ಭಾರತೀಯ ಸಂವಿಧಾನದ ತಿದ್ದುಪಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
India

This article is part of the series:
Constitution of India

Preamble


Other countries ·  Law Portal

ಭಾರತದಲ್ಲಿ ಪ್ರತಿ ಶತಮಾನಕ್ಕೆ ಅಳವಡಿಸಲ್ಪಟ್ಟ ಸಂವಿಧಾನದ ತಿದ್ದುಪಡಿಗಳ ಸಂಖ್ಯೆ.<ಆಕರದ ಹೆಸರು="ncert">[1]</ಆಕರ>

ಭಾರತೀಯ ಸಂವಿಧಾನದ ತಿದ್ದುಪಡಿ ಯು ಭಾರತದ ಸಂವಿಧಾನದಲ್ಲಿ ಬದಲಾವಣೆಗಳನ್ನು ಮಾಡುವ ಕಾರ್ಯವಿಧಾನವಾಗಿದೆ. ಈ ಬದಲಾವಣೆಗಳನ್ನು ಭಾರತದ ಪಾರ್ಲಿಮೆಂಟ್ ಮಾಡುತ್ತದೆ. ಆ ತಿದ್ದುಪಡಿಗಳು ಪಾರ್ಲಿಮೆಂಟಿನ ಎರಡೂ ಸದನಗಳಲ್ಲಿ ಶ್ರೇಷ್ಠ-ಬಹುಮತದಿಂದ ಅಂಗೀಕೃತವಾಗಬೇಕು, ಹಾಗೂ ಕೆಲವು ತಿದ್ದುಪಡಿಗಳನ್ನು ರಾಜ್ಯಗಳೂ ಒಪ್ಪಿದನಂತರವೇ ಅಳವಡಿಸಲು ಅನುಮತಿಸಲಾಗುವುದು. ಈ ಕಾರ್ಯವಿಧಾನವು ಸಂವಿಧಾನದ ಭಾಗ XX, ಕಲಂ ೩೬೮ ರಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಈ ನಿಯಮಗಳಿದ್ದೂ ಸಹ ೧೯೫೦ರಲ್ಲಿ ಸಂವಿಧಾನವು ಜಾರಿಗೆ ಬಂದಂದಿನಿಂದ ಇಂದಿನವರೆಗೆ ೯೦ಕ್ಕೂ ಹೆಚ್ಚು ತಿದ್ದುಪಡಿಗಳಾಗಿವೆ. ಭಾರತದ ಸರ್ವೋಚ್ಛ ನ್ಯಾಯಾಲಯವು 'ಮಂಡಿತವಾದ ಪ್ರತಿ ಸಂವಿಧಾನದ ತಿದ್ದುಪಡಿಯೂ ಅಂಗೀಕೃತವಾಗಲೇಬೇಕೆಂದೇನಿಲ್ಲ' ಎಂಬ ವಿವಾದಾತ್ಮಕವಾದ ತೀರ್ಪೊಂದನ್ನು ನೀಡಿದೆ. ತಿದ್ದುಪಡಿಯು ಸಂವಿಧಾನದ "ಮೂಲ ನಿರ್ಮಾಣ"ಕ್ಕೆ ಧಕ್ಕೆ/ಚ್ಯುತಿ ಉಂಟುಮಾಡದಂತಿರಬೇಕು ಹಾಗೂ ಈ ಮೂಲ ನಿರ್ಮಾಣವು ಬದಲಾಯಿಸತಕ್ಕುದಲ್ಲ.

ಕಾರ್ಯವಿಧಾನ[ಬದಲಾಯಿಸಿ]

