ಮಹಾರಾಣಾ ಪ್ರತಾಪ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Maharana Pratap
The Ruler of Mewar
ರಾಜ್ಯಭಾರ1568 – 1597
ಹುಟ್ಟುMay 9, 1540
ಹುಟ್ಟುಸ್ಥಳKumbhalgarh, Juni Kacheri
ಸಾವುJanuary 19, 1597 (age 57)
ಪೂರ್ವಾಧಿಕಾರಿMaharana Udai Singh II
ಸಂತತಿ17 sons and 5 daughters
ಸಂತತಿSuryavanshi Rajputs
ತಂದೆMaharana Udai Singh II
ತಾಯಿMaharani Javanta Bai
ಧರ್ಮಹಿಂದೂ ಧರ್ಮ

ಮಹಾರಾಣಾ ಪ್ರತಾಪ್‌ ಅಥವಾ ಮೇವಾರದ ಪ್ರತಾಪ್‌ ಸಿಂಗ್‌ ( 9 ಮೇ 1540- 19 ಜನವರಿ 1597) ವಾಯವ್ಯ ಭಾರತದ ರಾಜ್ಯವಾದ ಮೇವಾರವನ್ನು ಆಳುತ್ತಿದ್ದ ಹಿಂದೂ ದೊರೆಯಾಗಿದ್ದ. ಅವನು ಸೂರ್ಯವಂಶಿ ರಜಪೂತಸಿಸೊದಿಯಾ ವಂಶಕ್ಕೆ ಸೇರಿದವನು. ತೀಕ್ಷ್ಣ ಸ್ವಭಾವದ ರಜಪೂತರ ಹೆಮ್ಮೆ ಮತ್ತು ಆತ್ಮಗೌರವದ ಸಾಕಾರರೂಪವಾಗಿದ್ದ ಪ್ರತಾಪ್, ಶತಮಾನಗಳವರೆಗೆ ರಜಪೂತರ ಮಹತ್ವಾಕಾಂಕ್ಷೆಯ ಗುಣಗಳಿಗೆ ದೃಷ್ಟಾಂತವಾಗಿದ್ದನು.

ಆರಂಭಿಕ ಜೀವನ ಮತ್ತು ಹಿನ್ನೆಲೆ[ಬದಲಾಯಿಸಿ]

ಪ್ರತಾಪ್‌ ಕುಂಭಲ್‌ಘಢ್‌ಯಲ್ಲಿ [ಈಗಿನ ರಾಜಸ್ಥಾನದ ರಾಜ್ಸಮಂದ್‌ ಜಿಲ್ಲೆ] ಎರಡನೇ ಮಹಾರಾಣಾ ಉದಯ್‌ ಸಿಂಗ್‌ ಮತ್ತು ಮಹಾರಾಣಿ ಜಾವಂತ ಬಾಯಿ ಸೊಂಗಾರರ ಮಗನಾಗಿ ಹುಟ್ಟಿದನು. ಅವನು ತನ್ನ 25 ಸಹೋದರರು ಮತ್ತು 29 ಸಹೋದರಿಯರಲ್ಲಿ ಹಿರಿಯವನಾಗಿದ್ದನು.

ಅಧಿಕಾರ ಸ್ವೀಕಾರ[ಬದಲಾಯಿಸಿ]

1568ರಲ್ಲಿ ಎರಡನೇ ಉದಯ್‌ ಸಿಂಗ್‌ ರಾಜ್ಯಭಾರ ಕಾಲದಲ್ಲಿಚಿತ್ತೂರನ್ನು ಮೊಘಲ್‌ ಚಕ್ರವರ್ತಿ ಅಕ್ಬರ್‌ ವಶಪಡಿಸಿಕೊಂಡಿದ್ದನು. ಉಳಿದ ಪುರುಷವರ್ಗ ಯುದ್ಧಭೂಮಿಯಲ್ಲಿ ವೀರಾವೇಶದಿಂದ ಹೋರಾಡಿ ಹಿಂಸಾತ್ಮಕ ರೀತಿಯಲ್ಲಿ ಮರಣವಪ್ಪಿದಾಗ, ಕೋಟೆಯ ಮಹಿಳೆಯರು ವೈಯಕ್ತಿಕ ಅಪಮಾನದಿಂದ ಪಾರಾಗಲು ಆಹುತಿಯಾಗುವ ವಸ್ತು(ಬೆಂಕಿ)ವಿನಲ್ಲಿ ಸುರಕ್ಷತೆಯನ್ನು ಕಾಣುವುದರೊಂದಿಗೆ ಚಿತ್ತೂರಿನ ಮೂರನೇ ಜೋಹಾರ್ ಸಂಭವಿಸಿತು.

ಈ ದುರಂತ ಸಂಭವಿಸುವ ಮೊದಲು, ಉದಯ್‌ ಸಿಂಗ್‌ ಮತ್ತು ಅವನ ಕುಟುಂಬ ಬುದ್ಧಿವಂತಿಕೆಯಿಂದ ಸಮೀಪದ ಬೆಟ್ಟಗಳ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರವಾಯಿತು. ನಂತರ ಅವನು ಅರಾವಳಿ ಪರ್ವತ ಶ್ರೇಣಿಯ ಬೆಟ್ಟದ ತಪ್ಪಲಲ್ಲಿ ಇನ್ನೊಂದು ಸ್ಥಳಕ್ಕೆ ತನ್ನ ನೆಲೆಯನ್ನು ಬದಲಾಯಿಸಿದ. ಈ ಹೊಸ ನೆಲೆಯು ಕ್ರಮೇಣವಾಗಿ ಅವನದೇ ಹೆಸರಿನ ಉದಯಪುರ ಎನ್ನುವ ನಗರವಾಗಿ ಬೆಳೆಯಿತು. ಉದಯ್‌ ಸಿಂಗ್‌ ತನ್ನ ನಂತರ ತನ್ನ ನೆಚ್ಚಿನ ಮಗ ಜಗ್ಮಾಲ್‌ ಅಧಿಕಾರವನ್ನು ವಹಿಸಿಕೊಳ್ಳಬೇಕೆಂದು ಬಯಸಿದ್ದನು. ಆದರೆ ಅವನ ಹಿರಿಯ ಮಗ ಪ್ರತಾಪ್‌ನನ್ನು ರಾಜನನ್ನಾಗಿ ಮಾಡಬೇಕೆಂದು ಅವನ ಹಿರಿಯ ವರಿಷ್ಠರು ಸಲಹೆ ಮಾಡಿದರು. ಪಟ್ಟಾಭಿಷೇಕದ ಸಂದರ್ಭದಲ್ಲಿ ಜಗ್ಮಾಲ್‌ನ‌ನ್ನು ಅರಮನೆಯಿಂದ ಹೊರಗೆ ಕಳಿಸಲಾಯಿತು ಹಾಗೂ ಪ್ರತಾಪ್‌ ರಾಜನಾದನು. ಪ್ರತಾಪ್‌ ತನ್ನ ತಂದೆಯ ಇಚ್ಛೆಗೆ ವಿರುದ್ಧವಾಗಿ ನಡೆದುಕೊಳ್ಳಲು ಬಯಸಲಿಲ್ಲ. ಆದರೆ ಕಷ್ಟದ ಸಂದರ್ಭಗಳಲ್ಲಿ ಜಗ್ಮಾಲ್ ರಾಜ್ಯವಾಳಲು ಸೂಕ್ತ ವ್ಯಕ್ತಿಯಲ್ಲ ಎಂದು ರಜಪೂತ ವರಿಷ್ಠರು ಅವನಿಗೆ ಮನದಟ್ಟು ಮಾಡಿದರು. ಇದು ಪ್ರತಾಪನ ಹೋರಾಟ ಮತ್ತು ಸಂಕಷ್ಟದ ವೃತ್ತಿಜೀವನದ ಆರಂಭವಾಗಿತ್ತು.

ಮಹಾರಾಣಾ ಪ್ರತಾಪ್‌ ಅಕ್ಬರ್‌ನನ್ನು ಭಾರತದ ದೊರೆ ಎಂದು ಒಪ್ಪಿಕೊಳ್ಳಲೇ ಇಲ್ಲ. ತನ್ನ ಜೀವನ ಪೂರ್ತಿ ಅಕ್ಬರ್‌ ವಿರುದ್ದ ಹೋರಾಡುತ್ತಲೇ ಕಳೆದನು. ಮೊದಲು ಅಕ್ಬರ್‌ ಮಹಾರಾಣಾ ಪ್ರತಾಪ್‌ನನ್ನು ಗೆಲ್ಲಲು ರಾಜತಾಂತ್ರಿಕ ಮಾರ್ಗದ ಮೂಲಕ ಪ್ರಯತ್ನಿಸಿದನು. ಆದರೆ ಅದುಯಾವುದೂ ಫಲ ನೀಡಲಿಲ್ಲ. ಪ್ರತಾಪ್‌ನಿಗೆ ಅಕ್ಬರ್‌ನ ವಿರುದ್ಧ ಹೋರಾಡಲು ಯಾವುದೇ ಉದ್ದೇಶವಿರಲಿಲ್ಲ. ಆದರೆ ಅಕ್ಬರ್‌ನ ಎದುರು ತಲೆಬಾಗಿ ಅವನನ್ನು ತನ್ನ ರಾಜನೆಂದು ಒಪ್ಪಿಕೊಳ್ಳಲು ತಯಾರಿಲ್ಲವೆಂದು ಪ್ರತಿಪಾದಿಸಿದ. ಮಹಾರಾಣಾನು ಅಕ್ಬರ್‌ನ ಸ್ನೇಹಿತನಾಗಲು ಕೆಲವೊಂದು ಸಾಧ್ಯತೆಗಳಿದ್ದವು, ಆದರೆ ಚಿತ್ತೂರನ್ನು ಮುತ್ತಿಗೆ ಹಾಕಿದಾಗ, ಅಕ್ಬರ್‌ 27,000 ಜನರನ್ನು ಕೊಂದಿದ್ದನು ಎಂದು ಕೆಲವು ವಿದ್ವಾಂಸರು ವಾದಿಸುತ್ತಾರೆ. ಈ ಘಟನೆಯು ಮಹಾರಾಣಾನ ಮನಸ್ಸಿನಲ್ಲಿ ಅಳಿಸಲಾಗದ ನೋವಾಗಿ ಉಳಿಯಿತು.ಇಂತಹ ಅನ್ಯಾಯ ಮತ್ತು ಕ್ರೂರತೆಗೆ ತಲೆಬಾಗುವುದಿಲ್ಲವೆಂದು ಅವನು ನಿರ್ಧರಿಸಿದ.

ಟೋಡ್ಸ್‌ರವರ ಅನಲ್ಸ್‌ ಆಂಡ್‌ ಆಂಟಿಕ್ವೀಟೀಸ್‌ ಆಫ್‌ ರಾಜಸ್ಥಾನ ದಲ್ಲಿ ಬರೆದಂತೆ, ಪ್ರತಾಪ್‌ ಮೊಘಲ್‌ರಿಗೆ ರಜಪೂತರ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡುವ ರಜಪೂತರ ಶಿಷ್ಟಾಚಾರವನ್ನು ನಿಲ್ಲಿಸಿದನು (ಮೊಘಲ್‌ರ ಬಲಾಢ್ಯ ಪರಾಕ್ರಮಕ್ಕೆ ಗೌರವದ ಸಂಕೇತವಾಗಿ

ಅಸಂಖ್ಯಾತ ರಜಪೂತ ರಾಜರು ತಮ್ಮ ಹೆಣ್ಣು ಮಕ್ಕಳನ್ನು ಮೊಘಲರಿಗೆ ಮದುವೆ ಮಾಡಿಕೊಟ್ಟಿದ್ದರು) ಮತ್ತು ಬದಲಿಗೆ ರಜಪೂತರಿಗೆ ಅವನು ಬೆಂಬಲಿಸಿದನು:

