ಬಾರ್ಡರ್-ಗವಾಸ್ಕರ್ ಪ್ರಶಸ್ತಿ
ವಿಕಿಪೀಡಿಯ ಇಂದ
ಬಾರ್ಡರ್-ಗವಾಸ್ಕರ್ ಪ್ರಶಸ್ತಿ ಭಾರತ ಮತ್ತು ಆಸ್ಟ್ರೇಲಿಯಗಳ ಕ್ರಿಕೆಟ್ ತಂಡಗಳ ನಡುವೆ ನಡೆಯುವ ಟೆಸ್ಟ್ ಪಂದ್ಯ ಸರಣಿಗಳ ವಿಜಯರಿಗೆ ನೀಡಲಾಗುವ ಪ್ರಶಸ್ತಿ. ಈ ಪ್ರಶಸ್ತಿಯ ಮೊದಲ ಸರಣಿ ೧೯೯೬ರಲ್ಲಿ ನಡೆದು ಭಾರತ ಇದನ್ನು ೧-೦ ಪಂದ್ಯಗಳಿಂದ ಗೆದ್ದಿತು. ಟೆಸ್ಟ್ ಪಂದ್ಯಗಳಲ್ಲಿ ಹ್ತ್ತು ಸಾವಿರ ರನ್ನುಗಳನ್ನು ಬಾರಿಸಿದ ಮೊದಲೆರಡು ಬ್ಯಾಟ್ಸಮನ್ ಗಳಾದ ಆಲನ್ ಬಾರ್ಡರ್ ಮತ್ತು ಸುನೀಲ್ ಗವಾಸ್ಕರ್ ಇವರ ಹೆಸರಿನಲ್ಲೆ ಈ ಟ್ರೋಫಿಯನ್ನು ಸ್ಥಾಪಿಸಲಾಗಿದೆ. ಟೆಸ್ಟ್ ಪಂದ್ಯಗಳಲ್ಲಿ ಇತ್ತೀಚಿನ ದಿನಗಳಲ್ಲಿ ಇದು ಕುತೂಹಲಕರವಾದ ಮತ್ತು ಜಿದ್ದಜಿದ್ದಿನಿಂದ ಕೂಡಿದ ಸರಣಿಯಾಗಿದೆ. ಇಲ್ಲಿಯವರೆಗಿನ ಸರಣಿಗಳು ಈ ಪಟ್ಟಿಯಲ್ಲಿ ಇವೆ:
| ವರ್ಷ | ಆಡಲಾದ ದೇಶ | ಫಲಿತಾಂಶ | ಸರಣಿ ಪುರುಷೋತ್ತಮ |
|---|---|---|---|
| ೧೯೯೬-೧೯೯೭ | ಭಾರತ | ಒಂದೇ ಪಂದ್ಯವನ್ನು ಭಾರತ ೧-೦ಯಿಂದ ಗೆದ್ದುಕೊಂಡಿತು. | ನಯನ್ ಮೊಂಗಿಯ |
| ೧೯೯೭-೧೯೯೮ | ಭಾರತ | ೩ ಮ್ಯಾಚುಗಳ ಸರಣಿಯನ್ನು ಭಾರತ ೨-೧ರಿಂದ ಗೆದ್ದುಕೊಂಡಿತು. | ಸಚಿನ್ ತೆಂಡೂಲ್ಕರ್ |
| ೧೯೯೯-೨೦೦೦ | ಆಸ್ಟ್ರೇಲಿಯಾ | ೩ ಮ್ಯಾಚುಗಳ ಸರಣಿಯನ್ನು ಆಸ್ಟ್ರೇಲಿಯಾ ೩-೦ಯಿಂದ ಗೆದ್ದುಕೊಂಡಿತು. | ಸಚಿನ್ ತೆಂಡೂಲ್ಕರ್ |
| ೨೦೦೦-೨೦೦೧ | ಭಾರತ | ೩ ಮ್ಯಾಚುಗಳ ಸರಣಿಯನ್ನು ಭಾರತ ೨-೧ರಿಂದ ಗೆದ್ದುಕೊಂಡಿತು. | ಹರ್ಭಜನ್ ಸಿಂಗ್ |
| ೨೦೦೩-೨೦೦೪ | ಆಸ್ಟ್ರೇಲಿಯಾ | ೪ ಮ್ಯಾಚುಗಳ ಸರಣಿ ೧-೧ರಲ್ಲಿ ಸಮ | ರಾಹುಲ್ ದ್ರಾವಿಡ್ |
| ೨೦೦೪-೨೦೦೫ | ಭಾರತ | ೪ ಮ್ಯಾಚುಗಳ ಸರಣಿಯನ್ನು ಆಸ್ಟ್ರೇಲಿಯಾ ೨-೧ರಿಂದ ಗೆದ್ದುಕೊಂಡಿತು. | ಡೇಮಿಯನ್ ಮಾರ್ಟಿನ್ |
| ೨೦೦೭-೨೦೦೮ | ಆಸ್ಟ್ರೇಲಿಯಾ | ೪ ಮ್ಯಾಚುಗಳ ಸರಣಿಯನ್ನು ಆಸ್ಟ್ರೇಲಿಯಾ ೨-೧ರಿಂದ ಗೆದ್ದುಕೊಂಡಿತು. | ಬ್ರೆಟ್ ಲೀ |
| ೨೦೦೮-೨೦೦೯ | ಭಾರತ | ೪ ಮ್ಯಾಚುಗಳ ಸರಣಿಯನ್ನು ಭಾರತ ೨-೦ಯಿಂದ ಗೆದ್ದುಕೊಂಡಿತು. | ಇಶಾಂತ್ ಶರ್ಮ |