ಮೈಸೂರು ಮಂಜುನಾಥ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನೆದೆರ್ಲ್ಯಾಂಡ್ಸ್ನಲ್ಲಿ ನುಡಿಸುತ್ತಿರುವ ಮಂಜುನಾಥ್

ಮೈಸೂರು ಮಂಜುನಾಥ್ ಭಾರತ ದೇಶದ ಪ್ರಖ್ಯಾತ ಶಾಸ್ತ್ರೀಯ ವಯೊಲಿನ್ ವಾದಕರು ಹಾಗು ಮೈಸೂರು ಸಹೋದರರ ಒಬ್ಬರು.

ಬಾಲ್ಯ[ಬದಲಾಯಿಸಿ]

ಮೈಸೂರಿನಲ್ಲಿ ಜನಿಸಿ ತಮ್ಮ ತಂದೆ ಪ್ರೊ.ಮಹದೇವಪ್ಪರವರ ಬಳಿ ವಯೊಲಿನ್ ವಾದನವನ್ನು ಕಲಿತರು. ೮ ವರ್ಷದವರಾಗಿದ್ದಾಗಲೇ ಮಂಜುನಾಥರವರು ತಮ್ಮ ಮೊದಲ ಕಛೇರಿಯನ್ನು ಕೊಟ್ಟರು. ಇಡೀ ವಿಶ್ವದಲ್ಲಿ ಖ್ಯಾತಿಯನ್ನುಪಡೆದರು. ರಾಯಲ್ ಮ್ಯೂಸಿಕ್ ಹಾಲ್ ಇಂದ ಸಿಡ್ನೀ ಒಪೆರಾ ಹೌಸ್, ಶಿಕಾಗೊನ ವರ್ಲ್ದ್ ಮೂಸಿಕ್ ಫ಼ೆಸ್ಟಿವಲ್ ನಿಂದ ಸಿಂಗಾಪುರ್ ನ ಎಸ್ಪ್ಲನೆಡ್ ಥಿಯೇಟರ್, ಮೆಲ್ಬೋರ್ನ್ನಿನ ಫ಼ೆಡರೇಶನ್ ಸ್ಕೇರ್, ಆಮೇರಿಕಾದ ಸ್ಯಾಂಟಾ ಫ಼ೆ ಮ್ಯೂಸಿಕ್ ಫ಼ೆಸ್ಟಿವಲ್ ನಿಂದ ಆರೆಗಾನ್ ನ ಕಾಮನ್ ಥ್ರೆಡ್ ಫ಼ೆಸ್ಟಿವಲ್ಹೋವರೆಗೆ ಭಾರತೀಯ ಸಂಗಿತ ತೆಗೆದು ಕೊಂಡು ಹೋದ ಮಹಾನ್ ಸಂಗೀತಗಾರರು ಇವರು. ಭಾರತ ರತ್ನ ಪಂಡಿತ್ ರವಿಶಂಕರ್ ಅವರಿಂದಲೇ " ಮ್ಯೆಸೂರಿನ ಸಂಗೀತ ರಾಜಕುಮಾರ' ಎಂದು ಹೊಗಳಿಸಿಕೊಂಡ ಅದ್ಭುತ ವಯೊಲಿನ್ ವಾದಕ ! ವಿಶ್ವದ ಅಸಂಖ್ಯಾತ ಪ್ರತಿಷ್ಟಿತ ವೇದಿಕೆಗಳಲ್ಲಿ, ಹೆಸರಾಂತ ಸಂಗೀತ ಸಮ್ಮೆಳನ ಗಳಲ್ಲಿ,ಸಂಗೀತ ಸಮಾರೊಹ್ ಗಳಲ್ಲಿ ಹಾಗೂ ಪ್ರಸಿದ್ದ ವಿಶ್ವ ವಿದ್ಯಾನಿಲಯ ಗಳಲ್ಲಿ ತಮ್ಮ ವಯೊಲಿನ್ ವಾದನ ದಿಂದ ಲಕ್ಶಾಂತರ ಸಂಗೀತ ಪ್ರೇಮಿಗಳನ್ನು ಮೋಡಿ ಮಾಡಿದ ಅಸಮಾನ್ಯ ವಿದ್ವಾಂಸ !

