ಬೆಳ್ಳಿತೆರೆ ಬೆಳಗಿದವರು
ವಿಕಿಪೀಡಿಯ ಇಂದ
ಬೆಳ್ಳಿತೆರೆ ಬೆಳಗಿದವರು ಅ.ನಾ.ಪ್ರಹ್ಲಾದ ರಾವ್ ಬರೆದಿರುವ ೨೦೦೭ರಲ್ಲಿ ಬಿಡುಗಡೆ ಆದ ೨೨೦ ಪುಟಗಳ ಪುಸ್ತಕ. ಇದು ಕನ್ನಡ ಚಲನಚಿತ್ರ ರಂಗದ ಸರ್ವತೋಮುಖ ಅಭಿವೃದ್ಡಿಗೆ ಕೊಡುಗೆ ನೀಡಿದ ೧೧೫ ಮಂದಿ ಮಹಾನುಭಾವರ ಬಗ್ಗೆ ಈ ಪುಸ್ತಕದಲ್ಲಿ ಲೇಖನಗಳಿವೆ.ಕನ್ನದ ಚಲನಚಿತ್ರರಂಗದ ಆದ್ಯ ಪಿತಾಮಹ ಗುಬ್ಬಿ ವೀರಣ್ಣ, ಕನ್ನಡದ ಮೊದಲ ಚಲನಚಿತ್ರ ಸತಿ ಸುಲೋಚನ ನಾಯಕ ಸುಬ್ಬಯ್ಯ ನಾಯ್ಡು, ಮೇರು ನಟ ಡಾ.ರಾಜ್‌ಕುಮಾರ್ ಸೇರಿದಂತೆ ಹಿರಿಯ ನಟ ನಟಿಯರು, ಸಂಗೀತ ನಿರ್ದೇಶಕರು, ತಂತ್ರಜ್ಙರು, ಹಿನ್ನೆಲೆ ಗಾಯಕರೇ ಮುಂತಾದವರ ಬಗ್ಗೆ ಪರಿಚಯ ಲೇಖನಗಳನ್ನು ಈ ಪುಸ್ತಕ ಒಳಗೊಂಡಿದೆ. ಖ್ಯಾತ ನಿದೇ೯ಶಕ ಗಿರೀಶ್ ಕಾಸರವಳ್ಳಿ ಈ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ. ಪುಸ್ತಕವನ್ನು ಹಿರಿಯ ಕವಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಬಿಡುಗಡೆ ಮಾಡಿದರು.