ಮಿಸೌರಿ

Coordinates: 38°30′N 92°30′W / 38.5°N 92.5°W / 38.5; -92.5
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಿಸೌರಿ ರಾಜ್ಯ
Flag of Missouri State seal of Missouri
ಧ್ವಜ ಮುದ್ರೆ
ಅಡ್ಡಹೆಸರು: The Show-Me State (unofficial)
ಧ್ಯೇಯ: ಜನರ ಕಲ್ಯಾಣವೇ ಸರ್ವೋಚ್ಚ ಕಾನೂನಾಗಿರಲಿ (ಕನ್ನಡ)
Map of the United States with Missouri highlighted
Map of the United States with Missouri highlighted
ಅಧಿಕೃತ ಭಾಷೆ(ಗಳು) ಇಂಗ್ಲೀಷ್
Demonym Missourian
ರಾಜಧಾನಿ Jefferson City
ಅತಿ ದೊಡ್ಡ ನಗರ Kansas City
ಅತಿ ದೊಡ್ಡ ನಗರ ಪ್ರದೇಶ Greater St Louis Area[೧]
ವಿಸ್ತಾರ  Ranked 21st in the US
 - ಒಟ್ಟು ೬೯,೭೦೪ sq mi
(೧,೮೦,೪೩೩ km²)
 - ಅಗಲ ೨೪೦ miles (೩೮೫ km)
 - ಉದ್ದ ೩೦೦ miles (೪೮೦ km)
 - % ನೀರು ೧.೧೭
 - Latitude 36° N to 40° 37′ N
 - Longitude ೯೫° ೪೬′ W ರಿಂದ ೮೯° ೬′ W ವರೆಗೆ
ಜನಸಂಖ್ಯೆ  ೧೮ನೇನೆಯ ಅತಿ ಹೆಚ್ಚು
 - ಒಟ್ಟು ೫,೯೮೭,೫೮೦ (೨೦೦೯ est.)[೨]
೫,೫೯೫,೨೧೧ (೨೦೧೦)
 - ಜನಸಂಖ್ಯಾ ಸಾಂದ್ರತೆ ೮೬.೯ (೨೦೦೯)/sq mi  (೩೩.೫೬/km²)
೨೮ನೇನೆಯ ಸ್ಥಾನ
 - Median income  $೪೫,೧೧೪ (೩೭ನೇ)
ಎತ್ತರ  
 - ಅತಿ ಎತ್ತರದ ಭಾಗ Taum Sauk Mountain[೩]
೧,೭೭೨ ft  (೫೪೦ m)
 - ಸರಾಸರಿ ೮೦೦ ft  (೨೪೦ m)
 - ಅತಿ ಕೆಳಗಿನ ಭಾಗ St. Francis River[೩]
೨೩೦ ft  (೭೦ m)
ಸಂಸ್ಥಾನವನ್ನು ಸೇರಿದ್ದು  August 10, 1821 (೨೪ನೇ)
Governor Jay Nixon (D)
Lieutenant Governor Peter Kinder (R)
U.S. Senators Kit Bond (R)
Claire McCaskill (D)
Congressional Delegation 5 Republicans, 4 Democrats (list)
Time zone Central : UTC-6/-5
Abbreviations MO US-MO
Website www.mo.gov

ಮಿಸೌರಿ (pronounced /mɨˈzʊəri/ ( listen)ಅಥವಾ/mɨˈzʊərə/)[೪]ಯುನೈಟೆಡ್ ಸ್ಟೇಟ್ಸ್[೫]ಮಧ್ಯಪಶ್ಚಿಮ ಬಾಗದಲ್ಲಿರುವ, ಇಯೋವಾ, ಇಲಿನಾಯ್ಸ್, ಕೆಂಟಕಿ, ಟೆನೆಸ್ಸಿ, ಅರ್ಕಾನ್ಸಾಸ್, ಓಕಲ್ಹೋಮಾ, ಕಾನ್ಸಾಸ್ ಮತ್ತು ನೆಬ್ರಾಸ್ಕಾಗಳಿಂದ ಸುತ್ತುವರಿಯಲ್ಪಟ್ಟ ಒಂದು ರಾಜ್ಯ. ಮಿಸೌರಿಯು ಅತಿ ಹೆಚ್ಚು ಜನಸಂಖ್ಯೆ ಇರುವ ರಾಜ್ಯಗಳ ಪೈಕಿ 18ನೆಯದಾಗಿದ್ದು,2009ರ ಜನ ಎಣಿಕೆಯ ಪ್ರಕಾರ ಅದರ ಜನಸಂಖ್ಯೆ 5,987,580.[೨] ಮಿಸೌರಿ 114 ಗ್ರಾಮಗಳನ್ನು ಮತ್ತು ಒಂದು ಸ್ವತಂತ್ರ ನಗರವನ್ನು ಹೊಂದಿದೆ. ಮಿಸೌರಿಯ ರಾಜಧಾನಿ ಜೆಫರ್ಸನ್ ನಗರ. ಸೇಂಟ್ ಲೂಯಿಸ್, ಕಾನ್ಸಾಸ್ ನಗರ ಮತ್ತು ಸ್ಪ್ರಿಂಗ್ ಫೀಲ್ಡ್ ಮಿಸೌರಿಯ ಮೂರು ವಿಶಾಲವಾದ ನಗರಪ್ರದೇಶಗಳು. ಮಿಸೌರಿಯನ್ನು ಮೊದಲಿಗೆ ಫ್ರಾನ್ಸ್ ನಿಂದ ಲೂಯಿಸೀನಿಯಾ ಕೊಳ್ಳುವಿಕೆಯ ಸಂದರ್ಭದಲ್ಲಿ ಆ ಕೊಳ್ಳುವಿಕೆಯ ಅಂಗವಾಗಿ ಪಡೆದುದಾಗಿದ್ದು, ನಂತರ ಮಿಸೌರಿ ಪ್ರದೇಶವೆಂದು ಹೆಸರಿಸಲಾಯಿತು. ಮಿಸೌರಿ ಪ್ರದೇಶದ ಕೊಂಚ ಭಾಗವನ್ನು ಒಕ್ಕೂಟದ 24ನೆಯ ರಾಜ್ಯವಾಗಿ ಆಗಸ್ಟ್ 10,1821ರಂದು ಸೇರಿಸಿಕೊಳ್ಳಲಾಯಿತು.

ನಾಗರಿಕಮತ್ತು ಜನಪದ ಸಂಸ್ಕೃತಿಗಳ ಮಿಶ್ರತೆಯನ್ನು ಹೊಂದಿರುವ ಮಿಸೌರಿಯು ಇಡೀ ದೇಶದ ಜನಾಂಗೀಯ ಸ್ಥಿತಿಗತಿಗಳು, ವಾಣಿಜ್ಯ ಮತ್ತು ರಾಜಕೀಯ ಆಗುಹೋಗುಗಳನ್ನು ಪ್ರತಿಬಿಂಬಿಸುತ್ತದೆ. ಈ ರಾಜ್ಯವನ್ನು ರಾಜಕೀಯ (0}ಮುನ್ಸೂಚನಾಘಂಟೆರಾಜ್ಯವೆಂದೇ ಬಹುಕಾಲದಿಂದ ಪರಿಗಣಿಸಲಾಗಿದೆ.[೬] 1956 ಮತ್ತು 2008ರ ಹೊರತಾಗಿ, 1904ರಿಂದ ಮಿಸೌರಿಯಲ್ಲಿ ದೊರೆತ ಯು.ಎಸ್.ರಾಸ್ಟ್ರಪತಿಯ ಚುನಾವಣಾ ಫಲಿತಾಂಶಗಳು ಮುಂದಿನ ಅಮೆರಿಕದ ರಾಷ್ಟ್ರಪತಿ ಯಾರಾಗುವರೆಂಬುದರ ಬಗ್ಗೆ ಕರಾರುವಾಕ್ಕಾಗಿ ಸೂಚನೆ ನೀಡಿವೆ. ಮಿಸೌರಿಯ ಮೇಲೆ ಮಧ್ಯಪಶ್ಚಿಮದ ಹಾಗೂ ದಕ್ಷಿಣದ ಸಂಸ್ಕೃತಿಗಳ ಗಾಢ ಛಾಯೆ ಬಿದ್ದಿದ್ದು, ಅದು ಗಡಿರಾಜ್ಯವೆಂಬ ಅಂಶವನ್ನು ಎತ್ತಿಹಿಡಿಯುತ್ತದೆ. ಅದು ಪೂರ್ವ ಮತ್ತು ಪಶ್ಚಿಮ ಯುನೈಟೆಡ್ ಸ್ಟೇಟ್ಸ್ ನ ಮಧ್ಯಭಾಗದಲ್ಲಿದ್ದು, ಸೇಂಟ್ ಲೂಯಿಸ್ ಪ್ರದೇಶವನ್ನಂತೂ "ಪಶ್ಚಿಮಾಂತ್ಯ ಪೂರ್ವ ನಗರ" ಎಂದೂ, ಕಾನ್ಸಾಸ್ ನಗರವನ್ನು "ಪೂರ್ವಾಂತ್ಯ ಪಶ್ಚಿಮ ನಗರ" ಎಂದು ಕರೆಯಲಾಗುತ್ತದೆ. ಮಿಸೌರಿಯ ಮೇಲ್ಮೈ ಲಕ್ಷಣವು ವೈವಿಧ್ಯಮಯವಾಗಿದೆ. ರಾಜ್ಯದ ಉತ್ತರ ಭಾಗವು ವಿಭಜಿತ ಕೃಷಿ ಭೂಮಿ(ಬಯಲು)ಯಾಗಿದ್ದು, ದಕ್ಷಿಣ ಭಾಗವು ವಿಭಜಿತ ಪ್ರಸ್ಥಭೂಮಿಗಳಿಂದಾವೃತವಾದ ಒಝಾರ್ಕ್ ಬೆಟ್ಟಗಳಿಂದ ಕೂಡಿದ್ದು, ಈ ಎರಡೂ ಪ್ರದೇಶಗಳನ್ನು ಮಿಸೌರಿ ನದಿಯು ಪ್ರತ್ಯೇಕಿಸುತ್ತದೆ. ಮಿಸಿಸಿಪಿಮತ್ತು ಮಿಸೌರಿನದಿಗಳ ಸಂಗಮವು ಸೇಂಟ್ ಲೂಯಿಸ್ ನ ಬಳಿಯಲ್ಲಿದೆ.[೭]

ವ್ಯುತ್ಪತ್ತಿ ಮತ್ತು ಉಚ್ಚಾರ[ಬದಲಾಯಿಸಿ]

ಈ ರಾಜ್ಯಕ್ಕೆ ಮಿಸೌರಿ ನದಿಯ ಹೆಸರನ್ನೇ ಇಟ್ಟಿದ್ದು, ಆ ನದಿಗೆ ಸಿಯೋಯುಯನ್ ಭಾಷೆ ಮಾತಾಡುವ ಬುಡಕಟ್ಟಿನವರ ಹೆಸರನ್ನೇ ಇಡಲಾಗಿದ್ದು, ಆ ಬುಡಕಟ್ಟಿನವರ ಹೆಸರು ಇಲಿನಾಯ್ಸ್ ಭಾಷೆಯಲ್ಲಿ ಓಯೆಮೆಸೌರಿಟಲ್ (ವಿಮಿಹ್ ಸೂರಿಟಾ [೮]) ಎಂದಾಗಿದ್ದು, ಅದರ ಅರ್ಥ "ಯಾರು ಡಗೌಟ್ ದೋಣಿಗಳನ್ನು ಹೊಂದಿರುವರೋ" ಎಂಬುದಾಗಿದೆ.[೯]

"ಮಿಸೌರಿ"ಯ ಕೊನೆಯ ಅಕ್ಷರದ ಉಚ್ಚಾರಣೆಯು ನಿರ್ದಿಷ್ಟವಿಲ್ಲದೆ, ಕೆಲವರ ಪ್ರಕಾರ ಅದು ದೀರ್ಘ ಸ್ವರಾಕ್ಷರವೆಂದೂ (ಮೀಟ್ ನಲ್ಲಿನ ಈಕಾರದಂತೆ) ಮತ್ತು ಇತರರ ಪ್ರಕಾರ ಹ್ರಸ್ವ ಸ್ವರವೆಂದೂ(ಮಿಟ್ ಅಥವಾ ಮಟ್ ನ ಇಕಾರ ಅಥವಾ ಉಕಾರದಂತೆ) ಭಿನ್ನಾಭಿಪ್ರಾಯಗಳಿವೆ. ಈ ವಿಷಯದ ಬಗ್ಗೆ ಬಹಳ ಕೂಲಂಕಷವಾದ ಅಧ್ಯಯನ Archived 2008-04-09 ವೇಬ್ಯಾಕ್ ಮೆಷಿನ್ ನಲ್ಲಿ. ನಡೆಸಿದವರು ಭಾಷೋಚ್ಚಾರಣ ತಜ್ಷ ಡೊನಾಲ್ಡ್ ಮ್ಯಾಕ್ಸ್ ಲ್ಯಾನ್ಸ್ Archived 2010-07-01 ವೇಬ್ಯಾಕ್ ಮೆಷಿನ್ ನಲ್ಲಿ.. ಭಾಷಾದೃಷ್ಟಿಕೋನದಿಂದ ನೋಡಿದಾಗ ಈ ಯಾವುದೇ ಉಚ್ಚಾರಣೆಗಳೂ ಸರಿಯಾದುದಲ್ಲ; ಹಾಗೆ ನೋಡಿದರೆ ಇವೆಲ್ಲಾ ವಿಭಿನ್ನತೆಯ ವಿಧಾನಗಳಷ್ಟೇ, ಹೊಂದಲಾರದ (diachronic)ಮತ್ತು ಹೊಂದುವಂತಹವು(synchronic); ಇವುಗಳೂ ಸಹ ಆಡುವವನ ಪ್ರಾಂತ್ಯ, ವಯಸ್ಸು, ಶಿಕ್ಷಣ ಮತ್ತು/ಅಥವಾ ಗ್ರಾಮೀಣ/ನಗರ ಪ್ರದೇಶವಾಸಗಳ ಮೇಲೆ ಅವಲಂಬಿತವಾಗಿರುತ್ತವೆ. ಸಾಮಾನ್ಯವಾಗಿ ಶ್ವಾ ಸ್ವರವು ಕಾನ್ಸಾಸ್ ಸಿಟಿಯ ಜನರ ುಚ್ಚಾರಣೆಗೆ ಹತ್ತಿರವಾಗಿದ್ದು, ಹಳಬರ ಮಾತಿನಲ್ಲಿ (1945ಕ್ಕೂ ಮುಂಚೆ ಜನಿಸಿದವರು)ಅದರಲ್ಲೂ ಸಾಂಪ್ರದಾಯಿಕ ಶಿಕ್ಷಣವಿಲ್ಲದ ಮತ್ತು ಹಳ್ಳಿಗಳಿಂದ ಬಂದವರಲ್ಲಿ ಈ ಶ್ವಾ ಉಚ್ಚಾರವು ಎದ್ದುಕಾಣುತ್ತದೆ. ಉಚ್ಚಾರಣೆಯ ಕಡಿಮೆ ವಿವಾದಾಸ್ಪದ, ಆದರೆ ಉಚ್ಚಾರಣೆಯಲ್ಲಿ ನಿರ್ದಿಷ್ಟವಾದ ವಿವಿಧತೆಗಳನ್ನು ಲ್ಯಾನ್ಸ್ ಗುರುತಿಸುತ್ತಾರೆ: ಎರಡನೆಯ ವ್ಯಂಜನಾಕ್ಷರವು ಸಾಮಾನ್ಯವಾಗಿ ಗಟ್ಟಿಯಾಗಿ ಉಚ್ಚರಿಸಲಾಗುವುವು("ಮಿಸರಿ"ಯ ಸ)ಆದರೆ ಕೆಲವರು ಅದನ್ನು ಹಾಗೆಯೇ ತೇಲಿಸಿಬಿಡುವರು ("missive"ನಲ್ಲಿರುವ ಎರಡನೆಯ s ನಂತೆ) ಮತ್ತು ಮಧ್ಯದ ವ್ಯಂಜನಾಕ್ಷರಗಳು ಎತ್ತರಿಸಲ್ಪಟ್ಟು ಪೂರ್ಣಗೊಳಿಸದೆ (ಲರ್ಕ್ ನ ರ್ಕ್ ನಂತೆ) ಅಥವಾ ಪೂರ್ಣಗೊಳಿಸಿ (ಲ್ಯೂರ್ ನ ಯೂ ನಂತೆ)ಉಚ್ಚರಿಸಲ್ಪಡುವುವು.

ಭೂಗೋಳ[ಬದಲಾಯಿಸಿ]

ಮಿಸೌರಿ, ಪ್ರಮುಖ ನಗರಗಳು ಮತ್ತು ರಸ್ತೆಗಳ ನೋಟ

ಮಿಸೌರಿ, ಪಕ್ಕದ ಟೆನೆಸ್ಸಿಯಂತೆಯೇ, ಎಂಟು ರಾಜ್ಯಗಳೊಡನೆ ಗಡಿಪ್ರದೇಶವನ್ನು ಹೊಂದಿದೆ. ಯು.ಎಸ್.ನ ಯಾವುದೇ ರಾಜ್ಯವೂ ಎಂಟಕ್ಕಿಂತಲೂ ಹೆಚ್ಚು ರಾಜ್ಯಗಳನ್ನು ಮುಟ್ಟಿಕೊಳ್ಳುವುದಿಲ್ಲ. ಮಿಸೌರಿಯ ಉತ್ತರಕ್ಕೆ ಇಯೋವಾ; ಪೂರ್ವಕ್ಕೆ, ಮಿಸಿಸಿಪಿ ನದಿಯ ಅತ್ತಣಕ್ಕೆ, ಇಲಿನಾಯ್ಸ್, ಕೆಂಟಕಿ ಮತ್ತು ಟೆನೆಸ್ಸಿ; ದಕ್ಷಿಣಕ್ಕೆ ಅರ್ಕಾನ್ಸಾಸ್; ಮತ್ತು ಪಶ್ಚಿಮಕ್ಕೆ ಓಕಲ್ಹೋಮಾ, ಕಾನ್ಸಾಸ್, ಮತ್ತು ನೆಬ್ರಾಸ್ಕಾ(ಕಡೆಯದು ಮಿಸೌರಿ ನದಿಯ ಅತ್ತಣ ದಂಡೆಯೆಡೆ)ರಾಜ್ಯಗಳಿವೆ. ಮಿಸೌರಿಯ ಎರಡು ಮಹಾನದಿಗಳೆಂದರೆ ರಾಜ್ಯದ ಪೂರ್ವ ಗಡಿಯನ್ನು ನಿಖರವಾಗಿ ಸೂಚಿಸುವಂತಹ ಮಿಸಿಸಿಪಿ ನದಿ ಮತ್ತು ರಾಜ್ಯದಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ಹರಿಯುತ್ತಾ ಎರಡು ಬೃಹತ್ ಮೆಟ್ರೋ ನಗರಗಳಾದ ಕಾನ್ಸಾಸ್ ಸಿಟಿ ಮತ್ತು ಸೇಂಟ್ ಲೂಯಿಸ್ ಗಳ ಸೇತುವಾದಂತಹ ಮಿಸೌರಿ ನದಿ.

ಇಂದು ಈ ರಾಜ್ಯವನ್ನು ಸಾಮಾನ್ಯವಾಗಿ ಮಧ್ಯಪಶ್ಚಿಮ[೧೦][೧೧] ಪ್ರದೇಶದ ಒಂದು ಭಾಗವೆಂದು ಹೇಳಲಾಗುವುದಾದರೂ ಇತಿಹಾಸದ ರೀತ್ಯಾ ಮಿಸೌರಿಯನ್ನು ಹಲವು ಬಾರಿ ದಾಕ್ಷಿಣಾತ್ಯ ರಾಜ್ಯ[೧೨] ವೆಂದು ಪರಿಗಣಿಸಲಾಗುತ್ತಿತ್ತು ಮತ್ತು ಇದಕ್ಕೆ ಮೂಲಕಾರಣ ಇಲ್ಲಿಗೆ ವಲಸೆ ಬಂದು ನೆಲೆಸಿದವರು ದಕ್ಷಿಣದವರಾಗಿದ್ದರೆಂಬುದು ಹಾಗೂ ಅದು ನಾಗರಿಕ ಯುದ್ಧ(ಸಿವಿಲ್ ವಾರ್)ಗೆ ಮುನ್ನ ಗುಲಾಮರ ರಾಜ್ಯವಾಗಿದ್ದುದು. ಗುಲಾಮರ ಜನಸಾಂದ್ರತೆಯೇ ಹೆಚ್ಚಿದ್ದಂತಹ, ದಕ್ಷಿಣದಿಂದ ಬಂದ, ವಲಸೆಗಾರರು ರಾಜ್ಯದ ಮಧ್ಯಬಾಗದಲ್ಲಿ, ಮಿಸೌರಿ ನದಿಯ ಗುಂಟ ನೆಲೆಸುತ್ತಾ, ಆ ಪ್ರದೇಶಗಳು ತನ್ಮೂಲಕ ಸಣ್ಣ ಸಣ್ಣ ಗ್ರಾಮಗಳಾಗಿ, ಅವುಗಳನ್ನೆಲ್ಲಾ ಒಳಗೊಂಡ ಪ್ರದೇಶವು "ಲಿಟಲ್ ಡಿಕ್ಸೀ" ಎಂದು ಕರೆಯಲ್ಪಟ್ಟಿತು.

ರಾಜ್ಯದ ಉತ್ತರಭಾಗದ ನಿವಾಸಿಗಳು ಮತ್ತು ರಾಜ್ಯದ ಬಹುಪಾಲು ಜನರು ವಾಸುಸುವಂತಹ ಕಾನ್ಸಾಸ್ ಸಿಟಿ, ಸೇಂಟ್ ಲೂಯಿಸ್ ಮತ್ತು ಕೊಲಂಬಿಯಾದಂತಹ ಬೃಹತ್ ಮೆಟ್ರೋಪಾಲಿಟಿನ್ ನಲ್ಲಿ ವಾಸಿಸುವ ಜನರು ತಾವೇ ಮಧ್ಯಪಶ್ಚಿಮ ಪ್ರದೇಶಿಗಳೆಂದು ಪರಿಗಣಿಸಿಕೊಳ್ಳುವರು. ದಕ್ಷಿಣದತ್ತ ಚಲಿಸುತ್ತಿದ್ದಂತೆ ಅಲ್ಲಿನ ನಗರಗಳು ಮತ್ತು ಗ್ರಾಮೀಣ ಪ್ರದೇಶಗಳಾದ ಕೇಪ್ ಗಿರಾರ್ಡಿಯೂ, ಪೋಪ್ಲಾರ್ ಬ್ಲಫ್, ಸ್ಪ್ರಿಂಗ್ ಫೀಲ್ಡ್ ಮತ್ತು ಸೀಕೆಸ್ಟನ್ ನಂತಹ ಪ್ರದೇಶಗಳ ನಿವಾಸಿಗಳು ತಮ್ಮನ್ನು ತಾವೇ ದಾಕ್ಷಿಣಾತ್ಯರೆಂದು ಗುರುತಿಸಿಕೊಳ್ಳುತ್ತಾರೆ.

2005ರಲ್ಲಿ ಮಿಸೌರಿಯು ತನ್ನ ರಾಷ್ಟ್ರೀಯ ಉದ್ಯಾನವನಗಳು ಮತ್ತು ಇತರ ಮನೋರಂಜಕ ತಾಣಗಳಿಗೆ ಒಟ್ಟಾರೆ202,000 acres (820 km2) 16,695,000 ಪ್ರವಾಸಿಗರನ್ನು ಆಕರ್ಷಿಸಿ, ಆ ವರ್ಷ, ರಾಜ್ಯಭಾರದ ವಾರ್ಷಿಕ ವ್ಯಯದ 26.6%ನಷ್ಟು, ಎಂದರೆ $7.41 ಮಿಲಿಯನ್ನ್ ಗಳನ್ನು ಆದಾಯವಾಗಿ ಹೊಂದಿತು.[೧೩]

ಮೇಲ್ಮೈ ಲಕ್ಷಣ[ಬದಲಾಯಿಸಿ]

ಮಿಸೌರಿಯ ಭೌಗೋಳಿಕ ಭೂಪಟ

ಮಿಸೌರಿ ನದಿಯ ಉತ್ತರಭಾಗಕ್ಕೆ ಇಯೋವಾ, ನೆಬ್ರಾಸ್ಕಾ ಮತ್ತು ಕಾನ್ಸಾಸ್ ಗಳನ್ನೊಳಗೊಂಡಂತೆ ಉತ್ತರದ ಹುಲ್ಲುಗಾವಲು ಪ್ರದೇಶವಿದೆ. ಒಮ್ಮೆ ಹಿಮಾವೃತವಾಗಿದ್ದು, ಉತ್ತರದಿಂದ ಮಿಸೌರಿಯವರೆಗೂ ಹರಡಿದ್ದ ಪರ್ವತಶ್ರೇಣಿಗಳು ಈಗ ಮಂದವಾದ ಇಳಿಜಾರನ್ನು ಹೊಂದಿದ ಬೆಟ್ಟಗಳಾಗಿ ಉಳಿದಿವೆ. ಮಿಸಿಸಿಪಿ, ಮಿಸೌರಿ ಮತ್ತು ಮೆರಾಮೆಸಿ ನದಿಗಳ ಗುಂಟ ಮಿಸೌರಿ ರಾಜ್ಯವು ಹಲವಾರು ಜಲಪಾತಗಳನ್ನು ಹೊಂದಿದೆ. ಮಿಸೌರಿಯ ದಕ್ಷಿಣಕ್ಕೆ ಓಝಾರ್ಕ್ ಬೆಟ್ಟಗಳ ಸಾಲು ತಲೆಯೆತ್ತಿದ್ದು, ಈ ಬೆಟ್ಟಗಳು ಪ್ರೀಕೇಂಬ್ರಿಯನ್ ಇಗ್ನಿಯಸ್ ಸೇಂಟ್ ಫ್ರಾಂಕಾಯ್ಸ್ ಪರ್ವತಶ್ರೇಣಿಗಳ ವಿಭಜಿತ ಪ್ರಸ್ಥಭೂಮಿಗಳಾಗಿವೆ. ಈ ಪ್ರದೇಶದಲ್ಲಿ ಕಾರ್ಸ್ಟ್ ಭೂಲಕ್ಷಣಗಳೂ ಕಂಡುಬಂದು, ಎತ್ತರದ ಸುಣ್ಣದಕಲ್ಲುಗಳನ್ನೊಳಗೊಂಡ ಪ್ರದೇಶಗಳಲ್ಲಿ ಕೊರೆತಗಳು ಮತ್ತು ಗುಹೆಗಳು ಕಾಣಸಿಗುತ್ತವೆ.[೧೪]

ದಕ್ಷಿಣ ಮಿಸೌರಿಯಲ್ಲಿನ ಒಝಾರ್ಕ್ಸ್ ನ ಒಂದು ಭಾಗ

ಈ ರಾಜ್ಯದ ಆಗ್ನೇಯ ಭಾಗವೇ ಬೂಟ್ ಹೀಲ್ ಪ್ರದೇಶವಾಗಿದ್ದು ಇದು ಮಿಸಿಸಿಪಿಯ ಎರೆಮಣ್ಣಿನ ಸಮತಟ್ಟುಪ್ರದೇಶ ಅಥವಾ ಮಿಸಿಸಿಪಿ ಎಂಬೇಮೆಂಟ್ ನ ಒಂದು ಭಾಗವಾಗಿದೆ. ಈ ಪ್ರದೇಶವು ರಾಜ್ಯದ ಅತ್ಯಂತ ಕೆಳಭಾಗದಲ್ಲಿದ್ದು, ಬಹಳ ಸಮವಾಗಿದ್ದು, ಬಹಳ ಶೈತ್ಯಭರಿತವಾಗಿದ್ದು, ಕೃಷಿಯಾಧಾರಿತ ಪ್ರದೇಶವಾದ್ದರಿಂದ, ರಾಜ್ಯದ ಕಡು ಬಡ [೧೫] ಪ್ರದೇಶಗಳಲ್ಲೊಂದಾಗಿದೆ ಇದು ಅತ್ಯಂತ ಫಲವತ್ತಾದ ಪ್ರದೇಶವಾಗಿದ್ದು ಹತ್ತಿ ಮತ್ತು ಭತ್ತ ಇಲ್ಲಿನ ಪ್ರಮುಖ ಬೆಳೆಗಳಾಗಿವೆ. 1811 -12ರಲ್ಲಿ ಉಂಟಾದ ನಾಲ್ಕು ನ್ಯೂ ಮ್ಯಾಡ್ರಿಡ್ ಭೂಕಂಪಗಳ ಕೇಂದ್ರಸ್ಥಾನವು ಬೂಟ್ ಹೀಲ್ ಪ್ರದೇಶವೇ ಆಗಿತ್ತು.

