಜಾಗೀರ್ದಾರ್', ವಿಧ್ಯುಕ್ತವಾಗಿ ನಡೆಸಿಕೊಟ್ಟರು. ಈ ಕಾರ್ಯವಿಧಿ, 'ಮುಂಬೈ ಮೈಸೂರ್ ಅಸೋಸಿಯೇಷನ್' ನ ಇತಿಹಾಸದಲ್ಲಿ ಬಹಳ ಉಪಯುಕ್ತವಾದ, ಮತ್ತು ಮಹತ್ವದ ವಿಶಯಗಳಲ್ಲೊಂದು.

'ಹೊಸದಾಗಿ ಸಜ್ಜಾದ ಗಣಪತಿ ಪೂಜಾ ಪರಿಸರ'

ಸನ್.೨೦೧೩ ರ ಪ್ರಮುಖ ಕಾರ್ಯಕ್ರಮಗಳು[ಬದಲಾಯಿಸಿ]

’ಬೆಂಗಳೂರು ಕಲಾಪ್ರೇಮಿ ಫೌಂಡೇಶನ್’ ಹಾಗೂ ’ಮುಂಬೈನ ಮೈಸೂರ್ ಅಸೋಸಿಯೇಷನ್’ ಹಮ್ಮಿಕೊಂಡ ’೩ ದಿನಗಳ ಕನ್ನಡ ನಾಟಕೋತ್ಸವ ಕಾರ್ಯಕ್ರಮ’ ಬೆಂಗಳೂರಿನ ರಸಿಕರನ್ನು ರಂಜಿಸಿತು. (ಜೂನ್,೧,೨,೩) ಜೂನ್ ೧ ರಂದು' ರವೀಂದ್ರ ಕಲಾಕ್ಷೇತ್ರದಲ್ಲಿ ’ಬೆಳ್ಳಿಬೈಲು ನಾಟಕ ಪ್ರದರ್ಶನ ನಡೆಯಿತು.' ಹಣವಂತವ್ಯಕ್ತಿಯೊಬ್ಬ ತಾನೊಬ್ಬ ಪ್ರತಿಷ್ಠಿತವ್ಯಕ್ತಿಯೆಂದು ಸೋಗುಹಾಕಿಕೊಂಡು ಸಮಾಜದಲ್ಲಿ ತನ್ನ ಪ್ರಯೋಜನಕ್ಕಾಗಿ ಬಡಜನರ ಪ್ರಾಣತೆಗೆಯಲೂ ಹೇಸದ ವ್ಯಕ್ತಿಯೊಬ್ಬ ಜೀವನಚಿತ್ರಣವಾಗಿತ್ತು. 'ಜೂನ್ ೨ ರಂದು', 'ಮಲ್ಲೇಶ್ವರದ ಸೇವಾಸದನ ಸಭಾಂಗಣ'ದಲ್ಲಿ ’ಸಾಕಾರ’ ವೆಂಬ ಸಂಗೀತ ನಾಟಕ ಪ್ರದರ್ಶನ ನಡೆಯಿತು. ಇಬ್ಬರು ಗೆಳೆಯರು; ಒಬ್ಬ ಬಡವ, ಮತ್ತೊಬ್ಬ ಶ್ರೀಮಂತ. ಪಂಢರಾಪುರಕ್ಕೆ ವಿಠಲನ ದರ್ಶಕಾಂಕ್ಷಿಗಳಾಗಿ ಹೋಗುತ್ತಾರೆ. ದೇವರು ಎಲ್ಲರ ಹೃದಯದಲ್ಲಿ ನೆಲೆಸಿದ್ದಾನೆ. ನಮ್ಮೊಳಗೆ ಕೆದಕಿ ನೋಡಿದಾಗ ಅದು ಅರಿವಾಗುವುದು; ಬೇರೆಲ್ಲಿಯೂ ಅರಸುತ್ತಾ ಹೋಗುವ ಅವಶ್ಯಕತೆ ಇಲ್ಲ.ಎನ್ನುವ ಸಂದೇಶ ಸಿಗುವ ನಾಟಕಕ್ಕೆ ಸಮಯೋಚಿತವಾಗಿ ಅಳವಡಿಸಿದ್ದ ದಾಸರ ಕೀರ್ತನೆಗಳು ನಾಟಕಕ್ಕೆ ಮೆರುಗನ್ನು ಕೊಟ್ಟಿತ್ತು.ನಾಟಕದ ಬಳಿಕ, ಹೆಸರಾಂತ ನಾಟಕ ವಿಮರ್ಶಕ, ವೈ.ವಿ. ಗುಂಡೂರಾವ್ ರವರಿಂದ ನವಿರಾದ ಹಾಸ್ಯ ಕಾರ್ಯಕ್ರಮವಿತ್ತು. 'ಜೂನ್ ೩ ರಂದು' 'ಎಚ್.ಎನ್.ಕಲಾಕ್ಷೇತ್ರ'ದಲ್ಲಿ 'ಅಂತರಂಗ ಏರ್ಪಡಿಸಿದ್ದ ವ್ಯವಸ್ಥೆಯಲ್ಲಿ 'ಬೆಳ್ಳಿಬೈಲು ನಾಟಕವನ್ನು ಮತ್ತೊಮ್ಮೆ ಪ್ರದರ್ಶಿಸಲಾಯಿತು. ಈಗ ತಿಳಿಸಿದ ೩ ಪ್ರಾಯೋಗಿಕ ನಾಟಕಗಳನ್ನು 'ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ' ಪ್ರಾಯೋಜಿಸಿತ್ತು. ಈ ನಾಟಕಗಳನ್ನು ರಚಿಸಿ, ನಿರ್ದೇಶಿಸಿ, ರಂಗಸಜ್ಜಿಕೆ, ಬೆಳಕು,ನೇಪಥ್ಯದ ನೆರವುಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದವರು,ಡಾ.ಬಿ.ಆರ್.ಮಂಜುನಾಥ್. ಅಧ್ಯಕ್ಷ ವಿ.ರಾಮಭದ್ರ, ಮತ್ತು ಕೆ. ಮಂಜುನಾಥಯ್ಯ, ಮತ್ತು ಸಮಿತಿಯ ಸದಸ್ಯರು ತಮ್ಮ ಕಾರ್ಯಗಳನ್ನು ಚೆನ್ನಾಗಿ ನಿರ್ವಹಿಸಿದರು.

ಫೋಟೋ ಪ್ರದರ್ಶನ[ಬದಲಾಯಿಸಿ]

ಮುಂಬೈನ ಮೈಸೂರ್ ಅಸೋಸಿಯೇಶನ್ ಕನ್ನಡ ಕಲಾತಂಡ ತನ್ನ ಅಸ್ತಿತ್ವದಲ್ಲಿ ೭ ದಶಕಗಳ ಕಾಲ,ಅರ್ಪಿಸಿದ 'ನಾಟಕಗಳ ಪಕ್ಷಿನೋಟ'ವನ್ನು ಛಾಯಾ ಚಿತ್ರಗಳ ಮೂಲಕ ತೋರಿಸಲಾಯಿತು.