ಭಾರತೀಯ ವಿಶಿಷ್ಟವಾದ ಗುರುತಿನ ಪ್ರಾಧಿಕಾರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಭಾರತೀಯ ವಿಶಿಷ್ಟವಾದ ಗುರುತಿನ ಪ್ರಾಧಿಕಾರ(English: Unique Identification Authority of India (UIDAI))(Hindi:'भारतीय विशिष्ट पहचान प्राधिकरण)ಅಥವUIDAI', ಭಾರತೀಯ ನಿವಾಸಿಗಳಿಗೆಲ್ಲಾ ೧೬ ಅಂಕಗಳ ಸಂಖ್ಯೆಯುಳ್ಳ 'ಗುರುತಿನ-ಪತ್ರ' ನೀಡುವ ಮಹದಾಂಕ್ಷೆಯ ಯೋಜನೆ ’ಆಧಾರ್, ಏಪ್ರಿಲ್ ೨೬, ೨೦೧೦ ರಂದು, ಪುನರ್ನಿರ್ಮಾಣವಾಗಿದೆ. ಯೋಜನೆಯ ಅನುಷ್ಠಾನಕ್ಕೆ ಅನುಕೂಲವಾಗುವಂತೆ ೨೦೧೧ ನೇ ಇಸವಿಯ ಜನಗಣತಿಯ ವೇಳೆಯಲ್ಲಿ 'ಪ್ರತಿಯೊಬ್ಬ ಭಾರತೀಯನ ಎಲ್ಲಾ ಹತ್ತು ಬೆರಳುಗಳ ಬೆರಳಚ್ಚುಗಳನ್ನು ಪಡೆಯಲಾಗುತ್ತದೆ', ಹಾಗೂ 'ಕಣ್ಣಿನ ಸ್ಕ್ಯಾನಿಂಗ್' ಮಾಡಲಾಗುತ್ತದೆ. 'ಪ್ರತಿಯೊಬ್ಬರನ್ನೂ ಹದಿನಾರು ಅಂಕೆಗಳ ಒಂದು ಸಂಖ್ಯೆ ಮೂಲಕ ಗುರುತಿಸಲಾಗುವಂತೆ ವ್ಯವಸ್ಥೆ ಮಾಡಲಾಗಿದೆ'. ಮುಂದಿನ ನಾಲ್ಕೈದು ವರ್ಷಗಳಲ್ಲಿ ಕನಿಷ್ಟಪಕ್ಷ ಭಾರತದ ೬೦ ಕೋಟಿ ಜನತೆ, ಮೇಲೆತಿಳಿಸಿರುವ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಧಾಖಲಿಸಿರುವ ಗುರುತು ಚೀಟಿಯನ್ನು ಪಡೆಯಲಿದ್ದಾರೆ. ಎಲ್ಲಾ ಪ್ರಮುಖ ದಾಖಲಾತಿಗಳಲ್ಲೂ ಅದು ಮುಖ್ಯಸ್ಥಾನ ಪಡೆದುಕೊಳ್ಳಲಿದೆ.

ಪರಿವಿಡಿ

[ಬದಲಾಯಿಸಿ] 'ಆಧಾರ್'ಎನ್ನುವುದು ಈ ವ್ಯವಸ್ಥೆಯ ಹೊಸ ಹೆಸರು

ಇದುವರೆಗೆ ಮೊದಲು ನಿರ್ಣಯಿಸಿದಂತೆ ವಿಷಿಷ್ಠ ಗುರುತು ಸಂಖ್ಯೆ (UID) ಎಂದು ಕರೆಯಲಾಗುತ್ತಿದ್ದ ಪ್ರಾರಂಭಿಕ ಹೆಸರು ಜನಸಾಮಾನ್ಯರಿಗೆ ಸ್ವಲ್ಪ ಗೊಂದಲ ಹಾಗೂ ಸಂಶಯಗಳನ್ನು ತಂದಿತ್ತು. ಸಾಮಾನ್ಯಜನರಿಗೆ ಸ್ವಲ್ಪ ಕಸಿವಿಸಿಯೂ ಆಗಿತ್ತು. ಯೋಜನೆಯ ಹೊಸಹೆಸರು ಆಧಾರ್; ಈ ಹೊಸ ಪದ್ಧತಿ ಯಾವ ಅನುಮಾನಕ್ಕೂ ಆಸ್ಪದವಿಲ್ಲದ ಸುಲಭವಾಗಿ ಅರ್ಥವಾಗುವ ಪುನರ್ನಿರ್ಮಾಣಗೊಂಡ ವಿಶಿಷ್ಠಗುರುತಾಗಿದೆ. ಪ್ರಾಧಿಕಾರದ ಅಧ್ಯಕ್ಷ [ನಂದನ್ ನಿಲೇಕಣಿಯವರು ಕೈಗೊಂಡ ಒಂದು ಸಶಕ್ತ-ಯೋಜನೆಯಾಗಿದೆ.