ಹವಾಗುಣ[ಬದಲಾಯಿಸಿ]

ಮಿಸೌರಿಯು ಸಾಮಾನ್ಯವಾಗಿ ತೇವಾಂಶಭರಿತ ಖಂಡಗಳೋಪಾದಿಯ ಹವಾಗುಣ(ಕೊಪ್ಪೆನ್ ಕ್ಲೈಮೇಟ್ ಕ್ಲಾಸಿಫಿಕೇಷನ್ Dfa), ಹೊಂದಿದ್ದು, ಶೀತಲ ಚಳಿಗಾಲ ಮತ್ತು ಬೇಗೆಯ, ತೇವಾಂಶಭರಿತ ಬೇಸಿಗೆಗಳನ್ನು ಹೊಂದಿರುತ್ತದೆ. ರಾಜ್ಯದ ದಕ್ಷಿಣ ಭಾಗದಲ್ಲಿ, ಪ್ರಮುಖವಾಗಿ ಬೂಟ್ ಹೀಲ್ ಪ್ರದೇಶದಲ್ಲಿ, ಹವಾಗುಣವು ತೇವಾಂಶಭರಿತ ಉಷ್ಣವಲಯಗಳ ಹವಾಗುಣವನ್ನು ಹೋಲುತ್ತದೆ(ಕೊಪ್ಪೆನ್ Cfa). ಯುನೈಟೆಡ್ ಸ್ಟೇಟ್ಸ್ ನ ಒಳಭಾಗದಲ್ಲಿರುವ ಮಿಸೌರಿಯು ಆಗಾಗ್ಗೆ ತಾಪಮಾನದ ವೈಪರೀತ್ಯಗಳಿಗೆ ಒಳಗಾಗುತ್ತದೆ. ತಾಪಮಾನವನ್ನು ಹಿಡಿತದಲ್ಲಿಡುವಂತಹ ಎತ್ತರದ ಬೆಟ್ಟಗಳಾಗಲೀ, ಸಮುದ್ರವಾಗಲೀ ಇರದ ಕಾರಣ ಅದರ ಹವಾಗುಣವು ಆರ್ಕ್ ಟಿಕ್ ಪ್ರದೇಶದಿಂದ ಬೀಸುವ ಕುಳಿರ್ಗಾಳಿಯ ದೆಸೆಗೆ ಮತ್ತು ತೇವಾಂಶಭರಿತ ಗಲ್ಫ್ ಆಫ್ ಮೆಕ್ಸಿಕೋದ ಬಿಸಿಗಾಳಿಯ ಬಿರುಸಿಗೆ ಅನುಗುಣವಾಗಿರುವ ಹವಾಗುಣವನ್ನು ಹೊಂದಿರುತ್ತದೆ.

ಮಿಸೌರಿಯ ವಿವಿಧ ನಗರಗಳ ಮಾಸಿಕ ಕನಿಷ್ಠ ಮತ್ತು ಗರಿಷ್ಠ ತಾಪಮಾನಗಳು
ನಗರ ಜನವರಿ ಫೆಬ್ರವರಿ ಮಾರ್ಚ್ ಏಪ್ರಿಲ್ ಮೇ ಜೂನ್ ಜುಲೈ ಆಗಸ್ಟ್ ಸೆಪ್ಟೆಂಬರ್ ಅಕ್ಟೋಬರ್ ನವೆಂಬರ್ ಡಿಸೆಂಬರ್
ಕೊಲಂಬಿಯಾ 37/18 44 /23 55 /33 66 /43 75 /53 84 /62 89 /66 87 /64 79 /55 ೬೮/44 ೫೩/33 42/22
ಶೈಲಿ="ಹಿನ್ನೆಲೆ:#c5dfe1; ವರ್ಣ:#000;"|ಎತ್ತರ:16px;"|ಕಾನ್ಸಾಸ್ ನಗರ 36 /18 43 /23 54 /33 65 /44 75 /54 84 /63 89 /68 87 /66 79 /57 68 /46 52/33 40/22
ಶೈಲಿ="ಹಿನ್ನೆಲೆ:#f8f3ca;ವರ್ಣ:#000; ಎತ್ತರ:16px;"|ಸ್ಪ್ರಿಂಗ್ ಫೀಲ್ಡ್ 42/22 48/26 58/35 68 /44 76/53 85/62 90 /67 90 /66 81/57 71/46 56/35 46/26
ಶೈಲಿ=ಹಿನ್ನೆಲೆ:#c5dfel;ವರ್ಣ:#000;ಎತ್ತರ:16px ;"|ಸೇಂಟ್ ಲೂಯಿಸ್[೧೬] 38/21 45/26 55/36 66/47 77/57 86/66 91/71 88/69 81/61 69/49 54/38 42/27

ಇತಿಹಾಸ[ಬದಲಾಯಿಸಿ]

Missouri state insignia
Motto Salus populi suprema lex esto
(Latin, "Let the welfare of the people be the supreme law")
Slogan Show Me (unofficial)
Bird Bluebird (1927)
Animal Missouri Mule (1995)
Fish Channel Catfish (1997)
Insect Honey bee (1985)
Flower Hawthorn (1923)
Tree Flowering Dogwood (1955)
Song "Missouri Waltz" (1949)
Quarter Missouri quarter
Released in 2003
Grass Big bluestem (2007)
Reptile Three-toed box turtle (2007)
Dance Square dance (1995)
Fossil Crinoid (1989)
Dinosaur Hypsibema missouriensis (2004) [೧೭]
Gemstone Aquamarine
Mineral Galena (1967)
Musical instrument Fiddle (1987)
Rock Mozarkite (1967)
ಸೇಂಟ್ ಲೂಯಿಸ್ ನಲ್ಲಿರುವ ಗೇಟ್ ವೇ ಕಮಾನು

ಯೂರೋಪಿನವರ ಶೋಧನೆ ಮತ್ತು ವಾಸಿಸುವಿಕೆಗೆ ಒಳಗಾಗುವ ಮುನ್ನ ಮಿಸೌರಿಯು ಸಾವಿರಾರು ವರ್ಷಗಳ ಕಾಲ ಸ್ಥಳೀಯ ಜನಾಂಗಭರಿತ ನಾಡಾಗಿತ್ತು. ಪುರಾತನ ವಸ್ತು ಸಂಶೋಧನಾ ಇಲಾಖೆಯವರು ನದಿಯಗುಂಟ ಮಾಡಿದ ಉತ್ಖನನಗಳು ಮಿಸೌರಿ ಪ್ರದೇಶವು 7000 ವರ್ಷಗಳಿಗಿಂತಲೂ ಮುಂಚೆಯಿಂದಲೂ ಜನನಿಬಿಡವಾಗಿತ್ತು ಎಂಬುದನ್ನು ತೋರಿಸಿಕೊಟ್ಟಿವೆ. 1000 CE ಗಿಂತಲೂ ಮುಂಚೆಯೇ ಸಂಕೀರ್ಣವಾದ ಮಿಸಿಸಿಪಿ ಸಂಸ್ಕೃತಿಯ ಉಗಮವಾಗಿ, ಆ ದಿನಗಳಲ್ಲೇ ಜನರು ಸ್ಥಳೀಯ ರಾಜಕೀಯ ಕೇಂದ್ರಗಳನ್ನು ಇಂದಿನ ಸೇಂಟ್ ಲೂಯಿಸ್, ಮಿಸಿಸಿಪಿ ನದಿಯ ಅತ್ತಣ ತೀರವಾದ ಕಹೋಕಿಯಾ ಮತ್ತು ಈಗಿನ ಇಲಿನಾಯ್ಸ್ ನ ಕಾಲಿನ್ಸ್ ವಿಲ್ಲೆ ಪ್ರದೇಶಗಳಲ್ಲಿ ನಿರ್ಮಿಸಿದರು. ಅವರ ವಿಶಾಲವಾದ ನಗರಗಳು ಸಾವಿರಾರು ವೈಯಕ್ತಿಕ ವಸತಿಗೃಹಗಳನ್ನು ಹೊಂದಿದ್ದವು, ಆದರೆ ಅವು ಖ್ಯಾತಿ ಹೊಂದಿರುವುದು ಧಾರ್ಮಿಕ, ರಾಜಕೀಯ ಮತ್ತು ಸಾಮಾಜಿಕ ಕಾರಣಗಳಿಗಾಗಿ ಪ್ಲಾಟ್ ಫಾರ್ಮ್ (ಸಮವಾದ), ರಿಡ್ಜ್ ಟಾಪ್ (ಎರಡೆಡೆಯಿಂದಲೂ ಏರಿ ನಿಂತ ಇಳಿಜಾರಿನ ಎತ್ತರದ ಕಡೆಗಿನ ಅಂಚು) ಮತ್ತು ಕೋನ್ ಆಕಾರದಲ್ಲಿ ಕಟ್ಟಿದ ಬೃಹದಾಕಾರದ, ವಿನಾಶವನ್ನು ಮೀರಿ ನಿಂತ ಮಣ್ಣಿನ ಗುಡ್ಡಗಳಿಂದ. ಗ್ರೇಟ್ ಲೇಕ್ಸ್ ನಿಂದ ಗಲ್ಫ್ ಆಫ್ ಮೆಕ್ಸಿಕೋವರೆಗೆ ಹರಡಿದ ಸ್ಥಳೀಯ ಉದ್ದಿಮೆಯ ಜಾಲಕ್ಕೆ ಕಹೋಕಿಯಾವೇ ಕೇಂದ್ರವಾಗಿತ್ತು. 1400 CE ಯ ವೇಳೆಗೆ ಈ ನಾಗರಿಕತೆಯು ವಿನಾಶವಾಗಿ, ಯೂರೋಪಿಯನ್ನರು ಬರುವ ಮುನ್ನವೇ ಆ ನಾಗರಿಕತೆಯ ಬಹಳ ಜನ ವಂಶಸ್ಥರು ಈ ಪ್ರದೇಶವನ್ನು ತೊರೆದು ಹೊರಟುಹೋದರು. ಅಗಣಿತ ಮಣ್ಣಿನ ಗುಡ್ಡಗಳನ್ನು ಹೊಂದಿದ್ದ ಕಾರಣ ಸೇಂಟ್ ಲೂಯಿಸ್ ಅನ್ನು ಮೌಂಡ್ ಸಿಟಿ ಎಂದೂ ಕರೆಯಲಾಗುತ್ತಿದ್ದು, ಕ್ರಮೇಣ ನಗರೀಕರಣದಿಂದ ಆ ಗುಡ್ಡಗಳು ನಾಶವಾದವು. ಮಿಸಿಸಿಪಿ ಸಂಸ್ಕೃತಿಯು ಮಿಸಿಸಿಪಿಯ ಮಧ್ಯಭಾಗದಲ್ಲಿ ಮತ್ತು ಓಹಿಯೋ ನದಿಯ ಕಣಿವೆಗಳಲ್ಲಿ, ನದಿಯ ಆಗ್ನೇಯಕ್ಕೆ ಮತ್ತು ಮೇಲ್ದಿಕ್ಕಿನ ಗುಂಟ ಈ ಗುಡ್ಡೆಗಳನ್ನು ಸ್ಥಾಪಿಸಿತು.

ಯೂರೋಪ್ ನಿಂದ ಬಂದು ಇಲ್ಲಿ ನೆಲೆಸಿದ ಮೊದಮೊದಲ ಬಣದವರಲ್ಲಿ ಹೆಚ್ಚಿನವರು ಫ್ರೆಂಚ್ ಕೆನಡಿಯನ್ನರಾಗಿದ್ದು, ಇವರು ಸುಮಾರು 1750ನೆಯ ಇಸವಿಯಲ್ಲಿ ನದಿಯ ಪೂರ್ವಭಾಗದಿಂದ ವಲಸೆ ಬಂದು ಈಗ ಸೇಂಟ್ ಜೆನೀವಾ ಎಂದು ಕರೆಯಲ್ಪಡುವ ಸ್ಥಳದಲ್ಲಿ ನೆಲೆಸಿದರು. ಅದೇ ಮಿಸೌರಿಯ ಮೊದಲ ಯೂರೋಪಿಯನ್ ನೆಲೆವೀಡಾಯಿತು. ಯೂರೋಪಿಯನ್ನರು ಇಲಿನಾಯ್ಸ್ ಗ್ರಾಮದ ಮಿಸಿಸಿಪಿಯ ಪೂರ್ವಭಾಗದ ವಸಾಹತು ಗ್ರಾಮಗಳಿಂದ , ಅಲ್ಲಿನ ಫಲವತ್ತಾದ ಜಮೀನು ಕ್ಷೀಣಿಸುತ್ತಿದುದರಿಂದಲೂ ಹಾಗೂ ಬೆಳೆಯುತ್ತಿರುವ ಜನಸಂಖ್ಯೆಗೆ ಬೇಕಾದಷ್ಟು ನದಿಯ ಕೆಳಗಿನ ಪ್ರದೇಶದ ಜಮೀನು ಇರದುದರಿಂದಲೂ, ವಲಸೆ ಬಂದರು. ಸೇಂಟ್ ಲೂಯಿಸ್ ಸಹ ಫ್ರೆಂಚ್-ಕೆನಡಿಯನ್ ವಸಾಹತುಜನರು ಸ್ಥಾಪಿಸಿದ ವಸಾಹತೇ. ಸೇಂಟ್ ಲೂಯಿಸ್ ಸ್ಥಳೀಯ ಉಣ್ಣೆ ವ್ಯಾಪಾರಕ್ಕೆ ಕೇಂದ್ರಸ್ಥಾನವಾಗಿ, ಅ ವಹಿವಾಟು ಹಲವಾರು ದಶಕಗಳವರೆಗೆ ಅದರ ವಾಣಿಜ್ಯದ ಪ್ರಮುಖ ಅಂಗವಾಗಿತ್ತು. ಸೇಂಟ್ ಜಿನೇವಾ ಕೃಷಿಯಲ್ಲಿ ಬಹಳವೇ ಅಭಿವೃದ್ಧಿ ಹೊಂದಿದ ಕೇಂದ್ರವಾಗಿದ್ದು, ನದಿಯ ಕೆಳಹರಿವಿನ ಭಾಗದ ಲೋಯರ್ ಲೂಯಿಸೀನಿಯಾ ಪ್ರದೇಶಕ್ಕೆ, ವಿಪುಲವಾಗಿ ಬೆಳೆದ ಭತ್ತ, ಜೋಳ ಮತ್ತು ತಂಬಾಕುಗಳನ್ನು ಹಾಗೂ ಧಾನ್ಯಗಳನ್ನು ಟನ್ ಗಟ್ಟಲೆಮಾರಾಟ ಮಾಡುತ್ತಿತ್ತು. ಇಲಿನಾಯ್ಸ್ ಗ್ರಾಮದಲ್ಲಿ ಧಾನ್ಯ ಬೆಳೆಯುವುದು ಲೋಯರ್ ಲೂಯಿಸೀನಿಯಾದ ಉಳಿವಿಗೆ ಅವಶ್ಯವಾಗಿತ್ತು.

1803ರ ಅಮೆರಿಕಾದವರ ಲೂಯಿಸೀನಿಯಾ ಕೊಳ್ಳುವಿಕೆಯ ಭಾಗವಾದ ಮಿಸೌರಿಯು, ಸಮುದ್ರಯಾನಕ್ಕೆ ತೊಡಗುವವರು ಮತ್ತು ವಸಾಹತು ಜನಾಂಗದವರು 19ನೆಯ ಶತಮಾನದಲ್ಲಿ ಅಲ್ಲಿಂದ ಪಶ್ಚಿಮ ದಿಕ್ಕಿಗೆ ಪಯಣಿಸಬೇಕಾದಾಗ ಮಿಸೌರಿಯೇ ಪ್ರಮುಖ ನಿರ್ಗಮನ ಕೇಂದ್ರವಾಗಿದ್ದುದರಿಂದ ಮಿಸೌರಿಯನ್ನು "ಗೇಟ್ ವೇ ಟು ದ ವೆಸ್ಟ್"(ಪಶ್ಚಿಮದತ್ತ ಪಯಣಿಸಲು ಹೆಬ್ಬಾಗಿಲು) ಎಂದು ಕರೆಯಲಾಯಿತು. ಲೂಯಿಸ್ ಮತ್ತು ಕ್ಲಾರ್ಕ್ ಸಮುದ್ರಯಾನ ಎಂದೇ ಹೆಸರಾದ, ಲೂಯಿಸ್ ಮತ್ತು ಕ್ಲಾರ್ಕ್ ಕೈಗೊಂಡ, ಶಾಂತಿಸಾಗರದ ಪಶ್ಚಿಮಪ್ರದೇಶಗಳ ಶೋಧವನ್ನೊಳಗೊಂಡ,ಸಮುದ್ರಯಾನದ ಆರಂಭದ ಮತ್ತು ಹಿಂತಿರುಗಿದ ತಾಣವು ಸೇಂಟ್ ಲೂಯಿಸ್ ಆಗಿತ್ತು. ಈ ಪ್ರದೇಶವನ್ನು ಗುಲಾಮರ ರಾಜ್ಯವೆಂದು 1821ರ ಮಿಸೌರಿ ರಾಜಿಯ ಅಂಗವಾಗಿ ಒಪ್ಪಿಕೊಳ್ಳಲಾಯಿತು. ರಾಜ್ಯದ ವಾಣಿಜ್ಯನೀತಿಗೆ ಮಿಸಿಸಿಪಿ ನದಿಯ ಗುಂಟ ಸಾರಿಗೆ ಮತ್ತು ವ್ಯಾಪಾರಗಳು ಅವಿಭಾಜ್ಯ ಅಂಗಗಳಾಗಿದ್ದವು. ಕೆಳಮಟ್ಟದಲ್ಲಿರುವ ಕೃಷಿ ಜಮೀನುಗಳು ಮತ್ತು ಹಳ್ಳಿಗಳು ಪ್ರವಾಹದಲ್ಲಿ ಆಗಾಗ್ಗೆ ಮುಳುಗಡೆಯಾಗುವುದನ್ನು ತಡೆಯುವ ಸಲುವಾಗಿ, 1860ರಲ್ಲಿ ರಾಜ್ಯವು 140 miles (230 km)ಕಟ್ಟುವುದನ್ನು ಮುಗಿಸಿ ಮಿಸಿಸಿಪಿಯ ಮೇಲೆ ಬರುವವರನ್ನು ಆಹ್ವಾನಿಸಿತ್ತು.[೧೮]

1812ರ ನ್ಯೂ ಮ್ಯಾಡ್ರಿಡ್ ಭೂಕಂಪದ ಮೂಲಸ್ಥಾನವು ಈ ರಾಜ್ಯದಲ್ಲೇ ಆಗಿದ್ದು,ಆ ಭೂಕಂಪವು ಯುನೈಟೆಡ್ ಸ್ಟೇಟ್ಸ್ ಒಂದು ದೇಶವಾಗಿ ಸ್ಥಾಪಿತವಾದಂದಿನಿಂದಲೂ ಉಂಟಾದ ಬಹಳ ಪ್ರಬಲವಾದ ಭೂಕಂಪವೆನ್ನಲಾಗಿದೆ. ಆದರೆ,ಜನಸಂಖ್ಯೆ ಕಡಿಮೆ ಇದ್ದುದರಿಂದ, ಸಾವುನೋವುಗಳೂ ಕಡಿಮೆಯಿದ್ದವು.

ಮೂಲತಃ ಮಿಸೌರಿಯ ಪಶ್ಚಿಮ ಗಡಿಯು ನೇರವಾಗಿತ್ತು; ಕಾನ್ಸಾಸ್ ನದಿಯು ಮಿಸೌರಿ ನದಿಯನ್ನು ಸೇರುವಂತಹ ಸ್ಥಳದಲ್ಲಿ ಕಾಸ್ ವರ್ತ್[೧೯] ಮೂಲಕ ಹಾದು ಹೋಗುವ ರೇಖೆಯೇ ಇದರ ಗಡಿಯೆಂದು ತೀರ್ಮಾನಿಸಲಾಗಿತ್ತು. ಈ ಗುರುತಿಸುವಿಕೆಯನ್ನು ಮಾಡಿದ ನಂತರದ ದಿನಗಳಲ್ಲಿ ನದಿಯು ಪಲ್ಲಟಗೊಂಡಿದೆ. ಈ ರೇಖೆಯನ್ನು ಓಸೇಜ್ ಬೌಂಡರಿ ಎಂದು ಕರೆಯುತ್ತಾರೆ.[೨೦] 1835ರಲ್ಲಿ ಸ್ಥಳೀಯ ಬುಡಕಟ್ಟಿನವರಿಂದ ಜಾಗವನ್ನು ಪ್ಲಾಟ್ಟೆ ಪರ್ಚೇಸ್ ಎಂದೇ ಹೆಸರಾದ ವ್ಯವಹಾರದ ಮೂಲಕ ಖರೀದಿಸಿ, ಅದನ್ನು ರಾಜ್ಯದ ವಾಯುವ್ಯ ದಿಕ್ಕಿಗೆ ಸೇರ್ಪಡೆಗೊಳಿಸಿಕೊಳ್ಳುವುದರ ಮೂಲಕ ಕಾನ್ಸಾಸ್ ನದಿಯ ಉತ್ತರಭಾಗಕ್ಕೆ ಇರುವ ಮಿಸೌರಿ ನದಿಯನ್ನೇ ರಾಜ್ಯದ ಗಡಿಯಾಗಿ ಪರಿಗಣಿಸಲಾಯಿತು. ಈ ಸೇರ್ಪಡೆಯು ಮೊದಲೇ ಸಂಯುಕ್ತರಾಷ್ಟ್ರದ ಅತಿ ದೊಡ್ಡ ರಾಜ್ಯವಾದ ಮಿಸೌರಿಯ ಭೂವಿಸ್ತೀರ್ಣವನ್ನು ಮತ್ತೂ ಹೆಚ್ಚಿಸಿತು(ಸುಮಾರು ವರ್ಜೀನಿಯಾದ 65,000 ಚದರ ಮೈಲಿಗಳ 66,500 square miles (172,000 km2) ಅಷ್ಟು(ಆಗ ಪಶ್ಚಿಮ ವರ್ಜೀನಿಯಾವೂ ಸೇರಿತ್ತು.) [೨೧]

ಆರಂಭದಲ್ಲಿ ಪಶ್ಚಿಮ ಮಿಸೌರಿಗೆ ವಲಸೆ ಬಂದ ಅಮೆರಿಕನ್ ವಸಾಹತುಗಾರರಲ್ಲಿ ಬಹಳ ಮಂದಿ ದಕ್ಷಿಣದ ಮೇಲುಭಾಗದಿಂದ ಬಂದವರಾಗಿದ್ದು, ಅವರೊಡನೆ ಗುಲಾಮರಾಗಿದ್ದ ಆಫ್ರಿಕನ್ ಅಮೆರಿಕನ್ನರನ್ನು ಚಾಕರಿಗಾಗಿ ಕರೆತಂದು, ಅವರ ಸಂಸ್ಕೃತಿ ಹಾಗೂ ಗುಲಾಮಗಿರಿಯ ಅಸ್ತಿತ್ವವನ್ನು ಮುಂದುವರೆಸಲು ಬಯಸಿದರು. ಅವರು ಬಹುತೇಕ ಮಿಸೌರಿ ನದಿಯ ಗುಂಟ ಇರುವ 17 ಗ್ರಾಮಗಳಲ್ಲಿ ನೆಲೆಸತೊಡಗಿದರು; ಆ ಪ್ರದೇಶಗಳು ಸಮತಟ್ಟು ಪ್ರದೇಶಗಳಾಗಿದ್ದು ಬೇಸಾಯಕ್ಕೆ ಅನುವು ಮಾಡಿಕೊಡುವಂತಿದ್ದು, ಆ ಇಡೀ ಪ್ರದೇಶವು "ಲಿಟಲ್ ಡಿಕ್ಸೀ" ಎಂಬ ಹೆಸರನ್ನು ಪಡೆಯಿತು 1830ರ ದಶಕದ ಆದಿಯಲ್ಲಿ ಉತ್ತರದ ರಾಜ್ಯಗಳಿಂದ ಮತ್ತು ಕೆನಡಾದಿಂದ ಬಂದ ಮಾರ್ಮನ್ ವಲಸೆಗಾರರು ಇಂಡಿಪೆಂಡೆನ್ಸ್ ಪ್ರದೇಶದ ಬಳಿಯೂ ಮತ್ತು ಆ ಪ್ರದೇಶದ ಉತ್ತರಭಾಗದಲ್ಲೂ ನೆಲೆಸಲಾರಂಭಿಸಿದರು. 'ಹಳೆಯ ವಸಾಹತುಜನಾಂಗ'(ಮುಖ್ಯವಾಗಿ ದಕ್ಷಿಣದವರು) ಮತ್ತು ಮಾರ್ಮನ್(ಮುಖ್ಯವಾಗಿ ಉತ್ತರದಿಂದ ಮತ್ತು ಕೆನಡಾದಿಂದ)ಜನಾಂಗದವರ ಮಧ್ಯೆ ಗುಲಾಮಗಿರಿ ಮತ್ತು ಧರ್ಮದ ಬಗ್ಗೆ ಭಿನ್ನಾಭಿಪ್ರಾಯಗಳು ಮೂಡಿದವು ಪರಿಣಾಮವಾಗಿ 'ಮಾರ್ಮನ್ ಯುದ್ಧ'ವು ಸಂಭವಿಸಿತು. 1839ರ ಹೊತ್ತಿಗೆ ವಸಾಹತುಜನರು ಮಾರ್ಮನ್ನರನ್ನು ಮಿಸೌರಿಯಿಂದ ಹೊರಗಟ್ಟಿದರು.

