ಬೆಳ್ತಂಗಡಿ
ವಿಕಿಪೀಡಿಯ ಇಂದ
| ಬೆಳ್ತಂಗಡಿ | |
| ರಾಜ್ಯ - ಜಿಲ್ಲೆ |
ಕರ್ನಾಟಕ - ದಕ್ಷಿಣ ಕನ್ನಡ |
| ನಿರ್ದೇಶಾಂಕಗಳು | |
| ವಿಸ್ತಾರ | 8.87 km² |
| ಸಮಯ ವಲಯ | IST (UTC+5:30) |
| ಜನಸಂಖ್ಯೆ (2001) - ಸಾಂದ್ರತೆ |
7,302 - /ಚದರ ಕಿ.ಮಿ. |
| ಕೋಡ್ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- 574 214 - +91-8256 - |
ಇದು ದಕ್ಷಿಣ ಕನ್ನಡ ಜಿಲ್ಲೆಯ ಒಂದು ತಾಲೂಕು ಕೇಂದ್ರ.ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ವಿಸ್ತಾರವಾದ ತಾಲೂಕು. ಚಾರ್ಮಾಡಿಯಿಂದ ಪೂಂಜಾಲಕಟ್ಟೆಯವರೆಗೂ, ವೇಣೂರು ನಿಂದ ಉಪ್ಪಿನಂಗಡಿಯವರೆಗೂ ಬೆಳ್ತಂಗಡಿ ತಾಲೂಕು ಹರಡಿದೆ. .ಇದರ ಪೂರ್ವ-ಉತ್ತರ ಭಾಗದಲ್ಲಿ ರಮಣೀಯವಾದ ಪಶ್ಚಿಮ ಘಟ್ಟವಿದೆ. ಈ ತಾಲೂಕಿನಲ್ಲಿ ಪ್ರಸಿದ್ಧ ಯಾತ್ರಾಸ್ಥಳ ಧರ್ಮಸ್ಥಳ,ಶಿಕ್ಷಣ ಕೇಂದ್ರವಾದ ಉಜಿರೆ,ಪ್ರೇಕ್ಷಣೀಯ ಸ್ಥಳವಾದ ಜಮಲಾಬಾದ್ ಕೋಟೆಯೂ ಇದೆ. ಇದಲ್ಲದೆ ಬೆಳ್ತಂಗಡಿಯಲ್ಲಿ ಹಲವಾರು ಧಾರ್ಮಿಕ ಕ್ಷೇತ್ರಗಳೂ ಇವೆ. ಮುಖ್ಯವಾಗಿ ಕಾಜೂರಿನ ಮಸೀದಿ, ಬೆಳ್ತಂಗಡಿಯ ಚರ್ಚ್, ಕುತ್ಯಾರು ಸೊಮನಥೆeಶ್ವರ ದೇವಸ್ಥಾನ, ನೇತ್ರಾವತಿ ನದಿ ಇತ್ಯಾದಿ. ಇತ್ತೀಚೆಗೆ ಬೆಳ್ತಂಗಡಿಯಲ್ಲಿ ಎರಡು ಎಂಜಿನಿಯರಿಂಗ್ ಕಾಲೇಜುಗಳು ಸ್ಥಾಪನೆಯಾಗಿವೆ. ಸುದ್ದಿ ಬಿಡುಗಡೆ ಹಾಗೂ ಜೈ ಕನ್ನಡಮ್ಮ ಇಲ್ಲಿಯ ಪ್ರಾದೇಶಿಕ ಪತ್ರಿಕೆಗಳು.
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |