ಮಿರ್ಚಿ ಭಜಿ
ವಿಕಿಪೀಡಿಯ ಇಂದ
ಮಿರ್ಚಿ ಭಜಿ ಯನ್ನು ಸಾಮಾನ್ಯ ಭಜಿಯ ಹಾಗೆಯೇ ಎಣ್ಣೆಯಲ್ಲಿ ಕರಿದು ತಯಾರಿಸಲಾಗುತ್ತದೆ. ಆದರೆ ವಿಶೇಷತೆಯೆಂದರೆ ಅದರೊಳಗಿರುವ ಖಾರವಾದ ಮಿರ್ಚಿ ಅಂದರೆ ಹಸಿಮೆಣಸಿನಕಾಯಿ. ಇದು ಭಜಿಗೆ ಬೇಕಾದ ರುಚಿಯನ್ನು ನೀಡುತ್ತದೆ.
ಉತ್ತರ ಕರ್ನಾಟಕ ಹೆಮ್ಮೆಯ ತಿನಸುಗಳಲ್ಲೊಂದು[ಬದಲಾಯಿಸಿ]
ಭಜಿಯು ಒಂದು ವಿಶಿಷ್ಟ ಖಾದ್ಯ. ಸಾಮಾನ್ಯವಾಗಿ ಮಿರ್ಚಿಯನ್ನು ಹಸಿಮೆಣಸಿನಕಾಯಿಯನ್ನು ಉಪಯೋಗಿಸಿ ಮಾಡುತ್ತಾರಾದರೂ ಈಗೀಗ ಬದನೆಕಾಯಿಯ ಎರಡು ಅಗಲವಾದ ತೆಳು ಹೋಳುಗಳ ಮಧ್ಯೆ ಹಸಿ ಚಟ್ನಿ ಹಚ್ಚಿ ಮಿರ್ಚಿ ಕರಿದು ಕೊಡುವದೂ ಉಂಟು. ಇದೂ ಕೂಡ ಇತ್ತೀಚೆಗೆ ಜನಪ್ರಿಯವಾಗುತ್ತಿದೆ. ಒಟ್ಟಿನಲ್ಲಿ ಮಿರ್ಚಿಭಜಿ ಉತ್ತರ ಕರ್ನಾಟಕದ ಹೆಮ್ಮೆ.
