ಬಿ.ಎಸ್. ಯಡಿಯೂರಪ್ಪ
Wikipedia ಇಂದ
ಬಿ.ಎಸ್. ಯಡಿಯೂರಪ್ಪ (ಜನನ: ಫೆಬ್ರುವರಿ ೨೭, ೧೯೪೩) ಕರ್ನಾಟಕದ ಪ್ರಸಕ್ತ ಮುಖ್ಯಮಂತ್ರಿ ಹಾಗು ಭಾರತೀಯ ಜನತಾ ಪಕ್ಷದ ಮುಖಂಡ. ಇವರು ಶಿಕಾರಿಪುರ ವಿಧಾನಸಭೆಯನ್ನು ಪ್ರತಿನಿಧಿಸುತ್ತಿದ್ದಾರೆ. ೨೦೦೮ ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಕ್ಷೇತ್ರದಲ್ಲಿ ನಿಂತಿದ್ದ, ಅಪಜಯವನ್ನು ಅರಿಯದ ಶ್ರೀ ಬಂಗಾರಪ್ಪ ನವರನ್ನು ಸುಮಾರು ೪೬ ಸಾವಿರ ಓಟಿನ ಅಂತರದಿಂದ ಪರಾಭವಗೊಳಿಸಿ, ತಮ್ಮ ಪಕ್ಷಕ್ಕೆ ಪ್ರಚಂಡ ಬಹುಮತವನ್ನು ತಂದುಕೊಟ್ಟು ಒಂದು ದಾಖಲೆಯನ್ನು ಸೃಷ್ಟಿಸಿದ್ದಾರೆ.
ಪರಿವಿಡಿ |
[ಬದಲಾಯಿಸಿ] ವೈಯಕ್ತಿಕ ಜೀವನ
ಜನನ : ಬೂಕನಕೆರೆ, ಕೆ.ಆರ್.ಪೇಟೆ ತಾಲೂಕು, ಮಂಡ್ಯ ಜಿಲ್ಲೆ. ತಂದೆ : ಸಿದ್ಧಲಿಂಗಪ್ಪ. ತಾಯಿ : ಪುಟ್ಟಮ್ಮ. ಪತ್ನಿ : ಮೈತ್ರಾದೇವಿ. ಪುತ್ರರು : ರಾಘವೇಂದ್ರ, ಹಾಗೂ ವಿಜಯೇಂದ್ರ. ಪುತ್ರಿಯರು :, ಅರುಣಾದೇವಿ, ಪದ್ಮಾವತಿದೇವಿ, ಉಮಾದೇವಿ . ವಿದ್ಯಾರ್ಹತೆ : ಬಿ.ಎ. ೨೦೦೭ರಲ್ಲಿ ಯಡಿಯೂರಪ್ಪನವರ ಪತ್ನಿ ಮೈತ್ರಾದೇವಿಯವರು ಮರಣ ಹೊಂದಿದರು.
