ಬೆಟ್ಟದ ಮಲ್ಲೇಶ್ವರ ದೇವಸ್ಥಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೆಟ್ಟದ ಮಲ್ಲೇಶ್ವರ ದೇವಸ್ಠಾನವು ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನಲ್ಲಿದೆ. ತಾಲೂಕು ಕೇಂದ್ರದಿಂದ ಸುಮಾರು ೧೫ ಕಿ.ಮೀ ದೂರದಲ್ಲಿದೆ. ಹಡಗಲಿಯಿಂದ ಹರಪನಹಳ್ಳಿಗೆ ಹೋಗುವ ಮಾರ್ಗದಲ್ಲಿ ಕೊಮಾರನಹಳ್ಳಿ ತಾಂಡ ದಿಂದ ಎಡಕ್ಕೆ ಸುಮಾರು ೪ ಕಿ.ಮೀ ಸಾಗಿದರೆ ಶ್ರೀ ಬೆಟ್ಟದ ಮಲ್ಲೇಶ್ವರ ಸು‍‍ಕ್ಶೇತ್ರ ದರ್ಶನವಾಗುತ್ತದೆ.

ದಟ್ಟ ಕಾನನದ ನಡುವೆ ಪ್ರಕೃತಿಯ ಮಡಿಲಲ್ಲಿ ಈ ದೇಗುಲ ನಿರ್ಮಾಣಗೊಂಡಿದೆ. ಬೆಟ್ಟದ ಮಲ್ಲೇಶ್ವರ ಶಿಖರವು ಬಳ್ಳಾರಿ ಜಿಲ್ಲೆಯಲ್ಲಿ ೩ನೇ ಅತಿ ದೊಡ್ಡ ಶಿಖರವೆಂದು ದಾಖಲಾಗಿದೆ. ಈ ಬೆಟ್ಟದ ತುದಿಯಿಂದ ರಾಯದುರ್ಗದ ಸುಂದರವಾದ ಬೆಟ್ಟಗಳ ಸಾಲುಗಳನ್ನು ವೀಕ್ಶಿಸಬಹುದು. ಬೆಟ್ಟದ ಮೇಲೆ ನಿಂತು ನೋಡುವ ದೃಶ್ಯ ಕಣ್ಣಿಗೆ ಆನಂದವನ್ನುಂಟು ಮಾಡುತ್ತದೆ.

ಬೆಟ್ಟದ ತುದಿಯಲ್ಲಿ ನಿರ್ಮಾಣಗೊಂಡಿರುವ ೩೦ ಅಡಿ ಆಳದ ಗುಹೆಯಲ್ಲಿ ಮುದಿಮಲ್ಲಪ್ಪ ದೇವರ ಪ್ರತಿಮೆ ಇಡಲಾಗಿದೆ. ಇದನ್ನು ಈ ಭಾಗದ ಜನ "ಮ್ಯಾಗಳ ಮಲ್ಲಣ್ಣ " ಎಂದು ಕರೆಯುತ್ತಾರೆ. ಈ ಪ್ರದೇಶದಲ್ಲಿ ಬಹಳ ಹಿಂದೆಯೇ ಅಚ್ಚುಕಟ್ಟಾಗಿ ಎರಡು ಕುಡಿಯುವ ನೀರಿನ ಬಾವಿಗಳನ್ನು ನಿರ್ಮಿಸಲಾಗಿದೆ. ಈ ಭಾಗದ ಬಹುತೇಕ ರೈತ ಕುಟುಂಬಗಳು ಮುಂಗಾರು ಬಿತ್ತನೆಗೆ ಮುನ್ನ ಈ ಬೆಟ್ಟದ ಮಲ್ಲಣ್ಣನಿಗೆ ಹೋಳಿಗೆ ಎಡೆ ನೈವೇದ್ಯ ಮಾಡಿ ಅರ್ಪಿಸಿ ಬೇಡಿಕೊಳ್ಳುವುದು ವಾಡಿಕೆಯಾಗಿದೆ.

ಬೆಟ್ಟದ ಮಲ್ಲೇಶ್ವರನ ಗರ್ಭಗುಡಿ ಪ್ರಾಚೀನ ಕಾಲದಲ್ಲಿ ನಿರ್ಮಿಸಲ್ಪಟ್ಟಿದ್ದು ಎಂದು ತಿಳಿದುಬರುತ್ತದೆ. ನಂತರ ದೇವಸ್ಥಾನವು ಹರಪನಹಳ್ಳಿಯ ಪಾಳೇಗಾರ ರಾಜಾ ಸೋಮಶೇಖರ ನಾಯಕ ಕಾಲದಲ್ಲಿ ನಿರ್ಮಾಣಗೊಂಡಿರಬಹುದೆಂದು ತಿಳಿದುಬರುತ್ತಿದೆ. ಶ್ರೀ ಬಿ.ಎಂ.ಶ್ರೀಕಂಠಶಾಸ್ತ್ರಿಗಳು ಈ ಹಿಂದೆ ರಚಿಸಿದ 'ಶ್ರೀ ಬೆಟ್ಟದ ಮಲ್ಲೇಶ್ವರ ಶತಕ' ಎಂಬ ಗ್ರಂಥ ದಲ್ಲಿ ದೇವಸ್ಥಾನ ಚರಿತ್ರೆ ಬಗ್ಗೆ ಉಲ್ಲೇಖವಿದೆ.