ಗುಲಾಮಗಿರಿಯ ಬಗ್ಗೆ ಕದನಗಳು ರಾಜ್ಯಗಳ ಮತ್ತು ಪ್ರದೇಶಗಳ ಗಡಿಯಲ್ಲಿನ ಆತಂಕವನ್ನು ಹೆಚ್ಚಿಸಿದವು. 1838 -1839ರಲ್ಲಿ ಲೋವಾದೊಂದಿಗೆ ಹನೀ ಲ್ಯಾಂಡ್ಸ್ ಎಂದು ಕರೆಯಲ್ಪಡುವ ಪ್ರದೇಶದ ಬಗ್ಗೆ ಗಡಿವಿವಾದ ಉಂಟಾಗಿ ಎರಡೂ ರಾಜ್ಯಗಳು ಗಡಿಯಗುಂಟ ಸೇನೆಯನ್ನು ಸಜ್ಜಾಗಿಸಿದವು. ಕಾನ್ಸಾಸ್ ನವರು ಪಶ್ಚಿಮದ ಗಡಿಯನ್ನು ಆಕ್ರಮಣಕಾರಿ ಉದ್ದೇಶದಿಂದ ಹಲವಾರು ಬಾರಿ ದಾಟುವ ಪ್ರಸಂಗಗಳು ನಡೆದ ನಂತರ(ಒಮ್ಮೆ ಐತಿಹಾಸಿಕ ಕಾನ್ಸಾಸ್ ಸಿಟಿ[ಸೂಕ್ತ ಉಲ್ಲೇಖನ ಬೇಕು]ಯ ಪಶ್ಚಿಮಬಂದರು ಪ್ರದೇಶದಲ್ಲಿ ಬೆಂಕಿ ಹಚ್ಚುವ ಪ್ರಸಂಗವೂ ಸೇರಿದಂತೆ)ಮಿಸೌರಿ ಮತ್ತು ಕಾನ್ಸಾಸ್ ಗಳ ನಡುವೆ ಗಡಿಯುದ್ಧವು ಹತ್ತಿಕೊಂಡಿತು.

1830ರಿಂದ 1860ರ ಅವಧಿಯಲ್ಲಿ ಮಿಸೌರಿಯ ಜನಸಂಖ್ಯೆಯು ಪ್ರತಿ ದಶಕದಲ್ಲೂ ದುಪ್ಪಟ್ಟಾಯಿತು. ವಲಸೆಬಂದ ಹೊಸಬರಲ್ಲಿ ಹೆಚ್ಚಿನವರು ಅಮೆರಿಕನ್ನರಾಗಿದ್ದರು, ಆದರೆ ಐರಿಷ್ ಮತ್ತು ಜರ್ಮನ್ ವಲಸೆಗಾರರು ೧೮೪೦ ಹಾಗೂ 1850ರ ಅಂತ್ಯಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಬಂದರು. ಕ್ಷಾಮ, ದಬ್ಬಾಳಿಕೆ ಮತ್ತು ಚಳುವಳಿಗಳಿಂದಾದ ಏರುಪೇರುಗಳನ್ನು ಅನುಭವಿಸಿದ, ಅವನ್ನು ತಪ್ಪಿಸಿಕೊಳ್ಳಲೇ ವಲಸೆ ಬಂದ ಅವರಿಗೆ, ಗುಲಾಮಗಿರಿಯ ಬಗ್ಗೆ ಅನುಕಂಪವಿರಲಿಲ್ಲ.

ಮಿಸೌರಿಯ ಬಹಳಷ್ಟು ರೈತರು ಬದುಕಿಗಾಗಿ ವ್ಯವಸಾಯ ಮಾಡುತ್ತಿದ್ದರು. ಗುಲಾಮರನ್ನು ಹೊಂದಿದ ಅಂತಹ ರೈತರ ಬಳಿ ಸಾಮಾನ್ಯವಾಗಿ 5ಕ್ಕಿಂತಲೂ ಕಡಿಮೆ ಗುಲಾಮರಿರುತ್ತಿದ್ದರು. 20ಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಗುಲಾಮರನ್ನು ಹೊಂದಿದ್ದ, ಇತಿಹಾಸಜ್ಞರು ತೋಟಗಾರರೆಂದು ಉಲ್ಲೇಖಿಸಿದ ರೈತರು ಹೆಚ್ಚಾಗಿ ಮಿಸೌರಿ ನದಿತೀರದ ಹಾಗೂ ರಾಜ್ಯದ ಕೇಂದ್ರಭಾಗವಾದ "ಲಿಟಲ್ ಡಿಕ್ಸೀ" ಎಂದೇ ಹೆಸರಾದ ಗ್ರಾಮಗಳಲ್ಲಿ ವಾಸಿಸುತ್ತಿದ್ದರು. ಗುಲಾಮಗಿರಿಯ ಬಗ್ಗೆ ಇದ್ದ ಆತಂಕವು ರಾಜ್ಯದ ಹಾಗೂ ದೇಶದ ಭವಿಷ್ಯತ್ತನ್ನು ಗಮನದಲ್ಲಿಸಿಕೊಂಡಂತಹವಾಗಿದ್ದವು. 1860ರಲ್ಲಿ ಗುಲಾಮರ ಸಂಖ್ಯೆಯು ದೇಶದ 1,182,012 ಜನಸಂಖ್ಯೆಯ ಹತ್ತನೆಯ ಒಂದು ಭಾಗಕ್ಕಿಂತಲೂ ಕಡಿಮೆ ಇತ್ತು.[೨೨]

1861ರಲ್ಲಿ ದಕ್ಷಿಣದ ರಾಜ್ಯಗಳ ವಿಂಗಡಣೆಯು ಆರಂಭವಾದಾಗ, ಮಿಸೌರಿಯ ಶಾಸಕಾಂಗವು ವಿಂಗಡಣೆಯ ಬಗ್ಗೆ ಒಂದು ವಿಶೇಷ ಸಮಿತಿಯನ್ನು ರಚಿಸಲು ನಿರ್ಧರಿಸಿತು. ಆ ಸಮಿತಿಯು ಒಕ್ಕೂಟದ ಜೊತೆಯಲ್ಲಿಯೇ ಇರುವುದಾಗಿ ನಿರ್ಧಾರ ತೆಗೆದುಕೊಂಡಿತು. ದಕ್ಷಿಣ-ಪರ ರಾಜ್ಯಪಾಲರಾದ ಕ್ಲೈಬೋರ್ನ್ ಎಫ್ ಜಾಕ್ಸನ್ ಸೇಂಟ್ ಲೂಯಿಸ್ ನಲ್ಲಿ ತರಬೇತಿಗಾಗಿ ಶಿಬಿರವೊಂದರಲ್ಲಿ ಸೇರಿದ್ದ ನೂರಾರು ಸೈನಿಕರಿಂದ ಕೂಡಿದ್ದ ರಾಜ್ಯಸೇನೆಯ ತುಕಡಿಯನ್ನು ಸಜ್ಜಾಗಲಿ ಆಜ್ಞೆ ನೀಡಿದರು. ಇದರಿಂದ ಆತಂಕಿತರಾದ ಒಕ್ಕೂಟದ ಸೇನಾಪತಿ ನಥಾನಿಯಲ್ ಲಿಯಾನ್ ರು ಮೊದಲ ಹೆಜ್ಜೆ ಇಟ್ಟು, ಆ ಶಿಬಿರವನ್ನು ಸುತ್ತುವರೆದು, ರಾಜ್ಯದ ಸೇನೆಯು ಶರಣಾಗುವಂತೆ ಮಣಿಸಿದರು. ನಂತರ ಲಿಯಾನ್ ಹೆಚ್ಚಾಗಿ ಇಂಗ್ಲಿಷ್ ಮಾತನಾಡಲರಿಯದ ಜರ್ಮನ್ ವಲಸೆಗಾರರೇ ತುಂಬಿದ್ದ ತಮ್ಮ ಪಡೆಯನ್ನು ಆ ಸೆರೆಸಿಕ್ಕ ಸೇನೆಯನ್ನು ರಾಜ್ಯದ ಬೀದಿಗಳಲ್ಲಿ ನಡೆಸಲು ಆದೇಶ ನೀಡಿದರು; ಲಿಯಾನ್ ರ ಸೈನಿಕರು ಇದರಿಂದ ವ್ಯಗ್ರವಾಗಿದ್ದ ಹಾಗೂ ಸೆರೆಸಿಕ್ಕವರನ್ನು ಮುತ್ತಿಕೊಂಡಿದ್ದ ಸಾರ್ವಜನಿಕರಿಂದ ಆವೃತವಾಗಿದ್ದ ಗುಂಪಿನ ಮೇಲೆ ಗುಂಡು ಹಾರಿಸಿದರು. ಸೈನಿಕರು ನಿಶ್ಯಸ್ತ್ರರಾದ ಖೈದಿಗಳನ್ನೂ, ಪುರುಷರನ್ನೂ, ಸ್ತ್ರೀಯರನ್ನೂ ಮತ್ತು ಸೇಂಟ್ ಲೂಯಿಸ್ ನ ಮಕ್ಕಳನ್ನೂ ನಿರ್ದಯೆಯಿಂದ ಕೊಂದ ಈ ಪ್ರಸಂಗವು "ಸೇಂಟ್ ಲೂಯಿಸ್ ಮೆಸಾಕರ್" ಎಂದೇ ಕುಖ್ಯಾತವಾಯಿತು.

ಈ ಪ್ರಸಂಗಗಳು ರಾಜ್ಯವು ಒಕ್ಕೂಟದ ಬಗ್ಗೆ ಬೆಂಬಲ ನೀಡುವುದಕ್ಕೆ ಮತ್ತಷ್ಟು ಪುಷ್ಟಿ ನೀಡಿದವು. ರಾಜ್ಯಪಾಲ ಜಾಕ್ಸನ್ ವಿಂಗಡಣಾ ಸಮಿತಿಯ ಅಧ್ಯಕ್ಷರಾದ ಸ್ಟರ್ಲಿಂಗ್ ಪ್ರೈಸ್ ರನ್ನು ನೂತನ ಮಿಸೌರಿ ಸ್ಟೇಟ್ ಗಾರ್ಡ್ ನ ಮುಖಂಡರಾಗಿ ನೇಮಿಸಿದರು. ಜನರಲ್ ಲಿಯಾನ್ ರ ರಾಜ್ಯದಲ್ಲಿನ ಕ್ರಿಪ್ರಗತಿಯ ಚಟುವಟಿಕೆಗಳನ್ನು ಎದುರಿಸಲಾರದೆ ಜಾಕ್ಸನ್ ಮತ್ತು ಪ್ರೈಸ್ ರಾಜಧಾನಿ ಜೆಫರ್ಸನ್ ಸಿಟಿಯಿಂದ ಜೂನ್ 14 , 1861ರಂದು ಪಲಾಯನ ಮಾಡಬೇಕಾಯಿತು. ಮಿಸೌರಿಯ ನಿಯೋಶೋ ಪಟ್ಟಣದಲ್ಲಿ ಜಾಕ್ಸನ್ ರಾಜ್ಯ ಶಾಸಕಾಂಗ ಸಭೆ ಏರ್ಪಡಿಸಿದರು. ಅವರು ಒಂದು ವಿಂಗಡಣಾ ತೀರ್ಪನ್ನು ಜಾರಿಗೆ ತಂದರು. ಆದರೆ,ಈ ಒಕ್ಕೂಟ-ಪರ ರಾಜ್ಯ ಸಮಿತಿಯನ್ನು ನಿಯಮಿಸಿದ್ದೇ ಈ ಕಾರಣಕ್ಕಾದ್ದರಿಂದಲೂ ಮತ್ತು ರಾಜ್ಯವು ಒಕ್ಕೂಟ-ಪರತೆಗಿಂತಲೂ ಸಂಯುಕ್ತ-ಪರತೆಯತ್ತ ಹೆಚ್ಚು ಒಲವು ತೋರಿದುದರಿಂದಲೂ ಈ ತೀರ್ಪಿಗೆ ಹೆಚ್ಚಿನ ಮಹತ್ವವೇನೂ ದೊರೆಯಲಿಲ್ಲ. ಆದಾಗ್ಯೂ, ಈ ತೀರ್ಮಾನವನ್ನು ಒಕ್ಕೂಟವು ಅಕ್ಟೋಬರ್ 30 , 1861ರಂದು ಅಂಗೀಕರಿಸಿತು.

ಚುನಾಯಿತ ರಾಜ್ಯಪಾಲರು ರಾಜಧಾನಿಯಲ್ಲಿ ಇರದಿದ್ದು, ಅನೇಕ ಸಚಿವರು ಎಲ್ಲೆಲ್ಲೋ ಚದುರಿಹೋಗಿದ್ದ ಪರಿಸ್ಥಿತಿಯಲ್ಲಿ ಸಂಯುಕ್ತ ಪಡೆಯು ಚುನಾಯಿತವಲ್ಲದ, ಸಂಯುಕ್ತ-ಪರ ಹಂಗಾಮಿ ಸರ್ಕಾರವನ್ನು ರಚಿಸಿ, ಹ್ಯಾಮಿಲ್ಟನ್ ಗ್ಯಾಂಬಲ್ ರನ್ನು ಅದರ ರಾಜ್ಯಪಾಲರನ್ನಾಗಿ ನಿಯಮಿಸಿತು. ಅಧ್ಯಕ್ಷ ಲಿಂಕನ್ ರ ಆಡಳಿತಮಂಡಳಿಯು ತಕ್ಷಣ ಗ್ಯಾಂಬಲ್ ರ ಸರ್ಕಾರವನ್ನು ಕಾನೂನುಬದ್ಧ ಸರ್ಕಾರವೆಂದು ಪರಿಗಣಿಸಿತು. ಈ ತೀರ್ಮಾನದಿಂದ ರಾಜ್ಯಕ್ಕೆ ಸಂಯುಕ್ತ-ಪರ ಸೇನೆಯ ಸೌಲಭ್ಯವೂ ಮತ್ತು ಸಂಯುಕ್ತ ಸೇನೆಗೆ ಸ್ವಯಂಸೇವಕರ ತುಕಡಿಯೂ ಸಿಗುವಂತಾಯಿತು.

ಆರ್ಕಾನ್ಸಾಸ್ ಮತ್ತು ಟೆಕ್ಸಾಸ್ ಗಳ ಒಗ್ಗೂಡಿದ ಸೇನೆಯು ಬೆನ್ ಮೆಕ್ ಕುಲ್ಲಾಚ್ ರ ಸೇನಾಧಿಪತ್ಯದಲ್ಲಿ ಜನರಲ್ ಪ್ರೈಸ್ ರ ಮಿಸೌರಿ ಸ್ಟೇಟ್ ಗಾರ್ಡ್ ನ ಜೊತೆ ಸೇರಿ ಸಂಯುಕ್ತ ಸೇನೆಯ ಮೇಲೆ ಸಮರ ಸಾರಿದವು. ವಿಲ್ಸನ್ ಕ್ರೀಕ್ ನಲ್ಲಿ ಗೆದ್ದು, ಮಿಸೌರಿಯ ಲೆಕ್ಸಿಂಗ್ ಟನ್ ನನ್ನು ಆಕ್ರಮಿಸಿದ ನಂತರ ಬೇರೆಡೆಯಲ್ಲೆಲ್ಲಾ ಸೋಲನ್ನನುಭವಿಸಿದ ಆ ಒಗ್ಗೂಡಿದ ಪಡೆಗೆ, ಪ್ರಬಲಗೊಂಡ ಸಂಯುಕ್ತ ಪಡೆಯನ್ನು ಎದುರಿಸುವುದು ಸಾಧ್ಯವಾಗದೆ, ಮೊದಲಿಗೆ ಆರ್ಕಾನ್ಸಾಸ್ ಗೆ ಹಿಂತಿರುಗುವ ಮತ್ತು ತದನಂತೆ ಅಲ್ಲಿಂದಲೂ ಓಡಿಸಲ್ಪಟವಟು ಟೆಕ್ಸಾಸ್ ನ ಮಾರ್ಷಲ್ ಪ್ರದೇಶಕ್ಕೆ ಹಿಮ್ಮೆಟ್ಟುವ ಮಾರ್ಗವಲ್ಲದೆ ಗತ್ಯಂತರವಿರಲಿಲ್ಲ.

ಮಿಸೌರಿಯ ಮೇಲೆ ಆಗಾಗ್ಗೆ ಒಕ್ಕೂಟದ ತುಕಡಿಗಳು ಬಾರಿ ಪ್ರಮಾಣದ ಆಕ್ರಮಣಗಳನ್ನು ಮಾಡಿದರೂ,ಮುಂದಿನ ಮೂರು ವರ್ಷಗಳ ಕಾಲ ರಾಜ್ಯದಲ್ಲಿ ನಡೆದ ಬಹುವಂಶ ಕಾಳಗವು ಗೆರಿಲ್ಲಾ ಯುದ್ಧವಾಗಿತ್ತು. ಕರ್ನಲ್ ವಿಲಿಯಮ್ ಕ್ವಾಂಟ್ರಿಲ್, ಫ್ರ್ಯಾಂಕ್ ಮತ್ತು ಜೆಸ್ಸೆ ಜೇಮ್ಸ್, ಯಂಗರ್ ಬ್ರದರ್ಸ್, ಮತ್ತು ವಿಲಿಯಮ್ ಟಿ. ಆಂಡರ್ಸನ್ ರಂತಹ "ನಾಗರಿಕ ಸೈನಿಕರು" ಕ್ಷಿಪ್ರ, ಕಿರುತಂಡಗಳ ವ್ಯೂಹರಚನೆಗಳನ್ನು ಸೂಕ್ತವಾಗಿ ಉಪಯೋಗಿಸಿಕೊಂಡರು. ಮಿಸೌರಿ ಪಾರ್ಟಿಸನ್ ರೇಂಜರ್ಸ್ ಆರಂಭಿಸಿದ ಈ ವಿಧದ ದಂಗೆಗಳು ನಾಗರಿಕ ಯುದ್ಧದ ವೇಳೆಗೆ ಒಕ್ಕೂಟದ ಇತರ ಕಡೆಗಳಿಗೂ ಹರಡಿದವು.

ಇತ್ತೀಚೆಗೆ ಇತಿಹಾಸಜ್ಞರು ಜೇಮ್ಸ್ ಸಹೋದರರ ಕಾನೂನುಬಾಹಿರ ವರ್ಷಗಳನ್ನು ಅಧಿಕೃತ ಯುದ್ಧ ಮುಗಿದ ನಂತರದ ಗೆರಿಲ್ಲಾ ಯುದ್ಧತಂತ್ರವೆಂದು ಪರಿಗಣಿಸಿದ್ದಾರೆ. 1880ರಲ್ಲಿ ದಕ್ಷಿಣ-ಕೇಂದ್ರ ಮಿಸೌರಿಯಲ್ಲಿ 'ಬಾಲ್ಡ್ ನಾಬರ್ಸ್' ನಡೆಸಿದ ಚಟುವಟಿಕೆಗಳನ್ನೂ ಅಧಿಕೃತ ಯುದ್ಧ ಮುಗಿದ ಎಷ್ಟೋ ಕಾಲದ ನಂತರವೂ ಅನಧಿಕೃತವಾಗಿ ಮುಂದುವರೆಸಿದ ಉಗ್ರತೆಯೆಂದು ಪರಿಗಣಿಸಿದ್ದಾರೆ.

1930ರಲ್ಲಿ ಡಿಫ್ತೀರಿಯಾ ರೋಗವು ಸಾಂಕ್ರಾಮಿಕವಾಗಿ ಹರಡಿ ಸ್ಪ್ರಿಂಗ್ ಫೀಲ್ಡ್ ನ ಸುತ್ತಮುತ್ತಣ ಪ್ರದೇಶದಲ್ಲಿ ಸುಮಾರು ನೂರು ಮಂದಿ ನಿಧನರಾದರು. ಕೂಡಲೇ ಸೂಕ್ತ ಔಷಧಿಗಳನ್ನು ಆ ಪ್ರದೇಶಕ್ಕೆ ರವಾನಿಸಿ ಸಾಂಕ್ರಾಮಿಕ ರೋಗವನ್ನು ನಿರೋಧಿಸಲಾಯಿತು.

1950ರ ದಶಕದ ಮಧ್ಯಭಾಗ ಮತ್ತು 1960ರ ದಶಕಗಳಲ್ಲಿ,ಇತರೆ ಪ್ರಮುಖ ಕೈಗಾರಿಕಾ ನಗರಗಳಲ್ಲಿ ಆದಂತೆಯೇ, ಸೇಂಟ್ ಲೂಯಿಸ್ ನಲ್ಲೂ ಕೈಗಾರಿಕೋದ್ಯಮ ಕುಂಠಿತವಾಗಿ ಮತ್ತು ರೈಲುದಾರಿ ಹಾಗೂ ಉತ್ಪಾದನಾ ಕ್ಷೇತ್ರಗಳಲ್ಲಿ ಹಿನ್ನಡೆ ಉಂಟಾಗಿ ನಿರುದ್ಯೋಗ ತಲೆದೋರಿತು. ಅದೇ ಸಮಯದಲ್ಲಿ ಹೆದ್ದಾರಿಯ ನಿರ್ಮಾಣವು ಮಧ್ಯಮ-ವರ್ಗದ ನಿವಾಸಿಗಳು ನಗರಪ್ರದೇಶವನ್ನು ತೊರೆದು ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೂತನ ವಸತಿಗಳಿಗೆ ಹೋಗಲು ಅನುವು ಮಾಡಿಕೊಟ್ಟಿತು. ಸೇಂಟ್ ಲೂಯಿಸ್ ದಶಕಗಳಿಂದಲೂ ವಿವಿಧ ವಾಣಿಜ್ಯಗಳಿಗೆ ತಕ್ಕಂತೆ ಮಾರ್ಪಾಡಾಗುತ್ತಲೇ ಸಾಗಿದೆ. ಉಪನಗರಗಳು ಪ್ರತ್ಯೇಕ ಉದ್ಯೋಗ ಕೇಂದ್ರಗಳಾಗಿ ಅಭಿವೃದ್ಧಿಯಾಗಿದ್ದು, ಪ್ರಮುಖವಾದ ರೀಟೈಲ್ ಮಳಿಗೆಗಳಂತಹವುಗಳ ಮೂಲಕ,ವೈಚಾರಿಕ-ಉದ್ಯಮ ಮತ್ತು ಸೇವಾ ಉದ್ಯಮಗಳೆರಡರಲ್ಲೂ ಮುಂದುವರೆದಿವೆ. 1956ರಲ್ಲಿ ಸೇಂಟ್ ಚಾರ್ಲ್ಸ್ ಅಂತರರಾಜ್ಯ ಹೆದ್ದಾರಿ ಯೋಜನೆ ಕೈಗೊಂಡ ಮೊದಲನೆಯ ತಾಣವಾಯಿತು.[೨೩]

ಜನಸಾಂದ್ರತೆ[ಬದಲಾಯಿಸಿ]

ಮಿಸೌರಿಯ ಜನಸಂಖ್ಯಾ ಸಾಂದ್ರತೆಯ ನಕ್ಷೆ.
Historical population
Census Pop.
1810೧೯,೭೮೩
1820೬೬,೫೮೬೨೩೬.೬%
1830೧,೪೦,೪೫೫೧೧೦.೯%
1840೩,೮೩,೭೦೨೧೭೩.೨%
1850೬,೮೨,೦೪೪೭೭.೮%
1860೧೧,೮೨,೦೧೨೭೩.೩%
1870೧೭,೨೧,೨೯೫೪೫.೬%
1880೨೧,೬೮,೩೮೦೨೬�೦%
1890೨೬,೭೯,೧೮೫೨೩.೬%
1900೩೧,೦೬,೬೬೫೧೬�೦%
1910೩೨,೯೩,೩೩೫೬�೦%
1920೩೪,೦೪,೦೫೫೩.೪%
1930೩೬,೨೯,೩೬೭೬.೬%
1940೩೭,೮೪,೬೬೪೪.೩%
1950೩೯,೫೪,೬೫೩೪.೫%
1960೪೩,೧೯,೮೧೩೯.೨%
1970೪೬,೭೬,೫೦೧೮.೩%
1980೪೯,೧೬,೬೮೬೫.೧%
1990೫೧,೧೭,೦೭೩೪.೧%
2000೫೫,೯೫,೨೧೧೯.೩%
Est. 2009೫೯,೮೭,೫೮೦[೨]

2009ರಲ್ಲಿ ಮಿಸೌರಿಯ ಜನಸಂಖ್ಯೆಯು ಸುಮಾರು 5,987,580;ಇಸವಿ 2000ಕ್ಕಿಂತಲೂ 392,369, ಎಂದರೆ(7.0 ಪ್ರತಿಶತ)ಹೆಚ್ಚಳ. 2000ದಿಂದ 2007ರವರೆಗಿನ ಈ ಹೆಚ್ಚಳದಲ್ಲಿ ಹಿಂದಿನ ಸೆನ್ಸಸ್ (480,763 ಹುಟ್ಟುಗಳು, ಜಾತಾ 343,199 ಸಾವುಗಳು)ಗಿಂತಲೂ ನೈಸರ್ಗಿಕವಾಗಿಯೇ 137,564 ಜನರು ಹೆಚ್ಚಾದರೆ, 88,088 ಜನರು ಒಟ್ಟಾರೆ ರಾಜ್ಯಕ್ಕೆ ವಲಸೆಬಂದುದರಿಂದ ಜನಸಂಖ್ಯಾ ಹೆಚ್ಚಳವಾಯಿತು. ಯುನೈಟೆಡ್ ಸ್ಟೇಟ್ಸ್ ನ ಹೊರಗಿನಿಂದ ವಲಸೆ ಬಂದವರು 50,450 ಜನರಾದರೆ ದೇಶದವರೇ ವಲಸೆ ಬಂದುದರಿಂದ 37,638ರಷ್ಟು ಸಂಖ್ಯೆ ವರ್ಧಿಸಿತು. ಮಿಸೌರಿಯ ಅರ್ಧಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಜನರು (3,294,936 ಜನರು, ಅಥವಾ 55.0%) ರಾಜ್ಯದ ಎರಡು ಮಹಾ ಮೆಟ್ರೋಪಾಲಿಟನ್ ಪ್ರದೇಶಗಳಾದ ಸೇಂಟ್ ಲೂಯಿಸ್ ಮತ್ತು ಕಾನ್ಸಾಸ್ ಸಿಟಿಗಳಲ್ಲಿ ವಾಸಿಸುತ್ತಾರೆ. ರಾಜ್ಯದ ಜನಸಾಂದ್ರತೆಯು 2009ರಲ್ಲಿ ೮೬.೯ ಇದ್ದು, ಇದು ದೇಶದ ಸರಾಸರಿ ಜನಸಾಂದ್ರತೆ(2009ರಲ್ಲಿ ೮೬.೮)ಯ ಮೇರೆಗೆ,ಬೇರೆಲ್ಲಾ ರಾಜ್ಯಗಳಿಗಿಂತಲೂ, ಸಮೀಪದಲ್ಲಿದೆ.