ಮಾರ್ವರ್‌ ಮತ್ತು ಅಂಬರ್‌ ಮತ್ತು ಅಮರ್‌ (ಮೊಘಲರಿಗೆ ಪುತ್ರಿಯರನ್ನು ಕೊಟ್ಟು ಮದುವೆಮಾಡಿದರು) ಮೊದಲಾದ ಉದಾಹರಣೆಗಳೊಂದಿಗೆ,ಅಧಿಕಾರ ಕುಂಠಿತಗೊಂಡಿದ್ದರಿಂದ ಪ್ರಲೋಭನೆಗೆ ಬಲಿಯಾದ ರಾಜಸ್ಥಾನದ ಸಣ್ಣ ರಾಜರು ಅಸಂಖ್ಯಾತ ಊಳಿಗಮಾನ್ಯ ಭೂಮಿಯೊಂದಿಗೆ ದೆಹಲಿಯ ಮಾಂಡಲೀಕರಾಗಿ ಪರಿವರ್ತನೆಯಾದರು.
ಆದರೆ ಇವುಗಳು ಪ್ರತಾಪ್‌‌ ವಿರುದ್ಧ ಭೀತಿ ಹುಟ್ಟಿಸುವ ಪ್ರತಿಕೂಲಗಳಾಗಿದ್ದವು. ಅವನ ದೇಶದ ಸೈನ್ಯವು ಅವನ ಮೇಲೆ ತಿರುಗಿಬಿದ್ದವು, ಅವರ ಸ್ವಯಂ ಕೀಳುಸ್ಥಿತಿಯಿಂದ ಹೆಚ್ಚುವರಿ ಪಡೆ ಹುಟ್ಟಿಕೊಂಡಿತು. ಇದು ಉದಾತ್ತ ನಿರ್ಣಯವನ್ನು ಅನುಕರಿಸುವ ಸದ್ಗುಣದ ಕೊರತೆಯಿಂದ ಆ ನಿರ್ಣಯದ ವಿರುದ್ಧ ಅಸೂಯೆ ಮತ್ತು ದ್ವೇಷದ ಕಿಡಿ ಹೊತ್ತಿಕೊಂಡಿತು. ಹಿಂದೂ ಪೂರ್ವಕಲ್ಪಿತ ಭಾವನೆಯನ್ನು ರಾಜಸ್ಥಾನದ ಪ್ರತಿಯೊಬ್ಬ ರಾಜಕುಮಾರ ಉಲ್ಲಂಘಿಸಿದಾಗ, ಹೀಗೆ ಕೆಳದರ್ಜೆಗೆ ಇಳಿದ ಎಲ್ಲರ ಜತೆ ರಾಣಾ ವೈವಾಹಿಕ ಸಂಬಂಧವನ್ನು ತ್ಯಜಿಸಿದ. ಪ್ರತಾಪ್‌ಗೆ ಶಾಶ್ವತ ಗೌರವ ಸೂಚಿಯಾಗಿ ಅವನ ವಿಷಯವನ್ನು ಹೀಗೆಂದು ಹೇಳಲಾಗಿದೆ. ಮೊಘಲರ ರಾಜಮನೆತನಕ್ಕೆ ಅತೀ ಹತ್ತಿರವಾದವರಿಂದ ಹಿಡಿದು ಪ್ರಭುತ್ವದ ಜತೆ ಸಹ ಇಂತಹ ಸಂಬಂಧಗಳನ್ನು ನಿರಾಕರಿಸಿದ್ದಲ್ಲದೇ, ಮಾರ್ವಾರ್ ಮತ್ತು ಅಂಬರ್ ಸೋದರ ರಾಜಕುಮಾರರ ಜತೆ ಕೂಡ ವೈವಾಹಿಕ ಸಂಬಂಧ ತ್ಯಜಿಸಿದರು. ರಜಪೂತ ರಾಜಕುಮಾರರಲ್ಲಿ ಅತ್ಯಂತ ಪ್ರಭಾವಶಾಲಿಗಳಾದ ಬುಕೇತ್ ಸಿಂಗ್ ಮತ್ತು ಸವಾಯ್ ಜೈ ಸಿಂಗ್ ಅವರ ಸಹಿಯಿರುವ ಪತ್ರಗಳಿಂದ ದಾಖಲಿಸಲು ಸಾಧ್ಯವಾಗಿರುವುದು ಸದ್ಗುಣಕ್ಕೆ ಸಂದ ಜಯವೆನಿಸಿದೆ. ತಮ್ಮ ತತ್ವವನ್ನು ಬಲಿಕೊಟ್ಟ ಅವರು ದೊಡ್ಡ ವ್ಯಕ್ತಿಗಳಾದರೂ ಮೆವಾರ್ ಅದಕ್ಕೆ ಅಂಟಿಕೊಂಡಿದ್ದರಿಂದ ನಶಿಸಿತು. ಅವರು ವಿಧೇಯತೆಯಿಂದ ವೈವಾಹಿಕ ಸಂಬಂಧಕ್ಕೆ ಪುನಃ ಸೇರಿಸಿಕೊಳ್ಳುವಂತೆ ಕೋರಬೇಕು ಹಾಗೂ ಅವರು "ಪರಿಶುದ್ಧರಾಗಲು","ಆತ್ಮೋನ್ನತಿ ಪಡೆಯಲು" "ರಜಪೂತರನ್ನಾಗಿ ಮಾಡಲು",ಶತಮಾನಕ್ಕೂ ಹೆಚ್ಚು ಕಾಲ ಅವರ ಒಡಕಿಗೆ ಕಾರಣವಾದ ಕಲುಷಿತ ಆಚರಣೆ(ತಮ್ಮ ಪುತ್ರಿಯರನ್ನು ಮೊಘಲರಿಗೆ ವಿವಾಹ ಮಾಡಿಕೊಡುವ)ಯನ್ನು ತ್ಯಜಿಸುವ ಷರತ್ತಿನೊಂದಿಗೆ ಮಾತ್ರ ಈ ಅನುಕೂಲವನ್ನು ನೀಡಲಾಗುತ್ತದೆ.[೧]

ಕದನ[ಬದಲಾಯಿಸಿ]

ಪ್ರತಾಪ್‌ನ ಪೂರ್ವಿಕರ ಜನ್ಮಭೂಮಿಯಾದ ಚಿತ್ತೂರ್‌ಘಢ್‌ (ಚಿತ್ತೂರು ಕೋಟೆ) ಮೊಘಲ್‌ರ ಸ್ವಾಧೀನದಲ್ಲಿತ್ತು. ತಲೆತಪ್ಪಿಸಿಕೊಂಡು ಜೀವನ ನಡೆಸುತ್ತಾ,ಚಿತ್ತೂರನ್ನು ಮರುವಶಕ್ಕೆ ತೆಗೆದುಕೊಳ್ಳುವ (ಆ ಮೂಲಕ ಮೇವಾರ್ ವೈಭವವನ್ನು ಮರಳಿಪಡೆಯುವುದು) ಕನಸನ್ನು ಪ್ರತಾಪ್ ಕಂಡ ಹಾಗೂ ಅವನ ಮುಂದಿನ ಪ್ರಯತ್ನಗಳು ಈ ಗುರಿಯತ್ತ ಕೇಂದ್ರೀಕೃತವಾಯಿತು. ಮೂಲಭೂತವಾಗಿ ಪ್ರತಾಪ್‌ ಕೇವಲ ಕಾಗದದಲ್ಲಿ ಮಾತ್ರ ರಾಜನಾಗಿದ್ದ, ಅವನ ಜೀವಮಾನದಲ್ಲಿ ಯಾವುದೇ ಭೂಮಿಯನ್ನು ಆಳಲಿಲ್ಲ.

ಬಹುತೇಕ ಪ್ರತಾಪ್‌ನ ಎಲ್ಲ ಸಹ ರಜಪೂತ ರಾಜರು ಮೊಘಲ್‌ರ ಉಳಿಗತನಕ್ಕೆ ಒಳಗಾದರು. ಪ್ರತಾಪ್‌ನ ಸಹೋದರರಾದ ಶಕ್ತಿ ಸಿಂಗ್‌ ಮತ್ತು ಸಾಗರ್‌ ಸಿಂಗ್‌ ಸಹ ಅಕ್ಬರ್‌ನಿಗೆ ಸೇವೆ ಸಲ್ಲಿಸುತ್ತಿದ್ದರು. ಅಂಬರ್‌ (ನಂತರ ಜೈಪುರ್‌ಎಂದು ಹೆಸರಾಯಿತು)ನ ರಾಜಾ ಮಾನ್‌ ಸಿಂಗ್‌ನಂತಹ ಹಲವು ಪ್ರಮುಖ ರಜಪೂತರು ಅಕ್ಬರ‌ನ ಸೇನೆಯಲ್ಲಿ ಸೇನಾ ದಂಡನಾಯಕರು ಮತ್ತು ಅವನ ಮಂಡಳಿಯ ಸದಸ್ಯರಾಗಿದ್ದರು. ಅಕ್ಬರ್‌ ಇತರೆ ರಜಪೂತ ರಾಜರೊಂದಿಗೆ ಮಾಡಿಕೊಂಡ ಶಾಂತಿ ಮೈತ್ರಿಯ ರೀತಿಯಲ್ಲಿ ಪ್ರತಾಪ್‌ನೊಂದಿಗೂ ಒಪ್ಪಂದ ಮಾಡಿಕೊಳ್ಳಲು ಮಾತುಕತೆಗೆ ಕೋರಿ ಅವನಲ್ಲಿಗೆ ಒಟ್ಟು ಆರು ರಾಜತಾಂತ್ರಿಕ ನಿಯೋಗಗಳನ್ನು ಕಳುಹಿಸಿದನು. ಅಕ್ಬರ್‌ನ ಎಲ್ಲಾ ಇಂತಹ ಪ್ರಯತ್ನಗಳನ್ನು ಪ್ರತಾಪ್‌ ಸಿಂಗ್‌ ನಿರಾಕರಿಸಿ ಅವನ ಅತಿಯಾದ ಆತ್ಮಗೌರವವನ್ನು ಪ್ರದರ್ಶಿಸಿದ.

ಹೊಸ ರಾಜಧಾನಿ ಉದಯಪುರಕ್ಕಾಗಿ ಮಹಾರಾಣಾ ಉದಯ್‌ ಸಿಂಗ್‌ 1565ರಲ್ಲಿ ಉದಯ್‌ ಸಾಗರ್‌ ಎನ್ನುವ ಜಲಾಶಯವನ್ನು ಕಟ್ಟಿದನು. ಈ ಅಣೆಕಟ್ಟೆ ಮೇಲೆ ಜೂನ್ 1573ರಲ್ಲಿ ಅಂಬರ್‌ನ ಕುನ್ವರ್(ರಾಜಕುಮಾರ)ಮಾನ್‌ಸಿಂಗ್ ಮೊಘಲ್ ಚಕ್ರವರ್ತಿ ಅಕ್ಬರ್ ಪ್ರತಿನಿಧಿಯಾಗಿ, ಮಹಾರಾಣಾ ಪ್ರತಾಪ್‌ಸಿಂಗ್ ತನ್ನ ಶಿಷ್ಠಾಚಾರವನ್ನು ಕೈಬಿಟ್ಟು ಅವನ ಗೌರವಾರ್ಥ ಔತಣಕೂಟದಲ್ಲಿ ಪಾಲ್ಗೊಳ್ಳುವಂತೆ ಸೊಕ್ಕಿನಿಂದ ಒತ್ತಾಯಿಸಿದ. ಪ್ರತಾಪ್‌ ಮತ್ತು ಮನ್‌ ಸಿಂಗ್‌ ಒಂದೇ ತಲೆಮಾರಿನವರಾಗಿದ್ದರು. ಕುನ್ವಾರ್ ಮಾನ್‌ ಸಿಂಗ್‌ 21 ಡಿಸೆಂಬರ್‌ 1550ರಂದು ಭಾನುವಾರ ಹುಟ್ಟಿದ್ದನು. ಆದರೆ ಪ್ರತಾಪ್‌ ರಾಜನಾಗಿದ್ದು, ಮಾನ್‌ ಸಿಂಗ್‌ ರಾಜಕುಮಾರನಾಗಿದ್ದನು. ಪ್ರತಾಪ್‌ ಶಿಷ್ಠಾಚಾರವನ್ನು ಅನುಸರಿಸಿ ಅಕ್ಬರ್‌ನ ವಿಶೇಷ ಪ್ರತಿನಿಧಿಯಾದ ಕುನ್ವಾರ ಮಾನ್‌ ಸಿಂಗ್‌ನೊಂದಿಗೆ ಔತಣವನ್ನು ಸ್ವೀಕರಿಸಲು, ತನ್ನ ಪುತ್ರ ಕುನ್ವಾರ್ ಅಮರ್‌ ಸಿಂಗ್‌ನನ್ನು ಕಳುಹಿಸಿದನು. ಈ ಘಟನೆಯು ಮೊಘಲ್‌-ಮೇವಾರ್ ಸಂಘರ್ಷದ ಕಿಡಿಯನ್ನು ಹೊತ್ತಿಸಿತು.

ಮಾನ್‌ ಸಿಂಗ್‌ ಕುನ್ವಾರ್ ಆಗಿದ್ದ ಕಾರಣ, ಅಕ್ಟೋಬರ್ 1573ರಲ್ಲಿ ಅವನ ತಂದೆ ರಾಜಾ ಭಗವಾನ್‌ ದಾಸ್‌ ಇನ್ನೊಂದು ಶಾಂತಿ ನಿಯೋಗದೊಂದಿಗೆ ಮಹಾರಾಣಾ ಪ್ರತಾಪ್‌ನನ್ನು ವೈಯಕ್ತಿಕವಾಗಿ ಭೇಟಿಮಾಡಿದರೂ ಅದು ಸಫಲವಾಗಲಿಲ್ಲ.

ಹಲ್ಡಿಘಾಟಿ ಕದನ[ಬದಲಾಯಿಸಿ]

ಜೂನ್‌ 21 1576ರಂದು (ಇನ್ನೊಂದು ಲೆಕ್ಕಾಚಾರದ ಪ್ರಕಾರ ಜೂನ್‌ 18), ಈಗಿನ ರಾಜಸ್ಥಾನದಲ್ಲಿರುವ ಗೊಗುಂಡಾ ಸಮೀಪವಿರುವ ಹಲ್ಡಿಘಾಟಿಯಲ್ಲಿ ಎರಡು ಸೈನ್ಯಗಳು ಎದುರಾದವು. ಎರಡು ಸೈನ್ಯದ ನಿಖರ ಬಲಾಬಲದ ಲೆಕ್ಕಗಳಲ್ಲಿ ವ್ಯತ್ಯಾಸವಿದ್ದರೂ, ಮೊಘಲರ ಸೇನೆಯು ಪ್ರತಾಪ್‌ನ ಸೇನೆಗಿಂತ ಸಂಖ್ಯಾಬಲದಲ್ಲಿ ಮೀರಿಸಿತ್ತೆಂದು ಎಲ್ಲ ಮೂಲಗಳು ಹೇಳಿವೆ.(1:4). ರಜಪೂತಚರಿತ್ರಾಪುಟಗಳಲ್ಲಿ [[ಹಲ್ಡಿ ಘಾಟಿ ಕದನ]]ವು ಒಂದು ಐತಿಹಾಸಿಕ ಘಟನೆಯಾಗಿದ್ದು, ಯುದ್ಧವು ಕೇವಲ ನಾಲ್ಕು ಗಂಟೆಗಳಲ್ಲಿ ಕೊನೆಗೊಂಡಿತು. ಈ ಅಲ್ಪ ಅವಧಿಯಲ್ಲಿ, ಪ್ರತಾಪ್‌ನ ಕಡೆಯ ಸೈನಿಕರು ರಣರಂಗದಲ್ಲಿ ವೀರಾವೇಶದ ಸಾಹಸಕಾರ್ಯಗಳನ್ನು ಮಾಡಿದ್ದರು. ಜನಪದ ಕಥೆಗಳು ಹೇಳುವಂತೆ, ಪ್ರತಾಪ್‌ ಸ್ವತಃ ಮಾನ್‌ ಸಿಂಗ್‌ನ ಮೇಲೆ ದಾಳಿಯನ್ನು ಮಾಡಿದನು: ಅವನ ಕುದುರೆ ಚೇತಕ್‌ ಮಾನ್‌ ಸಿಂಗ್‌ನ ಆನೆಯ ಸೊಂಡಿಲಿನ ಮೇಲೆ ಮೇಲೆ ತನ್ನ ಮುಂಗಾಲುಗಳನ್ನಿರಿಸಿತು ಮತ್ತು ಪ್ರತಾಪ್‌ ಮಾನ್‌ ಸಿಂಗ್‌ನ ಮೇಲೆ ಈಟಿಯನ್ನು ಎಸೆದನು. ಮಾನ್‌ ಸಿಂಗ್‌ ಕೆಳಕ್ಕೆ ಬಗ್ಗಿದ್ದರಿಂದ ಮಾವುತ ಈಟಿಗೆ ಬಲಿಯಾದ.

