ಮೇಲುಕೋಟೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಮೇಲುಕೋಟೆ
ಮೇಲುಕೋಟೆ ನಗರದ ಪಕ್ಷಿನೋಟ
ಯೋಗ ನರಸಿಂಹಸ್ವಾಮಿ ದೇವಸ್ಥಾನ
India-locator-map-blank.svg
Red pog.svg
ಮೇಲುಕೋಟೆ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಮಂಡ್ಯ
ನಿರ್ದೇಶಾಂಕಗಳು 12.65° N 76.67° E
ವಿಸ್ತಾರ
 - ಎತ್ತರ
 km²
 - 900 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ
 - ಸಾಂದ್ರತೆ

 - /ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 571431
 - +08232
 - KA-11

ಮೇಲುಕೋಟೆಯು ಕರ್ನಾಟಕದ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಒಂದು ಹಳ್ಳಿ ಹಾಗೂ ಪ್ರಸಿದ್ಧ ಯಾತ್ರಾ ಸ್ಥಳ. ಇಲ್ಲಿರುವ ಹೊಯ್ಸಳರು ಕಟ್ಟಿಸಿದ ಚೆಲುವರಾಯಸ್ವಾಮಿ ದೇವಸ್ಥಾನ ಪ್ರಸಿದ್ಧ ಧಾರ್ಮಿಕ ಕೆಂದ್ರ. ಮೇಲುಕೋಟೆಯು ಜಿಲ್ಲಾ ಕೇಂದ್ರ ಸ್ಥಳ ಮಂಡ್ಯ ದಿಂದ ಸುಮಾರು ೩೭ ಕಿ.ಮೀ ದೂರದಲ್ಲಿದೆ. ಇದು ಶ್ರೀವೈಷ್ಣವ ಪಂಥದ ಒಂದು ಕೇಂದ್ರ. ಇಲ್ಲಿ ಬೆಟ್ಟದ ಮೇಲೆ ಯೋಗ ನರಸಿಂಹಸ್ವಾಮಿಯ ದೇವಸ್ಥಾವಿದೆ. ಈ ಹಳ್ಳಿ ಸಂಸ್ಕೃತ ಪಾಠ ಶಾಲೆಗೂ ಹೆಸರುವಾಸಿ.

ಮೇಲುಕೋಟೆಯ ದೇವಾಲಯಗಳು[ಬದಲಾಯಿಸಿ]

