ಭಾರತ-ಅಮೇರಿಕ ಅಣುಶಕ್ತಿ ಒಪ್ಪಂದ
ವಿಕಿಪೀಡಿಯ ಇಂದ
ಅಮೇರಿಕ ದೇಶದ ರಾಷ್ಟ್ರಪತಿ ಜಾರ್ಜ್ ಡಬ್ಲ್ಯು. ಬುಷ್ ಮತ್ತು ಭಾರತದ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ನವ ದೆಹಲಿಯಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿದ ಸುಮಾರಿನಲ್ಲಿ
ಭಾರತ-ಅಮೇರಿಕ ಅಣುಶಕ್ತಿ ಒಪ್ಪಂದವು ಭಾರತ ಮತ್ತು ಅಮೇರಿಕ ದೇಶಗಳ ನಡುವೆ ೨೦೦೬ರಲ್ಲಿ ಭಾರತದ ಅಣುಶಕ್ತಿಯ ಬಗ್ಗೆ ನಿರೂಪಿಸಲಾದ ಒಂದು ಒಪ್ಪಂದ. ಇದರ ಪ್ರಕಾರ ಭಾರತವು ಶಸ್ತ್ರಸ್ತ್ರಕ್ಕೆ ಬಳಸಲಾಗುವ ಅಣುಶಕ್ತಿ ಮೂಲಗಳನ್ನು ಮತ್ತು ನಾಗರೀಕ ಕಾರ್ಯಗಳಿಗೆ ಬಳಸುವ ಮೂಲಗಳನ್ನು ಪ್ರತ್ಯೇಕಿಸಲು ಒಪ್ಪಿಕೊಂಡಿತು. ಇದಕ್ಕೆ ಬದಲಾಗಿ ಇಲ್ಲಿಯವರೆಗೆ ನಿರ್ಭಂದಿತವಾಗಿದ್ದ ಅಣುಶಕ್ತಿ ಪೂರೈಸುವ ಗುಂಪಿನಿಂದ ನಾಗರೀಕ ಉದ್ದೇಶಗಳಿಗೆ ವಾಣಿಜ್ಯವನ್ನು ಪುನಃ ಪ್ರಾರಂಭಿಸಲು ಅನುಮತಿ ದೊರೆಯಿತು.