ಮೆನಿಂಜೈಟಿಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೆನಿಂಜೈಟಿಸ್ ಒಂದು ಅಪಾಯಕಾರಿ ರೋಗ. ಮಿದುಳು ಮತ್ತು ಬೆನ್ನೆಲುಬಿನ ಮೇಲಿರುವ ಮೆನಿಂಜೈಸ್ ಎಂಬ ಪೊರೆಯ ಉರಿಯೂತವೇ ಇದಕ್ಕೆ ಕಾರಣ.ಮೆನಿಂಜೈಟಿಸ್ಗೆ ನೀಸ್ಸೆರಿಯ ಮೆನಿಂಜೈಟಿಡಿಸ್ ಎಂಬ ಬ್ಯಾಕ್ಟೀರಿಯಾ ಕಾರಣ.ಸಾಂಕ್ರಾಮಿಕ ರೋಗವಾಗಿರುವ ಇದು,೧೦-೧೨ ವರ್ಷಗಳ ಅಂತರದಲ್ಲಿ ಕಾಣಿಸಿಕೊಳ್ಳುತ್ತದೆ.ಚಳಿಗಾಲ ಮುಗಿದು ಬೇಸಿಗೆ ಆರಂಭವಾಗುವ ಹಂತದಲ್ಲಿ ಈ ರೋಗ ಕಾಣಿಸಿಕ್ಕೊಳುತ್ತದೆ.

ಈ ರೋಗದಿಂದ ಬಳಲುವ ವ್ಯಕ್ತಿ ಸೀನಿದರೆ ಹತ್ತಿರ ಇರುವ ಆರೋಗ್ಯವಂತನಿಗೂ ಈ ರೋಗ ಬರಬಹುದು.ಈ ರೋಗದ ಬ್ಯಾಕ್ಟೀರಿಯಾ ಮೊದಲು ಮೂಗು ಮತ್ತು ಗಂಟಲಿಗೆ ಹೋಗಿ,ಅಲ್ಲಿ ವೃದ್ಧಿಗೊಳ್ಳುತ್ತದೆ.೪-೫ ದಿನಗಳ ನಂತರ ಈ ರೋಗದ ಲಕ್ಷಣಗಳು ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತವೆ.ಮೊದಲು ಗಂಟಲು ಕೆರೆತವಾಗುತ್ತದೆ.ಅನಂತರ ಮೂಗಿನಲ್ಲಿ ನೀರು ಸುರಿಯುತ್ತದೆ.ರೋಗಿ ವಾಂತಿ ಮಾಡಿಕ್ಕೊಳ್ಳಲಾರಂಭಿಸುತ್ತಾನೆ.ಅನಂತರ ಜ್ವರ ಬರುತ್ತದೆ.ಬ್ಯಾಕ್ಟೀರಿಯಾ ಮಿದುಳನ್ನು ತಲುಪಿತೆಂದರೆ ಬೆನ್ನುನೋವು ಹಾಗೂ ತಲೆನೋವು ಕಾಣಿಸಿಕೊಳ್ಳುತ್ತದೆ.ಇದಾದ ೨-೩ ದಿನಗಳಲ್ಲಿ ಚರ್ಮದ ಮೇಲೆ ಗಂಧೆಗಳೂ ಕಾಣಿಸಿಕೊಳ್ಳುತ್ತವೆ.ಸರಿಯಾದ ಚಿಕಿತ್ಸೆ ದೊರೆಯದಿದ್ದಲ್ಲಿ ಸಾವೂ ಸಂಭವಿಸಬಹುದು.

ಸರಿಯಾದ ಚಿಕಿತ್ಸೆಯಿಂದ ೨೪ ತಾಸುಗಳಲ್ಲೇ ವಾಸಿಯಾಗಬಹುದಾದ ಈ ರೋಗದ ಚಿಕಿತ್ಸೆಗಾಗಿ,ಸಲ್ಫಡಯಜೆನ್,ಪೆನ್ಸಿಲಿನ್,ಟಿಟ್ರಸೈಕ್ಲಿನ್ ಉಪಯುಕ್ತ.ಈ ರೋಗವನ್ನು ಉಂಟುಮಾಡುವ ಬ್ಯಾಕ್ಟೀರಿಯಾವನ್ನು 'ಎ','ಬಿ' ಮತ್ತು 'ಸಿ' ಎಂಬ ಗುಂಪುಗಳಾಗಿ ವಿಂಗಡಿಸಬಹುದು.ಅಮೆರಿಕದಲ್ಲಿ ಈ ರೋಗ ೧೯೧೫ರಿಂದ ೧೯೬೩ರ ಅವಧಿಯಲ್ಲಿ ಹಾಗೂ ೧೯೬೪ರಿಂದ ೧೯೬೮ರ ಅವಧಿಯಲ್ಲಿ ಕಾಣಿಸಿಕೊಂಡಿತ್ತು.ಈಗಿನ ಕಾಲದಲ್ಲಿ 'ಎ' ಮತ್ತು 'ಸಿ' ಗುಂಪಿನ ಬ್ಯಾಕ್ಟೀರಿಯಾದ ವಿರುದ್ಧ ಲಸಿಕೆಗಳೂ ದೊರೆಯುತ್ತವೆ.