ಆದಾಗ್ಯೂ, ಮೊಘಲ್ ಸೇನೆಯ ಸಂಖ್ಯಾ ಬಲಾಢ್ಯತೆ ಮತ್ತು ಅವರ ಫಿರಂಗಿಗಳು ಫಲ ನೀಡಿದವು. ಯುದ್ಧದಲ್ಲಿ ಸೋಲುತ್ತಿರುವುದನ್ನು ನೋಡಿ, ರಣರಂಗದಿಂದ ಪಲಾಯನ ಮಾಡುವಂತೆ ಅವನ ಸೇನಾಧಿಕಾರಿಗಳು ಪ್ರತಾಪ್ ಮನವೊಲಿಸುವಲ್ಲಿ ಯಶಸ್ವಿಯಾದರು.(ಇದರಿಂದ ಇನ್ನೊಂದು ದಿನ ಯುದ್ಧಮಾಡಲು ಸಾಧ್ಯವಾಗುತ್ತದೆಂಬುದು ಅವರ ಭಾವನೆಯಾಗಿತ್ತು). ಝಾಲಾ ವಂಶದ ಸದಸ್ಯನಾಗಿರುವ ಪ್ರತಾಪನ ದಂಡಾಧಿಕಾರಿಯೊಬ್ಬ ಪ್ರತಾಪನು ತಪ್ಪಿಸಿಕೊಳ್ಳುವುದಕ್ಕೆ ನೆರವಾಗುವುದಕ್ಕಾಗಿ,ಪ್ರತಾಪನ ವಿಶಿಷ್ಠ ಉಡುಪುಗಳನ್ನು ಧರಿಸಿ, ರಣರಂಗದಲ್ಲಿ ಅವನ ಸ್ಥಾನವನ್ನು ಆಕ್ರಮಿಸಿದ. ಅವನು ತಕ್ಷಣವೇ ಹತನಾಗುತ್ತಾನೆ. ಏತನ್ಮಧ್ಯೆ ಪ್ರತಾಪ್‌ ತನ್ನ ನಂಬಿಕಸ್ಥ ಕುದುರೆ ಚೇತಕನ ಮೇಲೆ ಸವಾರಿ ಮಾಡುತ್ತಾ, ಪರ್ವತಗಳಲ್ಲಿ ಮರೆಯಾಗಿ ತಪ್ಪಿಸಿಕೊಳ್ಳುತ್ತಾನೆ.

ಆದರೆ ಪ್ರತಾಪ್‌ ಮಾನ್‌ ಸಿಂಗ್‌ನನ್ನು ಕೊಲ್ಲಲು ಪ್ರಯತ್ನಿಸುವಾಗ, ಮರ್ಡಾನದಿಂದ (ಆನೆ ಸೊಂಡಲಿನ ಖಡ್ಗ) ಚೇತಕನ ಎಡಗಾಲು ತೀವ್ರವಾಗಿ ಗಾಯಗೊಂಡಿತ್ತು. ಚೇತಕ್‌ಗೆ ತೀವ್ರ ರಕ್ತಸ್ರಾವವಾಗಿ,ರಣರಂಗದಿಂದ ಕೆಲವೇ ಕಿಲೋಮೀಟರ್ ದೂರದ ಸಣ್ಣ ತೊರೆಯನ್ನು ಹಾರಿದ ಬಳಿಕ ಕುಸಿದುಬಿತ್ತು. ಪ್ರತಾಪ್‌ನ ಸೇನಾಧಿಕಾರಿ ಪ್ರತಾಪ್‌ನ ಸೇನಾಉಡುಪಿನ ಶೈಲಿ ಮತ್ತು ರಕ್ಷಾಕವಚವನ್ನು ಧರಿಸಿ ಅನುಕರಣೆ ಮಾಡಿದ್ದು,ಯುದ್ಧದ ಗೊಂದಲದಲ್ಲಿ ಯಾರ ಗಮನಕ್ಕೂ ಬರಲಿಲ್ಲ. ಆದರೆ ಮೊಘಲ್‌ ಸೇನೆಯ ಇಬ್ಬರು ತುರ್ಕಿ‌ ಸೈನಿಕರು ಇದನ್ನು ಗಮನಿಸಿದರು. ಭಾಷೆಯ ಅಡೆತಡೆಯಿಂದಾಗಿ, ಅವರು ತಮ್ಮ ಗುಂಪಿನ ಇತರರಿಗೆ ಈ ವಿಷಯವನ್ನು ತಿಳಿಸಲಾಗಲಿಲ್ಲ. (ಮೊಘಲ್‌ ಸೇನೆಯಲ್ಲಿ ಸೂಕ್ತ ಭಾಷೆಯು ಪರ್ಷಿಯನ್‌,ಮರ್ವಾರಿ ಅಥವಾ ಅರಬಿ ಭಾಷೆಗಳ ಸಂಯೋಜನೆಯಾಗಿತ್ತು). ಅವರು ಸಮಯವನ್ನು ವ್ಯರ್ಥಮಾಡದೇ ಪ್ರತಾಪ್‌ನನ್ನು ಹಿಂಬಾಲಿಸಿದರು. ಪ್ರತಾಪ್‌ನನ್ನು ಹಿಂಬಾಲಿಸಲು ಪ್ರಾರಂಭಿಸಿದ ಕ್ಷಣವೇ, ಮೊಘಲ್‌ ಪರ ಹೋರಾಡುತ್ತಿದ್ದ ಅವನ ತಮ್ಮ ಶಕ್ತಿ ಸಿಂಗ್‌ (ಪ್ರತಾಪ್‌ನ ಕಿರೀಟಧಾರಣೆ ಸಂದರ್ಭದಲ್ಲಿ ಪ್ರತಾಪನೊಂದಿಗೆ ಕೆಲವು ವಿವಾದಗಳಿತ್ತು; ಹೀಗಾಗಿ ಅವನು ಪಕ್ಷಾಂತರ ಮಾಡಿ ಅಕ್ಬರ್‌ನ ಆಸ್ಥಾನಕ್ಕೆ ಸೇರಿದ್ದ) ತನ್ನ ಸ್ವಂತ ಸಹೋದರ ಅಪಾಯದಲ್ಲಿದ್ದಾನೆ ಎಂದು ಮನಗಂಡನು. ಅವನು ಪ್ರತಾಪ್‌ ಸೇನಾಧಿಕಾರಿಯ ತ್ಯಾಗವನ್ನು ಈಗಾಗಲೇ ಪತ್ತೆಮಾಡಿದ್ದನು. ಆಗ ಅವನು ಸಹಾಯ ಮಾಡುವ ಸ್ಥಿತಿಯಲ್ಲಿರಲಿಲ್ಲ. ಆದರೆ ತನ್ನ ಅಣ್ಣನಿಗೆ ಎದುರಾದ ಅಪಾಯಕ್ಕೆ ಪ್ರತಿಕ್ರಿಯಿಸಿದನು. ಅವನು ತುರ್ಕಿ ಸೈನಿಕರನ್ನು ಹಿಂಬಾಲಿಸಿ, ಅವರ ಜತೆ ಏಕಾಂಗಿಯಾಗಿ ಹೋರಾಡಿ ಕೊಲ್ಲುತ್ತಾನೆ. ಏತನ್ಮಧ್ಯೆ,ತೀವ್ರವಾಗಿ ಗಾಯಗೊಂಡಿದ್ದ ಚೇತಕ್‌ ಕುಸಿದು ಬೀಳುತ್ತದೆ. ಪ್ರತಾಪ್‌ ತನ್ನ ತಮ್ಮ ಶಕ್ತಿಸಿಂಗ್‌ ಇಬ್ಬರು ಮೊಘಲ್‌ ಸವಾರರನ್ನು ಕೊಲ್ಲುತ್ತಿರುವುದನ್ನು ಕಾಣುತ್ತಾನೆ. ತನ್ನ ಸೇನಾಧಿಕಾರಿ ಮತ್ತು ಕುದುರೆಯನ್ನು ಕಳೆದುಕೊಂಡು ದುಃಖಿತನಾಗಿದ್ದ ಪ್ರತಾಪ್, ತಮ್ಮನನ್ನು ಅಪ್ಪಿಕೊಂಡು ಕಣ್ಣೀರು ಸುರಿಸುತ್ತಾನೆ. ಶಕ್ತಿಸಿಂಗ್‌ ಸಹ ಅತ್ತನಲ್ಲದೆ, ವೈರಿಯಾಗಿ ಅವನ ವಿರುದ್ಧ ಹೋರಾಡಿದ್ದಕ್ಕೆ ಅಣ್ಣನಲ್ಲಿ ಕ್ಷಮೆಯನ್ನು ಯಾಚಿಸಿದನು. ಪ್ರತಾಪ್‌ ಅವನನ್ನು ಕ್ಷಮಿಸಿದ. (ನಂತರ ಅವನಿಗೆ ಚಿತ್ತೂರಿನ ಸಮೀಪ ದೊಡ್ಡ ಎಸ್ಟೇಟನ್ನು ನೀಡುತ್ತಾನೆ). ಶಕ್ತಿಸಿಂಗ್‌ ನಂತರ ತನ್ನ ಕುದುರೆಯನ್ನು ಪ್ರತಾಪನಿಗೆ ನೀಡಿ, ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ವಿನಂತಿಸುತ್ತಾನೆ. ಈ ಘಟನೆಯು ರಾಜಸ್ಥಾನಿ ಜನಪದ ಗೀತೆಯಲ್ಲಿ ಪ್ರಸಿದ್ಧಿ ಪಡೆದಿದೆ. ಹಾಡು “ಒ ನೀಲೆ ಘೋಡೆ ರೆ ಅಸ್ವರ್‌”ನಲ್ಲಿ (ಒ ನೀಲಿ ಕುದುರೆಯ ಸವಾರ)ದಲ್ಲಿ ಅದು ವರ್ಣಿತವಾಗಿದೆ.

ಚೇತಕ್‌ ಕುದುರೆ ಸತ್ತ ಸ್ಥಳದಲ್ಲಿಯೆ, ಅದಕ್ಕೆ ಭವ್ಯ ಸಮಾಧಿಯನ್ನು ನಿರ್ಮಿಸಲಾಯಿತು.

ಯುದ್ಧದಲ್ಲಿ ಮೊಘಲ್‌ ಸೇನೆಯ ಮೇಲೆ ಉಂಟಾದ ಪರಿಣಾಮ ಕೂಡ ಗಮನಾರ್ಹವಾಗಿತ್ತು. ಮೊಘಲ್‌ ಸೈನಿಕರ ಸಾವುನೋವಿಗೆ ಸಂಬಂಧಪಟ್ಟಂತೆ ಭಾರಿ ನಷ್ಟಗಳನ್ನು ಅನುಭವಿಸಿತು. ಸುತ್ತುಮುತ್ತಲಿನ ಪರ್ವತಪ್ರದೇಶದ ಪ್ರತಾಪ್‌ನ ಪರ ಹೋರಾಡಿದ ಭಿಲ್‌ಬುಡಕಟ್ಟು ಜನಾಂಗದ ಜನರ ಬಾಣಗಳ ತೀವ್ರ ಸುರಿಮಳೆಯಿಂದ ಮೊಘಲ್ ಸೇನೆ ನಷ್ಟಗಳಿಗೆ ಗುರಿಯಾಗಿತ್ತು. ಅವರ ಕೊಡುಗೆಯನ್ನು ಗೌರವಿಸಿ, ಮೇವಾರದ ರಾಜಲಾಂಛನದಲ್ಲಿ ಪ್ರತಾಪನ ಪಕ್ಕದಲ್ಲಿ ಭಿಲ್‌ ಯೋಧನ ಚಿತ್ರವನ್ನು ಇರಿಸಲಾಗಿದೆ.

1527ರಲ್ಲಿ ಮಹಾರಾಣಾ ಪ್ರತಾಪ್‌ನ ಅಜ್ಜ ರಾಣಾ ಸಂಗಾ‌ ಮತ್ತು ಅಕ್ಬರ್‌ ನ ಅಜ್ಜ ಮೊಘಲ್‌ ಬಾಬರ್‌ ನಡುವೆ ನಡೆದ ಎರಡನೇ ಖಣ್ವಾ ಕದನದ ನಂತರ ಹಲ್ಢಿಘಾಟ್‌ ಕದನವು ಮೊಘಲ್‌ರ ವಿರುದ್ಧ ರಜಪೂತರ ಪ್ರಥಮ ಪ್ರಮುಖ ಶತ್ರುಸೈನ ಭೇದಿಸಿದ ಯುದ್ಧವೆನಿಸಿತು. ಹಲವು ರಜಪೂತ ಕುಟುಂಬಗಳು ಇದನ್ನು ಮಹತ್ವದ ದೃಷ್ಟಿಯಿಂದ ಪರಿಗಣಿಸಿವೆ.

ಸೇನಾಧಿಕಾರಿಗಳು[ಬದಲಾಯಿಸಿ]

ಹಕೀಮ್‌ ಖಾನ್‌ ಸುರ್ ಪಠಾಣ್[ಬದಲಾಯಿಸಿ]

ಹಕೀಮ್‌ ಖಾನ್‌ ಸುರ್‌ ಪಠಾನ್‌ ಅಫ್ಘಾನ್‌ನ ಷೇರ್‌ ಷಾ ಸುರಿ ಸಂತತಿಗೆ ಸೇರಿದವನು. ಮೊಘಲ್‌ರಿಂದ ತನ್ನ ಪೂರ್ವಜರಿಗಾದ ಅನ್ಯಾಯಕ್ಕೆ, ಸೇಡನ್ನು ತೀರಿಸಿಕೊಳ್ಳಲು, ಪ್ರತಾಪ್‌ ಸೈನ್ಯವನ್ನು ಸೇರುತ್ತಾನೆ. ಮೊಘಲರು ಅಸಂಖ್ಯಾತ ಹಿಂದೂ ದೇವಾಲಯಗಳನ್ನು ವ್ಯವಸ್ಥಿತವಾಗಿ ನಾಶಗೊಳಿಸಿದರು. ಪ್ರತಾಪ್‌ ಮತ್ತು ಇತರ ರಜಪೂತರು ತಮ್ಮ ಧರ್ಮವನ್ನು ಉಳಿಸಲು ಹೋರಾಡಿದರು. ರಜಪೂತ ಸೇನೆಯಲ್ಲಿ ಹಣಕ್ಕಾಗಿ ದುಡಿಯುವ ಮುಸ್ಲಿಂ ಸೈನಿಕರು ಉಪಸ್ಥಿತರಿದ್ದರು ಎಂದ ಮಾತ್ರಕ್ಕೆ, ರಜಪೂತ ಸೈನ್ಯವು ಹಿಂದೂ ಧರ್ಮವನ್ನು ಉಳಿಸುವುದಕ್ಕಾಗಿ ಮೊಘಲ್‌ರೊಂದಿಗೆ ಹೋರಾಡುವುದಿಲ್ಲ ಎಂದರ್ಥವಲ್ಲ.

