ಮುಂಬೈ ನ ಬೊಹ್ರಾ ಮುಸಲ್ಮಾನರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಬೊಹ್ರಾ', ಗಳು, ' ಶಿಯ' ಮುಸ್ಲಿಮ್ ಪಂಗಡಕ್ಕೆ ಸೇರಿದವರು. ಮನೆಯಮಾತು, ಗುಜರಾತಿ. ೧೧ ನೆಯ ಶತಮಾನದಲ್ಲಿ ಗುಜರಾತ್ ನ ಹಲವಾರು ಹಿಂದುಗಳನ್ನು ಮತಾಂತರಗೊಳಿಸಲಾಗಿತ್ತು. ಇವರೆಲ್ಲಾ ಬೊಹ್ರಾ ಮುಸಲ್ಮಾನರಾದರು. ಚಿಕ್ಕ ಪುಟ್ಟ ಉದ್ಯೋಗಗಳನ್ನು, ವ್ಯಾಪರಗಳನ್ನು ಮಾಡಿ ತಮ್ಮ ಜೀವನವನ್ನು ಸಾಗಿಸುತ್ತಿದ್ದರು. 'ಬೊಹ್ರಾ ಮುಸ್ಲಿಮ್ ಸಮುದಾಯ' ದ ಅತಿಹೆಚ್ಚು ಮಂದಿ ಮುಂಬಯಿನಲ್ಲಿ ವಾಸಮಾಡುತ್ತಾರೆ.

'ಬೊಹ್ರಾ ಮುಸಲ್ಮಾನರ, ಧರ್ಮಗುರುಗಳು', 'ಸಯ್ಯೆದ್ ನ,' ರವರು :[ಬದಲಾಯಿಸಿ]

'ಸಯ್ಯೆದ್ ನ', ಅವರ ಮತದ ಗುರುಗಳು. ಗುಜರಾತ್ ನಿಂದ, ಬೊಂಬಾಯಿಗೆ, ಬಹಳ ಹಿಂದೆಯೇ, ಬೊಹ್ರಾಗಳು ವಲಸೆಬಂದರು. ವ್ಯಾಪಾರವೇ ಅವರ ಮೂಲ ಹವ್ಯಾಸ. ಎಲ್ಲಾ ವಸ್ತುಗಳನ್ನು ಹರಾಜಿನಲ್ಲಿ ಕೊಳ್ಳುತ್ತಿದ್ದರು. ೧೯ ನೆಯ ಶತಮಾನದ ಮಧ್ಯಭಾಗದಲ್ಲಿ, ಹೊಸದಾಗಿ ಆರಂಭವಾದ, "ಫ್ಯಾನ್ಸಿ ಅಂಗಡಿ,' ಗಳಿಂದಾಗಿ ಅವರ ವ್ಯಾಪಾರಕ್ಕೆ ಧಕ್ಕೆ ಬಂತು. ಅವರು ಬೇರೆ ಬೇರೆ ವ್ಯಾಪಾರದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ನಂತರ, ಆಹಾರಪದಾಥಗಳನ್ನು ಚಿಲ್ಲರೆಯಾಗಿ ಮಾರಾಟಮಾಡಲು ಪ್ರಾರಂಭಿಸಿದರು. ಪ್ರಮುಖವಾಗಿ 'ಮಾಂಸ', ಹಾಗೂ ಅದಕ್ಕೆಸಂಬಂಧಿಸಿದ ವಸ್ತುಗಳ ಚಿಲ್ಲರೆ ವ್ಯಾಪಾರ. 'ಹಾರ್ಡ್ ವೇರ್ ಅಂಗಡಿ,' ಗಳಿಂದಲೇ ಅನೇಕರು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಬೊಂಬಾಯಿನ ಉತ್ತರ ಕೋಟೆ, ಪ್ರದೇಶದಲ್ಲಿ, ಈಗಿನ 'ಜನರಲ್ ಪೋಸ್ಟ್ ಆಫೀಸ್' ಬಳಿ, ಇವರ ವಾಸ್ತವ್ಯ. ಅದನ್ನು ಈಗಲೂ, "ಬೋರಿ ಬಂದರ್," ಎನ್ನುತ್ತಾರೆ.

ಮುಂಬಯಿ ನ ಸುಪ್ರಸಿದ್ಧ " ಬೋರಿಬಂದರ್ ", ಹೆಸರು ಬಂದಿರುವುದು, ಬೊಹ್ರಾಮುಸಲ್ಮಾನರ ವಾಸಸ್ಥಾನವಾದದ್ದರಿಂದ[ಬದಲಾಯಿಸಿ]

'ಬೊಹ್ರಾ,' ಗಳು ಇರುವ ಜಾಗ, ಈಗಲೂ 'ಬೋರಾ ಬಝಾರ್' ಎಂದು ಪ್ರಸಿದ್ಧಿಯಾಗಿದೆ. ೧೯ ನೆಯ ಶತಮಾನದ ನಂತರದಲ್ಲಿ, ಬೊಂಬಾಯಿನ ಅತಿ ಹೆಚ್ಚು ಸಾಹುಕಾರರ ಗುಂಪಿನಲ್ಲಿ ಅವರು ಕಾಣಿಸಿಕೊಳ್ಳತೊಡಗಿದರು. ಅವರಲ್ಲಿ ಪ್ರಮುಖರೆಂದರೆ, 'ತ್ಯಾಬ್ಜಿಗಳು', ಹಾಗೂ ,ನೂರುದ್ದೀನ್,' ಪಂಗಡಗಳು. ನೂರುದ್ದೀನ್ ಮುಸ್ಲಿಮ್ ಜನ ,'ಚೈನ ವ್ಯಾಪಾರ,' ದಿಂದ ಭಾರಿ ಹಣ ಸಂಪಾದಿಸಿದರು. ಹೆಚ್ಚಾದ ಹಣವನ್ನು ಬೇರೆ ಉದ್ಯಮಗಳಲ್ಲಿ ಹಾಕಿ, 'ಹೊಸ ಬಿಝಿನೆಸ್' ಪ್ರಾರಂಭಿಸಿದರು. ಆಗಿನ ಕಾಲದಲ್ಲಿ ಕೆಲವು ಪಾರ್ಸಿ ವ್ಯಾಪಾರಸ್ಥರು ಮಾಡಿದರೀತಿಯಲ್ಲಿ, ತಾವೂ ಮುಂದುವರೆದರು. ೧೯ ನೆಯ ಶತಮಾನದ ಅಂತ್ಯದಲ್ಲಿ, 'ಬದ್ರುದ್ದೀನ್ ತ್ಯಾಬ್ ಜಿ', ಯವರು, ,'ಬಾಂಬೆಹೈ ಕೋರ್ಟ್,' ಜಡ್ಜ್ ಆಗಿದ್ದರು.

ಕೆಲವು , ಸುಪ್ರಸಿದ್ಧ, ಬೊಹ್ರಾ ಮುಸಲ್ಮಾನರು[ಬದಲಾಯಿಸಿ]