ಮಲ್ಲಿಕಾ ಘಂಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಲ್ಲಿಕಾ ಘಂಟಿಯವರು ಕನ್ನಡದ ಲೇಖಕಿ. ಗುಲಬರ್ಗಾ ವಿಶ್ವವಿದ್ಯಾಲಯದ ಸಂಡೂರ ಕೇಂದ್ರದ ಕನ್ನಡ ವಿಭಾಗದಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿದ್ದ. ಡಾ ಮಲ್ಲಿಕಾ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದರು.

ಜನನ[ಬದಲಾಯಿಸಿ]

೧೯೫೯ ಏಪ್ರಿಲ್ ೪ ರಂದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಅಗಸಬಾಳದಲ್ಲಿ ಜನಿಸಿದ್ದಾರೆ.

ಶಿಕ್ಷಣ[ಬದಲಾಯಿಸಿ]

ಪ್ರಾಥಮಿಕ ವಿದ್ಯಾಭ್ಯಾಸ ಹಂಗರಗಿ ಗ್ರಾಮ ಮತ್ತು ಬಾದಾಮಿಯಲ್ಲಿ. ವೀರ ಪುಲಿಕೇಶಿ ಹೈಸ್ಕೂಲಿನಲ್ಲಿ ಪಿ.ಯು.ವರೆಗೆ ವಿದ್ಯಾಭ್ಯಾಸ, ಬಾಗಲಕೋಟೆ ಮತ್ತು ಜಮಖಂಡಿ ಬಸವೇಶ್ವರ ವಿದ್ಯಾವರ್ಧಕ ಸಂಘದಿಂದ ಬಿ.ಎ. ಪದವಿ. ಧಾರವಾಡದ ವಿಶ್ವವಿದ್ಯಾಲಯದಿಂದ “ಕನ್ನಡದಲ್ಲಿ ಮಹಿಳಾ ಕಥಾ ಸಾಹಿತ್ಯ” ಕುರಿತು ಬರೆದ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಬಿ ಎ, ಎಂ ಎ(೧೯೮೨) ಮತ್ತು ಪಿ ಹೆಚ್ ಡಿ(೧೯೯೨) ಪಡೆದರು.[೧] ೧೯೮೭ರಿಂದ ೨೩ ವರ್ಷ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಪಾಠ ಮಾಡಿದ ಡಾ. ಮಲ್ಲಿಕಾ ಸಂಶೋಧನೆ, ಆಡಳಿತ ಮತ್ತು ಪಾಠ ಈ ಎಲ್ಲಾ ಕ್ಷೇತ್ರಗಳಲ್ಲಿ ಅನುಭವ ಗಳಿಸಿದ್ದಾರೆ.

ವೃತ್ತಿ[ಬದಲಾಯಿಸಿ]

ಪದವಿ ಪಡೆದ ನಂತರ ಉದ್ಯೋಗಕ್ಕಾಗಿ ಸೇರಿದ್ದು ಕೆರೂರು ಎಂ.ಎಚ್.ಎಂ. ಕಿರಿಯ ಮಹಾ ವಿದ್ಯಾಲಯದಲ್ಲಿ. ೧೯೮೩ರಿಂದ ೧೯೮೭ರವರೆಗೆ ಉಪನ್ಯಾಸಕಿ ಹುದ್ದೆ. ೧೯೮೭ರಿಂದ ೧೯೯೪ರವರೆಗೆ ಗುಲಬರ್ಗಾದ ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ, ೧೯೯೪ರಿಂದ ಸ್ನಾತಕೋತ್ತರ ಕೇಂದ್ರ ಸಂಡೂರಿನಲ್ಲಿ ಪ್ರಾಧ್ಯಾಪಕಿಯಾಗಿ ಸೇವೆ ಮುಂದುವರಿಕೆ.