ಝಾಲಾ ಮಾನ್‌‌ಸಿಂಗ್‌[ಬದಲಾಯಿಸಿ]

ಝಾಲಾ ಮಾನ್‌‌ಸಿಂಗ್‌ (ಜಲ ಸರ್ದಾರ್ ಎಂದೂ ಸಹ ಹೆಸರಾಗಿರುವ‌)ಸ್ವಾತಂತ್ರಕ್ಕಾಗಿ ಹೋರಾಟದಲ್ಲಿ ಅಸಾಮಾನ್ಯ ಶೌರ್ಯ, ಪರಾಕ್ರಮ ಮತ್ತು ತ್ಯಾಗಕ್ಕೆ ಉದಾಹರಣೆಯಾಗಿದ್ದಾನೆ. 1576ರಲ್ಲಿ ನಡೆದ ಹಲ್ಡಿಘಾಟಿ ಕದನದಲ್ಲಿ, ಮಹಾರಾಣಾ ಪ್ರತಾಪ್‌ ಗಾಯಗೊಂಡಿದ್ದನ್ನು ಕಂಡು (ಖಡ್ಗ, ಈಟಿ ಮತ್ತು ತುಪಾಕಿಯಿಂದ ಮೂರು ಗಾಯಗಳಾಗಿದ್ದವು) ಹಾಗೂ ಅವನು ಕುದುರೆ ಚೇತಕ್‌ ಮೇಲೆ ಪ್ರಜ್ಞೆ ಕಳೆದುಕೊಂಡಿರುವುದನ್ನು ಕಂಡು, ಝಾಲಾ ತಕ್ಷಣವೇ ಪ್ರತಾಪನ ಕಿರೀಟ ಮತ್ತು ರಾಜ ಲಾಂಛನವನ್ನು ಧರಿಸಿ, ತಾನು ಪ್ರತಾಪ್ ಎಂಬ ಗೊಂದಲವನ್ನು ಶತ್ರುವಿನಲ್ಲಿ ಮೂಡಿಸಿದ. ಹೀಗೆ ಮೊಘಲ್‌ ಸೇನೆಯ ಸಂಪೂರ್ಣ ದಾಳಿಯನ್ನು ಸ್ವತಃ ತನ್ನ ಮೇಲೆ ಎಳೆದುಕೊಂಡ. ಅಂತಿಮವಾಗಿ,ಪ್ರತಾಪನ ಜೀವ ಮತ್ತು ಅವನ ದೇಶದ ಸ್ವಾತಂತ್ರವನ್ನು ಉಳಿಸಲು ಝಾಲಾ ತನ್ನ ಪ್ರಾಣತ್ಯಾಗ ಮಾಡಿದ. ಅವನ ಪ್ರಾಣತ್ಯಾಗದ ಕಾರಣದಿಂದಾಗಿ, ಪ್ರತಾಪನು ಮೊಘಲ್‌ರ ವಿರುದ್ಧ ಹೋರಾಟವನ್ನು ಮುಂದುವರಿಸಿದ. ತರುವಾಯ ಚಿತ್ತೂರು ಹೊರತುಪಡಿಸಿ, ಮೇವಾರದ ಎಲ್ಲ ಪ್ರದೇಶಗಳನ್ನು ಮುಕ್ತಗೊಳಿಸಿ ಮರುಸ್ಥಾಪನೆ ಮಾಡಿದ.

ಪ್ರಸ್ತುತ ದಿನದ ಉದಯಪುರದಲ್ಲಿ, ಝಾಲನ ವಂಶಜರು ಮೇವಾರದ ಲಾಂಛನವನ್ನು ಮಹಾರಾಣಾ ಪ್ರತಾಪ್‌ ನೀಡಿದ ಬಿರುದಿನಂತೆ ತಮ್ಮ ಲಾಂಛನವಾಗಿ ಹೊಂದಿದ್ದಾರೆ. ಶ್ರೀ ಅಶೋಕ ದತ್ತಾತ್ರೇಯ ಕುಲಕರ್ಣಿ ಹೇಳುವಂತೆ, ಮಾನ್‌ ಸಿಂಗ್‌ ಝಾಲಾ ಪರಾಕ್ರಮಿ ಸೈನಿಕನಾಗಿರಲಿಲ್ಲ, ಆದರೆ ಬೀಡಾ ಝಾಲಾ ಪರಾಕ್ರಮಿಯಾಗಿದ್ದ. ಉಲ್ಲೇಖ- ಮಹಾರಾಣಾ ಪ್ರತಾಪಂಚ ರಾಜವಂಶ್ (ಮೇವಾರ ಮತ್ತು ಗುಹಿಲೋಟ್ ಸಂತತಿ ಕುರಿತ ಮರಾಠಿ ಪುಸ್ತಕ)

ತೋಮರರು[ಬದಲಾಯಿಸಿ]

ಗ್ವಾಲಿಯರ್‌ನ ರಾಜಾ ರಾಮ್ ಷಾ ತೋಮರನು ರಾಣಾ ಉದಯ್‌ ಸಿಂಗ್‌ನ ಮಗಳನ್ನು ಮದುವೆಯಾಗಿದ್ದನು. ಮೊಘಲರು ಅವನಿಂದ ಗ್ವಾಲಿಯರ್‌ ವಶಪಡಿಸಿಕೊಂಡ ನಂತರ ಮೇವಾರದಲ್ಲಿ ಅವನು ರಕ್ಷಣೆ ಪಡೆದಿದ್ದನು. ಅವನು ತನ್ನ 300 ಮಂದಿ ಯೋಧರೊಂದಿಗೆ ಹಳ್ಡಿಘಾಟಿ ಕದನದಲ್ಲಿ ಭಾಗವಹಿಸಿದ್ದನು. ಅವನ ಉಳಿದ ಒಬ್ಬನೇ ಮಗನನ್ನು ವಂಶವು ಉಳಿದುಕೊಳ್ಳಬೇಕೆಂಬ ಸಲುವಾಗಿ ಬಿಕನೆರ್‌ಗೆ ಕಳುಹಿಸಿದ. ಮೇವಾರದ ರಕ್ಷಣೆಗಾಗಿ ಎಲ್ಲರೂ ತಮ್ಮ ಜೀವ ತೆತ್ತರು.

ಬರ್ಗುಜರ್‌ಗಳು[ಬದಲಾಯಿಸಿ]

ಬರ್ಗುಜರ್‌‌ಗಳು ಮೇವಾರದ ಅತ್ಯಂತ ನಂಬಿಗಸ್ಥ ಮಿತ್ರರಾಗಿದ್ದರು. ಇವರು ರಾಣಾ ಜತೆ ಸೇರಿಕೊಂಡು ಕೊನೆಯವರೆಗೂ ಹೋರಾಡಿದರು.ಎಲ್ಲಾ ಯುದ್ಧದಲ್ಲಿ ಇವರು ರಣರಂಗದ ಮುಂಚೂಣಿಯಲ್ಲಿ ನಿಂತು, ತೀವ್ರವಾಗಿ ಹೋರಾಡುತ್ತಿದ್ದರು.

ಭೀಮ್‌ ಸಿಂಗ್‌ ದೊಡಿಯಾ[ಬದಲಾಯಿಸಿ]

ಭೀಮ್‌ ಸಿಂಗ್‌ ದೊಡಿಯಾ ಮೇವಾರದ ವರಿಷ್ಠರಲ್ಲಿ ಒಬ್ಬನಾಗಿದ್ದನು. ಗೊಗುಂಡಾದಲ್ಲಿ (1576) ಹಳ್ದಿಘಾಟಿ ಕದನಕ್ಕೆ ಮೊದಲು ಮಹಾರಾಣಾ ಪ್ರತಾಪ್‌ ಸಿಂಗ್‌ ನಡೆಸಿದ ಯುದ್ಧಕ್ಕೆ ಸಂಬಂಧಿಸಿದ ಸಭೆಯಲ್ಲಿ ಭಾಗವಹಿಸಿದ್ದನು.

ಚೇತಕ್‌[ಬದಲಾಯಿಸಿ]

ಮಾರ್ವಾರಿ ತಳಿ ಕುದುರೆಯಾಗಿದ್ದ (ದೇಶೀಯ ಭಾರತೀಯ ತಳಿ) ಚೇತಕ್‌ ಬಿಳಿ ಕುದುರೆಯು, ಚಿಕ್ಕ ಕುತ್ತಿಗೆ, ಪೊದೆಯಂತೆ ದಟ್ಟವಾದ ಕೂದಲುಳ್ಳ ಬಾಲ, ಕಿರಿದಾದ ಬೆನ್ನು, ದೊಡ್ಡ ಕಣ್ಣುಗಳು, ಗಟ್ಟಿಮುಟ್ಟಾದ ಭುಜಗಳು, ಅಗಲವಾದ ಹಣೆ ಮತ್ತು ಎದೆಯನ್ನು ಹೊಂದಿತ್ತು. ಸುಂದರ ಮತ್ತು ಕಾವ್ಯಾತ್ಮಕವಾಗಿ ದೈವಸ್ವರೂಪಿ ಎಂದು ಪರಿಗಣಿಸಲಾದ ಈ ಕುದುರೆಯು ಸಮತೋಲಿತ ಸ್ನಾಯುಬಲದ ದೇಹ ಹೊಂದಿದ್ದು,ಜನ್ಮತಃ "ಹಾರುವ" ಕಾಲುಗಳೊಂದಿಗೆ ಅತ್ಯಂತ ಸುಂದರವಾಗಿ ಕಾಣುತ್ತಿತ್ತು. ಚೇತಕ್‌ ಅಪರೂಪದ ತೀವ್ರ ಬುದ್ಧಿವಂತಿಕೆ,ಸಂಯಮ ಮತ್ತು ಧೈರ್ಯದ ಜತೆ ಒಡೆಯನಿಗೆ ಅತೀವ ನಿಷ್ಠೆಯನ್ನು ಹೊಂದಿತ್ತೆಂದು ವರ್ಣಿಸಲಾಗಿತ್ತು.

ಮಹಾರಾಣಾ ಪ್ರತಾಪ್‌ನ ಕುದುರೆ ಚೇತಕ್‌ ಹಳ್ಡಿಘಾಟಿ ಕದನದಲ್ಲಿ ಪರಾಕ್ರಮವನ್ನು ಮೆರೆದು ಸತ್ತಾಗ, ಪ್ರತಾಪ್‌ ಅಳುತ್ತಾನೆ ಹಾಗೂ ತನ್ನ ದೇವರನ್ನು ಪ್ರಾರ್ಥಿಸುತ್ತಾನೆ:

लोक में रहेंगे परलोक हु ल्हेंगे तोहू,

पत्ता भूली हेंगे कहा चेतक की चाकरी ||

में तो अधीन सब भांति सो तुम्हारे सदा एकलिंग,

तापे कहा फेर जयमत हवे नागारो दे ||

करनो तू चाहे कछु और नुकसान कर ,

धर्मराज ! मेरे घर एतो मत धारो दे ||

दीन होई बोलत हूँ पीछो जीयदान देहूं ,

करुना निधान नाथ ! अबके तो टारो दे ||

बार बार कहत प्रताप मेरे चेतक को ,

एरे करतार ! एक बार तो उधारो||

ರಾಣಾ ಪೂಂಜಾ[ಬದಲಾಯಿಸಿ]

ಹಲ್ಡಿಘಾಟಿ ಕದನದಲ್ಲಿ ಭಿಲ್‌ ಯೋಧರು ರಾಣಾ ಪೂಂಜಾನ ನಾಯಕತ್ವದಲ್ಲಿ ಹೋರಾಡಿದರು. ಉತ್ಸಾಹಿ ಭಿಲ್‌ ಯೋಧರು ರಹಸ್ಯ ಮಾಹಿತಿದಾರರಂತೆ ಮತ್ತು ಓಡಾಡುವ ಓಲೆಕಾರರಂತೆ ಕಾರ್ಯನಿರ್ವಹಿಸುತ್ತಿದ್ದರು. ಮೇವಾರ ರಾಜ್ಯದಲ್ಲಿ ಗುಹಿಲ್‌ ವಂಶಜರ ಇತಿಹಾಸವು ಧೈರ್ಯಶಾಲಿ ಸಾಹಸಗಳ ಕಥೆಗಳಿಂದ ಸಂಪೂರ್ಣವಾಗಿ ಕೂಡಿತ್ತು. ಮೇವಾರಕ್ಕೆ ಭಿಲ್‌ ಸಮುದಾಯದ ಕೊಡುಗೆಯು ಅವಿಸ್ಮರಣೀಯವಾದದ್ದು. ಗುಹಾದಿತ್ಯನ ಪಟ್ಟಾಭಿಷೇಕದ ಸಮಯದಲ್ಲಿ, “ಮಾಂಡಲಿಕ್ “ಭಿಲ್‌” ಸರ್ದಾರನ ಮುಷ್ಠಿಯಿಂದ ರಕ್ತ ಹರಿಸುವ ಮೂಲಕ ತಿಲಕ್‌ ಸಮಾರಂಭವನ್ನು ನಡೆಸಲಾಗುತ್ತಿತ್ತು. ”

ಇದಕ್ಕಾಗಿ ಮೇವಾರ ರಾಜ್ಯದ ರಾಜ ಲಾಂಛನವು ವಿಜಯ ಗೋಪುರವನ್ನು ಹೊಂದಿರುತ್ತದೆ. ಅದಕ್ಕೆ ಒಂದು ಕಡೆ ರಜಪೂತ ಸೈನಿಕರು ಮತ್ತು ಇನ್ನೊಂದು ಕಡೆ “ಬಿಲ್ಲು ಮತ್ತು ಬಾಣವನ್ನು ಹಿಡಿದಿರುವ ಭಿಲ್‌” ಸೈನಿಕರು ರಕ್ಷಣೆಯನ್ನು ಒದಗಿಸುವರು.

