ಮೈಸೂರು ಹುಸೇನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರಯೋಗ ಶೀಲ ಕಲಾವಿದನ ಕಲ್ಪನೆಯಲ್ಲಿ ಮೂಡಿದ ಕಾಗದ ಭಿತ್ತಿ ಶಿಲ್ಪಗಳು

ಆಧುನಿಕತೆ ಬೆಳೆದಂತೆಲ್ಲ ಕಲೆಯು ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಲಿದೆ. ಪ್ರಸುತ್ತ ಸಂದರ್ಭದಲ್ಲಿ ಕಲಾವಿದ ತನ್ನದೇಯಾದ ಮಾಧ್ಯಮದಿಂದ ಕಲಾಕೃತಿಗಳನ್ನು ರಚಿಸುತ್ತ ತನ್ನ ಕಲ್ಪನೆಯನ್ನು ಅಭಿವ್ಯಕ್ತಿಸಲು ವಿಭಿನ್ನ ಮಾರ್ಗವನ್ನು ಕಂಡುಕೊಳ್ಳುತ್ತಿದ್ದಾನೆ. ಕಲಾವಿದರು ನಿರ್ದಿಷ್ಟವಾದ ಚೌಕಟ್ಟಿನಲ್ಲಿ ಇದ್ದೇವೆ ಎಂಬ ಭಾವನೆಗೆ ಒಳಗಾಗುವುದು ಸಹಜ ಆದರೆ ನಿಗದಿತ ವಿಷಯಗಳನ್ನು ಹೊಸ ಹೊಸ ಮಾಧ್ಯಮದ ಮೂಲಕ ರಚಿಸಿದಾಗ ಮೂಡಿಬರುವ ಕೃತಿಗಳ ಗುಣ್ಣಮಟ್ಟ ಅವೆಲ್ಲಕ್ಕಿಂತಲೂ ಪ್ರಯೋಗಶೀಲತೆ ವಿಭಿನ್ನ ವಾಗಿರುತ್ತದೆ. ಹಾಗೂ ಇಂತಹ ಕಲಾಕೃತಿಗಳು ಹೊಸ ಅನುಭವ ಲೋಕವನ್ನು ತೆರೆದಿಡುತ್ತವೆ. ಈ ನಿಟ್ಟಿನಲ್ಲಿ ಸದಾ ಹೊಸತನವನ್ನು ನೀಡುತ್ತಿರುವ ಕಲಾವಿದ ಎಸ್.ಎಫ್. ಹುಸೇನಿ ಮೈಸೂರು ರವರು ಸಹ ಒಬ್ಬರು.

ಕಾಗದ ಭಿತ್ತಿ ಶಿಲ್ಪಗಳು ನೋಡುಗರಿಗೆ ಮೊದಲ ನೋಟದಲ್ಲಿಯೇ ವಿಸ್ಮಯವನ್ನುಂಟು ಮಾಡಿದರೆ ಆಶ್ಚರ್ಯಪಡಬೇಕಾಗಿಲ್ಲ. ಕಲಾವಿದನ ಕೈ ಚಳಕ ದಿಂದ ಮೂಡಿದ ಕಲ್ಪನೆ ನಮ್ಮಲ್ಲಿ ಪಿಸುಗಟ್ಟಿ ಏನೋ ಹೇಳಿದಂತೆ ಭಾಸವಾಗುತ್ತದೆ. ಈ ರೀತಿಯಾಗಿರುವ ಅಧ್ಬುತ ಕೌಶಲವನ್ನು ಪ್ರದರ್ಶಿಸಿದವರು ಕಲೆಯನ್ನೇ ಉಸಿರಾಗಿ ಬದುಕುತ್ತಿರುವ ಕಲಾವಿದ ಎಸ್.ಎಫ್. ಹುಸೇನಿ ಮೈಸೂರುರವರು.