ಯುನೈಟೆಡ್ ಸ್ಟೇಟ್ಸ್ ನ ಜನಗಣತಿ ಸಮಿತಿಯು ಮಿಸೌರಿಯ ಫೆಲ್ಪ್ಸ್ ಗ್ರಾಮವೇ ಅಮೆರಿಕದ ಜನಸಂಖ್ಯಾ ಕೇಂದ್ರವೆಂದು ಗುರುತಿಸಿದೆ. ಮಿಸೌರಿಯ ಜನಸಂಖ್ಯಾ ಕೇಂದ್ರವು ವೆಸ್ಟ್ ಫಾಲಿಯಾ ನಗರದ ಓಸೇಜ್ ಗ್ರಾಮದಲ್ಲಿದೆ.[೨೪]

2004ರ ಗಣತಿಯಂತೆ,ಜನಸಂಖ್ಯೆಯು 194,000 ವಿದೇಶದಲ್ಲಿ ಜನ್ಮತಾಳಿದವರನ್ನೂ ಒಳಪಟ್ಟಿತ್ತು.(ಇದು ರಾಜ್ಯದ ಜನಸಂಖ್ಯೆಯ 3.4ಪ್ರತಿಶತ).

ಮಿಸೌರಿಯಲ್ಲಿ ತಲೆತಲಾಂತರಗಳಿಂದಲೂ ಐದು ದೊಡ್ಡ ಪಂಗಡಗಳು ನೆಲೆಸಿವೆ:ಜರ್ಮನ್(23.5 ಪ್ರತಿಶತ),ಐರಿಷ್(12.7 ಪ್ರತಿಶತ),ಅಮೆರಿಕನ್ (10.5 ಪ್ರತಿಶತ),ಇಂಗ್ಲಿಷ್(9.5 ಪ್ರತಿಶತ)ಮತ್ತುಫ್ರೆಂಚ್(3.5 ಪ್ರತಿಶತ). "ಅಮೆರಿಕನ್" ಎಂದರೆ ಸ್ಥಳೀಯ ಅಮೆರಿಕನ್ರು ಅಥವಾ ಆಫ್ರಿಕನ್ ಅಮೆರಿಕನ್ರಲ್ಲದೆ ತಮ್ಮ ಪೂರ್ವಜರು ಸಾಕಷ್ಟು ಕಾಲದಿಂದಲೂ ಯುನೈಟೆಡ್ ಸ್ಟೇಟ್ಸ್ ನಲ್ಲೇ ಇದ್ದಂತಹ ಯೂರೋಪಿಯನ್ ಅಮೆರಿಕನ್ನರೂ ಸೇರುತ್ತಾರೆ.

ಜರ್ಮನ್ ಅಮೆರಿಕನ್ನರ ಪಂಗಡದವರು ಹಲವಾರು ಪೀಳಿಗೆಗಳಿಂದಲೂ ಮಿಸೌರಿಯ ಎಲ್ಲೆಡೆಯೂ ವಾಸಿಸುತ್ತಿರುವರು ಸೇಂಟ್ ಲೂಯಿಸ್ ನ ಕಾನ್ಸಾಸ್ ಸಿಟಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅಮೆರಿಕನ್ ಆಫ್ರಿಕನ್ನರು ನೆಲೆಸಿದ್ದಾರೆ ಮತ್ತು ಬೂಟ್ ಹೀಲ್ ನ ಆಗ್ನೇಯ ಭಾಗದಲ್ಲೂ, ತೋಟಗಾರಿಕಾ ಕೃಷಿಯು ಅಂದೊಮ್ಮೆ ಪ್ರಮುಖವಾಗಿದ್ದ ಮಿಸೌರಿ ರಿವರ್ ವ್ಯಾಲಿಯಲ್ಲೂ ಈ ಜನಾಗದವರು ಬಹುಸಂಖ್ಯೆಯಲ್ಲಿ ವಾಸಿಸುತ್ತಾರೆ. ಫ್ರೆಂಚ್ ಪೂರ್ವಜರನ್ನು ಹೊಂದಿದ್ದ ಮಿಸೌರಿ ಕ್ರಿಯೋಲ್ಸ್ ಸೇಂಟ್ ಲೂಯಿಸ್ ನ ದಕ್ಷಿಣಭಾಗದ ಮಿಸಿಸಿಪಿ ರಿವರ್ ವ್ಯಾಲಿಯಲ್ಲಿ ಹೆಚ್ಚು ಕಾಣಸಿಗುತ್ತಾರೆ. ಇತ್ತೀಚೆಗೆ ವಲಸೆ ಬಂದ ಸುಮಾರು 40,000-50,000 ಬೋಸ್ನಿಯಾಕ್ ಜನರು ಸೇಂಟ್ ಲೂಯಿಸ್ ಪ್ರದೇಶದಲ್ಲಿ ವಾಸಿಸಿದ್ದಾರೆ.[ಸೂಕ್ತ ಉಲ್ಲೇಖನ ಬೇಕು]

2004ರಲ್ಲಿ ರಾಜ್ಯದ ಜನಸಂಖ್ಯೆಯ 6.6%, 5 ವರ್ಷದವರಿಗಿಂತಲೂ ಚಿಕ್ಕ ಮಕ್ಕಳಿಂದಲೂ, 25 .5%, 18ವರ್ಷಕ್ಕಿಂತಲೂ ಚಿಕ್ಕವರಿಂದಲೂ, 13.5% 65ವರ್ಷಕ್ಕೂ ಮೇಲ್ಪಟ್ಟವರಿಂದಲೂ ಕೂಡಿರುವುದೆಂದು ವರದಿಯಾಗಿತ್ತು. ಜನಸಂಖ್ಯೆಯ ಸುಮಾರು 51 .4% ಹೆಣ್ಣುಗಳಿದ್ದರು. ಮಿಸೌರಿಯ 81 ,3% ನಿವಾಸಿಗಳು ಹೈ ಸ್ಕೂಲ್ ಗ್ರ್ಯಾಜುಯೇಟ್ ಗಳಾಗಿದ್ದು(ಇದು ದೇಶದ ಸರಾಸರಿಗಿಂತಲೂ ಅಧಿಕ)21.6% ಜನರು ಬ್ಯಾಚಲರ್ಸ್ ಡಿಗ್ರಿ ಅಥವಾ ಅದಕ್ಕೂ ಹೆಚ್ಚಿನ ಡಿಗ್ರಿ ಪಡೆದವರಾಗಿದ್ದರು. 3.4% ಮಿಸೌರಿಯನ್ನರು ಅನ್ಯದೇಶಜಾತರಾಗಿದ್ದು, 5.1% ಜನರು ಇಂಗ್ಲೀಷೇತರ ಭಾಷೆಯನ್ನು ತಮ್ಮ ಮನೆಯ ಭಾಷೆಯಾಗಿ ಹೊಂದಿದ್ದರೆಂದು ವರದಿಯಾಗಿತ್ತು.

2000ದಲ್ಲಿ ಮಿಸೌರಿಯಲ್ಲಿ 2,194,594 ನಿವಾಸಗಳಿದ್ದು, ಪ್ರತಿ ನಿವಾಸದಲ್ಲಿ ಸರಾಸರಿ 2.48 ಜನರು ವಾಸವಾಗಿದ್ದರು. ಸ್ವಂತಮನೆ ಹೊಂದಿರುವವರು 70.3 ಪ್ರತಿಶತ ಇದ್ದರು ಹಾಗೂ ಸ್ವಂತ-ನಿವಾಸ ದ ಸರಾಸರಿ ಮೌಲ್ಯವು ಸುಮಾರು $89,900 ಆಗಿತ್ತು. ಕುಟುಂಬದ ಸರಾಸರಿ ಆದಾಯವು 1999ರಲ್ಲಿ $37,934, ಅಥವಾ $19,936 ಪ್ರತಿ ವ್ಯಕ್ತಿಯದಾಗಿತ್ತು. 1999ರಲ್ಲಿ ಮಿಸೌರಿಯಲ್ಲಿ ಬಡತನದ ರೇಖೆಯ ಕೆಳಗೆ ಇದ್ದವರ ಸಂಖ್ಯೆ 11.7 ಪ್ರತಿಶತ (637,891 ಜನರು).

ಕೆಲಸಕ್ಕೆ ಹೋಗಲು ಪ್ರಯಾಣ ಮಾಡಲು ಬೇಕಾದ ಸರಾಸರಿ ಸಮಯ 23.8 ನಿಮಿಷಗಳು.

ಧಾರ್ಮಿಕತೆ[ಬದಲಾಯಿಸಿ]

ಧರ್ಮದೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುವ ಮಿಸೌರಿಯನ್ನರ ಪೈಕಿ ಪ್ರತಿ ಐದು ವ್ಯಕ್ತಿಗಳಲ್ಲಿ ಮೂವರು ಪ್ರೊಟೆಸ್ಟೆಂಟ್ ರಾಗಿದ್ದಾರೆ. ಅಲ್ಲದೆ ಮಧ್ಯಮಪ್ರಮಾಣದಲ್ಲಿ ರೋಮನ್-ಕ್ಯಾಥೋಲಿಕ್ ಪಂಗಡಕ್ಕೆ ಸೇರಿದವರೂ ರಾಜ್ಯದಲ್ಲಿದ್ದಾರೆ; ಒಂದು ಅಂದಾಜಿನಂತೆ ಪ್ರತಿ ಐವರು ಮಿಸೌರಿಯನ್ನರಲ್ಲಿ ಒಬ್ಬನು ರೋಮನ್-ಕ್ಯಾಥೋಲಿಕ್ ಆಗಿರುತ್ತಾನೆ. ಕ್ಯಾಥೋಲಿಕ್ ಧರ್ಮವನ್ನಾಲಿಂಗಿಸಿದವರು ವಾಸಿಸುತ್ತಿರುವ ಪ್ರದೇಶಗಳಲ್ಲಿ ಪ್ರಮುಖವಾದವು ಸೇಂಟ್ ಲೂಯಿಸ್, ಜೆಫರ್ಸನ್ ಸಿಟಿ, ವೆಸ್ಟ್ ಪ್ಲೆಕ್ಸ್, ಮತ್ತು ಮಿಸೌರಿ ರೈನ್ ಲ್ಯಾಂಡ್(ಅದರಲ್ಲೂ ಮಿಸೌರಿ ನದಿಯ ದಕ್ಷಿಣ ಭಾಗದಲ್ಲಿರುವಂತಹುದು)[೨೫] ಸೇಂಟ್ ಲೂಯಿಸ್ ಮತ್ತು ಕಾನ್ಸಾಸ್ ಸಿಟಿ ಮೆಟ್ರೋಪಾಲಿಟಿನ್ ಪ್ರದೇಶಗಳಲ್ಲಿ ಈ ನಗರಗಳಿಗೆ ಅಮೂಲ್ಯವಾದ ಸಾಂಸ್ಕೃತಿಕ ಹಾಗೂ ಸಹಾಯಾರ್ಥ ಸೇವೆಗಳನ್ನು ನೀಡಿರುವ ಪ್ರಮುಖ ಯಹೂದಿ ಪಂಗಡಕ್ಕೆ ಸೇರಿದ ಜನರೂ ಇದ್ದಾರೆ; ಇತ್ತೀಚೆಗೆ ಅದೇ ಪ್ರದೇಶಗಳಲ್ಲಿ ಭಾರತ, ಪಾಕಿಸ್ತಾನಗಳಿಂದ ವಲಸೆ ಬಂದವರು ಹಿಂದೂ ಮತ್ತು ಮುಸ್ಲಿಮ್ ಪಂಗಡಗಳನ್ನೂ ನಿರ್ಮಿಸಿಕೊಂಡಿದ್ದಾರೆ.

ಅಮೆರಿಕದ ಧಾರ್ಮಿಕತೆ ಗುರುತಿಸುವಿಕೆಯ ಸಮೀಕ್ಷೆಯ ಪ್ರಕಾರ ಮಿಸೌರಿಯ ಜನರ ಧಾರ್ಮಿಕ ಬದ್ಧತಾ ರೀತಿಯು ಈ ಕೆಳಕಂಡಂತಿದೆ.[೨೬]

2000ದ ಇಸವಿಯಲ್ಲಿ ಧರ್ಮಬದ್ಧತೆಯನ್ನು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿದ ಧಾರ್ಮಿಕಸಂಸ್ಥೆಗಳೆಂದರೆ 856,964 ದೈವಭಕ್ತರನ್ನು ಹೊಂದಿದ ರೋಮನ್ ಕ್ಯಾಥೋಲಿಕ್ ಚರ್ಚ್,797,732 ಜನರನ್ನು ಹೊಂದಿದ ಸದರನ್ ಬ್ಯಾಪ್ಟಿಸ್ಟ್ ಚರ್ಚ್ ಮತ್ತು 226,578 ಜನರನ್ನು ಹೊಂದಿದ ಯುನೈಟೆಡ್ ಮೆಥಡಿಸ್ಟ್ ಚರ್ಚ್.[೨೭]

ಹಲವಾರು ಧಾರ್ಮಿಕ ಸಂಸ್ಥೆಗಳ ಮುಖ್ಯ ಕಚೇರಿಗಳು ಮಿಸೌರಿಯಲ್ಲಿದ್ದು, ಅವುಗಳಲ್ಲಿ ಸೇಂಟ್ ಲೂಯಿಸ್ ನ ಹೊರಭಾಗದಲ್ಲಿರುವ ಲುಥೆರಾನ್ ಚರ್ಚ್-ಮಿಸೌರಿ ಸೈನಾಡ್ ಕಿರ್ಕ್ ವುಡ್ ನಲ್ಲೂ ಮತ್ತು ಯುನೈಟೆಡ್ ಪೆಂಟೆಕಾಸ್ಟಲ್ ಚರ್ಚ್ ಇಂಟರ್ ನ್ಯಾಷನಲ್ ಹ್ಯಾಝೆಲ್ ವುಡ್ ನಲ್ಲೂ ತಮ್ಮ ಕೇಂದ್ರಕಚೇರಿಗಳನ್ನು ಹೊಂದಿವೆ. ಚರ್ಚ್ ಆಫ್ ನಝರೀನ್ ನ ಕೇಂದ್ರಕಚೇರಿಯು ಕಾನ್ಸಾಸ್ ಸಿಟಿಯಲ್ಲಿದೆ. ಕಮ್ಯುನಿಟಿ ಆಫ್ ಕ್ರೈಸ್ತ್(ಮೊದಲಿಗೆ ರೆಕಗ್ನೈಝ್ಡ್ ಚರ್ಚ್ ಆಫ್ ಜೀಸಸ್ ಕ್ರೈಸ್ತ್ ಆಫ್ ಲ್ಯಾಟರ್ ಡೇ ಸೇಂಟ್ಸ್ ಎಂದು ಕರೆಯಲ್ಪಡುತ್ತಿತ್ತು)ಮತ್ತು ದ ಗ್ರೂಪ್ ರೆಮ್ನೆಂಟ್ ಚರ್ಚ್ ಆಫ್ ಜೀಸಸ್ ಕ್ರೈಸ್ತ್ ಆಫ್ ಲ್ಯಾಟರ್ ಡೇ ಸೇಂಟ್ಸ್ ನ ಕೇಂದ್ರಕಚೇರಿಗಳು ಕಾನ್ಸಾಸ್ ಸಿಟಿಯ ಬಳಿಯ ಇಂಡಿಪೆಂಡೆನ್ಸ್ ನಲ್ಲಿವೆ. ಈ ಪ್ರದೇಶ ಮತ್ತು ಮಿಸೌರಿಯ ಇತರೆ ಭಾಗಗಳೂ ಸಹ ದ ಚರ್ಚ್ ಆಫ್ ಜೀಸಸ್ ಕ್ರೈಸ್ತ್ ಆಫ್ ಲ್ಯಾಟರ್ ಡೇ ಸೇಂಟ್ಸ್ (ಮಾರ್ಮನ್ಸ್)ಗೆ ಧಾರ್ಮಿಕ ಹಾಗೂ ಚಾರಿತ್ರಿಕ ದೃಷ್ಟಿಗಳಿಂದ ಬಹಳ ಮುಖ್ಯವಾದುವಾಗಿವೆ ಹಾಗೂ ಈ ಚರ್ಚ್ ಹಲವಾರು ನಿವೇಶನಗಳನ್ನು/ಭೇಟಿ ನೀಡುವವರಿಗಾಗಿ ಕೇಂದ್ರಗಳನ್ನು ನಿರ್ವಹಿಸುತ್ತಿದ್ದು ಆ ಕೇಂದ್ರಗಳ ಸದಸ್ಯರ ಸಂಖ್ಯೆ ಮಿಸೌರಿಯ ಜನಸಂಖ್ಯೆಯ 1% ಅಥವಾ 62,217 ಆಗಿದೆ. ಅಸೆಂಬ್ಲೀಸ್ ಆಫ್ ಗಾಡ್ ಮತ್ತು ಬ್ಯಾಪ್ಟಿಸ್ಟ್ ಬೈಬಲ್ ಫೆಲೋಷಿಪ್ ಇಂಟರ್ ನ್ಯಾಷನಲ್ ಗಳ ಮುಖ್ಯಕಚೇರಿಗಳು ಸ್ಪ್ರಿಂಗ್ ಪೀಲ್ಡ್ ನಲ್ಲಿವೆ. ದಜನರಲ್ ಅಸೋಸಿಯೇಷನ್ ಆಫ್ ಜನರಲ್ ಬ್ಯಾಪ್ಟಿಸ್ಟ್ನ ಕೇಂದ್ರಕಚೇರಿ ಪೋಪ್ಲಾರ್ ಬ್ಲಫ್ನಲ್ಲಿದೆ. ಪೆಂಟೆಕಾಸ್ಟಲ್ ಚರ್ಚ್ ಆಫ್ ಗಾಡ್ ನ ಮೂಲಕಚೇರಿಯು ಜೋಪ್ಲಿನ್ ನಲ್ಲೂ, ಯೂನಿಟಿ ಚರ್ಚ್ ನ ಕೇಂದ್ರಕಚೇರಿಯು ಯೂನಿಟಿ ವಿಲೇಜ್ನಲ್ಲೂ ಇವೆ.

ವಿತ್ತ[ಬದಲಾಯಿಸಿ]

ಬ್ಯೂರೋ ಆಫ್ ಎಕನಾಮಿಕ್ ಅನಾಲಿಸಿಸ್ ಇಲಾಖೆಯು 2006ರಲ್ಲಿ ಮಿಸೌರಿ ರಾಜ್ಯದ ಒಟ್ಟು ಉತ್ಪಾದನೆಯು ಸುಮಾರು $225.9 ಬಿಲಿಯನ್ ಎಂದು ಅಂದಾಜಿಸುತ್ತದೆ. 1006ರಲ್ಲಿ ಪ್ರತಿ ವ್ಯಕ್ತಿಯ ಸರಾಸರಿ ವೈಯಕ್ತಿಕ ಆದಾಯವು $32,705,[೧೩] ಆಗಿದ್ದು, ಈ ಬಾಬ್ತಿನಲ್ಲಿ ದೇಶದ 26ನೆಯ ಸ್ಥಾನವನ್ನು ಪಡೆದಿತ್ತು. ಪ್ರಮುಖ ಕೈಗಾರಿಕೆಗಳೆಂದರೆ ಬಾಹ್ಯಾಕಾಶ-ವೈಮಾನಿಕ(ಏರೋಸ್ಪೇಸ್), ಸಾರಿಗೆ ಉಪಕರಣಗಳು, ಆಹಾರ ಸಂಸ್ಕರಣ, ರಾಸಾಯನಿಕಗಳು, ಮುದ್ರಣ, ಪ್ರಕಾಶನ,ವಿದ್ಯುತ್ ಉಪಕರಣಗಳು, ಹಗುರವಾದ ವಸ್ತುಗಳ ತಯಾರಿಕೆ ಮತ್ತು ಬೀರ್.

ರಾಜ್ಯದ ಕೃಷಿ ಉತ್ಪನ್ನಗಳು ಗೋಮಾಂಸ, ಸೋಯಾಬೀನ್ಸ್, ಹಂದಿಮಾಂಸ, ಡೈರಿ ಉತ್ಪನ್ನಗಳು, ಹುಲ್ಲು, ಜೋಳ, ಕೋಳಿಸಾಕಣೆ, ಸೋರ್ಘಮ್, ಹತ್ತಿ, ಭತ್ತ ಮತ್ತು ಮೊಟ್ಟೆಗಳು. ಮಿಸೌರಿಯು ದೇಶದಲ್ಲೇ ಹಂದಿಮರಿಗಳ ಉತ್ಪಾದನೆಯಲ್ಲಿ 6ನೆಯ ಸ್ಥಾನವನ್ನೂ, ಜಾನುವಾರು ಸಾಕಣೆಯಲ್ಲಿ 7ನೆಯ ಸ್ಥಾನವನ್ನೂ ಪಡೆದಿದೆ. ಸೋಯಾಬೀನ್ಸ್ ಉತ್ಪಾದನೆಯಲ್ಲಿ ಮೊದಲ ಐದರಲ್ಲಿ ಸ್ಥಾನ ಪಡೆದಿದೆ. 2001ರ ಪ್ರಕಾರ 108,000 ತೋಟಗಳಿದ್ದು ಟೆಕ್ಸಾಸ್ ನ ಹೊರತಾಗಿ ಬೇರೆಲ್ಲಾ ರಾಜ್ಯಗಳಿಗಿಂತಲೂ ಹೆಚ್ಚಿನ ತೋಟಗಾರಿಕೆಯ ರಾಜ್ಯವಾಗಿತ್ತು. ಮಿಸೌರಿಯು ತನ್ನ ವೃದ್ಧಿಸುತ್ತಿರುವ ವೈನ್ ಉದ್ಯಮವನ್ನು ಬಿರುಸಾಗಿ ಪ್ರಚಾರ ಮಾಡುತ್ತಿದೆ.

ಮಿಸೌರಿಯಲ್ಲಿ ಹೇರಳವಾದ ಸುಣ್ಣದಕಲ್ಲು ಲಭ್ಯವಿದೆ. ಗಣಿಗಾರಿಕೆಯ ಮೂಲಕ ಪಡೆವ ಇತರ ದ್ರವ್ಯಗಳೆಂದರೆ ಸೀಸ, ಕಲ್ಲಿದ್ದಲು ಮತ್ತು ಪುಡಿಮಾಡಲ್ಪಟ್ಟ ಕಲ್ಲು. ಮಿಸೌರಿ ಬೇರೆಲ್ಲಾ ರಾಜ್ಯಗಳಿಗಿಂತಲೂ ಹೆಚ್ಚು ಸೀಸವನ್ನು ಉತ್ಪಾದಿಸುತ್ತದೆ. ಸೀಸದ ಗಣಿಗಳು ಬಹುವಂಶ ರಾಜ್ಯದ ಮಧ್ಯ ಪೂರ್ವ ಭಾಗಗಳಲ್ಲಿವೆ. ಪೋರ್ಟ್ ಲ್ಯಾಂಡ್ ಸಿಮೆಂಟ್ ನ ತಯಾರಿಕೆಗೆ ಬೇಕಾದ ಸುಣ್ಣವನ್ನು ತಯಾರಿಸುವಲ್ಲಿಯೂ ಮಿಸೌರಿಯು ಪ್ರಥಮಸ್ಥಾನ ಅಥವಾ ಅದರ ಆಸುಪಾಸಿನಲ್ಲೇ ಇದೆ.

ಪ್ರವಾಸ, ಸೇವೆಗಳು ಮತ್ತು ಸಗಟು/ಚಿಲ್ಲರೆ ವ್ಯಾಪಾರಗಳು ತಯಾರಿಕಾ ಉದ್ದಿಮೆಯ ನಂತರದ ಸ್ಥಾನಗಳನ್ನಲಂಕರಿಸಿವೆ.

ವೈಯಕ್ತಿಕ ಆದಾಯವು ಹತ್ತು ವಿವಿಧ ಆದಾಯಾಧಾರಿತ ಕಂಸಗಳಲ್ಲಿ ತೆರಿಗೆ ಆಕರ್ಷಿಸಲಾಗುವುದಾಗಿದ್ದು ತೆರಿಗೆಯು 1.5 ಪ್ರತಿಶತದಿಂದ 6.0 ಪ್ರತಿಶತದವರೆಗೂ ಇರುತ್ತದೆ. ಮಿಸೌರಿಯ ಮಾರಾಟ ತೆರಿಗೆಯು ಸುಮಾರು ಎಲ್ಲಾ ವಸ್ತುಗಳಿಗೂ 4.225 ಪ್ರತಿಶತ. ಇದಲ್ಲದೆ ಸ್ಥಳೀಯ ಸುಂಕಗಳೂ ಸೇರಬಹುದು. ಮಿಸೌರಿಯ 2500ಕ್ಕೂ ಹೆಚ್ಚು ಸ್ಥಳೀಯ ಸರ್ಕಾರಗಳು ಆಸ್ತಿ ತೆರಿಗೆಯನ್ನೇ ಅವಲಂಬಿಸಿದ್ದು, ನಿಜ ಅಸ್ತಿಯಾದ ಭೂವ್ಯವಹಾರ, ಭೂಮಿ ಕಾಣಿ, ಮತ್ತು ಸ್ವಂತ ಆಸ್ತಿಯ ಮೇಲಿನ ತೆರಿಗೆ ಇವುಗಳ ಮುಖ್ಯ ಆದಾಯವಾಗುತ್ತದೆ. ವ್ಯಕ್ತಿಗಳು ಹೊಂದಿರುವ ಮೋಟಾರ್ ವಾಹನಗಳ ಹೊರತಾಗಿ ಇತರ ವೈಯುಕ್ತಿಕ ಆಸ್ತಿಗಳು ತೆರಿಗೆ ವಿನಾಯಿತಿ ಪಡೆಯುತ್ತವೆ. ಭೂಮಿಯನ್ನು ಆಸ್ತಿಯಾಗಿ ಹೊಂದಿರುವವರಲ್ಲಿ, ಸರ್ಕಾರ ಹೊಂದಿರುವ ಜಮೀನು, ಲಾಭದಾಯಕವಲ್ಲದ ಸ್ಮಶಾನಗಳು, ಧಾರ್ಮಿಕ ಪೂಜಾವಿಧಿಗಳಿಗಾಗಿಯೇ ಉಪಯೋಗಿಸುವಂತಹವು, ಶಾಲೆ-ಕಾಲೇಜುಗಳ ಜಮೀನುಗಳು ಮತ್ತು ಸಹಾಯಾರ್ಥ ಸಂಸ್ಥೆಗಳ ಜಮೀನುಗಳ ಮೇಲೆ ತೆರಿಗೆ ವಿಧಿಸುವುದಿಲ್ಲ. ಮಿಸೌರಿಯಲ್ಲಿ ಯಾವುದೇ ಪಾರಂಪಾರಿಕ ತೆರಿಗೆ ಇಲ್ಲ ಮತ್ತು ಫೆಡೆರಲ್ ಎಸ್ಟೇಟ್ ತೆರಿಗೆ ಸಂಬಂಧಿತವಾಗಿ ಮಿಸೌರಿಯಲ್ಲಿ ನಿಗದಿತ ಮಿಸೌರಿ ಎಸ್ಟೇಟ್ ತೆರಿಗೆ ಕಟ್ಟಬೇಕಾಗುತ್ತದೆ.