ತಿದ್ದುಪಡಿಗೊಳಗಾಗಬೇಕಾದ ವಿಷಯವನ್ನು ಪಾರ್ಲಿಮೆಂಟಿನಲ್ಲಿ ಬಿಲ್ ಆಗಿ ಮುಂದಿಡಲಾಗುತ್ತದೆ. ನಂತರ ಅದನ್ನು ಪಾರ್ಲಿಮೆಂಟಿನ ಎರಡೂ ಸದನಗಳು ಅಂಗೀಕರಿಸಬೇಕಾಗುತ್ತದೆ. ಈ ಬಿಲ್ ಅನ್ನು ಎರಡೂ ಸದನಗಳಲ್ಲಿ (೧)ಹಾಜರಿದ್ದು, ಮತ ನೀಡಿದರ ಮೂರನೆಯ ಎರಡರಷ್ಟು ಬೆಂಬಲ ದೊರೆಯಬೇಕು ಮತ್ತು (೨)ಎಲ್ಲಾ ಸದಸ್ಯರ (ಹಾಜರಿರಲಿ, ಇಲ್ಲದಿರಲಿ) ಸರಳ ಬಹುಮತದ ಬೆಂಬಲ ದೊರೆಯಬೇಕು. ಕೆಲವು ತಿದ್ದುಪಡಿಗಳನ್ನು ನಂತರ ಕಡೆಯಪಕ್ಷ ಇರುವ ರಾಜ್ಯಗಳಲ್ಲಿ ಅರ್ಧದಷ್ಟಾದರೂ ರಾಜ್ಯಗಳ ಸಚಿವರು ಒಪ್ಪಬೇಕು. ಈ ಎಲ್ಲಾ ಹಂತಗಳು ಮುಗಿದನಂತರ ಅಂತಹ ತಿದ್ದುಪಡಿಯು ಭಾರತದ ರಾಷ್ಟ್ರಪತಿಯ ಒಪ್ಪಿಗೆಯನ್ನು ಪಡೆಯುತ್ತದೆ, ಆದರೆ ಈ ಕೊನೆಯ ಹಂತ ಕೇವಲ ಔಪಚಾರಿಕವಷ್ಟೆ.

ಸಂವಿಧಾನದಲ್ಲಿ ಶ್ರೇಷ್ಠ-ಬಹುಮತವಿರಬೇಕೆಂಬ ನಿಯಮವಿದ್ದರೂ ಸಹ ಇದು ಜಗತ್ತಿನಲ್ಲೇ ಬಹಳ ತಿದ್ದುಪಡಿಗಳನ್ನು ಕಂಡಂತಹ ಸರ್ಕಾರಿ ದಸ್ತಾವೇಜಾಗಿದೆ; ಪ್ರತಿ ವರ್ಷವೂ ಸರಾಸರಿ ಎರಡು ತಿದ್ದುಪಡಿಗಳಿಗೆ ಭಾರತದ ಸಂವಿಧಾನವು ಒಳಗಾಗಿದೆ. ಇದಕ್ಕೆ ಸಂವಿಧಾನದ ಸುದೀರ್ಘತೆ ಮತ್ತು ವಿವರಣೆಗಳೂ ಭಾಗಶಃ ಕಾರಣವಾಗಿವೆ. ಇದು ಜಗತ್ತಿನ ಯಾವುದೇ ಶ್ರೇಷ್ಠ ದೇಶದ ಸಂವಿಧಾನಗಳಿಗಿಂತಲೂ ಬಹಳವೇ ದೀರ್ಘವಾದುದಾಗಿದ್ದು ಇದರಲ್ಲಿ ೩೯೦ ಕಲಂಗಳು ಹಾಗೂ ೧೧೭,೦೦೦ ಪದಗಳಿವೆ. ಈ ದಸ್ತಾವೇಜು ಸರ್ಕಾರದ ಇತಿಮಿತಿಗಳನ್ನು ಸ್ಪಷ್ಟವಾಗಿ ನಿರ್ದೇಶಿಸುವುದರಿಂದ, ಬೇರೆ ದೇಶಗಳಲ್ಲಿ ಸಾಮಾನ್ಯ ಕಟ್ಟಳೆಗಳ ಮೂಲಕ ಬಗೆಹರಿಸಬಹುದಾದ ವಿಷಯಗಳನ್ನು, ಇಲ್ಲಿ ಅಳವಡಿಸಿಕೊಳ್ಳಲು ತಿದ್ದುಪಡಿಗಳು ಆಗಾಗ್ಗೆ ಅಗತ್ಯವಾಗುತ್ತವೆ.