[ಬದಲಾಯಿಸಿ] ಆಧಾರ್ ಲಾಂಛನ ಸ್ಪರ್ಧೆ

ಆಧಾರ್ ಲಾಂಛನ ಸ್ಪರ್ಧೆಗೆ ೨,೦೦೦ ಪ್ರವೇಶಗಳು ಬಂದಿದ್ದವು. ಮುಂಬೈನ ’ಅತುಲ್ ಸುಧಾಕರ್ ಪಾಂಡೆ’ ಎಂಬ ವ್ಯಕ್ತಿಗೆ ೧ ಲಕ್ಷರೂಪಾಯಿ ಗೌರವಧನ ದೊರೆಯಿತು. ಈ ವ್ಯವಸ್ಥೆ ೧೨ ಅಂಕಿಗಳ ಸಂಖ್ಯೆಯನ್ನು ನೀಡುತ್ತದೆ. ಸನ್ ೨೦೦೯ ರ ಆಗಸ್ಟ್ ತಿಂಗಳಿನಲ್ಲಿ ಜನಿಸಿದ ಶಿಶುವಿನಿಂದ ಹಿಡಿದು ಪ್ರತಿಯೊಬ್ಬ ಭಾರತೀಯ ನಿವಾಸಿಯೂ 'ಗುರುತು-ಸಂಖ್ಯೆ ಚೀಟಿ' ಪಡೆಯುತ್ತಾನೆ. ಪ್ರತಿವ್ಯಕ್ತಿಯ ಗುರುತುಸಹ ಪತ್ತೆಯಾಗುತ್ತದೆ.

[ಬದಲಾಯಿಸಿ] ಬಯೋಮೆಟ್ರಿಕ್ಸ್ ಪದ್ಧತಿ ಹಾಗೂ ಭೌಗೋಳಿಕ ಪದ್ಧತಿಗಳ ಬಳಕೆ

ವ್ಯಕ್ತಿಯ ವೈಶಿಷ್ಠ್ಯತೆಗಳನ್ನು ಸರಿಯಾದ ವಿವರಗಳೊಂದಿಗೆ ತಿಳಿಯಲು ಮತ್ತು ಆ ಮಾಹಿತಿಗಳನ್ನು ಸಾಬೀತುಮಾಡಲು ಭೌಗೋಳಿಕ ಮತ್ತು ಬಯೋಮೆಟ್ರಿಕ್ಸ್ ಪದ್ಧತಿ ಸಹಾಯಮಾಡುತ್ತದೆ.ಯಾವುದೇ ವ್ಯಕ್ತಿಗೆ ದಾಖಲೆಗಳಿಲ್ಲದಿದ್ದರೂ ಪ್ರಿತಿಯೊಬ್ಬ ಭಾರತೀಯ ನಿವಾಸಿಯೂ ವಿಶಿಷ್ಠ ಗುರುತು ಚೀಟಿಯನ್ನು ಪಡೆಯಲು ಹಕ್ಕುದಾರನಾಗಿರುತ್ತಾನೆ. 'UIDAI' ಗುರುತು ಆಧಾರಿತ ಚೀಟಿ ಯಾವುದೇ ಸಾರ್ವತ್ರಿಕವಾಗಿ ಅಪೇಕ್ಷಿಸುವ ದಸ್ತಾವೇಜ್ ಗಳಿಗೆ ಅನ್ವಯವಾಗುತ್ತದೆ. ಉದಾಹರಣೆಗೆ 'ಪಡಿತರ-ಚೀಟಿ', 'ಪಾಸ್ ಪೋರ್ಟ್'ರಾಷ್ಟ್ರೀಯ ಗ್ರಾಮೀಣ ಉದ್ಯೋಗ, ಡ್ರೈವಿಂಗ್ ಲೈಸೆನ್ಸ್ ಟ್ಯಾಕ್ಸ್ ಕಟ್ಟುವಾಗ, ಬ್ಯಾಂಕ್ ಖಾತೆ ತೆರೆಯುಲು,ಇತ್ಯಾದಿಗಳಿಗೆ ಬಳಸಬಹುದು.