ಇಡೀ ಯುನೈಟೆಡ್ ಸ್ಟೇಟ್ಸ್ ನಲ್ಲಿ ಎರಡೆರಡು ಫೆಡೆರಲ್ ರಿಸರ್ವ್ ಬ್ಯಾಂಕ್ ಗಳಿರುವುದು ಮಿಸೌರಿಯೊಂದೆಡೆಯಲ್ಲೇ: ಒಂದು ಕಾನ್ಸಾಸ್ ಸಿಟಿಯಲ್ಲಿ (ಪಶ್ಚಿಮ ಮಿಸೌರಿ, ನೆಬ್ರಾಸ್ಕಾ, ಕಾನ್ಸಾಸ್, ಓಕಲ್ಹೋಮಾ, ಕೊಲರಾಡೋ, ಉತ್ತರ ನ್ಯೂ ಮೆಕ್ಸಿಕೋ, ಮತ್ತು ವ್ಯೋಮಿಂಗ್ ಗಳಿಗೆ ಸೇವೆ ಸಲ್ಲಿಸಲು) ಮತ್ತು ಒಂದು ಸೇಂಟ್ ಲೂಯಿಸ್ ನಲ್ಲಿ(ಪೂರ್ವ ಮಿಸೌರಿ, ದಕ್ಷಿಣ ಇಲಿನಾಯ್ಸ್, ದಕ್ಷಿಣ ಇಂಡಿಯಾನಾ, ಪಶ್ಚಿಮ ಕೆಂಟಕಿ, ಪಶ್ಚಿಮ ಟೆನೆಸ್ಸಿ, ಉತ್ತರ ಮಿಸಿಸಿಪಿ ಮತ್ತು ಪೂರ್ಣ ಅರ್ಕನ್ಸಾಸ್ ಗಳ ಸೇವೆಗಾಗಿ)[೨೮]

ಸಾರಿಗೆ ವ್ಯವಸ್ಥೆ[ಬದಲಾಯಿಸಿ]

ವಾಯುಮಾರ್ಗ[ಬದಲಾಯಿಸಿ]

ಮಿಸೌರಿ ರಾಜ್ಯವು ಎರಡು ಪ್ರಮುಖ ವಿಮಾನನಿಲ್ದಾಣ ಕೇಂದ್ರಗಳನ್ನು ಹೊಂದಿದೆ:ಲ್ಯಾಂಬರ್ಟ್-ಸೇಂಟ್ ಲೂಯಿಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಕಾನ್ಸಾಸ್ ಸಿಟಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ.

ಮಿಸೌರಿಯ ಕಿರ್ಕ್ ವುಡ್ ನ ಆಮ್ ಟ್ರಾಕ್ ನಿಲ್ದಾಣ

ರೈಲು ಸಾರಿಗೆ[ಬದಲಾಯಿಸಿ]

ದೇಶದ ಮೂರು ಬಹಳ ಕಾರ್ಯನಿರತ ರೈಲ್ವೇ ಕೇಂದ್ರಗಳಲ್ಲಿ ಎರಡು ಮಿಸೌರಿಯಲ್ಲಿವೆ. ಕಾನ್ಸಾಸ್ ಸಿಟಿಯು BNSF ರೈಲ್ವೇ, ನಾರ್ಫೋಲ್ಕ್ ದಕ್ಷಿಣ ರೈಲ್ವೇ, ಕಾನ್ಸಾಸ್ ಸಿಟಿ ದಕ್ಷಿಣ ರೈಲ್ವೇ ಮತ್ತು ಯೂನಿಯನ್ ಪೆಸಿಫಿಕ್ ರೈಲ್ ರೋಡ್ ಗಳಿಗೆ ಪ್ರಮುಖ ರೈಲ್ವೇಮಾರ್ಗ ಕೇಂದ್ರವಾಗಿದೆ. ಕಾನ್ಸಾಸ್ ಸಿಟಿಯು ಅಮೆರಿಕದ ಸರಕು ಹೊರುವ ಎರಡನೆಯ ದೊಡ್ಡ ರೈಲ್ವೇ ಕೇಂದ್ರವಾಗಿದೆ. ಕಾನ್ಸಾಸ್ ಸಿಟಿಯಂತೆಯೇ, ಸೇಂಟ್ ಲೂಯಿಸ್ ಸಹ ರೈಲ್ ಮೂಲಕ ಸರಕು ಸಾಗಿಸುವ ಪ್ರಮುಖ ತಾಣವಾಗಿದೆ. ಕಾನ್ಸಾಸ್ ಸಿಟಿ, ಲಾ ಪ್ಲಾಟಾ, ಜೆಫರ್ಸನ್ ಸಿಟಿ, ಸೇಂಟ್ ಲೂಯಿಸ್, ಲೀ'ಸ್ ಸಮಿತ್, ಇಂಡಿಪೆಂಡೆನ್ಸ್, ವಾರೆನ್ಸ್ ಬರ್ಗ್, ಹರ್ಮನ್, ವಾಷಿಂಗ್ಟನ್, ಕಿರ್ಕ್ ವುಡ್, ಸೆಡಾಲಿಯಾ ಮತ್ತು ಪೋಪ್ಲಾರ್ ಬ್ಲಫ್ ಗಳಿಗೆ ಆಮ್ ಟ್ರಾಕ್ ಪ್ಯಾಸೆಂಜರ್ ಟ್ರೈನ್ ಗಳ ಸೌಲಭ್ಯವಿದೆ.

ಮಿಸೌರಿಯ ಏಕೈಕ ಹಗುರ ರೈಲ್/ಸಬ್ ವೇ ಕ್ರಮವು ಸೇಂಟ್ ಲೂಯಿಸ್ ಮೆಟ್ರೋಲಿಂಕ್ ಆಗಿದ್ದು ಇದು ಸೇಂಟ್ ಲೂಯಿಸ್ ನಗರವನ್ನು ಇಲಿನಾಯ್ಸ್ ನ ಹೊರಪ್ರದೇಶಗಳಿಗೂ ಮತ್ತು ಸೇಂಠ್ ಲೂಯಿಸ್ ಗ್ರಾಮಕ್ಕೂ ಸಂಪರ್ಕವೇರ್ಪಡಿಸುತ್ತದೆ. (ಟ್ರ್ಯಾಕ್ ಮೈಲಿಯ ಲೆಕ್ಕದಲ್ಲಿ) ಇದು ಅಮೆರಿಕದಲ್ಲಿನ ಬೃಹತ್ ರೈಲ್ವೇ ವ್ಯವಸ್ಥೆಗಳಲ್ಲಿ ಒಂದಾಗಿದೆ. 2007ರಲ್ಲಿ ಹಗುರ ರೈಲ್ ವ್ಯವಸ್ಥೆಗಾಗಿ ಕಾನ್ಸಾಸ್ ನಗರ ಪ್ರದೇಶದಲ್ಲಿ ಮೊದಲ ಹಂತದ ಯೋಜನೆಗಳನ್ನು ರೂಪಿಸಿಕೊಂಡರೂ, 2008ರಲ್ಲಿ ಮತದಾರರು ಈ ಯೋಜನೆಯನ್ನು ನಿರಾಕರಿಸಿದರು.

ಸೇಂಟ್ ಲೂಯಿಸ್ ನಲ್ಲಿರುವ ದ ಗೇಟ್ ವೇ ಮಲ್ಟಿಮೋಡಲ್ ಟ್ರಾನ್ಸ್ ಪೋರ್ಟೇಷನ್ ಸೆಂಟರ್ ರಾಜ್ಯದ ಬಲು ದೊಡ್ಡ ಚಟುವಟಿಕೆಯುಳ್ಳ ವಿವಿಧೋದ್ದೇಶ ಸಾರಿಗೆ ಕೇಂದ್ರವಾಗಿದೆ. ಅದು ಸೇಂಟ್ ಲೂಯಿಸ್ ನ ಪಟ್ಟಣದ ಹೊರದಿಕ್ಕಿನಲ್ಲಿರುವ ಐತಿಹಾಸಿಕ ಸೇಂಟ್ ಲೂಯಿಸ್ ಯೂನಿಯನ್ ಸ್ಟೇಷನ್ ಸಂಕೀರ್ಣದ ಪಕ್ಕದಲ್ಲಿದೆ ಅದು ನಗರದ ರೈಲ್ ವ್ಯವಸ್ಥೆಯಾದ ಸೇಂಟ್ ಲೂಯಿಸ್ ಮೆಟ್ರೋಲಿಂಕ್ ಮತ್ತು ಸ್ಥಳೀಯ ಬಸ್ ವ್ಯವಸ್ಥೆಯಾದ ಮೆಟ್ರೋಬಸ್, ಗ್ರೇಹೌಂಡ್, ಆಮ್ ಟ್ರಾಕ್ ಮತ್ತು ಸಿಟಿ ಟ್ಯಾಕ್ಸಿಗಳಿಗೆ ಸಂಪರ್ಕಸೇವೆ ಸಲ್ಲಿಸುವ ಮೂಲಕೇಂದ್ರ/ನಿಲ್ದಾಣವಾಗಿದೆ.

BNSF ರೈಲ್ವೇಗೆ ಸ್ಪ್ರಿಂಗ್ ಫೀಲ್ಡ್ ಕ್ರಿಯಾತ್ಮಕ ಕೇಂದ್ರವಾಗಿಯೇ ಉಳಿದಿದೆ.

ಫಾರೆಸ್ಟ್ ಪಾರ್ಕ್ ನಲ್ಲಿರುವ ಜಲಮಾರ್ಗ, ಸೇಂಟ್ ಲೂಯಿಸ್

ನದೀಮಾರ್ಗ[ಬದಲಾಯಿಸಿ]

ಮಿಸೌರಿಯ ಉದ್ದಕ್ಕೂ ಇರುವ ಮಿಸಿಸಿಪಿ ನದಿ ಮತ್ತು ಮಿಸೌರಿ ನದಿಗಳೆರಡೂ ವಾಣಿಜ್ಯರೀತ್ಯಾ ಜಲಯಾನಕ್ಕೆ ಯೋಗ್ಯವಾಗಿವೆ. ಮಿಸೌರಿ ನದಿಗೆ ಕಾಲುವೆಯನ್ನು ಕೊರೆದು ಮತ್ತು ನದಿ ಅಗಲವಾಗದ ರೀತಿ ದಂಡೆಗಳಿಗೆ ಕಲ್ಲು ಹೊದೆಸಲಾಯಿತು ಮತ್ತು ಮಿಸಿಸಿಪಿ ನದಿಗೆ ಹಲವಾರು ತಡೆಗಳನ್ನೂ, ಅಣೆಕಟ್ಟುಗಳನ್ನೂ ಕಟ್ಟಿ ಬಂಡೆಗಳನ್ನು ತಟಾಯಿಸಿ, ತನ್ಮೂಲಕ ನದಿಯನ್ನು ಆಳಗೊಳಿಸಲಾಯಿತು. ಮಿಸಿಸಿಪಿ ನದಿಯಲ್ಲಿನ ದೋಣಿಪ್ರಯಾಣಕ್ಕೆ ಸೇಂಟ್ ಲೂಯಿಸ್ ಪ್ರಮುಖ ತಾಣವಾಗಿದೆ.

ರಸ್ತೆಗಳು[ಬದಲಾಯಿಸಿ]

2009ನೆಯ ಇಸವಿಯ ಮಿಸೌರಿ ರಾಜ್ಯದ ಪರವಾನಗಿ ಪ್ಲೇಟ್

ಕೆಳಗೆ ಕಾಣಿಸಿದಂತಹ ಹಲವಾರು ಹೆದ್ದಾರಿಗಳು ರಾಜ್ಯದ ಉದ್ದಗಲಕ್ಕೂ ಮೈಚಾಚಿವೆ.

2004ರ ಅಂತ್ಯದಲ್ಲಿ ಜಾರಿಗೆ ತಂದ ತಿದ್ದುಪಡಿ ಮೂರರಂತೆ ಮಿಸೌರಿ ಸಾರಿಗೆ ಇಲಾಖೆಯು (ದ ಮಿಸೌರಿ ಡಿಪಾರ್ಟ್ ಮೆಂಟ್ ಆಫ್ ಟ್ರಾನ್ಸ್ಪೋರ್ಟೇಷನ್ ಅಥವಾ MoDOT) ತನ್ನ ಹಿತವಾದ, ಸುರಕ್ಷಿತವಾದ ಮತ್ತು ವೇಗವಾದ ರಸ್ತೆ ನಿರ್ಮಾಣ ಯೋಜನೆಯನ್ನು ಹಮ್ಮಿಕೊಂಡು, 2007ರ ಡಿಸೆಂಬರ್ ವೇಳೆಗೆ ಎಲ್ಲಾ ಹೆದ್ದಾರಿಗಳನ್ನೂ ಒಳ್ಳೆಯ ಸ್ಥಿತಿಗೆ ತರುವ2,200 miles (3,500 km) ಹವಣಿಕೆ ಹೊಂದಿತು. 2006 -2008 ರಲ್ಲಿ ರಸ್ತೆ ಆಕಸ್ಮಿಕದಲ್ಲಾಗುವ ಸಾವುಗಳು ಪ್ರತಿ ವರ್ಷವೂ ಕಡಿಮೇಯಾಗುತ್ತಾ ಬಂದಿದ್ದು, 2005ರಲ್ಲಿನ 1,257 ಮರಣಗಳಿಂದ 2006ರಲ್ಲಿ 1,096 ತಲುಪಿ, 2007ರಲ್ಲಿ 974ಕ್ಕೆ ತಗ್ಗಿ, 2008ರಲ್ಲಿ 941 ಸಾವುಗಳು ಮಾತ್ರ ಸಂಭವಿಸಿದವು.[೨೯]

ರಾಜ್ಯಾಂತರ ಮುಕ್ತ ಹೆದ್ದಾರಿಗಳು[ಬದಲಾಯಿಸಿ]

ಯುನೈಟೆಡ್ ಸ್ಟೇಟ್ಸ್ ನ ಮಾರ್ಗಗಳು[ಬದಲಾಯಿಸಿ]

ಉತ್ತರ-ದಕ್ಷಿಣ ಮಾರ್ಗಗಳು ಪೂರ್ವ-ಪಶ್ಚಿಮ ಮಾರ್ಗಗಳು

ಕಾನೂನು ಮತ್ತು ಸರ್ಕಾರ[ಬದಲಾಯಿಸಿ]

Missouri Government
Governor of Missouri Jay Nixon (D)
Lieutenant Governor of Missouri: Peter Kinder (R)
Missouri Attorney General: Chris Koster (D)
Missouri Secretary of State: Jason Kander (D)
Missouri State Auditor: Tom Schweich (R)
Missouri State Treasurer: Clint Zweifel (D)
Senior United States Senator: Claire McCaskill (D)
Junior United States Senator: Roy Blunt (R)

ಚೌಕಟ್ಟು[ಬದಲಾಯಿಸಿ]

ಈಗಿನ ಮಿಸೌರಿಯ ಸಂವಿಧಾನವು, ರಾಜ್ಯದ ನಾಲ್ಕನೆಯ ಸಂವಿಧಾನವಾಗಿದ್ದು, 1945ರಲ್ಲಿ ಜಾರಿಗೆ ಬಂದಿತು. ಸಂವಿಧಾನವು ಸರ್ಕಾರವು ಮೂರು ವಿಭಾಗಗಳನ್ನು ಹೊಂದಲು ಸಮ್ಮತಿಸುತ್ತದೆ: ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಕಾರಿ ವಿಭಾಗಗಳು. ಶಾಸಕಾಂಗ ವಿಭಾಗದಲ್ಲಿ ಎರಡು ವಿಂಗಡಣೆಗಳಿವೆ: ದ ಹೌಸ್ ಆಫ್ ರೆಪ್ರೆಸೆಂಟಿಟೀವ್ಸ್ (ಪ್ರತಿನಿಧಿಗಳ ಸದನ) ಮತ್ತು ದ ಸೆನೇಟ್(ಶಾಸನ ಸಭೆ) ಈ ವಿಂಗಡಿತ ವಿಭಾಗಗಳೆಲ್ಲಾ ಸೇರಿ ಮಿಸೌರಿ ಜನರಲ್ ಅಸೆಂಬ್ಲಿ ಆಗುತ್ತದೆ.

ಹೌಸ್ ಆಫ್ ರೆಪ್ರೆಸೆಂಟಿಟಿವ್ಸ್ ನಲ್ಲಿ 163 ಸದಸ್ಯರಿದ್ದು ಆ 163ರಲ್ಲಿ ಕಡೆಯ ದಶಕದ ಸೆನ್ಸಸ್ ನ ಆಧಾರದ ಮೇರೆಗೆ ಯಾವ ಪಂಗಡದವರು ಎಷ್ಟು ಸದಸ್ಯರಿರಬೇಕೆಂದು ನಿರ್ಧರಿಸಲಾಗುತ್ತದೆ. ಸೆನೇಟ್ ಸುಮಾರು ಸರಿಸಮನಾದ ಜನಸಂಖ್ಯೆಯನ್ನು ಹೊಂದಿರುವ ಜಿಲ್ಲೆಗಳಿಂದ ನಿಯಮಿಸಲ್ಪಟ್ಟ 34 ಸದಸ್ಯರನ್ನು ಒಳಗೊಂಡಿರುತ್ತದೆ. ನ್ಯಾಯಾಂದ ಇಲಾಖೆಯು ಸುಪ್ರೀಂ ಕೋರ್ಟ್ ಆಫ್ ಮಿಸೌರಿಯನ್ನೊಳಗೊಂಡಿದ್ದು, ಇದರಲ್ಲಿ ಏಳು ನ್ಯಾಯಾಧೀಶರುತ್ತಾರೆ, ಮಿಸೌರಿ ಕೋರ್ಟ್ ಆಫ್ ಅಪೀಲ್ಸ್ (ಒಂದ ಅಂತಸ್ಥಿತ (ಇಂಟರ್ಮೀಡಿಯೆಟ್) ಅಪೀಲು ಹಾಕಬಲ್ಲ ನ್ಯಾಯಾಲಯವು (ಅಪೆಲೇಟ್ ಕೋರ್ಟ್)ಮೂರು ಜಿಲ್ಲೆಗಳಿಗೆ ವಿಭಜಿತವಾಗಿದ್ದು, ಕಾನ್ಸಾಸ್ ಸಿಟಿ, ಸೇಂಟ್ ಲೂಯಿಸ್ ಮತ್ತು ಸ್ಪ್ರಿಂಗ್ ಫೀಲ್ಡ್ ಗಳಲ್ಲಿ ಈ ಸೌಲಭ್ಯವಿದ್ದು, 45 ಸರ್ಕ್ಯೂಟ್ ಕೋರ್ಟ್ ಗಳು ಸ್ಥಳೀಯ ಟ್ರಯಲ್ ಕೋರ್ಟ್ ಗಳಾಗಿ ಕಾರ್ಯ ಜರುಗಿಸುತ್ತವೆ. ಕಾರ್ಯಕಾರಿ ವಿಭಾಗಕ್ಕೆ ಮಿಸೌರಿಯ ರಾಜ್ಯಪಾಲರೇ ಮುಖಂಡರಾಗಿದ್ದು, ರಾಜ್ಯಾದ್ಯಂತ ಚುನಾಯಿತರಾದ ಇತರೆ ಐದು ಅಧಿಕಾರಿಗಳನ್ನು ಹೊಂದಿರುತ್ತದೆ. 2008ರ ಚುನಾವಣೆಯ ಫಲಿತವಾಗಿ ಒಬ್ಬರ ಹೊರತಾಗಿ ಮಿಸೌರಿ ರಾಜ್ಯದ ಎಲ್ಲಾ ಚುನಾಯಿತ ಅಧಿಕಾರಿಗಳೂ ಡೆಮೋಕ್ರಾಟ್ ಗಳೇ ಆಗಿದ್ದಾರೆ.

ರಾಜಕೀಯ ಮುನ್ಸೂಚನಾಘಂಟೆಯಾಗಿ ಪಡೆದ ಸ್ಥಾನ[ಬದಲಾಯಿಸಿ]

ಮಿಸೌರಿ ರಾಜ್ಯವು ಅಮೆರಿಕದ ರಾಜಕೀಯದ ಮುನ್ಸೂಚನಾಘಂಟೆಯೆಂದೇ ಬಹಳ ಜನರಿಂದ ಪರಿಗಣಿಸಲಾಗಿದೆ. ಈ ರಾಜ್ಯವು ಬೇರೆಲ್ಲಾ ರಾಜ್ಯಗಳಿಗಿಂತಲೂ ದೀರ್ಘಕಾಲದಿಂದಲೂ ಜಯಗಳಿಸುವ ಅಧ್ಯಕ್ಷೀಯಸ್ಥಾನಕ್ಕೆ ಸ್ಪರ್ಧಿಸಿದ ಅಭ್ಯರ್ಥಿಯನ್ನೇ ಬೆಂಬಲಿಸಿದ ದಾಖಲೆ ಇದೆ;1904ರಿಂದ ಇಲ್ಲಿಯವರೆಗೂ, ಎರಡು ಬಾರಿಯ ಹೊರತಾಗಿ ಈ ರಾಜ್ಯ ಬೆಂಬಲಿಸಿದವರೇ ಅಮೆರಿಕದ ಅಧ್ಯಕ್ಷರಾದರು - 1956ರಲ್ಲಿ ಇಲಿನಾಯ್ಸ್ರಾಜ್ಯಪಾಲ ಅಡ್ಲಾಯ್ ಸ್ಟೀವನ್ಸನ್ ಗೆ ಮತ ನೀಡಿದಾಗ ಜಯಗಳಿಸಿದವರು ಅಧ್ಯಕ್ಷ ಪೀಠದಲ್ಲಿದ್ದು ಸ್ಪರ್ಧಿಸಿದ್ದ ಕಾನ್ಸಾಸ್ಡ್ವೈಟ್ ಈಸೆನ್ ಹೋವರ್ ಮತ್ತು 2008ರಲ್ಲಿ ಅರಿಝೋನಾದ ಸೆನೇಟರ್ ಜಾನ್ ಮೆಕ್ಕೇಯ್ನ್ ಗೆ ಮತ ಚಲಾಯಿಸಿದಾಗ ರಾಷ್ಟ್ರಮಟ್ಟದಲ್ಲಿ ಜಯಗಳಿಸಿದವರು ಇಲಿನಾಯ್ಸ್ ನ ಸೆನೇಟರ್ ಬರಾಕ್ ಒಬಾಮಾ; ಈ ಎರಡೂ ಬಾರಿಯೂ ಗೆಲುವಿನ ಅಂತರವು ಬಹಳ ಕಡಿಮೆ ಇದ್ದಿತು.

ಹಿಂದಿನ ರಾಷ್ಟ್ರಪತಿ ಚುನಾವಣಾ ಫಲಿತಾಂಶಗಳು
ವರ್ಷ ರಿಪಬ್ಲಿಕನ್ ಡೆಮೋಕ್ರಾಟಿಕ್ ಇತರೆ ಪಕ್ಷಗಳು
2008 49.39% 1,445,814 49.25% 1,441,911 1.36% 39,889
2004 53.30% 1,455,713 46.10% 1,259,171 0.60% 16,480
2000 50.42% 1,189,924 47.08% 1,111,138 2.50% 58,830
1996 41.24% 890,016 47.54% 1,025,935 11.22% 242,114
1992 33.92% 811,159 44.07% 1,053,873 22.00% 526,238
1988 51.83% 1,084,953 47.85% 1,001,619 0.32% 6,656
1984 60.02% 1,274,188 39.98% 848,583 0.00% ಯಾವುದೂ ಇಲ್ಲ
1980 51.16% 1,074,181 44.35% 931,182 4.49% 94,461
1976 47.47% 927,443 51.10% 998,387 1.42% 27,770
1972 62.29% 1,154,058 37.71% 698,531 0.00% ಯಾವುದೂ ಇಲ್ಲ
1968 44.87% 811,932 43.74% 791,444 11.39% 206,126
1964 35.95% 653,535 50.92% 1,164,344 0.00% ಯಾವುದೂ ಇಲ್ಲ
1960 49.74% 962,221 50.26% 972,201 0.00% ಯಾವುದೂ ಇಲ್ಲ
1956 49.89% 914,289 50.11% 918,273 0.00% ಯಾವುದೂ ಇಲ್ಲ
1952 50.71% 959,429 49.14% 929,830 0.15% 2,803
1948 41.49% 655,039 58.11% 917,315 0.39% 6,274
1944 48.43% 761,524 51.37% 807,804 0.20% 3,146
1940 47.50% 871,009 52.27% 958,476 0.23% 4,244
1936 38.16% 697,891 60.76% 1,111,043 1.08% 19,701
1932 35.08% 564,713 63.69% 1,025,406 1.22% 19,775
1928 55.58% 834,080 44.15% 662,562 0.27% 4,079
1924 49.58% 648,486 43.79% 572,753 6.63% 86,719
1920 54.56% 727,162 43.13% 574,799 2.32% 30,839
1916 46.94% 369,339 50.59% 398,032 2.46% 19,398
1912 29.75% 207,821 47.35% 330,746 22.89% 159,999
1908 48.50% 347,203 48.41% 346,574 3.08% 22,150
1904 49.93% 321,449 46.02% 296,312 4.05% 26,100
1900 45.94% 314,092 51.48% 351,922 2.58% 17,642

ಲೇಯ್ಸೆಝ್-ಫೇಯ್ರ್ ಮದ್ಯ ಮತ್ತು ತಂಬಾಕು ಕಾನೂನುಗಳು[ಬದಲಾಯಿಸಿ]

ನಿಯಮಬದ್ಧ ಆಳ್ವಿಕೆಗೆ ಮಿಸೌರಿಯು ಜನತೆಯ ಧೋರಣೆಯು ಸಾಮಾನ್ಯವಾಗಿ "ದೃಢ, ಸಂಪ್ರದಾಯಬದ್ಧ, ಪರಿಶೀಲನಾತ್ಮಕ" ವಾಗಿರುವುದರಿಂದಲೇ ಈ ರಾಜ್ಯವು "ಷೋ ಮಿ ಸ್ಟೇಟ್" ಎಂಬ ಅನಧಿಕೃತ ಅಡ್ಡಹೆಸರನ್ನು ಪಡೆಯಲು ಕಾರಣವಾಯಿತು.[೩೦] ಹೀಗಾಗಿ, ಮತ್ತು ಮಿಸೌರಿಯು ಅಮೆರಿಕದ ಆಲ್ಕೋಹಾಲ್ ಮತ್ತು ತಂಬಾಕುಗಳನ್ನು ಅಧಿಕವಾಗಿ ಉತ್ಪಾದಿಸುವ ಅಮೆರಿಕದ ರಾಜ್ಯಗಳಲ್ಲಿ ಒಂದಾಗಿರುವುದರಿಂದ, ಮದ್ಯ ಮತ್ತು ತಂಬಾಕಿನ ಮೇಲಿನ ನಿಷೇಧವನ್ನು(ಹತೋಟಿಯನ್ನು) ಲೇಯ್ಸೆಝ್ ಫೇಯ್ರ್ (ಫ್ರೆಂಚ್ ಪದ-ಇರಲಿ ಬಿಡಿ ಅಥವಾ ಪರವಾಹ್ ಇಲ್ಲ)ಅಮೆರಿಕದಲ್ಲಿ ಇನ್ನೆಲ್ಲೂ ಕಾಣಬರದಷ್ಟು ಸಡಿಲವಾದ ರೀತಿಯಲ್ಲಿ ಅನುಷ್ಠಾನಗೊಳಿಸಲಾಗಿದೆ.

