ಮಾತಾ ಹರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಾತಾ ಹರಿ

ಮಾತಾ ಹರಿ (ಆಗಸ್ಟ್ ೭, ೧೮೭೬ಅಕ್ಟೋಬರ್ ೧೫, ೧೯೧೭) Margaretha Geertruida Zelle (ಆಂಗ್ಲದಲ್ಲಿ ಮಾರ್ಗರೆಟ್ ಗೆರ್ಟ್ರುಡ್ ಝೆಲ್ಲೆ) ರವರ ನಾಮಾಂಕಿತವಾಗಿತ್ತು (ಅಡ್ಡಹೆಸರು, ಬಳಕೆಯ ಹೆಸರು). ಇವರು ಡಚ್ ನೃತ್ಯಗಾತಿ, ಮೊದಲನೇ ವಿಶ್ವ ಯುದ್ಧದ ಸಮಯದಲ್ಲಿ ಬೇಹುಗಾರಿಕೆ ನಡೆಸಿದ ಕಾರಣ ಆರೋಪಿಯೆಂದು ಪರಿಗಣಿಸಲ್ಪಟ್ಟು ಶಿಕ್ಶೆಗೆ ಗುರಿಯಾದರು.

ಮಾತಾ ಹರಿ ಲೀಯುವಾರ್ಡನ್‌ನಲ್ಲಿ ಒಬ್ಬ ಡಚ್ ವ್ಯಾಪಾರಸ್ಥನಿಗೆ ಜನಿಸಿದವರು. ಇವರ ತಾಯಿ ಜಾವಾ ದ್ವೀಪದವರು. ೨೦ನೇ ಶತಮಾನದ ಕೊನೆಯಲ್ಲಿ - ಇವರು ಶಿಕ್ಷಕರಾಗ ಬಯಸಿ ಫಲಿಸದೇ ಹೋದದ್ದು, ಇವರ ವಿವಾಹ ಮುರಿದು ಬಿದ್ದದ್ದು (ಇವರಿಗೆ ಎರಡು ಮಕ್ಕಳಿದ್ದರು) ಇವರ ಜೀವನದಲ್ಲಿ ಘಟಿತ ಘಟನೆಗಳು. ಇದರ ತರುವಾಯ ಇವರು ಪ್ಯಾರಿಸ್‌ಗೆ ಬಂದರು. ಜಾವಾದಿಂದ ಬಂದ ರಾಣಿಯಂತೆ ಮೆರೆದು, ನೃತ್ಯಗಾತಿಯಾದರು. ಓರಿಯೆಂಟಲ್ ಶೈಲಿಯ ನೃತ್ಯಗಳನ್ನು ಪ್ರದರ್ಶಿಸುತ್ತಿದ್ದರು. ಇವರ ರಂಗಮಂಚದ ಹೆಸರು (ನಾಮಾಂಕಿತ) - ಮಾತಾ ಹರಿ (ಮಲಯ್‌ನಲ್ಲಿ ಹಾಗೂ ಬಹಸಾದಲ್ಲಿ "ಸೂರ್ಯ" ಅಥವಾ "ಮುಂಜಾನೆಯ ಕಣ್ಣು" ಎಂಬರ್ಥ ಮೂಡುತ್ತದೆ). ಇವರು ನಾಯಕಸಾನಿಯೂ ಹೌದು (ಬಹುಶಃ ಹಲವು ಮಿಲಿಟರಿ ಅಧಿಕಾರಿಗಳೊಂದಿಗೆ, ರಾಜಕೀಯ ವ್ಯಕ್ತಿಗಳೊಂದಿಗೆ ವ್ಯವಹಾರಗಳಿದ್ದಿರಬಹುದು).

ಮಿಸ್ ಝೆಲ್ಲೆ ಹಲವು ಫ್ರೆಂಚ್ ಹಾಗೂ ಜರ್ಮನ್ ಮಂಚಗಳನ್ನಲಂಕರಿಸಿ, ಅಂತರರಾಷ್ಟ್ರೀಯ ಕೂಟಕೃತ್ಯದಲ್ಲಿ ಕೈ ಗೊಂಬೆಯಾದರು. ಆದರೂ ಕೂಡ ಇತಿಹಾಸ ತಜ್ಞರಿಂದ ಇಂದಿಗೂ ಕೂಡ ಮಾತಾ ಹರಿಯ ಬೇಹುಗಾರಿಕಾ ಕೃತ್ಯಗಳ ನಿಜವಾದ ಸ್ವರೂಪದ ಬಗೆಗೆ ಸರಿಯಾದ ಸಮಜಾಯಿಶಿ ನೀಡಲಾಗಿಲ್ಲ. ೧೯೧೭ರಲ್ಲಿ ಇವರನ್ನು ಫ್ರಾನ್ಸ್‌ನಲ್ಲಿ ಕಟಕಟೆಯ ಮುಂದೆ ಹಾಜರುಪಡಿಸಲಾಯಿತು. ಇವರನ್ನ್ನು ಬೇಹುಗಾರಿಕೆ, ಎರಡು ಬದಿಯಲ್ಲೂ ಮಾಹಿತಿ ನೀಡುವಿಕೆ (ಜರ್ಮನಿ ಮತ್ತು ಫ್ರಾನ್ಸ್, ಎರಡಕ್ಕೂ ಮಾಹಿತಿ ರವಾನೆ) ಹಾಗೂ ವಿಶ್ವದ ಮೊದಲನೇ ಮಹಾ ಯುದ್ಧದಲ್ಲಿ ಸಾವಿರಾರು ಸಿಪಾಯಿಗಳ ಸಾವಿಗೆ ಕಾರಣರಾದ ಆರೋಪಕ್ಕೆ ಗುರಪಡಿಸಲಾಯಿತು. ಆರೋಪ ಧೃಡಪಟ್ಟು, ಇವರನ್ನು ಅಕ್ಟೋಬರ್ ೧೫, ೧೯೧೭ರಲ್ಲಿ ಗೋಲೀಬಾರಿಗೆ ಗುರಿಪಡಿಸಲಾಯಿತು.

ಹೊರಗಿನ ಸಂಪರ್ಕಗಳು[ಬದಲಾಯಿಸಿ]