ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಬೆಂಗಳೂರು ನಗರಕ್ಕೆ ಸೇವೆ ನೀಡುವ ೪,೦೫೦ ಎಕರೆಗಳ ಒಂದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ. ಇದು ಬೆಂಗಳೂರಿನಿಂದ ಸುಮಾರು ೪೦ ಕಿ.ಮಿ. ದೂರದಲ್ಲಿ ದೇವನಹಳ್ಳಿಯಲ್ಲಿದೆ. ಜುಲೈ ೨೦೦೫ರಲ್ಲಿ ಇದರ ಕಟ್ಟುವಿಕೆ ಪ್ರಾರಂಭವಾಗಿ, ಮೇ ೨೩, ೨೦೦೮ರಂದು ತನ್ನ ಕಾರ್ಯಾರಂಭ ಮಾಡಿತು.