[ಬದಲಾಯಿಸಿ] ರಾಜಕೀಯ ಜೀವನ
೧೯೭೫ರಲ್ಲಿ, ತಾಲ್ಲೂಕು ಸಂಘದ ಅಧ್ಯಕ್ಷರಾಗಿ ರಾಜಕೀಯಕ್ಕೆ ಪ್ರವೇಶ. ೧೯೭೭ ರಲ್ಲಿ, ಶಿಕಾರಿಪುರ ಪುರಸಭೆ ಸದಸ್ಯರಾಗಿ ಆಯ್ಕೆ. ೧೯೮೦ ರಲ್ಲಿ ಶಿಕಾರಿಪುರ ಪುರಸಭೆ ಅಧ್ಯಕ್ಷ. ೧೯೮೩ ರಲ್ಲಿ, ಬಿ.ಜೆ.ಪಿ.ಯ ತಾಲೂಕು ಘಟಕದ ಅಧ್ಯಕ್ಷ. ಮೊದಲ ಬಾರಿ ಶಾಸಕರಾಗಿ ಆಯ್ಕೆ, ೧೯೮೫ ರಲ್ಲಿ ಮುಂದೆ ಐದು ಬಾರಿ ಶಿಕಾರಿಪುರ ಕ್ಷೇತ್ರದ ಶಾಸಕ. ೧೯೮೮ ರಲ್ಲಿ ಬಿ.ಜೆ.ಪಿ.ಯ ಶಿವಮೊಗ್ಗ ಜಿಲ್ಲಾದ್ಯಕ್ಷ. ೧೯೯೨ ರಲ್ಲಿ, ಬಿ.ಜೆ.ಪಿ ರಾಜ್ಯಾಧ್ಯಕ್ಷ. ೧೯೯೪ ರಲ್ಲಿ, ಬಿ.ಜೆ.ಪಿ ರಾಷ್ಟ್ರೀಯ ಕಾರ್ಯದರ್ಶಿ.೧೯೯೯ ರಲ್ಲಿ ವಿಧಾನಸಭೆ ಪ್ರತಿಪಕ್ಷದ ನಾಯಕ. ೨೦೦೦ ದಲ್ಲಿ, ಮತ್ತೆ ರಾಜ್ಯಾಧ್ಯಕ್ಷ.೨೦೦೪ ರಲ್ಲಿ, ವಿಧಾನ ಪರಿಷತ್ ಸದಸ್ಯ. ೨೦೦೬ ರಲ್ಲಿ, ಕರ್ನಾಟಕ ವಿಧಾನಸಭೆಯ ವಿರೋಧಪಕ್ಷದ ನಾಯಕ. ಜೆ.ಡಿ.ಎಸ್. ಜತೆ ಮೈತ್ರಿ ಸರಕಾರದಲ್ಲಿ, ಉಪ-ಮುಖ್ಯಮಂತ್ರಿ, ಹಾಗೂ ಹಣಕಾಸು ಮತ್ತು ಅಬಕಾರಿ ಖಾತೆ ಗಳ ನಿರ್ವಹಣೆ. ನವೆಂಬರ್ ೨೦೦೭ರಲ್ಲಿ ಕರ್ನಾಟಕದ ಮುಖ್ಯಮಂತ್ರಿ.
[ಬದಲಾಯಿಸಿ] ಕರ್ನಾಟಕದ ಮುಖ್ಯಮಂತ್ರಿ
ಯಡಿಯೂರಪ್ಪನವರು, ನವೆಂಬರ್ ೧೨, ೨೦೦೭ ರಂದು, ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದರು. ಈ ಮೂಲಕ ದಕ್ಷಿಣ ಭಾರತ ರಾಜ್ಯಗಳಲ್ಲಿ, ಬಿಜೆಪಿ ಪಕ್ಷದ ಮೊದಲ ಮುಖ್ಯಮಂತ್ರಿಯೆನಿಸಿದರು.
[ಬದಲಾಯಿಸಿ] ಹೆಸರು ಬದಲಾವಣೆ
ಅಕ್ಟೋಬರ್ ತಿಂಗಳು, ೨೦೦೭ ರಲ್ಲಿ, ಅವರು ತಮ್ಮ ಹೆಸರನ್ನು, ಇಂಗ್ಲೀಷಿನಲ್ಲಿ B.S. Yeddyurappa ಎಂದು ಬದಲಾಯಿಸಿಕೊಂಡಿದ್ದಾರೆ. ಆದರೆ ಕನ್ನಡದಲ್ಲಿ ಮಾತ್ರ, ಮೊದಲಿನಂತೆಯೆ ಯಡಿಯೂರಪ್ಪ ಅಂತಲೇ ಇದೆ ಎಂದು ಖುದ್ದಾಗಿ ಯಡಿಯೂರಪ್ಪನವರೇ, ಪತ್ರಿಕಾಕರ್ತರಿಗೆ ಸ್ಪಷ್ಟಪಡಿಸಿದ್ದಾರೆ.