ಮಲ್ಲಿಕಾ ಘಂಟಿಯವರು ಕನ್ನಡದ ಲೇಖಕಿ. ಗುಲಬರ್ಗಾ ವಿಶ್ವವಿದ್ಯಾಲಯದ ಸಂಡೂರ ಕೇಂದ್ರದ ಕನ್ನಡ ವಿಭಾಗದಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿದ್ದ. ಡಾ ಮಲ್ಲಿಕಾ,ಸೆಪ್ಟೆಂಬರ್ ೨೦೧೫ರಿಂದ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದಾರೆ.[೨][೩]

ಕೃತಿಗಳು[ಬದಲಾಯಿಸಿ]

ಕವನ ಸಂಕಲನ[ಬದಲಾಯಿಸಿ]

  • ತುಳಿಯದಿರಿ ನನ್ನ
  • ಈ ಹೆಣ್ಣುಗಳೆ ಹೀಗೆ
  • ರೊಟ್ಟಿ ಮತ್ತು ಹುಡುಗಿ
  • ಬೆಲ್ಲದಚ್ಚು ಮತ್ತು ಇರುವೆ ದಂಡು

ನಾಟಕ[ಬದಲಾಯಿಸಿ]

  • ಚಾಜ

ಜೀವನ ಚರಿತ್ರೆ[ಬದಲಾಯಿಸಿ]

  • ಅಹಲ್ಯಾಬಾಯಿ ಹೋಳ್ಕರ್

ವಿಮರ್ಶೆ[ಬದಲಾಯಿಸಿ]

  • ಕನ್ನಡದ ಕಥೆಗಾರ್ತಿಯರು
  • ತನುಕರಗದವರಲ್ಲಿ
  • ಭೂಮಿಯ ಮೇಲೆ

ಮಹಾಪ್ರಬಂಧ[ಬದಲಾಯಿಸಿ]

  • ಕನ್ನಡದಲ್ಲಿ ಮಹಿಳಾ ಕಥಾಸಾಹಿತ್ಯ

ಲೇಖನಗಳು[ಬದಲಾಯಿಸಿ]

  • ತನು ಕರಗದವರಲ್ಲಿ

ಪ್ರಶಸ್ತಿಗಳು[ಬದಲಾಯಿಸಿ]

ಮಾಣಿಕಬಾಯಿ ಪ್ರಶಸ್ತಿ, ತನುಕರಗದವರಲ್ಲಿ ಕೃತಿಗೆ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ಕಾವ್ಯಾನಂದ ಪ್ರಶಸ್ತಿ, ಸುಧಾಮೂರ್ತಿ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಸಿಂಧೂರ ದತ್ತಿ ನಿ ಪ್ರಶಸ್ತಿ, ‘ರೊಟ್ಟಿ ಮತ್ತು ಹುಡುಗಿ’ ಕೃತಿಗೆ ಲಿಂಗರಾಜ ಪ್ರಶಸ್ತಿ, ‘ಈ ಹೆಣ್ಣುಗಳೇ ಹೀಗೆ’ ಕೃತಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಶಸ್ತಿ ಮುಂತಾದ ಪ್ರಮುಖ ಪ್ರಶಸ್ತಿಗಳು.

ಉಲ್ಲೇಖಗಳು[ಬದಲಾಯಿಸಿ]

  1. "ಹಂಪಿ ವಿವಿಗೆ ಡಾ.ಮಲ್ಲಿಕಾ ಘಂಟಿ ನೂತನ ಕುಲಪತಿ". www.kannadaprabha.com , 7 August 2017. Archived from the original on 4 ಜನವರಿ 2016. Retrieved 7 ಆಗಸ್ಟ್ 2017.
  2. "ಡಾ. ಮಲ್ಲಿಕಾ ಘಂಟಿ ಕನ್ನಡ ವಿ.ವಿ ಕುಲಪತಿ". www.prajavani.net , 7 August 2017.[ಶಾಶ್ವತವಾಗಿ ಮಡಿದ ಕೊಂಡಿ]
  3. "ಮಲ್ಲಿಕಾ ಘಂಟಿ". kannada.eenaduindia.com/ , 7 August 2017.[ಶಾಶ್ವತವಾಗಿ ಮಡಿದ ಕೊಂಡಿ]