ಬಿಹು ನೃತ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗುವಾಹಟಿಯ ಜಡ್ಜ್ ಪ್ಲೇ ಗ್ರೌಂಡ್‌ನಲ್ಲಿ ಬಿಹು ನೃತ್ಯ

ಬಿಹು ನೃತ್ಯ ವು (Assamese: বিহু নৃত্য, ಹಿಂದಿ:बिहू नृत्य) ಭಾರತದ ರಾಜ್ಯ ಅಸ್ಸಾಂನ ಬಿಹು ಹಬ್ಬಕ್ಕೆ ಸಂಬಂಧಿಸಿದ ಒಂದು ಜಾನಪದ ನೃತ್ಯವಾಗಿದೆ. ಈ ನೃತ್ಯವನ್ನು ಕಿರಿಯ ಮಹಿಳೆಯರು ಮತ್ತು ಪುರುಷರು ನಿರ್ವಹಿಸುತ್ತಾರೆ ಹಾಗೂ ಇದು ಚುರುಕಾದ ನೃತ್ಯ ಹೆಜ್ಜೆಗಳು ಮತ್ತು ವೇಗವಾದ ಕೈಯ ಚಲನೆಯನ್ನು ಒಳಗೊಂಡಿದೆ. ನೃತ್ಯಗಾರರು ಸಾಂಪ್ರದಾಯಿಕವಾಗಿ ಬಣ್ಣಯುಕ್ತ ಅಸ್ಸಾಮಿ ಬಟ್ಟೆಯನ್ನು ಧರಿಸುತ್ತಾರೆ.

ವಿವರಣೆ[ಬದಲಾಯಿಸಿ]

ಬಿಹು ಒಂದು ಗುಂಪು ನೃತ್ಯವಾಗಿದ್ದು, ಇದರಲ್ಲಿ ಪುರುಷರು ಮತ್ತು ಮಹಿಳೆಯರು ಒಟ್ಟಿಗೆ ನೃತ್ಯ ಮಾಡುತ್ತಾರೆ, ಆದರೆ ವಿವಿಧ ಲಿಂಗ ನಿಯಮಗಳನ್ನು ಅನುಸರಿಸುತ್ತಾರೆ. ಸಾಮಾನ್ಯವಾಗಿ, ಮಹಿಳೆಯರು ಸಾಲು ಅಥವಾ ವೃತ್ತ ರಚನೆಗಳನ್ನು ಅನುಸರಿಸುತ್ತಾರೆ. ಪುರುಷ ನೃತ್ಯಗಾರರು ಮತ್ತು ಸಂಗೀತಗಾರರು ನೃತ್ಯದ ಪ್ರದೇಶವನ್ನು ಮೊದಲು ಪ್ರವೇಶಿಸುತ್ತಾರೆ ಹಾಗೂ ಅವರು ತಮ್ಮ ಸಾಲುಗಳಲ್ಲಿ ನೃತ್ಯಮಾಡುತ್ತಾರೆ ಮತ್ತು ಏಕಕಾಲಿಕ ಮಾದರಿಯನ್ನು ಅನುಸರಿಸುತ್ತಾರೆ. ನಂತರ ಮಹಿಳಾ ನೃತ್ಯಗಾರರು ಪ್ರವೇಶಿಸಿದಾಗ ಪುರುಷ ನೃತ್ಯಗಾರರು ಅವರ ಸಾಲುಗಳನ್ನು ಭೇದಿಸಿ ನೃತ್ಯದ ಕಟ್ಟುನಿಟ್ಟಿನ ರಚನೆಗಳು ಮತ್ತು ಕ್ರಮವನ್ನು ಅನುಸರಿಸುವ ಮಹಿಳಾ ನೃತ್ಯಗಾರರೊಂದಿಗೆ ಸೇರಿಕೊಳ್ಳುತ್ತಾರೆ. ಈ ನೃತ್ಯವು ಸಾಮಾನ್ಯವಾಗಿ ಸ್ಪಷ್ಟ ಭಂಗಿಗಳಿಂದ ವೈಶಿಷ್ಟ್ಯಗೊಂಡಿದೆ: ಸೊಂಟ, ಕೈಗಳು, ಮುಷ್ಟಿಗಳ ಚಲನೆಗಳು, ಸುತ್ತುವುದು, ಕುಳಿತುಕೊಳ್ಳುವುದು ಮತ್ತು ಬಾಗುವುದು, ಆದರೆ ನೆಗೆತಗಳಿರುವುದಿಲ್ಲ. ಪುರುಷ ಮತ್ತು ಮಹಿಳಾ ನೃತ್ಯ ಚಲನೆಗಳು ಹೆಚ್ಚಾಗಿ ಒಂದೇ ರೀತಿಯಿರುತ್ತವೆ, ಸ್ವಲ್ಪ ಮಟ್ಟಿನ ಆದರೆ ಸೂಕ್ಷ್ಮ ಭಿನ್ನತೆಗಳಿರುತ್ತವೆ.

