ಬಿ.ವಿ. ರಾಧಾ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಬಿ.ವಿ. ರಾಧಾ ಒಬ್ಬ ಅನುಭವಿ ಕನ್ನಡ ಚಿತ್ರ ಹಾಗೂ ರಂಗಭೂಮಿ ಕಲಾವಿದೆ. ಮೊದಲಿನ ಹೆಸರು ರಾಜಲಕ್ಷ್ಮಿ, ರಾಧಾ ಅವರು (ಬೆಂಗಳೂರು ವಿಜಯಾ ರಾಧಾ) ತಮ್ಮ ಪರದೆಯ ಮೇಲಿನ ಹೆಸರನ್ನು ನವಕೋಟಿ ನಾರಾಯಣ ಚಿತ್ರದಲ್ಲಿನ ಪಾದಾರ್ಪಣೆಯ ನಂತರ ಪಡೆದರು. ಆಗಸ್ಟ್ ೧೯೪೮ರಲ್ಲಿ ಒಂದು ರೈತ ಕುಟುಂಬದಲ್ಲಿ ಜನಿಸಿದ ರಾಧಾ ಅವರು, ತಮ್ಮ ಕುಟುಂಬದ ಆಕ್ಷೇಪದ ನಡುವೆಯೂ ಚಿತ್ರರಂಗ ಸೇರಲು ಶಾಲೆಯನ್ನು ತೊರೆದರು.