ಪ್ರಸ್ತುತ ಕಲೆಯ ಜಾಡು ಹಿಡಿದು ಅದರ ರಸಸ್ವಾದವನ್ನು ಅನುಭವಿಸಲು ನಿರಂತರ ಪ್ರಯೋಗ ನಿರತರಾಗಿದ್ದಾರೆ. ಮನಸ್ಸಿನಲ್ಲಿ ಕಾಗದ ಭಿತ್ತಿ ಶಿಲ್ಪ ರಚನೆಯ ರೂಪ ಮೂಡಿದ್ದೆ ತಡ ತಮ್ಮ ಬಳಿ ಹಾಗೂ ಸ್ನೇಹಿತರ ಬಳಿ ಇದ್ದ ಹಾಳೆಗಳನ್ನಲ್ಲಾ ಒಟ್ಟುಗೊಡಿಸಿ ತಮ್ಮ ಕಲ್ಪನೆಯ ಕಲಾಕೃತಿಗಳನ್ನು ರಚಿಸಲು ಪ್ರಾರಂಭಿಸಿದರು ಹೀಗೆ ಸತತ ಪರಿಶ್ರಮದಿಂದ ಮತ್ತು ಚಿಂತನೆಯಿಂದ ಒಡಮೂಡಿವೆ.

ಕಾಗದವನ್ನು ಲೋಹದ ಫಲಕದಂತೆ ಉಬ್ಬು-ತಗ್ಗುಗಳಾಗುವಂತೆ ಹಚ್ಚಿ ಹೈ-ರಿಲೀಫ್ ಶಿಲ್ಪಗಳನ್ನಾಗಿಸುವ ವಿಧಾನವನ್ನು ಹುಸೇನಿಯವರ ಭಿತ್ತಿಶಿಲ್ಪಗಳಲ್ಲಿ ಕಾಣಬಹುದು. ಸಮಕಾಲೀನ ಸಂದರ್ಭದಲ್ಲಿ ಅಷ್ಟಾಗಿ ಬಳಕೆಯಾಗದ ಈ ಮಾಧ್ಯಮವು ಕುತೂಹಲಕರವಾಗಿದೆ. ಕಲ್ಲು ಅಥವಾ ಕಂಚಿನಂತೆ ನೈಜತೆ ಭಾಸವಾಗುವ ಇವರ ಕಲಾಕೃತಿಗಳು ಕಲಾಸಕ್ತರನ್ನು ನಿಬ್ಬೆರಗಾಗಿಸುತ್ತ್ತವೆ. ಹುಸೇನಿ ಪ್ರಸ್ತುತ ಮಾಧ್ಯಮದಲ್ಲಿ ತನ್ನದೇ ವೈಶಿಷ್ಟ್ಯವನ್ನು ಕಾಪಾಡಿಕೊಂಡಿದ್ದಾರೆ.

ಚಿತ್ರ-ವಿಚಿತ್ರ ವೈಖರಿಯ ಅಮೂರ್ತ ಅಭಿವ್ಯಕ್ತಿಯ ಹುಸೇನಿಯವರ ಕಲಾಕೃತಿಗಳಲ್ಲಿ ನಿಶ್ಚಿತ ರೇಖಾ ವಿನ್ಯಾಸವಿದೆ, ಹುಸೇನಿಯವರ ಕಾಗದ ಭಿತ್ತಿಶಿಲ್ಪ ಆಕ್ಸಿಡೆಂಟ್-೨ ಕಲಾಕೃತಿಗೆ ರಾಜ್ಯಮಟ್ಟದ ಮೈಸೂರು ದಸರ ಪ್ರಶಸ್ತಿ ದೊರಕಿದೆ. ಈ ಮಾಧ್ಯಮದಲ್ಲಿ ನಾಲ್ಕು ಏಕವ್ಯಕ್ತಿ ಕಲಾ ಪ್ರದರ್ಶನವನ್ನು ನೀಡಿದ್ದಾರೆ. ರಾಜ್ಯದ ಹಲವು ಕಡೆಗಳಲ್ಲಿ ಕಾಗದ ಭಿತ್ತಿ ಶಿಲ್ಪ ಕಾರ್ಯಾಗಾರಗಳನ್ನು ನೆಡೆಸಿದ್ದಾರೆ. ಆಸಕ್ತರು ಎಸ್.ಎಫ್.ಹುಸೇನಿ (9845153277) ರವರನ್ನು ಸಂಪರ್ಕಿಸಿಬಹುದು. ಇವರ ಕಲಾಕೃತಿಗಳು ಕಲಾವಲಯದಲ್ಲಿ ವಿಶೇಷ ಗಮನ ಸೆಳೆದಿವೆ.

