ಬಿದರಹಳ್ಳಿ ನರಸಿಂಹ ಮೊರ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಿದರಹಳ್ಳಿ ನರಸಿಂಹಮೂರ್ತಿ( ಜನನ: ೦೫. ೦೨. ೧೯೫೦.) ಕವಿ,ಕತೆಗಾರ,ಕಾದಂಬರಿಕಾರ,ನಾಟಕಕಾರ,ವಿಮರ್ಶಕ,ಸಂಪಾದಕ,ಅನುವಾದಕ.

ಜನನ ಮತ್ತು ಬಾಲ್ಯ[ಬದಲಾಯಿಸಿ]

ಇವರು ಹೊಳೆಹೊನ್ನೂರಿನಲ್ಲಿ ಜನಿಸಿದರು.ಮುಂದೆ ಹೊನ್ನಾಳಿಯಲ್ಲಿ ನೆಲೆಸಿದರು.ಮೈಸೂರು ವಿಶ್ವವಿದ್ಯಾನಿಲಯದಿಂದ ಎಮ್.ಎ.ಪದವಿ ಪಡೆದ ಬಳಿಕ ಪಿ.ಜಿ.ಡಿ.ಇ.ಎಸ್.ಪದವಿಯನ್ನು ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲಿಷ್ ಅಂಡ್ ಫಾರಿನ್ ಲ್ಯಾಂಗ್ವೇಜಸ್,ಹೈದ್ರಾಬಾದ್ ಇಲ್ಲಿಂದ ಪಡೆದರು.ಅಧ್ಯಾಪಕನಾಗಿ ವೃತ್ತಿ ಜೀವನವನ್ನು ಆರಂಭಿಸಿದ ಇವರು ಪ್ರಾಂಶುಪಾಲರಾಗಿ ನಿವೃತ್ತರಾದರು.ಇವರು ಲೇಖಕರಾಗಿ ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದು ಹಲವು ಈ ಕೆಳಗಿನಂತಿವೆ.

ಪ್ರಕಟಿತ ಕೃತಿಗಳು[ಬದಲಾಯಿಸಿ]

ಕವಿತಾ ಸಂಕಲನಗಳು

  1. ಕಾಡಿನೊಳಗಿದೆ ಜೀವ (೧೯೭೯)
  2. ಸೂರ್ಯದಂಡೆ (೧೯೯೬)
  3. ಅಕ್ಕಿಕಾಳು ನಕ್ಕಿತಮ್ಮಾ (೨೦೦೧)
  4. ಭಾವಕ್ಷೀರ (೨೦೦೬)

ಕಥಾಸಂಕಲನಗಳು:

  1. ಶಿಶು ಕಂಡ ಕನಸು (೧೯೯೩) (ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಪಡೆದ ಕೃತಿ)
  2. ಹಂಸೆ ಹಾರಿತ್ತು (೨೦೦೦) (ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಪಡೆದ ಕೃತಿ)

ಕಾದಂಬರಿ: ಹೊಳೆಮಕ್ಕಳು (೨೦೧೧)
ನಾಟಕ: ಮಹಾಗಾರುಡಿ (೨೦೦೯) ವಿಮರ್ಶೆ:

  1. ಕಡಲಂತೆ ಕಾರಂತ (೧೯೯೭)
  2. ಅರಿವಲಗು (೨೦೦೨)
  3. ಶಿವಶಕ್ತಿ ಸಂಪುಟ (೨೦೧೧)
  4. ವಿಸ್ತರಿಸುವ ವರ್ತುಲ (೨೦೧೧)

ಸಂಪಾದನೆ:

  1. ಹೊನ್ನೇರು (೧೯೯೫)(ಹೊನ್ನಾಳಿ ತಾಲೂಕಿನ ಪ್ರಾತಿನಿಧಿಕ ಕವನ ಸಂಕಲನ)
  2. ಬಾಲಲೀಲಾ ಮಹಾಂತ (೧೯೯೬)(ತತ್ವಪದಗಳು)
  3. ಜಾಂಬವತಿ ಕಲ್ಯಾಣ (೧೯೯೭)(ಯಕ್ಷಗಾನ)
  4. ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವಿಸ್ ವಾಚಿಕೆ (೧೯೯೭)(ನೊಬೆಲ್ ವಿಜೇತ ಸಾಹಿತಿ ಮಾಲಿಕೆ)
  5. ಅನುಭವಾಮೃತ (೨೦೦೪)(ಮಹಲಿಂಗರಂಗನ ಭಾಮಿನಿ ಷಟ್ಪದಿ ಕಾವ್ಯ)
  6. ನ್ಯಾಮತಿ ಪಂಡಿತ ಪ್ರಭಣ್ಣನವರ ಕನ್ನಡ-ಕನ್ನಡ ನಿಘಂಟು (೨೦೧೧)(ಜಂಟಿ ಸಂಪಾದನೆ)

ಅನುವಾದ: ಗಾಲಿಬ್: ವ್ಯಕ್ತಿತ್ವ ಮತ್ತು ಯುಗಾಂತ (೨೦೧೧)
ಜೀವನಚರಿತ್ರೆ: ಶಿಶುನಾಳ ಶರೀಫ (೧೯೯೪)(ನವಸಾಕ್ಷರ ಮಾಲಿಕೆ)

ಪಡೆದಿರುವ ಪ್ರಶಸ್ತಿಗಳು[ಬದಲಾಯಿಸಿ]

  1. ಮಹಲಿಂಗರಂಗ ಪ್ರಶಸ್ತಿ
  2. ಶಿವಾನಂದ ಪಾಟೀಲ ಪ್ರಶಸ್ತಿ