ಬೆಂಜಮಿನ್ ಫ್ರ್ಯಾಂಕ್ಲಿನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೆಂಜಮಿನ್ ಫ್ರ್ಯಾಂಕ್ಲಿನ್
ಬೆಂಜಮಿನ್ ಫ್ರ್ಯಾಂಕ್ಲಿನ್


ಜನನ (೧೭೦೬-೦೧-೧೭)೧೭ ಜನವರಿ ೧೭೦೬
ಬಾಸ್ಟನ್, ಮ್ಯಾಸಚೂಸೆಟ್ಸ್
ಮರಣ April 17, 1790(1790-04-17) (aged 84)
ಫಿಲಡೆಲ್ಫಿಯ, ಪೆನ್ಸಿಲ್ವೇನಿಯ
ಜೀವನಸಂಗಾತಿ ದೆಬೋರಾಃ ರೀಡ್
ವೃತ್ತಿ ವಿಜ್ಞಾನಿ
ಲೇಖಕ
ರಾಜಕಾರಣಿ

ಬೆಂಜಮಿನ್ ಫ್ರ್ಯಾಂಕ್ಲಿನ್ (ಜನನ: ಜನವರಿ ೧೭, ೧೭೦೬ - ಮರಣ: ಏಪ್ರಿಲ್ ೧೭, ೧೭೯೦) ಇವರು ಆಮೇರಿಕಾ ಸಂಯುಕ್ತ ಸಂಸ್ಥಾನದ ಸಂಸ್ಥಾಪಕರಲ್ಲಿ ಒಬ್ಬರು. ಇವರು ಲೇಖಕರು, ಮಾನವ ಹಕ್ಕುಗಳ ಹೋರಾಟಗಾರರು, ವಿಜ್ಞಾನಿಯು, ರಾಜ್ಯನೀತಿಶಾಸ್ತ್ರಜ್ಞರು, ಸಂಶೋಧಕರು, ಮುದ್ರಕರು ಮತ್ತು ರಾಯಭಾರಿಯೂ ಆಗಿದ್ದರು. ಅಮೆರಿಕ ಸಂಯುಕ್ತ ಸಂಸ್ಥಾನದ ಬೋಸ್ಟನ್ ನಲ್ಲಿ ಜನನ. ಚಿಕ್ಕಂದಿನಿಂದಲೇ ವಿಜ್ಞಾನದಲ್ಲಿ ಆಸಕ್ತಿ. ಮುದ್ರಣಾಲಯದಲ್ಲಿ ಮೊಳೆ ಜೋಡಿಸುವುದರಿಂದ ಹಿಡಿದು, ಲೇಖನ ಬರೆಯುವವರೆಗೂ ಎಲ್ಲ ಕೆಲಸಗಳನ್ನು ಮಾಡಿದರು. ಇವರು ವಿಜ್ಞಾನ ಕ್ಷೇತ್ರದಲ್ಲಿ ವಿದ್ಯುಚ್ಛಕ್ತಿ ಸಂಭಂದಿಸಿದ ಸಂಶೋಧನೆಗೆ ಮತ್ತು ಭೌತಶಾಸ್ತ್ರದ ಇತಿಹಾಸದ ಕೆಲಸಗಳಿಗೆ ಹೆಸರುವಾಸಿಯಾಗಿದ್ದಾರೆ. ೧೭೫೨ರಲ್ಲಿ ಗುಡುಗು,ಬಿರುಗಾಳಿಯ ಸಂದರ್ಭದಲ್ಲಿ ಆಕಾಶದಲ್ಲಿ ಗಾಳಿಪಟವನ್ನು ಹಾರಿಸುವಾಗ, ಮಿಂಚಿನಲ್ಲಿ ವಿದ್ಯುತ್ ಇದೆ ಎಂದು ಕಂಡುಕೊಂಡರು.ಈ ಘಟನೆ ಫ್ರಾಂಕ್ಲಿನ್ಗೆ ಮಿಂಚುವಾಹಕಗಳನ್ನು ತಯಾರಿಸಲು ಪ್ರೇರೇಪಣೆಯಾಯಿತು.ಬೆಂಜಮಿನ್ ಫ್ರಾಂಕ್ಲಿನ್ ಮಿಂಚುವಾಹಕಗಳನ್ನಲ್ಲದೆ ಸ್ಟೌವ್,ಕನ್ನಡಕ ಮುಂತಾದುವನ್ನು ನಿರ್ಮಿಸಿದರು.ವಾತಾಯನ ವ್ಯವಸ್ಥೆ ಸರಿ ಇಲ್ಲದ ಕೋಣೆಗಳಲ್ಲಿದ್ದರೆ ಕಾಯಿಲೆ ಬಹು ಬೇಗ ಹರಡುತ್ತದೆ ಎಂಬುದನ್ನು ತಿಳಿಸಿದರು.ಲಂಡನ್ನಿನ ರಾಯಲ್ ಸೊಸೈಟಿಯ ಸದಸ್ಯತ್ವ ಇವರಿಗೆ ಲಭಿಸಿತು. ೧೭೫೩ರ ನಂತರ ಅಮೆರಿಕದಲ್ಲಿ ಅನೇಕ ಮಿಂಚುವಾಹಕಗಳನ್ನು ತಯಾರಿಸಿ,ಎಡ್ ಸ್ಟೋನ್ ಲೈಟ್ ಹೌಸ್,ಇಟಲಿಯ ಸಿಡಿಮದ್ದು ಪುಡಿ ಭಂಡಾರ,ಬ್ರಿಟಿಷ್ ಸಿಡಿಮದ್ದು ಉಗ್ರಾಣ ಮುಂತಾದ ಬಹುಮುಖ್ಯ ಕಟ್ಟಡಗಳನ್ನು ರಕ್ಷಿಸಲಾಯಿತು. ಇವರು ಅಮೇರಿಕಾ ದೇಶದಲ್ಲಿಯೇ ಮೊತ್ತಮೊದಲ ಸಾರ್ವಜನಿಕ ಗ್ರಂಥಾಲಯವನ್ನು ಮತ್ತು ಪೆನ್ಸಿಲ್ವೇನಿಯಾ ರಾಜ್ಯದಲ್ಲಿ ಮೊದಲ ಅಗ್ನಿಶಾಮಕ ಠಾಣೆಯನ್ನು ಸ್ಥಾಪಿಸಿದರು.[೧]

ಉಲ್ಲೇಖಗಳು[ಬದಲಾಯಿಸಿ]

  1. "What's Benjamin Franklin's Birthday?". www.slate.com ,Access date 12 May 2017.