ಕಾಗದ ಭಿತ್ತಿ ಶಿಲ್ಪ ರಚನ ವಿಧಾನ ಕಾಗದ ಭಿತ್ತಿ ಶಿಲ್ಪ ಕಲೆಯಲ್ಲಿ ಅಧಿಕ ತಾಳ್ಮೆ, ಅಧಿಕ ಅವಧಿಯನ್ನು ನಿರ್ಮಾಣದಲ್ಲಿ ತೆಗೆದುಕೊಳ್ಳುವ ಈ ಕಲಾಕೃತಿಗಳಿಗೆ ಮೂಲ ಆಕಾರವನ್ನು ಕೊಡುವ ಮೊದಲು ಕಲಾವಿದನ ಮನಸ್ಸಿನಲ್ಲಿ ಮೂಡಿದ ಭಾವನೆಗಳನ್ನು ಮೊದಲು ಜೇಡಿ ಮಣ್ಣಿನಿಂದ ಮತ್ತು ತಮಗೆ ಬೇಕಾಗುವ ವಸ್ತುಗಳನ್ನು ಸಂಯೋಜಿಸಿ ಆಕಾರವನ್ನು ನೀಡುತ್ತಾರೆ. ತಮಗೆ ಸಮಾಧಾನಕರ ಆಕಾರ ಪಡೆದ ನಂತರ ಕಾಗದದ ಚೂರುಗಳನ್ನು ಅಂಟಿನಿಂದ ಮಣ್ಣಿನ ಆಕೃತಿಯ ಮೇಲೆ ಹಲವು ಪದರಗಳಲ್ಲಿ ಅಂಟಿಸುತ್ತಾರೆ. ನಿಖರತೆಯನ್ನು ತಲುಪಿದ ನಂತರ ಕಾಗದದ ಪ್ರತಿಕೃತಿಯನ್ನು ತೇವಾಂಶವಿದ್ದಂತೆಯೇ ಮಣ್ಣಿನ ಅಚ್ಚಿನಿಂದ ಆಕೃತಿ ಬೇರ್ಪಡಿಸಿ ಅನಂತರ ಕಾಗದದ ಆಕೃತಿಯನ್ನು ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ನಂತರ ಕಲಾವಿದನ ಭಾವನೆಗಳಿಗೆ ತಕ್ಕಂತೆ ಅವುಗಳಿಗೆ ಬಣ್ಣವನ್ನು ಹಚ್ಚುತ್ತಾರೆ. ಈ ವಿಧಾನ ಸರಳ ಸುಂದರ ಎನಿಸಿದರೂ ಅಪಾರ ತಾಳ್ಮೆ-ಏಕಾಗ್ರತೆ, ಸೂಕ್ಷ್ಮತೆ-ಸಂಯಮ ಬೇಕಾಗುತ್ತದೆ. ಕಾಗದ ಭಿತ್ತಿ ಶಿಲ್ಪಗಳು ವಿಶೇಷವಾದ, ವಿಶಿಷ್ಠವಾದ ಮಾಧ್ಯಮ ಮೊದಲ ನೋಟಕ್ಕೆ ಘನರೂಪದ ಮರಳು, ಕಲ್ಲು ವಿವಿಧ ಲೋಹ ಮಾಧ್ಯಮಗಳ ಶಿಲ್ಪ ಎಂಬ ಭಾವನೆ ಬರುತ್ತದೆ. ಆದರೆ ಶಿಲ್ಪಗಳು ಸಂಪೂರ್ಣ ಕಾಗದದಿಂದ ನಿರ್ಮಿಸಲ್ಪಟ್ಟ ಭಾರವಿಲ್ಲದ ಶಿಲ್ಪಗಳಾಗುತ್ತವೆ. ಇವುಗಳು