 • ಚಲುವನಾರಾಯಣ ಸ್ವಾಮಿ ದೇವಸ್ಥಾನ
 • ಯೋಗಾನರಸಿಂಹ ಸ್ವಾಮಿ ದೇವಸ್ಥಾನ
 • ಬದರಿ ನಾರಾಯಣ ದೇವಾಲಯ
 • ಪಟ್ಟಾಭಿರಾಮ ದೇವಾಲಯ
 • ಶಾಂಡಿಲ್ಯದ ಸನ್ನಿಧಿ
 • ಕುಲಶೇಖರ್ ಆಳ್ವಾರ್ ಸನ್ನಿಧಿ
 • ಜೀಯರ್ ಸನ್ನಿಧಿ
 • ವೇದಾಂತದೇಶಿಕರ ಸನ್ನಿಧಿ
 • ಕೇಶವ ದೇವರ ಸನ್ನಿಧಿ
 • ನಂಜೀಯರ್ ಸನ್ನಿಧಿ
 • ಮಾರಮ್ಮನ ಸನ್ನಿಧಿ
 • ಪೇಟೆ ಆಂಜನೇಯ ಸನ್ನಿಧಿ
 • ನಮ್ಮಾಳ್ವಾರ್ ಗುಡಿ
 • ತಿರುಮಂಗೈ ಆಳ್ವಾರ್ ಗುಡಿ
 • ಪೇಟೆ ಕೃಷ್ಣದೇವರ ಗುಡಿ
 • ಸೀತಾರಣ್ಯ ಕ್ಷೇತ್ರ
 • ಕರಣಿಕ ನಾರಾಯಣನ ಗುಡಿ
 • ವೆಂಕಟೇಶ್ವರ ಗುಡಿ
 • ಪರಕಾಲ ಮಠ
 • ಅಹೋಬಲ ನರಸಿಂಹ ಸ್ವಾಮಿ ಸನ್ನಿಧಿ
 • ಆದಿಶೇಷ ಸನ್ನಿಧಿ
 • ಪಂಚ ಭಾಗವತ ಕ್ಷೇತ್ರ ಸನ್ನಿಧಿ
 • ಪೇಯಾಳ್ವಾರ್ ಸನ್ನಿಧಿ
 • ವರಾಹ ದೇವಾಲಯ
 • ಬಿಂದು ಮಾಧವ ದೇವಾಲಯ
 • ಹನುಮಾನ್ ದೇವಾಲಯ
 • ಹಯಗ್ರೀವ ಸನ್ನಿಧಿ
 • ಲಕ್ಷ್ಮಿ ನಾರಾಯಣ ಸನ್ನಿಧಿ
 • ದತ್ತ ನಾರಾಯಣ ಗುಡಿ
 • ವರಸಿದ್ದಿ ವಿನಾಯಕ (ಏಕಶಿಲೆ ಗಣಪ)
 • ಕೇಶವ (ನಯನಕ್ಷೇತ್ರ)
 • ಶನೇಶ್ವರ ಗುಡಿ
 • ಕವಿಗಲ್ ಆಂಜನೇಯ ಗುಡಿ
 • ಕರಮೆಟ್ಟಿಲು ಆಂಜನೇಯ ಗುಡಿ
 • ಮೂಡ ಬಾಗಿಲು ಆಂಜನೇಯ ಗುಡಿ
 • ರಾಯರಗೋಪುರ ಆಂಜನೇಯ ಗುಡಿ
 • ಶ್ರೀನಿವಾಸ ದೇವಾಲಯ
 • ಸುಗ್ರೀವನ ಗುಡಿ
 • ಕಾಳಮ್ಮನ ಗುಡಿ
 • ಗರುಡ ದೇವರ ಗುಡಿ
 • ಆಂಜನೇಯ ಗುಡಿ(ಅಕ್ಕ ತಂಗಿಯರ ಹೊಂಡ)
 • ಹೊರತಮ್ಮನ ದೇವಾಲಯ
 • ಶಿವನ ಗುಡಿ(ಉಳ್ಳಿಬಾವಿ)

ಕವಿ ಪುತಿನ ಅವರ ಮನೆ[ಬದಲಾಯಿಸಿ]

ಕನ್ನಡದ ಶ್ರೇಷ್ಠ ಗೀತ ನಾಟಕಗಳನ್ನು ಬರೆದ ಕವಿ ಪುತಿನ ಹುಟ್ಟಿ ಬೆಳೆದದ್ದು ಮೇಲುಕೋಟೆಯಲ್ಲಿ. ಅಲ್ಲಿನ ಪರಿಸರ, ಪಂಚಪ್ರಾಣವಾಗಿದ್ದ ಆರಾಧ್ಯ ದೇವರು ಇವರ ಸಾಹಿತ್ಯ ಕೃಷಿಗೆ ಪ್ರೇರಣೆಯಾಗಿದ್ದವು. ಮೇಲುಕೋಟೆಯಲ್ಲಿ ಚಲುವನಾರಾಯಣಸ್ವಾಮಿ, ಯೋಗಾನರಸಿಂಹ ದೇಗುಲಗಳು, ಅಕ್ಕ ತಂಗಿಯರ ಕೊಳ, ಸಂಸ್ಕೃತ ಸಂಶೋಧನಾ ಕೇಂದ್ರಗಳು ಹೇಗೆ ಪ್ರಸಿದ್ಧಿ ಎನಿಸಿಕೊಂಡಿವೆಯೋ ಅದೇ ರೀತಿಯಲ್ಲಿ ಕವಿ ಪುತಿನ ಅವರ ಮನೆಯೂ ಅಷ್ಟೇ ಪ್ರಸಿದ್ಧಿ.