ರಾಣಾ ಪೂಂಜಾ ಪನರ್ವಾದ ಸಿಸೋಡಿಯ ವಂಶಸ್ಥ. ಥಿಕಾನ ಮಹಾರಾಣಾ ಕಿ ಜೈ

ಭಾಮಾ ಷಾ (ಅಥವಾ ಭಾಮಾಷಾ)[ಬದಲಾಯಿಸಿ]

ಭಾಮಾಷಾನು ಮೇವಾರದ ಇತಿಹಾಸದಲ್ಲಿ ಒಂದು ಛಾಪನ್ನು ಮೂಡಿಸಿದ್ದನು. ಇವನು ಭರ್ಮಾಲ್‌ ಕವಾಡಿಯಾನ ಮಗನಾಗಿದ್ದು, 450 ವರ್ಷಗಳ ಹಿಂದೆ ಜನಿಸಿದ್ದರು. ಅವನು ಪ್ರಾಮಾಣಿಕತೆ, ನಂಬಿಕೆ ಮತ್ತು ಕರ್ತವನಿಷ್ಠತೆಗೆ ಉದಾಹರಣೆಯಾಗಿದ್ದನು. ಅವನು ಕೇವಲ ಪ್ರತಾಪ್‌ನ ಕೋಶಾಧಿಕಾರಿಯಾಗಿರದೆ, ಅಗತ್ಯವಿದ್ದಾಗ ಸೈನಿಕನಂತೆ ಹೋರಾಡಲು ಸಿದ್ಧನಾಗಿದ್ದನು. 12 ವರ್ಷಗಳ ಅವಧಿಗೆ ಮಹಾರಾಣಾ ಪ್ರತಾಪ್‌ನು 25,000 ಸೈನಿಕರ ಸೇನೆಯನ್ನು ಸೂಕ್ತವಾಗಿ ನಿರ್ವಹಿಸಲು ಸಮರ್ಥನಾಗಿದ್ದನು. ಏಕೆಂದರೆ ಹಣಕಾಸಿನ ಬಿಕ್ಕಟ್ಟಿನ ಅವಧಿಯಲ್ಲಿ ಭಾಮಾಷಾ ತನ್ನ ಆಸ್ತಿ ಮಾತ್ರವಲ್ಲದೆ, ಮಾಲಾಪುರದಿಂದ 25 ಲಕ್ಷ ರೂಪಾಯಿ ಸಂಗ್ರಹ ಮತ್ತು 20,000 ಚಿನ್ನದ ನಾಣ್ಯಗಳನ್ನು ಕೊಡುಗೆಯಾಗಿ ನೀಡಿದ್ದನು. ಭಾಮಾಷಾ ಮಹಾರಾಣಾ ಅಮರ್‌ಸಿಂಗ್‌ಗೆ ಕೂಡ ಸೇವೆ ಸಲ್ಲಿಸಿದ್ದನು. ಅದರ ನಂತರ ಅವನ ಮಗ ಜೀವ್‌ ಷಾ ಮಹಾರಾಣಾನ ಕೋಶಾಧಿಕಾರಿಯಾದನು. ಭಾಮಾಷಾ ಸಾಯುವ ಸಂದರ್ಭದಲ್ಲಿ, ಮಹಾರಾಣಾ ಅಮರ್‌ಸಿಂಗ್‌ಗೆ ರಾಜ ಖಜಾನೆಯ ವಿವರವಾದ ದಾಖಲೆಯನ್ನು ಹಸ್ತಾಂತರಿಸುವಂತೆ ತನ್ನ ಪತ್ನಿಗೆ ಹೇಳಿ ಸತ್ತಿದ್ದನು.ಉಲ್ಲೇಖ. ಮಹಾರಾಣಾ ಪ್ರತಾಪಂಚ ರಾಜವಂಶ್-2008ರಲ್ಲಿ ಪ್ರಕಟವಾದ ಶ್ರೀ ಅಶೋಖ ದತ್ತಾತ್ರೇಯ ಕುಲಕರ್ಣಿ ಬರೆದ ಮರಾಠಿ ಪುಸ್ತಕ.

ಯುದ್ಧದ ಪರಿಣಾಮಗಳು[ಬದಲಾಯಿಸಿ]

ಯುದ್ಧದ ನಂತರ ಪ್ರತಾಪ್‌ ಅರಾವಳಿಯ ಬೆಟ್ಟದ ಪ್ರದೇಶದ ಹಿಮ್ಮೆಟ್ಟಿಹೋಗಿ, ತನ್ನ ಹೋರಾಟ ಮುಂದುವರಿಸುತ್ತಾನೆ. ಮುಖಾಮುಖಿಯಾಗಿ ಹೋರಾಡುವ ಅವನ ಒಂದು ಪ್ರಯತ್ನವು ವಿಫಲವಾದ ಕಾರಣ, ಪ್ರತಾಪ್‌ ಗೆರಿಲ್ಲಾ ಯುದ್ಧತಂತ್ರವನ್ನು ಮುಂದುವರಿಸಿದನು. ಪ್ರತಾಪ್‌ ಪರ್ವತ ಪ್ರದೇಶಗಳನ್ನು ನೆಲೆಯಾಗಿ ಬಳಸಿಕೊಂಡು, ಮೊಘಲ್‌ ಸೈನಿಕರ ಮೇಲೆ ದಾಳಿ ಮಾಡಿದನು. ಮೇವಾರದಲ್ಲಿ ಆಕ್ರಮಿಸಿಕೊಂಡಿರುವ ಮೊಘಲ್‌ ಸೇನೆಗೆ ಶಾಂತಿಯ ಬಗ್ಗೆ ತಿಳಿದಿಲ್ಲ ಎಂದು ಪ್ರತಾಪ್‌ ಖಚಿತಪಡಿಸಿಕೊಂಡನು: ಬೆಟ್ಟಗಳ ನಡುವಿನ ಅಡಗುತಾಣಗಳಿಂದ ಪ್ರತಾಪ್‌ನನ್ನು ಹುಡುಕಲು, ಅಕ್ಬರ್‌ ಮೂರು ಬಾರಿ ಸೇನೆಗಳನ್ನು ಕಳಿಸಿದ. ಆದರೆ ಅವೆಲ್ಲವೂ ವಿಫಲವಾಯಿತು. ಈ ಸಮಯದಲ್ಲಿ,ತನ್ನ ಹಿತೈಷಿ ಭಾಮಾಷಾನಿಂದ ಪ್ರತಾಪ್‌ ಹೆಚ್ಚಿನ ಹಣಕಾಸಿನ ಸಹಾಯವನ್ನು ಪಡೆದನು. ಅರಾವಳಿ ಬೆಟ್ಟಗಳಲ್ಲಿರುವ ಭಿಲ್‌ ಬುಡಕಟ್ಟಿನವರು ಯುದ್ಧದ ಸಂದರ್ಭಗಳಲ್ಲಿ ಪ್ರತಾಪ್‌ನಿಗೆ ಬೆಂಬಲವನ್ನು ಹಾಗೂ ಶಾಂತಿಯ ಸಮಯದಲ್ಲಿ ಕಾಡಿನಿಂದ ಹೊರಗೆ ಜೀವಿಸುವ ತಮ್ಮ ಕೌಶಲ್ಯವನ್ನು ಒದಗಿಸಿದ್ದರು. ಹಾಗೇಯೆ ವರ್ಷಗಳು ಉರುಳಿದವು. ಇದರ ಬಗ್ಗೆ ಜೇಮ್ಸ್‌ ಟೋಡ್‌ರು ಹೀಗೆ ಬರೆದಿದ್ದಾರೆ: "ಅರಾವಳಿ ಪರ್ವತ ಪ್ರದೇಶದಲ್ಲಿ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಮಹಾರಾಣಾ ಪ್ರತಾಪ್ ಸಿಂಗ್‌ನ ಕೃತ್ಯದಿಂದ ಪವಿತ್ರವಾಗಿರದ ಯಾವುದೇ ಕಣಿವೆಯಿಲ್ಲ. ಅವನಿಗೆ ಕೆಲವು ಬಾರಿ ಅದ್ಭುತ ಜಯ, ಹೆಚ್ಚಿನ ಬಾರಿ ಖ್ಯಾತಿವೆತ್ತ ಸೋಲು ಉಂಟಾಯಿತು." ಒಂದು ಸಂದರ್ಭದಲ್ಲಿ ಉದಯಪುರದ ಹತ್ತಿರವಿರುವ ಜವಾರ್‌ನಲ್ಲಿರುವ ಪುರಾತನ ಸತು ಗಣಿಗಳ ಆಳದೊಳಕ್ಕೆ ರಜಪೂತ ಮಹಿಳೆಯರು ಮತ್ತು ಮಕ್ಕಳನ್ನು ಭಿಲ್ಲರು ಸಕಾಲದಲ್ಲಿ ರವಾನಿಸಿ ರಕ್ಷಣೆ ಮಾಡಿದ್ದರು. ನಂತರ ಪ್ರತಾಪ್‌ ಮೇವಾರದ ಪರ್ವತಾಚ್ಛಾದಿತ ನೈರುತ್ಯ ಭಾಗದಲ್ಲಿನ ಚಾವಂದ್‌ಗೆ ತನ್ನ ವಾಸಸ್ಥಾನವನ್ನು ಬದಲಾಯಿಸಿದನು. ಆದರೂ ಮೊಘಲರಿಂದ ಕಿರುಕುಳಕ್ಕೀಡಾದ ಅವರು, ಬೆಟ್ಟಪ್ರದೇಶದ ಕಮರಿಗಳಲ್ಲಿ ಕಾಡಿನ ಬೆರಿಹಣ್ಣುಗಳು ಹಾಗೂ ಬೇಟೆಯಾಡುವ ಮತ್ತು ಮೀನುಹಿಡಿಯುವ ಮೂಲಕ ಅನೇಕ ವರ್ಷಗಳ ಕಾಲ ಬದುಕುಸಾಗಿಸಿದರು. ಕಷ್ಟದ ದಿನಗಳಲ್ಲಿ ಪ್ರತಾಪ್‌ನು ಹುಲ್ಲಿನ ಕಾಳುಗಳಿಂದ ಮಾಡಿದ ಚಪಾತಿಗಳನ್ನು ತಿನ್ನುತ್ತಿದ್ದನು ಎಂದು ದಂತಕಥೆಗಳು ಹೇಳುತ್ತವೆ.

ಪ್ರಥ್ವಿರಾಜ್‌ ರಾಥೋರ್‌ರ ಪತ್ರ[ಬದಲಾಯಿಸಿ]

ಪ್ರಥ್ವಿರಾಜ್‌ ರಾಥೋರ್‌ರು ಪ್ರತಾಪನಿಗೆ ಕಾವ್ಯಾತ್ಮಕ ಭಾಷೆಯಲ್ಲಿ ಹೀಗೆ ಪತ್ರವನ್ನು ಬರೆದಿದ್ದಾರೆ.

ಪತಲ್ ಸನ್ ಪತ್ಶಃ, ಬೊಲೆ ಮುಖ್ ಹುಂತ ಬಾಯನ್
ಮಿಹಿರ್ ಪಿಚಂ ದಿಸ್ ಮನ್, ಉಗೆ ಕಸಪ್ ರಾವ್ ಉಟ್
' ಪಟಾಕುನ್ ಮುನ್‌ಚ್ಯಾನ್ ಪನ್‌, ಕೆ ಪತಕುನ್ ನಿಜ ತನ್‌ ಕರಡ್‌
ಡಿಜೆ ಲಿಖ್ ದೀವಾನ್, ಇನ್ ದೋ ಮಹಲಿ ಬಾತ್‌ ಇಕ್‌
' (ಪ್ರತಾಪನ ಬಾಯಿ "ಬಾದ್‌ಷಾ" ಎನ್ನಲು ಪ್ರಾರಂಭಿಸಿದೆ. ಒ ರಾವ್‌! ಸೂರ್ಯ ಪಶ್ಚಿಮದಲ್ಲಿ ಮೂಡಲು ಪ್ರಾರಂಭಿಸಿದನೇ? ನಾನು ಕೈಗಳನ್ನು ನನ್ನ ಮೀಸೆಯ ಮೇಲಿಡಬೇಕೇ ಅಥವಾ ನನ್ನ ಸ್ವಂತ ಕೈಗಳೊಂದಿಗೆ ನನ್ನ ದೇಹ ಬೀಳಬೇಕೆ? ಒ ದಿವಾನ್‌! ಇವೆರಡರಲ್ಲಿ ಒಂದನ್ನು ಆಯ್ಕೆ ಮಾಡಿ, ನನಗೆ ಉತ್ತರವನ್ನು ಬರೆಯಿರಿ.)

ಈ ಪತ್ರಕ್ಕೆ ಪ್ರತಾಪ್‌ ಕೆಳಗಿನಂತೆ ಉತ್ತರಿಸಿದನು.

ತುರಕ್ ಕಹಾಸಿ ತುರಕದೊ, ಇನ್ ಮುಖ್ ಸನ್ ಇಕ್ಲಿಂಗ್
' ಉಗೆ ಜ್ಯಾ ಹಿ ಉಗಾಸಿ, ಪರಚಿ ಬಿಚ್ ಪತಂಗ್
' ಖುಷಿ ಹುಂತ್ ಪೀತ್ಹಲ್ ಕಮದ್ಹ್, ಪತಕೋ ಮುಂಚ್ಯನ್ ಪಂ
' ಜೆತೆ ಹಾಯ್ ಪಚತನ್ ಪಟೋ, ಕಿಳಮ ಸಿರ್ ಕೆವನ್
' (ಏಕಲಿಂಗಿಜೀ ದೇವರು ಯಾವಾಗಲೂ ನನ್ನ ಬಾಯಿಯಿಂದ "ತುರ್ಕಿ" ಎಂದು ಹೇಳುವಂತೆ ಮಾಡುವರು. ಯಾವಾಗಲೂ ಸೂರ್ಯನು ಪೂರ್ವದಲ್ಲಿ ಮೂಡುವನು. ಓ ಪ್ರಥ್ವಿರಾಜ್‌ ರಾಥೋರ್‌ರೇ, ಸಂತೋಷದಿಂದಿರಿ, ನಿಮ್ಮ ಕೈಯನ್ನು ನಿಮ್ಮ ಮೀಸೆಯ ಮೇಲಿರಿಸಿ. ಪ್ರತಾಪ ತನ್ನದೆ ಕಾಲಿನಲ್ಲಿ ನಿಂತುಕೊಳ್ಳುವ ತನಕ, ಅವನ ಖಡ್ಗವು ವೈರಿಗಳ ತಲೆಯ ಮೇಲೆ ಹರಿದಾಡುವುದು.)