ಪಾಂಡಿತ್ಯ[ಬದಲಾಯಿಸಿ]

ಮಂಜುನಾಥರವರು ಮೈಸೂರು ವಿಶ್ವವಿದ್ಯಾಲಯದಿಂದ ಸಂಗೀತದ ವಿಷಯದಲ್ಲಿ ಪಿಎಚ್.ಡಿಯನ್ನು ಪಡೆದರು.ಮೊದಲನೇ ಸ್ಥಾನದ ಜತೆ ನಾಲ್ಕು ಚಿನ್ನದ ಪದಕಗಳನ್ನು ಪಡೆದರು.ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರೂ ಆಗಿದ್ದಾರೆ. ಪಂಡಿತ್ ವಿಶ್ವಮೋಹನ ಭಟ್, ರೋನು ಮಜೂಂದಾರ್, ತೇಜೇಂದ್ರ ಮಜೂಂದಾರ್, ಬಾಲಮುರಳಿಕೃಷ್ಣರವರ ಜತೆ ನಡೆಸಿದ ಜುಗಲ್ಬಂದಿಗಳು ವಿಶ್ವಖ್ಯಾತಿಯನ್ನು ಪಡೆದಿವೆ. ಅಣ್ಣ ಮೈಸೂರು ನಾಗರಾಜ್ ರೊಂದಿಗೆ ಕೂಡಿ ಹಲವಾರು ಬಾರಿ ವಿಶ್ವ ಪರ್ಯಟನೆ ಮಾಡಿ, ಜಂಟಿಯಾಗಿ ಅಲ್ಲದೆ, ಇತರ ಜಗತ್ಪ್ರಸಿದ್ಧ ಸಂಗೀತಗಾರರೊಂದಿಗೆ (ಭಾರತೀಯ ಮತ್ತು ವಿದೇಶಿ), ಸಂಗೀತ ಕಚೇರಿ ಗಳನ್ನು ನೀಡಿದ್ದಾರೆ. ಉತ್ತರಾದಿ-ಮತ್ತು ದಕ್ಷಿಣಾದಿ ಜುಗಲ್ ಬಂದಿಗಳಲ್ಲಿ ಭಾಗವಹಿಸಿದ್ದಾರೆ. ಮೇಲೆ ತಿಳಿಸಿದಂತೆ ತಮ್ಮ ಎಳೆಯ ವಯಸ್ಸಿನಿಂದ ಕಛೇರಿಗಳನ್ನು ನಡೆಸಿಕೊಡುತ್ತಿರುವುದರಿಂದ ಇವರು ನಡೆಸಿಕೊಟ್ಟ ಕಾರ್ಯಕ್ರಮಗಳು ಸಹಸ್ರಾರು. ಅವುಗಳಲ್ಲಿ ಈ ಕೆಳಗಿನ ಕಾರ್ಯಕ್ರಮಗಳನ್ನು ವಿಶೇಷವಾಗಿ ಹೆಸರಿಸಬಹುದು. ರಾಯಲ್ ಆಲ್ಬರ್ಟ್ ಹಾಲ್, ಲಂಡನ್

  • ಕಾಮನ್ ಥ್ರೆಡ್ ಫೆಸ್ಟಿವಲ್, ಓರೆಗಾನ್, ಯು ಯಸ್ ಏ
  • ಆಲ್ ಯುರೋಪಿಯನ್ ಕಲ್ಚರಲ್ ಫೆಸ್ಟಿವಲ್, ಯುಕೆ ಸಿಡ್ನಿ ಒಪೆರಾ ಹೌಸ್, ಆಸ್ಟ್ರೇಲಿಯಾ ಫೆಸ್ಟಿವಲ್ ಆಫ್ ಇಂಡಿಯಾ ಲಂಡನ್, ಯುಕೆ ರೋಯಲ್ ಛಾರಿಟಿ ಕಾನ್ಸರ್ಟ್, ಕೌಲಾಲಂಪುರ್ (ಮಲೇಷಿಯಾದ ರಾಜರೆದುರು) ಫೇಡರೇಶನ್ ಸ್ಕ್ವೇರ್, ಮೆಲ್ಬರ್ನ್ ನಮೀಬಿಯಾದ ಅಧ್ಯಕ್ಷ ಡಾ| ಸ್ಯಾಂ ನುಜಾಮೋ ರಿಗಾಗಿ ವಿಶೇಷ ಕಾರ್ಯಕ್ರಮ ಮತ್ತು ಈ ಕೆಳಗಿನ ಕೇಂದ್ರಗಳಲ್ಲಿ ನಡೆಸಿಕೊಟ್ಟ ಕಾರ್ಯಕ್ರಮಗಳು