ಭಿಕಾಜಿ ಕಾಮಾ (ಮೇಡಂ ಕಾಮಾ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಿಕಾಜಿ ಕಾಮ: ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಧ್ರುವತಾರೆಯಾಗಿಮೆರೆದ ಮಹಿಳೆಯರಲ್ಲಿ ಒಬ್ಬರು ಮುಂಬೈನ ಮೇಡಂ ಕಾಮ. "ಇದು ಸ್ವತ೦ತ್ರ ಭಾರತದ ಧ್ವಜ, ಇದರ ಜನನವಿಂದಾಗಿದೆ. ಇದು ಭಾರತದ ಸ್ವತ೦ತ್ರಕ್ಕಾಗಿ ಜೀವತ್ಯಜಿಸಿದ ಯುವಜನತೆಯ ನೆತ್ತರಿನಿಂದ ಪವಿತ್ರಗೊಳಿಸಲ್ಪಟ್ಟಿದೆ. ಓ ಮಹನೀಯರೇ ಏಳಿ, ಈ ಧ್ವಜಕ್ಕೊಂದಿಸಿ. ಈ ಧ್ವಜದ ಪತಿನಿಧಿಯಾಗಿ ಪ್ರಾರ್ಥಿಸುತ್ತೇನೆ, ಓ ವಿಶ್ವದೆಲ್ಲ ಸ್ವತ೦ತ್ರ್ಯಾರಾಧಕರೇ ಈ ಧ್ವಜದೊಡನೆ ಸಹಕರಿಸಿ", ಹೀಗೆಂದು ಜರ್ಮನಿಯ ಸ್ಟುಟ್ಗರ್ಟ್ ನಲ್ಲಿ ೧೯೦೭ ರಲ್ಲಿ ನಡೆದಿದ್ದ ಸಮಾಜವಾದೀ ಅಧಿವೇಶನದಲ್ಲಿ ಪ್ರಪ್ರಥಮ ಬಾರಿಗೆ ಭಾರತದಧ್ವಜಾರೋಹಣ ಮಾಡಿದವರು, ಮೇಡಂ ಕಾಮಾ. ಅಂದು, ವಶೀಕರಿಸಲ್ಪಟ್ಟವರ೦ತೆ ಅತಿಥಿಗಳೆಲ್ಲಾ ಎದ್ದುನಿಂತು ಧ್ವಜಕ್ಕೆ ನಮಿಸಿದ್ದರು.