ಬೊಂಬಾಯಿನಗರದ ಕುಡಿಯುವನೀರಿನ ವಿತರಣ ವ್ಯವಸ್ಥೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮುಂಬಯಿಗೆ ಕುಡಿಯುವ ನೀರಿನ ವ್ಯವಸ್ಥೆ[ಬದಲಾಯಿಸಿ]

ಕುಡಿಯುವನೀರಿನ ವ್ಯವಸ್ಥೆ,[೧] ಬ್ರಿಟಿಷ್ ಗವರ್ನರ್, ಜಾನ್ ಲಾರ್ಡ್ ಎಲ್ಫಿನ್ ಸ್ಟನ್ , ರವರ ಕಾಲದಲ್ಲಿ ಜಾರಿಗೆ ಬಂದ, ಅತ್ಯಂತ ಸಮರ್ಪಕವಾದ ಯೋಜನೆಗಳಲ್ಲೊಂದು. ಮೊಟ್ಟಮೊದಲ, ಮುಂಬಯಿನ ಅತಿ ಪುರಾತನ ಕುಡಿಯುವ ನೀರು ಒದಗಿಸುವ ಸರೋವರ ವಿಹಾರ್ ಲೇಕ್, ಎಂದು ಪರಿಗಣಿಸಲ್ಪಟ್ಟಿದೆ.[೨] ಇದರ ಪ್ರಾರಂಭದ ಕೆಲಸವನ್ನು ಜನವರಿ, ೧೮೫೬ ರಲ್ಲೇ ಪ್ರಾರಂಭ ಮಾಡಿದ್ದು, ಅದು ಮುಗಿದದ್ದು, ೧೮೬೦ ರಲ್ಲಿ. ಬ್ರಿಟಿಷ್ ಗವರ್ನರ್, ಜಾನ್ ಲಾರ್ಡ್ ಎಲ್ಫಿನ್ ಸ್ಟನ್ ಆಡಳಿತದ ಅವಧಿಯಲ್ಲಿ, ಈ ಯೋಜನೆಗೆ ತಗುಲಿದ ವೆಚ್ಚ, ೬೫ ಲಕ್ಷರೂಪಾಯಿಗಳು. 'ಟಸ್ಸೊ', ಎಂಬ ನದಿಗೆ, ೧೮೭೨ ಹಾಗೂ ೧೮೭೯ ರ ಸಮಯದಲ್ಲಿ, ತುಳಸಿನದಿ ಯ ನೀರಿನ ಪಥವನ್ನು ಬದಲಾಯಿಸಿ, ಮಧ್ಯೆ ಅಣೆಕಟ್ಟನ್ನು ನಿರ್ಮಿಸಿ, ನೀರನ್ನು ಶೇಕರಿಸಿಡುವ ವ್ಯವಸ್ಥೆಗೆ ತಗುಲಿದ ವೆಚ್ಚ, ೪೦ ಲಕ್ಷ ರೂಪಾಯಿಗಳು. ನಂತರ, ೧೮೮೯ ರಲ್ಲಿ 'ಪೊವಾಯ್ ಲೇಕ್', ಕೆಲಸ ಮುಗಿಯಿತು. ತನ್ಸ ಮತ್ತೊಂದು, ನದಿಗೆ ಕಟ್ಟಲಾದ ರೆಸರ್ವಾಯಿರ್ ಕೆಲಸ, ೧೮೯೨ ರಲ್ಲಿ ಮುಗಿಯಿತು.

ಬಾಂಬೆ ಮ್ಯುನಿಸಿಪಲ್ ಕಾರ್ಪೊರೇಷನ್ ಹಮ್ಮಿಕೊಂಡ ಕಾರ್ಯಕ್ರಮಗಳು[ಬದಲಾಯಿಸಿ]