ಬಲು ದೊಡ್ಡ ಪ್ರಮಾಣದಲ್ಲಿ ಜರ್ಮನ್ ಪ್ರಯಾಣಿಕರು ಇಲ್ಲಿಗೆ ಭೇಟಿ ನೀಡುವುದರಿಂದಲೂ ಹಾಗೂ ಮದ್ಯೋತ್ಪಾದನಾ ಕೈಗಾರಿಕೆಗಳ ವೃದ್ಧಿಯಿಂದಲೂ, ಮಿಸೌರಿಉ ಇಡೀ ಯುನೈಟೆಡ್ ಸ್ಟೇಟ್ಸ್ ನ ಆಲ್ಕೋಹಾಲ್ ಕಾನೂನು ವ್ಯವಸ್ಥೆಯಲ್ಲಿ ಬಹಳ ಅನುಮತಿದಾಯಕ ನೀತಿಯನ್ನು ಅಳವಡಿಸಿಕೊಂಡಿದೆ. ಅದು ಎಂದೂ ರಾಜ್ಯಾದ್ಯಂತ ನಿಷೇಧವನ್ನು ಹೇರಲೇ ಇಲ್ಲ. ಮಿಸೌರಿಯ ಮತದಾರರು ಮೂರು ಬಾರಿ - 1910, 1912, ಮತ್ತು 1918 ರಲ್ಲಿ - ಮದ್ಯ ಮತ್ತು ತಂಬಾಕು ನಿಷೇಧ ಮಸೂದೆಯನ್ನು ತಿರಸ್ಕರಿಸಿದರು. 1934ರವರೆಗೂ ಮದ್ಯನಿಉಂತ್ರಣವು ಜಾರಿಗೆ ಬರಲಿಲ್ಲ. ಇಂದು ಮದ್ಯ ಸಂಬಂಧಿತ ನಿಯಮಗಳನ್ನು ರಾಜ್ಯಸರ್ಕಾರವು ನಿಯಂತ್ರಿಸುತ್ತಿದ್ದು, ಸ್ಥಳೀಯ ನ್ಯಾಯವ್ಯವಸ್ಥೆಗಳು ರಾಜ್ಯ ನಿಯಮಿಸಿದ ನಿಯಮಗಳನ್ನು ಉಲ್ಲಂಘಿಸುವಂತಿಲ್ಲ. ಮಿಸೌರಿಯ ರಾಜ್ಯಾದ್ಯಂತ ತೆರೆದ ಪಾತ್ರೆ ಕಾಯಿದೆ ಇಲ್ಲ ಅಥವಾ ಸಾರ್ವಜನಿಕ ಸ್ಥಳದಲ್ಲಿ ಕುಡಿಯಬಾರದೆಂದೇನಿಲ್ಲ, ಆಲ್ಕೋಬಾಲ್ ಸಂಬಂಧಿತ ನೀಲಿ ಕಾನೂನುಗಳಿಲ್ಲ, ಸ್ಥಳೀಯ ಆಯ್ಕೆಗಳಿಲ್ಲ, ಪ್ಯಾಕ್ ಮಾಡಿದಂತಹ ಮದ್ಯವನ್ನು ಮಾರಲು ನಿರ್ದಿಷ್ಟವಾದ ಸ್ಥಳಗಳಿರಬೇಕೆಂಬ ನಿಯಮವಿಲ್ಲ(ಆದ್ದರಿಂದ ಔಷಧಿ ಅಂಗಡಿಗಳಲ್ಲಿ ಮತ್ತು ಪೆಟ್ರೋಲ್ ಬಂಕ್ ಗಳಲ್ಲಿ ಕೂಡಾ ಯಾವುದೇ ವಿಧವಾದ ಮದ್ಯ ಮಾರಬಹುದಾಗಿದೆ)ಮತ್ತು ಆಲ್ಕೋಹಾಲ್ ಪ್ರಮಾಣದ ಆಧಾರದ ಮೇಲೆ ಮಾರಲು ಇರಬೇಕಾದ ವಿವಿಧ ಕಾನೂನಿನ ಪ್ರಭೇಧಗಳೂ ಇಲ್ಲ. ಅಪ್ರಾಪ್ತ ವಯಸ್ಕರು ಮದ್ಯಸೇವನೆ ಮಾಡಬಾರದು ಎಂಬ ಯಾವುದೇ ಕಾನೂನು ಮಿಸೌರಿಯಲ್ಲಿ ಇಲ್ಲ.(ಮದ್ಯವನ್ನು ಹೊಂದಿರಬಾರದೆಂಬುದಿದೆ)ಅಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಸೇವನೆ ಮಾಡುವವರನ್ನು ಬಂಧಿಸುವುದನ್ನು ಮತ್ತು ಅವರಿಗೆ ಅಪರಾಧಗೈದರೆಂದು ದಂಡ ವಿಧಿಸುವುದನ್ನು ಮಿಸೌರಿಯ ಕಾನೂನು ನಿಷೇಧಿಸುತ್ತದೆ.[೩೧] ಯಾವುದೇ ಪ್ರಾಂತ್ಯವು ಮದ್ಯನಿಷೇಧ ಹೊರಿಸುವುದನ್ನು ಮಿಸೌರಿ ಕಾಯಿದೆಯು ನಿಷೇಧಿಸುತ್ತದೆ.[೩೨] ಪಾಲಕರು ಮತ್ತು ಪೋಷಕರು ತಮ್ಮ ಮಕ್ಕಳಿಗೆ ಮದ್ಯ ನೀಡುವುದನ್ನು ಮಿಸೌರಿ ಕಾಯಿದೆಯು ಸಂಪೂರ್ಣವಾಗಿ ಅಂಗೀಕರಿಸುತ್ತದೆ.[೩೩] 21 ವಯಸ್ಸಿನ ಮೇಲ್ಪಟ್ಟವರು ಮದ್ಯವನ್ನು ತೆರೆದ ಪಾತ್ರಗಳಿಂದ ಬೀದಿಗಳಲ್ಲೇ ಕುಡಿಯಲು ಯಾವುದೇ ತಡೆ ಒಡ್ಡದಂತಹ ಕಾಯಿದೆಯನ್ನು ರಾಜ್ಯಸರ್ಕಾರವೇ ಜಾರಿಗೊಳಿಸಿರುವಂತಹ ಅಮೆರಿಕದ ಕೆಲವೇ ಸ್ಥಳಗಳಲ್ಲಿ ಕಾನ್ಸಾಸ್ ಸಿಟಿಯ ಪವರ್ ಎಂಡ್ ಲೈಟ್ ಡಿಸ್ಟ್ರಿಕ್ಟ್ ಸಹ ಒಂದು.(ಮದ್ಯವು ಪ್ಲಾಸ್ಟಿಕ್ ಲೋಟದಲ್ಲಿಯೇ ಇರಬೇಕೆಂಬುದೊಂದೇ ನಿಯಮ).[೩೪]

ಇದನ್ನೂ ನೋಡಿ: ಮಿಸೌರಿಯ ಧೂಮಪಾನ ಕಾಯಿದೆಗಳು

ತಂಬಾಕಿನ ವಿಚಾರವನ್ನು ತೆಗೆದುಕೊಂಡರೆ, ಜೂನ್ 2009ರಂತೆ ಯುನೈಟೆಡ್ ಸ್ಟೇಟ್ಸ್ ನಲ್ಲಿ ಸಿಗರೇಟ್ ನ ಮೇಲೆ ವಿಧಿಸುವ ಸುಂಕದ ಭಾರವು ದೇಶದಲ್ಲೇ ಎರಡನೆಯ ಅತಿ ಕಡಿಮೆ ಪ್ರಮಾಣದ್ದಾಗಿದ್ದು (ಇದಕ್ಕಿಂತಲೂ ಕಡಿಮೆಯಿರುವುದು ದಕ್ಷಿಣ ಕೆರೋಲಿನಾದಲ್ಲಿ ಮಾತ್ರ) ಪ್ಯಾಕ್[೩೫] ಒಂದರ ಮೇಲೆ ಕೇವಲ 17 ಸೆಂಟ್ ಗಳ ಸುಂಕ ತೆರಬೇಕಾಗಿದ್ದು, 2002 ಮತ್ತು 2006ರಲ್ಲಿ ಮತದಾರರೂ ಸಹ ಸುಂಕದ ಪ್ರಮಾಣ ಹಾಗೆಯೇ ಇರಲಿ ಎಂದು ಮತ ಚಲಾಯಿಸಿದರು.[೩೬] 2007ರಲ್ಲಿ ಫೋರ್ಬ್ಸ್ ಮಿಸೌರಿಯ ಬೃಹತ್ ಮೆಟ್ರೋಪಾಲಿಟನ್ ನಗರವಾದ ಸೇಂಟ್ ಲೂಯಿಸ್ ಇಡೀ ಅಮೆರಿಕದಲ್ಲಿ ಈ ನಗರವೇ "ಧೂಮಪಾನಿಗಳಿಗೆ ಅತ್ಯುತ್ತಮವಾದ ನಗರ"ವೆಂದು ಹೆಸರಿಸಿತು.[೩೭]ಸೇಂಟರ್ಸ್ ಆಫ್ ಡಿಸೀಸ್ ಕಂಟ್ರೋಲ್ ಎಂಡ್ ಪ್ರಿವೆನ್ಷನ್ನ ಪ್ರಕಾರ 2008ರಲ್ಲಿ ಮಿಸೌರಿಯು ಅಮೆರಿಕದ ಅತಿ ಹೆಚ್ಚು ಧೂಮಪಾನ ಮಾಡುವವರ ನಗರವೆಂಬ ಪಟ್ಟಿಯಲ್ಲಿ ನಾಲ್ಕನೆಯ ಸ್ಥಾನದಲ್ಲಿದ್ದು, ಅದರ 24.5% ವಯಸ್ಕರು ಧೂಮಪಾನಿಗಳಾಗಿದ್ದರು.[೩೮] ಮಿಸೌರಿಯಲ್ಲಿ ತಂಬಾಕನ್ನು ಕೊಳ್ಳಲು ಮತ್ತು ವಿತರಿಸಲು ಕಡಿಮೆಯೆಂದರೆ 18 ವರ್ಷ ವಯಸ್ಸಾಗಿರಬೇಕೆಂಬ ನಿಯಮವಿದ್ದರೂ, ಖಾಸಗಿ ಜಾಗಗಳಲ್ಲಿ ಕುಟುಂಬದ ಸದಸ್ಯರು 18ಕ್ಕಿಂತಲೂ ಚಿಕ್ಕವರಿಗೂ ತಂಬಾಕಿನ ಉತ್ಪನ್ನಗಳನ್ನು ವಿತರಿಸಬಹುದಾಗಿದೆ.[೩೯] ಮಿಸೌರಿ ಜನರಲ್ ಅಸೆಂಬ್ಲಿಯ ಮುಂದೆ ಯಾವುದೇ ಧೂಮಪಾನ ನಿಷೇಧದ ಬಗ್ಗೆ ಗಂಭೀರವಾದ ಪ್ರಸ್ತಾಪವು ಎಂದೂ ನಡೆದಿರದಿದ್ದರೂ, ಅಕ್ಟೋಬರ್ 2008ರಲ್ಲಿ ರಾಜ್ಯಾದ್ಯಂತ ನಡೆಸಿದ ಒಂದು ಸಮೀಕ್ಷೆಯಲ್ಲಿ ಮಿಸೌರಿಯ ಆರೋಗ್ಯ ಮತ್ತು ಹಿರಿಯ ಸೇವಾ ಇಲಾಖೆಯು ಮಿಸೌರಿಯ ಕೇವಲ 27.5%ರಷ್ಟು ಜನರು ಮಾತ್ರ ರಾಜ್ಯಾದ್ಯಂತ ಎಲ್ಲಾ ಬಾರ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಧೂಮಪಾನ ನಿಷೇಧವಿರಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದರೆಂಬುದನ್ನು ಕಂಡುಕೊಂಡಿತು.[೪೦] ಬಾರ್ ಗಳು, 50 ಜನಕ್ಕಿಂತಲೂ ಕಡಿಮೆ ಜನರಿಗೆ ಆಸನ ನೀಡುವ ಸಾಮರ್ಥ್ಯವಿರುವ ರೆಸ್ಟೋರೆಂಟ್ ಗಳು, ಬೋಲಿಂಗ್ ಆಲೀಗಳು ಮತ್ತು ಬಿಲಿಯರ್ಡ್ಸ್ ಪಾರ್ಲರ್ ಗಳಲ್ಲಿ ಧೂಮಪಾನ ಮಾಡಲು ಅನುಮತಿ ನೀಡಿರುವ ಮಿಸೌರಿ ರಾಜ್ಯವು ಆಯಾ ಸ್ಥಳಗಳು ಧೂಮಪಾನದ ಬಗ್ಗೆ ತಮ್ಮದೇ ಆದ ನಿಲುವನ್ನು ಹೊಂದಲೂ ಬೇಷರತ್ತಾಗಿ ಅನುಮತಿ ನೀಡಿದೆ.[೪೧]

ಅಲ್ಲದೆ, ಯಾವುದೇ ವ್ಯಕ್ತಿಯು, ಕಾನೂನುರೀತ್ಯಾ, ತಾನು ಕೆಲಸದ ಮೇಲಿಲ್ಲದಿರುವ ವೇಳಯಲ್ಲಿ, ಧೂಮಪಾನ ಮಾಡಿದ ಅಥವಾ ಕುಡಿದನೆಂಬ ಕಾರಣದಿಂದ, ಆ ವ್ಯಕ್ತಿಗೆ ಕೆಲಸ ಕೊಡದಿದ್ದರೆ, ಕೆಲಸದಿಂದ ವಜಾ ಮಾಡಿದರೆ, ಅಥವಾ ಅಂತಹ ವ್ಯಕ್ತಿಗೆ ಉದ್ಯೋಗ ನೀಡಿದವನು ಇನ್ನಾವುದಾದರೂ ತೊಂದರೆ ನೀಡಿದರೆ ಅಂತಹ ಕೃತ್ಯಗಳನ್ನು "ತಪ್ಪಾದ ಉದ್ಯೋಗ ನೀತಿ"ಯೆಂದು ಪರಿಗಣಿಸಲಾಗುತ್ತದೆ.[೪೨]

ಗ್ರಾಮಗಳು[ಬದಲಾಯಿಸಿ]

ಮಿಸೌರಿ 114 ಗ್ರಾಮಗಳು ಮತ್ತು ಒಂದು ಸ್ವತಂತ್ರ ನಗರ (ಸೇಂಟ್ ಲೂಯಿಸ್)ವನ್ನು ಹೊಂದಿದೆ.

ಅಳತೆಯ ರೀತ್ಯಾ ಬಹು ದೊಡ್ಡ ಗ್ರಾಮವು ಟೆಕ್ಸಾಸ್ ಕೌಂಟಿ(1,179 ಚದರ ಮೈಲಿಗಳು)ಯಾಗಿದ್ದು, ಎರಡನೆಯ ಸ್ಥಾನವನ್ನು ಷಾನನ್ ಕೌಂಟಿ(1,004 ಚದರ ಮೈಲಿಗಳು) ಅಲಂಕರಿಸಿದೆ ಎಲ್ಲಕ್ಕಿಂತಲೂ ಕಿರಿದಾದುದು ವರ್ತ್ ಕೌಂಟಿ (266 ಚದರ ಮೈಲಿಗಳು). ಸ್ವತಂತ್ರ ನಗರವಾದ ಸೇಂಟ್ ಲೂಯಿಸ್ ಕೇವಲ62 square miles (160 km2) ವಿಸ್ತೀರ್ಣ ಹೊಂದಿದೆ. ಸೇಂಟ್ ಲೂಯಿಸ್ ಮಿಸೌರಿಯ ಅತಿ ಹೆಚ್ಚು ಜನಸಂಖ್ಯೆಯುಳ್ಳ(ಪ್ರತಿ ಚದರ ಮೈಲಿಗೆ 5,724.7 ಜನ)ಪ್ರದೇಶವಾಗಿದೆ

ಜನಸಂಖ್ಯಾ ಪ್ರಮಾಣದ ಪ್ರಕಾರ (2008ರ ಜನಗಣತಿಯ ಅಂದಾಜು) ಬಹು ದೊಡ್ಡ ಗ್ರಾಮವು ಸೇಂಟ್ ಲೂಯಿಸ್ ಗ್ರಾಮವಾಗಿದ್ದು(668,417 ನಿವಾಸಿಗಳು),ಎರಡನೆಯ ಸ್ಥಾನದಲ್ಲಿ ಜ್ಯಾಕ್ಸನ್ ಗ್ರಾಮ(668,417 ನಿವಾಸಿಗಳು), ಮೂರನೆಯ ಸ್ಥಾನದಲ್ಲಿ ಸೇಂಟ್ ಲೂಯಿಸ್ (354,361),ಇದ್ದು ನಾಲ್ಕನೆಯ ಸ್ಥಾನವನ್ನು ಸೇಂಟ್ ಚಾರ್ಲ್ಸ್(349,407)ಪಡೆದಿದೆ. ವರ್ತ್ ಗ್ರಾಮವು ಕೇವಲ ೨೦೩೯ ನಿವಾಸಿಗಳನ್ನು ಹೊಂದಿದ್ದು ಬಹಳ ಕಡಿಮೆ ಜನಸಂಖ್ಯೆಯುಳ್ಳ ಗ್ರಾಮವಾಗಿದೆ.

ಪ್ರಮುಖ ನಗರಗಳು ಮತ್ತು ಪಟ್ಟಣಗಳು[ಬದಲಾಯಿಸಿ]

ಜೆಫರ್ಸನ್ ಸಿಟಿಯು ಮಿಸೌರಿಯ ರಾಜಧಾನಿ.

ಮಿಸೌರಿಯ ಐದು ಬೃಹತ್ ನಗರಗಳೆಂದರೆ ಕಾನ್ಸಾಸ್ ಸಿಟಿ, ಸೇಂಟ್ ಲೂಯಿಸ್, ಸ್ಪ್ರಿಂಗ್ ಫೀಲ್ಡ್, ಇಂಡಿಪೆಂಡೆನ್ಸ್ ಮತ್ತು ಕೊಲಂಬಿಯಾ.[೪೩]

ಸೇಂಟ್ ಲೂಯಿಸ್ ಮಿಸೌರಿಯ ಅತಿ ದೊಡ್ಡ ಮೆಟ್ರೋಪಾಲಿಟನ್ ಪ್ರದೇಶದ ಪ್ರಮುಖ ನಗರವಾಗಿದ್ದು, ಹದಿನೇಳು ಗ್ರಾಮಗಳನ್ನೂ ಮತ್ತು ಒಂದು ಸ್ವತಂತ್ರ ನಗರವಾದ ಸೇಂಟ್ ಲೂಯಿಸ್ ಅನ್ನೂ ಒಳಗೊಂಡಿದೆ; ಆ ಗ್ರಾಮಗಳಲ್ಲಿ ಎಂಟು ಇಲಿನಾಯ್ಸ್ ರಾಜ್ಯದಲ್ಲಿದೆ. 2008ರಲ್ಲಿ ಗ್ರೇಟರ್ ಸೇಂಟ್ ಲೂಯಿಸ್ ರಾಷ್ಟ್ರದ 18ನೆಯ ಅತಿ ದೊಡ್ಡ ಮೆಟ್ರೋಪಾಲಿಟನ್ ಪ್ರದೇಶವಾಗಿದ್ದು 2.81 ಮಿಲಿಯನ್ ಜನಸಂಖ್ಯೆ ಹೊಂದಿತ್ತು. ಆದರೆ, ಒಟ್ಟುಗೂಡಿಸಿದ ಅಂಕಿ-ಅಂಶ ಪ್ರದೇಶವನ್ನು ಗಣನೆಗೆ ತೆಗೆದುಕೊಂಡು ಲೆಕ್ಕ ಹಾಕಿದರೆ, ಅದು 16ನೆಯ ಅತಿ ದೊಡ್ಡ ಮೆಟ್ರೋಪಾಲಿಟನ್ ಪ್ರದೇಶವೆಂದಾಗಿ 2.88 ಮಿಲಿಯನ್ ಜನರನ್ನು ಹೊಂದಿರುವುದಾಗಿತ್ತು. ಮಿಸೌರಿಯ ಸೇಂಟ್ ಲೂಯಿಸ್ ಮೆಟ್ರೋ ಪ್ರದೇಶವು ಒಳಗೊಂಡ ಕೆಲವು ಪ್ರಮುಖ ನಗರಗಳೆಂದರೆ ಸೇಂಟ್ ಚಾರ್ಲ್ಸ್, ಸೇಂಟ್ ಪೀಟರ್ಸ್, ಫ್ಲಾರಿಸ್ಸಾಂಟ್, ಚೆಸ್ಟರ್ ಫೀಲ್ಡ್, ಕ್ರೀವ್ ಕೋಯರ್, ಮೇರಿಲ್ಯಾಂಡ್ ಹೈಟ್ಸ್, ಓಫಾಲನ್, ಕ್ಲೇಟನ್, ಬಾಲ್ವಿನ್ ಮತ್ತು ಯೂನಿವರ್ಸಿಟಿ ಸಿಟಿ.

ಕಾನ್ಸಾಸ್ ಸಿಟಿಯು ಕಾನ್ಸಾಸ್ ಸಿಟಿ ಮೆಟ್ರೋಪಾಲಿಟನ್ ಸ್ಟಾಟಿಸ್ಟಿಕಲ್ ಏರಿಯಾದ ಹದಿನೈದು ಗ್ರಾಮಗಳನ್ನೊಳಗೊಂಡ ಪ್ರಮುಖ ನಗರವಾಗಿದ್ದು, ಕಾನ್ಸಾಸ್ ರಾಜ್ಯದಲ್ಲಿ ಆರು ಗ್ರಾಮಗಳನ್ನು ಒಳಗೊಂಡಂತೆ ಮಿಸೌರಿಯ ಎಲ್ಲಕ್ಕಿಂತಲೂ ದೊಡ್ಡ ನಗರವಾಗಿದೆ. 2008ರಲ್ಲಿ ಅದು ದೇಶದಲ್ಲೇ 29ನೆಯ ದೊಡ್ಡ ಮೆಟ್ರೋಪಾಲಿಟನ್ ಪ್ರದೇಶವೆಂದು ಪರಿಗಣಿಸಲಾಗಿದ್ದು, 2.002 ಮಿಲಿಯನ್ ಜನಸಂಖ್ಯೆಯನ್ನು ಹೊಂದಿತ್ತು. ಮಿಸೌರಿಯ ಕಾನ್ಸಾಸ್ ಸಿಟಿ ಮೆಟ್ರೋ ಪ್ರದೇಶದಲ್ಲಿ ಕಾಣಬರುವ ಕೆಲವು ಪ್ರಮುಖ ನಗರಗಳೆಂದರೆ ಇಂಡಿಪೆಂಡೆನ್ಸ್, ಲೀ'ಸ್ ಸಮಿತ್, ಬ್ಲೂ ಸ್ಪ್ರಿಂಗ್ಸ್, ರೇಟೌನ್, ಲಿಬರ್ಟಿ ಮತ್ತು ಗ್ಲಾಡ್ ಸ್ಟೋನ್.

ಬ್ರಾನ್ಸನ್ ವಾಯುವ್ಯ ಮಿಸೌರಿಯ ಒಝಾರ್ಕ್ಸ್ ನಲ್ಲಿದ್ದು ಪ್ರವಾಸಿಗರನ್ನು ಆಕರ್ಷಿಸುವ ತಾಣವಾಗಿದೆ.

ಶಿಕ್ಷಣ[ಬದಲಾಯಿಸಿ]

ಮಿಸೌರಿ ರಾಜ್ಯ ಶಿಕ್ಷಣ ಮಂಡಳಿ[ಬದಲಾಯಿಸಿ]

ಮಿಸೌರಿ ರಾಜ್ಯ ಶಿಕ್ಷಣ ಮಂಡಳಿ(ದ ಮಿಸೌರಿ ಸ್ಟೇಟ್ ಬೋರ್ಡ್ ಆಫ್ ಎಜುಕೇಷನ್)ಗೆ ಮಿಸೌರಿಯ ರಾಜ್ಯದ ಸಕಲ ಸಾರ್ವಜನಿಕ ಶಿಕ್ಷಣದ ಮೇಲಿನ ಸಾಮಾನ್ಯ ಅಧಿಕಾರ ಹೊಂದಿದೆ. ಅದು ಮಿಸೌರಿಯ ರಾಜ್ಯಪಾಲರಿಂದ ನಿಯೋಜಿಸಲ್ಪಟ್ಟ ಮತ್ತು ಸೆನೇಟ್ ನಿಂದ ದೃಢೀಕರಿಸಲ್ಪಟ್ಟ ಎಂಟು ನಾಗರಿಕರಿಂದ ಕೂಡಿರುತ್ತದೆ.

