ಮಟಪಕ್ಷಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಮಟಪಕ್ಷಿ
LC
Rufous Treepie (Dendrocitta vagabunda)-8.jpg
ವೈಜ್ಞಾನಿಕ ವಿಂಗಡಣೆ
ಸಾಮ್ರಾಜ್ಯ: ಪ್ರಾಣಿ
ವಂಶ ಖೋರ್ಡಾಟ
ವರ್ಗ: ಪಕ್ಷಿವರ್ಗ
ಗಣ: ಪಾಸ್ಸರಿಫಾರ್ಮಿಸ್
ಕುಟುಂಬ: ಕೋರ್ವಿಡೇ
ಜಾತಿ: ಡೆಂಡ್ರೋಸಿಟ್ಟಾ
ಪ್ರಜಾತಿ: ಡಿ.. ವಾಗಬಂಡಾ
ದ್ವಿಪದಿ ನಾಮ
ಡೆಂಡ್ರೋಸಿಟ್ಟಾ ವಾಗಬಂಡಾ
(Latham, 1790)
Synonyms
ಡೆಂಡ್ರೋಸಿಟ್ಟಾ ರೂಫ

ಮಟಪಕ್ಷಿ (Indian Treepie) ಏಷಿಯಾ ಖಂಡದ ಮರ ಪಕ್ಷಿ.

ಪರಿವಿಡಿ

ವೈಜ್ಞಾನಿಕ ಹೆಸರು [ಬದಲಾಯಿಸಿ]

ಇದು ಕಾರ್ವಿಡೇ ಕುಟುಂಬಕ್ಕೆ ಸೇರಿದ್ದು,ಡೆಂಡ್ರೋಸಿಟ್ಟಾ ವಾಗಬಂಡಾ ಎಂಬುದು ವೈಜ್ಞಾನಿಕ ಹೆಸರು. ಸಂಸ್ಕೃತದಲ್ಲಿ ಕರಾಯಿಕ,ಗೋಕುರಾಯಿ ಎಂದರೆ,ತುಳು ಭಾಷೆಯಲ್ಲಿ ಕುಟ್ಲುಂಕು ಎನ್ನುತ್ತಾರೆ.

ಲಕ್ಷಣಗಳು [ಬದಲಾಯಿಸಿ]

ಇದು ಕಾಗೆ ಗಾತ್ರದ ಹಳದಿ ಮಿಶ್ರಿತ ಉದ್ದ ಬಾಲದ ಕಂದು ಪಕ್ಷಿ.ತಲೆ ಕಪ್ಪು,ರೆಕ್ಕೆ ಮೇಲೆ ಕಪ್ಪು ಬಿಳಿ ಪಟ್ಟಿ ಇದೆ. ಉದ್ದ ಬೂದು ಬಾಲದ ಅಂಚು ಕಪ್ಪು,ತುದಿ ಕಪ್ಪು -ಬಿಳಿ. ಕತ್ತು,ಎದೆ,ಕೊಕ್ಕು,ಕಾಲುಗಳು ಕಪ್ಪಗಿರುತ್ತದೆ.

ಆವಾಸ [ಬದಲಾಯಿಸಿ]

In ಕೇರಳ, ಭಾರತ

ಇದು ಕುರುಚಲು ಕಾಡು,ಪರ್ಣಪಾತಿ ಕಾಡು,ತೋಟಗಳಲ್ಲಿ ಮರಗಳ ಮೇಲೆ ಕಂಡು ಬರುತ್ತದೆ.ಕಡ್ಡಿಗಳಿಂದ ಕೂಡಿದ ವೃತ್ತಾಕಾರದ ಗೂಡನ್ನು ಕಟ್ಟುತ್ತದೆ.ಒಂಟಿಯಾಗಿ ಯಾ ಜೋಡಿಯಾಗಿ ವಾಸಿಸುತ್ತವೆ.

ಸಂತಾನೋತ್ಪತ್ತಿ [ಬದಲಾಯಿಸಿ]

ಇದು ಮಾರ್ಚ್ -ಮೇ ತಿಂಗಳಲ್ಲಿ ಕಂದು ಗೆರೆಗಳಿರುವ ೪-೫ ತಿಳಿ ಬಿಳಿ ಮೊಟ್ಟೆಗಳನ್ನು ಇಟ್ಟು ಸಂತಾನೋತ್ಪತ್ತಿ ಮಾಡುತ್ತವೆ.

ಬಾಹ್ಯ ಸಂಪರ್ಕಗಳು [ಬದಲಾಯಿಸಿ]

Commons logo
ವಿಕಿಮೀಡಿಯ ಕಣಜದಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ:

ಆಧಾರ [ಬದಲಾಯಿಸಿ]

೧. ಪಕ್ಷಿ ಪ್ರಪಂಚ: ಹರೀಶ್ ಆರ್.ಭಟ್ ಹಾಗೂ ಪ್ರಮೋದ್ ಸುಬ್ಬರಾವ್

"http://kn.wikipedia.org/w/index.php?title=ಮಟಪಕ್ಷಿ&oldid=322359" ಇಂದ ಪಡೆಯಲ್ಪಟ್ಟಿದೆ