ನೆಲೆಕಳೆದುಕೊಂಡ ವ್ಯಕ್ತಿಗಳು ತಿನ್ನಲು ಆಹಾರವಿಲ್ಲದ ಹಸಿವಿನಿಂದ ನರಳುವ ಸ್ಥಿತಿಯಲ್ಲಿರುವಾಗ, ಪ್ರತಾಪ್‌ ಅಕ್ಬರ್‌ನಿಗೆ ತಾನು ಒಪ್ಪಂದಕ್ಕೆ ಮಾತುಕತೆಯಾಡಲು ತಯಾರಾಗಿರುವುದಾಗಿ ಸೂಚಿಸಿದ ಪತ್ರವನ್ನು ಬರೆಯುತ್ತಾನೆ. ಪ್ರತಾಪ್‌ನ ಮೊದಲ ಸೋದರ ಸಂಬಂಧಿಯಾಗಿದ್ದ, (ಅವನ ತಾಯಿಯ ಸಹೋದರಿಯ ಮಗ) ಅಕ್ಬರ್‌ನ ಆಸ್ಥಾನಿಕರಲ್ಲಿ ಒಬ್ಬನಾದ ಪ್ರಥ್ವಿರಾಜ್‌ ರಾಥೋರ್‌ನಿಗೆ ಈ ಪ್ರಸ್ತಾಪದ ಬಗ್ಗೆ ತಿಳಿಯುತ್ತದೆ. ಅವನ ತನ್ನ ಸೋದರಸಂಬಂಧಿ ಪ್ರತಾಪ್‌ನಿಗೆ ನಿರಾಶೆಯನ್ನು ವ್ಯಕ್ತಪಡಿಸಿ, ಹೀಗೆ ಬರೆದನು:

ಹಿಂದೂ ಸೂರ್ಯನ ಮೇಲೆ ಹಿಂದೂಗಳ ಆಶಯಗಳು ನಿಂತಿವೆ. ಆದರೂ ರಾಣಾ ಅವುಗಳನ್ನು ತ್ಯಜಿಸಿದ್ದಾನೆ. ಆದರೆ ಪ್ರತಾಪನಿಗೆ ಸಂಬಂಧಿಸಿದಂತೆ, ಅಕ್ಬರ್ ಎಲ್ಲರನ್ನೂ ಒಂದೇ ಮಟ್ಟದಲ್ಲಿರಿಸುತ್ತಾನೆ. ನಮ್ಮ ಮುಖಂಡರು ಶೌರ್ಯವನ್ನು ಕಳೆದುಕೊಂಡಿದ್ದಾರೆ ಮತ್ತು ಅವರ ಮಹಿಳೆಯರು ಗೌರವ ಕಳೆದುಕೊಂಡಿದ್ದಾರೆ. ನಮ್ಮ ಜನಾಂಗದ ಮಾರುಕಟ್ಟೆಯಲ್ಲಿ ಅಕ್ಬರ್‌ ಒಬ್ಬ ದಲ್ಲಾಳಿ; ಅವನು ಉದಯನ ಪುತ್ರನನ್ನು ಬಿಟ್ಟು ಎಲ್ಲರನ್ನೂ ಖರೀದಿಸಿದನು.(ಮೇವಾರದ ಎರಡನೇ ಸಿಂಗ್‌) ಅವನು ಅಕ್ಬರನ ದರವನ್ನು ಮೀರಿದ್ದಾನೆ. ಏನು ನಿಜವಾದ ರಜಪೂತನು ನೌರೋಜ ದ ಗೌರವದಲ್ಲಿ ಭಾಗವಹಿಸುತ್ತಾನಾ [ಪರ್ಷಿಯಾದ ಹೊಸವರ್ಷದ ಆಚರಣೆ, ಇದರಲ್ಲಿ ಅಕ್ಬರ್‌ ತನ್ನ ಖುಷಿಗಾಗಿ ಮಹಿಳೆಯರನ್ನು ಆರಿಸುತ್ತಾನೆ]ಆದರೂ ಇಲ್ಲಿಯ ತನಕ ಎಷ್ಟು ಜನ ವಿನಿಮಯಗೊಂಡಿದ್ದಾರೆ? ಈ ಮಾರುಕಟ್ಟೆಗೆ ಚಿತ್ತೂರು ಒಳಪಡುವುದೇ...? ಪಟ್ಟಾ (ಪ್ರತಾಪ್‌ ಸಿಂಗ್‌ನ ಅಕ್ಕರೆಯ ಹೆಸರು‌) ಸಂಪತ್ತನ್ನು ಪೋಲುಮಾಡಿದ್ದರೂ (ಯುದ್ಧದಲ್ಲಿ),ಈ ನಿಧಿಯನ್ನು ರಕ್ಷಿಸಿಕೊಂಡಿದ್ದ. ಮನುಷ್ಯನನ್ನು ಹತಾಶೆಯಿಂದಾಗಿ,ಅಗೌರವದ ಪ್ರತ್ಯಕ್ಷದರ್ಶನಕ್ಕೆ ಈ ಮಾರುಕಟ್ಟೆಗೆ ಎಳೆದುತಂದಿದೆ. : ಅಂತಹ ಅಪಕೀರ್ತಿಯಿಂದ ಹಮ್ಮಿರ್‌ನ (ಮಹಾರಾಣಾ ಹಮ್ಮಿರ್‌) ವಂಶಜರು ಮಾತ್ರ ರಕ್ಷಿಸಲ್ಪಟ್ಟರು. ಪ್ರತಾಪನ ರಹಸ್ಯ ನೆರವು ಎಲ್ಲಿಂದ ಹೊಮ್ಮುತ್ತದೆಂದು ಜಗತ್ತು ಕೇಳುತ್ತದೆ. ಎಲ್ಲಿಂದಲೂ ಅಲ್ಲ, ಅವನ ಪೌರುಷತನದ ಆತ್ಮದಿಂದ ಮತ್ತು ಅವನ ಖಡ್ಗದಿಂದ.. ಮಾರುಕಟ್ಟೆಯ ವ್ಯಕ್ತಿಗಳ ದಲ್ಲಾಳಿ(ಅಕ್ಬರ್)ಯನ್ನು ಒಂದು ದಿನ ಮೀರಿಸಬಹುದು, ಅವನು ಶಾಶ್ವತವಾಗಿ ಬದುಕಲು ಸಾಧ್ಯವಿಲ್ಲ. ಆಗ ನಮ್ಮ ಪೀಳಿಗೆಯು ನಮ್ಮ ನಿರ್ಜನ ಭೂಮಿಗಳಲ್ಲಿ ರಜಪೂತರ ಬೀಜ ಬಿತ್ತಲು ಪ್ರತಾಪನ ಬಳಿ ಬರುತ್ತದೆ. ಅದರ ರಕ್ಷಣೆಗೆ ಎಲ್ಲರೂ ಅವನತ್ತ ನೋಡುತ್ತಿದ್ದು,ಅದರ ಪರಿಶುದ್ಧತೆ ಮತ್ತೆ ಪ್ರಕಾಶಿಸಬಹುದು. ಪಶ್ಚಿಮದಲ್ಲಿ ಸೂರ್ಯ ಮೂಡುವುದನ್ನು ಕಾಣುವ ರೀತಿಯಲ್ಲಿ ಪ್ರತಾಪ್ ಅಕ್ಬರನನ್ನು ತನ್ನ ಚಕ್ರವರ್ತಿ ಎಂದು ಕರೆದನೆಂಬುದನ್ನು ನಂಬಲು ನನಗೆ ಸಾಧ್ಯವಾಗುತ್ತಿಲ್ಲ. ಹೇಳು ನಾನೆಲ್ಲಿ ನಿಲ್ಲಲಿ? ನಾನು ಕುತ್ತಿಗೆಯನ್ನು ಕತ್ತರಿಸಿಕೊಳ್ಳಲು ನನ್ನ ಖಡ್ಗವನ್ನು ಬಳಸಲೇ ಅಥವಾ ನನ್ನ ಹೆಮ್ಮೆಯ ಸಂಬಂಧವನ್ನು ಮುಂದುವರಿಸಲೇ?

ಇದಕ್ಕೆ ಪ್ರತಾಪ್‌ ಅವನಿಗೆ ಹೀಗೆ ಪ್ರತ್ಯುತ್ತರ ನೀಡಿದ:

ಏಕಲಿಂಗ ದೇವರ ಆಣೆಯಾಗಿಯೂ, ಪ್ರತಾಪ್ ಚಕ್ರವರ್ತಿಯನ್ನು ತುರ್ಕಿ ಎಂದೇ ಕರೆಯುತ್ತಾನೆ (ಅನೇಕ ಭಾರತೀಯ ಭಾಷೆಗಳಲ್ಲಿ ತುರ್ಕಿ ಪದ ಹೀನಾರ್ಥಕ ಭಾವವನ್ನು ಬಿಂಬಿಸುತ್ತದೆ ) ಹಾಗೂ ಸೂರ್ಯ ಪೂರ್ವದಲ್ಲೇ ಮೂಡುತ್ತಾನೆ. ಪ್ರತಾಪನ ಖಡ್ಗವು ಮೊಘಲರ ತಲೆಯ ಮೇಲೆ ತೂಗಾಡುವ ತನಕ ನೀವು ಹೆಮ್ಮೆಯ ಜೀವನವನ್ನು ಮುಂದುವರಿಸಬಹುದು. ಒಂದು ವೇಳೆ ಪ್ರತಾಪನು ಅಕ್ಬರ್‌ನನ್ನು ಸಹಿಸಿಕೊಂಡರೆ, ಅವನು ಸಂಗಾನ ವಂಶಜರಲ್ಲಿ ತಪ್ಪಿತಸ್ಥನೆನಿಸುತ್ತಾನೆ.ಈ ವಾಗ್ಯುದ್ಧದಲ್ಲಿ ಅನುಮಾನವೇ ಇಲ್ಲ ಪ್ರಥ್ವಿರಾಜ್,ನೀವು ಒಳ್ಳೆಯದನ್ನು ಪಡೆಯುತ್ತೀರಿ, "

ಹೀಗೆ ಪ್ರತಾಪ್‌ ಮತ್ತು ಅಕ್ಬರ್‌ ನಡುವಿನ ಪ್ರಾರಂಬಿಕ ಹೊಂದಾಣಿಕೆಯು ಅಂತ್ಯಗೊಂಡಿತು. ಈ ಪ್ರಥ್ವಿರಾಜ್ ರಾಥೋರ್ ಶಕ್ತಿಸಿಂಗ್ ಸೋದರಿ(ಮಹಾರಾಣಾ ಪ್ರತಾಪ್ ಮಲಸಹೋದರ)ಕಿರಣ್‌ಮಯಿ ಪತಿಯಾಗಿದ್ದನು.

ಅಕ್ಬರ್‌ನ ದಂಡಯಾತ್ರೆಗಳು[ಬದಲಾಯಿಸಿ]

ಮಹಾರಾಣಾ ಪ್ರತಾಪ್ ವಿರುದ್ಧ ಅಕ್ಬರ್ ಒಂದರ ಹಿಂದೊಂದು ದಂಡಯಾತ್ರೆಯನ್ನು ಕೈಗೊಳ್ಳುತ್ತಾನಾದರೂ, ಅದರಲ್ಲಿ ಯಶಸ್ವಿಯಾಗುವುದಿಲ್ಲ. ಮಹಾರಾಣಾ ಪ್ರತಾಪ್‌ನನ್ನು ಸೋಲಿಸುವ ಯತ್ನದಲ್ಲಿ ಅವನು ಅಪಾರ ಹಣವನ್ನು ಮತ್ತು ಸೈನಿಕರನ್ನು ಬಲಿಕೊಟ್ಟ. 30 ವರ್ಷಗಳ ಕಾಲ ಪ್ರತಾಪ್‌ ಅಕ್ಬರ್‌ನನ್ನು ಹಿಮ್ಮೆಟ್ಟಿಸಿದ ಮತ್ತು ಪ್ರತಾಪ್‌ ತನ್ನ ಜೀವನದ ಕೊನೆಯ ಹತ್ತು ವರ್ಷಗಳಲ್ಲಿ ತನ್ನ ರಾಜಧಾನಿಯ ಹೆಚ್ಚಿನ ಭಾಗಗಳನ್ನು ಮುಕ್ತಗೊಳಿಸಲು ಸಮರ್ಥನಾದ. ಅವನು ಮರುವಶ ಮಾಡಿಕೊಳ್ಳಲು ಸಾಧ್ಯವಾಗದ ಎರಡು ಕೋಟೆಗಳು ಚಿತ್ತೂರು ಮತ್ತು ಮಂಡಲ್‌ಗಢ್. ಇದು ಪ್ರತಾಪನಿಗೆ ತೀವ್ರ ನಿರಾಶೆ ಮೂಡಿಸಿತು.

ವೈಯಕ್ತಿಕ ಜೀವನ[ಬದಲಾಯಿಸಿ]

ರಾಣಾ ಪ್ರತಾಪ್‌ನು 17 ಗಂಡು ಮಕ್ಕಳು ಮತ್ತು ಐದು ಹೆಣ್ಣು ಮಕ್ಕಳನ್ನು ಹೊಂದಿದ್ದನು. ಎರಡನೇ ಉದಯ್‌ ಸಿಂಗ್‌ನ ಪುರುಷ ವಂಶಜರು "ರಣಾವತ್‌" ಕುಲನಾಮವನ್ನು ಹೊಂದಿದ್ದಾರೆ. ರಾಜರು ದೇಶದಿಂದ ಬಲವಂತದಿಂದ ಪಲಾಯನ ಮಾಡಿ ಹೊಸ ರಾಜಧಾನಿಯನ್ನು ಸ್ಥಾಪಿಸಿದರೆ ಕುಲನಾಮ ಸಾಮಾನ್ಯವಾಗಿ ಬದಲಾಗುತ್ತದೆ. ಗುಹಾನ ವಂಶಜರು ಗುಹಿಲೋತ್‌, ಸಿಸೊದಾ ಹಳ್ಳಿಯ ಹಮೀರ್‌ ಗುಹಿಲೋತ್‌ ವಂಶಜರು ಸಿಸೊದಿಯಾಗಳು ಮತ್ತು ಚಿತ್ತೂರಿನಿಂದ ಸ್ಥಳಾಂತರಗೊಂಡು ಉದಯಪುರದಲ್ಲಿ ಹೊಸ ರಾಜಧಾನಿಯನ್ನು ಸ್ಥಾಪಿಸಿದ, ರಣಾವತರು ರಾಣಾ ಉದಯ್‌ ಸಿಂಗ್‌ನ ವಂಶಜರು. ಸಾಮಾನ್ಯವಾಗಿ ಯುದ್ಧದಿಂದ ಅಥವಾ ಇತರ ಕಾರಣಗಳಿಂದ ದೊಡ್ಡ ಪ್ರಮಾಣದಲ್ಲಿ ಜನರು ವಲಸೆಗೊಂಡಲ್ಲಿ, ವಂಶದ ಹೆಸರಿನಲ್ಲಿ ಬದಲಾಗುವುದು.