೧೯೧೬ ರಲ್ಲಿ ಬಾಂಬೆ ಮ್ಯುನಿಸಿಪಲ್ ಕಾರ್ಪೊರೇಷನ್ ನವರು, 'ತನ್ಸ ಸರೊವರ', ದ ನೀರು ಶೇಖರಿಸುವ ಸಾಮರ್ಥ್ಯವನ್ನು ಎರಡುಪಟ್ಟು ಹೆಚ್ಚಿಸಿದರು. ಹತ್ತಿರದ ಕೃಷಿಭೂಮಿಗಳನ್ನು ವಶಪಡಿಸಿಕೊಂಡರು. ಮತ್ತೆ ಕೆಲಸ ಪ್ರಾರಂಭವಾಯಿತು. ಈ ಬದಲಾವಣೆಯಿಂದಾಗಿ, ೫ ವರ್ಷದ ನಂತರ, ನೀರಿನ ಶೇಖರಣೆಯನ್ನು ೩ ಪಟ್ಟು ಹೆಚ್ಚಿಸಿಲು ಸಹಾಯಕವಾಯಿತು.'ಕ್ಯಾಚ್ ಮೆಂಟ್ ಏರಿಯ,' ದ, ನೈರ್ಮಲ್ಯೀಕರಣವನ್ನೂ ಗಮನಕ್ಕೆ ತೆಗೆದುಕೊಂಡು,ಅತ್ಯಂತ ಮುಂಜಾಗರೂಕತೆಯ ದೃಷ್ಟಿಯಿಂದ, ಎಲ್ಲಾ ಕೆಲಸಗಳನ್ನು ಹಮ್ಮಿಕೊಳ್ಳಲಾಯಿತು.

ವಿಶ್ವ ಬ್ಯಾಂಕ್ ಮಹಾಸಂಸ್ಥೆ, ಯ ಯೋಗದಾನ[ಬದಲಾಯಿಸಿ]

ಮುಂದೆ, ವಿಶ್ವ ಬ್ಯಾಂಕ್ ಮಹಾಸಂಸ್ಥೆ, ಯವರು, "Bombay Water Supply and Sewage Disposal Projects" ಎಂಬ ಪರಿ-ಯೋಜನೆಯ ಅಡಿಯಲ್ಲಿ, ೧೯೭೫ ಮತ್ತು ೧೯೯೫, ಮುಂಬಯಿ ನಗರಕ್ಕೆ ನೀರಿನ ಹೊಸ ಕಾರ್ಯಕ್ರಮವನ್ನು ಲಾಗು ಮಾಡಲಾಯಿತು. ಮುಂಬಯಿ ನಗರಕ್ಕೆ ನೀರಿನ ವಿತರಣೆಯನ್ನು ೬೦ ರಿಂದ ೬೫೦ ಮಿಲಿಯನ್ ಗ್ಯಾಲನ್ಸ್ /ದಿನಪ್ರತಿ, ಕೇವಲ ವೈತರಣ ಜಲಾಶಯ ದ ಪ್ರದೇಶದಿಂದ, ಸರಬರಾಜು ಮಾಡಾಲಾಗುತ್ತಿದೆ. ಈ ನಿಟ್ಟಿನಲ್ಲಿ, ಹಲವಾರು ಬೆಳವಣಿಗೆಗಳನ್ನು ಮಾಡಲಾಗಿದೆ.

ಮುಂಬಯಿ ನಗರಕ್ಕೆ ದೊರೆಯುತ್ತಿರುವ, 'ವರುಣದೇವರಕೃಪೆ,'[ಬದಲಾಯಿಸಿ]