ನೋಡುಗನಿಗೆ ಆಚ್ಚರಿಯನ್ನುಂಟು ಮಾಡುತ್ತವೆ. ನೀವು ನಿಮ್ಮ ಕಲ್ಪನೆಯ ಕಲಾಕೃತಿಗಳನ್ನು ಈ ಮಾಧ್ಯಮದಲ್ಲಿ ರಚಿಸಿ, ಲೋಹದ ಶಿಲ್ಪಗಳಂತೆ ದುಬಾರಿಯಲ್ಲದ ಕಾಗದ ಭಿತ್ತಿ ಶಿಲ್ಪಕಲೆಯನ್ನು ಬೆಳಸಿ.

ಕಲಾವಿದ ಎಸ್.ಎಫ್. ಹುಸೇನಿ ಅವರು ಕಲಾವಲಯದಲ್ಲಿ ಮೈಸೂರು ಹುಸೇನಿ ಎಂದೇ ಚಿರಪರಿಚಿತರು. ತಂದೆ ಸಯ್ಯದ್ ಫೀರ್, ತಾಯಿ ಜೀನಾತ್‌ವುನ್ನಿಸಾ ಬೀ ರವರ ಮಗನಾಗಿ ಮಂಡ್ಯಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರಂ (ಬ್ಲಫ್) ನಲ್ಲಿ ಜನಿಸಿದ ಇವರು ಬಾಲ್ಯದ ದಿನಗಳಲ್ಲಿ ಚಿತ್ರಕಲೆಯ ಬಗ್ಗೆ ಆಸಕ್ತರಾಗಿ ಕಲೆಯಲ್ಲಿಯೇ ಜೀವನ ರೂಪಿಸುವಂತಾಯಿತು.

ಇವರು ಮೈಸೂರಿನ ವೈಜಯಂತಿ ಚಿತ್ರಕಲಾ ಶಾಲೆಯಲ್ಲಿ ಪೈನ್ ಆರ್ಟ್ ಡಿಪ್ಲೊಮ ಮತ್ತು ಆರ್ಟ್‌ಮಾಸ್ಟರ್ ಶಿಕ್ಷಣ ಪಡೆದು ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಚಿತ್ರಕಲೆಯಲ್ಲಿ ಬಿ.ಎಫ್.ಎ. ಪದವಿಯನ್ನು ಪಡೆದಿದ್ದಾರೆ. ಹುಸೇನಿಯವರು ಸದಾ ಪ್ರಯೋಗಶೀಲ ಪ್ರಯತ್ನಗಳಿಗೆ, ನಿರಂತರ ಹೊಸತನಕ್ಕೆ ಆದ್ಯತೆ ನೀಡುತ್ತಾ ಬಂದಿದ್ದಾರೆ. ಅವರು ರಚಿಸಿರುವ ಕಲಾಕೃತಿಗಳನ್ನು ಗಮನಿಸುತ್ತಾ ಬಂದಲ್ಲಿ ತಿಳಿಯುತ್ತದೆ. ಒಂದೇ ಬಗೆಯ ಕಲಾಕೃತಿಗಳಿಗೆ ಸೀಮಿತವಾಗದೆ ಹಲವಾರು ಪ್ರಯೋಗಾತ್ಮಕ ಕೆಲಸಗಳಲ್ಲಿ ತೊಡಗಿದ್ದಾರೆ. ಅವರ ವಿಶಿಷ್ಟ ಬಗೆಯ ಕಾಗದ ಭಿತ್ತಿಶಿಲ್ಪಗಳು, ಏಕರೇಖಾಚಿತ್ರಗಳು ಪ್ರಯೋಗಾತ್ಮಕ ಅಮೂರ್ತ ಛಾಯಾಚಿತ್ರಗಳು ಮತ್ತು ಸಾಂಝಿಜನಪದ ಕಾಗದಕತ್ತರಿಕಲೆ ಕಲಾಕೃತಿಗಳು ಇವರಕಲಾಪ್ರತಿಭೆಗೆ ಸಾಕ್ಷಿಯಾಗಿವೆ. ಸಿಡಿಯನ್ನು ಬಳಸಿ ತೆಗೆದಿರುವ ಅಮೂರ್ತಛಾಯಾಚಿತ್ರಗಳು ಸುಮಾರು ಐದುಸಾವಿರಕ್ಕೂ ಹೆಚ್ಚು. ಇದು ಅವರ ಸೃಜನಶೀಲತೆ ಮತ್ತು ಕಲಾತ್ಮಕ ಪ್ರಯೋಗಗಳಿಗೆ ಒಂದುಉದಾಹರಣೆ.

ಹುಸೇನಿ ಚಿತ್ರಕಲೆಯನ್ನು ಮೈಸೂರು, ಬೆಂಗಳೂರು, ಧಾರವಾಡ, ಗುಲ್ಬರ್ಗಾ, ಉಡುಪಿ ಹೀಗೆ ಅನೇಕ ಕಡೆಗಳಲ್ಲಿ ೯ ಏಕವ್ಯಕ್ತಿ ಚಿತ್ರಕಲಾಪ್ರದರ್ಶನಗಳು, ಸುಮಾರು ೭೦ಕ್ಕೂ ಹೆಚ್ಚು ಸಮೂಹಕಲಾಪ್ರದರ್ಶನ ಕಾರ್ಯಗಾರಗಳಲ್ಲಿ ಭಾಗವಹಿಸಿ ಕರ್ನಾಟಕ ಮಾತ್ರವಲ್ಲದೆ ಹೊರರಾಜ್ಯಗಳಾದ ಮುಂಬಯಿ, ದೆಹಲಿ, ಚೆನ್ನೈ ನಗರಗಳಲ್ಲಿ ಚಿತ್ರಕಲಾ ಪ್ರದರ್ಶನಗಳನ್ನು ನೀಡಿದ್ದಾರೆ. ಹುಸೇನಿಯವರ ವಿಶೇಷತೆ ಎಂದರೆ ಗ್ರಾಮೀಣ ಭಾಗದ ಜನರಿಗೆ ಕಲೆ ತಲುಪುವ ಉದ್ದೇಶದಿಂದ ತಮ್ಮದೇ ಸಾಂಝಿ ಕಲಾಲೋಕ ಸಂಸ್ಥೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಹತ್ತುವರ್ಷಗಳಿಂದ ಚಿತ್ರಕಲಾಪ್ರದರ್ಶನ, ಕಾರ್ಯಗಾರಗಳನ್ನು ನಡೆಸುತ್ತಾ ಬಂದಿದ್ದಾರೆ. ಇವರ ಅನೇಕ ಕಲಾಕೃತಿಗಳು ದೇಶ ಮತ್ತು ವಿದೇಶಗಳ (ಆಸ್ಟ್ರೇಲಿಯ, ಫಿನ್‌ಲ್ಯಾಂಡ್, ಜರ್ಮನ್, ಸೌತ್ ಆಫ್ರಿಕ, ದೋಹ) ಖಾಸಗಿ ಸಂಗ್ರಹಕಾರರಲ್ಲಿ ಸಂಗ್ರಹಗೊಂಡಿವೆ.