[ಬದಲಾಯಿಸಿ] ಭಾರತೀಯ ವಿಶಿಷ್ಟವಾದ ಗುರುತಿನ ಪ್ರಾಧಿಕಾರ

೨೦೦೯ ರ ಆಗಸ್ಟ್ ತಿಂಗಳಿನಿಂದಲೇ ಕಾರ್ಯಾರಂಭಮಾಡಿದೆ. ವ್ಯವಸ್ಥೆ ಮತ್ತು ಸುನಿಶ್ಚಿತಗೊಳಿಸಲು ಏಪ್ರಿಲ್ ೨೦೧೦ ರಂದು ಅದರ ಪುನರ್ನಿರ್ಮಾಣದ ಕೆಲಸ ಶುರುವಾಗಿದೆ.

[ಬದಲಾಯಿಸಿ] ಭಾರತೀಯ ವಿಶಿಷ್ಟ ಗುರುತಿನ ಸಂಖ್ಯೆ ಪ್ರಾಧಿಕಾರ ಕಾಯಿದೆ- ೨೦೧೦

ಭಾರತೀಯ ವಿಶಿಷ್ಟ ಗುರುತಿನ ಸಂಖ್ಯೆ ಪ್ರಾಧಿಕಾರ ಕಾಯಿದೆ- ೨೦೧೦ ಸಂಸದ್ ನಲ್ಲಿ ಸಿದ್ಧವಾಗುತ್ತಿದೆ.

