ಮುಂಬಾದೇವಿ ದೇವಸ್ಥಾನ, ದಕ್ಷಿಣ ಮುಂಬೈ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಮುಂಬಾದೇವಿ ದೇವಸ್ಥಾನ ಮುಂಬೈ ನಗರದ ಭುಲೇಶ್ವರ್ ವಲಯದಲ್ಲಿರುವ ಪ್ರಾಚೀನ ದೇವಾಲಯ. ಈ ದೇವಾಲಯವನ್ನು ೧೭೩೭ ರಲ್ಲಿ ಹೊಸದಾಗಿ ನಿರ್ಮಿಸಲಾಯಿತು. ಮೊದಲಿನ ಹಳೆಯ ದೇವಸ್ಥಾನ, ಶಿಥಿಲವಾಗಿ ನಾಶದ ಅಂಚಿನಲ್ಲಿದ್ದಿದ್ದರಿಂದ ಅದನ್ನು ಸಂಪೂರ್ಣವಾಗಿ ಕೆಡವಿ, ಹೊಸಮಂದಿರದ ನಿರ್ಮಾಣದ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಆಗಿನ ಮುಂಬೈ ನಗರದ ಮೂಲ ವಾಸಿಗಳಾದ ಕೋಳಿ ಜನಸಮುದಾಯದವರು ಪೂಜಿಸುತ್ತಿದ್ದ ದೇವತೆಯ ಹೆಸರನ್ನು ನಗರಕ್ಕೆ ಇಟ್ಟಿರುತ್ತಾರೆ.