ಎಸ್.ಎಫ್.ಹುಸೇನಿಯವರ ಕಲಾಪ್ರತಿಭೆಗೆ ಅನೇಕ ಪ್ರಶಸ್ತಿ ಸನ್ಮಾನಗಳು ಸಂದಿವೆ ಅವುಗಳಲ್ಲಿ ಮುಖ್ಯವಾಗಿ ೧೯೯೯ ರಲ್ಲಿ ಮೈಸೂರು ದಸರಕಲಾಪ್ರದರ್ಶನಪ್ರಶಸ್ತಿ, ೨೦೦೧-ರಲ್ಲಿ ಮೈಸೂರಿನ ಕನ್ನಡಸಂಸ್ಕೃತಿ ಇಲಾಖೆಯಿಂದ ಯುವಸಂಭ್ರಮ ಪ್ರಶಸ್ತಿ, ಧಮಸ್ಥಳದ ಶಾಂತಿವನಟ್ರಸ್ಟ್ ವತಿಯಿಂದ ನಡೆಯುವ ರಾಜ್ಯ ಮಟ್ಟದ ಅಂಚೆಕುಂಚ ಸ್ಪರ್ಧೆಯಲ್ಲಿ ೨೦೦೧ರಿಂದ ಸತತ ನಾಲ್ಕು ಹಾಗು ೨೦೦೭ರಲ್ಲಿ ಪ್ರಶಸ್ತಿ ಒಟ್ಟು ಐದು ಬಾರಿ ಪ್ರಶಸ್ತಿ, ಬೆಂಗಳೂರಿನಲ್ಲಿ ನಡೆಯುವ ಅಂತರಾಷ್ಟ್ರೀಯ ಜಪಾನ್‌ಹಬ್ಬದಲ್ಲಿ ೨೦೦೯ ರಿಂದ ನಾಲ್ಕು ಬಾರಿ, ಕಿರಿಗಾಮಿ ಪೇಪರ್ ಕಟ್ಟಿಂಗ್ಸ್ ಕಾಗದ ಕಲೆಯ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ, ೧೯೯೯ರಲ್ಲಿ ಮೈಸೂರಿನ ರಾಮನ್ಸ್ ಕಂಪ್ಯೂಟರ್‍ಸ್‌ರವರ ರಾಕೊಫೇಸ್ಟ್ ಪ್ರಶಸ್ತಿ, ಕರ್ನಾಟಕಲಲಿತ ಕಲಾ ಅಕಾಡೆಮಿಯಿಂದ ಎರಡು ಬಾರಿ ಸ್ಕಾಲರ್‌ಶಿಪ್ ೧೯೯೯ ಮತ್ತು ೨೦೦೦. ವೈಜಯಂತಿಚಿತ್ರಕಲಾಶಾಲೆಯಿಂದ ಬೆಸ್ಟ್ ಮ್ಯೂರಲ್ ಪ್ರಶಸ್ತಿ, ೨೦೦೧-ರಲ್ಲಿ ಮೈಸೂರಿನ ಮಾನಸಗಂಗ್ರೋತಿಯ ಮಹಿಳಾಅಧ್ಯಯನಕೇಂದ್ರದಿಂದ ಪೋಸ್ಟರ್‌ರಚನಗೆಪ್ರಶಸ್ತಿ, ಇವುಗಳ ಜೊತೆಗೆ ಅನೇಕ ಸಂಘಸಂಸ್ಥೆಗಳಿಂದ ಸನ್ಮಾನಗಳು ಸಾಂಝಿಕಲಾಸಾಮ್ರಾಟ್, ಚಿತ್ರರತ್ನ ಹೀಗೆ ಹಲವಾರು ಪ್ರಶಸ್ತಿಗಳು ಸಂದಿವೆ. ಇವರ ಕಲಾಯಾತ್ರೆ ಹೀಗೆ ನಿರಂತರವಾಗಿ ಸಾಗಲಿ ಎಂದು ಹಾರೈಸೋಣ.