ಮುಂಗಸಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಮುಂಗುಸಿ
LC
Herpestes edwardsii. 2.jpg
ವೈಜ್ಞಾನಿಕ ವಿಂಗಡಣೆ
ಸಾಮ್ರಾಜ್ಯ: ಪ್ರಾಣಿ
ವಂಶ ಕಾರ್ಡೇಟ
ವರ್ಗ: ಸಸ್ತನಿ
ಗಣ: ಕಾರ್ನಿವೊರೇಲ್
ಕುಟುಂಬ: ಹರ್ಪ್ಸ್ಟಿಡೇ
ಉಪ ಕುಟುಂಬ: ಹರ್ಪಿಸ್ಟಿನೇ
ಜಾತಿ: ಹರ್ಪಿಸ್ಟೆಸ್
ಪ್ರಜಾತಿ: ಎಚ್.ಎಡ್ವರ್ಡ್೬ಸಿ
ದ್ವಿಪದಿ ನಾಮ
ಹೆರ್ಪೆಸ್ಟ್ಸ್ ಎಡ್ವಡ್ಸಿ (Herpestes edwardsii)
É. Geoffroy Saint-Hilaire, 1818

ಮುಂಗಸಿ ಅಥವಾ ಮುಂಗುಸಿ (Indian Grey Mongoose) ಇದರ ವೈಜ್ಞಾನಿಕ ಹೆಸರು : ಹೆರ್ಪೆಸ್ಟ್ಸ್ ಎಡ್ವಡ್ಸಿ (Herpestes edwardsi) ಭಾರತದಲ್ಲಿ ಎಲ್ಲೆಡೆ ಕಂಡು ಬರುವ ಪ್ರಾಣಿ. ದಟ್ಟ ಅರಣ್ಯ ಪ್ರದೇಶದಲ್ಲಿ ವಾಸಿಸದೆ ಹೆಚ್ಚಾಗಿ ಪೊದೆಗಳಲ್ಲಿ, ಹಳೆಯ ಮರದ ಪೊಟರೆಗಳಲ್ಲಿ,ಹುತ್ತಗಳ ಬಳಿಯಲ್ಲಿ ಕಾಣಸಿಗುವುದು. ಕಂದು ಹಳದಿಯ ಬೂದು ಛಾಯೆಯ ಮೈ ಬಣ್ಣ. ಇದರ ಮೈಮೇಲಿನ ರೋಮಗಳ ಮೇಲೆ ಕರಿ ಎಳೆಗಪ್ಪು ಬಣ್ಣದ ಉಂಗುರಗಳಂತಹ ಗುರುತು ಇರುವುದು. ಇಲಿ,ಹೆಗ್ಗಣ, ಹಾವು, ಕಪ್ಪೆ, ಚೇಳು, ಹಣ್ಣುಗಳು ಇವುಗಳ ಆಹಾರ.ಇದು ಹಾವುಗಳ ದ್ವೇಷಿ. ಹಾವುಗಳನ್ನು ತನ್ನ ಚಾಣಾಕ್ಷತನದಿಂದ ನಿಗ್ರಹಿಸುವುದರಲ್ಲಿ ಅಗ್ರಗಣ್ಯ. ಹಾವಿನ ವಿಷಕ್ಕೆ ಸ್ವಲ್ಪ ಮಟ್ಟಿನ ರಕ್ಷೆ ಇದೆ. ಸುಮಾರು ೬೦ ದಿನಗಳ ಗರ್ಭಾವಧಿ ಇದೆ. ಆಯುಃ ಪ್ರಮಾಣ ೭-೮ ವರ್ಷಗಳು.

"http://kn.wikipedia.org/w/index.php?title=ಮುಂಗಸಿ&oldid=323058" ಇಂದ ಪಡೆಯಲ್ಪಟ್ಟಿದೆ