ಮತ್ತೊಂದು ಕಾರಣವೆಂದರೆ, ಯುನೈಟೆಡ್ ಕಿಂಗ್ ಡಂ ಮತ್ತು ಯು.ಎಸ್. ಗಳಲ್ಲಿರುವಂತೆಯೇ ಬಹುಸಂಖ್ಯಾ (ಅಥವಾ "ಗೆರೆ ದಾಟಿದ ಮೊದಲಿಗ")ಕ್ರಮದಡಿಯಲ್ಲಿ ಜಿಲ್ಲೆಗೆ ಒಂದು ಅಭ್ಯರ್ಥಿಯಂತೆ ಚುನಾಯಿಸಿ ಪಾರ್ಲಿಮೆಂಟಿಗೆ ಕಳುಹಿಸಲಾಗುತ್ತದೆ. ಎಂದರೆ, ಎಂ.ಪಿ.ಗಳ ಗುಂಪೊಂದು ಮೂರನೆಯ ಎರಡರಷ್ಟು ಮತಗಳನ್ನು ಪಡೆಯದೆಯೇ ಪಾರ್ಲಿಮೆಂಟಿನಲ್ಲಿ ಮೂರನೆಯ ಎರಡು ಬಹುಮತ ಸಾಧಿಸಬಹುದು. ಉದಾಹರಣೆಗೆ, ಸಂವಿಧಾನದ ಚೌಕಟ್ಟಿನಡಿಯಲ್ಲಿ ನಡೆದ ಮೊದಲ ಎರಡು ಚುನಾವಣೆಗಳಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷವು ರಾಷ್ಟ್ರದಲ್ಲಿ ಚಲಾಯಿಸಲ್ಪಟ್ಟ ಒಟ್ಟು ಮತಗಳ ಅರ್ಧಕ್ಕಿಂತಲೂ ಕಡಿಮೆ ಮತಗಳನ್ನು ಪಡೆದರೂ ಲೋಕಸಭೆ(ಕೆಳಮನೆ)ಯಲ್ಲಿ ಸುಮಾರು ಮೂರನೆಯ ಎರಡರಷ್ಟು ಸೀಟುಗಳನ್ನು ಗಳಿಸಿತು.

ಭಾರತದಲ್ಲಿ ಪ್ರತಿ ಸಂವಿಧಾನದ ತಿದ್ದುಪಡಿಗೂ ಕಟ್ಟಳೆಯ ರೂಪ ನೀಡಲಾಗುತ್ತದೆ. ಮೊದಲನೆಯ ತಿದ್ದುಪಡಿಯನ್ನು "ಸಂವಿಧಾನ (ಮೊದಲ ತಿದ್ದುಪಡಿ) ಕಾಯಿದೆ", ಎರಡನೆಯ ತಿದ್ದುಪಡಿಯನ್ನು, "ಸಂವಿಧಾನ (ಎರಡನೆಯ ತಿದ್ದುಪಡಿ) ಕಾಯಿದೆ", ಹಾಗೂ ಇದೇ ಕ್ರಮಗಳಲ್ಲಿ ಕರೆಯಲಾಗುತ್ತದೆ. ಪ್ರತಿ ತಿದ್ದುಪಡಿಯೂ ಸಾಮಾನ್ಯವಾಗಿ ಈ ದೀರ್ಘ ತಲೆಬರಹ ಹೊಂದಿರುತ್ತದೆ "ಈ ಕಾಯಿದೆ, ಸಂವಿಧಾನವನ್ನು ತಿದ್ದುಪಡಿಗೊಳಿಸಲು ಮಂಡಿಸಲಾಗಿದೆ".

ತಿದ್ದುಪಡಿಗಳ ಮೇಲಿನ ಇತಿಮಿತಿಗಳು[ಬದಲಾಯಿಸಿ]

ಭಾರತದ ಸರ್ವೋಚ್ಛ ನ್ಯಾಯಾಲಯವು ಗೋಲಕ್ ನಾಥ್ ವರ್ಸಸ್ ಪಂಜಾಬ್ ರಾಜ್ಯ ದ ಕೇಸಿನ ಬಗ್ಗೆ ತೀರ್ಪು ನೀಡುತ್ತಾ, ೧೯೬೭ರಲ್ಲಿ, ಮೊದಲಬಾರಿಗೆ ಒಂದು ಸಂವಿಧಾನದ ತಿದ್ದುಪಡಿಯನ್ನು ತಳ್ಳಿಹಾಕಿತು. ಆ ತಿದ್ದುಪಡಿಯು ಕಲಂ ೧೩ಕ್ಕೆ ವಿರುದ್ಧವಾಗಿದೆ ಎಂಬ ಆಧಾರದ ಮೇರೆಗೆ ಅದನ್ನು ತಳ್ಳಿಹಾಕಲಾಯಿತು; ಕಲಂ ೧೩ರ ಪಠ್ಯ ಹೀಗಿದೆ - "ರಾಜ್ಯವು [ಮೂಲಭೂತ ಹಕ್ಕುಗಳ ಸನದು] ಕೊಡಮಾಡಿರುವ ಯಾವುದೇ ಹಕ್ಕುಗಳನ್ನು ರದ್ದುಪಡಿಸುವಂತಹ ಅಥವಾ ಕುಂಠಿತಗೊಳಿಸುವಂತಹ ಕಾನೂನನ್ನು ಜಾರಿಗೆ ತರಬಾರದು". ಈ ಕಲಂನಲ್ಲಿರುವ "ಕಾಯಿದೆ" ಎಂಬ ಪದವು ಸಂವಿಧಾನದ ತಿದ್ದುಪಡಿಯನ್ನೂ ಒಳಗೊಂಡಿದೆ ಎಂದು ಅರ್ಥೈಸಲಾಯಿತು. ಇದಕ್ಕೆ ಪ್ರತಿಕ್ರಿಯೆ ತೋರುತ್ತಾ ಪಾರ್ಲಿಮೆಂಟ್ ಇಪ್ಪತ್ತನಾಲ್ಕನೆಯ ತಿದ್ದುಪಡಿಯನ್ನು ಜಾರಿಗೆ ತಂದಿತು; ಈ ತಿದ್ದುಪಡಿಯು "ಈ ಸಂವಿಧಾನದ ತಿದ್ದುಪಡಿಗೆ ಸಂಬಂಧಿಸಿದಂತೆ [ಕಲಂ 13ರ] ಯಾವ ಅಂಶವೂ ಅನ್ವಯವಾಗತಕ್ಕುದಲ್ಲ" ಎಂದು ಸಾರುತ್ತದೆ.

ಪ್ರಸ್ತುತದಲ್ಲಿರುವ ತಿದ್ದುಪಡಿಗಳ ಮೇಲಿನ ನಿಯಂತ್ರಣವು ಕೇಶವಾನಂದ ವರ್ಸಸ್ ಕೇರಳ ರಾಜ್ಯ ದ ಕೇಸಿನ ಪ್ರಭಾವ. ಆ ಕೇಸಿನ ಬಗ್ಗೆ ತೀರ್ಪು ನೀಡುತ್ತಾ, ಸರ್ವೋಚ್ಛ ನ್ಯಾಯಾಲಯವು ಸಂವಿಧಾನದ ತಿದ್ದುಪಡಿಗಳು ಸಂವಿಧಾನದ "ಮೂಲ ನಿರ್ಮಾಣ"ವನ್ನು ಕಡ್ಡಾಯವಾಗಿ ಗೌರವಿಸಬೇಕೆಂದು ಸಾರಿತು. ಈ ಆದೇಶವು ಸಂವಿಧಾನದ ಕೆಲವು ಮೂಲ ಲಕ್ಷಣಗಳನ್ನು (ವಿಷಯಗಳನ್ನು) ತಿದ್ದುಪಡಿಗಳ ಮೂಲಕ ಬದಲಾಯಿಸುವುದು ಸಾಧ್ಯವಿಲ್ಲ ಎನ್ನುತ್ತದೆ. ಭಾರತೀಯ ಪಾರ್ಲಿಮೆಂಟ್ ಈ ನಿಯಂತ್ರಣವನ್ನು ತೆಗೆದುಹಾಕುವ ಸಲುವಾಗಿ ನಲವತ್ತೆರಡನೆಯ ತಿದ್ದುಪಡಿಯನ್ನು ಜಾರಿಗೆ ತಂದಿತು; ಈ ತಿದ್ದುಪಡಿಯು, ಇತರ ಒಪ್ಪುಗಳನ್ನು ಹೊಂದಿರುವುದರ ಜೊತೆಜೊತೆಗೇ, "ಪಾರ್ಲಿಮೆಂಟಿಗೆ ಸಂವಿಧಾನಕ್ಕೆ ತಿದ್ದುಪಡಿಯನ್ನು ಅಳವಡಿಸುವ ಅಧಿಕಾರದ ಮೇಲೆ ಯಾವುದೇ ನಿಯಂತ್ರಣವಿರಬಾರದು" ಎಂದು ಸಾರುತ್ತದೆ. ಆದರೆ, ನಂತರದ ದಿನಗಳಲ್ಲಿ. ಮಿನರ್ವ ಮಿಲ್ಸ್ ವರ್ಸಸ್ ಭಾರತ ಕೇಸಿನಲ್ಲಿ ಈ ತಿದ್ದುಪಡಿಯು ಊರ್ಜಿತವಲ್ಲವೆಂದು ಸರ್ವೋಚ್ಛ ನ್ಯಾಯಾಲಯವು ತೀರ್ಪು ನೀಡಿತು.