ಯೂನಿವರ್ಸಿಟಿ ಆಫ್ ಮಿಸೌರಿಯ ಕ್ಯಾಂಪಸ್ ನಲ್ಲಿರುವ ಜೆಸ್ಸೆ ಹಾಲ್ ಮತ್ತು ಫ್ರಾನ್ಸಿಸ್ ಕ್ವಾಡ್

ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು[ಬದಲಾಯಿಸಿ]

ನಿಯಮ 167.031 ರ ಪ್ರಕಾರ ಏಳರಿಂದ ಹದಿನೇಳು ವಯಸ್ಸಿನವರೆಗೆ ಶಿಕ್ಷಣವು ಕಡ್ಡಾಯವಾಗಿದ್ದು ಆ ನಿಯಮ 167.031, RSMo ಯಾವುದೇ ಮಾತಾಪಿತೃ ಅಥವಾ ಪಾಲಕ ಅಥವಾ ಇತರೆ ವ್ಯಕ್ತಿಯು, 7ನೆಯ ವಯಸ್ಸಿನಿಂದ ಆ ಜಿಲ್ಲೆಯ ಕಡ್ಡಾಯ ಹಾಜರಾತಿಯ ವಯಸ್ಸಿನವರೆಗಿನ ಮಗುವನ್ನು ನೋಡಿಕೊಳ್ಳುವ ಅಧಿಕಾರ ಅಥವಾ ಸುಪರ್ದನ್ನು ಹೊಂದಿದ್ದಲ್ಲಿ, ಆ ಮಗುವು ಸಾರ್ವಜನಿಕ, ಖಾಸಗಿ, ಕ್ರೈಸ್ತಮತಬೋಧಕ ಶಾಲೆ, ಮನೆಯಲ್ಲೇ ನಡೆಸುವ ಶಾಲೆ ಅಥವಾ ಈ ಶಾಲೆಗಳೆಲ್ಲದುದರ ವಿವಿಧ ಸಂಯೋಜನೆಗಳಲ್ಲಿ ಶಾಲಾವರ್ಷಗಳ ಪೂರ್ಣಾವಧಿ ಶಿಕ್ಷಣ ಪಡೆಯಲೋಸುಗ ಅದನ್ನು ಸೇರಿಸುವುದಲ್ಲದೆ ಮಗುವು ಶಾಲೆಗೆ ಹಾಜರಾಗುತ್ತಿರುವುದರ ಬಗ್ಗೆ ಕಡ್ಡಾಯವಾಗಿ ಖಾತ್ರಿಪಡಿಸಿಕೊಳ್ಳುತ್ತಿರಬೇಕು ಎಂದು ನಿರ್ದಿಷ್ಟವಾಗಿ ಸಾರುತ್ತದೆ.

"ಜಿಲ್ಲೆಯ ಮೇರೆಗೆ ಕಡ್ಡಾಯ ಹಾಜರಾತಿ ವಯಸ್ಸು" ಎಂದರೆ 17ವರ್ಷ ವಯಸ್ಸು ಅಥವಾ, ಮಿಕ್ಕೆಲ್ಲಾ ಸಂದರ್ಭಗಳಲ್ಲಿ, ಪ್ರೌಢಶಾಲಾ ಪದವಿ ಗಳಿಸುವತ್ತ 16 ಯಶಸ್ವೀ ಘಟ್ಟಗಳನ್ನು ಮುಟ್ಟಿರುವುದು ಎಂದರ್ಥ. 5ರಿಂದ 7ರವರೆಗಿನ ಮಕ್ಕಳನ್ನು ಶಾಲೆಗೆ ಸೇರಿಸುವ ಅಗತ್ಯವಿಲ್ಲ. ಆದರೆ, ಆ ಮಕ್ಕಳು ಶಾಲೆಗೆ ಸೇರಿಸಲ್ಪಟ್ಟಿದ್ದಲ್ಲಿ ಅವರ ಮಾತಾಪಿತೃಗಳು, ಪಾಲಕರು ಅಥವಾ ಪೋಷಕರು ಮಕ್ಕಳು ಶಾಲೆಗೆ ಹೋಗುತ್ತಿರುವುದನ್ನು ಖಾತ್ರಿ ಮಾಡಿಕೊಳ್ಳಬೇಕು. ಮಿಸೌರಿಯ ಶಾಲೆಗಳನ್ನು ಸಾಮಾನ್ಯವಾಗಿ, ಅದರೆ ವಿಶೇಷತಃ ಅಲ್ಲದೆ,ಪ್ರಾಥಮಿಕ ಮತ್ತು ಪ್ರೌಢಶಿಕ್ಷಣಗಳಲ್ಲಿ ಮೂರು ಹಂತಗಳಾಗಿ ವಿಂಗಡಿಸಲಾಗಿದೆ:ಪ್ರಾಥಮಿಕ ಶಾಲೆ, ಮಾಧ್ಯಮಿಕ ಶಾಲೆ ಅಥವಾ ಕಿರಿಯ ಪ್ರೌಢಶಾಲೆ ಮತ್ತು ಪ್ರೌಢಶಾಲೆ. ಸಾರ್ವಜನಿಕ ಶಿಕ್ಷಣ ಪದ್ಧತಿಯು ಕಿಂಡರ್ ಗಾರ್ಟನ್ ನಿಂದ 12ನೆಯ ತರಗತಿಯವರೆಗೆ ಇರುತ್ತದೆ. ಜಿಲ್ಲಾ ಪ್ರದೇಶಗಳು ಆಗಾಗ್ಗೆ ಸಂಕೀರ್ಣವಾಗಿ ನಿರ್ಮಿತವಾಗಿರುತ್ತವೆ. ಕೆಲವೊಮ್ಮೆ, ಒಂದು ಜಿಲ್ಲೆಯ ಪ್ರಾಥಮಿಕ, ಮಾಧ್ಯಮ ಮತ್ತು ಕಿರಿಯ ಪ್ರೌಢಶಾಲೆಯು ಇನ್ನೊಂದು ಜಿಲ್ಲೆಯ ಪ್ರೌಢಶಾಲೆಗೆ ಪೂರಕವಾಗಿರುತ್ತದೆ. ಪ್ರೌಢಶಾಲಾ ಅಥ್ಲೆಟಿಕ್ಸ್ ಮತ್ತು ಸ್ಪರ್ಧೆಗಳನ್ನು ಮಿಸೌರಿ ಸ್ಟೇಟ್ ಹೈ ಸ್ಕೂಲ್ ಆಕ್ಟಿವಿಟೀಸ್ ಅಸೋಸಿಯೇಷನ್ ಅಥವಾ MSHSAA ನಿರ್ವಹಿಸುತ್ತದೆ.

ಮನೆಯಲ್ಲೇ ಶಿಕ್ಷಣ ನೀಡುವುದು ಮಿಸೌರಿಯಲ್ಲಿ ಕಾನೂನುಬದ್ಧವಾಗಿದ್ದು, ಕಡ್ಡಾಯ ಶಿಕ್ಷಣವನ್ನು ಪಾಲಿಸುವುದಕ್ಕೆ ಈ ಮಾರ್ಗವನ್ನೂ ಅನುಸರಿಸಬಹುದಾಗಿದೆ. ಅದನ್ನು ರಾಜ್ಯದ ಪ್ರಾಥಮಿಕ ಅಥವಾ ಪ್ರೌಢ ಶಿಕ್ಷಣ ಇಲಾಖೆಯವರು ಗಮನಿಸುವುದೂ ಇಲ್ಲ, ನಿಯಂತ್ರಿಸುವುದೂ ಇಲ್ಲ.[೪೪]

ಒಂದು ಬದಲಿ ಶಿಕ್ಷಣ ಯೋಜನೆಯನ್ನು ಮಿಸೌರಿ ಸ್ಕಾಲರ್ಸ್ ಅಕಾಡೆಮಿಯು ಹಮ್ಮಿಕೊಂಡು ಮಿಸೌರಿ ರಾಜ್ಯದ ಪ್ರತಿಭಾನ್ವಿತ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪಠ್ಯೇತರ ಕಲಿಕೆಯ ಅನುಭವವನ್ನು ನೀಡಲಾರಂಭಿಸಿತು. ಅಧಿಕೃತ MSA ವೆಬ್ ಸೈಟ್ ಅಕಾಡೆಮಿಯ ಗುರಿಗಳನ್ನು ವಿವರಿಸುತ್ತಾ "ಶಿಕ್ಷಣ ಕ್ಷೇತ್ರದ ೆಲ್ಲಾ ಸ್ತರಗಳಲ್ಲೂ ಔನ್ನತ್ಯವನ್ನು ಹೊಂದಬೇಕೆಂಬ ಮಿಸೌರಿಯ ಹಂಬಲವನ್ನು ಅಕಾಡೆಮಿಯು ಪ್ರತಿಬಿಂಬಿಸುತ್ತದೆ. ಮಿಸೌರಿಯ ಪ್ರತಿಭಾನ್ವಿತ ಯುವಕರಿಗೆ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಕಂಡುಕೊಳ್ಳಲು ಪೂರಕವಾದ ವೈಯಕ್ತಿಕ ಅಭಿವೃದ್ಧಿ ಮತ್ತು ಕಲಿಯುವಿಕೆಗೆ ವಿಶೇಷ ಅವಕಾಶಗಳನ್ನು ನೀಡಬೇಕೆಂಬ ಚಿಂತನೆಯ ಮೇರೆಗೆ ಈ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ"ಎನ್ನುತ್ತದೆ.

ಕಾಲೇಜ್ ಗಳು ಮತ್ತು ವಿಶ್ವವಿದ್ಯಾಲಯಗಳು[ಬದಲಾಯಿಸಿ]

ಯೂನಿವರ್ಸಿಟಿ ಆಫ್ ಮಿಸೌರಿ ಸಿಸ್ಟಮ್ ಮಿಸೌರಿಯ ರಾಜ್ಯಾದ್ಯಂತ ಇರುವ ಸಾರ್ವಜನಿಕ ವಿಶ್ವವಿದ್ಯಾಲಯದ ಮಾದರಿಯದಾಗಿದ್ದು, ಇದರ ಪ್ರಮುಖ ಸಂಸ್ಥೆ ಹಾಗೂ ರಾಜ್ಯದ ಅತಿ ದೊಡ್ಡ ವಿಶ್ವವಿದ್ಯಾಲಯವು ಕೊಲಂಬಿಯಾದ ಯೂನಿವರ್ಸಿಟಿ ಆಫ್ ಮಿಸೌರಿ ಆಗಿದೆ. ಈ ವ್ಯವಸ್ಥೆಯಲ್ಲಿರುವ ಇತರೆ ವಿಶ್ವವಿದ್ಯಾಲಯಗಳೆಂದರೆ ಯೂನಿವರ್ಸಿಟಿ ಆಫ್ ಮಿಸೌರಿ-ಕಾನ್ಸಾಸ್ ಸಿಟಿ, ಯೂನಿವರ್ಸಿಟಿ ಆಫ್ ಮಿಸೌರಿ-ಸೇಂಟ್ ಲೂಯಿಸ್ ಮತ್ತು ಮಿಸೌರಿ ಯೂನಿವರ್ಸಿಟಿ ಆಫ್ ಸೈನ್ಸ್ ಎಂಡ್ ಟೆಕ್ನಾಲಜಿ. ಮಿಸೌರಿಯ "ಪ್ರಮುಖ ಮುಕ್ತ ಕಲೆ ಮತ್ತು ವಿಜ್ಞಾನ ವಿಶ್ವವಿದ್ಯಾಲಯ"[೪೫][೪೬] ವಾದ ಟ್ರೂಮನ್ ಸ್ಟೇಟ್ ಯೂನಿವರ್ಸಿಟಿಯು ಮಿಸೌರಿಯ ಏಕೈಕ ಸಾರ್ವಜನಿಕ ಸಂಸ್ಥೆಯಾಗಿದ್ದು ಈ ಸಂಸ್ಥೆಯನ್ನು ಸೇರಲು ವಿಶೇಷವಾದ ಅರ್ಹತಾಮಟ್ಟದವರನ್ನು ಮಾತ್ರ ಆಯ್ಕೆ ಮಾಡಲಾಗುವುದು.[೪೭][೪೮] A.T. ಸ್ಟಿಲ್ ಯೂನಿವರ್ಸಿಟಿಯು ಜಗತ್ತಿನ ಮೊದಲ ಮೂಳೆಸಂಬಂಧಿತ ವೈದ್ಯಕೀಯ ಶಾಲೆಯಾಗಿತ್ತು. ಮೊದಲಿಗೆ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವೆಂದು ಹೆಸರಿದ್ದು, ನಂತರ ಕಾನ್ಸಾಸ್ ನಗರ ಜೈವಿಕವಿಜ್ಞಾನ ಮತ್ತು ವೈದ್ಯಕೀಯ ವಿಶ್ವವಿದ್ಯಾಲಯ ಎಂದು ಕರೆಯಲ್ಪಡುವ ಸಂಸ್ಥೆಯು ಕಾನ್ಸಾಸ್ ನಗರದ ಮೊದಲ ವೈದ್ಯಕೀಯ ಶಾಲೆ.

ವಾಷಿಂಗ್ಟನ್ ಯೂನಿವರ್ಸಿಟಿಯಲ್ಲಿರುವ ಬ್ರೂಕಿಂಗ್ಸ್ ಹಾಲ್

ಹೆಸರಿಸಬಹದಾದ ಬಹಳ ಹೆಸರು ಮಾಡಿರುವ[೪೯] ಖಾಸಗಿ ಸಂಸ್ಥೆಗಳ ಪೈಕಿ ಸೇಂಟ್ ಲೂಯಿಸ್ ನಲ್ಲಿರುವ ವಾಷಿಂಗ್ಟನ್ ಯೂನಿವರ್ಸಿಟಿ ಮತ್ತು ಸೇಂಟ್ ಲೂಯಿಸ್ ಯೂನಿವರ್ಸಿಟಿಗಳೂ ಸೇರುತ್ತವೆ.

ಜೆಫರ್ಸನ್ ಸಿಟಿಯಲ್ಲಿರುವ ಹಲವಾರು ಚಾರಿತ್ರಿಕವಾಗಿ ವರ್ಣೀಯರ ಕಾಲೇಜು ಮತ್ತು ಯೂನಿವರ್ಸಿಟಿಗಳ ಪೈಕಿ ಲಿಂಕನ್ ಯೂನಿವರ್ಸಿಟಿಯೂ ಒಂದು. 1866ರಲ್ಲಿ ಸ್ಥಾಪನೆಗೊಂಡ ಈ ವಿಶ್ವವಿದ್ಯಾಲಯವು 62ನೆಯ ಮತ್ತು 65ನೆಯ ಯುನೈಟೆಡ್ ಸ್ಟೇಟ್ಸ್ ಕಲರ್ಡ್ ಟ್ರೂಪ್ಸ್(ಅಮೆರಿಕದ ವರ್ಣೀಯರ ಸೇನೆ)ರಿಂದ "ಲಿಂಕನ್ ಇನ್ಸ್ ಟಿಟ್ಯೂಟ್" ಹೆಸರಿನಲ್ಲಿ, ಗುಲಾಮಗಿರಿಯಿಂದ ಬಿಡುಗಡೆಗೊಂಡವರಿಗೆ ಶಿಕ್ಷಣ ನೀಡಲೋಸುಗ ನಿರ್ಮಿತವಾಯಿತು. ಅದನ್ನು ಪಠಣ ಮತ್ತು ಕಾರ್ಯವೆರಡರ ಮಿಶ್ರಣವಾಗಿರುವ ರೀತಿಯಲ್ಲಿ ಯೋಜಿಸಲಾಯಿತು. 1921ರಲ್ಲಿ ರಾಜ್ಯವು ಅಧಿಕೃತವಾಗಿ ಲಿಂಕನ್ ನ ಪದವಿಪೂರ್ವ ಮತ್ತು ಪದವಿ ಯೋಜನೆಗಳ ಬೆಳವಣಿಗೆಯನ್ನು ಸಕಾರಾತ್ಮಕವಾಗಿ ಕಂಡು ಅದನ್ನು ವಿಶ್ವವಿದ್ಯಾಲಯವಾಗಿ ಶ್ರೇಣೀಕರಿಸಿತು. ಆ ಸಂಸ್ಥೆಯು ತನ್ನ ಹೆಸರನ್ನು "ಲಿಂಕನ್ ಯೂನಿವರ್ಸಿಟಿ ಆಫ್ ಮಿಸೌರಿ" ಎಂದು ಬದಲಾಯಿಸಿಕೊಂಡಿತು. 1954ರಲ್ಲಿ ಈ ವಿಶ್ವವಿದ್ಯಾಲಯವು ಎಲ್ಲಾ ಪಂಗಡ/ವರ್ಣದವರಿಂದಲೂ ಅರ್ಜಿ ಸ್ವೀಕರಿಸಲಾರಂಭಿಸಿತು.

ಅಗತ್ಯವಾದ ಸಾರ್ವಜನಿಕ ಶಾಲೆಗಳಿಗೆ ನೂತನ ಉಪಾಧ್ಯಾಯರನ್ನು ಹೊಂದುವ ಸಲುವಾಗಿ, 1905ರಲ್ಲಿ ರಾಜ್ಯವು ಹಲವಾರು ನಾರ್ಮಲ್ ಸ್ಕೂಲ್ ಗಳನ್ನು ರಾಜ್ಯದ ಪ್ರತಿ ಪ್ರಾದೇಶಿಕ ಕಾಲೇಜುಗಳಲ್ಲೂ ಸ್ಥಾಪಿಸಿತು. ಇದು ಬಹಳವೇ ಮೆಚ್ಚಿಗೆ ಪಡೆದಿರುವ ಜರ್ಮನ್ ಮಾಡರಿಯ ಸಾರ್ವಜನಿಕ ಶಿಕ್ಷಣದ ರೂಪರೇಷೆಗಳ ಮೇಲೆಯೇ ನಿರ್ಮಿತವಾಗಿತ್ತು. ನಾರ್ಮಲ್ ಸ್ಕೂಲ್ ಗಳು ಪ್ರಾಥಮಿಕ/ಮೂಲ ಶಿಕ್ಷಣ ನೀಡುವ ಶಾಲೆಗಳ ವಿದ್ಯಾರ್ಥಿಗಳಿಗೆ ಪಾಠ ಹೇಳುವ ಉಪಾಧ್ಯಾಯರಿಗಾಗಿ ತೆರೆದಂತಹವು. ಆರಂಭದಲ್ಲಿ ಈ ಜಾಲದಲ್ಲಿ ಕೇಪ್ ಗಿರಾರ್ಡಿಯೂದಲ್ಲಿರುವ ಸೌತ್-ಈಸ್ಟ್ ಮಿಸೌರಿ ಸ್ಟೇಟ್ ಯೂನಿವರ್ಸಿಟಿ, ಸ್ಪ್ರಿಂಗ್ ಫೀಲ್ಡ್ಮಿಸೌರಿ ಸ್ಟೇಟ್ ಯೂನಿವರ್ಸಿಟಿ,(ಹಿಂದೆ ಸೌತ್ ವೆಸ್ಟ್ ಮಿಸೌರಿ ಸ್ಟೇಟ್ ಯೂನಿವರ್ಸಿಟಿ. ಕಿರ್ಕ್ಸ್ ವಿಲ್ಲೆಯಲ್ಲಿನ ಟ್ರೂಮನ್ ಸ್ಟೇಟ್ ಯೂನಿವರ್ಸಿಟಿ(ಹಿಂದೆ ನಾರ್ತ್ ಈಸ್ಟ್ ಮಿಸೌರಿ ಸ್ಟೇಟ್ ಯೂನಿವರ್ಸಿಟಿ), ಮೇರಿವಿಲ್ಲೆಯಲ್ಲಿನ ನಾರ್ತ್ ವೆಸ್ಟ್ ಮಿಸೌರಿ ಸ್ಟೇಟ್ ಯೂನಿವರ್ಸಿಟಿ ಮತ್ತು ವಾರೆನ್ಸ್ ಬರ್ಗ್ ನಲ್ಲಿನ ಯೂನಿವರ್ಸಿಟಿ ಆಫ್ ಸೆಂಟ್ರಲ್ ಮಿಸೌರಿ(ಮುಂಚಿನ ಸೆಂಟ್ರಲ್ ಮಿಸೌರಿ ಸ್ಟೇಟ್ ಯೂನಿವರ್ಸಿಟಿ)ಗಳು ಇದ್ದವು. ಕೆಲವೇ ವರ್ಷಗಳಲ್ಲಿ ನಾರ್ಮಲ್ ಸ್ಕೂಲ್ ನ ಪಠ್ಯವಿಷಯಗಳು ಹೆಚ್ಚಳವಾಗಿ ಮೂರ್ಣ ನಾಲ್ಕು ವರ್ಷಗಳ ವಿದ್ಯಾಪೂರಕ ವಿಷಯಗಳು ಒಳಗೊಂಡವು.

ಮಿಸೌರಿಯಲ್ಲಿ ಹೇರಳವಾಗಿ ಕಿರಿಯ ಕಾಲೇಜುಗಳು, ವ್ಯವಹಾರ ಶಿಕ್ಷಣ ಶಾಲೆಗಳು, ಚರ್ಚ್ ವಿಶ್ವವಿದ್ಯಾಲಯಗಳು ಮತ್ತು ಖಾಸಗಿ ವಿಶ್ವವಿದ್ಯಾಲಯಗಳು ಇವೆ.

ರಾಜ್ಯವು $2000ಗಳನ್ನು, ನವೀಕರಿಸಲ್ಪಡುವ ಪ್ರತಿಭೆಯಾಧಾರಿತ ಸ್ಕಾಲರ್ ಷಿಪ್ ಆಗಿ ಬ್ರೈಟ್ ಫ್ಲೈಟ್ ಎಂಬ ಯೋಜನೆಯಡಿಯಲ್ಲಿ ಇದೇ ರಾಜ್ಯದಲ್ಲಿ ವಿಶ್ವವಿದ್ಯಾಲಯವನ್ನು ಸೇರುವ ಮಿಸೌರಿ ಪ್ರೌಢಶಾಲೆಯ ಪದವಿ ಪಡೆದ ಮೊದಲ 3% ವಿದ್ಯಾರ್ಥಿಗಳಿಗೆ ನೀಡುತ್ತಿದೆ.

19ನೆಯ ಶತಮಾನದ ಮಿಸೌರಿ ಮತ್ತು ಕಾನ್ಸಾಸ್ ನಡುವಣ ಗಡಿಯುದ್ಧವು ಯೂನಿವರ್ಸಿಟಿ ಆಫ್ ಮಿಸೌರಿ ಮತ್ತು ಯೂನಿವರ್ಸಿಟಿ ಆಫ್ ಕಾನ್ಸಾಸ್ ಗಳ ನಡುವಣ ಕ್ರೀಡಾಸ್ಪರ್ಧೆಯ ಮೂಲಕ ಮುಂದುವರೆದಿದೆ. ಈ ಸ್ಪರ್ಧಾಮನೋಭಾವವು(ಪೈಪೋಟಿಯು) ಈ ಎರಡೂ ವಿಶ್ವವಿದ್ಯಾಲಯಗಳ ತಂಡಗಳ ನಡುವಣ ಫುಟ್ ಬಾಲ್ ಮತ್ತು ಬ್ಯಾಸ್ಕೆಟ್ ಬಾಲ್ ಪಂದ್ಯಗಳಲ್ಲಿ ಪ್ರಮುಖವಾಗಿ ಪ್ರದರ್ಶಿತವಾಗುತ್ತವೆ. ಮಿಸಿಸಿಪಿ ನದಿಯ ಪಶ್ಚಿಮಭಾಗದಲ್ಲಿನ ಬಹಳ ಹಳೆಯ ಪೈಪೋಟಿ ಇದಾಗಿದ್ದು, ಇಡೀ ದೇಶದ ಅತೀ ಹಳೆಯ ಪೈಪೋಟಿಯಲ್ಲಿ ಇದಕ್ಕೆ ಎರಡನೆಯ ಸ್ಥಾನವಿದೆ. ಪ್ರತಿವರ್ಷ, ಈ ವಿಶ್ವವಿದ್ಯಾಲಯಗಳು ಆಡಲು ಸೇರಿದಾಗ, ಆ ಪಂದ್ಯವನ್ನು "ಗಡಿ ಯುದ್ಧ" ಎಂದೇ ಬಣ್ಣಿಸಲಾಗುತ್ತದೆ. ಪಂದ್ಯದ ನಂತರ ಒಂದು ವಿನಿಮಯ ನಡೆದು, ಗೆದ್ದವರು ಐತಿಹಾಸಿಕ ಮಾರ್ಚಿಂಗ್ ಬ್ಯಾಂಡ್ ಡ್ರಂ ಅನ್ನು ಪಡೆಯುತ್ತಾರೆ; ಈ ಡ್ರಂ ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ದಶಕಗಳಿಂದಲೂ ಕೈಬದಲಾಗುತ್ತಲೇ ಬಂದಿದೆ.

ಕ್ರೀಡೆಗಳು[ಬದಲಾಯಿಸಿ]

ಮೈನರ್ ಲೀಗ್ ಗಳು[ಬದಲಾಯಿಸಿ]

ಹಿಂದಿನ ವೃತ್ತಿನಿರತ ಕ್ರೀಡಾ ತಂಡಗಳು[ಬದಲಾಯಿಸಿ]

(ಬ್ಲೂಸ್/ಕೌಬಾಯ್ಸ್) (1924ರಿಂದ 1926ರವರೆಗೂ ಚಟುವಟಿಕೆಯಿಂದಿದ್ದು ನಂತರ ಸ್ಥಬ್ಧವಾಯಿತು)

ಕಾನ್ಸಾಸ್ ನಗರ ಮತ್ತು ಸೇಂಟ್ ಲೂಯಿಸ್ ನಲ್ಲಿರುವ ತಂಡಗಳು.