ಪ್ರದರ್ಶನ[ಬದಲಾಯಿಸಿ]

ಈ ನೃತ್ಯವನ್ನು ಸಾಂಪ್ರದಾಯಿಕ ಬಿಹು ಸಂಗೀತದ ಹಿಮ್ಮೇಳದಲ್ಲಿ ನಿರ್ವಹಿಸಲಾಗುತ್ತದೆ. ಹೆಚ್ಚು ಮುಖ್ಯ ಸಂಗೀತಗಾರರೆಂದರೆ ಡ್ರಮ್-ವಾದಕರು (ಧುಲಿಯಾ ), ಅವರು ಒಂದು ವಿಶೇಷ ಎರಡು ಮುಖದ ಡ್ರಮ್ ಧೋಲ್ ಅನ್ನು ಭಾರಿಸುತ್ತಾರೆ, ಅದನ್ನು ಅವರು ಕತ್ತಿನಲ್ಲಿ ನೇತುಹಾಕಿಕೊಂಡು ಒಂದು ಕೈ ಮತ್ತು ಒಂದು ಕೋಲಿನಿಂದ ನುಡಿಸುತ್ತಾರೆ. ಸಾಮಾನ್ಯವಾಗಿ ಪ್ರದರ್ಶನವೊಂದರಲ್ಲಿ ಒಂದಕ್ಕಿಂತ ಹೆಚ್ಚು ಧುಲಿಯಾ ಇರುತ್ತಾರೆ ಮತ್ತು ಅವರು ಪ್ರದರ್ಶನದ ವಿವಿಧ ವಿಭಾಗಗಳಲ್ಲಿ ವಿವಿಧ ತಾಳಗಳನ್ನು ನುಡಿಸುತ್ತಾರೆ. ಸ್ಯೂ ಎಂದು ಕರೆಯುವ ಈ ತಾಳಗಳನ್ನು ಸಾಂಪ್ರದಾಯಿಕವಾಗಿ ಕ್ರಮಬದ್ಧವಾಗಿ ಜೋಡಿಸಲಾಗಿದೆ. ನೃತ್ಯದ ಪ್ರದೇಶವನ್ನು ಪ್ರವೇಶಿಸುವುದಕ್ಕಿಂತ ಮೊದಲು, ಡ್ರಮ್-ವಾದಕರು ಒಂದು ಸಣ್ಣ ಮತ್ತು ಚುರುಕಾದ ತಾಳವನ್ನು ಭಾರಿಸುತ್ತಾರೆ. ಸ್ಯೂ ಬದಲಾಗಿದೆ ಮತ್ತು ಸಾಮಾನ್ಯವಾಗಿ ಡ್ರಮ್-ವಾದಕರು ಸಾಲಿನಲ್ಲಿ ನೃತ್ಯದ ಪ್ರದೇಶವನ್ನು ಪ್ರವೇಶಿಸುತ್ತಾರೆ. ಮೋಹರ್ ಕ್ಸಿಂಗರ್ ಪೆಪಾ ವನ್ನು ಆರಂಭಿಕ ದುಃಖಸೂಚಕ ಭಾವವನ್ನು ವ್ಯಕ್ತಪಡಿಸುವ ಒಬ್ಬ ವಾದಕನು ಆರಂಭದಲ್ಲಿ ನುಡಿಸುತ್ತಾನೆ ಮತ್ತು ಅದು ನೃತ್ಯವನ್ನು