ಪುತಿನ ಮನೆ ಸ್ಮಾರಕವಾಗಿದ್ದು ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ. ಅಂದರೆ, ಪುತಿನ ಬದುಕಿದ್ದ ಕಾಲದಲ್ಲೇ. ಕವಿಯ ಆಶಯವೂ ಅದೇ ಆಗಿತ್ತು; 'ನಾನು ಬದುಕಿರುವಾಗಲೇ ಬಾಳಿ, ಬದುಕಿದ ನನ್ನ ಮನೆ ಸ್ಮಾರಕವಾಗಬೇಕು. ನಾನು ಬರೆದ ಸಾಹಿತ್ಯ ನಿಂತ ನೀರಾಗದೆ, ನನ್ನ ಸಾವಿನಾಚೆಯೂ ಮುಂದಿನ ಪೀಳಿಗೆಯನ್ನು ತಲುಪುವಂತಾಗಬೇಕು'.

1996ರಲ್ಲಿ ಈ ಮನೆ ಸ್ಮಾರಕವಾಗಿ, ಸರ್ಕಾರದ ತೆಕ್ಕೆ ಸೇರಿತು. 1998ರಲ್ಲಿ ಕವಿ ವಿಧಿವಶರಾದ ನಂತರ ಟ್ರಸ್ಟ್‌ನವರು ಕವಿಯ ಬಯಕೆಯಂತೆ ಮನೆಯ ಮೂಲ ರೂಪವನ್ನು ಬದಲಿಸದೇ 2000ನೇ ಇಸ್ವಿಯಲ್ಲಿ ಪ್ರಾಚ್ಯವಸ್ತು ಇಲಾಖೆಗೆ ಗುತ್ತಿಗೆ ನೀಡಿ (10 ಲಕ್ಷ ರು.), ಹೊಸ ರೂಪ ಕೊಡಲು ಮುಂದಾದರು. ಶತಮಾನದ ಅಂಚಿನಲ್ಲಿದ್ದ ಮನೆಯ ಹಳೇ ಕಂಬಗಳು, ಮಹಡಿಯ ಮೆಟ್ಟಿಲುಗಳು, ಹೆಂಚುಗಳನ್ನು ಬಳಸಿಕೊಂಡೇ ಮೂಲ ಮನೆಯ ಅಂದ, ಚಂದಕ್ಕೆ ಯಾವುದೇ ಧಕ್ಕೆ ಬಾರದಂತೆ ಕವಿ ಮನೆಯನ್ನು ಸುಂದರ ಸ್ಮಾರಕವಾಗಿಸಲಾಯಿತು. ಈ ಮನೆಯಲ್ಲಿ ಕವಿ ಪುತಿನ ಅವರ ಊರುಗೋಲು, ಬರೆಯಲು ಬಳಸುತ್ತಿದ್ದ ಮಣೆ, ಟೋಪಿ ಸೇರಿದಂತೆ ಮಹಡಿಯಲ್ಲಿ ಕುಳಿತು ಬರೆಯುತ್ತಿದ್ದ ಜಾಗವನ್ನೂ ಸಂರಕ್ಷಿಸಲಾಗಿದೆ. ಅಲ್ಲದೆ, ಕವಿಯ 'ಮನೆ ದೇಗುಲ', 'ರಥ ಸಪ್ತಮಿ', 'ಹರಿ ಚರಿತೆ', 'ಮಾಂದಳಿರು', 'ಜಾನ್ಹವಿಗೆ ಜೋಡಿ ದೀವಿಗೆ', 'ಗೋಕುಲ ನಿರ್ಗಮನ' ಸೇರಿದಂತೆ ಅನೇಕ ಕೃತಿಗಳ ಪ್ರಥಮ ಮುದ್ರಣವೂ ಇಲ್ಲಿ ನೋಡಲು ಸಿಗುತ್ತದೆ.


ಚಿತ್ರಗಳು[ಬದಲಾಯಿಸಿ]

"http://kn.wikipedia.org/w/index.php?title=ಮೇಲುಕೋಟೆ&oldid=375019" ಇಂದ ಪಡೆಯಲ್ಪಟ್ಟಿದೆ