ಇತರೆ ವಿಚಾರಗಳು[ಬದಲಾಯಿಸಿ]

ರಾಜ್ಯದ ಅಡ್ಡಹೆಸರು[ಬದಲಾಯಿಸಿ]

ಮಿಸೌರಿಯ ಅನಧಿಕೃತ ಅಡ್ಡಹೆಸರಾದ ಷೋ-ಮಿ ರಾಜ್ಯ ಎಂಬುದಕ್ಕೆ ಹಲವಾರು ಮೂಲಗಳ ಸಾಧ್ಯತೆಯಿದೆ. "ಐ ಆಮ್ ಫ್ರಮ್ ಮಿಸೌರಿ" ಎಂಬ ನುಡಿಗಟ್ಟು ನಾನು ಆ ವಿಷಯದ ಬಗ್ಗೆ ಸಂದೇಹ ಹೊಂದಿದ್ದೇನೆ ಮತ್ತು ನಾನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ ಎಂಬ ಅರ್ಥ ಹೊಂದಿದೆ. ಇದು ರಾಜ್ಯದ ಅನಧಿಕೃತ ಗುರಿಯಾದ "ಷೋ ಮಿ(ನನಗೆ ತೋರಿಸಿ)" ಎಂಬುದಕ್ಕೆ ಸಂಬಂಧಿತವಾಗಿದ್ದು, ಇದರ ಮೂಲವು 1899ರಲ್ಲಿ ಕಾಂಗ್ರೆಸ್ ನವರಾದ ವಿಲಾರ್ಡ್ ವಾನ್ ಡೈವರ್ ನೀಡಿದ ಭಾಷಣಕ್ಕೆ ಸಂಬಂದಿತವಾದುದೆಂದೂ, ಆತನು ಆ ಭಾಷಣದಲ್ಲಿ "ನಾನು ಹತ್ತಿ ಮತ್ತು ಜೋಳ ಬೆಳೆಯುವ, ಕಾಕಲ್ಬರ್ ಗಳು ಮತ್ತು ಡೆಮೋಕ್ರಾಟ್ ಗಳನ್ನು ಬೆಳೆಸುವ ರಾಜ್ಯದಿಂದ ಬಂದಿದ್ದೇನೆ ಮತ್ತು ನೊರೆಬರಿತ ಮಾತುಗಳು ನನ್ನನ್ನು ಒಡಂಬಡಿಸುವುದೂ ಇಲ್ಲ ಮತ್ತು ನನಗೆ ತೃಪ್ತಿ ತರುವುದೂ ಇಲ್ಲ. ನಾನು ಮಿಸೌರಿಯಿಂದ ಬಂದಿದ್ದೇನೆ ಮತ್ತು ನೀವು ನನಗೆ ತೋರಿಸಲೇಬೇಕು(ಷೋ ಮಿ)" ಎಂದಿದ್ದರು. ಆದರೆ, ಸಂಶೋಧನಕಾರರ ಪ್ರಕಾರ ಈ ನುಡಿಗಟ್ಟು 1890ಕ್ಕಿಂತಲೂ ಮುಂಚಿನಿಂದಲೂ ಅಸ್ಥಿತ್ವದಲ್ಲಿತ್ತು.[೫೦] ಇನ್ನೊಂದು ದಂತಕಥೆಯ ಪ್ರಕಾರ ಹರತಾಳ ಹೂಡಿದ್ದ ಗಣಿಗಾರರ ಜಾಗವನ್ನು ತುಂಬಲೋಸುಗ ಮಿಸೌರಿಯ ಕೊಲರಾಡೋದಲ್ಲಿನ ಲೆಡ್ ವಿಲ್ಲೆಗೆ ಕರೆತಂದ ಗಣಿ ಕೆಲಸಗಾರರಿಗೆ ಗಣಿಗಾರಿಕೆಯ ಗಂಧವಿರದಿದ್ದುದರಿಂದ ಪದೇ ಪದೇ ಸೂಚನೆಗಳನ್ನು ನೀಡಬೇಕಾಗಿದ್ದುದಕ್ಕೆ ಈ ನುಡಿಗಟ್ಟು ಮೂಡಿಬಂದಿತೆಂಬುದು ತಾಳೆಯಾಗುತ್ತದೆ.[೫೧]

ಮಿಸೌರಿಯನ್ನು ಪ್ಯೂಕ್ ರಾಜ್ಯವೆಂದೂ ಕರೆಯಲು ಪ್ರಾಯಶಃ 1827ರಲ್ಲಿ ಗ್ಯಾಲೆನಾ ಸೀಸದ ಗಣಿಪ್ರದೇಶದಲ್ಲಿ ಸೇರಿದ್ದ ಗುಂಪೂ ಕಾರಣವಿರಬಹುದು. ಜಾರ್ಜ್ ಆರ್ಲೀ ಶಾಂಕ್ಲ್ [೫೨]"... ಎಷ್ಟೊಂದು ಮಿಸೌರಿಯನ್ನರು ಸೇರಿದ್ದರೆಂದರೆ, ಅಲ್ಲಿ ಮೊದಲೇ ಸೇರಿದ್ದ ಜನರು ಮಿಸೌರಿ ರಾಜ್ಯವು ವಾಂತಿ ಮಾಡಿಕೊಂಡಿದೆ ಎಂದರು."[೫೩][೫೩] ರಾಜ್ಯದ ಒಳಭಾಗದಲ್ಲಿ, ನಾಗರಿಕ ಯುದ್ಧಕ್ಕೆ ಮುನ್ನ, "ಬಡ ಬಿಳಿಯ ಕಸ"ಕ್ಕೆ ಸಮಾನವಾಗಿ ಕಡುಬಡವರಾದರೂ ಗುಲಾಮಗಿರಿಯನ್ನು ಬೆಂಬಲಿಸುತ್ತಿದ್ದ ನಗರದ ಜನರನ್ನು "ಪ್ಯೂಕ್ಸ್" ಎಂದು ಕರೆಯುತ್ತಿದ್ದರು.[೫೪] ವಾಲ್ಟ್ ವ್ಹಿಟ್ ಮನ್ "ಪ್ಯೂಕ್ಸ್" ಎಂಬುದು ಮಿಸೌರಿಯನ್ನರ ಅಡ್ಡಹೆಸರು ಎಂದು ದಾಖಲಿಸಿದ್ದಾರೆ.[೫೫]

ಮಿಸೌರಿಯನ್ನು "ಗುಹೆಗಳ ರಾಜ್ಯ (ದ ಕೇವ್ ಸ್ಟೇಟ್)" ಎಂದು ಕರೆಯಲಾಗುವುದಕ್ಕೆ ಇದರಲ್ಲಿ 6000ಕ್ಕೂ ಹೆಚ್ಚು ಗುಹೆಗಳು ಇರುವುದರಿಂದ(ಟೆನೆಸ್ಸಿಯಲ್ಲಿ ಮಾತ್ರ ಇದಕ್ಕಿಂತಲೂ ಹೆಚ್ಚು ಗುಹೆಗಳಿವೆ). ಪೆರಿ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗುಹೆಗಳೂ ಮತ್ತು ಒಂದು ರಾಜ್ಯದ ಅತ್ಯಂತ ಉದ್ದದ ಗುಹೆಯೂ ಇವೆ.[೫೬]

ಇತರೆ ಅಡ್ಡ ಹೆಸರುಗಳೆಂದರೆ "ಸೀಸದ ರಾಜ್ಯ"(ದ ಲೆಡ್ ಸ್ಟೇಟ್), "ದ ಬುಲಿಯನ್ ಸ್ಟೇಟ್", "ದ ಒಝಾರ್ಕ್ ಸ್ಟೇಟ್", "ಮದರ್ ಆಫ್ ದ ವೆಸ್ಟ್" ಮತ್ತು ಪೆನ್ಸಿಲ್ವಾನಿಯಾ ಆಫ್ ದ ವೆಸ್ಟ್" .[೫೭]

ಮಿಸೌರಿಗೆ ಯಾವುದೇ ಆಧಿಕೃತ ಅಡ್ಡಹೆಸರಿಲ್ಲ.[೫೮] ಆದರೆ ರಾಜ್ಯದ ಅಧಿಕೃತ ಧ್ಯೇಯವೆಂದರೆ "ಸಾಲಸ್ ಪಾಪ್ಯುಲಿ ಸುಪ್ರೀಮಾ ಲೆಕ್ಸ್ ಎಸ್ಟೋ", ಎಂದರೆ ಲ್ಯಾಟಿನ್ ಭಾಷೆಯಲ್ಲಿ "ಜನರ ಕಲ್ಯಾಣವೇ ಪರಮೋಚ್ಚ ನ್ಯಾಯವಾಗಲಿ (ಮಂತ್ರವಾಗಲಿ)" ಎಂಬುದು.[೫೯]

ಇವನ್ನೂ ಗಮನಿಸಿ[ಬದಲಾಯಿಸಿ]

ಟೆಂಪ್ಲೇಟು:Missouri portal

ಆಕರಗಳು[ಬದಲಾಯಿಸಿ]

  1. U.S. Census 2000 Metropolitan Area Rankings; ranked by population
  2. ೨.೦ ೨.೧ ೨.೨ "Annual Estimates of the Resident Population for the United States, Regions, States, and Puerto Rico: April 1, 2000 to July 1, 2009". United States Census Bureau. Retrieved 2010-01-04.
  3. ೩.೦ ೩.೧ "Elevations and Distances in the United States". U.S Geological Survey. April 29, 2005. Archived from the original on ಜೂನ್ 1, 2008. Retrieved November 6, 2006. {{cite web}}: Unknown parameter |dateformat= ignored (help)
  4. ಮಿಸೌರಿ. | 2009 ಮಿರಿಯಮ್-ವೆಬ್ಸ್ ಟರ್ ಆನ್ ಲೈನ್ ನಿಘಂಟಿನಲ್ಲಿ. ಮರುಸ್ಥಾಪನೆ ಮೇ ೧೩ , ೨೦೦೯ .
  5. http://www.census.gov/const/regionmap.pdf
  6. "ಟಾಪಿಕ್ ಗ್ಯಾಲರೀಸ್ - chicagotribune.com". Archived from the original on 2007-10-14. Retrieved 2021-08-29.
  7. ಇಂಟ್ರೊಡಕ್ಷನ್ ಟು ಮಿಸೌರಿ - ದ ಷೋ ಮಿ ಸ್ಟೇಟ್ ಕ್ಯಾಪಿಟಲ್ ಜೆಫರಸನ್ ಸಿಟಿ
  8. ಮೆಕ್ಕಾಫೆರ್ಟಿ ಮೈಕಲ್. 2004 ಕರೆಕ್ಷನ್: ಎಟಿಮಾಲಜಿ ಆಫ್ ಮಿಸೌರಿ (ರೆಸ್ಟ್ರಿಕ್ಟೆಡ್ ಆಕ್ಸೆಸ್) . ಅಮೆರಿಕನ್ ಸ್ಪೀಚ್, 79.1:32
  9. ಅಮೆರಿಕನ್ ಹೆರಿಟೇಜ್ ಡಿಕ್ಷ್ನರಿ :ಮಿಸೌರಿ
  10. "ಆರ್ಕೈವ್ ನಕಲು" (PDF). Archived from the original (PDF) on 2017-07-08. Retrieved 2010-03-22.
  11. ಮಿಡ್ ವೆಸ್ಟ್ ರೀಜನ್ ಎಕಾನಮಿ ಎಟ್ ಎ ಗ್ಲಾನ್ಸ್
  12. "UNC-CH ಅಧ್ಯಯನಗಳು 'ನಿಜ' ದಕ್ಷಿಣ ಎಲ್ಲಿದೆಯೆಂದು ಬಯಲುಮಾಡುತ್ತವೆ". Archived from the original on 2010-05-30. Retrieved 2010-03-22.
  13. ೧೩.೦ ೧೩.೧ Almanac of the 50 States (Missouri). Information Publications (Woodside, CA). 2008. p. 203.
  14. "Missouri's Karst Wonderland - Missouri State Parks and Historic Sites, DNR". Mostateparks.com. 2008-06-06. Retrieved 2010-02-20.
  15. "ಮಿಸೌರಿಯಲ್ಲಿ ಆದಾಯದ ಅಸಮತೆ". Archived from the original on 2010-01-07. Retrieved 2010-03-22.
  16. "Average Weather for St. Louis, MO - Temperature and Precipitation". Weather.com. Retrieved October 15, 2009. {{cite web}}: Unknown parameter |dateformat= ignored (help)
  17. "ಆರ್ಕೈವ್ ನಕಲು". Archived from the original on 2007-09-30. Retrieved 2010-03-22.
  18. ನ್ಯೂ ಯಾರ್ಕ್ ಟೈಮ್ಸ್ ,"ಲೂಯಿಸೀನಿಯಾ: ದ ಲೆವೀ ಸಿಸ್ಟಮ್ ಆಫ್ ದ ಸ್ಟೇಟ್", 10/8/1874; ದರ್ಶಿಸಿದ್ದು 11/15/2007[ಶಾಶ್ವತವಾಗಿ ಮಡಿದ ಕೊಂಡಿ]
  19. ಹಾಫ್ ಹಾಸ್. (1984). ಷೆಝ್ ಲೆಸ್ ಕ್ಯಾನ್ಸೆಸ್: ತ್ರೀ ಸೆಂಚುರೀಸ್ ಎಟ್ ಕಾಸ್ ಮೌತ್ , ಕಾನ್ಸಾಸ್ ಸಿಟಿ: ಲೊವೆಲ್ ಮುದ್ರಣಾಲಯ. ISBN 0-03-063748-1
  20. ಮಿಸೌರಿ V. ಇಯೋವಾ , 48 U. S. 660 (1849) - US ಸುಪ್ರೀಂ ಕೋರ್ಟ್ ಕೇಸಸ್ ಫ್ರಂ ಜಸ್ಟಿಯಾ & ಒಯೆಝ್
  21. ಮೀಯಿಂಗ್, D.W.(1993). ದ ಷೇಪಿಂಗ್ ಆಫ್ ಅಮೆರಿಕ: ಎ ಜಿಯೋಗ್ರಾಫಿಕಲ್ ಪರ್ಸ್ಪೆಕ್ಟಿವ್ ಆನ್ 500 ಇಯರ್ಸ್ ಆಫ್ ಹಿಸ್ಟರಿ , ಸಂಪುಟ 2, ಕಾಂಟಿನೆಂಟಲ್ ಅಮೆರಿಕ: 1800–1867 ನ್ಯೂ ಹ್ಯಾವೆನ್: ಯೇಲ್ ಯೂನಿವರ್ಸಿಟಿ ಮುದ್ರಣಾಲಯ. ISBN 0-300-05658-3, ಪುಟ. 437
  22. ಹಿಸ್ಟಾರಿಕಲ್ ಸೆನ್ಸಸ್ ಬ್ರೌಸರ್, ೧೮೬೦ ಫೆಡೆರಲ್ ಸೆನ್ಸಸ್, ಯೂನಿವರ್ಸಿಟಿ ಆಫ್ ವರ್ಜೀನಿಯಾ ಗ್ರಂಥಾಲಯ Archived 2009-12-06 ವೇಬ್ಯಾಕ್ ಮೆಷಿನ್ ನಲ್ಲಿ. ಪುನಶ್ಚೇತನಗೊಂಡದ್ದು 21 ಮಾರ್ಚ್ 2008 .
  23. ಫಸ್ಟ್ ಇಂಟರ್ ಸ್ಟೇಟ್ ಪ್ರಾಜೆಕ್ಟ್(ಮೊದಲ ಅಂತರರಾಜ್ಯ ಯೋಜನೆ)
  24. "Population and Population Centers by State - 2000". United States Census Bureau. Retrieved 2008-12-05.
  25. "ವಾಲ್ಪರಾಯ್ಸೋ ಯೂನಿವರ್ಸಿಟಿ". Archived from the original on 2014-05-29. Retrieved 2010-03-22.
  26. 2001 ಅಮೆರಿಕನ್ ರಿಲೀಜಿಯಸ್ ಐಡೆಂಟಿಫಿಕೇಷನ್ ಸರ್ವೇ Archived 2007-03-20 ವೇಬ್ಯಾಕ್ ಮೆಷಿನ್ ನಲ್ಲಿ., ಸಿಟಿ ಯೂನಿವರ್ಸಿಟಿ ಆಫ್ ನ್ಯೂ ಯಾರ್ಕ್
  27. "The Association of Religion Data Archives | Maps & Reports". Thearda.com. Archived from the original on 2017-03-27. Retrieved 2010-02-20.
  28. "FRB: Federal Reserve Districts and Banks". Federalreserve.gov. 2005-12-13. Retrieved 2010-02-20.
  29. [೧][ಮಡಿದ ಕೊಂಡಿ]
  30. ಮಿಸೌರಿ ಸೆಕ್ರೆಟರಿ ಆಫ್ ಸ್ಟೇಟ್ - ಸ್ಟೇಟ್ ಆರ್ಕೈವ್ಸ್ - ಆರಿಜಿನ್ ಆಫ್ "ಷೋ ಮಿ" ಸ್ಲೋಗನ್
  31. "Mo. Rev. Stat. § 67.305". Archived from the original on 2010-07-01. Retrieved 2010-03-22.
  32. "Mo. Rev. Stat. § 311.170". Archived from the original on 2010-08-30. Retrieved 2010-03-22.
  33. "Mo. Rev. Stat. § 311.310". Archived from the original on 2010-05-27. Retrieved 2010-03-22.
  34. "Mo. Rev. Stat. § 311.086". Archived from the original on 2010-08-29. Retrieved 2010-03-22.
  35. ಕ್ಯಾಂಪೇಯ್ನ್ ಫಾರ್ ಟೊಬ್ಯಾಕೋ-ಫ್ರೀ ಕಿಡ್ಸ್, ಸ್ಟೇಟ್ ಎಕ್ಸ್ ಸೈಜ್ ಟ್ಯಾಕ್ಸ್ ರೇಟ್ಸ್ ಎಂಡ್ ರಾಂಕಿಂಗ್ಸ್ , ಮೇ 29, 2009.
  36. "ಎ ಬರ್ನಿಂಗ ಇಶ್ಯೂ," ಸೇಂಟ್ ಲೂಯಿಸ್ ಪೋಸ್ಟ್-ಡಿಸ್ಪ್ಯಾಚ್ , ನವೆಂಬರ್ 12, 2006.
  37. "ಬೆಸ್ಟ್ ಸಿಟೀಸ್ ಫಾರ್ ಸ್ಮೋಕರ್ಸ್," ಫೋರ್ಬ್ಸ್ ಮ್ಯಾಗಝೈನ್ , ನವೆಂಬರ್ 1, 2007
  38. ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಎಂಡ್ ಪ್ರಿವೆಂಷನ್, "ಬಿಹೇವಿಯರಲ್ ರಿಸ್ಕ್ ಫ್ಯಾಕ್ಟರ್ ಸರ್ವೀಲೆನ್ಸ್ ಸಿಸ್ಟಮ್ - ಅಡಲ್ಟ್ಸ್ ಹೂ ಆರ್ ಕರೆಂಟ್ ಸ್ಮೋಕರ್ಸ್", ಸೆಪ್ಟೆಂಬರ್ 19 ,2008 Archived 2010-03-10 ವೇಬ್ಯಾಕ್ ಮೆಷಿನ್ ನಲ್ಲಿ..
  39. "Mo. Rev. Stat. § 407.931.3". Archived from the original on 2010-08-15. Retrieved 2010-03-22.
  40. ಮಿಸೌರಿ ಡಿಪಾರ್ಟ್ ಮೆಂಟ್ ಆಫ್ ಹೆಲ್ತ್ ಎಂಡ್ ಸೀನಿಯರ್ ಸರ್ವೀಸಸ್, ಕೌಂಟಿ ಲೆವೆಲ್ ಸರ್ವೇ 2007 : ಸೆಕೆಂಡ್ ಹ್ಯಾಂಡ್ ಸ್ಮೋಕ್ ಫಾರ್ ಮಿಸೌರಿ ಅಡಲ್ಟ್ಸ್ , ಅಕ್ಟೋಬರ್ 1, 2008 Archived 2008-12-16 ವೇಬ್ಯಾಕ್ ಮೆಷಿನ್ ನಲ್ಲಿ. .
  41. "Mo. Rev. Stat. § 191.769". Archived from the original on 2011-12-10. Retrieved 2010-03-22.
  42. "Mo. Rev. Stat. § 290.145". Archived from the original on 2010-08-08. Retrieved 2010-03-22.
  43. "Annual Estimates of the Population for Incorporated Places in Missouri". United States Census Bureau. Retrieved 2008-07-12.
  44. Missouri Department Of Elementary And Secondary Education (2009-09-02). "Home Schooling". Dese.mo.gov. Archived from the original on 2011-05-14. Retrieved 2010-02-20.
  45. "Truman State University - Best Colleges - Education - US News and World Report". Colleges.usnews.rankingsandreviews.com. 2009-08-19. Archived from the original on 2011-01-05. Retrieved 2010-02-20.
  46. http://governors.truman.edu/images/Chapter%20174%20Missouri%20Revised%20Statutes.pdf
  47. "Welcome to the Missouri Department of Higher Education Website (MDHE)". Dhe.mo.gov. Archived from the original on 2006-09-29. Retrieved 2010-02-20.
  48. "Truman State University". Princetonreview.com. Retrieved 2010-02-20.
  49. "ಅಮೆರಕದ ಅತ್ಯುತ್ತಮ ಕಾಲೇಜುಗಳು ೨೦೦೮: ರಾಷ್ಟ್ರೀಯ ವಿಶ್ವವಿದ್ಯಾಲಯಗಳು: ಉನ್ನತ ಶಾಲೆಗಳು Archived 2008-07-30 ವೇಬ್ಯಾಕ್ ಮೆಷಿನ್ ನಲ್ಲಿ." USNews.com: . ಜನವರಿ 18, 2008.
  50. "ಐ ಆಮ್ ಫ್ರಂ ಮಿಸೌರಿ -- ಷೋ ಮಿ." http://www.barrypopik.com/index.php/new_york_city/entry/summary3
  51. ಆರಿಜಿನ್ ಆಫ್ "ಷೋ ಮಿ" ಸ್ಲೋಗನ್. Secretary of State, Missouri. http://www.sos.mo.gov/archives/history/slogan.asp
  52. ರಾಜ್ಯದ ಹೆಸರು, ಬಾವುಟಗಳು, ಮುದ್ರೆಗಳು, ಹಾಡುಗಳು, ಪಕ್ಷಿಗಳು, ಹೂಗಳು ಮತ್ತು ಇತರೆ ಚಿಹ್ನೆಗಳು, 1938 ,
  53. ೫೩.೦ ೫೩.೧ "The State of Missouri - An Introduction to the Show Me State from". Netstate.Com. Retrieved 2010-02-20.
  54. ವಿಲಿಯಮ್ ಜಿ.ಕಟ್ಲರ್, ಎ ಹಿಸ್ಟರಿ ಆಫ್ ದ ಸ್ಟೇಟ್ ಆಫ್ ಕಾನ್ಸಾಸ್, ಅಧ್ಯಾಯ 6. (1883).)
  55. ಎ ನೋಟ್ ಫಸ್ಟ್ ಪಬ್ಲಿಷ್ಡ್ ಬೈ ವಿಲಿಯಮ್ ವೈಟ್, W. L. ಮೆಕ್ಆಟೀ ಮತ್ತು A. L. H. ಇನ್ ಅಮೆರಿಕನ್ ಸ್ಪೀಚ್, ಸಂಪುಟ. 36, ನಂ. 4 (ಡಿಸೆಂಬರ್, 1961), ಪುಟ. 296–301.
  56. Scott House (2005-05-14). "Fact Sheet on 6000 Caves". The Missouri Speleological Survey, Inc. Archived from the original on 2008-05-09. Retrieved 2008-03-16.
  57. "ಇಂಟ್ರೊಡಕ್ಷನ್ ಟು ಮಿಸೌರಿ", Netstate http://www.netstate.com/states/intro/mo_intro.htm>
  58. "SOS, Missouri - State Archives Missouri History FAQ - Origin of"Show-Me"Slogan". Sos.mo.gov. Retrieved 2010-02-20.
  59. ದ ಗ್ರೇಟ್ ಸೀಲ್ ಆಫ್ ಮಿಸೌರಿ, ರಾಜ್ಯದ ಕಾರ್ಯದರ್ಶಿ, ಮಿಸೌರಿ. http://www.sos.mo.gov/symbols/symbols.asp?symbol=seal

ಹೊರಗಿನ ಕೊಂಡಿಗಳು[ಬದಲಾಯಿಸಿ]

{{ {{{1}}} | alias = ಅಮೇರಿಕಾ ಸಂಯುಕ್ತ ಸಂಸ್ಥಾನ | flag alias = Flag of the United States.svg | flag alias-೧೭೭೬ = Grand Union Flag.svg | flag alias-೧೭೧೭ = US flag 13 stars – Betsy Ross.svg | flag alias-೧೭೯೫ = Star-Spangled Banner flag.svg | flag alias-೧೮೧೮ = US flag 20 stars.svg | flag alias-೧೮೧೯ = US flag 21 stars.svg | flag alias-೧೮೨೦ = US flag 23 stars.svg | flag alias-೧೮೨೨ = US flag 24 stars.svg | flag alias-೧೮೩೬ = US flag 25 stars.svg | flag alias-೧೮೩೭ = US flag 26 stars.svg | flag alias-೧೮೪೫ = US flag 27 stars.svg | flag alias-೧೮೪೬ = US flag 28 stars.svg | flag alias-೧೮೪೭ = US flag 29 stars.svg | flag alias-೧೮೪೮ = US flag 30 stars.svg | flag alias-೧೮೫೧ = U.S. flag, 31 stars.svg | flag alias-೧೮೫೮ = US flag 32 stars.svg | flag alias-೧೮೫೯ = US flag 33 stars.svg | flag alias-೧೮೬೧ = US flag 34 stars.svg | flag alias-೧೮೬೩ = US flag 35 stars.svg | flag alias-೧೮೬೫ = US flag 36 stars.svg | flag alias-೧೮೬೭ = US flag 37 stars.svg | flag alias-೧೮೭೭ = US flag 38 stars.svg | flag alias-೧೮೯೦ = US flag 43 stars.svg | flag alias-೧೮೯೧ = US flag 44 stars.svg | flag alias-೧೮೯೬ = US flag 45 stars.svg | flag alias-೧೯೦೮ = US flag 46 stars.svg | flag alias-೧೯೧೨ = U.S. flag, 48 stars.svg | flag alias-೧೯೫೯ = US flag 49 stars.svg | flag alias-೧೯೬೦ = Flag of the United States (Pantone).svg | flag alias-ವಾಯುಸೇನಾ ಧ್ವಜ = Flag of the United States Air Force.svg | flag alias-ಕೋಸ್ಟಲ್ ಗಾರ್ಡ್ = Ensign of the United States Coast Guard.svg | flag alias-ಕೋಸ್ಟ ಗಾರ್ಡ್-1915 = Ensign of the United States Coast Guard (1915-1953).png | link alias-naval = United States Navy | flag alias-ಭೂಸೇನಾ ಧ್ವಜ = Flag of the United States Army.svg | link alias-football = United States men's national soccer team | link alias-basketball = United States men's national basketball team | link alias-field hockey = United States men's national field hockey team | link alias-Australian rules football = United States men's national Australian rules football team | size = | name = ಅಮೇರಿಕ ಸಂಯುಕ್ತ ಸಂಸ್ಥಾನ | altlink = | altvar = | variant =

}}

  1. REDIRECT Template:Missouri cities and mayors of 100,000 population


ಪೂರ್ವಾಧಿಕಾರಿ
Maine
List of U.S. states by date of statehood
Admitted on August 10, 1821 (24th)
ಉತ್ತರಾಧಿಕಾರಿ
Arkansas

38°30′N 92°30′W / 38.5°N 92.5°W / 38.5; -92.5

"https://kn.wikipedia.org/w/index.php?title=ಮಿಸೌರಿ&oldid=1172982" ಇಂದ ಪಡೆಯಲ್ಪಟ್ಟಿದೆ