ಮಾಡುವ ಮನೋಭಾವವನ್ನು ಉಂಟುಮಾಡುತ್ತದೆ. ನಂತರ ಪುರುಷ ನೃತ್ಯಗಾರರು ಆ ಪ್ರದೇಶವನ್ನು ಪ್ರವೇಶಿಸುತ್ತಾರೆ ಮತ್ತು ಸಂಗೀತ ಹಿಮ್ಮೇಳದಲ್ಲಿ ನೃತ್ಯ ಮಾಡುತ್ತಾರೆ, ಆಗ ಎಲ್ಲರೂ ಭಾಗವಹಿಸುತ್ತಾರೆ. ಈ ನೃತ್ಯಕ್ಕೆ ಹಿಮ್ಮೇಳ ನೀಡುವ ಇತರ ಉಪಕರಣಗಳೆಂದರೆ ತಾಳ ; ಗೊಗೊನ , ಬಿದಿರಿನ ಸಾಧನ; ಮತ್ತು ಟೋಕ , ಬಿದಿರಿನ ಕ್ಲ್ಯಾಪರ್. ಈ ನೃತ್ಯಕ್ಕೆ ಹಿಮ್ಮೇಳ ಒದಗಿಸುವ ಹಾಡುಗಳು (ಬಿಹು ಗೀತ್ ) ಹಲವಾರು ಪೀಳಿಗೆಗಳಿಂದ ಬೆಳೆದು ಬಂದಿವೆ. ಈ ಹಾಡುಗಳ ಸಾಹಿತ್ಯದ ವಿಷಯವು ಅಸ್ಸಾಂನ ಹೊಸ ವರ್ಷದ ಸ್ವಾಗತದಿಂದ ಹಿಡಿದು, ರೈತನೊಬ್ಬನ ದೈನಂದಿನ ಜೀವನದ ವಿವರಣೆ, ಅಸ್ಸಾಂನ ಮೇಲಿನ ದಾಳಿಯ ಐತಿಹಾಸಿಕ ಉಲ್ಲೇಖಗಳು ಮತ್ತು ವಿಡಂಬನಶೀಲ ರೀತಿಯಲ್ಲಿ ಆಧುನಿಕ ಸಾಮಾಜಿಕ-ರಾಜಕೀಯ ವಿಮರ್ಶೆಯವರೆಗೆ ಹಲವಾರು ಅಂಶಗಳನ್ನು ಒಳಗೊಂಡಿರುತ್ತದೆ.

ಈ ನೃತ್ಯ ಪ್ರದರ್ಶನವು ದೀರ್ಘಕಾಲವಿರುತ್ತದೆ, ಇದಕ್ಕೆ ಲಯ, ಮನೋಭಾವ, ಚಲನೆ, ಭಂಗಿ ಮತ್ತು ಆಶುಗಾಯನ ಮೊದಲಾದವುಗಳ ಶೀಘ್ರದ ಬದಲಾವಣೆಗಳು ಜೀವಂತಿಕೆ ನೀಡುತ್ತವೆ. ಇದರಲ್ಲಿ ನೃತ್ಯಗಾರರು ಮತ್ತು ಸಂಗೀತಗಾರರಿಗೆ ತಮ್ಮ ಕಲಾ ರಸಿಕತೆಯನ್ನು ತೋರಿಸಲು ಹೆಚ್ಚಿನ ಅವಕಾಶವನ್ನು ನೀಡಲಾಗುವುದಿಲ್ಲ.