ಕೊನೆಯ ದಿನಗಳು[ಬದಲಾಯಿಸಿ]

ಬೇಟೆಯಾಡುವಾಗ ಸಂಭವಿಸಿದ ಗಾಯಗಳಿಂದಾಗಿ ಮಹಾರಾಣಾ ಪ್ರತಾಪ್‌ ಸಾಯುತ್ತಾನೆ. 29 ಜನವರಿ 1597ರಂದು ಅವನು ಚಾವಂದ್‌ನಲ್ಲಿ ಮರಣಹೊಂದಿದನು. ಆಗ ಅವನಿಗೆ ಐವತ್ತಾರು ವರ್ಷ ವಯಸ್ಸಾಗಿತ್ತು. ಪ್ರತಾಪನ ಮರಣಶಯ್ಯೆಯಲ್ಲಿ ತನ್ನ ಪುತ್ರ ಮತ್ತು ಉತ್ತರಾಧಿಕಾರಿ ಅಮರ್‌ ಸಿಂಗ್‌ ಮೊಘಲ್‌ರ ವಿರುದ್ಧ ನಿರಂತರ ಹೋರಾಟವನ್ನು ಮುಂದುವರಿಸುವ ಪ್ರತಿಜ್ಞೆಯನ್ನು ಮಾಡಿಸಿದ. ಹೀಗಾಗಿ ಪ್ರತಾಪ್‌ನ ಕೊನೆಯ ದಿನಗಳಲ್ಲಿ ಬಿಗಡಾಯಿಸಿದ ಪರಿಸ್ಥಿತಿಗಳಿಂದ ಅವನನ್ನು ಸೋಲಿಸಲಾಗಲಿಲ್ಲ; ಅವನು ಕೊನೆಯವರೆಗೂ ಧೈರ್ಯಶಾಲಿಯಾಗಿಯೇ ಉಳಿದನು. ಅಕ್ಬರನಿಂದ ಬಹುತೇಕ ಇಡೀ ಸಾಮ್ರಾಜ್ಯವನ್ನು ಅವನು ಮರುವಶಕ್ಕೆ ತೆಗೆದುಕೊಂಡಿದ್ದು ನಿಜವಾಗಿದ್ದರೂ, ಚಿತ್ತೂರನ್ನು ಶತ್ರುಗಳಿಂದ ಮುಕ್ತಗೊಳಿಸುವ ತನಕ ನೆಲದ ಮೇಲೆ ನಿದ್ರಿಸುವುದಾಗಿ ಹಾಗೂ ಗುಡಿಸಲಿನಲ್ಲಿ ವಾಸಿಸುವುದಾಗಿ ಅವನು ಶಪಥತೊಟ್ಟಿದ್ದರಿಂದ ಅವನು ಹಾಸಿಗೆಯ ಮೇಲೆ ಮಲಗಲಿಲ್ಲ.

ಮಹಾರಾಣಾ ಪ್ರತಾಪ್‌ನ ಮಗ ಅಮರ್‌ ಸಿಂಗ್‌ ಮೊಘಲ್‌ರ ವಿರುದ್ಧ 17 ಯುದ್ಧಗಳಲ್ಲಿ ಹೋರಾಡಿದ. ಆದರೆ ಅವನು ಶರತ್ತುಬದ್ಧವಾಗಿ ಅವರನ್ನು ದೊರೆಗಳು ಎಂದು ಒಪ್ಪಿಕೊಂಡ. ಈ ಸಂದರ್ಭದಲ್ಲಿ ಮಹಾರಾಣಾ ಪ್ರತಾಪ್‌ನ ಪಡೆಯಲ್ಲಿದ್ದ ನಿಷ್ಠಾವಂತ ರಜಪೂತರ ದೊಡ್ಡ ಪಡೆ ಶರಣಾಗತಿಯಿಂದ ಭ್ರಮನಿರಸನಗೊಂಡು ರಾಜಸ್ತಾನವನ್ನು ತ್ಯಜಿಸಿತು. ರಾಥೋರರು, ದೆಯೊರಾ ಚೌಹಾನರು, ಪರಿಹಾರರು, ಥೋಮರರು, ಕಚ್ಚಾವಾಹ ಮತ್ತು ಝಾಲರು ಈ ಗುಂಪಿನಲ್ಲಿ ಸೇರಿದ್ದರು. ಅವರನ್ನು "ರೋರ್ಸ್‌" ಎಂದು ಕರೆಯುವರು. ಅವರಲ್ಲಿ ಹೆಚ್ಚಿನವರು ಹರಿಯಾಣದಲ್ಲಿ ಮತ್ತು ಕೆಲವರು ಉತ್ತರ ಪ್ರದೇಶದಲ್ಲಿ ನೆಲೆನಿಂತರು. ಇಂದಿಗೂ ಸಹ ಅವರು ಇತರ ರಜಪೂತರೊಂದಿಗೆ ಅಂತರ್‌ವಿವಾಹವನ್ನು ಮಾಡಿಕೊಳ್ಳುವುದಿಲ್ಲ. ಆದರೆ ರೋರ್‌ ಸಮುದಾಯದೊಳಗೆ "ಗೋತ್ರವು ಅನುಮತಿಸಿದರೆ" ಮಾತ್ರ ಮದುವೆಯಾಗುವರು.

ಭಾರತೀಯರ ದೃಷ್ಟಿಯಲ್ಲಿ ಮಹಾರಾಣಾ ಪ್ರತಾಪ್‌ ಶ್ರೇಷ್ಠ ನಾಯಕನಾಗಿದ್ದು, ಜನರಿಂದ ಗೌರವಿಸ್ಪಡುತ್ತಿದ್ದು, ಪ್ರೀತಿಪಾತ್ರರಾಗಿದ್ದಾನೆ. ಹಿಂದೂ ಇತಿಹಾಸದ ಕರಾಳ ಅಧ್ಯಾಯದ ಸಂದರ್ಭದಲ್ಲಿ, ಪ್ರತಾಪ್‌ ಒಬ್ಬನೇ ಅವನ ಗೌರವ ಮತ್ತು ಘನತೆಗಾಗಿ ದೃಢವಾಗಿ ನಿಂತನು; ಎಂದಿಗೂ ಅವನು ಸುರಕ್ಷತೆಗಾಗಿ ತನ್ನ ಗೌರವದೊಂದಿಗೆ ರಾಜಿಮಾಡಿಕೊಳ್ಳಲಿಲ್ಲ. ಅವನು ಹೆಮ್ಮೆಯಿಂದ, ಸ್ವತಂತ್ರ ವ್ಯಕ್ತಿಯಾಗಿ ಸಾವನ್ನಪ್ಪಿದನು.

ಗುಣಲಕ್ಷಣ[ಬದಲಾಯಿಸಿ]

ಹಲ್ಡಿಘಾಟಿ ಕದನ ಪ್ರಾರಂಭವಾಗುದಕ್ಕೆ ಮೊದಲು, ಮಾನ್‌ ಸಿಂಗ್‌ ಕಚ್‌ವಾಹ ನೂರಾರು ಸೇವಕರೊಂದಿಗೆ ಬೇಟೆಗೆ ಹೋಗುವನು. ಪ್ರತಾಪ್‌ನ ಭಿಲ್‌ ಗೂಢಚಾರಿಗಳು ಕೆಲವು ಕಿಲೋಮೀಟರ್‌ಗಳು ದೂರದ ಅವನ ಶಿಬಿರಕ್ಕೆ ಮಾಹಿತಿ ನೀಡುತ್ತಾರೆ. ಪ್ರತಾಪ್‌ನ ಕೆಲವು ವರಿಷ್ಠರು ಈ ಅವಕಾಶವನ್ನು ಬಳಸಿ, ಮಾನ್‌ ಸಿಂಗ್‌ ಮೇಲೆ ದಾಳಿ ನಡೆಸಿ, ಅವನನ್ನು ಹತ್ಯೆಮಾಡುವಂತೆ ತಿಳಿಸಿದರು. ಆದರೆ ಪ್ರತಾಪ್‌ ಅದನ್ನು ನಿರಾಕರಿಸಿ, ತನ್ನ ಧರ್ಮಶೀಲತೆಯ ಪ್ರಜ್ಞೆಯನ್ನು ಮೆರೆಯುತ್ತಾನೆ.

ಇನ್ನೊಂದು ಸಂದರ್ಭದಲ್ಲಿ, ಮೊಘಲ್‌ ಅಧಿಕಾರಿಯಾದ ಅಬ್ದುರ್‌ ರಹೀಮ್‌ ಖಾಂಖನನ ಮಹಿಳೆಯರು ಪ್ರತಾಪ್‌ನ ಮಗನಾದ ಅಮರ್‌ ಸಿಂಗ್‌ನ ಕೈಗೆ ಸಿಕ್ಕಿಬೀಳುತ್ತಾರೆ. ಅದೇ ಸಮಯದಲ್ಲಿ, ಖಾಂಖಾನ ವಾಸ್ತವವಾಗಿ ಪ್ರತಾಪ್‌ನ ವಿರುದ್ಧ ದಂಡಯಾತ್ರೆ ನಡೆಸಿದ್ದ. ಪ್ರತಾಪನ ವಿರುದ್ಧ ದಾಳಿಗೆ ತಯಾರಿ ನಡೆಸಲು ಷೇರ್ಪುರದಲ್ಲಿ ಶಿಬಿರ ಹೂಡಿದ್ದನು. ಪ್ರತಾಪ್‌ ತನ್ನ ಪುತ್ರ ಅಮರ್‌ ಸಿಂಗ್‌ಗೆ (17 ಗಂಡುಮಕ್ಕಳು ಮತ್ತು 5 ಹೆಣ್ಣು ಮಕ್ಕಳಲ್ಲಿ ಹಿರಿಯವ) ಮೊಘಲ್‌ ಮಹಿಳೆಯರನ್ನು ಅವರ ಬಿಡಾರಕ್ಕೆ ಸುರಕ್ಷಿತವಾಗಿ ಸಾಗಿಸಲು ವ್ಯವಸ್ಥೆ ಮಾಡುವಂತೆ ಆದೇಶಿಸುತ್ತಾನೆ. ಈ ಘಟನೆಯಿಂದ ಖಾಂಖಾನ ತೀವ್ರ ಪ್ರಭಾವಿತನಾಗಿ ಅಂತಹ ಆದರ್ಶ ರಾಜನ ವಿರುದ್ಧ ಆಕ್ರಮಣಕ್ಕೆ ನಿರಾಕರಿಸುತ್ತಾನೆ. ತನ್ನನ್ನು ಹುದ್ದೆಯಿಂದ ಬಿಡುಗಡೆ ಮಾಡುವಂತೆ ಅವನು ಅಕ್ಬರನಿಗೆ ಮನವಿ ಸಲ್ಲಿಸುತ್ತಾನೆ ಹಾಗೂ ತರುವಾಯ (1581ರಲ್ಲಿ) ಅಕ್ಬರನ ಸ್ವಂತ ಮಗ ಸಲೀಂನ ಪಾಲಕನಾಗಿ ನೇಮಕವಾಗುತ್ತಾನೆ. "ಜೋ ದ್ರಿದ್‌ ರಖೆ ಧರಂ, ನೆ ತಾಹಿ ರಖೆ ಕರ್ತಾರ್‌ " ಎಂಬ ಘೋಷಣಾ ವಾಕ್ಯವನ್ನು ಅಬ್ದುರ್‌ ರಹೀಮ್‌ ಖಾಂಖಾನರು ಹೇಳಿದ್ದಾರೆ ಎಂದು ನಂಬಲಾಗಿದೆ.ಅವನು ತಮಿಳು ಕವಿತೆಯಲ್ಲಿ "ರಹೀಮ್ ದಾಸ್" ಎಂದು ಕೂಡ ಪರಿಚಿತನಾಗಿದ್ದಾನೆ.