ತಿದ್ದುಪಡಿಗಳ ವಿಷಯಗಳು[ಬದಲಾಯಿಸಿ]

ಇದನ್ನೂ ನೋಡಿ: ಭಾರತೀಯ ಸಂವಿಧಾನದ ತಿದ್ದುಪಡಿಗಳ ಪಟ್ಟಿ

ಮೂಲಭೂತ ಹಕ್ಕುಗಳು[ಬದಲಾಯಿಸಿ]

ಈ ವಿಧವಾಗಿ ಸಂವಿಧಾನದ ತಿದ್ದುಪಡಿಗಳನ್ನು ಪದೇ ಪದೇ ಮಾಡಬೇಕಾಗಿ ಬಂದಿರುವುದರ ಪ್ರಮುಖ ಕಾರಣವೆಂದರೆ ಮೂಲಭೂತ ಹಕ್ಕುಗಳ ಕಾಯಿದೆಯ ಮೊಟಕುಗೊಳಿಸಿರುವಿಕೆ. ಈ ಮೊಟಕುಗೊಳಿಸುವಿಕೆಯನ್ನು ಮೂಲಭೂತಹಕ್ಕುಗಳ ಹಂಚಿಕೆಗೆ ವಿರುದ್ಧವಾದ ಕಾಯಿದೆಗಳನ್ನು ಸಂವಿಧಾನದ ಷೆಡ್ಯೂಲ್ ೯ರಲ್ಲಿ ಅಳವಡಿಸುವುದರ ಮೂಲಕ ಸಾಧಿಸಲಾಯಿತು. ಷೆಡ್ಯೂಲ್ ೯ ಈ ಕಾಯಿದೆಗಳು ಕೇವಲ ನಿಯಮಿತ ಕಾನೂನು ವಿಮರ್ಶೆಗೆ ತೆರೆದಿಡುವುದರ ಮೂಲಕ ಈ ಕಾಯಿದೆಗಳನ್ನು ರಕ್ಷಿಸುತ್ತದೆ. ಸಾಮಾನ್ಯವಾಗಿ ನಿಷೇಧಗಳಿಗೆ (ನಿಯಂತ್ರಣಗಳಿಗೆ) ಒಳಪಡುವ ಕ್ಷೇತ್ರಗಳೆಂದರೆ ಆಸ್ತಿ ಹಕ್ಕಿನ ಬಗ್ಗೆ ಇರುವ ಕಾಯಿದೆಗಳು, "ಪರಿಶಿಷ್ಟ ಜಾತಿ", "ಪರಿಶಿಷ್ಟ ವರ್ಗ" ಮತ್ತು ಇತರ "ಹಿಂದುಳಿದ ವರ್ಗಗಳ" ಂತಹ ಅಲ್ಪಸಂಖ್ಯಾತರ ಪರವಾಗಿ ಇರುವ ಸಕಾರಾತ್ಮಕ ನಡಾವಳಿಗಳು.

ಜನವರಿ ೨೦೦೭ರಲ್ಲಿ ಸರ್ವೋಚ್ಛ ನ್ಯಾಯಾಲವು ನೀಡಿದ ತೀರ್ಪೊಂದು ಮೈಲಿಗಲ್ಲೇ ಆಗಿದೆ; "ಎಲ್ಲಾ ಕಾನೂನುಗಳೂ (ಕಾಯಿದೆಗಳೂ) (ಷೆಡ್ಯೂಲ್ ೯ರಲ್ಲಿ ಇರುವಂತಹವೂ ಸೇರಿದಂತೆ), ಅವುಗಳು ಸಂವಿಧಾನದ ಮೂಲ ಕೃತಿಗೆ ಭಂಗ ತರುವಂತಹವಾಗಿದ್ದರೆ, ಅವನ್ನು ಪುನರ್ವಿಮರ್ಶಿಸಲಾಗುತ್ತದೆ ಎಂದು ಸರ್ವೋಚ್ಛ ನ್ಯಾಯಾಲಯವು ದೃಢೀಕರಿಸಿತು. "ಒಂಭತ್ತನೆಯ ಷೆಡ್ಯೂಲ್ ನಲ್ಲಿ ಅಳವಡಿಸುವಂತಹ ಕಾಯಿದೆಗಳು ಮೂಲಭೂತ ಹಕ್ಕುಗಳಿಗೆ ಚ್ಯುತಿ ತಂದರೆ ಅಥವಾ ಕುಂಠಿತಗೊಳಿಸಿದರೆ ಹಾಗೂ ತನ್ಮೂಲಕ ಸಂವಿಧಾನದ ಮೂಲ ರಚನೆಗೇ ವಿರೋಧವುಂಟು ಮಾಡುವುದಾದರೆ, ಅಂತಹ ಕಾಯಿದೆಗಳನ್ನು ರದ್ದುಗೊಳಿಸಬೇಕಾಗುತ್ತದೆ" ಎಂದು ಮುಖ್ಯ ನ್ಯಾಯಾಧೀಶ ಯೋಗೇಶ್ ಕುಮಾರ್ ಸಬರ್ ವಾಲ್ ನುಡಿದರು.[೧][೨]

ಪ್ರಾದೇಶಿಕ ಬದಲಾವಣೆಗಳು[ಬದಲಾಯಿಸಿ]

ಮಾಜಿ ಫ್ರೆಂಚ್ ವಸಾಹತು ಆಗಿದ್ದ ಪಾಂಡಿಚೆರಿ, ಮಾಜಿ ಪೋರ್ಚುಗೀಸ್ ವಸಾಹತು ಆಗಿದ್ದ ಗೋವಾ ಮತ್ತು ಪಾಕಿಸ್ತಾನದೊಡನೆ ಮಾಡಿಕೊಂಡ ಸಣ್ಣಪುಟ್ಟ ಪ್ರಾದೇಶಿಕ ವಿನಿಮಯಗಳನ್ನು ಭಾರತದ ಪ್ರದೇಶಕ್ಕೆ ಅಳವಡಿಸಿಕೊಳ್ಳುವ ಸಲುವಾಗಿ ಹಾಗೂ ತನ್ಮೂಲಕ ಭಾರತದ ಪ್ರಾದೇಶಿಕ ಬದಲಾವಣೆಗಳನ್ನು ಒಪ್ಪಿ, ಊರ್ಜಿತಗೊಳಿಸುವ ಸಲುವಾಗಿ ಸಂವಿಧಾನದಲ್ಲಿ ತಿದ್ದುಪಡಿಗಳನ್ನು ಮಾಡಲಾಯಿತು. ಕರಾವಳಿಯ ವಾಣಿಜ್ಯ ವಲಯದ ೨೦೦ ಮೈಲಿಗಳ ಬಗ್ಗೆ ಇರುವ ಸಂಪೂರ್ಣ ಹಕ್ಕಿನ ಬಗ್ಗೆ ಮತ್ತು ಹೊಸ ರಾಜ್ಯಗಳ ರಚನೆಯ ಬಗ್ಗೆ ಹಾಗೂ ಒಕ್ಕೂಟ ಪ್ರದೇಶಗಳ ಬಗ್ಗೆ, ಇರುವ ರಾಜ್ಯಗಳ ಮರುವ್ಯವಸ್ಥೆಗಳನ್ನು ಮಾಡುವುದರ ಬಗ್ಗೆ ತಿದ್ದುಪಡಿಗಳು ಅಗತ್ಯವಾಗುತ್ತವೆ.

