ಭಾರತದ ಜನತೆ
ವಿಕಿಪೀಡಿಯ ಇಂದ
(ಭಾರತದ ೨೦೦೧ರ ಜನಗಣತಿ ಇಂದ ಪುನರ್ನಿರ್ದೇಶಿತ)
ಭಾರತದ ಜನಸಂಖ್ಯೆ ಸ್ಫೋಟ - ೧೯೬೦ರಲ್ಲಿನ ೪೪೩ ಮಿಲಿಯನ್ ಇಂದ ೨೦೦೦ದಲ್ಲಿನ ೧,೦೦೪ ಮಿಲಿಯನ್ ವರೆಗೆ
ಭಾರತದ ಪ್ರತಿ ಜಿಲ್ಲೆಯ ಅಕ್ಷರತೆ
ಭಾರತದ ಜನಸಂಖ್ಯೆ ಸುಮಾರು ೧.೨೧ ಬಿಲಿಯನ್(೨೦೧೧ರ ಅಂದಾಜು). ಪ್ರಪಂಚದ ಆರನೇ ಒಂದು ಭಾಗಕ್ಕಿಂತ ಹೆಚ್ಚು ಜನರು ಈ ದೇಶದಲ್ಲಿದ್ದಾರೆ. ಸುಮಾರು ಎರಡು ಸಾವಿರ ಬುಡಕಟ್ಟುಗಳ ಮೂಲದ ಜನರಿರುವ ಇಲ್ಲಿ ಪ್ರಪಂಚದ ಎಲ್ಲಾ ಪ್ರಮುಖ ಧರ್ಮಗಳನ್ನು ಪಾಲಿಸುವವರಿದ್ದಾರೆ. ಪ್ರಪಂಚದ ಮುಖ್ಯ ಭಾಷಾ ಕುಟುಂಬಗಳಲ್ಲಿನ ನಾಲ್ಕು ಕುಟುಂಬಗಳ ಭಾಷೆಗಳನ್ನು ಇಲ್ಲಿ ಮಾತನಾಡಲಾಗುತ್ತದೆ. ಇವು ಇಂಡೋ-ಯುರೋಪಿಯನ್ ಭಾಷೆಗಳು, ದ್ರಾವಿಡ ಭಾಷೆಗಳು, ಆಸ್ಟ್ರೊ-ಏಷ್ಯಾಟಿಕ್ ಭಾಷೆಗಳು ಮತ್ತು ಟಿಬೆಟೊ-ಬರ್ಮನ್ ಭಾಷೆಗಳು. ಆಫ್ರಿಕಾ ಖಂಡದಲ್ಲಿ ಮಾತ್ರ ಇದಕ್ಕಿಂತ ಹೆಚ್ಚು ಭಾಷೆ, ಸಂಸ್ಕೃತಿ ಮತ್ತು ವಂಶವಾಹಿಗಳ ವೈವಿದ್ಯತೆ ಇರುವುದು.
ಭಾರತದ ಅವಲಂಬಿತ ಅನುಪಾತ ಕೇವಲ 0.4; ಇದು 2020 ರಲ್ಲಿ, ಪ್ರತೀ ಭಾರತೀಯನ ಸರಾಸರಿ ವಯಸ್ಸು 29 ವರ್ಷಗಳು ಹಾಗೂ ಚೀನಾ 37, ಮತ್ತು ಜಪಾನ್ 48. [೧]
References [ಬದಲಾಯಿಸಿ]
- ↑ India, a Country Study United States Library of Congress, Note on Ethnic groups