  • ಸಂಖ್ಯೆಯ ದುರ್ಬಳಕೆ ತಡೆಗೆ ತೆಗೆದುಕೊಂಡ ವಿಶೇಷ ಕ್ರಮದ ನಿಟ್ಟಿನಲ್ಲಿ, ಒಂದು ಕರಡು ಮಸೂದೆ ಸಿದ್ಧವಾಗುತ್ತಿದೆ. ಪ್ರತಿಕ್ರಿಯೆಗಾಗಿ ಸಾರ್ವಜನಿಕರ ಅಭಿಪ್ರಾಯಕ್ಕಾಗಿ ಪ್ರಕಟಿಸಲಾಗಿದೆ. ಜತೆಗೆ ಪ್ರಾಧಿಕಾರವನ್ನು ಸಂವಿಧಾನಿಕ ಸಂಸ್ಥೆಯನ್ನಾಗಿ ಮಾನ್ಯ ಮಾಡುವುದು ಈ ಮಸೂದೆಯ ಉದ್ದೇಶವಾಗಿದೆ ವಿಶಿಷ್ಟ ಗುರುತಿನ ಸಂಖ್ಯೆಯ ದುರುಪಯೋಗ, ಸಾರ್ವಜನಿಕರ ವೈಯಕ್ತಿಕ ವಿವರಗಳನ್ನು ಬಹಿರಂಗ ಪಡಿಸದೇ ಇರುವ ಸಲುವಾಗಿ ಮಸೂದೆ ಮಾಹಿತಿ ಭದ್ರತೆ ಮತ್ತು ರಹಸ್ಯವನ್ನು ಕಾಯ್ದುಕೊಳ್ಳಲಾಗುವುದು
  • ಭಾರತೀಯ ವಿಶಿಷ್ಟ ಗುರುತಿನ ಸಂಖ್ಯೆ ಪ್ರಾಧಿಕಾರ (ಯುಐಡಿಎಐ) ನೀಡುವ ವಿಶಿಷ್ಟ ಗುರುತಿನ ಸಂಖ್ಯೆಯನ್ನು ದುರುಪಯೋಗ ಮಾಡಿಕೊಳ್ಳುವವರ ವಿರುದ್ಧ ಕಠಿಣ ಕ್ರಮಕ್ಕೆ ಒಳಪಡಿಸಲು ಸಿದ್ಧತೆ ನಡೆಸಿದೆ. ದುರುಪಯೋಗ ಸಾಬೀತಾದರೆ ಒಂದು ಕೋಟಿ ರೂಪಾಯಿ ವರೆಗೆ ದಂಡ ವಿಧಿಸಲು ಅವಕಾಶ ಇದೆ. ಎಂದು ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
  • ವಿಶಿಷ್ಟ ಗುರುತಿನ ಸಂಖ್ಯೆಯ ದುರುಪಯೋಗ, ಸಾರ್ವಜನಿಕರ ವೈಯಕ್ತಿಕ ವಿವರಗಳನ್ನು ಬಹಿರಂಗ ಪಡಿಸದೇ ಇರುವ ಸಲುವಾಗಿ ಮಸೂದೆ ಮಾಹಿತಿ ಭದ್ರತೆ ಮತ್ತು ರಹಸ್ಯವನ್ನು ಕಾಯ್ದುಕೊಳ್ಳಲಾಗುವುದು
  • ಪ್ರಾಧಿಕಾರದಲ್ಲಿದ್ದುಕೊಂಡು ಅಲ್ಲಿರುವ ಮಾಹಿತಿಯನ್ನು ಬಹಿರಂಗಗೊಳಿಸಿದರೆ, ವೈಯಕ್ತಿಕ ವಿವರಗಳನ್ನು ಬಹಿರಂಗ ಪಡಿಸಿದರೆ, ಅಕ್ರಮವಾಗಿ ಕಾರ್ಯ ನಿರ್ವಸಿದರೆ ಅಂತಹ ಅಪರಾಧಗಳಿಗೆ ಕಠಿಣ ಕ್ರಮ, ದಂಡ ವಿಧಿಸಲು ಉದ್ದೇಶಿತ ಕರಡು ಮಸೂದೆಯಲ್ಲಿ ಅವಕಾಶ ಇದೆ.
  • ಒಂದೊಮ್ಮೆ ಪ್ರಾಧಿಕಾರದ ಕೆಲಸ ವಹಿಸಿಕೊಂಡ ಕಂಪನಿಯೇ ಈ ಕೃತ್ಯ ಎಸಗಿದರೆ ಒಂದು ಲಕ್ಷದ ವರೆಗೆ ದಂಡ ವಿಧಿಸಲು ಅವಕಾಶ ಇದೆ. ಮಾಹಿತಿ ಬ್ಯಾಂಕ್‌ಗೆ ಅಕ್ರಮ ಪ್ರವೇಶ ಮಾಡಲು ಯತ್ನಿಸಿದರೆ ಅಂತಹವರಿಗೆ ಮೂರು ವರ್ಷದ ವರೆಗೆ ಜೈಲು ಶಿಕ್ಷೆ ಅಥವಾ ಒಂದು ಕೋಟಿ ರೂಪಾಯಿವರೆಗೆ ದಂಡ ವಿಧಿಸಲು ಅವಕಾಶ ಇದೆ.
  • ಆದರೆ ನಿಗದಿತ ನ್ಯಾಯಾಲಯಗಳು ಇಂತಹ ಮಾಹಿತಿ ಕೇಳಿದರೆ ಅದನ್ನು ನೀಡಬಹುದಾಗಿದೆ. ರಾಷ್ಟ್ರದ ಹಿತದೃಷ್ಟಿಯಿಂದ ಮಾತ್ರ ವೈಯಕ್ತಿಕ ವಿಷಯಗಳ ಮಾಹಿತಿಯನ್ನು ನೀಡಲಾಗುವುದು. ಅದೂ ಸಂಬಂಧಿಸಿದ ಇಲಾಖೆಯ ಸಚಿವಾಲಯದಿಂದ ಅನುಮತಿ ಪಡೆದರೆ ಮಾತ್ರವೇ ಮಾಹಿತಿ ನೀಡಲಾಗುವುದು.
  • ಕರಡು ಮಸೂದೆ ಬಗ್ಗೆ ಸಾರ್ವಜನಿಕರಿಂದ ಬರುವ ಅಭಿಪ್ರಾಯಗಳನ್ನು ಆಧರಿಸಿ ಸಂಸತ್‌ನ ಮುಂಗಾರು ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.ವಿಶಿಷ್ಟ ಗುರುತಿನ ಸಂಖ್ಯೆಯನ್ನು ಮೊದಲಿಗೆ ೨೦೧೦ ರ ಆಗಸ್ಟ್ ಮತ್ತು ೨೦೧೧ ರ ಫೆಬ್ರುವರಿ ನಡುವೆ ಸಾರ್ವಜನಿಕರಿಗೆ ನೀಡಲಾಗುವುದು. ಮುಂದಿನ ನಾಲ್ಕು ವರ್ಷಗಳಲ್ಲಿ ಆರು ಕೋಟಿ ಜನರಿಗೆ ಈ ಸಂಖ್ಯೆಯನ್ನು ನೀಡುವ ಉದ್ದೇಶ ಪ್ರಾಧಿಕಾರಕ್ಕೆ ಇದೆ.

[ಬದಲಾಯಿಸಿ] ವಿಶ್ವದ ಇತರ ದೇಶಗಳು

"ಯುಐಡಿ" ಗುರುತು ಚೀಟಿಯನ್ನು ಚಾಲನೆಯಲ್ಲಿಟ್ಟುಕೊಂಡಿರುವ ವಿಶ್ವದ ಇತರ ದೇಶಗಳು


[[೧]] [[೨]] [[೩]]

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು