ಬಾಲ ಗಂಧರ್ವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
೧೯೨೪ರಲ್ಲಿ ಹೆಂಗಸಿನ ಪಾತ್ರದಲ್ಲಿ ಬಾಲ ಗಂಧರ್ವರು

ಬಾಲ ಗಂಧರ್ವ ಎಂದೆ ಪ್ರಖ್ಯಾತರಾಗಿರುವ ನಾರಾಯಣ ಶ್ರೀಪಾದ ರಾಜಹನ್ಸ್ (ಮರಾಠಿ: नारायण श्रीपाद राजहंस) (೧೮೮೮ - ೧೯೬೭) ಒಬ್ಬ ಮರಾಠಿ ಗಾಯಕ ಹಾಗು ರಂಗಭೂಮಿ ನಟ. ಇವರ ಜನನ ೧೮೮೮ ನೇ ಇಸವಿ ಜೂನ್ ತಿಂಗಳ ೨೬ರಲ್ಲಿ ಪುಣೆಯಲ್ಲಿ ಆಯಿತು. ಮರಾಠಿ ನಾಟಕಗಳಲ್ಲಿ ಹೆಂಗಸಿನ ಪಾತ್ರಗಳಿಗಾಗಿ ಇವರು ಪ್ರಖ್ಯಾತರಾಗಿದ್ದರು.

ಒಮ್ಮೆ ಲೋಕಮಾನ್ಯ ಬಾಲ ಗಂಗಾಧರ ತಿಲಕರ ಮನೆಯಲ್ಲಿ, ಎಲ್ಲರೂ ಸೇರಿರುವಾಗ ಬಾಲಕನಾಗಿದ್ದ ನಾರಾಯಣ ರಾಜಹನ್ಸರ ಗಾಯನ ಕೇಳಿ ಬಹಳ ಆನಂದ ಪಟ್ಟು "ಬಹಳ ಸೊಗಸಾಗಿ ಹಾಡುತ್ತೀಯ ಮಗು. ನೀನು ಬಾಲ ಗಂರ್ಧವನೇ ಸರಿ" ಎಂದರು. ಅಂದಿನಿಂದ ಇವರ ಹೆಸರು ಬಾಲ ಗಂರ್ಧವರೆಂದೆ ವಿಖ್ಯಾತವಾಯಿತು.