'ವರುಣದೇವರ ಕೃಪೆ', ಮುಂಬಯಿ ನಗರಕ್ಕೆ, ಮೊದಲಿನಿಂದಲೂ ದೊರೆಯುತ್ತಲೇ ಇದೆ ವರ್ಷದಲ್ಲಿ ಜುನ್ ಜುಲೈ ಅಥವಾ ತಡವಾದರೆ, ಆಗಸ್ಟ್ ವರೆವಿಗೂ ಮಳೆರಾಯನ ಕೃಪೆ ಹೇಗೋ ದೊರೆಯುತ್ತಲೇ ಇದೆ. ಉತ್ತರ ಮುಂಬಯಿ ಕಡೆ ಹೋದಂತೆ, ಅಕ್ಕಪಕ್ಕದಲ್ಲಿ ಬೆಟ್ಟ-ಗುಡ್ಡಗಳಿವೆ. ಮಳೆಬಂದಾಗ ಬೆಟ್ಟದ ಇಳಿಜಾರು ಪ್ರದೇಶಗಳಲ್ಲಿ ನೀರು ನಿಂತು ಹೊಂಡ ಅಥವಾ ಜಲಾಶಯಗಳಾಗುವುದು ಸ್ವಾಭಾವಿಕ. ಅದರಂತೆ ಸ್ವಾಭಾವಿಕವಾಗಿ ಏರ್ಪಟ್ಟ ಪ್ರಕೃತಿದತ್ತ ಸರೋವರಗಳು ಒಟ್ಟುಆರು ಎಂದು ನಿಗದಿ ಮಾಡಾಲಾಗಿದೆ. ಅವುಗಳ ಹೆಸರುಗಳು ಕೆಳಗೆ ಕಂಡಂತಿವೆ.

ಜಲಾಶಯದ ಹೆಸರು. ಕೋಡಿಹರಿಯಲು ಬೇಕಾದ ನೀರಿನ ಮಟ್ಟ (ಮೀಟರ್ ಗಳಲ್ಲಿ)

  • ಮೋಡಕ್ ಸಾಗರ್ - ೧೬೩.೧೫
  • ತನ್ಸ ಲೇಕ್ - ೧೨೮.೬೩
  • ವಿಹಾರ್ ಲೇಕ್ -೮೦.೪೨
  • ತುಳಸೀ ಲೇಕ್ - ೧೩೯.೧೭
  • ಅಪ್ಪರ್ ವೈತರಣಾ ಲೇಕ್ - ೬೦೩.೫೧
  • ಭಟ್ಸ ಲೇಕ್ - ೧೩೩.೦೦

ಮುಂಬಯಿನ ಉಪನಗರ, ಭಾಂಡೂಪ್ ನಲ್ಲಿ 'ಕುಡಿಯುವನೀರಿನ ಶುದ್ಧೀಕರಣದ ಘಟಕ'[ಬದಲಾಯಿಸಿ]

ಮುಂಬಯಿ ನ ಹತ್ತಿರವಿರುವ ಉಪನಗರಿಯಾದ ಭಾಂಡೂಪ್ ನಲ್ಲಿ, ಏಶಿಯಾ ದಲ್ಲೇ ಅತ್ಯಂತ ದೊಡ್ಡದಾದ 'ಕುಡಿಯುವನೀರಿನ ಶುದ್ಧೀಕರಣದ ಘಟಕ' ವನ್ನು ಸ್ಥಾಪಿಸಲಾಗಿದೆ. ತುಳಸಿ ಲೇಕ್, ಹಾಗೂ ವಿಹಾರ್ ಲೇಕ್ ಗಳು ದಕ್ಷಿಣ ಮುಂಬಯಿ ಪ್ರದೇಶಗಳಿಗೆ ನೀರನ್ನು ಸರಬರಾಜು ಮಾಡುತ್ತವೆ. ಉಳಿದ ಸರೋವರಗಳು ಮುಂಬಯಿನ ದೂರದ ಉಪನಗರಿಗಳಿಗೆ ಕುಡಿಯುವ ನೀರನ್ನು ಒದಗಿಸುತ್ತವೆ. ದಕ್ಷಿಣ ಮುಂಬಯಿ ನ ಮಲಬಾರ್ ಹಿಲ್ ನ ಮೇಲೆ, ಭೂಮಿಯ ಒಳಭಾಗದಲ್ಲಿ '(Underground Water Tank)' ಕುಡಿಯುವ ನೀರಿನ ಭಾರಿ ಟ್ಯಾಂಕ್ ನ್ನು ಹಲವು ದಶಕಗಳ ಹಿಂದೆಯೇ ಸ್ಥಾಪಿಸಲಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. Water supply of Bombay, Report submitted to teh bench of justices of that city- Hector Tulloch, 1872
  2. Mumbai Commercial Capital of India, Lakes In Mumbai