ತಾತ್ಕಾಲಿಕ ತಿದ್ದುಪಡಿಗಳು[ಬದಲಾಯಿಸಿ]

ಸಂವಿಧಾನದಲ್ಲಿ ಕೇವಲ ಕೆಲವು ಕಾಲ ಮಾತ್ರ ಅಸ್ಥಿತ್ವದಲ್ಲಿರುವಂತಹ ತಿದ್ದುಪಡಿಗಳನ್ನು ಮಾಡಲು ಅವಕಾಶವಿದೆ. ಈ ತಿದ್ದುಪಡಿಗಳನ್ನು ಕಾಲಕಾಲಕ್ಕೆ ನವೀಕರಿಸಬೇಕಾಗುತ್ತದೆ. ಪರಿಶಿಷ್ಟ ಜಾತಿಗಳು ಮತ್ತು ವರ್ಗಗಳಿಗೆ ಪಾರ್ಲಿಮೆಂಟಿನಲ್ಲಿ ಸೀಟುಗಳ ಮೀಸಲಾತಿಯನ್ನು ಮುಂದುವರಿಸುವುದರ ಬಗ್ಗೆ ತಿದ್ದುಪಡಿಗಳನ್ನು ಪ್ರತಿ ಹತ್ತು ವರ್ಷಕ್ಕೆ ಒಂದು ಬಾರಿ ವಿಸ್ತರಸಲಾಗುತ್ತದೆ. ಖಲಿಸ್ಥಾನ್ ಚಳುವಳಿ ಮತ್ತು ದಂಗೆಯು ಇಳಿಯುವವರೆಗೆ ಪಂಜಾಬ್ ನಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಿ, ಅದನ್ನು ಪ್ರತಿ ಆರು ತಿಂಗಳಿಗೊಮ್ಮೆ ವಿಸ್ತರಿಸಲಾಯಿತು.

ಪ್ರಜಾಪ್ರಭುತ್ವದ ಸುಧಾರಣೆಗಳು[ಬದಲಾಯಿಸಿ]

ಸರ್ಕಾರಿ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರಲು ಮತ್ತು ಹೊಸ "ತಡೆಗಳು ಮತ್ತು ಸಮತೋಲನಗಳ"ನ್ನು ಸಂವಿಧಾನದಲ್ಲಿ ಅಳವಡಿಸಲೆಂದು ಕೆಲವು ತಿದ್ದುಪಡಿಗಳನ್ನು ಮಾಡಲಾಗಿದೆ. ಈ ಕೆಳಕಂಡ ತಿದ್ದುಪಡಿಗಳನ್ನು ಅಳವಡಿಸಲಾಗಿದೆ:

  • ಪರಿಶಿಷ್ಟ ಜಾತಿಗಳಿಗಾಗಿ ರಾಷ್ಟ್ರೀಯ ಆಯೋಗದ ರಚನೆ.
  • ಪರಿಶಿಷ್ಟ ವರ್ಗಗಳಿಗಾಗಿ ರಾಷ್ಟ್ರೀಯ ಆಯೋಗದ ರಚನೆ.
  • ಪಂಚಾಯತಿ ರಾಜ್ ಗಾಗಿ ವಿಧಿವಿಧಾನಗಳನ್ನು ರಚಿಸುವಿಕೆ(ಸ್ಥಳೀಯ ಸ್ವಯಂ-ಆಡಳಿತ).
  • ಪಕ್ಷಾಂತರ ಮಾಡುವ ಸದಸ್ಯರ ಅರ್ಹತಾ ರದ್ದತಿ.
  • ಕ್ಯಾಬಿನೆಟ್ (ಸಂಪುಟ)ನ ಸಂಖ್ಯೆಯ ಮೇಲೆ ನಿಯಂತ್ರಣ.
  • ತುರ್ತು ಪರಿಸ್ಥಿತ ಜಾರಿಗೆ ತರುವುದರ ಮೇಲೆ ನಿಯಂತ್ರಣ.