[ಬದಲಾಯಿಸಿ] ಯಡಿಯೂರಪ್ಪ ಅಲಂಕರಿಸಿದ ಹುದ್ದೆಗಳು
- ೧೯೭೫ : ಶಿಕಾರಿಪುರ ಪುರಸಭೆ ಸದಸ್ಯರಾಗಿ ಆಯ್ಕೆ, ೧೯೭೭ರಲ್ಲಿ ಅಧ್ಯಕ್ಷ.
- ೧೯೮೦ : ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ.
- ೧೯೮೩ : ಮಾಜಿ ಸಚಿವ ವೆಂಕಟಪ್ಪ ಅವರನ್ನು ಸೋಲಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶ
- ೧೯೮೫ :ರಿಂದ ೧೯೮೮ವರೆಗೆ ಬಿಜೆಪಿ ಜಿಲ್ಲಾಧ್ಯಕ್ಷ, ೧೯೮೮ರಲ್ಲಿ ರಾಜ್ಯಾಧ್ಯಕ್ಷ, ೧೯೯೨ ರಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ಸ್ಥಾನ ನಿರ್ವಹಣೆ|
- ೧೯೯೪ : ವಿಧಾನಸಭೆ ಪ್ರತಿಪಕ್ಷದ ನಾಯಕ
- ೧೯೯೯ : ಮತ್ತೆ ರಾಜ್ಯಾಧ್ಯಕ್ಷ, ೨೦೦೦ ರಲ್ಲಿ ಮೇಲ್ಮನೆ ಸದಸ್ಯ
- ೨೦೦೪ : ಐದನೇ ಬಾರಿಗೆ ವಿಧಾನಸಭೆ ಪ್ರವೇಶ, ಇನ್ನೊಮ್ಮೆ ಪ್ರತಿಪಕ್ಷದ ನಾಯಕ
- ೨೦೦೬ : ಸಮ್ಮಿಶ್ರ ಸರ್ಕಾರ ರಚನೆ, ಉಪಮುಖ್ಯಮಂತ್ರಿ, ಹಣಕಾಸು ಮತ್ತು ಅಬಕಾರಿ ಖಾತೆಗಳ ನಿರ್ವಹಣೆ
- ೨೦೦೭ : ನವೆಂಬರ್೧೨ರಿಂದ ೧೭ರವರೆಗೆ ೭ ದಿನ ಮಾತ್ರ ಮುಖ್ಯಮಂತ್ರಿಯಾಗಿ ಪದವಿ ಅಲಂಕರಿಸಿದ್ದರು.
- ೨೦೦೮ : ಮೇ ೩೦ರ ಶುಕ್ರವಾರ ಕರ್ನಾಟಕದ ೨೫ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ.
ಕರ್ನಾಟಕದ ಮುಖ್ಯಮಂತ್ರಿಗಳು
ಬಿ.ಎಸ್. ಯಡಿಯೂರಪ್ಪ | ಹೆಚ್.ಡಿ.ಕುಮಾರಸ್ವಾಮಿ | ಧರಮ್ ಸಿಂಗ್ | ಎಸ್.ಎಂ.ಕೃಷ್ಣ | ಜೆ ಹೆಚ್ ಪಟೇಲ್ | ಹೆಚ್.ಡಿ.ದೇವೇಗೌಡ | ವೀರಪ್ಪ ಮೊಯ್ಲಿ | ಬಂಗಾರಪ್ಪ | ವೀರೇಂದ್ರ ಪಾಟೀಲ್ | ಎಸ್ ಆರ್ ಬೊಮ್ಮಾಯಿ | ರಾಮಕೃಷ್ಣ ಹೆಗಡೆ | ಆರ್. ಗುಂಡೂರಾವ್ | ಡಿ. ದೇವರಾಜ ಅರಸ್ | ಎಸ್. ನಿಜಲಿಂಗಪ್ಪ | ಎಸ್ ಆರ್ ಕಂಠಿ | ಬಿ ಡಿ ಜತ್ತಿ | ಕಡಿದಾಳ್ ಮಂಜಪ್ಪ | ಕೆಂಗಲ್ ಹನುಮಂತಯ್ಯ | ಚೆಂಗಲರಾಯ ರೆಡ್ಡಿ