ಬಿಹು ನೃತ್ಯದ ಪ್ರಕಾರಗಳು[ಬದಲಾಯಿಸಿ]

ಈ ನೃತ್ಯವು ಈಶಾನ್ಯ ಭಾರತದ ವಿವಿಧ ಗುಂಪುಗಳಲ್ಲಿ ಹಲವಾರು ಪ್ರಕಾರಗಳನ್ನು ಹೊಂದಿದೆ, ಉದಾ,ದಿಯೋರಿ ಬಿಹು ನೃತ್ಯ, ಮಿಸ್ಸಿಂಗ್ ಬಿಹು ನೃತ್ಯ ಇತ್ಯಾದಿ. ಆದರೆ ದುಃಖ ಮತ್ತು ಸಂತೋಷಗಳೆರಡನ್ನೂ ಅನುಭವಿಸುವ ಅಪೇಕ್ಷೆಯನ್ನು ತೋರಿಸುವ ಈ ನೃತ್ಯದ ಗುರಿಯು ಮಾತ್ರ ಹಾಗೆಯೇ ಉಳಿಯುತ್ತದೆ.

ರಂಗೋಲಿ ಬಿಹು ಸ್ಪರ್ಧೆಗಳು[ಬದಲಾಯಿಸಿ]

ಮಧ್ಯ ಎಪ್ರಿಲ್‌ನಲ್ಲಿ ವಸಂತಕಾಲದ ಆರಂಭದಲ್ಲಿ ಬೊಹಾಗ್ ತಿಂಗಳಿನೊಂದಿಗೆ ಸ್ಥಳೀಯ ಕ್ಯಾಲೆಂಡರ್‌ನಲ್ಲಿ ಹೊಸ ವರ್ಷವು ಕೊನೆಗೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಈ ಅವಧಿಯಲ್ಲಿ ಅಸ್ಸಾಂನಾದ್ಯಂತ (ಅಲ್ಲದೆ ಅಸ್ಸಾಮೀ ಜನರನ್ನು ಹೊಂದಿರುವ ವಿವಿಧ ಪ್ರವೇಶಗಳಲ್ಲಿ) ಬಿಹು ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಈ ಸ್ಪರ್ಧೆಗಳು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಕರು ಮತ್ತು ಸ್ಥಳೀಯರನ್ನು ಆಕರ್ಷಿಸುತ್ತವೆ. ಬಿಹು ನೃತ್ಯವನ್ನು ಹೊರತುಪಡಿಸಿ, ಬಿಹು ಕನ್ವೊರಿ ಯನ್ನು (ಬಿಹು ರಾಣಿ) ಮತ್ತು ವಿವಿಧ ಗಾಯನ ಪ್ರತಿಭೆಗಳನ್ನು ಆರಿಸುವ ಸ್ಪರ್ಧೆಗಳನ್ನು ನಡೆಸಲಾಗುತ್ತದೆ.

ಬೊಹಾಗ್ ತಿಂಗಳ ಕೊನೆಯಲ್ಲಿ, ಈ ತಿಂಗಳಿಗೆ ವಿದಾಯ ಹೇಳಿ ಹಲವಾರು ಬೊಹಾಗಿ ಬಿದೈ ಕಾರ್ಯಕ್ರಮಗಳಿಂದ ಕೊಂಡಾಡಲಾಗುತ್ತದೆ.

ಇವನ್ನೂ ಗಮನಿಸಿ‌[ಬದಲಾಯಿಸಿ]

  • ಆಸ್ಸಾಂನ ಸಂಸ್ಕೃತಿ

ಬಾಹ್ಯ ಕೊಂಡಿಗಳು‌‌[ಬದಲಾಯಿಸಿ]