ಕಲಂ ೩೬೮ರ ಪಠ್ಯ[ಬದಲಾಯಿಸಿ]

ಸಂವಿಧಾನದ ತಿದ್ದುಪಡಿಗಳನ್ನು ನಿಯಂತ್ರಿಸುವಂತಹ ಸಂವಿಧಾನದ ಕಲಂ ೩೬೮ರ ಭಾಗ XX ರ ಸಂಪೂರ್ಣ ಪಠ್ಯವು ಈ ಕೆಳಕಂಡಂತಿದೆ. ಇಟಾಲಿಕ್ಸ್ (ಇಳಿಜಾರಿನಕ್ಷರಗಳು)ನಲ್ಲಿ ತೋರಿಸಿರುವಂತಹ ತಿದ್ದುಪಡಿಗಳನ್ನು ನಲವತ್ತೆರಡನೆಯ ತಿದ್ದುಪಡಿ ಕಾಯಿದೆಯನ್ವಯ ಅಳವಡಿಸಲಾಗಿದ್ದು, ನಂತರ ಮಿನರ್ವ ಮಿಲ್ಸ್ ಕೇಸ್ ನಲ್ಲಿ ಅದನ್ನು ಸರ್ವೋಚ್ಛ ನ್ಯಾಯಾಲಯವು ಅನೂರ್ಜಿತವೆಂದು ರದ್ದುಗೊಳಿಸಿತು. ಈ ಪಠ್ಯವು ಜುಲೈ ೨೦೦೮ರವರೆಗೆ ನವೀಕೃತವಾದುದಾಗಿದೆ.[೩]

(1) Notwithstanding anything in this Constitution, Parliament may in exercise of its constituent

power amend by way of addition, variation or repeal any provision of this Constitution in accordance with the procedure laid down in this article.

(2) An amendment of this Constitution may be initiated only by the introduction of a Bill for the purpose in either House of Parliament, and when the Bill is passed in each House by a majority of the total membership of that House and by a majority of not less than two-thirds of the members of that House present and voting, it shall be presented to the President who shall give his assent to the Bill and thereupon the Constitution shall stand amended in accordance with the terms of the Bill:

Provided that if such amendment seeks to make any change in –

(a) article 54, article 55, article 73, article 162 or article 241, or

(b) Chapter IV of Part V, Chapter V of Part VI, or Chapter I of Part XI, or

(c) any of the Lists in the Seventh Schedule, or

(d) the representation of States in Parliament, or

(e) the provisions of this article,

the amendment shall also require to be ratified by the Legislatures of not less than one-half of the States by resolutions to that effect passed by those Legislatures before the Bill making provision for such amendment is presented to the President for assent.

(3) Nothing in article 13 shall apply to any amendment made under this article.

(4) No amendment of this Constitution (including the provisions of Part III) made or purporting to have been made under this article whether before or after the commencement of section 55 of the Constitution (Fortysecond Amendment) Act, 1976 shall be called in question in any court on any ground.

(5) For the removal of doubts, it is hereby declared that there shall be no limitation whatever on the constituent power of Parliament to amend by way of addition, variation or repeal the provisions of this Constitution under this article.

ಭಾಗ (೧)ರ ವಾಕ್ಯಗಳು ೧೯೩೭ರರಲ್ಲಿ ಜಾರಿಗೆ ಬಂದ ಐರ್ಲೆಂಡ್ ನ ಸಂವಿಧಾನದ ಕಲಂ ೪೬ನ್ನು ಹೋಲುವಂತಿದ್ದು, ಅದು ಈ ರೀತಿ ಇದೆ: "ಈ ಸಂವಿಧಾನದಡಿಯಲ್ಲಿನ ಯಾವುದೇ ಕಾಯಿದೆಗಳನ್ನು ಬದಲಾವಣೆ, ಸೇರಿಸುವಿಕೆ, ಅಥವಾ ರದ್ದುಗೊಳಿಸುವಿಕೆಯ ಮೂಲಕ ತಿದ್ದುಪಡಿ ಮಾಡಬಹುದು - ಈ ಕಲಂನಡಿಯಲ್ಲಿ ಸೂಚಿಸಿದ ರೀತಿಗಳನ್ನನುಸರಿಸಿ".

ಇವನ್ನೂ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]