ಇಂದಿನ ಸ್ಥಿತಿಗತಿ[ಬದಲಾಯಿಸಿ]

1947ರಲ್ಲಿ ಭಾರತ ಸ್ವಾತಂತ್ರ ಪಡೆದ ನಂತರ, ಮಹಾರಾಣಾ ಭೋಪಾಲ್‌ ಸಿಂಗ್‌ (ಆಳ್ವಿಕೆ 1930-1955) ರಾಜಸ್ಥಾನದ ಮಹಾರಾಜ ಪ್ರಮುಖರನ್ನಾಗಿ (~ ರಾಜ್ಯಪಾಲ) 1952-1955 ಮಾಡಲಾಯಿತು. ಇದು ಭಾರತ ಗಣರಾಜ್ಯದಲ್ಲಿ ಮೇವಾರಕ್ಕಾಗಿ ವಿಶೇಷವಾಗಿ ರಚಿಸಿದ ಹುದ್ದೆಯಾಗಿದೆ! ಮಹಾರಾಣಾ ಭೂಪಾಲ್‌ ಸಿಂಗ್‌ನು ಸ್ವತಂತ್ರ ಭಾರತದೊಂದಿಗೆ (ಏಪ್ರಿಲ್ 18,1948) ತನ್ನ ರಾಜ್ಯವನ್ನು ವಿಲೀನ ಮಾಡಿದ ಮೊದಲ ದೊರೆ. ಭಾರತದ ಮೊದಲ ಕೇಂದ್ರ ಗೃಹ ಸಚಿವ (ಲೋಹ್‌ ಪುರುಷ್‌ -ಉಕ್ಕಿನ ಮನುಷ್ಯ) ಸರ್ದಾರ್‌ ವಲ್ಲಭ ಪಟೇಲ್‌‌ ವಿಲೀನಕ್ಕೆ ಒಲ್ಲದ ಹೈದರಾಬಾದ್‌ ಮತ್ತು ಇತರ ರಾಜ್ಯಗಳಿಗೆ ಛೀಮಾರಿ ಹಾಕುತ್ತಾ, ಹೀಗೆ ಹೇಳಿದರು, “...ಭಾರತದ ಯಾವುದೇ ದೊರೆ ಸ್ವಾತಂತ್ರ್ಯದ ಹಕ್ಕು ಪ್ರತಿಪಾದಿಸಿದರೆ ಅದು ಮೇವಾರ ಮಾತ್ರ. 13 ಶತಕಗಳ ಕಾಲದ ತಮ್ಮ ಉದ್ದೇಶ ಸಾರ್ಥಕವಾಯಿತು ಎಂದು ಸಂತೋಷದಿಂದ ಕೂಡಲೇ ಭಾರತೀಯ ಒಕ್ಕೂಟದೊಂದಿಗೆ ವಿಲೀನಗೊಂಡಿತು.ಮೇವಾರ ಹೊರತುಪಡಿಸಿ ಬೇರಾವುದೇ ದೊರೆಗಳು ಈ ಹಕ್ಕು ಹೊಂದಿಲ್ಲ..." ಸ್ವಾತಂತ್ರ್ಯ ನಂತರದ ಅವಧಿಯಲ್ಲಿ ಕೂಡ ಭಾರತೀಯರು, ಭಾರತದ ರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು ಮತ್ತು ಯಾವುದೇ ಪಕ್ಷ ಭೇದವಿಲ್ಲದೆ ರಾಜಕಾರಣಿಗಳು ಮೇವಾರ ಎತ್ತಿಹಿಡಿದ ಮೌಲ್ಯಗಳಿಗೆ ತಮ್ಮ ಮೆಚ್ಚುಗೆ ಮತ್ತು ಗೌರವವನ್ನು ಮುಂದುವರಿಸಿದರು. ಭಾರತದ ಪ್ರಸಿದ್ಧ ಸ್ವಾತಂತ್ರ ಹೋರಾಟಗಾರ, ಕೇಂದ್ರ ಸಚಿವ ಮತ್ತು ಭಾರತೀಯ ವಿಧ್ಯಾ ಭವನ ಸ್ಥಾಪಕರು ಮತ್ತು ಆಧುನಿಕ ಭಾರತದ ಸಾಹಿತ್ಯ ಕ್ಷೇತ್ರದಲ್ಲಿ ಶ್ರೇಷ್ಠ ವ್ಯಕ್ತಿಗಳಲ್ಲಿ ಒಬ್ಬರಾದ K. M. ಮುನ್ಷಿ (1887-1971) ಹೀಗೆ ಬರೆದಿದ್ದಾರೆ, “ ... ಮೇವಾರ ಮಹಾರಾಣಾರು ಹಿಂದೂ ಧರ್ಮದ ಸಂಸ್ಕೃತಿ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಶ್ರೇಷ್ಠತೆಯನ್ನು ಪ್ರತಿನಿಧಿಸಿದ್ದಾರೆ ಮತ್ತು ಅವರು ರಾಮರಾಜ್ಯದ ಪೌರಾಣಿಕ ಪರಿಕಲ್ಪನೆಯನ್ನು ಆಚರಣೆಗೆ ತಂದರು.

ಮಹಾರಾಣಾ ಪ್ರತಾಪ್ ಭಾರತದಲ್ಲಿ ಸದಾಕಾಲ ಗೌರವಾನ್ವಿತ ವ್ಯಕ್ತಿಯಾಗಿದ್ದು, ದೇಶಭಕ್ತಿ ಮತ್ತು ಮೊಘಲರ ಆಡಳಿತದ ವಿರುದ್ಧ ಸ್ವಾತಂತ್ರ್ಯ ಹೋರಾಟದ ಪ್ರತೀಕವೆಂದು ಬಿಂಬಿಸಲಾಗಿದೆ. ಪ್ರತಾಪ್‌ ಮತ್ತು ಆತನ ಕುದುರೆ ಚೇತಕ್‌ ಹೆಸರುಗಳು ತುಂಬಾ ಪ್ರಖ್ಯಾತವಾಗಿದ್ದು, ಭಾರತದ ಮಹಾನ್ ಶ್ರೇಷ್ಠ ಪುತ್ರನಿಗೆ ಗೌರವ ಸಲ್ಲಿಸಲು ದೇಶವು ಸ್ಮರಣಾರ್ಥ ಅಂಚೆಚೀಟಿಗಳು (1967, 1998) ಮತ್ತು ನಾಣ್ಯಗಳನ್ನು (2003) ಬಿಡುಗಡೆ ಮಾಡಿದೆ. ಪ್ರತಾಪ್‌ ಚೇತಕ್ ಕುದುರೆನ್ನೇರಿದ ಪ್ರತಿಮೆಯನ್ನು ಅವನ ಹೆಸರಾಂತ ಸಹಚರರಾದ ಜಾಲಾ ಮಾನ್,ಬಿಲು ರಾಜಾ(ಬುಡಕಟ್ಟು ಜನಾಂಗದ ಮುಖಂಡ),ಭಾಮಾ ಸಿಂಗ್, ಹಕೀಂ ಕಾನ್ ಸೂರ್ ಮತ್ತು ಕಾಲ್ದಳದ ಸೈನಿಕನ ಪ್ರತಿಮೆಗಳ ಜತೆ ಆಗಸ್ಟ್ 21,2007ರಂದು ನವದೆಹಲಿಯ ಸಂಸತ್ ಭವನದ ಎದುರು ರಾಷ್ಟ್ರ ಪ್ರತಿಷ್ಠಾಪಿಸಿತು.

ಮಹಾರಾಣಾ ಪ್ರತಾಪ್‌ ಹೆಸರಿನ ಚಿತ್ರವು ನಿರ್ಮಾಣ ಹಂತದಲ್ಲಿದೆ. ಇದರ ವೆಬ್‌ಸೈಟ್‍‌‌ನಲ್ಲಿ [೧] Archived 2013-01-16 ವೇಬ್ಯಾಕ್ ಮೆಷಿನ್ ನಲ್ಲಿ. ಇತರ ಎಲ್ಲಾ ಮಾಹಿತಿಗಳು ದೊರೆಯುವುದು.

ಮೋತಿ ಮಗ್ರಿ[ಬದಲಾಯಿಸಿ]

ಮಹಾರಾಣಾ ಪ್ರತಾಪ್‌ ಮತ್ತು ತನ್ನ ಕೊನೆಯುಸಿರಿರುವ ತನಕ ತನ್ನ ಮಾಲೀಕನನ್ನು ರಕ್ಷಿಸಿದ ಅವನ ನೆಚ್ಚಿನ ಮತ್ತು ನಿಷ್ಠಾವಂತ ಕುದುರೆಯ ಕಂಚಿನ ಪ್ರತಿಮೆಯು ಮೋತಿ ಮಗ್ರಿಯ (ಮುತ್ತಿನ ಬೆಟ್ಟ) ತುದಿಯಲ್ಲಿ ಫಥೆ ಸಾಗರ್‌ಗೆ ಮುಖಮಾಡಿರುವಂತೆ ಸ್ಥಾಪಿಸಲಾಗಿದೆ. ಸ್ಥಳೀಯ ಜನರು ಬೆಟ್ಟವನ್ನು ಹತ್ತಿ ಮಹಾರಾಣಾ ಪ್ರತಾಪ್‌ ಮತ್ತು ಹಲ್ಡಿಘಾಟಿ ಕದನದಲ್ಲಿ ಪ್ರಾಣ ಕಳೆದುಕೊಂಡ ಅವನು ನಿಷ್ಠಾವಂತ ಕುದುರೆ 'ಚೇತಕ್‌'ಗೆ ಗೌರವಾರ್ಪಣೆಯನ್ನು ಸಲ್ಲಿಸುವರು. ಅಲ್ಲಿ ಉದಯಪುರದ ಮೊದಲ ಸಾಮಾನ್ಯ ಅರಮನೆಗಳಲ್ಲಿ ಒಂದರ ಪಳೆಯುಳಿಕೆಗಳನ್ನು ಕಾಣಬಹುದು. ಸ್ವಲ್ಪ ದೂರದಲ್ಲಿ ಚಿತ್ತಾಕರ್ಷಕವಾದ ಜಪಾನ್‌ ಶೈಲಿಯ ಕಲ್ಲಿನ ಉದ್ಯಾನವಿದೆ. ಈ ಸ್ಮಾರಕವು ರಾಜಸ್ಥಾನದಲ್ಲಿಯೆ ಮೊದಲ ಬೆಳಕು ಮತ್ತು ಧ್ವನಿಯ ಕಾರ್ಯಕ್ರಮವನ್ನು ಹೊಂದಿದ್ದು, ಇವು 1400 ವರ್ಷಗಳ ಮೇವಾರದ ಇತಿಹಾಸ ವೈಭವವನ್ನು ಪ್ರದರ್ಶಿಸುತ್ತವೆ.

ಖಡ್ಗ[ಬದಲಾಯಿಸಿ]

ರಾಣಾ ಪ್ರತಾಪ್‌ ಸಿಂಗ್‌ 90 ಕಿಲೋ ಗ್ರಾಮ್‌ ತೂಕದ ಖಡ್ಗ ವನ್ನು ಬಳಸುತ್ತಿದ್ದನು[ಸೂಕ್ತ ಉಲ್ಲೇಖನ ಬೇಕು]. ರಾಣಾ ಪ್ರತಾಪನು ಯಾವಾಗಲೂ ತನ್ನೊಂದಿಗೆ ಮೂರು ಖಡ್ಗಗಳನ್ನು ಒಯ್ಯುತ್ತಿದ್ದನು. ಹೋರಾಟಕ್ಕೆ ಮುಂಚೆ,ತನ್ನ ಎದುರಾಳಿಯ ಕೈಯಲ್ಲಿ ಯಾವುದೇ ಶಸ್ತ್ರಾಸ್ತ್ರವಿಲ್ಲದಿದ್ದಲ್ಲಿ, ಅವರಿಗೆ ತನ್ನದೊಂದು ಖಡ್ಗವನ್ನು ನೀಡುತ್ತಿದ್ದನು. ವೈರಿಯನ್ನು ಭಯಹುಟ್ಟಿಸಲು 2ನೇ ಖಡ್ಗವನ್ನು ಬಳಸುತ್ತಿದ್ದನು. ರಾಣಾ ಪ್ರತಾಪ್‌ ತನ್ನ ಭಾರ ಎತ್ತುವ ಸಾಮರ್ಥ್ಯದಿಂದ ಹೆಸರುವಾಸಿಯಾಗಿದ್ದನು. ಅವನಿಗೆ 2x90 ಕೆಜಿ ಖಡ್ಗಗಳನ್ನು ಹಿಡಿದು ಹೋರಾಟ ಮಾಡುವುದು ಕರತಲಾಮಲಕವಾಗಿತ್ತು.

ಮಹಾರಾಣಾ ಪ್ರತಾಪ್‌ಗೆ ಸಂಬಂಧಿಸಿದ ಪುಸ್ತಕಗಳು[ಬದಲಾಯಿಸಿ]

(ಗುಜರಾತಿನಲ್ಲಿ ಶ್ರೀ ಹರಿಲಾಲ್‌ ಉಪಾಧ್ಯಾಯ್‌ ಬರೆದ)

    • ಶೌರ್ಯಪ್ರತಾಪಿ ಮಹಾರಾಣಾ ಪ್ರತಾಪ್‌
    • ಚಿತ್ತೊಡ್‌ ನಿ ರಂಗಾರ್ಜನ
    • ಜೈ ಚಿತ್ತೊಡ್‌ (જય ચિત્તોડ)
    • ಮೇವಾಡ್‌ (ಮೇವಾರ್‌ ಅಥವಾ ಮೇವಾರ್‌ ಅಥವಾ ಮೇವಾರ) ನ ಮಹಾರತಿ
    • ಮೇವಾಡ್‌ ನಿ ತೇಜ್‌ಚಯಾ
    • ಮೇವಾಡ್‌ ನೊ ಕೇಸರಿ
    • ದೇಶ್‌ಗೌರವ್‌ ಭಾಮಾಷಾ

ಹೆಚ್ಚಿನ ಮಾಹಿತಿಗಾಗಿ ನೀವು [೨] ನಲ್ಲಿರುವ ಲೇಖಕರ ಅಧಿಕೃತ ಮತ್ತು ಗೌರವ ವೆಬ್‌ಸೈಟ್‌ನ್ನು ಭೇಟಿಮಾಡಬಹುದು.

    • ಮಹಾರಾಣಾ ಪ್ರತಾಪಾಂಚಾ ರಾಜವಂಶ - ಪುಟಗಳು-200 ; ಬೆಲೆ 125/- 1ನೇ ಆವೃತ್ತಿ 2008, 2ನೇ ಆವೃತ್ತಿ 2009

(ಬಂಗಾಳಿಯಲ್ಲಿ)

    • ರಾಷ್ಟ್ರೀಯ ಇತಿಹಾಸಕಾರ ರಮೇಶ್‌ ಚಂದ್ರ ದತ್ತಾ ಬರೆದ ರಜಪೂತ ಜೀವನ್‌ ಸಂಧ್ಯಾ
    • D. L. ರಾಯ್‌ರವರು (ನೇತಾಜಿ ಸುಭಾಸ್‌ಚಂದ್ರ ಬೋಸ್‌ರವರ ಸ್ನೇಹಿತರು) ಬರೆದ ರಾಣಾ ಪ್ರತಾಪ್‌ ಸಿಂಗ್‌

ಇವನ್ನೂ ಗಮನಿಸಿ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

  1. ಜೇಮ್ಸ್‌ ಟೋಡ್‌, ಅನ್ನಲ್ಸ್‌ ಆಂಡ್‌ ಅಂಟಿಕ್ವಿಟೀಸ್‌ ಆಫ್‌ ರಾಜಸ್ಥಾನ ಆರ್‌ ದಿ ಸೆಂಟ್ರಲ್‌ ಆಂಡ್‌ ವೆಸ್ಟರ್ನ್‌ ರಜಪೂತ್ ಸ್ಟೇಟ್ಸ್‌ ಆಫ್‌ ಇಂಡಿಯಾ, 2 ಸಂಪುಟಗಳು. ಲಂಡನ್‌, ಸ್ಮಿತ್‌, ಎಲ್ಡರ್‌ (1829, 1832); ಹೊಸ ದೆಹಲಿ, ಮುಂಶಿರಾಮ್‌ ಪಬ್ಲಿಷರ್ಸ್‌, (2001), pp. 83-4. ISBN 81-7069-128-1

ಬಾಹ್ಯ ಕೊಂಡಿಗಳು[ಬದಲಾಯಿಸಿ]